Tag: Government Jobs

  • ಅಗ್ನಿವೀರರಿಗೆ ಪೊಲೀಸ್, ಸರ್ಕಾರಿ ಇಲಾಖೆಗಳಲ್ಲಿ ಉದ್ಯೋಗ ನೀಡಲು ಉತ್ತರಾಖಂಡ ಸರ್ಕಾರ ನಿರ್ಧಾರ: ಸಿಎಂ ಧಾಮಿ

    ಅಗ್ನಿವೀರರಿಗೆ ಪೊಲೀಸ್, ಸರ್ಕಾರಿ ಇಲಾಖೆಗಳಲ್ಲಿ ಉದ್ಯೋಗ ನೀಡಲು ಉತ್ತರಾಖಂಡ ಸರ್ಕಾರ ನಿರ್ಧಾರ: ಸಿಎಂ ಧಾಮಿ

    – ಶೀಘ್ರದಲ್ಲೇ ಪ್ರಸ್ತಾವನೆ ಮಂಡಿಸುವುದಾಗಿ ಸಿಎಂ ಭರವಸೆ

    ಡೆಹ್ರಾಡೂನ್‌: ಇತ್ತೀಚೆಗೆ ಹರಿಯಾಣ ರಾಜ್ಯ ಸರ್ಕಾರ ವಿವಿಧ ನೇಮಕಾತಿಗಳಲ್ಲಿ ಅಗ್ನಿವೀರರಿಗೆ ಶೇ.10 ರಷ್ಟು ಮೀಸಲಾತಿ ಘೋಷಿಸಿತ್ತು. ಈ ಬೆನ್ನಲ್ಲೇ ಉತ್ತರಾಖಂಡ ರಾಜ್ಯ ಸರ್ಕಾರ (Uttarakhand Government) ಮತ್ತೊಂದು ಮಹತ್ವದ ತೀರ್ಮಾನಕ್ಕೆ ಮುಂದಾಗಿದೆ. ಉತ್ತರಾಖಂಡದಲ್ಲೂ ಅಗ್ನಿವೀರರಿಗೆ ಮೀಸಲಾತಿ (Reservation For Agniveers) ಕಲ್ಪಿಸುವ ಯೋಜನೆಯನ್ನು ರಾಜ್ಯ ಸರ್ಕಾರ ತರಲಿದೆ ಎಂದು ಸಿಎಂ ಪುಷ್ಕರ್‌ ಸಿಂಗ್‌ ಧಾಮಿ ಭಾನುವಾರ ಹೇಳಿದ್ದಾರೆ.

    ಉತ್ತರಾಖಂಡ ರಾಜ್ಯದ ಅಗ್ನಿವೀರರು ರಾಷ್ಟ್ರಕ್ಕೆ ಸೇವೆ ಸಲ್ಲಿಸಿದ ನಂತರ ಅವರಿಗೆ ಸರ್ಕಾರಿ ಇಲಾಖೆ ಹಾಗೂ ಪೊಲೀಸ್ ಇಲಾಖೆಯಲ್ಲಿ ಉದ್ಯೋಗ ನೀಡಲಾಗುವುದು. ಅದಕ್ಕಾಗಿ ಮೀಸಲಾತಿಗಾಗಿ ತರಲು ರಾಜ್ಯ ಸರ್ಕಾರ ಸಚಿವ ಸಂಪುಟದಲ್ಲಿ ಪ್ರಸ್ತಾವನೆ ಮಂಡಿಸಲಿದೆ ಎಂದು ಸಿಎಂ ಧಾಮಿ (Pushkar Singh Dhami) ತಿಳಿಸಿದ್ದಾರೆ. ಇದನ್ನೂ ಓದಿ: ಜು.22ರಿಂದ ಲೋಕಸಭೆ ಮುಂಗಾರು ಅಧಿವೇಶನ – 6 ಹೊಸ ಮಸೂದೆ ಮಂಡನೆಗೆ ಕೇಂದ್ರ ಸಜ್ಜು!

    ಉತ್ತರಾಖಂಡ ಮಿಲಿಟರಿ ಪ್ರಾಬಲ್ಯ ರಾಜ್ಯವಾಗಿದ್ದು, ಇಲ್ಲಿನ ಯುವಕರು ದೊಡ್ಡ ಸಂಖ್ಯೆಯಲ್ಲಿ ಭಾರತೀಯ ಸೇನೆಗೆ ಸೇರಿ ಸೇವೆ ಸಲ್ಲಿಸುತ್ತಾರೆ. ಆದ್ದರಿಂದ ರಾಜ್ಯದಲ್ಲಿ ಅಗ್ನಿವೀರರಿಗೆ ಸರ್ಕಾರಿ ನೌಕರಿ ನೀಡಲು ನಿರ್ಧರಿಸಿದೆ. ಅಗ್ನಿಪಥ್‌ ಯೋಜನೆ ಪರಿಚಯಿಸಿದಾಗ, ನಾನು ವಿವಿಧ ಮಿಲಿಟರಿ ಅಧಿಕಾರಿಗಳು ಮತ್ತು ಅನುಭವಿಗಳನ್ನು ಭೇಟಿಯಾಗಿ ಚರ್ಚಿಸಿದ್ದೆ. ಆಗಲೇ ಅಗ್ನಿವೀರರಿಗೆ ಉದ್ಯೋಗ ನೀಡಲು ನಿರ್ಧರಿಸಿದ್ದೆವು. ಈಗ ಅದಕ್ಕೆ ಸೂಕ್ತ ಸಮಯ ಬಂದಿದೆ. ಅಗ್ನಿಪಥ್‌ ಯೋಜನೆಗೆ ಆಯ್ಕೆಯಾಗಿ ಸೇನೆಯಲ್ಲಿ 4 ವರ್ಷ ಸೇನೆ ಸಲ್ಲಿಸಿದ ಅಗ್ನಿವೀರ್‌ ಸೈನಿಕರಿಗೆ ಉತ್ತರಾಖಂಡ ಪೊಲೀಸ್‌ ಮತ್ತು ರಾಜ್ಯ ಇತರೇ ಸರ್ಕಾರಿ ಇಲಾಖೆಗಳಲ್ಲಿ ಉದ್ಯೋಗ ನೀಡಲಾಗುತ್ತದೆ. ಇದಕ್ಕೆ ಸಂಬಂಧಿಸಿದ ಪ್ರಸ್ತಾವನೆಯನ್ನು ಶೀಘ್ರವೇ ಸಂಪುಟದಲ್ಲಿ ಮಂಡಿಸಲಾಗುತ್ತದೆ ಎಂದು ವಿವರಿಸಿದ್ದಾರೆ.

    ಅಲ್ಲದೇ ರಾಜ್ಯದಲ್ಲಿ ಕೌಶಲ ತರಬೇತಿ ಯೋಜನೆ ಜಾರಿಗೊಳಿಸಲು ಸಿದ್ಧತೆ ನಡೆಸಲಾಗಿದೆ. ಈ ಮೂಲಕ ನಿವೃತ್ತ ಅಗ್ನಿಶಾಮಕ ಸಿಬ್ಬಂದಿಗೆ ಹಲವು ಕ್ಷೇತ್ರಗಳಲ್ಲಿ ಉದ್ಯೋಗ ಸಂಬಂಧಿ ತರಬೇತಿ ನೀಡಲಾಗುವುದು. ಈ ಸಂಬಂಧವೂ ಆದಷ್ಟು ಬೇಗ ಪ್ರಸ್ತಾವನೆ ಸಿದ್ಧಪಡಿಸುವಂತೆ ಸಿಎಂ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಮುಂಬರುವ ವಿಧಾನಸಭೆ ಅಧಿವೇಶನದಲ್ಲೇ ಪ್ರಸ್ತಾವನೆ ಮಂಡಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಅಗ್ನಿವೀರರಿಗೆ 10% ಮೀಸಲಾತಿ – ಸ್ವಂತ ಉದ್ಯಮ ಆರಂಭಿಸುವವರಿಗೆ 5 ಲಕ್ಷ ರೂ. ವರೆಗೆ ಬಡ್ಡಿ ರಹಿತ ಸಾಲ: ಸಿಎಂ ಘೋಷಣೆ

