Tag: government job

  • 24 ವರ್ಷ ಕಾದ ಬಳಿಕ 57ನೇ ವಯಸ್ಸಿನಲ್ಲಿ ಸಿಕ್ತು ಸರ್ಕಾರಿ ನೌಕರಿ

    24 ವರ್ಷ ಕಾದ ಬಳಿಕ 57ನೇ ವಯಸ್ಸಿನಲ್ಲಿ ಸಿಕ್ತು ಸರ್ಕಾರಿ ನೌಕರಿ

    ಅಮರಾವತಿ: ಸರ್ಕಾರಿ ಶಿಕ್ಷಕನಾಗಬೇಕೆಂದು ಕನಸು ಕಂಡಿದ್ದ ಆಂಧ್ರಪ್ರದೇಶದ ವ್ಯಕ್ತಿ ತನ್ನ 33ನೇ ವಯಸ್ಸಿನಲ್ಲಿ ಪರೀಕ್ಷೆ ಬರೆದು, 24 ವರ್ಷ ಕಾದ ಬಳಿಕ ತನ್ನ 57ನೇ ವಯಸ್ಸಿನಲ್ಲಿ ಉದ್ಯೋಗ ಪಡೆದಿದ್ದಾರೆ.

    ಪಥಪಟ್ಟಣದ ಪೆದ್ದಾ ಸಿದ್ದಿಯ ಅಲಕಾ ಕೇದಾರೇಶ್ವರ್ ರಾವ್ ತಮ್ಮ ಬ್ಯಾಚುಲರ್ ಆಫ್ ಎಜುಕೇಶನ್ ಅನ್ನು ಪೂರೈಸಿ, 1998ರಲ್ಲಿ ಸರ್ಕಾರಿ ಶಿಕ್ಷಕನಾಗುವ ಸಲುವಾಗಿ ಜಿಲ್ಲಾ ಆಯ್ಕೆ ಸಮಿತಿ(ಡಿಎಸ್‌ಸಿ) ಪರೀಕ್ಷೆ ಬರೆದಿದ್ದರು. ಅವರು ಒಳ್ಳೆಯ ಅಂಕ ಗಳಿಸಿದ್ದರೂ ಕಾನೂನು ಸಮಸ್ಯೆಯಿಂದ ಅವರ ಆಯ್ಕೆ ವಿಳಂಬವಾಯಿತು. ಇತ್ತೀಚೆಗೆ ಜಿಲ್ಲಾ ಆಯ್ಕೆ ಸಮಿತಿ 1998ರ ಕಡತವನ್ನು ತೆರವುಗೊಳಿಸಿದ್ದರಿಂದ ಕೊನೆಗೂ ತಮ್ಮ 57ನೇ ವಯಸ್ಸಿನಲ್ಲಿ ಕೇದಾರೇಶ್ವರ್‌ಗೆ ಶಿಕ್ಷಕ ಉದ್ಯೋಗ ದೊರೆತಿದೆ. ಇದನ್ನೂ ಓದಿ: ಅಗ್ನಿಪಥ್‌ ಯೋಜನೆ ಹಿಂಪಡೆಯುವ ಪ್ರಶ್ನೆಯೇ ಇಲ್ಲ: ದೋವಲ್‌

    1998ರಲ್ಲೇ ಪರೀಕ್ಷೆ ಬರೆದು ನೌಕರಿಗಾಗಿ ಕಾದು ಕುಳಿತಿದ್ದ ಕೇದಾರೇಶ್ವರ್ ಕೈಯಲ್ಲಿ ಕಾಸಿಲ್ಲದೇ ತನ್ನ ತಾಯಿಯೊಂದಿಗೆ ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಬಡತನದೊಂದಿಗೆ ತಾಯಿಯ ಮರಣದ ಬಳಿಕ ಖಿನ್ನತೆಗೆ ಜಾರಿದ ಕೇದಾರೇಶ್ವರ್ ಭಿಕ್ಷೆ ಬೇಡಿ ಹೊಟ್ಟೆ ತುಂಬಿಸಿಕೊಳ್ಳಬೇಕಾದ ಪರಿಸ್ಥಿತಿ ಎದುರಾಯಿತು. ಆತನನ್ನು ಸ್ಥಳೀಯರು ಮಾನಸಿಕ ಅಸ್ವಸ್ಥ ಎಂದು ದೂರವಿಡಲು ಪ್ರಾರಂಭಿಸಿದರು. ಇದನ್ನೂ ಓದಿ: ಗುಜರಾತ್‍ನ ಏಕತಾ ಪ್ರತಿಮೆ ಬಳಿ ಭೂಕಂಪನ

    ಇತ್ತೀಚೆಗೆ ಡಿಎಸ್‌ಸಿ 1998ರ ಕಡತವನ್ನು ತೆರವುಗೊಳಿಸಿ ಕೇದಾರೇಶ್ವರ್‌ಗೆ ನೇಮಕಾತಿಯ ಆದೇಶ ನೀಡಿದಾಗ ಅವರ ಜೀವನವೇ ಬದಲಾಯಿತು. ಈ ಸಂದರ್ಭದಲ್ಲಿ ಉತ್ಸುಕನಾಗಿ ಮಾತನಾಡಿರುವ ಅವರ ವೀಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿವೆ. ಆತನ ಮಾತು ಎಲ್ಲೆಡೆ ಹರಡುತ್ತಿದ್ದಂತೆ, ದೂರವಿಟ್ಟಿದ್ದ ಜನರು ಅವರಿಗೆ ಹೊಸ ಬಟ್ಟೆ, ಊಟ ನೀಡಿದರು, ಶಾಲು ಹೊದಿಸಿ ಸನ್ಮಾನ ಮಾಡಿದರು. ಈ ಮೂಲಕ ಕೇದಾರೇಶ್ವರ ಅವರ ಜೀವನವೇ ಬದಲಾಗಿದೆ.

    Live Tv

  • ಪತ್ನಿಗೆ ಸರ್ಕಾರಿ ಕೆಲಸ ಸಿಕ್ಕಿದ್ದಕ್ಕೆ ಚಾಕು ಇರಿದ ಪತಿ

    ಪತ್ನಿಗೆ ಸರ್ಕಾರಿ ಕೆಲಸ ಸಿಕ್ಕಿದ್ದಕ್ಕೆ ಚಾಕು ಇರಿದ ಪತಿ

    ಕೋಲ್ಕತ್ತಾ: ವ್ಯಕ್ತಿಯೊಬ್ಬ ತನ್ನ ಪತ್ನಿಗೆ ಸರ್ಕಾರಿ ನೌಕರಿ ಸಿಕ್ಕಿದೆ ಎಂದು ಚಾಕು ಇರಿದ ಘಟನೆ ಪಶ್ಚಿಮ ಬಂಗಾಳದ ಪೂರ್ವ ಬುದ್ರ್ವಾನ್ ಜಿಲ್ಲೆಯಲ್ಲಿ ನಡೆದಿದೆ.

    ಶೇರ್ ಶೇಖ್(26) ಆರೋಪಿ ಹಾಗೂ ರೇಣು ಖಾತುನ್ ದುರ್ಗಾಪುರ ಗಂಭೀರ ಗಾಯಗೊಂಡ ಮಹಿಳೆ. ಶೇರ್ ಶೇಖ್ ಜಿಲ್ಲೆಯ ಕೇತುಗ್ರಾಮ್ ಪ್ರದೇಶದ ಕೋಜಲ್ಸಾ ಗ್ರಾಮದಲ್ಲಿ ದಿನಸಿ ಅಂಗಡಿ ನಡೆಸುತ್ತಿದ್ದ. 2017ರ ಅಕ್ಟೋಬರ್‌ನಲ್ಲಿ ಶೇರ್ ಶೇಖ್ ಹಾಗೂ ರೇಣು ಖಾತುನ್ ವಿವಾಹವಾಗಿದ್ದರು.

    ಇದಾದ ಬಳಿಕ ಮಾರನೇ ವರ್ಷವೇ ರೇಣು ಖಾತುನ್ ನರ್ಸಿಂಗ್ ಕೋರ್ಸ್ ಸೇರಿದ್ದಳು. ಈ ಕೋರ್ಸ್ ಮುಗಿದ ನಂತರ ಪಶ್ಚಿಮ ಬುದ್ರ್ವಾನ್‍ನ ದುರ್ಗಾಪುರದ ಖಾಸಗಿ ನರ್ಸಿಂಗ್ ಹೋಮ್‍ನಲ್ಲಿ ಕೆಲಸ ಮಾಡುತ್ತಿದ್ದರು.

