Tag: Government Employees

  • ಉತ್ತರ ಪ್ರದೇಶದ ಸರ್ಕಾರಿ ನೌಕರರು, ವಕೀಲರಿಗೆ 1 ರೂ.ಗೆ ಸಿಗಲಿದೆ ಮನೆ

    ಉತ್ತರ ಪ್ರದೇಶದ ಸರ್ಕಾರಿ ನೌಕರರು, ವಕೀಲರಿಗೆ 1 ರೂ.ಗೆ ಸಿಗಲಿದೆ ಮನೆ

    ಲಕ್ನೋ: ಸರ್ಕಾರಿ ನೌಕರರು ಹಾಗೂ ವಕೀಲರಿಗೆ 1 ರೂ.ನಲ್ಲಿ ಮನೆಯನ್ನು ಒದಗಿಸಲು ಉತ್ತರ ಪ್ರದೇಶ ಸರ್ಕಾರ ಮುಂದಾಗಿದೆ.

    2022ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೂ ಮುನ್ನ ಉತ್ತರ ಪ್ರದೇಶ ಸರ್ಕಾರ ರಾಜ್ಯದ ಜನತೆಗೆ ಸಿಹಿ ಸುದ್ದಿಯನ್ನು ನೀಡುತ್ತಿದ್ದು, ಈಗ ಸರ್ಕಾರಿ ನೌಕರರು ಹಾಗೂ ವಕೀಲರ ಸರದಿ ಬಂದಿದೆ.

    ಯೋಗಿ ಆದಿತ್ಯನಾಥ್ ಸರ್ಕಾರದ ಹೊಸ ಯೋಜನೆಯಡಿ, ಗ್ರೂಪ್ ಸಿ ಮತ್ತು ಡಿ ವರ್ಗದ ಸರ್ಕಾರಿ ನೌಕರರು ಮತ್ತು ವಕೀಲರಿಗೆ ಸಹಾಯಧನದ ಮೇಲೆ ಮನೆಗಳನ್ನು ನೀಡಲು ಮುಂದಾಗಿದೆ. ಮನೆ ಖರೀದಿಸುವ ಮಂದಿ ಭೂಮಿ ಶುಲ್ಕವಾಗಿ 1 ರೂಪಾಯಿ ನೀಡಬೇಕಾಗುತ್ತದೆ. ಇದನ್ನೂ ಓದಿ: ನಿರಾಣಿ ಸಿಎಂ ಆಗುವ ಅವಕಾಶವಿದೆ ಅನ್ನೋ ಹೇಳಿಕೆ ತಪ್ಪಾಗಿ ಅರ್ಥೈಸಲಾಗಿದೆ: ವಿಜಯೇಂದ್ರ

    ಇನ್ನೂ ಈ ಯೋಜನೆ ಅಧಿಕೃತವಾಗಿ ಜಾರಿಯಾಗಿಲ್ಲ. 1 ರೂ.ಗೆ ಯಾವ ರೀತಿ ಮನೆಗಳನ್ನು ನೀಡಬಹುದು ಎಂಬುದರ ಬಗ್ಗೆ ಹಿರಿಯ ಅಧಿಕಾರಿಗಳು ಕರಡನ್ನು ತಯಾರಿ ಮಾಡಿದ್ದಾರೆ. ಈ ಕರಡಿಗೆ ಉನ್ನತ ಮಟ್ಟದಲ್ಲಿ ಅನುಮೋದನೆ ಸಿಕ್ಕಿದ ಬಳಿಕ ಕ್ಯಾಬಿನೆಟ್‍ನಲ್ಲಿ ಒಪ್ಪಿಗೆ ಪಡೆದು ಯೋಜನೆ ಜಾರಿಯಾಗಲಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಈ ಯೋಜನೆಯಲ್ಲಿ ಮನೆ ಖರೀದಿಸುವ ಮಂದಿಗೆ ಹಲವು ಷರತ್ತುಗಳನ್ನು ವಿಧಿಸಲಾಗುತ್ತದೆ. ಇದರಲ್ಲಿ ಮುಖ್ಯವಾಗಿ ಖರೀದಿಸಿದ ಮನೆಯನ್ನು 10 ವರ್ಷಗಳವರೆಗೆ ಮಾರಾಟ ಮಾಡಬಾರದು ಎಂಬ ಷರತ್ತನ್ನು ಇರಲಿದೆ ಎನ್ನಲಾಗುತ್ತದೆ.

    ಗ್ರೂಪ್ ಸಿ ಮತ್ತು ಡಿ ವರ್ಗದ ಸರ್ಕಾರಿ ನೌಕರರ ಸಂಬಳ ಕಡಿಮೆಯಿದೆ. ಹಲವರ ಬಳಿ ಮನೆ ಇಲ್ಲದ ಹಿನ್ನೆಲೆಯಲ್ಲಿ ಸರ್ಕಾರ ಚುನಾವಣಾ ಸಮಯದಲ್ಲೇ ಈ ಮಹತ್ವದ ಯೋಜನೆಯನ್ನು ಜಾರಿಗೊಳಿಸಲು ಮುಂದಾಗಿದೆ. ಇದನ್ನೂ ಓದಿ: ಓಮಿಕ್ರಾನ್ ಭೀತಿ – ಭಾರತದ ಅಂತರರಾಷ್ಟ್ರೀಯ ವಿಮಾನ ಪುನರಾರಂಭ ಮುಂದೂಡಿಕೆ

    ಈ ಯೋಜನೆ ಕುರಿತು ಅಧಿಕಾರಿ ಮತ್ತು ಸರ್ಕಾರದ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಶೀಘ್ರವೇ ಕ್ಯಾಬಿನೆಟ್‍ನಲ್ಲಿ ಯೋಜನೆಗೆ ಒಪ್ಪಿಗೆ ಸಿಗುವ ಸಾಧ್ಯತೆಯಿದೆ.