  • ಅತ್ಯಾಚಾರ ಆರೋಪಿಗಳಿಗೆ ಸರ್ಕಾರಿ ಉದ್ಯೋಗ ಕಟ್: ಅಶೋಕ್ ಗೆಹ್ಲೋಟ್

    ಅತ್ಯಾಚಾರ ಆರೋಪಿಗಳಿಗೆ ಸರ್ಕಾರಿ ಉದ್ಯೋಗ ಕಟ್: ಅಶೋಕ್ ಗೆಹ್ಲೋಟ್

    ಜೈಪುರ: ಹೆಚ್ಚುತ್ತಿರುವ ಮಹಿಳಾ ದೌರ್ಜನ್ಯ ಪ್ರಕರಣಗಳಿಂದ ಪ್ರತಿಪಕ್ಷಗಳ ಟೀಕೆಗೆ ಗುರಿಯಾಗಿದ್ದ ರಾಜಸ್ಥಾನ ಸರ್ಕಾರ (Rajasthan Government) ಮಹತ್ವದ ಘೋಷಣೆ ಮಾಡಿದೆ. ರಾಜ್ಯದಲ್ಲಿ ಅತ್ಯಾಚಾರ ಆರೋಪಿಗಳು ಹಾಗೂ ಅಪರಾಧ ಕೃತ್ಯ ಹಿನ್ನೆಲೆ ಉಳ್ಳವರಿಗೆ ಸರ್ಕಾರಿ ಉದ್ಯೋಗ (Government Jobs) ನೀಡುವುದಿಲ್ಲ ಎಂದು ಘೋಷಣೆ ಮಾಡಿದೆ.

    ಮಹಿಳೆಯರ ವಿರುದ್ಧ ನಡೆಯುತ್ತಿರುವ ಅಪರಾಧ ಕೃತ್ಯಗಳನ್ನ ತಡೆಯಲು ಶಿಸ್ತು ಕ್ರಮದ ಭಾಗವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಬಾಲಕಿಯರು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರಕ್ಕೆ ಯತ್ನ ಇತರ ಅಪರಾಧ ಕೃತ್ಯಗಳಲ್ಲಿ ಭಾಗಿಯಾದವರಿಗೆ ಸರ್ಕಾರಿ ಉದ್ಯೋಗ ನಿಷೇಧಿಸಿದೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Ashok Gehlot) ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಅನರ್ಹತೆ ಆದೇಶ ವಾಪಸ್ ಬಳಿಕ ಮೊದಲ ಬಾರಿಗೆ ವಯನಾಡ್‌ಗೆ ಭೇಟಿ ನೀಡಲಿರುವ ರಾಗಾ

    ಅಪರಾಧ ಹಿನ್ನೆಲೆ ಉಳ್ಳವರನ್ನು ಪತ್ತೆ ಮಾಡಲು ಪೊಲೀಸ್ ಠಾಣೆಗಳಲ್ಲಿ ದಾಖಲೆಗಳನ್ನ ಪರಿಶೀಲಿಸಲಾಗುತ್ತಿದೆ. ರಾಜ್ಯದಲ್ಲಿ ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ ಪ್ರಕರಣಗಳ ಕುರಿತು ಬಿಜೆಪಿ ಆಡಳಿತ ಕಾಂಗ್ರೆಸ್ ಪಕ್ಷದ ಮೇಲೆ ಟೀಕಾ ಪ್ರಹಾರ ನಡೆಸುತ್ತಿರುವ ನಡುವೆ ಸರ್ಕಾರ ಈ ಘೋಷಣೆ ಮಾಡಿದೆ.

    ಇದೇ ಆಗಸ್ಟ್ 2ರಂದು ಬಿಲ್ವಾರ ಜಿಲ್ಲೆಯ ಕಲ್ಲಿದ್ದಲು ಕುಲುಮೆಯಲ್ಲಿ 4 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿತ್ತು. ಅತ್ಯಾಚಾರ ಎಸಗಿದ ಬಳಿಕ ಬಾಲಕಿಯನ್ನ ಕೊಲೆ ಮಾಡಲಾಗಿತ್ತು. ಈ ಪ್ರಕರಣ ಸಂಬಂಧ ಓರ್ವ ಮಹಿಳೆ ಸೇರಿ 7 ಜನರನ್ನ ಬಂಧಿಸಲಾಗಿದೆ. ಈ ಪ್ರಕರಣದ ಬಳಿಕ ಎಚ್ಚೆತ್ತುಕೊಂಡ ಸರ್ಕಾರ ಅಪರಾಧ ಕೃತ್ಯ ಹಿನ್ನೆಲೆ ಉಳ್ಳವರಿಗೆ ಸರ್ಕಾರಿ ಉದ್ಯೋಗ ನೀಡದಂತೆ ಸೂಚಿಸಿದೆ.

    ಬಿಲ್ವಾರಾ ಮತ್ತು ಜೋಧ್‌ಪುರದಂತಹ ಘಟನೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಅಪರಾಧ ಕೃತ್ಯದಲ್ಲಿ ಭಾಗಿಯಾದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿರುವುದಾಗಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ. ಇದನ್ನೂ ಓದಿ: ಏಕರೂಪ ನಾಗರಿಕ ಸಂಹಿತೆಯನ್ನು ವಿರೋಧಿಸಿ ಕೇರಳ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸರ್ಕಾರಿ ನೌಕರಿ ಕೊಡಿಸುವುದಾಗಿ ಮೋಸ – ಸ್ವಾಮೀಜಿ ಅರೆಸ್ಟ್

    ಸರ್ಕಾರಿ ನೌಕರಿ ಕೊಡಿಸುವುದಾಗಿ ಮೋಸ – ಸ್ವಾಮೀಜಿ ಅರೆಸ್ಟ್

    ಬೆಳಗಾವಿ: ಸರ್ಕಾರಿ ನೌಕರಿ ಕೊಡಿಸುವುದಾಗಿ ಜನರಿಗೆ ಮೋಸ ಮಾಡಿ ಹಲ್ಲೆ ಮಾಡಿರುವ ಆರೋಪದಡಿ ಮೂಡಲಗಿಯಲ್ಲಿ ಖತರ್ನಾಕ್ ವಂಚಕ ಸ್ವಾಮೀಜಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

    ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಹಳ್ಳೂರ ಗ್ರಾಮದ ಸ್ವಾಮೀಜಿ ಅಲ್ಲಮಪ್ರಭು ಹಿರೇಮಠ ಬಂಧಿತ ಆರೋಪಿ. ಬಂಧಿತ ಆರೋಪಿ ಅಲ್ಲಮಪ್ರಭು ಸ್ವಾಮೀಜಿಯ ರೀತಿ ಪೋಸ್ ಕೊಟ್ಟು ಜನರನ್ನು ವಂಚಿಸುತ್ತಿದ್ದನು. ಕಳೆದ 6 ತಿಂಗಳ ಹಿಂದೆ ಎಸ್‍ಸಿ ಕೋಟಾದಡಿ ‘ಡಿ’ ದರ್ಜೆ ಸರ್ಕಾರಿ ನೌಕರಿ ಕೊಡಿಸುವುದಾಗಿ ಮೂಡಲಗಿ ಪಟ್ಟಣದ ನಿವಾಸಿ ಸಂತೋಷ ಹವಳೆವ್ವಗೋಳ ಎಂಬಾತನಿಂದ 4 ಲಕ್ಷ ರೂಪಾಯಿ ಪಡೆದಿದ್ದನು. ಯುವಕ ಕೆಲಸ ಸಿಗದೇ ಇದ್ದಾಗ ಹಣ ವಾಪಸ್ ಕೇಳಿದ್ದಾನೆ. ಆಗ ಯುವಕನಿಗೆ ಅವಾಚ್ಯ ಶಬ್ದಗಳಿಂದ ಬೈಯ್ದು ಹಲ್ಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

