Tag: government exam

  • ಸರ್ಕಾರಿ ಹುದ್ದೆಗಳ ಪರೀಕ್ಷೆ ವೇಳೆ ಅಸ್ಸಾಂನ 27 ಜಿಲ್ಲೆಗಳಲ್ಲಿ ಇಂಟರ್ನೆಟ್‌ ಸ್ಥಗಿತ

    ಸರ್ಕಾರಿ ಹುದ್ದೆಗಳ ಪರೀಕ್ಷೆ ವೇಳೆ ಅಸ್ಸಾಂನ 27 ಜಿಲ್ಲೆಗಳಲ್ಲಿ ಇಂಟರ್ನೆಟ್‌ ಸ್ಥಗಿತ

    ಗುವಾಹಟಿ: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ನೇಮಕಾತಿಗಾಗಿ ಲಿಖಿತ ಪರೀಕ್ಷೆಯಲ್ಲಿ ಸಂಭವನೀಯ ದುಷ್ಕೃತ್ಯಗಳನ್ನು ತಡೆಗಟ್ಟಲು ಅಸ್ಸಾಂನ 27 ಜಿಲ್ಲೆಗಳಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಭಾನುವಾರ ನಾಲ್ಕು ಗಂಟೆಗಳ ಕಾಲ ಸ್ಥಗಿತಗೊಳಿಸಲಾಯಿತು.

    ಆಡಳಿತದ ಆದೇಶದ ವಿರುದ್ಧ ಗೌಹಾಟಿ ಹೈಕೋರ್ಟ್‌ಗೆ ರಿಟ್‌ ಅರ್ಜಿ ಸಲ್ಲಿಸಿತ್ತು. ಆದರೆ ಆದೇಶಕ್ಕೆ ತಡೆ ನೀಡಲು ಹೈಕೋರ್ಟ್‌ ನಿರಾಕರಿಸಿತು. ಪರೀಕ್ಷಾ ಸಮಯದಲ್ಲಿ ಇಂಟರ್ನೆಟ್ ಸೇವೆಗಳನ್ನು ಅಧಿಕಾರಿಗಳು ಸ್ಥಗಿತಗೊಳಿಸಿದರು. ಇದನ್ನೂ ಓದಿ: 3,700 ಕೆ.ಜಿ ಸ್ಫೋಟಕ, 10 ಸೆಕೆಂಡ್- 1,200 ಕೋಟಿಯ ದೈತ್ಯ ಅವಳಿ ಕಟ್ಟಡ ಉಡೀಸ್

    EXAM

    ಪರೀಕ್ಷೆಗಳು ನಡೆಯುತ್ತಿರುವ ಎಲ್ಲಾ 27 ಜಿಲ್ಲೆಗಳಲ್ಲಿ ಸೆಕ್ಷನ್ 144 ರ ಅಡಿಯಲ್ಲಿ ನಿಷೇಧಾಜ್ಞೆ ಸಹ ವಿಧಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಸರ್ಕಾರದ ವಿವಿಧ ಇಲಾಖೆಗಳ (ಆಗಸ್ಟ್ 21, 28 ಮತ್ತು ಸೆಪ್ಟೆಂಬರ್ 11) ಸುಮಾರು 30,000 ಗ್ರೇಡ್-III ಮತ್ತು -IV ಹುದ್ದೆಗಳ ನೇಮಕಾತಿಗೆ 14.30 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಹಾಜರಾಗುವ ನಿರೀಕ್ಷೆಯಿದೆ. ಇದನ್ನೂ ಓದಿ: ರಾಷ್ಟ್ರಕ್ಕಾಗಿ ಖಾದಿ, ಆದ್ರೆ ರಾಷ್ಟ್ರಧ್ವಜಕ್ಕೆ ಚೈನೀಸ್ ಪಾಲಿಸ್ಟರ್ : ಮೋದಿ ವಿರುದ್ಧ ರಾಹುಲ್ ಟೀಕೆ

    ಗ್ರೇಡ್-IV ಪರೀಕ್ಷೆಗಳು ಆಗಸ್ಟ್ 21 ರಂದು ಎರಡು ಪಾಳಿಗಳಲ್ಲಿ ನಡೆಯಿತು. ಗ್ರೇಡ್-III ಪರೀಕ್ಷೆಗಳು ಇಂದು ನಡೆಯುತ್ತಿವೆ. ಗ್ರೇಡ್-III ಅಡಿಯಲ್ಲಿ ಹೆಚ್ಚಿನ ಹುದ್ದೆಗಳಿಗೆ ಪರೀಕ್ಷೆಗಳನ್ನು ಸೆಪ್ಟೆಂಬರ್ 11 ರಂದು ನಿಗದಿಪಡಿಸಲಾಗಿದೆ. ಎಲ್ಲಾ ಪರೀಕ್ಷೆಗಳನ್ನು ಅಸ್ಸಾಂನ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್‌ ನಡೆಸುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಸರ್ಕಾರಿ ನೇಮಕಾತಿ ಪರೀಕ್ಷೆಗಳ ಅಕ್ರಮ ತಡೆಯಲು ಟಫ್ ರೂಲ್ಸ್!