     

  • ತಂದೆ-ತಾಯಿ, ಅತ್ತೆ-ಮಾವರೊಂದಿಗೆ ಹೊಸ ವರ್ಷ ಆಚರಿಸಲು ನೌಕರರಿಗೆ 4 ದಿನ ರಜೆ- ಅಸ್ಸಾಂ ನಿರ್ಧಾರ

    ತಂದೆ-ತಾಯಿ, ಅತ್ತೆ-ಮಾವರೊಂದಿಗೆ ಹೊಸ ವರ್ಷ ಆಚರಿಸಲು ನೌಕರರಿಗೆ 4 ದಿನ ರಜೆ- ಅಸ್ಸಾಂ ನಿರ್ಧಾರ

    ದಿಸ್ಪುರ: ಹೊಸ ವರ್ಷದ ಸಂದರ್ಭದಲ್ಲಿ ತಂದೆ-ತಾಯಿ ಹಾಗೂ ಅತ್ತೆ-ಮಾವರನ್ನು ಭೇಟಿಯಾಗಲು ನೌಕರರಿಗೆ ನಾಲ್ಕು ದಿನಗಳ ರಜೆ ನೀಡಲು ಅಸ್ಸಾಂ ಸರ್ಕಾರ ನಿರ್ಧರಿಸಿದೆ.

    2022ರ ಜನವರಿ ತಿಂಗಳಲ್ಲಿ 6-9ನೇ ತಾರೀಖಿನವರೆಗೆ ಸರ್ಕಾರಿ ನೌಕರರಿಗೆ ರಜೆ ನೀಡಲಾಗುವುದು. ತಂದೆ-ತಾಯಿ ಅಥವಾ ಅತ್ತೆ-ಮಾವ ಬದುಕಿಲ್ಲದಿದ್ದರೆ ಅಂತಹ ನೌಕರರಿಗೆ ಈ ವಿಶೇಷ ರಜೆ ಸಿಗುವುದಿಲ್ಲ ಎಂದು ಮುಖ್ಯಮಂತ್ರಿ ಹಿಮಂತ್‌ ಬಿಸ್ವಾ ಶರ್ಮಾ ನೇತೃತ್ವದ ಸಂಪುಟ ನಿರ್ಧಾರ ಕೈಗೊಂಡಿದೆ.  ಇದನ್ನೂ ಓದಿ: ವಿಶ್ವ ವಿಖ್ಯಾತ ಜೋಗ ಜಲಪಾತವನ್ನು ವೀಕ್ಷಿಸಿದ ರಾಜ್ಯಪಾಲ ಗೆಹ್ಲೋಟ್‌

    ಪಶ್ಚಿಮ ಅಸ್ಸಾಂನ ಬೊಂಗೈಗಾವ್‌ನಲ್ಲಿ ಮೊದಲ ಬಾರಿಗೆ ಸಚಿವ ಸಂಪುಟ ಸಭೆ ನಡೆಯಿತು. ರಾಜ್ಯದಲ್ಲಿ ನಿಯೋಜನೆಗೊಂಡಿರುವ ಸಚಿವರು, ಐಎಎಸ್‌ ಮತ್ತು ಐಪಿಎಸ್‌ ಅಧಿಕಾರಿಗಳು ಸಹ ಈ ರಜೆಗೆ ಅರ್ಹರಾಗಿರುತ್ತಾರೆ. ಆದರೆ ಪೊಲೀಸ್‌ ವರಿಷ್ಠಾಧಿಕಾರಿ ಶ್ರೇಣಿಯವರೆಗಿನ ಪೊಲೀಸ್‌ ಅಧಿಕಾರಿಗಳು ಸೇರಿದಂತೆ ಕ್ಷೇತ್ರ ಸೇವಕರು ಈ ರಜೆಯನ್ನು ಪಡೆಯುವಂತಿಲ್ಲ ಎಂದು ಸಂಪುಟ ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಸ್ವೀಡನ್ ಪ್ರಥಮ ಮಹಿಳಾ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿ ಒಂದೇ ದಿನಕ್ಕೆ ರಾಜೀನಾಮೆ ನೀಡಿದ ಆ್ಯಂಡರ್ಸನ್‌

    ಸರ್ಕಾರಿ ನೌಕರರು ತಮ್ಮ ಕುಟುಂಬದ ಸದಸ್ಯರೊಂದಿಗೆ ಹೊಸ ವರ್ಷ ಆಚರಿಸಲು ರಜೆ ನೀಡಲು ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

  • ಸಾರಿಗೆ ನೌಕರರ ವೇತನ ವಿಳಂಬ – ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಹೆಚ್‍ಡಿಕೆ

    ಸಾರಿಗೆ ನೌಕರರ ವೇತನ ವಿಳಂಬ – ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಹೆಚ್‍ಡಿಕೆ

    – ಕೂಡಲೇ ವೇತನ ಬಿಡುಗಡೆ ಮಾಡುವಂತೆ ಆಗ್ರಹ

    ಬೆಂಗಳೂರು: ರಾಜ್ಯ ಸಾರಿಗೆ ನೌಕರಿಗೆ ವೇತನ ವಿಳಂಬ ಮಾಡುತ್ತಿರುವ ಸರ್ಕಾರದ ನಡೆಯನ್ನು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕಟುವಾಗಿ ಟೀಕಿಸಿದ್ದಾರೆ.

    ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಅವರು, ಕೂಡಲೇ ಸಾರಿಗೆ ನೌಕರರಿಗೆ ವೇತನ ಪಾವತಿ ಮಾಡಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರನ್ನು ಒತ್ತಾಯ ಮಾಡಿದ್ದಾರೆ.