    ಆಗಸ್ಟ್ 15ರಂದು ಹಣ ಕೇಳಲು ಹೋದಾಗ ಅಲ್ಲಮಪ್ರಭು ಹಿರೇಮಠ ಸಂಗಡಿಗರ ಜೊತೆಗೂಡಿ ಚಾಕುವಿನಿಂದ ಸಂತೋಷ ಹವಳೆವ್ವಗೋಳ ಬೆನ್ನಿಗೆ, ಕಾಲಿಗೆ ಚುಚ್ಚಿ ಗಾಯ ಮಾಡಿದ್ದಾನೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಖತರ್ನಾಕ್ ಆರೋಪಿ ಅಲ್ಲಮಪ್ರಭು ಹಿರೇಮಠನನ್ನು ಬಂಧಿಸಿದ್ದಾರೆ. ಇದನ್ನೂ ಓದಿ : ಆಮದು ಸುಂಕ ಹೆಚ್ಚಿಸಿ, ಅಡಿಕೆ ಬೆಲೆ ಪರಿಷ್ಕರಿಸಿ – ಕೇಂದ್ರ ಸರ್ಕಾರಕ್ಕೆ ಗೃಹ ಸಚಿವರ ನೇತೃತ್ವದ ನಿಯೋಗ ಮನವಿ

    ಇದಲ್ಲದೇ ಆರೋಪಿ ಅಲ್ಲಮಪ್ರಭು ಹಿರೇಮಠ ವಿರುದ್ಧ ಮತ್ತೊಂದು ವಂಚನೆ ದೂರು ಮೂಡಲಗಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಬೆಂಗಳೂರು (ಬಿಬಿಎಂಪಿ) ಚುನಾವಣೆಯಲ್ಲಿ ಇವಿಎಂ ಹ್ಯಾಕ್ ಮಾಡಿ ಗೆಲ್ಲಿಸಿಕೊಡುವುದಾಗಿ 5 ಲಕ್ಷ ಹಣ ಪಡೆಯಲಾಗಿದೆ ಎಂದು ಆರೋಪಿಸಿ ಬೆಂಗಳೂರು ನಿವಾಸಿ ಪ್ರಶಾಂತ್ ಕುಮಾರ್ ದೂರು ನೀಡಿದ್ದಾರೆ. ಈ ದೂರಿನ ಆಧಾರದ ಮೇಲೆ ಅಲ್ಲಮಪ್ರಭು ವಿರುದ್ಧ ಬೆಳಗಾವಿ ಜಿಲ್ಲೆ ಮೂಡಲಗಿ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ. ಇದನ್ನೂ ಓದಿ: ಸ್ವಾತಂತ್ರ್ಯ ದಿನಾಚರಣೆ ವೇಳೆ ಇನ್ಸ್‌ಪೆಕ್ಟರ್, ಕಾನ್‍ಸ್ಟೇಬಲ್ ನಾಗಿಣಿ ಡ್ಯಾನ್ಸ್ – ಇಬ್ಬರು ಎತ್ತಂಗಡಿ

    Live Tv
    [brid partner=56869869 player=32851 video=960834 autoplay=true]

  • ಬಿರ್ಭೂಮ್ ಹಿಂಸಾಚಾರ – ಮೃತರ ಕುಟುಂಬಸ್ಥರಿಗೆ ಸರ್ಕಾರಿ ಉದ್ಯೋಗ ಕೊಟ್ಟ ಮಮತಾ ಬ್ಯಾನರ್ಜಿ

    ಬಿರ್ಭೂಮ್ ಹಿಂಸಾಚಾರ – ಮೃತರ ಕುಟುಂಬಸ್ಥರಿಗೆ ಸರ್ಕಾರಿ ಉದ್ಯೋಗ ಕೊಟ್ಟ ಮಮತಾ ಬ್ಯಾನರ್ಜಿ

    ಕೋಲ್ಕತ್ತಾ: ಪಶ್ಚಿಮ ಬಂಗಾಳದ ಬಿರ್ಭೂಮ್ ಜಿಲ್ಲೆಯ ರಾಂಪರ್‍ನಲ್ಲಿ ನಡೆದ ಹಿಂಸಾಚಾರದಲ್ಲಿ ಮೃತಪಟ್ಟವರ ಕುಟುಂಬದ ಹತ್ತು ಮಂದಿಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ನೇಮಕಾತಿ ಪತ್ರಗಳನ್ನು ಹಸ್ತಾಂತರಿಸಿದರು.

    ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ಮೃತರ ಕುಟುಂಬಸ್ಥರೊಂದಿಗೆ ಮಾತನಾಡಿದ ಮಮತಾ ಬ್ಯಾನರ್ಜಿ ಅವರು, ಈ ಹತ್ತು ಜನರನ್ನು ಕೆಲಸಕ್ಕೆ ಸೇರಿಸಿಕೊಳ್ಳುವಾಗ ಯಾವುದೇ ರೀತಿಯ ತೊಂದರೆಗಳಾಗದಂತೆ ನೋಡಿಕೊಳ್ಳುವಂತೆ ಬಿರ್ಭುಮ್ ಜಿಲ್ಲಾ ಮ್ಯಾಜಿಸ್ಟ್ರೇಟ್‍ಗೆ ಸೂಚಿಸಿದರು. ಇದನ್ನೂ ಓದಿ: ಮಾವಿನಹಣ್ಣಿನ ಮಾರ್ಕೆಟ್ ನಮ್ಮದಾಗಬೇಕು – ಹಾಸನದಲ್ಲಿ ಹೊಸ ಅಭಿಯಾನ

    ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ನನ್ನ ಮಾತನ್ನು ಉಳಿಸಿಕೊಂಡಿದ್ದೇನೆ. ಇಂದು ನಾನು 10 ಮಂದಿಗೆ ಡಿ ಗ್ರೂಪ್‌ ಉದ್ಯೋಗ ನೀಡುತ್ತಿದ್ದೇನೆ. ಆದರೆ ಬಿರ್ಭುಮ್ ಹಿಂಸಾಚಾರದಲ್ಲಿ ನಾವು ಕಳೆದುಕೊಂಡವರನ್ನು ಎಂದಿಗೂ ಹಿಂತಿರುಗಿಸಲಾಗುವುದಿಲ್ಲ, ಆದರೆ ಎಲ್ಲರೂ ಮುಂದಕ್ಕೆ ಸಾಗಿ, ಬದುಕು ನಡೆಸಬೇಕಾಗಿದೆ ಎಂದರು. ಇದನ್ನೂ ಓದಿ: ಸತತ 15ನೇ ದಿನವೂ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ

    ಟಿಎಂಸಿ ನಾಯಕ ಬಹದ್ದೂರ್ ಶೇಖ್ ಅವರ ಹತ್ಯೆಯ ಬಳಿಕ ದುಷ್ಕರ್ಮಿಗಳ ಗುಂಪೊಂದು ಕಳೆದ ತಿಂಗಳು ಪಶ್ಚಿಮ ಬಂಗಾಳದ ಬಿರ್ಭೂಮ್‍ನ ರಾಮ್‍ಪುರಹತ್ ಪ್ರದೇಶದಲ್ಲಿ ಅನೇಕ ಗುಡಿಸಲುಗಳಿಗೆ ಬೆಂಕಿ ಹಚ್ಚಿದರು. ಇದರ ಪರಿಣಾಮ ಒಂಬತ್ತು ಮಂದಿ ಸಾವನ್ನಪ್ಪಿದ್ದರು.