    ಸರ್ಕಾರಿ ನೇಮಕಾತಿ ಪರೀಕ್ಷೆಗಳ ಅಕ್ರಮ ತಡೆಯಲು ಟಫ್ ರೂಲ್ಸ್!

    ಬೆಂಗಳೂರು: ಸರ್ಕಾರಿ ನೇಮಕಾತಿ ಪರೀಕ್ಷೆಗಳ ವೇಳೆ ನಡೆಯುವ ಅಕ್ರಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಟಫ್ ರೂಲ್ಸ್ ಜಾರಿಗೆ ತರಲು ರಾಜ್ಯ ಸರ್ಕಾರ ಮುಂದಾಗಿದೆ.

    ರಾಜ್ಯದಲ್ಲಿ ಎಲ್ಲ ಸರ್ಕಾರಿ ನೇಮಕಾತಿ ಪರೀಕ್ಷೆಗಳ ವೇಳೆ ಇನ್ಮುಂದೆ ಜಾಮರ್ ಅಳವಡಿಸಲು ಸರ್ಕಾರ ಚಿಂತನೆ ನಡೆಸಿದೆ. ಪಿಎಸ್‌ಐ ಪರೀಕ್ಷೆಯಲ್ಲಿ ಅಕ್ರಮ ಕರ್ಮಕಾಂಡ ಹಿನ್ನೆಲೆಯಲ್ಲಿ ಜಾಮರ್ ಅಳವಡಿಕೆಗೆ ಸರ್ಕಾರ ಮುಂದಾಗಿದೆ. ಇದನ್ನೂ ಓದಿ: ಭಾರೀ ಮಳೆಗೆ ಮುಳುಗಿದ ರಾಜಧಾನಿ – ಪೂಲ್‌ನಲ್ಲಿ ಈಜಾಡಲು ಬನ್ನಿ ಬೊಮ್ಮಾಯಿಯವರೇ ಎಂದ ಯುವಕ

    VIDHAN SHOUDHA

    ಎಲ್ಲ ಪರೀಕ್ಷಾ ಕೇಂದ್ರಗಳಲ್ಲೂ ಜಾಮರ್ ಅಳವಡಿಕೆ ಸಂಬಂಧ ಸರ್ಕಾರ ಮಟ್ಟದಲ್ಲಿ ಮಹತ್ವದ ಚರ್ಚೆ ನಡೆದಿದೆ. ಯಾವುದೇ ಪರೀಕ್ಷೆ ನಡೆದರೂ ಜಾಮರ್ ಕಡ್ಡಾಯ ಮಾಡುವ ಬಗ್ಗೆ ಪ್ಲ್ಯಾನ್‌ ಮಾಡುತ್ತಿದೆ. ಜಾಮರ್ ಅಳವಡಿಕೆ ಸಂಬಂಧ ಜೂನ್ ವಾರದಲ್ಲಿ ವರದಿ ನೀಡುವಂತೆ ಹಿರಿಯ ಅಧಿಕಾರಿಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಸೂಚಿಸಿದ್ದಾರೆ.

    ಜಾಮರ್ ಜೊತೆಗೆ ವಿಚಕ್ಷಣಾ ದಳವನ್ನೂ ಹೆಚ್ಚಳ ಮಾಡುವ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದೆ. ಸಾಲು ಸಾಲು ಅಕ್ರಮಗಳಿಂದ ಬಿಜೆಪಿ ಸರ್ಕಾರಕ್ಕೆ ಕಪ್ಪುಚುಕ್ಕೆಯಾಗಿದ್ದು, ಪಿಎಸ್‌ಐ ನೇಮಕಾತಿ ಅಕ್ರಮಕ್ಕೆ ಬಿಜೆಪಿ ಹೈಕಮಾಂಡ್ ಕೂಡ ಕೆಂಡಕಾರಿತ್ತು. ಪರೀಕ್ಷಾ ವ್ಯವಸ್ಥೆ ಸುಧಾರಿಸಲು ಮುಂದಾಗುವಂತೆ ಆರ್‌ಎಸ್‌ಎಸ್ ಕೂಡ ತಾಕೀತು ಮಾಡಿತ್ತು. ಇದನ್ನೂ ಓದಿ: ಬೆಂಗಳೂರಿನಲ್ಲಿ ರಣಮಳೆಗೆ ಇಬ್ಬರು ಕಾರ್ಮಿಕರು ಬಲಿ