    ಹೆಚ್‍ಡಿಕೆ ಹೇಳಿದ್ದೇನು?
    ಕೊರೊನಾ ಮಹಾಮಾರಿಯಿಂದ ತತ್ತರಿಸಿರುವ KSRTC ಮತ್ತು BMTC ನೌಕರರ ಮೇಲೆ ಸರ್ಕಾರಕ್ಕೆ ಅನಾದರ ಏಕೆ? ಈ ನೌಕರರಿಗೆ ಆಗಸ್ಟ್ ತಿಂಗಳಲ್ಲಿ ಅರ್ಧ ಸಂಬಳವೇ ಆಗಿದ್ದು, ಸೆಪ್ಟೆಂಬರ್ ತಿಂಗಳ ಪೂರ್ಣ ಸಂಬಳ ಆಗಿಲ್ಲ ಎನ್ನುವ ಮಾಹಿತಿ ನನಗೆ ಬಂದಿದೆ. ಇದನ್ನೂ ಓದಿ:  ಪಕ್ಷಿಗಳಿಗೆ ಪುನರ್ಜನ್ಮ ನೀಡುತ್ತಿರುವ ರಾಯಚೂರಿನ ಪಕ್ಷಿಪ್ರೇಮಿ ಸಲ್ಲಾವುದ್ದೀನ್

    ಮಕ್ಕಳು ತಪ್ಪು ಮಾಡುವುದು ಸಹಜ. ತಂದೆ ತಾಯಿ ಸ್ಥಾನದಲ್ಲಿರುವ ಸರ್ಕಾರ ಕ್ಷಮಿಸಿ ಔದಾರ್ಯ ತೋರಿಸುವ ದೊಡ್ಡ ಮನಸ್ಸು ಮಾಡಬೇಕು. ಸಾರಿಗೆ ನೌಕರರ ಮೇಲೆ ಹಗೆತನ ಸಾಧಿಸುವುದು ಬೇಡ. ಜೀವದ ಹಂಗು ತೊರೆದು, ಮಹಾಮಾರಿಯನ್ನು ಲೆಕ್ಕಿಸದೆ ಅವರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

    ಸಾರಿಗೆ ನೌಕರರ ವೇತನ ವಿಳಂಬ ಮಾಡುವುದನ್ನು ಒಪ್ಪಲು ಸಾಧ್ಯವಿಲ್ಲ. ತಕ್ಷಣವೇ ವೇತನ ಬಿಡುಗಡೆ ಮಾಡಬೇಕು. ಪ್ರತಿ ತಿಂಗಳು ಸಕಾಲಕ್ಕೆ ವೇತನ ಪಾವತಿಸಲು ಮುಖ್ಯಮಂತ್ರಿಗಳು ಹಾಗೂ ಸಾರಿಗೆ ಸಚಿವರು ಕೂಡಲೇ ಕ್ರಮ ವಹಿಸಬೇಕು ಎಂದು ನಾನು ಒತ್ತಾಯ ಮಾಡುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ:  ಶಾರೂಖ್, ಗೌರಿ ಖಾನ್ ಬೆಂಬಲಕ್ಕೆ ನಿಂತ ಸುಸ್ಸಾನೆ ಖಾನ್, ಮಿಕಾ ಸಿಂಗ್!

  • ರಾಜೀನಾಮೆಗೂ ಮುನ್ನ ಸರ್ಕಾರಿ ನೌಕರರಿಗೆ ಯಡಿಯೂರಪ್ಪ ಬಂಪರ್ ಗಿಫ್ಟ್

    ರಾಜೀನಾಮೆಗೂ ಮುನ್ನ ಸರ್ಕಾರಿ ನೌಕರರಿಗೆ ಯಡಿಯೂರಪ್ಪ ಬಂಪರ್ ಗಿಫ್ಟ್

    ಬೆಂಗಳೂರು: ರಾಜೀನಾಮೆಗೂ ಮುನ್ನ ಸರ್ಕಾರಿ ನೌಕರರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಿಹಿ ಸುದ್ದಿ ಕೊಟ್ಟಿದ್ದು, ತುಟ್ಟಿ ಭತ್ಯೆ ಹೆಚ್ಚಳ ಮಾಡಿದ್ದಾರೆ.

    ರಾಜ್ಯ ಸರ್ಕಾರಿ ನೌಕರರಿಗೆ ಬಂಪರ್ ಕೊಡುಗೆ ನೀಡಿರುವ ಸಿಎಂ ಯಡಿಯೂರಪ್ಪ, ಸರ್ಕಾರಿ ನೌಕರರ ತುಟ್ಟಿ ಭತ್ಯೆಯನ್ನು ಶೇ.11.25 ರಿಂದ ಶೇ.21.50ಕ್ಕೆ ಹೆಚ್ಚಿಸಲು ಅನುಮತಿ ನೀಡಿದ್ದರು. ಅಂದರೆ ಶೇ.10ರಷ್ಟು ತುಟ್ಟಿ ಭತ್ಯೆಯನ್ನು ಹೆಚ್ಚಳ ಮಾಡಲಾಗಿದೆ. ಜುಲೈ 1ರಿಂದ ಅನ್ವಯವಾಗುವಂತೆ ಆದೇಶ ಹೊರಡಿಸಲಾಗಿದೆ.

    ತಾವು ರಾಜೀನಾಮೆ ಕೊಡುವ ಮುನ್ನವೇ ತುಟ್ಟಿಭತ್ಯೆ ಹೆಚ್ಚಳ ಮಾಡಿ ಆದೇಶ ಹೊರಡಿಸಲು ಸಿಎಂ ಯಡಿಯೂರಪ್ಪ ಹೇಳಿದ್ದರು. ಹೀಗಾಗಿ ಇಂದು ಆದೇಶಿಸಲಾಗಿದೆ. ವಾರದ ಹಿಂದೆ ತುಟ್ಟಿಭತ್ಯೆ ಪರಿಷ್ಕರಣೆಗೆ ಸಿಎಂ ಯಡಿಯೂರಪ್ಪ ಸಹಿ ಹಾಕಿದ್ದರು. ತಮ್ಮ ಭಾಷಣದಲ್ಲೂ ಸರ್ಕಾರಿ ನೌಕರರ ಬಗ್ಗೆ ಮಾತನಾಡಿ, ಸಿಎಂ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಇದೀಗ ತುಟ್ಟಿ ಭತ್ಯೆ ಹೆಚ್ಚಳ ಆದೇಶ ಹೊರಬಿದ್ದಿದೆ.