  • ಯುಪಿಯಲ್ಲಿ ಬಿಜೆಪಿ ಆಡಳಿತದಲ್ಲಿ 5 ಲಕ್ಷ ಸರ್ಕಾರಿ ಉದ್ಯೋಗ ನೀಡಲಾಗಿದೆ: ಮೋದಿ

    ಯುಪಿಯಲ್ಲಿ ಬಿಜೆಪಿ ಆಡಳಿತದಲ್ಲಿ 5 ಲಕ್ಷ ಸರ್ಕಾರಿ ಉದ್ಯೋಗ ನೀಡಲಾಗಿದೆ: ಮೋದಿ

    ಲಕ್ನೋ: ಉತ್ತರ ಪ್ರದೇಶದ ಜನರಿಗೆ ಸರ್ಕಾರಿ ಉದ್ಯೋಗ ನೀಡುವ ಭರವಸೆ ನೀಡಿದ ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷದ ಸರ್ಕಾರಗಳು 10 ವರ್ಷಗಳಲ್ಲಿ ಕೇವಲ ಎರಡು ಲಕ್ಷ ಜನರಿಗೆ ಸರ್ಕಾರಿ ಉದ್ಯೋಗಗಳನ್ನು ನೀಡಿದೆ. ಆದರೆ ಯೋಗಿ ಆದಿತ್ಯನಾಥ್ ಸರ್ಕಾರ ಐದು ವರ್ಷಗಳಲ್ಲಿ ಐದು ಲಕ್ಷ ಮಂದಿಗೆ ಉದ್ಯೋಗ ನೀಡಿದೆ ಎಂದು ವಿರೋಧ ಪಕ್ಷದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರು ವಾಗ್ದಾಳಿ ನಡೆಸಿದ್ದಾರೆ.

    ಪ್ರಯಾಗ್‍ರಾಜ್ ರ್‍ಯಾಲಿಯನ್ನುದ್ದೇಶಿ ಮಾತನಾಡಿದ ಅವರು, ವಿರೋಧ ಪಕ್ಷಗಳು ಮತ್ತೆ ಉದ್ಯೋಗದ ಹೆಸರಿನಲ್ಲಿ ರಾಜ್ಯದ ಯುವಕರನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ನಿಜವಾಗಿ ಹೇಳಬೇಕೆಂದರೆ ಅವರು 10 ವರ್ಷಗಳಲ್ಲಿ ಕೇವಲ ಎರಡು ಲಕ್ಷ ಜನರಿಗೆ ಸರ್ಕಾರಿ ಉದ್ಯೋಗಗಳನ್ನು ನೀಡಿದ್ದಾರೆ. ಅದು ಕೂಡ ಸ್ವಜನಪಕ್ಷಪಾತ (ಭಾಯಿ-ಭಟಿಜವಾದ್), ಜಾತಿವಾದ ಮತ್ತು ಭ್ರಷ್ಟಾಚಾರದ ಆಧಾರದ ಮೇಲೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಮೆಟ್ರೋ ಸುರಂಗದಲ್ಲಿ ಅವಿತಿದ್ದಾರೆ ಕನ್ನಡಿಗರು!

    ಬಿಜೆಪಿ ಅಧಿಕಾರಾವಧಿಯಲ್ಲಿ ನೀಡಲಾದ ಉದ್ಯೋಗಗಳು ವಿರೋಧ ಪಕ್ಷಗಳು ಅಳವಡಿಸಿಕೊಂಡ ಮಾನದಂಡಗಳನ್ನು ಆಧರಿಸಿಲ್ಲ. ಬದಲಿಗೆ ಬಡವರ ಮಕ್ಕಳಿಗೆ ಪೂರ್ಣ ಪಾರದರ್ಶಕತೆಯೊಂದಿಗೆ ಉದ್ಯೋಗಗಳನ್ನು ನೀಡಲಾಗಿದೆ. ಅಲ್ಲದೇ ಹಿಂದೆ ಇದ್ದ ಸರ್ಕಾರ ಉದ್ಯೋಗಗಳ ಆಯ್ಕೆ ಪ್ರಕ್ರಿಯೆಯಲ್ಲಿ ಆಡಿದ ಆಟಗಳಿಂದ ರಾಜ್ಯದ ಅರ್ಹ ಯುವಕರ ಜೀವನವನ್ನು ನಾಶಪಡಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಈ ಮುನ್ನ ಉತ್ತರ ಪ್ರದೇಶದ ಪಿಸಿಎಸ್ ಪರೀಕ್ಷೆಯ ಪಠ್ಯಕ್ರಮವು ಯುಪಿಎಸ್‍ಸಿಗಿಂತ ಭಿನ್ನವಾಗಿತ್ತು. ನಮ್ಮ ಸರ್ಕಾರ ನಿಮ್ಮ ಸಮಸ್ಯೆಯನ್ನು ಅರ್ಥಮಾಡಿಕೊಂಡಿದೆ ಮತ್ತು ಇಂದು ಪಿಸಿಎಸ್ ಮತ್ತು ಯುಪಿಎಸ್‍ಸಿಯ ಪಠ್ಯಕ್ರಮ ಒಂದೇ ಆಗಿದೆ. ಈಗ ಅದೇ ಕಠಿಣ ಪರಿಶ್ರಮದಿಂದ ಯುವಕರು ಎರಡೂ ಪರೀಕ್ಷೆಗಳನ್ನು ಬರೆಯಬಹುದು ಎಂದಿದ್ದಾರೆ. ಇದನ್ನೂ ಓದಿ: Russia-Ukraine War: ಯುದ್ಧ ನಿಲ್ಲಿಸಿ, ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಿ – ಪುಟಿನ್‍ಗೆ ಮೋದಿ ಮನವಿ

  • ಒಡಿಶಾದಲ್ಲಿ 53 ವರ್ಷದವರೂ ಸರ್ಕಾರಿ ಹುದ್ದೆಗೆ ಸೇರಬಹುದು

    ಒಡಿಶಾದಲ್ಲಿ 53 ವರ್ಷದವರೂ ಸರ್ಕಾರಿ ಹುದ್ದೆಗೆ ಸೇರಬಹುದು

    ಭುವನೇಶ್ವರ: ಒಡಿಶಾ ರಾಜ್ಯದ ಸರ್ಕಾರಿ ನೌಕರಿಗೆ ಸೇರುವ ವಿವಿಧ ವರ್ಗಗಳ ಗರಿಷ್ಠ ವಯೋಮಿತಿಯನ್ನು ಹೆಚ್ಚಿಸಿದೆ. ಇದರಲ್ಲಿ ಎಸ್‌ಸಿಬಿಸಿ, ಪರಿಶಿಷ್ಟ ಜಾತಿ ಹಾಗೂ ಪಂಗಡಕ್ಕೆ ಸೇರಿದ ಅಂಗವಿಕಲ ಅಭ್ಯರ್ಥಿಗಳು 53 ವರ್ಷಗಳ ವರೆಗೂ ಅರ್ಜಿ ಸಲ್ಲಿಸಬಹುದು ಎಂಬುದು ಗಮನಾರ್ಹ ವಿಚಾರ.