    ಇದಾದ ಬಳಿಕ ರೇಣು ತನ್ನ ಪತಿ ಶೇರ್ ಶೇಕ್ ಇಚ್ಛೆಗೆ ವಿರುದ್ಧವಾಗಿ ಸರ್ಕಾರಿ ಕೆಲಸಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಮೇ ತಿಂಗಳಲ್ಲಿ ರೇಣು ಖಾತುನ್‌ಗೆ ಸರ್ಕಾರಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಸಿಕ್ಕಿತ್ತು. ಆದರೆ ಶೇರ್ ಶೇಖ್ ತನ್ನ ಪತ್ನಿಯನ್ನು ಬೇರೆ ಯಾವುದಾದರೂ ನಗರಕ್ಕೆ ವರ್ಗಾಯಿಸಬಹುದೆಂದು ಹೆದರಿದ್ದಾನೆ. ಇದಾದ ಬಳಿಕ ಪ್ರತಿನಿತ್ಯ ಇಬ್ಬರ ಮಧ್ಯೆ ಜಗಳ ನಡೆಯುತ್ತಿತ್ತು. ಇದನ್ನೂ ಓದಿ: ಪ್ರತಾಪ್ ಸಿಂಹ ಅಯೋಗ್ಯ, ವಕೀಲ ವೃತ್ತಿ ಬಗ್ಗೆ ಅವನಿಗೇನು ಗೊತ್ತು: ಹೆಚ್. ವಿಶ್ವನಾಥ್ ಕಿಡಿ

    POLICE JEEP

    ಈ ಹಿನ್ನೆಲೆಯಲ್ಲಿ ಕೋಪ ತಾರಕಕ್ಕೆ ಏರಿದ್ದು, ಶೇರ್ ಶೇಖ್ ತನ್ನ ಪತ್ನಿಯ ಕೈಯನ್ನೇ ಕತ್ತರಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಗಂಭೀರ ಗಾಯಗೊಂಡ ರೇಣು ಖಾತುನ್ ಅವರನ್ನು ಸ್ಥಳೀಯರು ಹೆಚ್ಚಿನ ಚಿಕಿತ್ಸೆಗಾಗಿ ನಗರ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆಗೆ ಸಂಬಂಧಿಸಿ ರೇಣು ಖಾತುನ್ ಸಹೋದರ ಕೇತುಗ್ರಾಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದು, ಆರೋಪಿ ಶೇರ್ ಶೇಖ್ ತಲೆಮರಿಸಿಕೊಂಡಿದ್ದಾನೆ. ಇದನ್ನೂ ಓದಿ: ರೋಹಿತ್ ಚಕ್ರತೀರ್ಥಗೆ ಸಂಘನೆಗಳಿಂದ ಧಮ್ಕಿ – ಪೊಲೀಸರಿಂದ ಬಿಗಿ ಭದ್ರತೆ

  • ಅಸಿಸ್ಟೆಂಟ್ ಪ್ರೊಫೆಸರ್ ಎಕ್ಸಾಮ್‍ನಲ್ಲೂ ಗೋಲ್ಮಾಲ್- ಕಾಸು ಕೊಟ್ರೆ ಸರ್ಕಾರಿ ಹುದ್ದೆ..?

    ಅಸಿಸ್ಟೆಂಟ್ ಪ್ರೊಫೆಸರ್ ಎಕ್ಸಾಮ್‍ನಲ್ಲೂ ಗೋಲ್ಮಾಲ್- ಕಾಸು ಕೊಟ್ರೆ ಸರ್ಕಾರಿ ಹುದ್ದೆ..?

    ಬೆಂಗಳೂರು: ರಾಜ್ಯದಲ್ಲಿ ಸರ್ಕಾರಿ ಹುದ್ದೆ ಮಾರಾಟಕ್ಕಿದ್ಯಾ ಎಂಬ ಪ್ರಶ್ನೆಯೊಂದು ಇದೀಗ ಸಾರ್ವಜನಿಕರಲ್ಲಿ ಮೂಡಿದೆ. ಸರ್ಕಾರಿ ಹುದ್ದೆಗಳ ಒಂದೊಂದೇ ಹಗರಣಗಳು ಬಯಲಾಗುತ್ತಿವೆ. 30 ರಿಂದ 40 ಲಕ್ಷ ಕೊಟ್ಟರೆ ಸಾಕು ನಿಮಗೆ ಸರ್ಕಾರಿ ಹುದ್ದೆ ಸಿಗುತ್ತೆ.

     ಕಳೆದ ಮಾರ್ಚ್‍ನಲ್ಲಿ ನಡೆದಿದ್ದ 1,242 ಹುದ್ದೆಯಲ್ಲೂ ಹಗರಣದ ವಾಸನೆ ಬರುತ್ತಿದೆ. ಅಸಿಸ್ಟೆಂಟ್ ಪ್ರೊಫೆಸರ್ ಎಕ್ಸಾಮ್ ನಲ್ಲಿ ಗೋಲ್ಮಾಲ್ ನಡೆದಿರುವ ವಿಚಾರವೊಂದು ಬೆಳಕಿಗೆ ಬಂದಿದೆ. 20ಕ್ಕೂ ಹೆಚ್ಚು ಪ್ರಶ್ನೆಗಳು ಮೊಬೈಲ್‍ನಲ್ಲಿ ಹರಿದಾಡಿದ್ದೇಗೆ…?, ಪರೀಕ್ಷೆಗೂ ಮೊದಲೇ ಭೂಗೋಳ ಪ್ರಶ್ನೆಪತ್ರಿಕೆ ಲೀಕ್ ಆಗಿದ್ದೇಗೆ ಎಂಬುದಕ್ಕೆ ಇದೀಗ ಪರೀಕ್ಷಾರ್ಥಿಗಳು ಕೊಟ್ಟ ದೂರಿನಿಂದ ಬಿಗ್ ಟ್ವಿಸ್ಟ್ ಸಿಕ್ಕಿದೆ.

    ಮೈಸೂರಿನಲ್ಲಿ ಬಂಧಿತ ಸೌಮ್ಯಳನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಸೌಮ್ಯ ಮೊಬೈಲ್‍ನಲ್ಲಿ 18 ಪ್ರಶ್ನೆಗಳು ಇದ್ದವು. ಜಿಲ್ಲಾ ಖಜಾನೆಯಿಂದಲೇ ಪೇಪರ್ ಲೀಕ್ ಶಂಕೆ ವ್ಯಕ್ತವಾಗಿದೆ. ಬಂಡಲ್ ಓಪನ್ ಮಾಡಿ ಪ್ರಶ್ನೆಪತ್ರಿಕೆ ಪಡೆದಿರೋ ಅನುಮಾನ ಎದ್ದಿದೆ. ಬಂಧಿತ ಸೌಮ್ಯಳಿಂದ ಇನ್ನಿತರರಿಗೂ ರವಾನೆಯಾಗಿರುವ ಅನುಮಾನ ಇದೆ. ಇದನ್ನೂ ಓದಿ: ಅಕ್ರಮದಲ್ಲಿ ಒಳಗಾಗಿದ್ದವರು ಎಷ್ಟೇ ದೊಡ್ಡವರಾದ್ರೂ ರಕ್ಷಿಸುವ ಪ್ರಶ್ನೆಯಿಲ್ಲ: ಆರಗ ಜ್ಞಾನೇಂದ್ರ

    ಸಹಾಯಕ ಪ್ರಾಧ್ಯಾಪಕ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಸಂಬಂಧ ಇದೀಗ ಪೊಲೀಸರು ಸೌಮ್ಯಳನ್ನ ಪೊಲೀಸ್ ಕಸ್ಟಡಿಗೆ ಕೇಳಲಿದ್ದಾರೆ. ಎಸಿಪಿ ನೇತೃತ್ವದ ಟೀಂ ನಿಂದ ವಿಚಾರಣೆ ಸಾಧ್ಯತೆ ಇದೆ. ಪಿಹೆಚ್ ಡಿ ಸ್ಟೂಡೆಂಟ್ ಆಗಿದ್ದ ಸೌಮ್ಯಳಿಗೆ ಪ್ರಶ್ನೆ ಪತ್ರಿಕೆ ಸಿಕ್ಕಿದ್ದಾದ್ರೂ ಹೇಗೆ..?, ಸೌಮ್ಯಳಿಂದ ಪ್ರಶ್ನೆ ಪತ್ರಿಕೆ ಲೀಕ್ ಆಗೋದಿಕ್ಕೆ ಕಾರಣ ಯಾರು..?, ಪ್ರಶ್ನೆಪತ್ರಿಕೆ ಸೋರಿಕೆ ಹಿಂದೆ ಅಡಗಿದೆಯಾ ದೊಡ್ಡವರ ಕೈವಾಡ..?, ಪ್ರಶ್ನೆ ಪತ್ರಿಕೆ ಸೋರಿಕೆ ಹಿಂದೆ ಇದ್ದಾರಾ..? ಪ್ರೊಫೆಸರ್‍ಗಳು..?, ಸೌಮ್ಯ ಯಾರ ಅಂಡರ್‍ನಲ್ಲಿ ಪಿಹೆಚ್‍ಡಿ ಮಾಡುತ್ತಿದ್ದಳು..?. ಅವರಿಂದಲೇ ಲೀಕ್ ಆಗಿದ್ಯಾ ಪ್ರಶ್ನೆ ಪತ್ರಿಕೆ..? ಅಂತ ಪೊಲೀಸರು ತನಿಖೆ ಮಾಡಲಿದ್ದಾರೆ.