  • ರಾಜ್ಯ ಸರ್ಕಾರದಿಂದ ಸರ್ಕಾರಿ ನೌಕರರಿಗೆ ಹೊಸ ರೂಲ್ಸ್

    ರಾಜ್ಯ ಸರ್ಕಾರದಿಂದ ಸರ್ಕಾರಿ ನೌಕರರಿಗೆ ಹೊಸ ರೂಲ್ಸ್

    ಬೆಂಗಳೂರು: ರಾಜ್ಯದಲ್ಲಿ ಹೆಮ್ಮಾರಿ ಕೊರೊನಾ ವೈರಸ್ ನಿಯಂತ್ರಣಕ್ಕೆ ಸಿಗದ ಹಿನ್ನೆಲೆ ರಾಜ್ಯ ಸರ್ಕಾರವು ಸರ್ಕಾರಿ ನೌಕರರಿಗೆ ಹೊಸ ನಿಯಮಗಳನ್ನು ಜಾರಿಗೆ ತಂದಿದೆ.

    ಯಾವಾಗ ಕೆಲಸಕ್ಕೆ ಹೋಗಬೇಕು? ಯಾವಾಗ ಹೋಗಬಾರದು? ಸರ್ಕಾರಿ ನೌಕರರು ವಾರಕ್ಕೆ ಎಷ್ಟು ದಿನ ಕೆಲಸ ಮಾಡಬೇಕು ಎಂಬ ನಿಯಮಗಳನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ.

    ನಿಯಮಗಳೇನು?:
    ಸರ್ಕಾರಿ ನೌಕರರಿಗೆ ಇನ್ಮುಂದೆ ಐಟಿ-ಬಿಟಿ ಉದ್ಯೋಗಿಗಳ ರೀತಿ ಕೆಲಸ ನೀಡಲಾಗುತ್ತದೆ. ಅಂದ್ರೆ ವಾರಕ್ಕೆ 6 ದಿನ ಕೆಲಸ ಮಾಡಂಗಿಲ್ಲ, ವಾರಕ್ಕೆ ಬರೀ 5 ದಿನ ಮಾತ್ರ ಕೆಲಸ ಇರುತ್ತದೆ. ಸರ್ಕಾರಿ ನೌಕರರಿಗೆ ಶನಿವಾರ, ಭಾನುವಾರ ರಜೆ ಎರಡು ದಿನ ರಜೆ ಇರಲಿದೆ. ಜುಲೈ 10ರಿಂದ ತಿಂಗಳ ನಾಲ್ಕೂ ಶನಿವಾರಗಳೂ ಸರ್ಕಾರಿ ರಜೆ ಸಿಗಲಿದೆ. ಎಲ್ಲ ಶನಿವಾರ ರಜೆಯು ಸದ್ಯಕ್ಕೆ ಜುಲೈ ತಿಂಗಳಲ್ಲಿ ಅನ್ವಯವಾಲಿದೆ.

    ಸರ್ಕಾರಿ ನೌಕರರು ಆಯಾ ಏರಿಯಾಗಳಿಗೆ ಅನುಗುಣವಾಗಿ ಒಂದು ದಿನ ಬಿಟ್ಟು ಒಂದು ದಿನ ಕೆಲಸ ಮಾಡಬೇಕು. ಈ ನಿರ್ಧಾರವನ್ನು ಆಯಾ ಸ್ಥಳೀಯ ಕಚೇರಿಗಳ ಮುಖ್ಯಸ್ಥರೇ ತೆಗೆದುಕೊಳ್ಳಬಹುದು. ವಾರದ 5 ದಿನಗಳು ಕಚೇರಿ ಇರಬೇಕು. ಆದರೆ ನೌಕರರಿಗೆ ಒಂದು ದಿನ ಬಿಟ್ಟು ಒಂದು ದಿನ ಕೆಲಸ ನೀಡಬೇಕು.

    ವಿಶೇಷ ಸೂಚನೆ ನೀಡಿರುವ ರಾಜ್ಯ ಸರ್ಕಾರವು, ವಾರಕ್ಕೆ 2 ದಿನ ರಜೆ ಎಲ್ಲ ಸರ್ಕಾರಿ ಕಚೇರಿಗಳಿಗೆ ಅನ್ವಯವಾಗಲ್ಲ. ಸೋಂಕು ಹೆಚ್ಚಾದ ಪ್ರದೇಶಗಳಲ್ಲಿ ಆಯಾ ಸ್ಥಳೀಯ ಮುಖ್ಯಸ್ಥರು ಕ್ರಮ ಕೈಗೊಳ್ಳಬಹುದು. ದಿನಕ್ಕೆ ಶೇ.50ರಷ್ಟು ನೌಕರರು ಮಾತ್ರ ಕಾರ್ಯ ನಿರ್ವಹಿಸಬೇಕು. ಇವತ್ತು ಬಂದವರು, ನಾಳೆ ಬರುವಂತಿಲ್ಲ. ಒಂದು ದಿನ ಗ್ಯಾಪ್ ಮಾದರಿಯಲ್ಲಿ ಕೆಲಸ ನಿರ್ಹಹಿಸಬೇಕು ಎಂದು ತಿಳಿಸಲಾಗಿದೆ.

  • ಸರ್ಕಾರಿ ನೌಕರರಿಗೆ ವಾರದಲ್ಲಿ 5 ದಿನ ಕೆಲಸ

    ಸರ್ಕಾರಿ ನೌಕರರಿಗೆ ವಾರದಲ್ಲಿ 5 ದಿನ ಕೆಲಸ

    ಬೆಂಗಳೂರು: ಕೊರೊನಾ ತಡೆ ಹಿನ್ನೆಲೆಯಲ್ಲಿ ಸರ್ಕಾರಿ ನೌಕರರಿಗೆ ವಾರದಲ್ಲಿ 5 ದಿನ ಕೆಲಸ ಮಾಡಿ ಸರ್ಕಾರ ಅದೇಶಿಸಿದೆ.

    ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಮುಂದುವರಿಯತ್ತಿದೆ. ಆದ್ರೆ ಸರ್ಕಾರ ಲಾಕ್‍ಡೌನ್ ಮಾಡಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದು, ಕೊರೊನಾ ತಡೆಗಾಗಿ ಇತರೆ ಮಾರ್ಗಗಳನ್ನು ಅನುಸರಿಸಲು ಮುಂದಾಗುತ್ತಿದ್ದು, ಈ ಸಂಬಂಧ ಸಿಎಂ ಸಭೆಗಳ ಸಭೆ ಮಾಡುತ್ತಿದ್ದಾರೆ.