    ಒಡಿಶಾ ರಾಜ್ಯ ಸರ್ಕಾರ, ಸರ್ಕಾರಿ ನೌಕರಿಗೆ ಸೇರುವ ಅಭ್ಯರ್ಥಿಗಳ ವಯೋಮಿತಿಯನ್ನು ಏರಿಸುವ ಮೂಲಕ ಮಧ್ಯ ವಯಸ್ಕರಿಗೂ ಉತ್ತಮ ಅವಕಾಶ ದೊರಕುವಂತೆ ಮಾಡಿದೆ. ಇದರಲ್ಲಿ ಸಾಮಾನ್ಯ ವರ್ಗದ ಮಿತಿಯನ್ನು 32 ವರ್ಷದಿಂದ 38 ವರ್ಷಗಳಿಗೆ ಹೆಚ್ಚಿಸಿದೆ. ಇದನ್ನೂ ಓದಿ: ಮುಗಿಯದ ಕೇಸರಿ ಶಲ್ಯ ವಿವಾದ – ಠಾಣೆ ಮೆಟ್ಟಿಲೇರಿದ ವಿದ್ಯಾರ್ಥಿಗಳ ಗಲಾಟೆ

    ಎಸ್‌ಸಿಬಿಸಿ, ಪರಿಶಿಷ್ಟ ಜಾತಿ ಹಾಗೂ ಪಂಗಡಕ್ಕೆ ಸೇರಿದ ಅಭ್ಯರ್ಥಿಗಳ ಗರಿಷ್ಠ ವಯೋಮಿತಿಯನ್ನು 43 ವರ್ಷಗಳಿಗೆ ಹೆಚ್ಚಿಸಲಾಗಿದೆ ಹಾಗೂ ಈ ಪ್ರವರ್ಗದ ಮಹಿಳಾ ಅಭ್ಯರ್ಥಿಗಳ ವಯೋಮಿತಿಯನ್ನೂ 43 ವರ್ಷಗಳಿಗೆ ಏರಿಸಲಾಗಿದೆ. ಉಳಿದೆಲ್ಲಾ ವರ್ಗಗಳ ಅಂಗವಿಕಲ ಅಭ್ಯರ್ಥಿಗಳ ವಯೋಮಿತಿಯನ್ನು 48 ವರ್ಷಗಳಿಗೆ ಹೆಚ್ಚಿಸಲಾಗಿದೆ. ಇದನ್ನೂ ಓದಿ: ಬಿಜೆಪಿ ಶಾಸಕರು, ಸಚಿವರು, ನಾಯಕರಿಗೆ ಹೈಕಮಾಂಡ್ ಕ್ಲಾಸ್

    ಈ ವಯೋಮಿತಿ 2021ರಲ್ಲಿ ಹೊರಡಿಸಲಾದ ಅಧಿಸೂಚನೆಗಳಿಗೆ ಹಾಗೂ 2022-23ರ ಅಧಿಸೂಚನೆಗಳಿಗೆ ಅನ್ವಯವಾಗುತ್ತದೆ ಎಂದು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ತಿಳಿಸಿದ್ದಾರೆ. ಇಷ್ಟು ಮಾತ್ರವಲ್ಲದೇ ಒಡಿಶಾ ಉನ್ನತ ಶಿಕ್ಷಣ ಇಲಾಖೆ ತಾಯ್ತನದ ರಜೆಯನ್ನು ಗರಿಷ್ಠ 180 ದಿನಗಳ ವರೆಗೆ ಹೆಚ್ಚಿಸುವುದಾಗಿ ತಿಳಿಸಿದೆ.

  • ಸಂದರ್ಶನ ವ್ಯವಸ್ಥೆಗೆ ಗುಡ್ ಬೈ- ನೇರ ನೇಮಕಾತಿಗೆ ಸರ್ಕಾರದ ಕರಡು ನಿಯಮ ಬಿಡುಗಡೆ

    ಸಂದರ್ಶನ ವ್ಯವಸ್ಥೆಗೆ ಗುಡ್ ಬೈ- ನೇರ ನೇಮಕಾತಿಗೆ ಸರ್ಕಾರದ ಕರಡು ನಿಯಮ ಬಿಡುಗಡೆ

    ಬೆಂಗಳೂರು: ಎಷ್ಟೇ ಓದಿ ಬರೆದರೂ ಸಂದರ್ಶನದಲ್ಲಿ ಅಂಕ ಹೋಗುತ್ತೆ. ಕೆಲಸ ಕೂಡಾ ಕೈ ತಪ್ಪುತ್ತೆ ಅನ್ನೋ ಆತಂಕ ಇರೋ ಸಾವಿರಾರು ಪ್ರಾಮಾಣಿಕ ಅಭ್ಯರ್ಥಿಗಳಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಇನ್ಮುಂದೆ ಗ್ರೂಪ್ ಎ ಮತ್ತು ಬಿ ಹುದ್ದೆಗಳಿಗೆ ಸಂದರ್ಶನ ವ್ಯವಸ್ಥೆ ರದ್ದು ಮಾಡಿದ್ದು, ನೇರ ನೇಮಕಾತಿ ಮೂಲಕ ಹುದ್ದೆ ಭರ್ತಿಗೆ ನಿಯಮ ರೂಪಿಸಿದೆ.

    ಈಗಾಗಲೇ “ಸಿ” ಗ್ರೂಪ್ ಹುದ್ದೆಗಳಿಗೆ ಸಂದರ್ಶನ ವ್ಯವಸ್ಥೆ ರದ್ದು ಮಾಡಲಾಗಿದೆ. ನೇಮಕಾತಿಯಲ್ಲಿ ಮತ್ತಷ್ಟು ಪಾರದರ್ಶಕತೆ ತರಲು ಈಗ ಎ ಮತ್ತು ಬಿ ಗ್ರೂಪ್ ಹುದ್ದೆಗಳ ಸಂದರ್ಶನ ವ್ಯವಸ್ಥೆ ರದ್ದು ಮಾಡಿದೆ. ಈ ಸಂಬಂಧ ಕರಡು ನಿಯಮವನ್ನ ಬಿಡುಗಡೆ ಮಾಡಿದೆ. ಆದ್ರೆ ಈ ಸಂದರ್ಶನ ವ್ಯವಸ್ಥೆಯನ್ನು ಎಲ್ಲಾ ಹುದ್ದೆಗಳಿಗೂ ಜಾರಿಗೆ ತಂದಿಲ್ಲ. ನಿಯಮಿತ ಮತ್ತು ಸರ್ಕಾರ ನಿರ್ಧಾರ ಮಾಡೋ ಹುದ್ದೆಗಳಿಗೆ ಮಾತ್ರ ಸಂದರ್ಶನ ವ್ಯವಸ್ಥೆ ರದ್ದಾಗಲಿದೆ.

    ಕರಡು ನಿಯಮದ ಪ್ರಕಾರ ಇನ್ನುಂದೆ ಎ ಮತ್ತು ಬಿ ಗ್ರೂಪ್ ಹುದ್ದೆಗಳಿಗೆ ಅಭ್ಯರ್ಥಿಗಳನ್ನ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇರವಾಗಿ ಆಯ್ಕೆ ಮಾಡಿಕೊಳ್ಳಲಾಗುತ್ತೆ. ಪರೀಕ್ಷೆಯಲ್ಲಿ ಪಡೆದ ಅಂಕ ಮಾತ್ರ ಪರಿಗಣನೆಗೆ ತೆಗೆದುಕೊಂಡು, ಶ್ರೇಣಿ ಆಧಾರದಲ್ಲಿ ಹುದ್ದೆಗೆ ನೇಮಕ ಮಾಡಿಕೊಳ್ಳಲಾಗುತ್ತೆ. ಹೊಸ ನಿಯಮದ ಕರಡು ನಿಯಮ ಬಿಡುಗಡೆ ಮಾಡಿದ್ದು, ಆಕ್ಷೇಪಣೆ ಇದ್ದರೆ ಅಥವಾ ಸಲಹೆಗಳು ಇದ್ದರೆ ಕಾರ್ಯದರ್ಶಿಗಳು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ವಿಭಾಗಕ್ಕೆ ಪತ್ರದ ಮುಖೇನ ತಿಳಿಸಬಹುದಾಗಿದೆ.

  • ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದರೆ ಸರ್ಕಾರಿ ಉದ್ಯೋಗ ಇಲ್ಲ

    ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದರೆ ಸರ್ಕಾರಿ ಉದ್ಯೋಗ ಇಲ್ಲ

    – 2017ರಲ್ಲಿ ಅಸ್ಸಾಂ ವಿಧಾನಸಭೆಯಲ್ಲಿ ಮಸೂದೆ ಪಾಸ್
    – ಅಸ್ಸಾಂ ಸರ್ಕಾರದ ಕ್ಯಾಬಿನೆಟ್‍ನಿಂದ ಮಹತ್ವದ ನಿರ್ಧಾರ

    ಗುವಾಹಟಿ: ಎರಡಕ್ಕಿಂತ ಹೆಚ್ಚಿನ ಮಕ್ಕಳನ್ನು ಹೊಂದಿದ್ದ ಪೋಷಕರಿಗೆ ಸರ್ಕಾರಿ ಉದ್ಯೋಗ ನೀಡದಿರಲು ಅಸ್ಸಾಂ ಸರ್ಕಾರ ಮಹತ್ವದÀ ನಿರ್ಧಾರ ಕೈಗೊಂಡಿದೆ.

    ಸೋಮವಾರ ಅಸ್ಸಾಂ ಸರ್ಕಾರ ಕ್ಯಾಬಿನೆಟ್‍ನಲ್ಲಿ ಈ ತೀರ್ಮಾನವನ್ನು ಕೈಗೊಂಡಿದೆ. 2021 ಜನವರಿಯಿಂದ ಈ ನೀತಿ ಜಾರಿಯಾಗಲಿದ್ದು ಜನ ಸಂಖ್ಯೆ ನಿಯಂತ್ರಿಸಲು ಸಣ್ಣ ಕುಟುಂಬಕ್ಕಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸರ್ಕಾರ ಹೇಳಿದೆ.

    2017ರ ಸೆಪ್ಟೆಂಬರ್ ನಲ್ಲಿ ವಿಧಾನಸಭೆ “ಜನಸಂಖ್ಯೆ ಮತ್ತು ಅಸ್ಸಾಂನ ಮಹಿಳಾ ಸಬಲೀಕರಣ ನೀತಿ” ಮಸೂದೆಯನ್ನು ಪಾಸ್ ಮಾಡಿತ್ತು. ಈ ಮಸೂದೆಯಲ್ಲಿ ಸರ್ಕಾರಿ ಉದ್ಯೋಗ ಪಡೆಯುವ ಅರ್ಹ ಅಭ್ಯರ್ಥಿಗಳು ಗರಿಷ್ಟ 2 ಮಕ್ಕಳನ್ನು ಹೊಂದಿರಬಹುದು ಮತ್ತು ಈಗಾಗಲೇ ಸರ್ಕಾರಿ ಉದ್ಯೋಗದಲ್ಲಿರುವ ಸಿಬ್ಬಂದಿ ಸೇವಾ ನಿವೃತ್ತಿಯವರೆಗೆ ಎರಡು ಮಕ್ಕಳ ನೀತಿಯನ್ನು ಕಡ್ಡಾಯವಾಗಿ ಅನುಸರಿಸಬೇಕೆಂಬ ಅಂಶವನ್ನು ಸೇರಿಸಲಾಗಿತ್ತು.

    ಅಸ್ಸಾಂ ಸರ್ಕಾರದ ಆರೋಗ್ಯ ಸಚಿವ ಹಿಮಂತ ಬಿಸ್ವಾ ಶರ್ಮಾ ಈ ಹಿಂದೆ ಪ್ರತಿಕ್ರಿಯಿಸಿ, ಸರ್ಕಾರ ನಿಗದಿ ಪಡಿಸಿರುವ ವಯೋಮಿತಿಯಲ್ಲೇ ಅರ್ಜಿ ಸಲ್ಲಿಸಿದ್ದರೂ ಕೂಡ ಮದುವೆಯಾಗಿ, ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದರೆ ಆ ಅಭ್ಯರ್ಥಿಗಳ ಅರ್ಜಿಗಳನ್ನು ಅನರ್ಹ ಪಟ್ಟಿಗೆ ಸೇರಿಸಲಾಗುತ್ತದೆ ಎಂದು ತಿಳಿಸಿದ್ದರು.

    ಭಾರತದಲ್ಲಿ ಎರಡು ಮಕ್ಕಳು ಸಾಕು ಎಂಬ ನೀತಿ ಇದ್ದರೂ ಈ ನಿಯಮವನ್ನು ಕೆಲವೇ ಮಂದಿ ಪಾಲಿಸುತ್ತಿದ್ದಾರೆ. ಮದುವೆ ವಯೋಮಿತಿ ಗಂಡಿಗೆ 21 ಹೆಣ್ಣಿಗೆ 18 ವರ್ಷಗಳಾಗಿದ್ದು, ಅದಕ್ಕಿಂತ ಕಡಿಮೆ ವಯಸ್ಸಿನಲ್ಲಿ ಮದುವೆ ಮಾಡಿದರೆ ಶಿಕ್ಷೆಯಾಗುತ್ತದೆ. ಹೀಗಾಗಿ ಈ ನೀತಿಯನ್ನು ಜಾರಿಗೆ ತರಲಾಗುತ್ತಿದೆ ಎಂದು ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದರು.

    ಉದ್ಯೋಗ ಯೋಜನೆ ಅಡಿಯಲ್ಲಿ ಸರಕಾರದ ಪ್ರಯೋಜನ ಪಡೆಯುವ ಫಲಾನುಭವಿಗಳು ಸೇರಿದಂತೆ ಅಸ್ಸಾಂ ರಾಜ್ಯ ಚುನಾವಣಾ ಆಯೋಗ ಅಡಿಯಲ್ಲಿ ಬರುವ ಪಂಚಾಯತ್, ಪುರಸಭೆ ಮತ್ತು ಸ್ವಾಯತ್ತ ಕೌನ್ಸಿಲ್‍ಗೆ ನಡೆಯುವ ಚುನಾವಣಾ ಅಭ್ಯರ್ಥಿಗಳಿಗೂ ಎರಡು ಮಕ್ಕಳ ಜನಸಂಖ್ಯೆಯ ನೀತಿ ಅನ್ವಯವಾಗುತ್ತದೆ.

    2011ರ ಜನಗಣತಿಯಂತೆ ಅಸ್ಸಾಂನ ಜನಸಂಖ್ಯೆ 3 ಕೋಟಿಗೆ ಏರಿಕೆಯಾಗಿದೆ. ಏರಿಕೆ ಪೈಕಿ ಮುಸ್ಲಿಂ ಸಮುದಾಯದಲ್ಲಿ ಭಾರೀ ಏರಿಕೆ ಕಂಡು ಬಂದಿತ್ತು. 2011ರಲ್ಲಿ ಮುಸ್ಲಿಂ ಸಮುದಾಯದ ಜನಸಂಖ್ಯೆ ಶೇ.34.2ಕ್ಕೆ ಏರಿಕೆಯಾಗಿತ್ತು. 10 ವರ್ಷದಲ್ಲಿ ಶೇ.3.30 ರಷ್ಟು ಏರಿಕೆ ಕಂಡು ಬಂದಿತ್ತು.

  • ಒಂದೇ ದಿನಕ್ಕೆ 1.26 ಲಕ್ಷ ಮಂದಿಗೆ ಸರ್ಕಾರಿ ಕೆಲಸ – ದಾಖಲೆ ಬರೆದ ಆಂಧ್ರ ಸರ್ಕಾರ

    ಒಂದೇ ದಿನಕ್ಕೆ 1.26 ಲಕ್ಷ ಮಂದಿಗೆ ಸರ್ಕಾರಿ ಕೆಲಸ – ದಾಖಲೆ ಬರೆದ ಆಂಧ್ರ ಸರ್ಕಾರ

    ಹೈದರಾಬಾದ್: ಒಂದೇ ದಿನಕ್ಕೆ ಬರೋಬ್ಬರಿ 1.26 ಲಕ್ಷ ಮಂದಿಗೆ ಸರ್ಕಾರಿ ಕೆಲಸ ನೀಡುವ ಮೂಲಕ ಆಂಧ್ರ ಪ್ರದೇಶ ಸರ್ಕಾರ ದಾಖಲೆ ನಿರ್ಮಿಸಿದ್ದು, ಸಿಎಂ ಜಗನ್ ಮೋಹನ್ ರೆಡ್ಡಿ ಅವರ ಕಾರ್ಯವೈಖರಿ ಎಲ್ಲರ ಮನ ಗೆದ್ದಿದೆ.