  • ಸರ್ಕಾರಿ ಇಲಾಖೆಯಲ್ಲಿ ಖಾಲಿ ಹುದ್ದೆಗಳಿದ್ರೆ ಅರ್ಹ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಿ: ವರುಣ್ ಗಾಂಧಿ

    ಸರ್ಕಾರಿ ಇಲಾಖೆಯಲ್ಲಿ ಖಾಲಿ ಹುದ್ದೆಗಳಿದ್ರೆ ಅರ್ಹ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಿ: ವರುಣ್ ಗಾಂಧಿ

    ಲಕ್ನೋ: ಸರ್ಕಾರಿ ಇಲಾಖೆಯಲ್ಲಿ ಖಾಲಿ ಹುದ್ದೆಗಳಿದ್ದರೆ ಅರ್ಹ ಅಭ್ಯರ್ಥಿಗಳನ್ನು ನೇಮಿಸಿಕೊಂಡು ನಿರೋದ್ಯೋಗಿಗಳ ಕಷ್ಟಗಳಿಗೆ ಸ್ಪಂದಿಸಿ ಎಂದು ಉತ್ತರ ಪ್ರದೇಶದ ಸರ್ಕಾರಕ್ಕೆ ಸಂಸದ ವರುಣ್ ಗಾಂಧಿ ಮನವಿ ಮಾಡಿಕೊಂಡಿದ್ದಾರೆ.

    ಉದ್ಯೋಗಾಕಾಂಕ್ಷಿಗಳು ನಡೆಸುತ್ತಿರುವ ಮೆರವಣಿಗೆಯಲ್ಲಿ ಬಿಜೆಪಿಯ ಈ ನಿಲುವಿಗೆ ವಿರೋಧವನ್ನು ವ್ಯಕ್ತಪಡಿಸುತ್ತಿರುವ ಪ್ರತಿಭಟನಾಕರರ ವೀಡಿಯೋವನ್ನು ಬಿಜೆಪಿ ಸಂಸದರು ಹಂಚಿಕೊಂಡಿದ್ದಾರೆ. ಈ ವೀಡಿಯೋದಲ್ಲಿ ಪ್ರತಿಭಟನಾಕಾರರ ವಿರುದ್ಧ ಪೊಲೀಸರು ಲಾಠಿ ಚಾರ್ಜ್ ನಡೆಸುತ್ತಿದ್ದಾರೆ. ಪ್ರತಿಭಟನಾಕಾರರೆಲ್ಲರೂ ಭಾರತೀಯರು. ಆದರೆ ಅವರ ಕುಂದು ಕೊರತೆಗಳನ್ನು ಕೇಳಲು ಯಾರೂ ಸಿದ್ಧರಿಲ್ಲ. ನಿಮ್ಮ ಮಕ್ಕಳು ಪ್ರತಿಭಟನೆಯಲ್ಲಿ ಭಾಗಿಯಾಗುತ್ತಿದ್ದರೇ ಹೀಗೆ ವರ್ತಿಸಲು ಸಾಧ್ಯವಾಗುತ್ತಿತ್ತಾ ಎಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

    ರಾಜ್ಯದಲ್ಲಿ 2019ರಲ್ಲಿ ನಡೆದ 69,000 ಸಹಾಯಕ ಶಿಕ್ಷಕರ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ಪ್ರತಿಭಟನಾಕಾರರು ನಿರಂತರ ಆಂದೋಲನವನ್ನು ನಡೆಸುತ್ತಿದ್ದಾರೆ. ಅವರು ಮಧ್ಯ ಲಕ್ನೋದ ಛೇದಕದಿಂದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನಿವಾಸದ ಕಡೆಗೆ ಮೆರವಣಿಗೆ ನಡೆಸಲು ಪ್ರಯತ್ನಿಸುತ್ತಿದ್ದಾಗ ಪೊಲೀಸರು ಲಾಠಿಚಾರ್ಜ್ ನಡೆಸಿದರು. ಪೊಲೀಸರ ಕ್ರಮಕ್ಕೆ ವಿರೋಧ ಪಕ್ಷಗಳಾದ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್‌ ನಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಅಖಿಲೇಶ್ ಯಾದವ್ ನೇತೃತ್ವದ ಪಕ್ಷವು ಲಾಠಿಚಾರ್ಜ್ ಅನ್ನು ಖಂಡಿಸಿದೆ. ಹಾಗೂ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಟ್ವೀಟ್ ಮಾಡಿ ಬಿಜೆಪಿ ಮತ ಕೇಳಿದಾಗ ಜನರು ಇದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಮನವಿ ಮಾಡಿದರು. ಇದನ್ನೂ ಓದಿ: ಅಪ್ಪುಗೆ ವಿಶೇಷವಾಗಿ ಗೌರವ ಸಲ್ಲಿಸಿದ ಕ್ರಿಕೆಟಿಗ ಡೇವಿಡ್ ವಾರ್ನರ್

    ವರುಣ್ ಗಾಂಧಿ ಅವರ ಈ ಟ್ವೀಟ್‌ನಿಂದ ಪಕ್ಷದ ನೀತಿ ನಿಯಮಗಳನ್ನು ಅನುಸರಿಸುತ್ತಿಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಕಳೆದ ತಿಂಗಳಷ್ಟೇ ವಿವಾದಾತ್ಮಕ ಮೂರು ಕೃಷಿ ಕಾಯ್ದೆಯನ್ನು ರದ್ದುಗೊಳಿಸಿದ ಹಿನ್ನೆಲೆಯಲ್ಲಿ ಪ್ರಧಾನಿ ಅವರಿಗೆ ಪತ್ರವನ್ನು ಬರೆದಿದ್ದರು. ಇದರಲ್ಲಿ ರೈತರ ವಿವಿಧ ಬೇಡಿಕೆಯನ್ನು ಈಡೇರಿಸುವುದರ ಜೊತೆಗೆ ಪ್ರತಿಭಟನೆಯಲ್ಲಿ ಸಾವನ್ನಪ್ಪಿದ ರೈತರಿಗೆ ಪರಿಹಾರ ಒದಗಿಸಿ ರೈತರ ವಿರುದ್ಧ ದಾಖಲಾಗಿರುವ ದೂರುಗಳನ್ನು ಹಿಂಪಡೆಯಬೇಕು ಎಂದಿದ್ದರು. ಅಷ್ಟೇ ಅಲ್ಲದೇ ಲಕ್ಕಿಂಪುರ ಖೇರಿ ಘಟನೆಯಲ್ಲಿ ಕೇಂದ್ರ ಸಚಿವ ಅಜಯ್ ಕುಮಾರ್ ಮಿಶ್ರಾ ಅವರ ಪುತ್ರ ಚಲಾಯಿಸುತ್ತಿದ್ದ ವಾಹನದಿಂದ ಪ್ರತಿಭಟನಾ ನಿರತ ರೈತರ ಮೇಲೆ ಕಾರು ಹಾರಿಹಾಯ್ದಿದ್ದರು. ಇದು ಪ್ರಜಾಪ್ರಭುತ್ವಕ್ಕೆ ಕಳಂಕವಾಗಿದೆ. ಸಚಿವ ಅಜಯ್ ಕುಮಾರ್ ಮಿಶ್ರಾ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದರು. ಇದನ್ನೂ ಓದಿ: ಸರ್ಕಾರಿ ಉದ್ಯೋಗ ಇಲ್ಲದೆ ಯುವಕರಲ್ಲಿ ಹತಾಶೆ: ವರುಣ್ ಗಾಂಧಿ

     

  • ನಿಶ್ಚಿತಾರ್ಥವಾದ ಒಂದೇ ತಿಂಗಳಲ್ಲಿ ಆತ್ಮಹತ್ಯೆಗೆ ಶರಣಾದ ಯುವತಿ

    ನಿಶ್ಚಿತಾರ್ಥವಾದ ಒಂದೇ ತಿಂಗಳಲ್ಲಿ ಆತ್ಮಹತ್ಯೆಗೆ ಶರಣಾದ ಯುವತಿ

    ಚಿತ್ರದುರ್ಗ: ಎಷ್ಟೋ ಜನ ಹದಿಹರೆಯದ ಯುವಕ, ಯುವತಿಯರು ಉದ್ಯೋಗ ಸಿಗಲಿಲ್ಲ, ಲೈಫ್ ಸೆಟ್ಲ್ ಆಗ್ತಿಲ್ಲ ಎಂದು ಪರದಾಡುತ್ತಾರೆ. ಆದರೆ ಇಲ್ಲೊಬ್ಬಲು ಯುವತಿಗೆ ಸರ್ಕಾರಿ ಉದ್ಯೋಗ ಸಿಕ್ಕಿ, ಇನ್ನೇನೂ ಮದುವೆ ತಯಾರಿಯಲ್ಲಿ ಮನೆಯವರಿದ್ದರು. ಆದರೆ ಎಂಗೇಜ್ಮೆಂಟ್ ಆಗಿ ಒಂದೇ ತಿಂಗಳಲ್ಲಿ ಹುಡುಗಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ರೇಖಲಗೆರೆ ಗ್ರಾಮದಲ್ಲಿ ನಡೆದಿದೆ.