    ಕೊರೊನಾ ತಡೆಗಾಗಿ ಶನಿವಾರ ಮತ್ತು ಭಾನುವಾರ ಎರಡೂ ದಿನ ಕರ್ಫ್ಯೂ ವಿಧಿಸಲು ಸರ್ಕಾರ ತೀರ್ಮಾನಿಸಿದೆ. ಹಾಗೆಯೇ ನೈಟ್ ಕರ್ಫ್ಯೂ ಅವಧಿಯನ್ನು ವಿಸ್ತರಿಸಲು ಸರ್ಕಾರ ಚಿಂತನೆ ನಡೆಸಿದೆ. ಸದ್ಯ ರಾತ್ರಿ 9 ರಿಂದ ಬೆಳಗ್ಗೆ 5 ಗಂಟೆವರೆಗ ನೈಟ್ ಕರ್ಫ್ಯೂ  ವಿಧಿಸಲಾಗಿದೆ. ಮುಂದಿನ ಭಾನುವಾರದಿಂದ ಅಂದ್ರೆ ಜುಲೈ 5ರಿಂದ ವೀಕೆಂಡ್ ಕರ್ಫ್ಯೂಗೆ ಸರ್ಕಾರ ಮೊರೆ ಹೋಗಲಿದೆ.

  • ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್

    ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್

    ಬೆಂಗಳೂರು: ಕೊರೊನಾ ವೈರಸ್ ಲಾಕ್‍ಡೌನ್ ಹಿನ್ನೆಲೆ ಸರ್ಕಾರಿ ನೌಕರರ ಸಂಬಳ ಕಡಿತ ಮಾಡುವುದು, ತಡೆ ಹಿಡಿಯುವ ಕುರಿತು ಸಾಕಷ್ಟು ಚರ್ಚೆ ನಡೆದಿತ್ತು. ಇದೆಲ್ಲದಕ್ಕೂ ಇದೀಗ ತೆರೆ ಬಿದ್ದಿದ್ದು, ಏಪ್ರಿಲ್ ತಿಂಗಳ ಸಂಬಳ ನೀಡಲು ಸರ್ಕಾರ ನಿರ್ಧರಿಸಿದೆ. ಈ ಮೂಲಕ ನೌಕರರ ಪರ ಯಡಿಯೂರಪ್ಪ ಸರ್ಕಾರ ನಿಂತಿದೆ.

    ಯಾವುದೇ ಕಡಿತ ಮಾಡದೇ ಏಪ್ರಿಲ್ ತಿಂಗಳ ಸಂಬಳ ನೀಡಲು ಸರ್ಕಾರ ನಿರ್ಧಾರ ಕೈಗೊಂಡಿದ್ದು, ಆರ್ಥಿಕ ಹೊರೆ ಆದರೂ ಪರವಾಗಿಲ್ಲ ಸರ್ಕಾರಿ ನೌಕರರಿಗೆ ಸಂಬಳ ನೀಡಲು ಸರ್ಕಾರ ಮುಂದಾಗಿದೆ. ಈ ಹಿನ್ನೆಲೆ ಏಪ್ರಿಲ್ ಸಂಬಳ ಹಾಕುವ ನಿಟ್ಟಿನಲ್ಲಿ ಆರ್ಥಿಕ ಇಲಾಖೆ ಪ್ರಕ್ರಿಯೆ ಪ್ರಾರಂಭಿಸಿದೆ. ಸಂಬಳ ಬಿಡುಗಡೆ ಮಾಡಲು ಆರ್ಥಿಕ ಇಲಾಖೆಯಿಂದ ಅಧಿಕೃತ ಆದೇಶ ಹೊರಡಿಸಲಾಗಿದೆ.

    ಕೆಲ ದಿನಗಳ ಹಿಂದೆ ಸ್ವತಃ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಈಶ್ವರಪ್ಪನವರು ಈ ತಿಂಗಳು ಸರ್ಕಾರಿ ನೌಕರರಿಗೆ ಸಂಬಳ ನೀಡುವುದೇ ಕಷ್ಟಕರವಾಗಿದೆ. ನೌಕರರು ಯಾವುದಕ್ಕೂ ಸಿದ್ಧರಾಗಿರಬೇಕು ಎಂಬ ಹೇಳಿಕೆ ನೀಡಿದ್ದರು. ಆದರೆ ಇದೀಗ ಸರ್ಕಾರ ಏಪ್ರಿಲ್ ತಿಂಗಳ ಸಂಬಳಕ್ಕೆ ಅನುಮತಿ ನೀಡಿದ್ದು, ಈ ಮೂಲಕ ಸರ್ಕಾರಿ ನೌಕರರ ಮೊಗದಲ್ಲಿ ಮಂದಹಾಸ ಮೂಡಿದೆ.

  • ಸರ್ಕಾರಿ ನೌಕರರು ರಾಜಕೀಯ ಅಭಿಪ್ರಾಯ ಹಂಚಿಕೊಂಡರೆ ಶಿಸ್ತು ಕ್ರಮ

    ಸರ್ಕಾರಿ ನೌಕರರು ರಾಜಕೀಯ ಅಭಿಪ್ರಾಯ ಹಂಚಿಕೊಂಡರೆ ಶಿಸ್ತು ಕ್ರಮ

    ಗುವಾಹಟಿ: ಸರ್ಕಾರಿ ನೌಕರರು ಸಾಮಾಜಿಕ ಜಾಲತಾಣಗಳಲ್ಲಿ ರಾಜಕೀಯ ಅಭಿಪ್ರಾಯ ಹಂಚಿಕೊಂಡರೆ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ ಎಂದು ಅಸ್ಸಾಂ ಸರ್ಕಾರ ಸುತ್ತೋಲೆ ಹೊರಡಿಸಿದೆ.