    ಭಾರತದಲ್ಲಿ ಹೀಗೆ ಭಾರೀ ಸಂಖ್ಯೆಯಲ್ಲಿ ಈ ಹಿಂದೆ ಒಂದೇ ದಿನಕ್ಕೆ ಯಾವ ಸರ್ಕಾರ ಕೂಡ ಉದ್ಯೋಗ ನೀಡಿರಲಿಲ್ಲ. ಆದರೆ ಜಗನ್ ಮೋಹನ್ ರೆಡ್ಡಿ ನೇತೃತ್ವದ ಸರ್ಕಾರ ಈ ಸಾಧನೆ ಮಾಡಿದ್ದು, ಒಂದೇ ದಿನಕ್ಕೆ 1.26 ಲಕ್ಷ ಮಂದಿಗೆ ಉದ್ಯೋಗ ನೀಡಿ ಇತಿಹಾಸ ಬರೆದಿದೆ.

    ಸೋಮವಾರ ವಿಜಯವಾಡದಲ್ಲಿ ಖುದ್ದು ಸಿಎಂ ಜಗನ್ ಮೋಹನ್ ರೆಡ್ಡಿಯವರೇ, ಹೊಸದಾಗಿ ನೇಮಕಗೊಂಡವರಿಗೆ ಆದೇಶ ಪತ್ರ ವಿತರಿಸಿ ಅಭಿನಂದನೆ ತಿಳಿಸಿದರು. ಈ ವೇಳೆ ಮಾತಾಡಿದ ಸಿಎಂ, ವೈಎಸ್‍ಆರ್ ಕಾಂಗ್ರೆಸ್ ಸರ್ಕಾರ ನಿರುದ್ಯೋಗವನ್ನು ಹೋಗಲಾಡಿಸಿ, ಜನತೆಗೆ ಉದ್ಯೋಗ ಕಲ್ಪಿಸಿಕೊಡಲು ಪಣತೊಟ್ಟಿದೆ. ಆದ್ದರಿಂದ ಇನ್ಮುಂದೆ ಯುವ ಜನತೆಗೆ ಭಾರೀ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿ ಮಾಡುವ ಗುರಿ ಹೊಂದಿದ್ದೇವೆ. ಪ್ರತಿವರ್ಷ ಜನವರಿ ತಿಂಗಳಿನಲ್ಲಿ ಸರ್ಕಾರಿ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುವ ಪ್ರಕ್ರಿಯೆಗಳು ನಡೆಯಲಿವೆ ಎಂದು ತಿಳಿಸಿದ್ದಾರೆ.

    ಸುಮಾರು 500 ಸಾರ್ವಜನಿಕ ಸೇವೆಗಳಿಗೆ 21 ಲಕ್ಷಕ್ಕೂ ಅಧಿಕ ಮಂದಿ ಅಭ್ಯರ್ಥಿಗಳು ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ್ದರು. ಸೆಪ್ಟೆಂಬರ್ 1 ರಿಂದ 8ರವರೆಗೆ ಒಟ್ಟು 19.50 ಲಕ್ಷ ಮಂದಿ ಸರ್ಕಾರಿ ಕೆಲಸಕ್ಕಾಗಿ ಲಿಖಿತ ಪರೀಕ್ಷೆ ಬರೆದಿದ್ದರು. ಈ ಪರೀಕ್ಷೆಗಳಲ್ಲಿ ಅರ್ಹತೆ ಪಡೆದ 1,98,164 ಅಭ್ಯರ್ಥಿಗಳಲ್ಲಿ ನಗರ ಪ್ರದೇಶಗಳಲ್ಲಿ 31,640 ಉದ್ಯೋಗ ನೀಡಿರುವುದನ್ನೂ ಸೇರಿಸಿ ಒಟ್ಟು 1,26,728 ಮಂದಿಗೆ ವಿವಿಧ ಹುದ್ದೆಗೆ ನೇಮಿಸಲಾಗಿದೆ.

    ಈ ಹಿಂದೆ ನೂತನವಾಗಿ ಸಿಎಂ ಪಟ್ಟ ಏರಿದಾಗಲೇ ಜಗನ್ ಅವರು ರಾಜ್ಯದ ಆಶಾ ಕಾರ್ಯಕರ್ತೆಯರಿಗೆ ಸಿಹಿಸುದ್ದಿ ನೀಡಿದ್ದರು. ಅವರಿಗೆ ನೀಡುತ್ತಿದ್ದ ಗೌರವ ಧನವನ್ನು 3 ಸಾವಿರದಿಂದ ದಿಢೀರ್ 10 ಸಾವಿರಕ್ಕೇರಿಸಿ ಅಧಿಕೃತವಾಗಿ ಘೋಷಿಸಿ ಮೆಚ್ಚುಗೆ ಪಡೆದಿದ್ದರು. ಇದರಿಂದ ಕಡಿಮೆ ಸಂಬಳ ಪಡೆಯುತ್ತಿದ್ದವರು ಖುಷಿಯಿಂದ ಸಿಎಂ ಕಾರ್ಯವನ್ನು ಶ್ಲಾಘಿಸಿದ್ದರು.

    ಪ್ರಮಾಣ ವಚನ ಸ್ವೀಕರಿಸಿದ ದಿನದಿಂದ ಸಿಎಂ ಜಗನ್ ಅವರು ಹೊಸ ಯೋಜನೆಗಳನ್ನು ಘೋಷಿಸುತ್ತಲೇ ಬಂದಿದ್ದು, ವೃದ್ಧಾಪ್ಯ ವೇತನ ಹೆಚ್ಚಳ ನಿರ್ಧಾರ ಪ್ರಕಟಿಸಿದ ಬೆನ್ನಲ್ಲೇ, ಕಷ್ಟಪಟ್ಟು ದುಡಿಯುವ ಆಶಾ ಕಾರ್ಯಕರ್ತೆಯರಿಗೆ ಸಂಬಳ ಹೆಚ್ಚಿಸಿದ್ದರು. ಈಗ ನಿರುದ್ಯೋಗಿಗಳಿಗೆ 1 ಲಕ್ಷ 26 ಸಾವಿರ ಸರ್ಕಾರಿ ಉದ್ಯೋಗ ನೀಡುವ ಮೂಲಕ ಹೊಸ ದಾಖಲೆ ನಿರ್ಮಿಸಿ ಭೇಷ್ ಎನಿಸಿಕೊಂಡಿದ್ದಾರೆ.