    ಆತ್ಮಹತ್ಯೆ ಮಾಡಿಕೊಂಡ ಯುವತಿಯನ್ನು ಮಾನಸ (22) ಎಂದು ಗುರುತಿಸಲಾಗಿದೆ. ಮಾನಸ ಸರ್ಕಾರಿ ಉದ್ಯೋಗ ಸಿಕ್ಕಿ, ಲೈಫ್ ಎಂಜಾಯ್ ಮಾಡೋ ಟೈಮಲ್ಲಿ ಅನುಮಾನಸ್ಪದವಾಗಿ ಆ್ಯಸಿಡ್ ಕುಡಿದು, ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.

    ಮಾನಸಗೆ ಚಿಕ್ಕ ವಯಸ್ಸಿಗೆ ತನ್ನ ಕಾಲ ಮೇಲೆ ತಾನೇ ನಿಂತು ಇತರರಿಗೆ ಸ್ಪೂರ್ತಿ ಆಗುವಂತಹ ಅವಕಾಶ ಸಿಕ್ಕಿತ್ತು. ಆದರೆ ಈಕೆ ಮೇಲೆ ಅದ್ಯಾರ ದೃಷ್ಟಿ ಬಿತ್ತೋ ಗೊತ್ತಿಲ್ಲ. ಮಾನಸಿಕವಾಗಿ ಈಕೆ ಕುಗ್ಗಿ ಹೋಗಿದ್ದಳು. ತನ್ನನ್ನು ತಾನೇ ದ್ವೇಷಿಸಿಕೊಳ್ಳುವಷ್ಟು ನೊಂದಿದ್ದಳು. ಹೀಗಾಗಿ ಒಂದಲ್ಲ, ಎರಡಲ್ಲ ಸತತ ಮೂರು ಬಾರಿ ಆತ್ಮಹತ್ಯೆಗೆ ಯತ್ನಿಸಿ ಕೊನೆಗೂ ಇಂದು ಕರ್ತವ್ಯಕ್ಕೆ ತೆರಳುವ ಮಾರ್ಗ ಮಧ್ಯೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಈಚಲಗೆರೆ ಗ್ರಾಮದ ಬಳಿ ತನ್ನ ದ್ವಿಚಕ್ರ ವಾಹನವನ್ನು ರಸ್ತೆ ಬದಿಗೆ ನಿಲ್ಲಿಸಿ, ಕತ್ತನ್ನು ಕೊಯ್ದುಕೊಂಡು, ಆ್ಯಸಿಡ್ ಕುಡಿದು ಆತ್ಮಹತ್ಯೆಗೆ ಶರಣಾಗಿದ್ದು, ಈಕೆಯ ಕುಟುಂಬ ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ. ಇದನ್ನೂ ಓದಿ: 2 ಲಕ್ಷ ಮೌಲ್ಯದ ಚಿನ್ನಾಭರಣ, ಹಣವಿರುವ ಬ್ಯಾಗ್ ಹಿಂದಿರುಗಿಸಿದ ಆಟೋ ಚಾಲಕ..!

    ಮಾನಸ, ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ನಗರಂಗೆರೆ ಗ್ರಾಮದ ಪೋಸ್ಟ್  ಆಫೀಸ್‍ನಲ್ಲಿ ಪೋಸ್ಟ್  ಮಾಸ್ಟರ್ ಆಗಿ ಕರ್ತವ್ಯ ನಿರ್ವಹಿಸುತಿದ್ದಳು. ಕಳೆದ ಒಂದು ತಿಂಗಳ ಹಿಂದೆಯಷ್ಟೇ ಸರ್ಕಾರಿ ಉದ್ಯೋಗಿ ಯವಕನೊಂದಿಗೆ ಎಂಗೇಜ್ಮೆಂಟ್ ಆಗಿತ್ತು. ಆದರೆ ಇದೀಗ ಮಾನಸ ದಿಢೀರ್ ಎಂದು ಆತ್ಮಹತ್ಯೆಗೆ ಶರಣಾಗಿರುವುದು ಅನುಮಾನ ಮೂಡಿಸಿದೆ.

    ಮಾನಸ ದಾರಿ ಮಧ್ಯೆ ಆ್ಯಸಿಡ್ ಸೇವಿಸಿದ ಪರಣಾಮ ಆಕೆಯ ದೇಹದ ಒಳಗಿನ ಭಾಗ ಸಂಪೂರ್ಣ ಸುಟ್ಟು ಹೋಗಿವೆ, ಅಲ್ಲದೇ ಕುತ್ತಿಗೆಯನ್ನು ಸಹ ಚಾಕುವಿನಿಂದ ಕೊಯ್ದಕೊಂಡಿದ್ದಾಳೆಂದು ವೈದ್ಯರು ತಿಳಿಸಿದ್ದಾರೆ. ಆದರೆ ದಿಢೀರ್ ಅಂತ ಈ ರೀತಿ ಸಾವಿಗೀಡಾದ ಪರಿಣಾಮ ಈ ಸಾವಿನ ಸುತ್ತ ಸಾರ್ವಜನಿಕವಾಗಿ ಬಾರಿ ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಚಿತ್ರದುರ್ಗ ಎಸ್‍ಪಿ ರಾಧಿಕಾ ನೇತೃತ್ವದಲ್ಲಿ ನಿಗೂಢ ಸಾವಿನ ಬಗ್ಗೆ ತನಿಖೆಯನ್ನು ಚುರುಕುಗೊಳಿಸಲಾಗಿದೆ.

    ಆತ್ಮಹತ್ಯೆಯ ಬಳಿಕ ಮಾನಸನ ಕುಟುಂಬಸ್ಥರು ಹಾಗೂ ಈ ಪ್ರಕರಣದ ಬಗ್ಗೆ ಚಿತ್ರದುರ್ಗ ಎಸ್‍ಪಿ ಜಿ.ರಾಧಿಕಾ ಅವರು ಪ್ರತಿಕ್ರಿಯಿಸಿದ್ದು, ಮಾನಸ ಹಲವು ದಿನಗಳಿಂದ ಮಾನಸಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದಳು. ಹೀಗಾಗಿ ಆತ್ಮಹತ್ಯೆಗೆ ಶರಣಾಗಿರಬಹುದು ಎಂದಿದ್ದಾರೆ.

  • ಸರ್ಕಾರಿ ಕೆಲಸದ ಆಮಿಷ, 2 ಕೋಟಿ ವಂಚನೆ – ಮೋಸದ ದುಡ್ಡಲ್ಲಿ ತಿರುಪತಿಗೆ 5 ಲಕ್ಷ ಕಾಣಿಕೆ

    ಸರ್ಕಾರಿ ಕೆಲಸದ ಆಮಿಷ, 2 ಕೋಟಿ ವಂಚನೆ – ಮೋಸದ ದುಡ್ಡಲ್ಲಿ ತಿರುಪತಿಗೆ 5 ಲಕ್ಷ ಕಾಣಿಕೆ

    – ಧಾರ್ಮಿಕ ಕ್ಷೇತ್ರಗಳಿಗೆ ಹೆಲಿಕಾಪ್ಟರ್ ನಲ್ಲಿ ಪ್ರಯಾಣ
    – ನಾಲ್ಕು ಬ್ಯಾಗ್ ಗಳಷ್ಟು ದಾಖಲೆ ವಶಕ್ಕೆ

    ಚಿಕ್ಕಮಗಳೂರು: ಸರ್ಕಾರಿ ಕೆಲಸ ಕೊಡಿಸುವುದಾಗಿ ಹೇಳಿ ಸುಮಾರು 50ಕ್ಕೂ ಹೆಚ್ಚು ಉದ್ಯೋಗ ಆಕಾಂಕ್ಷಿಗಳಿಗೆ ಮೋಸ ಮಾಡಿ 2 ಕೋಟಿಗೂ ಅಧಿಕ ಹಣ ವಂಚಿಸಿರುವ ಘಟನೆ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

    ಬೆಂಗಳೂರಿನ ನಾಗರಬಾವಿ ಸಮೀಪದ ಬೈರವೇಶ್ವರ ನಿವಾಸಿ ಪ್ರಭಾಕರ್ ಚಿಕ್ಕಮಗಳೂರು ಪ್ರವಾಸಕ್ಕೆ ಬರುತ್ತಿದ್ದನು. ನಗರದ ಪ್ರತಿಷ್ಠಿತ ಹೋಟೆಲ್ ನಲ್ಲಿ ಉಳಿದುಕೊಳ್ಳುತ್ತಿದ್ದ ಪ್ರಭಾಕರ್ ಅಲ್ಲಿಯ ಸರ್ವರ್ ಗೆ ಕೆಲಸದ ಆಮಿಷ ಒಡ್ಡಿದ್ದನು. ಸರ್ವರ್ ಉಮೇಶ್ ನಿಂದ 7 ಲಕ್ಷ ಪಡೆದು ಎಸ್.ಎಸ್.ಎಲ್.ಸಿ ಬೋರ್ಡ್ ನಲ್ಲಿಯ ಟೈಪಿಸ್ಟ್ ಕೆಲಸದ ನಕಲಿ ನೇಮಕಾತಿ ಪತ್ರ ಸಹ ನೀಡಿದ್ದನು. ಇದೇ ರೀತಿ ನಕಲಿ ನೇಮಕಾತಿ ಪತ್ರ ನೀಡುತ್ತ 50ಕ್ಕೂ ಅಧಿಕ ಉದ್ಯೋಗ ಆಕಾಂಕ್ಷಿಗಳಿಂದ ಹಣ ಪಡೆದುಕೊಂಡು ವಂಚಿಸಿದ್ದಾನೆ.

    ನಕಲಿ ಇ-ಮೇಲ್ ಐಡಿ: ಚಿಕ್ಕಮಗಳೂರು, ಬೆಂಗಳೂರು, ಮಂಡ್ಯ, ಹಾಸನ, ಮೈಸೂರು, ಚಾಮರಾಜನಗರ ಸೇರಿದಂತೆ ವಿವಿಧ ಜಿಲ್ಲೆಯ ಯುವಕ-ಯುವತಿಯರಿಗೆ ಕೆಲಸ ಆಸೆ ತೋರಿಸಿ ಯಾಮಾರಿಸಿದ್ದಾನೆ. ಕೆಲವರಿಗೆ ನಕಲಿ ಇಮೇಲ್ ಐಡಿ ಮೂಲಕ ಆಫರ್ ಲೇಟರ್ ನೀಡಿದ್ದಾನೆ. ನೀವು ಪ್ರೊಬೆಷನರಿ ಪಿರಿಯಡ್ ನಲ್ಲಿ ಇದ್ದೀರಾ ಎಂದು ಎರಡು ತಿಂಗಳು ಸಂಬಳ ಕೂಡ ಹಾಕಿದ್ದಾನೆ. ಕೋವಿಡ್ ಮುಗಿದ ಕೂಡಲೇ ನಿಮಗೆ ಕೆಲಸಕ್ಕೆ ಆಹ್ವಾನ ಬರುತ್ತೆಂದು ಅಂಗೈಯಲ್ಲಿ ಆಕಾಶ ತೋರಿಸಿದ್ದನು.

    ಮೋಸದ ಅರಿವಾಗಿ ಉಮೇಶ್ ಚಿಕ್ಕಮಗಳೂರು ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದನು. ಪ್ರಕರಣದ ಬೆನ್ನು ಬಿದ್ದು ಆರೋಪಿಯನ್ನ ಬಂಧಿಸಿದ ಮೇಲೆ ಕಾಫಿನಾಡ ಖಾಕಿಗಳೇ ಬೆಚ್ಚಿ ಬಿದ್ದಿದ್ದರು. ಆತ ಇಂಡಿಯನ್ ಪೋಸ್ಟ್, ಇಸ್ರೋ, ಮೆಸ್ಕಾಂ, ಎಸ್.ಎಸ್.ಎಲ್.ಸಿ, ಪಿಯುಸಿ ಸೇರಿದಂತೆ ವಿವಿಧ ಇಲಾಖೆಯಲ್ಲಿ ಕೆಲಸ ಕೊಡಿಸುವ ಭರವಸೆ ನೀಡಿ ಎಲ್ಲರಿಂದ 10-15 ಲಕ್ಷ ಹಣ ಪಡೆದ ವಿಚಾರ ಬೆಳಕಿಗೆ ಬಂದಿದೆ. ನಾನು ಶಿಕ್ಷಣ ಇಲಾಖೆಯ ಮುಖ್ಯ ಕಾರ್ಯದರ್ಶಿ ಎಂದು ಹೇಳಿಕೊಂಡು ಮೋಸ ಮಾಡಿದ್ದಾನೆ.

    ತಿರುಪತಿಗೆ ಕಾಣಿಕೆ: ಮೋಸದ ಹಣದಲ್ಲಿಯೇ ತಿರುಪತಿ ತಿಮ್ಮಪ್ಪನಿಗೆ ಐದು ಲಕ್ಷ ಕಾಣಿಕೆ ಹಾಕಿ ಭಕ್ತಿ ಮೆರೆದಿದ್ದ. ವೈಷ್ಣೋದೇವಿ ದರ್ಶನಕ್ಕೂ ಹೋಗಿ ಬಂದಿದ್ದ. ಈತ ಧಾರ್ಮಿಕ ಕ್ಷೇತ್ರಗಳಿಗೆ ಹೆಲಿಕಾಪ್ಟರ್ ನಲ್ಲಿ ಓಡಾಡುತ್ತಿದ್ದ ಎನ್ನಲಾಗಿದೆ, ಉದ್ಯೋಗಾಕಾಂಕ್ಷಿಗಳಿಂದ ಕಿತ್ತ ಹಣದಲ್ಲಿ ಎರಡೂವರೆ ಕೋಟಿಗೆ ಮನೆ ಖರೀದಿಸಲು ಮುಂದಾಗಿದ್ದ. ಇದೇ ಕೆಲಸದ ಹಣದಲ್ಲಿ 15 ಲಕ್ಷ ಕೊಟ್ಟು ಇನ್ನೋವಾ ಕಾರ್ ಕೂಡ ಖರೀದಿಸಿದ್ದಾನೆ.

    ಪ್ರಭಾಕರ್ ಬಂಧನದ ವೇಳೆಯಲ್ಲೂ ಕೂಡ ಕಾರಿನಲ್ಲಿ 48 ಜನರ ಮೂಲ ದಾಖಲೆಗಳು ಪತ್ತೆಯಾಗಿವೆ. ಎಲ್ಲಾ ಇಲಾಖೆಯ ಪೋಸ್ಟಲ್ ಅಡ್ರೆಸ್, ಆಫರ್ ಲೆಟರ್ ಗಳನ್ನ ಈತನೇ ಪ್ರಿಂಟ್ ಮಾಡಿಸಿ ಶೇಖರಿಸಿಟ್ಟಿಕೊಂಡಿದ್ದ. ಈತನಿಂದ ಪೊಲೀಸರು ವಶಪಡಿಸಿಕೊಂಡ ದಾಖಲೆಗಳೇ ನಾಲ್ಕೈದು ಬ್ಯಾಗ್ ಗಳಷ್ಟಿವೆ.

    15 ದಿನಗಳ ಕಾಲ ಪ್ರಭಾಕರ್ ಬೆನ್ನ ಹಿಂದೆ ಬಿದ್ದು ಈತನ ಎಲ್ಲಾ ಚಲನ-ವಲನಗಳನ್ನ ಗಮನಿಸಿ ಕಾಫಿನಾಡ ನಗರ ಠಾಣೆ ಪಿಎಸ್‍ಐ ತೇಜಸ್ವಿ ಹಾಗೂ ಇತರೇ ಪೊಲೀಸರು ಈತನನ್ನ ದಾಖಲೇ ಸಮೇತ ಅರೆಸ್ಟ್ ಮಾಡಿ ತನಿಖೆಗೆ ಒಳಪಡಿಸಿದ್ದಾರೆ. ಈತನನ್ನ ಬಂಧಿಸಿದ ಬಳಿಕ ಸುಮಾರು 70-80 ಲಕ್ಷದಷ್ಟು ಹಣವನ್ನ ಪೊಲೀಸರು ರಿಕವರಿ ಮಾಡಿದ್ದಾರೆ.

  • ತನ್ನದೇ ಸೆಕ್ಸ್ ವಿಡಿಯೋ ತಯಾರಿಸಿ ಹಣಕ್ಕಾಗಿ ಮಾರಾಟ – ನಿರ್ವಾಹಕ ಅರೆಸ್ಟ್

    ತನ್ನದೇ ಸೆಕ್ಸ್ ವಿಡಿಯೋ ತಯಾರಿಸಿ ಹಣಕ್ಕಾಗಿ ಮಾರಾಟ – ನಿರ್ವಾಹಕ ಅರೆಸ್ಟ್

    – ಮಹಿಳೆಯರಿಗೆ ಸರ್ಕಾರಿ ಹುದ್ದೆಯ ಆಮಿಷ
    – ವಿಡಿಯೋ ಮಾರಾಟ ಮಾಡಿ 5 ಲಕ್ಷ ರೂ.ಗಳಿಸಿದ

    ಮುಂಬೈ: ಲೈಂಗಿಕ ವಿಡಿಯೋಗಳನ್ನು ತಯಾರಿಸಿ ಅಶ್ಲೀಲ ವೆಬ್‍ಸೈಟ್‍ಗಳಿಗೆ ಮಾರಾಟ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಬಸ್ ನಿರ್ವಾಹಕನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

    ಥಾಣೆ ಮುನ್ಸಿಪಲ್ ಟ್ರಾನ್ಸ್ ಪೋರ್ಟ್ (ಟಿಎಂಟಿ) ಯಲ್ಲಿ ಕೆಲಸ ಮಾಡುತ್ತಿದ್ದ ಮಿಲಿಂದ್ ಜೇಡ್(32) ಬಂಧಿತ ಆರೋಪಿ. ಈತ ಮಹಿಳೆಯರಿಗೆ ಸರ್ಕಾರಿ ಉದ್ಯೋಗ ನೀಡುವ ಆಮಿಷ ಒಡ್ಡಿ ಕೃತ್ಯ ಎಸಗಿದ್ದ.

    ಈತನ ವಿರುದ್ಧ ಐಪಿಸಿ ಸೆಕ್ಷನ್ 376(ಸರ್ಕಾರಿ ಹುದ್ದೆಯ ಆಮಿಷ ಒಡ್ಡಿ ಲೈಂಗಿಕ ಕ್ರಿಯೆ ನಡೆಸುವುದು) ಸೆಕ್ಷನ್ 452(ಅಕ್ರಮ ಕೆಲಸಕ್ಕೆ ಮನೆಯಲ್ಲಿ ಹಲ್ಲೆ) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 67ರ ಅಡಿ ಕೇಸ್ ದಾಖಲಾಗಿತ್ತು. ಜುಲೈ ತಿಂಗಳಿನಲ್ಲಿ ಪ್ರಕರಣ ದಾಖಲಾದ ಬಳಿಕ ಈತ ನಾಪತ್ತೆಯಾಗಿದ್ದ.

    ಎಂಎ, ಬಿಎಡ್ ಓದುತ್ತಿದ್ದ ಇಬ್ಬರು ಮಹಿಳೆಯರು ಮಿಲಿಂದ್ ಪತ್ನಿಯ ಸ್ನೇಹಿತೆಯರಾಗಿದ್ದರು. ಪತ್ನಿಯಿಂದ ಇವರ ಸ್ನೇಹ ಸಂಪಾದಿಸಿದ್ದ ಮಿಲಿಂದ್ ಇವರ ಜೊತೆ ಅಕ್ರಮ ಸಂಬಂಧ ಹೊಂದಿ ಕೃತ್ಯ ಎಸಗಿದ್ದ. ತನ್ನ ಕೃತ್ಯದ ವಿಡಿಯೋವನ್ನು ಅಶ್ಲೀಲ ಸೈಟ್‍ಗೆ ಮಾರಾಟ ಮಾಡಿದ್ದ. ಓರ್ವ ಸಂತ್ರಸ್ತೆಯ ಸಂಬಂಧಿಯೊಬ್ಬರು ವಿಡಿಯೋ ಹರಿದಾಡುತ್ತಿರುವುದನ್ನು ಗಮನಿಸಿ ಆಕೆಯ ಗಮನಕ್ಕೆ ತಂದಾಗ ಕೃತ್ಯ ಬೆಳಕಿಗೆ ಬಂದಿದೆ. ಈ ವಿಚಾರ ತಿಳಿದ ಸಂತ್ರಸ್ತೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

    ನಾಪತ್ತೆಯಾಗಿದ್ದ ಈತ ಪತ್ನಿ ಭೇಟಿಗೆ ಬರುತ್ತಿದ್ದಾನೆ ಎಂಬ ಖಚಿತ ಮಾಹಿತಿ ತಿಳಿದ ಪೊಲೀಸರು ಈಗ ಬಂಧಿಸಿದ್ದಾರೆ. ಜೂನ್ ಮತ್ತು ನವೆಂಬರ್ 2019ರ ನಡುವೆ ಅಶ್ಲೀಲ ವೆಬ್‍ಸೈಟ್‍ಗಳಿಗೆ ವಿಡಿಯೋಗಳನ್ನು ಮಾರಾಟ ಮಾಡಿ 5 ಲಕ್ಷ ರೂ. ಗಳಿಸಿಕೊಂಡಿದ್ದಾನೆ. ಅಶ್ಲೀಲ ವೆಬ್‍ಸೈಟ್‍ನಲ್ಲಿ ಅಪ್‍ಲೋಡ್ ಮಾಡಲಾದ 62 ಅಶ್ಲೀಲ ವಿಡಿಯೋಗಳನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸರು ಹೇಳಿದ್ದಾರೆ.

    ಮಹಿಳೆಯರು ಮುಖ ಸ್ಪಷ್ಟವಾಗಿ ಕಣುವಂತೆ ತನ್ನ ಮುಖ ಸರೆಯಾಗದಂತೆ ವಿಡಿಯೋ ರೆಕಾರ್ಡ್ ಮಾಡುತ್ತಿದ್ದ. ವಂಚನೆಗೊಳಗಾದ ಮಹಿಳೆಯರನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದೇವೆ ಎಂದು ಪೊಲೀಸರು ಈಗ ತಿಳಿಸಿದ್ದಾರೆ.

  • ಮಗನನ್ನು ರೈತನನ್ನಾಗಿ ಮಾಡಲು 90 ಸಾವಿರ ಸಂಬಳದ ಸರ್ಕಾರಿ ಕೆಲಸ ಬಿಟ್ಟ ತಾಯಿ

    ಮಗನನ್ನು ರೈತನನ್ನಾಗಿ ಮಾಡಲು 90 ಸಾವಿರ ಸಂಬಳದ ಸರ್ಕಾರಿ ಕೆಲಸ ಬಿಟ್ಟ ತಾಯಿ

    ಜೈಪುರ: ರಾಜಸ್ಥಾನದ ತಾಯಿಯೊಬ್ಬರು ಮಗನನ್ನು ರೈತನನ್ನಾಗಿ ಮಾಡಲು 90 ಸಾವಿರ ಸಂಬಳದ ಸರ್ಕಾರಿ ಕೆಲಸಕ್ಕೆ ಗುಡ್‍ಬೈ ಹೇಳಿ ಜಮೀನಿನಲ್ಲಿ ದುಡಿಯುತ್ತಿದ್ದಾರೆ.

    ರಾಜೇಂದ್ರ ಸಿಂಗ್ ಹಾಗೂ ಅವರ ಪತ್ನಿ ಚಂಚಲ್ ಕೌರ್ ಮೂಲತಃ ರಾಜಸ್ಥಾನದ ಅಜ್ಮೇರ್ ನವರಾಗಿದ್ದು, ಈ ದಂಪತಿಗೆ 11 ವರ್ಷದ ಮಗನಿದ್ದಾನೆ. ರಾಜೇಂದ್ರ ಭಾರತೀಯ ರೈಲ್ವೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇತ್ತ ಅವರ ಪತ್ನಿ ಚಂಚಲ್ ಸರ್ಕಾರಿ ಸ್ಟ್ಯಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಇಬ್ಬರು ಇಂದೋರ್ ಬಳಿಯ ಹಳ್ಳಿಯೊಂದರಲ್ಲಿ ಒಂದೂವರೆ ಎಕರೆ ಜಮೀನು ಖರೀದಿಸಿದ್ದು ಅಲ್ಲಿ ಅವರು ತಮ್ಮ ಮಗ ಗುರುಭಕ್ಷ್ ಸಿಂಗ್‍ಗೆ ರೈತನಾಗಲು ತರಬೇತಿ ನೀಡುತ್ತಿದ್ದಾರೆ.

    ನಾವು ದೊಡ್ಡ ನಗರದಲ್ಲಿ ವಾಸಿಸುತ್ತಿರಬಹುದು. ಲಕ್ಷಗಟ್ಟಲೇ ಹಣವನ್ನು ಸಂಪಾದನೆ ಮಾಡುತ್ತಿರಬಹುದು. ದುಡ್ಡು ಇದ್ದರೆ ಏನಂತೆ ನಾವು ಶುದ್ಧ ಗಾಳಿ ಹಾಗೂ ನೀರಿಗಾಗಿ ಹಂಬಲಿಸುತ್ತೇವೆ. ಈ ನಡುವೆ ಮನೆಯೊಳಗೆ ಬಿಸಿಲು ಕೂಡ ಬರುವುದಿಲ್ಲ. ಹೀಗಿರುವಾಗ ಎಷ್ಟು ಸಂಪಾದನೆ ಮಾಡಿದರೂ ಪ್ರಯೋಜನ ಏನು? ಈ ಕಾರಣದಿಂದಾಗಿ ನಾವು ನಮ್ಮ ಮಗನಿಗೆ ಬೇರೆ ಜೀವನ ನೀಡಲು ನಿರ್ಧರಿಸಿ ಇಂದೋರ್ ನಲ್ಲಿ ಜಮೀನು ಖರೀದಿಸಿದ್ದೇವೆ ಎಂದು ದಂಪತಿ ತಮ್ಮ ನಿರ್ಧಾರದ ಬಗ್ಗೆ ತಿಳಿಸಿದ್ದಾರೆ.

    2016ರಲ್ಲಿ ಚಂಚಲ್ 90 ಸಾವಿರ ಸಂಬಳದ ಸರ್ಕಾರಿ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ನೀಡಿದ ವಿಚಾರಕ್ಕೆ ಸಂಬಂಧಿಕರು ಹಾಗೂ ಸ್ನೇಹಿತರು “ಇದು ತಪ್ಪು ನಿರ್ಧಾರ” ಎಂದು ಹೇಳಿದರು. ಆದರೆ ಮಗನಿಗೆ ಆರೋಗ್ಯಕರ ಮತ್ತು ಸ್ವಚ್ಛ ಜೀವನವನ್ನು ನೀಡಲು ನಾನು ತೆಗೆದುಕೊಂಡ ನಿರ್ಧಾರ ಸರಿ ಎಂದು ಅವರಿಗೆ ಹೇಳಿದೆ ಎಂಬುದಾಗಿ ಚಂಚಲ್ ಹೇಳಿದರು.

    2017ರಲ್ಲಿ ಚಂಚಲ್ ತಮ್ಮ ಮಗನ ಜೊತೆ ಇಂಧೋರ್ ಶಿಫ್ಟ್ ಆಗಿದ್ದಾರೆ. ಅಲ್ಲಿ ಸಾವಯವ ಕೃಷಿಯಲ್ಲಿ ಪದ್ಮಶ್ರೀ ಡಾ. ಜಾನಕ್ ಪಾಲ್ಟಾ ಅವರಿಂದ ತರಬೇತಿ ಪಡೆದಿದ್ದಾರೆ. ಜೊತೆಗೆ ಸೋಲಾರ್ ಕುಕ್ಕಿಂಗ್, ಸೋಲಾರ್ ಡ್ರೈಯಿಂಗ್ ಕಲಿತಿದ್ದಾರೆ.

    ಈ ಬದಲಾವಣೆಯನ್ನು ಮಗ ಹೇಗೆ ಎದುರಿಸುತ್ತಾನೆ ಎಂದು ರಾಜೇಂದ್ರ ಹಾಗೂ ಚಂಚಲ್ ಚಿಂತಿಸುತ್ತಿದ್ದರು. ಆದರೆ ಗುರುಭಕ್ಷ್ ಈ ಹೊಸ ಜೀವನದಿಂದ ಖುಷಿಯಾಗಿದ್ದ. ಈಗ ಸಾವಯವ ಕೃಷಿಯಿಂದ ಹಿಡಿದು ಎಲ್ಲದರಲ್ಲೂ ಆತ ತನ್ನ ತಾಯಿಗೆ ಸಹಾಯ ಮಾಡುತ್ತಿದ್ದಾನೆ. ಊರಿನಲ್ಲಿ ಆತನಿಗೆ ಸಾಕಷ್ಟು ಸ್ನೇಹಿತರು ಪರಿಚಯವಾಗಿದ್ದು, ಗುರುಭಕ್ಷ್ ಅವರಿಗೆ ಸೋಲಾರ್ ಕುಕ್ಕಿಂಗ್ ಹಾಗೂ ಕೃಷಿ ವಿಧಾನಗಳನ್ನು ಕಲಿಸುತ್ತಾನೆ. ಜೊತೆ ಆಟವಾಡುವಾಗ ಅವರಿಂದಲೂ ಗುರುಭಕ್ಷ್ ಕಲಿಯುತ್ತಿದ್ದಾನೆ.

    ಇತ್ತೀಚಿನ ದಿನಗಳಲ್ಲಿ ಪೋಷಕರು ತಮ್ಮ ಮಕ್ಕಳ ಶಿಕ್ಷಣ ಮತ್ತು ಜೀವನಕ್ಕಾಗಿ ಲಕ್ಷಾಂತರ ರೂ. ಖರ್ಚು ಮಾಡುತ್ತಾರೆ. ಆದರೆ ಈ ಹಣವನ್ನು ಸಂಪಾದಿಸುವಾಗ ಅವರು ತಮ್ಮ ಮಕ್ಕಳಿಗೆ ಸಮಯವನ್ನು ನೀಡಲು ಸಾಧ್ಯವಾಗುತ್ತಿಲ್ಲ. ನಾವು ಯಾವಾಗಲೂ ನಮ್ಮ ಮಗನಿಗೆ ನೀನು ಯಾವುದೇ ರೇಸ್‍ನಲ್ಲಿ ಇಲ್ಲ. ನೀನು ಯಾರಿಂದಲೂ ಮುಂದೆ ಅಥವಾ ಹಿಂದಕ್ಕೆ ನಡೆಯಬೇಕಿಲ್ಲ. ಕೇವಲ ತನ್ನ ವೇಗದಲ್ಲಿ ನಡೆಯಬೇಕು ಎಂದು ಹೇಳುತ್ತಿರುತ್ತೇವೆ ಅಂತಾ ರಾಜೇಂದ್ರ ಹಾಗೂ ಚಂಚಲ್ ತಿಳಿಸಿದ್ದಾರೆ.

    ರಾಜೇಂದ್ರ ಹಾಗೂ ಚಂಚಲ್ ಅವರ ಮನೆಯಲ್ಲಿ ಸೋಲಾರ್ ಕುಕ್ಕಿಂಗ್ ಮೂಲಕ ಅಡುಗೆ ಮಾಡಲಾಗುತ್ತಿದೆ. ಅಲ್ಲದೆ ತಮ್ಮ ಜಮೀನಿನಲ್ಲಿ ಸಾವಯವ ರೀತಿಯಲ್ಲಿ ಬೆಳೆದ ತರಕಾರಿಗಳನ್ನು ಅಡುಗೆ ಮಾಡಲು ಉಪಯೋಗಿಸುತ್ತಾರೆ. ಚಂಚಲ್ ಒಬ್ಬರೇ ಎಲ್ಲವನ್ನು ನೋಡಿಕೊಳ್ಳುತ್ತಾರೆ. ರಾಜೇಂದ್ರ ಉದ್ಯೋಗದಿಂದಾಗಿ ಇಂದೋರ್ ಮನೆಯಲ್ಲಿ ಹೆಚ್ಚು ಸಮಯ ಇರುವುದಿಲ್ಲ. ಪತಿ ಮನೆಯಲ್ಲಿ ಇಲ್ಲದೇ ಇದ್ದರೂ ಚಂಚಲ್, ಗುರುಭಕ್ಷ್‍ಗೆ ವಿದ್ಯಾಭ್ಯಾಸದ ಜೊತೆಗೆ ಭವಿಷ್ಯದ ಮಾದರಿ ರೈತನಾಗಲು ಕೃಷಿ ತರಬೇತಿ ನೀಡುತ್ತಿದ್ದಾರೆ.

  • ವಿಲಾಸಿ ಜೀವನಕ್ಕಾಗಿ ಚೀಟಿಂಗ್ ವೃತ್ತಿಗಿಳಿದ ಸುಂದರಿ

    ವಿಲಾಸಿ ಜೀವನಕ್ಕಾಗಿ ಚೀಟಿಂಗ್ ವೃತ್ತಿಗಿಳಿದ ಸುಂದರಿ

    -70 ಲಕ್ಷ ರೂ. ಹಣ ದೋಚಿದ ಕೇಡಿ ಲೇಡಿ
    -ಉದ್ಯೋಗದ ಕನಸು ಕಂಡವರಿಗೆ ಟೋಪಿ

    ಹೈದರಾಬಾದ್: ವಿಲಾಸಿ ಜೀವನಕ್ಕೆ ಮಾರು ಹೋದ ಮಹಿಳೆ ನಿರುದ್ಯೋಗ ಯುವಕರಿಗೆ ಸರ್ಕಾರಿ ನೌಕರಿ ಕೊಡಿಸುವ ಭರವಸೆ ನೀಡಿ ಲಕ್ಷ ಲಕ್ಷ ರೂ. ಹಣ ಪಡೆದು ಮೋಸ ಮಾಡಿರುವ ಘಟನೆ ಆಂಧ್ರಪ್ರದೇಶ ಗುಂಟೂರು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

    ಆಂಧ್ರಪ್ರದೇಶ ಗುಂಟೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ವ್ಯವಸ್ಥಿತವಾಗಿ ಮೋಸ ಮಾಡುವ ಕಾರ್ಯ ಮಾಡುತ್ತಿದ್ದ ಮಹಿಳೆಯ ಕೃತ್ಯ ಬೆಳಕಿಗೆ ಬಂದಿದ್ದು, ಇದುವರೆಗೂ ಸುಮಾರು 70 ಲಕ್ಷ ರೂ. ಹೆಚ್ಚು ಹಣವನ್ನು ಪಡೆದು ಮೋಸ ಮಾಡಿದ್ದಾಳೆ.

    ಮಾಮಿಳ್ಳಪಲ್ಲಿ ದೀಪ್ತಿ ಎಂಬ ಮಹಿಳೆ ಈ ಮೋಸದ ಜಾಲವನ್ನು ನಡೆಸಿದ್ದು, ಸದ್ಯ ಈಕೆಯ ವಿರುದ್ಧ ಮೋಸ ಹೋದ ಯುವಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಕುರಿತು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.

    ರಾಜ್ಯ ಸಚಿವಾಲಯದಲ್ಲಿ ಉದ್ಯೋಗ ನೀಡುವ ಭರವಸೆ ನೀಡಿ ಗುಂಟೂರು ಜಿಲ್ಲೆಯ ಯುವಕನೊಬ್ಬನಿಂದ ದೀಪ್ತಿ 3 ಲಕ್ಷ ರೂ. ಹಣ ಕೇಳಿದ್ದಳು. ಸರ್ಕಾರಿ ಉದ್ಯೋಗದ ಆಸೆ ಬಿದ್ದ ಆತ ಸಾಲ ಮಾಡಿ 1.5 ಲಕ್ಷ ರೂ.ಗಳನ್ನು ನೀಡಿದ್ದ. ಮತ್ತೊಬ್ಬ ವ್ಯಕ್ತಿಯಿಂದ 15 ಲಕ್ಷ ರೂ. ಬೇಡಿಕೆ ಇಟ್ಟು 5 ರೂ. ಲಕ್ಷ ರೂ. ಗಳನ್ನು ಮುಂಗಡವಾಗಿ ಪಡೆದಿದ್ದಳು. ಅಲ್ಲದೇ ಕಳೆದ ವರ್ಷದಿಂದಲೂ ಹಲವು ವ್ಯಕ್ತಿಗಳಿಂದ ಹಣವನ್ನು ಪಡೆದಿದ್ದರು. ಮಹಿಳೆಗೆ ಹಣ ನೀಡಿ ಮೋಸ ಹೋಗಿದ್ದ ಗುಂಟೂರು ಜಿಲ್ಲೆಯ ವಂಶಿಕೃಷ್ಣ ಎಂಬಾತ ಪೊಲೀಸರಿಗೆ ದೂರು ನೀಡಿದ ಸಂದರ್ಭದಲ್ಲಿ ಪ್ರಕರಣ ಬೆಳಕಿಗೆ ಬಂದಿದೆ.

    ಮಹಿಳೆ ತಾನು ಸರ್ಕಾರಿ ಕಾರ್ಯದರ್ಶಿಯ ಪಿಎ ಎಂದು ಹೇಳಿ ಕೇವಲ ಉದ್ಯೋಗ ಮಾತ್ರವಲ್ಲದೇ ಭೂ ವಿವಾದ, ನಿವಾಸದ ಸಮಸ್ಯೆ ಬಗೆಹರಿಸುವ ಭರವಸೆ ನೀಡಿ ಅನಂತಪುರಂ, ಕಡಪ ಹಾಗೂ ನೆಲ್ಲೂರು ಜಿಲ್ಲೆಯ ವ್ಯಕ್ತಿಗಳಿಂದ ಕ್ರಮವಾಗಿ 12, 10, 12 ಲಕ್ಷ ರೂ.ಗಳನ್ನು ಮಹಿಳೆ ಪಡೆದು ಮೋಸ ಮಾಡಿರುವ ಆರೋಪ ಕೇಳಿ ಬಂದಿದೆ. ಸದ್ಯ ಪ್ರಕರಣ ಬೆಳಕಿಗೆ ಬರುತ್ತಿದಂತೆ ಮಹಿಳೆ ನಾಪತ್ತೆಯಾಗಿದ್ದು, ಮೋಸ ಹೋದ ಜನರು ಆಕೆಯನ್ನು ಬಂಧಿಸಿ ತಮ್ಮ ಹಣವನ್ನು ವಾಪಸ್ ನೀಡುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ.

  • ಸರ್ಕಾರಿ ಕೆಲಸಕ್ಕಾಗಿ ತಮ್ಮನನ್ನೇ ಕೊಂದ ಅಣ್ಣ

    ಸರ್ಕಾರಿ ಕೆಲಸಕ್ಕಾಗಿ ತಮ್ಮನನ್ನೇ ಕೊಂದ ಅಣ್ಣ

    ತುಮಕೂರು: ತಂದೆಯ ಸಾವಿನ ಬಳಿಕ ಅನುಕಂಪದ ಆಧಾರದ ಮೇಲೆ ಸಿಗಲಿರುವ ಸರ್ಕಾರಿ ಕೆಲಸ ತಮ್ಮನಿಗೆ ಸಿಗಲಿದೆ ಎಂಬ ದ್ವೇಷದಿಂದ ಸ್ವತಃ ಅಣ್ಣನೇ ತಮ್ಮನನ್ನು ಕೊಂದ ಘಟನೆ ತುಮಕೂರು ನಗರದ ಸರಸ್ವತಿಪುರಂ ನಲ್ಲಿ ನಡೆದಿದೆ.

    ಕಿರಣ್ (17) ತಮ್ಮನನ್ನೇ ಕೊಂದ ಅಣ್ಣ. ಕಿರಣ್ ತನ್ನ 11 ವರ್ಷದ ತಮ್ಮ ಕಿಶೋರ್ ನನ್ನು ಕೊಲೆ ಮಾಡಿದ್ದಾನೆ. ಕಿರಣ್ ಹಾಗೂ ಕಿಶೋರ್ ಅವರ ತಂದೆ ಪುಟ್ಟಯ್ಯ ಕೇಂದ್ರ ಸರ್ಕಾರಿ ನೌಕರಿಯಲ್ಲಿದ್ದರು. ಅಲ್ಲದೆ ಎರಡು ವರ್ಷದ ಹಿಂದೆ ಅಕಾಲಿಕ ಮರಣ ಹೊಂದಿದ್ದರು.

    ಪುಟ್ಟಯ್ಯ ಅವರ ಇಬ್ಬರ ಮಕ್ಕಳಲ್ಲಿ ಆರೋಪಿ 17 ವರ್ಷದ ಕಿರಣ್ ಹಿರಿಯನಾಗಿದ್ದನು. ಮೃತ ಕಿಶೋರ್ 11 ವರ್ಷದವನಾಗಿದ್ದನು. 18 ವರ್ಷ ತುಂಬಿದ ಕೂಡಲೇ ಮುಂದಿನ ವರ್ಷ ಕಿರಣ್‍ಗೆ ಅನುಕಂಪದ ಆಧಾರದ ಮೇಲೆ ತಂದೆಯ ಕೆಲಸ ಸಿಗುವುದಿತ್ತು.

    ಕಿರಣ್ ವಿಪರೀತ ಮದ್ಯ ವ್ಯಸನಿಯಾಗಿದ್ದರಿಂದ ಈತನ ಬದಲು ತಮ್ಮ ಕಿಶೋರ್ ಗೆ ಆ ಕೆಲಸವನ್ನು ನೀಡಲು ಮನೆಯವರು ನಿರ್ಧರಿಸಿದ್ದರು. ಇದರಿಂದ ಅಸಮಾಧಾನಗೊಂಡಿದ್ದ ಕಿರಣ್ ಮಂಗಳವಾರ ರಾತ್ರಿ ಮನೆಯಲ್ಲಿ ಕುಟುಂಬದವರ ಜೊತೆ ಜಗಳ ತೆಗೆದು ಚಾಕುವಿನಿಂದ ಇರಿದು ತಮ್ಮನ ಹತ್ಯೆ ಮಾಡಿದ್ದಾನೆ.

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಯನಗರ ಪೊಲೀಸರು ಆರೋಪಿ ಕಿರಣ್‍ನನ್ನು ಬಂಧಿಸಿದ್ದಾರೆ.