    ಅಸ್ಸಾಂ ಪ್ರಾಥಮಿಕ ಶಿಕ್ಷಣ ಇಲಾಖೆ ನಿರ್ದೇಶಕರು ಈ ರೀತಿಯ ವಿವಾದಿತ ಸುತ್ತೋಲೆ ಹೊರಡಿಸಿದ್ದು, ಫೇಸ್ಬುಕ್, ವಾಟ್ಸಪ್, ಟ್ವಿಟರ್ ಇನ್ಸ್ಟಾಗ್ರಾಂ ಸೇರಿದಂತೆ ಇತರೆ ಸಾಮಾಜಿಕ ಜಾಲತಾಣಗಳ ಮೇಲೆ ಕಣ್ಣಿಟ್ಟಿದ್ದು, ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ರಾಜಕೀಯ ಚರ್ಚೆ ಮಾಡದಂತೆ ಆದೇಶಿಸಿದ್ದಾರೆ.

    ಈ ಸಕ್ರ್ಯೂಲರ್ ಅಸ್ಸಾಂ ಸರ್ಕಾರಿ ನೌಕರ ವಲಯದಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದೆ. ಆದೇಶ ಉಲ್ಲಂಘಿಸಿದರೆ 1961 ರ ಅಸ್ಸಾಂ ಸೇವೆಗಳ (ಶಿಸ್ತು ಮತ್ತು ಮೇಲ್ಮನವಿ) ನಿಯಮಗಳ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಸುತ್ತೋಲೆಯಲ್ಲಿ ಎಚ್ಚರಿಕೆ ನೀಡಿದೆ. ಖಾಯಂ ಮಾತ್ರವಲ್ಲದೇ ಈ ಕ್ರಮವು ಗುತ್ತಿಗೆ ನೌಕರರಿಗೂ ಅನ್ವಯಿಸುತ್ತದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

    ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಹಿನ್ನೆಲೆ ರಾಜ್ಯದಲ್ಲಿ ತೀವ್ರ ಪ್ರತಿಭಟನೆಗಳು ನಡೆಯುತ್ತಿದ್ದು, ಈ ಸಂಬಂಧ ಪ್ರಾಥಮಿಕ ಶಿಕ್ಷಣ ಇಲಾಖೆ ಈ ನಿರ್ಧಾರ ತೆಗೆದುಕೊಂಡಿದೆ. ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ತೀವ್ರವಾಗಿ ಪ್ರತಿಭಟಿಸಿದ ಅಸ್ಸಾಂನ ಸ್ಥಳೀಯ ಜನರು, ಸಿಎಎಯಿಂದ ಅಸ್ಸಾಂನಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾ ಹಿಂದೂಗಳಿಗೆ ಅನುಕೂಲವಾಗಲಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ರಾಜ್ಯಾದ್ಯಂತ ಈ ಸಂಖ್ಯೆ ಹೆಚ್ಚಿದ್ದು, ಬಾಂಗ್ಲಾದೇಶದಿಂದ ಬಾಂಗ್ಲಾ ಮಾತನಾಡುವ ಹಿಂದೂ ವಲಸಿಗರಿಗೆ ಪೌರತ್ವ ನೀಡಿದರೆ, ಅವರು ರಾಜ್ಯದಲ್ಲಿ ಅಸ್ಸಾಮಿ ಮಾತನಾಡುವ ಜನರನ್ನು ಮೀರಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಸಾಕಷ್ಟು ಜನರು ಟ್ವಿಟ್ಟರ್ ನಲ್ಲಿ ಈ ಬಗ್ಗೆ ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ. ಶಿಕ್ಷಣ ಇಲಾಖೆ ಸಿಬ್ಬಂದಿಗಳು ಸಾಮಾಜಿಕ ಮಾಧ್ಯಮ ಬಳಕೆಗೆ ನಿರ್ಬಂಧ ಹೇರಿರುವುದಕ್ಕೆ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ಸಿಎಎ ಸಂಸತ್ತಿನ ಉಭಯ ಸದನಗಳಲ್ಲಿ ಅಂಗೀಕರಿಸಿದ ನಂತರ ಅಸ್ಸಾಂನಲ್ಲಿ ಪ್ರತಿಭಟನೆಗಳು ಹಿಂಸಾತ್ಮಕ ಸ್ವರೂಪ ಪಡೆದುಕೊಂಡಿದ್ದವು ಬಸ್ ಸೇರಿ ಸಾಕಷ್ಟು ಸಾರ್ವಜನಿಕ ಆಸ್ತಿ ಪಾಸ್ತಿಗೆ ಬೆಂಕಿ ಹಾಕಿ ಆಕ್ರೋಶ ವ್ಯಕ್ತಪಡಿಸಲಾಗಿತ್ತು.

  • ಸರ್ಕಾರಿ ನೌಕರರಿಗೆ ದೀಪಾವಳಿ ಬಂಪರ್- ತುಟ್ಟಿ ಭತ್ಯೆ ಹೆಚ್ಚಳ ಮಾಡಿ ಆದೇಶ

    ಸರ್ಕಾರಿ ನೌಕರರಿಗೆ ದೀಪಾವಳಿ ಬಂಪರ್- ತುಟ್ಟಿ ಭತ್ಯೆ ಹೆಚ್ಚಳ ಮಾಡಿ ಆದೇಶ

    ಬೆಂಗಳೂರು: ಸರ್ಕಾರಿ ನೌಕರರಿಗೆ ದೀಪಾವಳಿ ಬಂಪರ್ ನೀಡಲಾಗಿದ್ದು, ತುಟ್ಟಿ ಭತ್ಯೆ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

    ಜುಲೈ 1ರಿಂದ ಪೂರ್ವಾನ್ವಯವಾಗುವಂತೆ ಹೆಚ್ಚಳ ಮಾಡಲಾಗಿದ್ದು, ಶೇ.4.35 ರಷ್ಟು ತುಟ್ಟಿ ಭತ್ಯೆ ಹೆಚ್ಚಿಸಿ ಸರ್ಕಾರ ಆದೇಶಿಸಿದೆ. ಆದರೆ ರಾಜ್ಯ ಪೋಲಿಸರಿಗೆ ಸ್ವಲ್ಪ ಸಿಹಿ, ಸ್ವಲ್ಪ ಕಹಿ ಎನ್ನುವಂತಾಗಿದ್ದು, ದೀಪಾವಳಿಗೂ ಔರಾದ್ಕರ್ ವರದಿ ಜಾರಿಯಾಗಿಲ್ಲ ಎಂಬ ಬೇಸರ ಒಂದು ಕಡೆ ಮನೆಮಾಡಿದೆ. ಈ ಮೂಲಕ ರಾಜ್ಯ ಪೊಲೀಸರಿಗೆ ಸರ್ಕಾರ ಶಾಕ್ ಕೊಟ್ಟಿದೆ.