  • 10 ಗಂಟೆಗೆ ಕಚೇರಿಗೆ ಬರೋಕ್ಕಾಗಲ್ಲ- ಸರ್ಕಾರಿ ನೌಕರರಿಂದ ಪತ್ರ

    10 ಗಂಟೆಗೆ ಕಚೇರಿಗೆ ಬರೋಕ್ಕಾಗಲ್ಲ- ಸರ್ಕಾರಿ ನೌಕರರಿಂದ ಪತ್ರ

    – ಖಾಸಗಿ ಸಂಸ್ಥೆಯಲ್ಲಿ 10 ಗಂಟೆ ಕೆಲಸ
    – 10 ನಿಮಿಷ ತಡವಾದ್ರೂ ಅರ್ಧ ದಿನದ ಸಂಬಳ ಕಟ್

    ಬೆಂಗಳೂರು: ಖಾಸಗಿ ಸಂಸ್ಥೆಗಳಲ್ಲಿ ದಿನಕ್ಕೆ 10 ಗಂಟೆ ಕೆಲಸ ಮಾಡಬೇಕಾಗಿದೆ. ಒಂದು ವೇಳೆ 10 ನಿಮಿಷ ತಡವಾಗಿ ಹೋದರೆ ಅರ್ಧ ದಿನದ ಸ್ಯಾಲರಿ ಕಟ್ ಮಾಡಲಾಗುತ್ತದೆ. ಹಾಗಾಗಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವವರು ಕಚೇರಿ ಸಮಯ 9.00ಕ್ಕೆ ಇದ್ದರೂ 8.30ಕ್ಕೆ ಹೋಗುತ್ತಾರೆ. ಆದರೆ ಸರ್ಕಾರಿ ನೌಕರರ ಸ್ಥಿತಿ ಹಾಗಲ್ಲ ಸಕಲ ಸವಲತ್ತು ಇರುವ ವಿಧಾನಸೌದಕ್ಕೆ ಸರಿಯಾದ ಸಮಯಕ್ಕೆ ಬರಲು ಸಾದ್ಯವೇ ಇಲ್ಲ ಎಂದು ಪತ್ರ ಬರೆದಿದ್ದಾರೆ.

    ನಮಗೆ 10 ಗಂಟೆಗೆ ಕಚೇರಿಗೆ ಬರಲು ಸಾಧ್ಯವೇ ಇಲ್ಲ ದಯವಿಟ್ಟು ರಿಯಾಯಿತಿ ಕೊಡಿ ಪ್ಲೀಸ್ ಎಂದು ಸರ್ಕಾರಿ ನೌಕರರು ಪತ್ರ ಬರೆಯುವ ಮೂಲಕ ಹೇಳಿಕೊಂಡಿದ್ದಾರೆ. ರಾಜ್ಯ ಸರ್ಕಾರಿ ಸಚಿವಾಲಯದ ನೌಕರರ ಸಂಘದ ಅಧ್ಯಕ್ಷ ಗುರುಸ್ವಾಮಿ ಅವರು ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.

    ದಿನಕ್ಕೆ 7.30 ಗಂಟೆ ಕೆಲಸ ಮಾಡಿ ನೌಕರರು ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಬಯೋಮೆಟ್ರಿಕ್ ಹಾಜರಾತಿಯಿಂದ ನೆಮ್ಮದಿ ಹಾಳಾಗಿದೆ. ಬೆಂಗಳೂರಿನ ಟ್ರಾಫಿಕ್​ನಲ್ಲಿ ಕಚೇರಿಗೆ ಬರುವುದು ದೊಡ್ಡ ಸವಾಲಾಗಿದೆ. ಈ ಎಲ್ಲ ಕಾರಣಗಳಿಂದ ನಮಗೆ ಕಚೇರಿಗೆ 10.10ರೊಳಗೆ ಬರಲು ಸಾಧ್ಯವಾಗುತ್ತಿಲ್ಲ. ದಯವಿಟ್ಟು ಸಮಯವನ್ನು ಚೇಂಜ್ ಮಾಡಿ ಎಂದು ರಾಜ್ಯ ಸರ್ಕಾರಿ ಸಚಿವಾಲಯದ ನೌಕರರ ಸಂಘದಿಂದ ಪತ್ರ ಬರೆಯಲಾಗಿದೆ.

    ಪತ್ರದಲ್ಲಿ ಏನಿದೆ?
    ಸರ್ಕಾರದ ಕಚೇರಿ ವೇಳೆ ಬೆಳಗ್ಗೆ 10.00ರಿಂದ ಸಂಜೆ 5.30 ಗಂಟೆಯಾಗಿದ್ದು, ನೌಕರರು ದಿನದಲ್ಲಿ 7.30 ಗಂಟೆ ಕರ್ತವ್ಯ ನಿರ್ವಹಿಸಬೇಕಾಗಿರುತ್ತದೆ. ಸಚಿವಾಲಯವು ಬೆಂಗಳೂರಿನ ಕೇಂದ್ರ ಸ್ಥಾನದಲ್ಲಿದ್ದು, ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ರಸ್ತೆ ಸಂಚಾರದ ದಟ್ಟಣೆಯು ಹೆಚ್ಚಾಗುತ್ತಿದೆ. ಹೀಗಾಗಿ ಕಚೇರಿ ಆರಂಭದ ವೇಳೆಗೆ ವಿಧಾನಸೌಧಕ್ಕೆ ಬರಲು ಸಾಧ್ಯವಾಗುತ್ತಿಲ್ಲ. ಇದರಿಂದ ನೌಕರರು ಹೆಚ್ಚಿನ ಒತ್ತಡಕ್ಕೆ ಒಳಗಾಗಿ ಅವರುಗಳ ಆರೋಗ್ಯ ಮೇಲೆ ತುಂಬಾ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿರುವುದನ್ನು ತಮ್ಮ ಗಮನಕ್ಕೆ ತರಬಯಸುತ್ತೇನೆ.

    ನೌಕರರು ಹಾಜರಾತಿಯನ್ನ ದಾಖಲಿಸುವ ಬಯೋಮೆಟ್ರಿಕ್ ಯಂತ್ರಗಳು ಸೂಕ್ತ ನಿರ್ವಹಣೆ ಇಲ್ಲದೆ ಅಸಮರ್ಪಕವಾಗಿ ಕರ್ತವ್ಯ ನಿರ್ವಹಿಸುತ್ತಿವೆ. ಕೆಲವೊಮ್ಮೆ ಬಯೋಮೆಟ್ರಿಕ್ ಯಂತ್ರಗಳು ಸ್ಥಗಿತಗೊಂಡಿರುವುದು ಅಥವಾ ಹಾಜರಾತಿ ದಾಖಲಿಸಿದರೂ ಮಿಸ್‍ಫ್ಲ್ಯಾಷ್ ತೋರಿಸುವುದು ಕಂಡುಬರುತ್ತಿದೆ. ಬೆಂಗಳೂರಿನ ನಗರದ ವಿವಿಧ ಭಾಗಗಳಲ್ಲಿ ಕಾಮಗಾರಿ, ಮೇಲ್ ಸೇತುವೆಗಳು ಸೇರಿದಂತೆ ಹಲವಾರು ಕಾಮಗಾರಿಗಳಿಂದ ರಸ್ತೆ ಸಂಚಾರಿ ದಟ್ಟಣೆಯು ಗಣನೀಯವಾಗಿ ಹೆಚ್ಚಳವಾಗಿದೆ. ಇದರಿಂದ ಸರಿಯಾದ ಸಮಯಕ್ಕೆ ಕಚೇರಿಗೆ ತಲುಪುವುದು ಸವಾಲಿನ ಕೆಲಸವಾಗಿದೆ.

    ಈ ಮೇಲಿನ ಅಂಶಗಳನ್ನು ಪರಿಗಣಿಸಿ ಬೆಳಿಗ್ಗೆ 10.00 ರಿಂದ 10.30ರೊಳಗೆ ನೌಕರರು ಕಚೇರಿಗೆ ಹಾಜರಾಗಲು ಅನುವು ಮಾಡಿಕೊಡಬೇಕು. ಆಗ ನೌಕರರು ಸರಿಯಾದ ಸಮಯಕ್ಕೆ ಕಚೇರಿಗೆ ಹಾಜರಾಗುತ್ತಾರೆ. ಬೆಂಗಳೂರಿನಂತಹ ವೇಗವಾಗಿ ಬೆಳೆಯುತ್ತಿರುವ ನಗರದಲ್ಲಿ ಒತ್ತಡದಲ್ಲಿ ಜೀವನ ನಡೆಸುತ್ತಿರುವ ನೌಕರರು ಸರ್ಕಾರಿ ಸೇವೆಯನ್ನು ಒತ್ತಡರಹಿತವಾಗಿ ಸಲ್ಲಿಸುವಂತೆ ಅನುವು ಮಾಡಿಕೊಡಬೇಕೆಂದು ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ.