Tag: Government Hospitals

  • ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧ ಮಾರಾಟ ಸರಿಯಲ್ಲ – ಜನೌಷಧಿ ಕೇಂದ್ರಗಳ ಸ್ಥಗಿತದ ಹಿಂದೆ ರಾಜಕೀಯ ಉದ್ದೇಶವಿಲ್ಲ – ಗುಂಡೂರಾವ್

    ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧ ಮಾರಾಟ ಸರಿಯಲ್ಲ – ಜನೌಷಧಿ ಕೇಂದ್ರಗಳ ಸ್ಥಗಿತದ ಹಿಂದೆ ರಾಜಕೀಯ ಉದ್ದೇಶವಿಲ್ಲ – ಗುಂಡೂರಾವ್

    – ರಾಜ್ಯದಲ್ಲಿ 1,400 ಜನೌಷಧಿ ಕೇಂದ್ರಗಳಲ್ಲಿ ಕೇವಲ 180 ಸರ್ಕಾರಿ ಆಸ್ಪತ್ರೆಗಳಿವೆ
    – ಜನೌಷಧಿ ಕೇಂದ್ರಗಳಲ್ಲಿ ಬ್ರಾಂಡೆಡ್ ಔಷಧಿ ಮಾರಾಟವಾಗ್ತಿದೆ

    ಬೆಂಗಳೂರು: ಸರ್ಕಾರಿ ಆಸ್ಪತ್ರೆಗಳಲ್ಲಿ(Government Hospitals) ಔಷಧಗಳ ಮಾರಾಟಕ್ಕೆ ಅವಕಾಶ ಕೊಡುವುದು ಸರಿಯಲ್ಲ. ಜನೌಷಧಿಯು ಕೇಂದ್ರ ಸರ್ಕಾರದ ಯೋಜನೆ ಎಂಬ ಕಾರಣಕ್ಕೆ ರಾಜಕೀಯ ಮಾಡುವ ಯಾವುದೇ ಉದ್ದೇಶವಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್(Dinesh Gundu Rao) ಹೇಳಿದರು.

    ಬೆಂಗಳೂರಿನಲ್ಲಿ(Bengaluru) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸಂಪೂರ್ಣವಾಗಿ ಜನೌಷಧಿ ಕೇಂದ್ರಗಳನ್ನ ಸ್ಥಗಿತಗೊಳಿಸಿಲ್ಲ. ಒಟ್ಟು 1,400 ಜನೌಷಧಿ ಕೇಂದ್ರಗಳಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿರುವ 180 ಕೇಂದ್ರಗಳನ್ನ ಮಾತ್ರ ತೆರವುಗೊಳಿಸಲು ಬಗ್ಗೆ ಚರ್ಚಿಸಲಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಗಳ ಮಾರಾಟಕ್ಕೆ ಅವಕಾಶ ಕೊಡುವುದು ಸರಿಯಲ್ಲ. ಸರ್ಕಾರವೇ ಉಚಿತವಾಗಿ ಔಷಧಿಗಳನ್ನ ನೀಡುವಾಗ, ಆಸ್ಪತ್ರೆಗಳಲ್ಲಿ ಔಷಧಿಗಳ ಮಾರಾಟ ಮಾಡುವ ಮೆಡಿಕಲ್ ಶಾಪ್‌ಗಳು ಏಕೆ ಬೇಕು ಎಂದರು. ಇದನ್ನೂ ಓದಿ: ವಸತಿ ಹಂಚಿಕೆಯಲ್ಲಿ ಅಂಗವಿಕಲರಿಗೆ 4% ಮೀಸಲಾತಿ ಕಡ್ಡಾಯ: ಕೇಂದ್ರ ಸರ್ಕಾರ

    ಜನೌಷಧಿ ಕೇಂದ್ರಗಳ ವಿಚಾರದಲ್ಲಿ ಬಿಜೆಪಿ(BJP) ನಾಯಕರು ರಾಜಕೀಯ ಬೆರೆಸುವುದು ಸರಿಯಲ್ಲ. ಅಲ್ಲದೇ ತಕ್ಷಣಕ್ಕೆ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿರುವ ಎಲ್ಲಾ ಜನೌಷಧಿ ಕೇಂದ್ರಗಳನ್ನ ಮುಚ್ಚಿಸಿ ಎಂದು ಹೇಳಿಲ್ಲ. ಹೊಸದಾಗಿ ಸಲ್ಲಿಕೆಯಾಗಿದ್ದ 31 ಪ್ರಸ್ತಾವನೆಗಳನ್ನ ತಿರಸ್ಕರಿಸಲಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಚಿತ್ತಾಪುರದಲ್ಲಿ ಛಲವಾದಿ ನಾರಾಯಣಸ್ವಾಮಿಗೆ ಘೇರಾವ್

    ಹಾಲಿ ಆಸ್ಪತ್ರೆಗಳ ಆವರಣದಲ್ಲಿರುವ ಕೇಂದ್ರಗಳು ಇಲಾಖೆ ಮತ್ತು ಆಸ್ಪತ್ರೆಗಳೊಂದಿಗೆ ಮಾಡಿಕೊಂಡಿರುವ ಒಪ್ಪಂದಗಳನ್ನ ಪರಿಶೀಲಿಸಿ ಕ್ರಮ ಜರುಗಿಸಲು ಸೂಚಿಸಲಾಗಿದೆ. ಹಲವು ಜನೌಷಧಿ ಕೇಂದ್ರಗಳ ಒಪ್ಪಂದಗಳು ನವೀಕರಣವಾಗಿಲ್ಲ. ಇನ್ನು ಕೆಲವು ಕೇಂದ್ರಗಳು ಇತ್ತೀಚೆಗೆ ಆರಂಭವಾಗಿದ್ದು, ಅವರು ಸಾಕಷ್ಟು ಬಂಡವಾಳ ಹೂಡಿರುತ್ತಾರೆ. ಅವರಿಗೆ ತೊಂದರೆ ಕೊಡುವ ಉದ್ದೇಶವಿಲ್ಲ. ಅವರ ಒಪ್ಪಂದ ಮುಗಿದ ಬಳಿಕವೇ ಸ್ಥಗಿತಗೊಳಿಸುವ ಕುರಿತು ಆಲೋಚಿಸಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಮಡೆನೂರ್ ಮನುನನ್ನ ಬೆಂಗ್ಳೂರಿಗೆ ಕರೆತಂದ ಪೊಲೀಸ್‌ – ಅದು ರೇಪ್‌ ಅಲ್ಲ, ಒಪ್ಪಂದದ ಸಂಪರ್ಕ ಅಂದ ನಟ

    ಜನೌಷಧಿಯು ಕೇಂದ್ರ ಸರ್ಕಾರದ ಯೋಜನೆ ಎಂಬ ಕಾರಣಕ್ಕೆ ರಾಜಕೀಯ ಮಾಡುವ ಯಾವುದೇ ಉದ್ದೇಶವಿಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿಯೇ ಔಷಧಿ ಸಿಗುವಾಗ ಆಸ್ಪತ್ರೆಗಳ ಆವರಣದಲ್ಲಿ ಔಷಧ ಮಾರಾಟಕ್ಕೆ ಅವಕಾಶ ಮಾಡಿಕೊಡಬಾರದು ಎಂಬ ಒಂದೇ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಜನೌಷಧಿ ಕೇಂದ್ರಗಳಲ್ಲಿ ಜನರಿಕ್ ಮೆಡಿಸಿನ್ ಮಾತ್ರ ಮಾರಾಟ ಮಾಡಬೇಕು. ಆದರೆ ಹಲವು ಜನೌಷಧಿ ಕೇಂದ್ರಗಳಲ್ಲಿ ಬ್ರಾಂಡೆಡ್ ಮೆಡಿಸಿನ್‌ಗಳನ್ನ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಇದೆ. ಈ ಬಗ್ಗೆ ಔಷಧ ನಿಯಂತ್ರಣ ಮಂಡಳಿಯವರು ಪರಿಶೀಲನೆ ನಡೆಸಿದ್ದಾರೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಕನ್ನಡದ ನಟಿಯರನ್ನ ಹಾಕೊಂಡ್ರೆ ಲಾಭ ಬರಲ್ವಾ: ನಾರಾಯಣ ಗೌಡ ಆಕ್ರೋಶ

    ಸರ್ಕಾರಿ ಆಸ್ಪತ್ರೆಗಳ ಔಷಧ ಕೇಂದ್ರಗಳಲ್ಲಿ ಔಷಧಿಗಳ ಕೊರತೆಯಿಲ್ಲ. ಕೆಲವು ಕಡಿಮೆ ಬೇಡಿಕೆ ಇರುವ ಔಷಧಿಗಳು ಇಲ್ಲದಿದ್ದರೆ ಅವುಗಳನ್ನ ಬಿಪಿಪಿಐನಿಂದ ಖರೀದಿಸಲು ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ಖರೀದಿಗೆ ಅಗತ್ಯವಿರುವ ಹಣಕಾಸಿನ ಲಭ್ಯತೆಯೂ ಆಸ್ಪತ್ರೆಗಳ ಬಳಿ ಇದೆ. ಹೀಗಾಗಿ ಸಾರ್ವಜನಿಕರು ಸರ್ಕಾರಿ ಆಸ್ಪತ್ರೆಗಳಲ್ಲಿಯೇ ಉಚಿತವಾಗಿ ಔಷಧಗಳನ್ನ ಪಡೆಯಬೇಕು. ವೈದ್ಯರು ಚೀಟಿ ಕೊಟ್ಟು ಹೊರಗಡೆಯಿಂದ ಔಷಧಗಳನ್ನ ತರಿಸುವ ಪದ್ದತಿ ನಿಲ್ಲಬೇಕು ಎಂದು ಹೇಳಿದರು.

  • ನಡು ರಸ್ತೆಯಲ್ಲಿ ನೂರಾರು ಕಾಂಡೋಮ್‌ ಬಾಕ್ಸ್‌ಗಳು ಪತ್ತೆ!

    ನಡು ರಸ್ತೆಯಲ್ಲಿ ನೂರಾರು ಕಾಂಡೋಮ್‌ ಬಾಕ್ಸ್‌ಗಳು ಪತ್ತೆ!

    -ಸರ್ಕಾರಿ ಆಸ್ಪತ್ರೆಗಳಿಗೆ ವಿತರಣೆಯಾಗಬೇಕಿದ್ದ ಕಾಂಡೋಮ್ ಬಾಕ್ಸ್‌

    ಯಾದಗಿರಿ: ಕೇಂದ್ರ ಸರ್ಕಾರದಿಂದ ಸರ್ಕಾರಿ ಆಸ್ಪತ್ರೆಗಳಿಗೆ (Government Hospitals) ವಿತರಣೆಯಾಗಬೇಕಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ನೂರಾರು ಕಾಂಡೋಮ್‌ ಬಾಕ್ಸ್‌ಗಳು (Condom Box) ಪತ್ತೆಯಾಗಿರುವ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಖಾನಾಪುರ ಸಮೀಪದಲ್ಲಿ ನಡೆದಿದೆ.

    ನೂರಾರು ನಿರೋಧ್‌ (ಕಾಂಡೋಮ್) ಬಾಕ್ಸ್‌ಗಳು ಖಾನಾಪುರ ಸಮೀಪದ ಇಬ್ರಾಹಿಂಪುರ ಕ್ರಾಸ್ ಮುಖ್ಯರಸ್ತೆಯಲ್ಲಿ ಪತ್ತೆಯಾಗಿದೆ. ಆರೋಗ್ಯ ಇಲಾಖೆ ಅಧಿಕಾರಿಗಳೇ (Health Officers) ಬೇಕಾಬಿಟ್ಟಿಯಾಗಿ ರಸ್ತೆ ಬದಿ ಇಳಿಸಿ ಹೋದ್ರಾ ಅನ್ನೋ ಸಂಶಯವೂ ವ್ಯಕ್ತವಾಗಿದೆ. ಇದನ್ನೂ ಓದಿ: ಕುವೆಂಪು ಘೋಷವಾಕ್ಯ ತೆಗೆದುಹಾಕಲು ಸರ್ಕಾರ ಆದೇಶಿಸಿಲ್ಲ: ಸಚಿವ ಮಹದೇವಪ್ಪ

    ಬಾಕ್ಸ್‌ಗಳಲ್ಲಿ ತುಂಬಿದ ಕಾಂಡೋಮ್‌ ಸರ್ಕಾರಿ ಆಸ್ಪತ್ರೆಗೆ ಪೂರೈಕೆ ಆಗಬೇಕಿತ್ತು. 2026ರ ವರೆಗೆ ಅವಧಿ ಇರೋದು ಬಾಕ್ಸ್‌ ಮೇಲೆ ನಮೂದಾಗಿದೆ. ಆದ್ರೆ ಏಕಾಏಕಿ ಇಷ್ಟೊಂದು ಬಾಕ್ಸ್‌ಗಳನ್ನ ರಸ್ತೆ ಮಧ್ಯೆ ಇಳಿಸಿ ಹೋಗಿದ್ದು ಯಾರು ಅನ್ನೋದು ಪತ್ತೆಯಾಗಿಲ್ಲ.

    ಇಷ್ಟೊಂದು ಬಾಕ್ಸ್‌ಗಳು ಎಲ್ಲಿಂದ ತಂದಿದ್ದು? ಯಾವ ಆಸ್ಪತ್ರೆಗಳಿಗೆ ವಿತರಣೆಯಾಗಬೇಕು ಅನ್ನೋದರ ಬಗ್ಗೆ ಇನ್ನಷ್ಟೇ ತನಿಖೆಯಾಗಬೇಕಿದೆ. ಇದನ್ನೂ ಓದಿ: ವಸತಿ ಶಾಲೆಯಲ್ಲಿ ಘೋಷವಾಕ್ಯ ಬದಲು; ಅಧಿಕಾರಿಯ ವಿರುದ್ಧ ಕ್ರಮ ವಹಿಸಿ: ಅಶೋಕ್ ಒತ್ತಾಯ

  • ಬೆಂಗ್ಳೂರಿನ ಸರ್ಕಾರಿ ಆಸ್ಪತ್ರೆಗೆ ಬಂತು ರೋಬೊ ಡಾಕ್ಟರ್ – ಏನಿದರ ವಿಶೇಷತೆ?

    ಬೆಂಗ್ಳೂರಿನ ಸರ್ಕಾರಿ ಆಸ್ಪತ್ರೆಗೆ ಬಂತು ರೋಬೊ ಡಾಕ್ಟರ್ – ಏನಿದರ ವಿಶೇಷತೆ?

    ಬೆಂಗಳೂರು: ಸರ್ಕಾರಿ ಆಸ್ಪತ್ರೆಗಳೆಂದರೆ (Government Hospital) ಮೂಗುಮುರಿಯೋ ಜನರೇ ಜಾಸ್ತಿ. ಆಸ್ಪತ್ರೆ ಕ್ಲೀನ್ ಇರಲ್ಲ, ನರ್ಸ್‌ಗಳ ದರ್ಪ ಜೋರಾಗಿರುತ್ತೆ ಅಂತ ನೂರೆಂಟು ಕಂಪ್ಲೆಂಟ್. ಆದರೆ ಬೆಂಗಳೂರಿನ ಈ ಸರ್ಕಾರಿ ಆಸ್ಪತ್ರೆ ಇದೆಲ್ಲದಕ್ಕೂ ಸೆಡ್ಡು ಹೊಡೆದು, ಆಸ್ಪತ್ರೆಗಳೂ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದೆ.

    ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ (Gandhi Hospital Bangalore) ರೋಬೊ ಟ್ರೀಟ್ಮೆಂಟ್:
    ಟೆಕ್ನಾಲಜಿ ಬೆಳೆದಂತೆ ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳು ಆಗ್ತಿದೆ. ಖಾಸಗಿ ಆಸ್ಪತ್ರೆಗಳಲ್ಲಂತೂ ದಿನನಿತ್ಯ ಲೇಟೆಸ್ಟ್ ಟೆಕ್ನಾಲಜಿ ಪರಿಚಯ ಆಗ್ತಿದೆ. ಆದರೆ ಸರ್ಕಾರಿ ಆಸ್ಪತ್ರೆಗಳು ಮಾತ್ರ ಆದ್ಯಾವಾಗ ಈ ಎಲ್ಲಾ ಸೌಲಭ್ಯಗಳನ್ನ ತಂದು ಬಡವರ ಕಷ್ಟಕ್ಕೆ ಆಗುತ್ತವೆ ಅನ್ನೋ ಕೊರಗು ಸಾಮಾನ್ಯರಿಗೆ ಕಾಡುತ್ತಿತ್ತು. ಈ ನಿಟ್ಟಿನಲ್ಲಿ ವೈದ್ಯಕೀಯ ವಲಯದಲ್ಲಿರುವ ಕಾಂಪಿಟೇಶನ್ ತಕ್ಕಂತೆ ಇದೀಗ ಆರೋಗ್ಯ ಇಲಾಖೆ ಕೂಡ ಹೆಜ್ಜೆ ಹಾಕಲು ಪ್ರಯತ್ನಿಸಿದೆ. ಇದರ ಭಾಗವಾಗಿ ಇದೇ ಮೊದಲ ಬಾರಿಗೆ ಬೆಂಗಳೂರು ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ (Gandhi Hospital) ಮೊದಲ ಬಾರಿಗೆ ರೋಬೋಟಿಕ್ ಟೆಕ್ನಾಲಜಿ ಪರಿಚಯ ಮಾಡಿದೆ. ಇದನ್ನೂ ಓದಿ: `ಗಾಲ್ವಾನ್ ಸೇಸ್ ಹಾಯ್’ – ರಿಚಾ ಚಡ್ಡಾ ಬೆಂಬಲಿಸಿದ ನಟ ಪ್ರಕಾಶ್ ರಾಜ್

    ಏನೇನು ಅನುಕೂಲ?:
    ಹೌದು. ಬೆಂಗಳೂರಿನ ರಾಜೀವ್ ಗಾಂಧಿ ಆಸ್ಪತ್ರೆ ಈ ಟೆಕ್ನಾಲಜಿ ಬಳಕೆ ಮಾಡುತ್ತಿರುವ ಮೊದಲ ಸರ್ಕಾರಿ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆಸ್ಪತ್ರೆಯ ಐಸಿಯು (ICU) ನಲ್ಲಿ ಈ ಟೆಕ್ನಾಲಜಿ ಬಳಕೆ ಮಾಡಲಾಗುತ್ತಿದ್ದು, ಒಂದೇ ರೂಮಿನಲ್ಲಿ ಕುಳಿತು ಹಿರಿಯ ವೈದ್ಯರು ರೋಗಿಗೆ ಸಂಬಂಧಿಸಿದ ಚಿಕಿತ್ಸೆ ನೀಡಬಹುದಾಗಿದೆ. ಜೊತೆಗೆ ಒಂದೇ ರೂಂನಲ್ಲಿ ಕುಳಿತು ಇಡೀ ಐಸಿಯುನಲ್ಲಿರುವ ರೋಗಿಗಳ ಸ್ಥಿತಿಗತಿಗಳನ್ನ ತಿಳಿಯಬಹುದಾಗಿದೆ. ಅಲ್ಲದೇ ಕೆಲವೊಮ್ಮೆ ಇತರರಿಂದ ಐಸಿಯುನಲ್ಲಿರುವ ರೋಗಿಗಳು ಇನ್ಪೆಕ್ಷನ್ ಗೆ ತುತ್ತಾಗುವ ಸಾಧ್ಯತೆಯನ್ನ ತಪ್ಪಿಸಬಹುದಾಗಿದ್ದು, ಇತರ ಎಕ್ಸ್ ಪರ್ಟ್ ವೈದ್ಯರಿಂದ ಕುಳಿತಲ್ಲೇ ಚಿಕಿತ್ಸೆ ನೀಡಲು ಸಹಕಾರಿಯಾಗಿದೆ ಎಂದು ರಾಜೀವ್ ಗಾಂಧಿ ಆಸ್ಪತ್ರೆಯ ನಿರ್ದೇಶಕ ಡಾ.ಸಿ.ಎನ್. ನಾಗರಾಜ ಮಾಹಿತಿ ನಿಡಿದ್ದಾರೆ. ಇದನ್ನೂ ಓದಿ: ಹಿಂದಿ ಹೇರಿಕೆ ವಿರೋಧಿಸಿ ಬೆಂಕಿ ಹಚ್ಚಿಕೊಂಡು ತಮಿಳುನಾಡು ರೈತ ಸಾವು

    ವಿಶೇಷತೆಗಳೇನು?
    ಇನ್ಫೆಕ್ಷನ್ ರೇಟ್ ಕಡಿಮೆಯಾಗಲಿದೆ, ವೈದ್ಯರಿಗೆ ಶಸ್ತ್ರಚಿಕಿತ್ಸೆ ವೇಳೆ ವೇಳೆ ರೋಬೋಟೆಕ್ ಟೆಕ್ನಾಲಜಿ ತುಂಬಾ ನೆರವಾಗಲಿದೆ. ಬಹುಬೇಗ ಸರ್ಜರಿ ಮಾಡಲು ರೋಬೊಟೆಕ್ ಟೆಕ್ನಾಲಜಿ, ಸಹಾಯಕಾರಿಯಾಗಲಿದೆ. ತುರ್ತು ಚಿಕಿತ್ಸೆ ವೇಳೆ ಹೆಚ್ಚಿನ ಅನುಕೂಲ. ರೋಗಿಯ ಸ್ಥಿತಿಗತಿ ಬಗ್ಗೆ ರೋಬೊ ಥಟ್ಟಂತ ಮಾಹಿತಿ ಕೊಡುತ್ತೆ. ನೇರ ಸಂಪರ್ಕ ಇಲ್ಲದೆ ರೋಗಿಯ ಜೊತೆ ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆಯಲು ಸಾಧ್ಯವಾಗಿದೆ.

    ಮೊದಲ ಹಂತದಲ್ಲಿ ಒಟ್ಟು 28 ಬೆಡ್‌ಗಳಿಗೆ ರೋಬೋಟೆಕ್ ಡಾಕ್ಟರ್ ವ್ಯವಸ್ಥೆ ಮಾಡಲಾಗಿದೆ. ಇನ್ನೊಂದು ವಾರದೊಳಗೆ ಈ ಸೇವೆ ಉದ್ಘಾಟನೆಯಾಗಲಿದ್ದು, ಬಳಿಕ ಸಾರ್ವಜನಿಕರ ಸೇವೆಗೆ ಮುಕ್ತವಾಗಲಿದೆ ಎಂದು ಡಾ.ಸಿ.ಎನ್ ನಾಗರಾಜ್ ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]