    ಕಷ್ಟ ಪರಿಹಾರ ಭತ್ಯೆಯನ್ನು 1 ಸಾವಿರ ರೂಪಾಯಿ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ನವೆಂಬರ್ 1ರಿಂದ ಅನ್ವಯವಾಗುವಂತೆ ಕಷ್ಟ ಪರಿಹಾರ ಭತ್ಯೆಯನ್ನು ಹೆಚ್ಚಳ ಮಾಡಲಾಗಿದೆ. ಔರಾದ್ಕರ್ ವರದಿ ಜಾರಿಯಾಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ಪೋಲೀಸರಿಗೆ ಸ್ವಲ್ಪ ಮಟ್ಟಿಗೆ ಬೇಸರವಾಗಿದೆ. ಆದರೆ ಜಮೇದಾರ್, ಪೊಲೀಸ್ ಪೇದೆ, ಮುಖ್ಯ ಪೇದೆ, ಎಎಸ್‍ಐ, ಎಸ್‍ಐಗಳಿಗೆ 1 ಸಾವಿರ ರೂ. ರಿಸ್ಕ್ ಅಲೋಯೆನ್ಸ್(ಕಷ್ಟ ಪರಿಹಾರ ಭತ್ಯೆ) ಹೆಚ್ಚಳ ಮಾಡುವ ಮೂಲಕ ಸ್ವಲ್ಪ ಮಟ್ಟಿಗೆ ಖುಷಿ ಪಡಿಸಿದೆ.

    ಜಮೇದಾರ್, ಮುಖ್ಯ ಪೇದೆ, ಎಎಸ್‍ಐ, ಎಸ್‍ಐಗಳಿಗೆ ಈ ಹಿಂದೆ 1 ಸಾವಿರ ರೂ. ಕಷ್ಟ ಪರಿಹಾರ ಭತ್ಯೆ ಇತ್ತು. ಈಗ 2 ಸಾವಿರ ರೂ. ಕಷ್ಟ ಪರಿಹಾರ ಭತ್ಯೆ ಸಿಗಲಿದೆ. ಪೇದೆಗಳಿಗೆ 2 ಸಾವಿರ ಕಷ್ಟ ಪರಿಹಾರ ಭತ್ಯೆ ಇತ್ತು, ಈಗ 3 ಸಾವಿರ ಭತ್ಯೆ ಸಿಗಲಿದೆ. ಅಲ್ಲದೆ ಹೊಸ ಪೊಲೀಸ್ ಇನ್ಸ್‍ಪೆಕ್ಟರ್ ಗಳಿಗೂ 1 ಸಾವಿರ ರೂ. ಕಷ್ಟ ಪರಿಹಾರ ಭತ್ಯೆ ನೀಡುವುದಾಗಿ ಸರ್ಕಾರ ಆದೇಶ ಹೊರಡಿಸಿದೆ.

  • ಲಕ್ಷ ಲಕ್ಷ ಸಂಬಳ- ಕಚೇರಿಗೆ ಬರೋದು ಮಾತ್ರ ಮನಸ್ಸಿಗೆ ತೋಚಿದಂತೆ

    ಲಕ್ಷ ಲಕ್ಷ ಸಂಬಳ- ಕಚೇರಿಗೆ ಬರೋದು ಮಾತ್ರ ಮನಸ್ಸಿಗೆ ತೋಚಿದಂತೆ

    -ಬಿಬಿಎಂಪಿ ಕಚೇರಿಯಲ್ಲಿನ ಬಯೋಮೆಟ್ರಿಕ್‍ನಲ್ಲಿ ಟೈಂ ಉಲ್ಟಾ ಸ್ವಾಮಿ!
    -ಸಿಎಂ ಸೂಚನೆಗೂ ಸಿಗ್ತಿಲ್ಲ ಮರ್ಯಾದೆ!

    ಬೆಂಗಳೂರು: ಸರ್ಕಾರಿ ಕೆಲಸ ಅಂದರೆ ದೇವರ ಕೆಲಸ ಎಂಬ ಮಾತಿದೆ. ಆದರೆ ಈ ಮಾತು ಕೇವಲ ಪುಸ್ತಕದಲ್ಲಿ ನೋಡಲು ಮತ್ತು ಭಾಷಣಗಳಲ್ಲಿ ಕೇಳಲು ಚೆನ್ನಾಗಿರುತ್ತದೆ. ಕೆಲಸವನ್ನು ದೇವರು ಎಂದು ತಿಳಿದುಕೊಳ್ಳುವುದು ದೂರದ ಮಾತು. ಕಾರ್ಯನಿರ್ವಹಿಸುವ ಕಚೇರಿಗೆ ಸರ್ಕಾರಿ ಅಧಿಕಾರಿಗಳು ಸರಿಯಾದ ಸಮಯಕ್ಕೆ ಬಂದರೆ ಸಾಕಪ್ಪ ಎಂದು ಸಾರ್ವಜನಿಕರು ಕಾಯುತ್ತಿರುತ್ತಾರೆ. ಪ್ರತಿ ತಿಂಗಳು ಲಕ್ಷ ಲಕ್ಷ ಸಂಬಳ ಎಣಿಸುವ ಬಿಬಿಎಂಪಿ ಅಧಿಕಾರಿಗಳು ತಮಗೆ ಅನೂಕುಲವಾಗುವಂತೆ ಬಯೋಮೆಟ್ರಿಕ್ ಯಂತ್ರವನ್ನು ಮಾರ್ಪಾಡು ಮಾಡಿಕೊಂಡಿದ್ದಾರೆ. ಹಾಜರಾತಿ ಕಡ್ಡಾಯ ಮತ್ತು ಸರಿಯಾದ ಸಮಯಕ್ಕೆ ಅಧಿಕಾರಿಗಳು ಬರಬೇಕೆಂದು ಸರ್ಕಾರ ಬಯೋಮೆಟ್ರಿಕ್ ಯಂತ್ರವನ್ನು ಅಳವಡಿಸಿದೆ. ಇದೀಗ ಅಧಿಕಾರಿಗಳು ತಾವು ಬರುವ ಸಮಯಕ್ಕೆ ಅನೂಕುಲವಾಗುವಂತೆ ಸಮಯವನ್ನು ನಿಗದಿ ಮಾಡಿಕೊಂಡಿದ್ದಾರೆ.

    ಸಿಎಂ ಬಿ.ಎಸ್.ಯಡಿಯೂರಪ್ಪ ಆರಂಭದಲ್ಲಿ ವಿಧಾನಸೌಧದ ಕಚೇರಿಗಳಿಗೆ ದಿಢೀರ್ ಭೇಟಿ ನೀಡಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿ, ಖಡಕ್ ವಾರ್ನಿಂಗ್ ನೀಡಿದ್ದರು. ಇನ್ ಟೈಂನಲ್ಲಿ ಬರಬೇಕು ಎಂದು ವಿಧಾನಸೌಧ ಸಿಬ್ಬಂದಿಗೆ ಬರಬೇಕೆಂದು ಫರ್ಮಾನು ಹೊರಡಿಸಿದ್ದರು. ಬಿಬಿಎಂಪಿ ಅಧಿಕಾರಿಗಳು ಸೂರ್ಯ ನೆತ್ತಿಯ ಮೇಲೆ ಬಂದರೂ ಕಚೇರಿಯತ್ತ ಮುಖ ಮಾಡಲ್ಲ. ಪಬ್ಲಿಕ್ ಟಿವಿ ನಡೆಸಿದ ರಿಯಾಲಿಟಿ ಚೆಕ್ ನಲ್ಲಿ ಬಿಬಿಎಂಪಿ ಅಧಿಕಾರಿಗಳ ಕಳ್ಳಾಟ ಬಯಲಾಗಿದೆ.

    ಸರ್ಕಾರಿ ಕಚೇರಿಗಳಿಗೆ ನೌಕರರು ನಿಗದಿತ ಸಮಯಕ್ಕೆ ಬರಲ್ಲ ಎನ್ನುವ ಆಪಾದನೆ ಇಂದು ಸಹ ನಿಜವಾಗಿದೆ. ಸಿಎಂ ಯಡಿಯೂರಪ್ಪ ಅಧಿಕಾರಿಗಳಿಗೆ ವಾರ್ನಿಂಗ್ ನೀಡಿದ್ರು ಪ್ರಯೋಜನವಾಗಿಲ್ಲ. ವಿಧಾನಸೌಧ ಅಷ್ಟೇ ಅಲ್ಲ, ಬಿಬಿಎಂಪಿಯಲ್ಲೂ ನೌಕರರಿಲ್ಲ. ಪಬ್ಲಿಕ್ ಟಿವಿ ಕಚೇರಿ ಸಮಯಕ್ಕೆ ಬಿಬಿಎಂಪಿ ಪ್ರವೇಶಿಸಿದಾಗ ಕೇವಲ ಬೆರಳಿಣಿಕೆಯಷ್ಟು ಸಿಬ್ಬಂದಿ ಕಾಣಸಿಗುತ್ತಾರೆ. ಮೇಲಾಧಿಕಾರಿಗಳೇ 11 ಗಂಟೆ ಆಗಮಿಸಬೇಕಾದ್ರೆ ಸಿಬ್ಬಂದಿ ವರ್ಗ ಸಹ ಅದೇ ಚಾಳಿಯನ್ನು ಆರಂಭಿಸಿಗೊಂಡಿದೆ.

    ಬಿಬಿಎಂಪಿ ಆಯುಕ್ತ ಆಗಿದ್ದ ಮಂಜುನಾಥ ಪ್ರಸಾದ್ ಗಂಟೆ 11 ಆಗಿದ್ರು ಕಚೇರಿ ಕಡೆ ತಲೆ ಹಾಕುತ್ತಿರಲಿಲ್ಲ. ಇನ್ನು ಬಿಬಿಎಂಪಿ ಕಮೀಷನರ್ ಸಿಕ್ತಿಲ್ಲ ಎಂದು ಡಿಪಿಆರ್ ಗೆ ಸಹ ಮಾಹಿತಿ ನೀಡಿ ಸಾಮಾಜಿಕ ಕಾರ್ಯಕರ್ತ ಅಮರೇಶ್ ಪತ್ರ ಬರೆದಿದ್ದರು. ಜಂಟಿ ಆಯುಕ್ತ ಕಚೇರಿ, ಮುಖ್ಯ ಅಭಿಯಂತರ ಕಚೇರಿಗಳು ಹಾಗೂ ಅನೆಕ್ಸ್ ಕಟ್ಟಡಗಳ ಕಚೇರಿಗಳು ಬಹುತೇಕ ಸಿಬ್ಬಂದಿ ಬರೋದು11.30 ರ ನಂತರ ಹಾಗಾಗಿ ಕಚೇರಿಗಳ ಕುರ್ಚಿಗಳು ಖಾಲಿ ಖಾಲಿ ಆಗಿರುತ್ತವೆ.

    ವಿಧಾನಸೌಧ ಮಾತ್ರವಲ್ಲ, ಸಿಎಂ ದಿಢೀರ್ ಅಂತ ಬಿಬಿಎಂಪಿ, ಬೆಸ್ಕಾಂ, ಬಿಡಬ್ಲ್ಯೂಎಸ್ ಎಸ್ ಬಿ ಸೇರಿದಂತೆ ಎಲ್ಲ ಕಚೇರಿಗಳಿಗೆ ಭೇಟಿ ನೀಡುವ ಅಗತ್ಯವಿದೆ. ಆಗಾದರೂ ಸಮಯಕ್ಕೆ ಸಿಬ್ಬಂದಿ ಮಾನ್ಯತೆ ಕೊಡ್ತಾರಾ ಅಂತ ಕಾದುನೋಡಬೇಕಿದೆ.