Tag: Government Employee

  • ಪಾಕ್‌ ಪರ ಬೇಹುಗಾರಿಕೆ – 7 ಬಾರಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ರಾಜಸ್ಥಾನದ ಸರ್ಕಾರಿ ನೌಕರ ಅರೆಸ್ಟ್‌

    ಪಾಕ್‌ ಪರ ಬೇಹುಗಾರಿಕೆ – 7 ಬಾರಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ರಾಜಸ್ಥಾನದ ಸರ್ಕಾರಿ ನೌಕರ ಅರೆಸ್ಟ್‌

    ಜೈಪುರ: ಪಾಕಿಸ್ತಾನದ ಐಎಸ್‌ಐ (Pakistan ISI) ಪರ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ರಾಜಸ್ಥಾನದ ಸರ್ಕಾರಿ ನೌಕರನನ್ನ (Rajasthan Government Employee) ಜೈಸಲ್ಮೇರ್‌ನಲ್ಲಿ ಬಂಧಿಸಲಾಗಿದೆ.

    ಬಂಧಿತ ಸರ್ಕಾರಿ ನೌಕರನನ್ನ ಶಕುರ್ ಖಾನ್ ಮಂಗನಿಯಾರ್ ಎಂದು ಗುರುತಿಸಲಾಗಿದೆ. ಜೈಸಲ್ಮೈರ್‌ನಲ್ಲಿರುವ ಕಚೇರಿಯಲ್ಲೇ ಸಿಐಡಿ ಮತ್ತು ಗುಪ್ತಚರ ಸಂಸ್ಥೆಗಳ (Intelligence Department)ತಂಡವು ಜಂಟಿಯಾಗಿ ಬಂಧಿಸಿವೆ. ಇದನ್ನೂ ಓದಿ: ಇಬ್ಬರು ಕನ್ನಡಿಗರು ಸೇರಿ 26 ಮೃತ ಪ್ರವಾಸಿಗರ ನೆನಪಿಗೆ ಪಹಲ್ಗಾಮ್‌ನಲ್ಲಿ ಸ್ಮಾರಕ – ಒಮರ್ ಅಬ್ದುಲ್ಲಾ

    ರಾಜಸ್ಥಾನದಲ್ಲಿ (Rajasthan) ಸರ್ಕಾರಿ ನೌಕರನಾಗಿದ್ದ ಶಕುರ್ ಖಾನ್ ಗಡಿ ಪ್ರದೇಶದ ಬರೋಡಾ ಗ್ರಾಮದವನು. ಈತನ ಮೇಲೆ ಬಹಳ ದಿನಗಳಿಂದ ನಿಗಾ ಇಡಲಾಗಿತ್ತು ಎನ್ನಲಾಗಿದೆ. ಸದ್ಯ ಹೆಚ್ಚಿನ ವಿಚಾರಣೆಗಾಗಿ ಜೈಪುರಕ್ಕೆ ಸ್ಥಳಾಂತರಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಎರಡೂ ತನಿಖಾ ತಂಡಗಳು ಜಂಟಿಯಾಗಿಯೇ ವಿಚಾರಣೆ ನಡೆಸಲಿವೆ. ಪ್ರಾಥಮಿಕ ವಿಚಾರಣೆ ವೇಳೆ ಆರೋಪಿ ದೆಹಲಿಯಲ್ಲಿರುವ ಪಾಕಿಸ್ತಾನಿ ಹೈಕಮಿಷನ್‌ನೊಂದಿಗೆ (Pakistani High Commission) ಸಂಪರ್ಕದಲ್ಲಿದ್ದ ಅನ್ನೋದು ಪತ್ತೆಯಾಗಿದೆ. ಇದನ್ನೂ ಓದಿ: ಸೆಬಿ ಮಾಜಿ ಮುಖ್ಯಸ್ಥೆ ಮಾಧವಿ ಪುರಿ ಬುಚ್‌ಗೆ ಲೋಕಪಾಲ್ ಕ್ಲೀನ್ ಚಿಟ್

    ಅಲ್ಲದೇ ಪಾಕಿಸ್ತಾನಕ್ಕೆ ಸಂಬಂಧಿಸಿದ ಹಲವಾರು ಫೋನ್ ಸಂಖ್ಯೆಗಳು (+92 ರಿಂದ ಪ್ರಾರಂಭವಾಗುವ ಮೊಬೈಲ್ ಸಂಖ್ಯೆಗಳು) ಇತನ ಮೊಬೈಲ್‌ನಲ್ಲಿ ಪತ್ತೆಯಾಗಿದೆ. ಜೊತೆಗೆ ಕಳೆದ ಕೆಲ ವರ್ಷಗಳಲ್ಲಿ 7 ಬಾರಿ ಪಾಕಿಸ್ತಾನಕ್ಕೆ ಭೇಟಿ ನೀಡಿರುವುದಾಗಿ ಶಕುರ್‌ ಖಾನ್‌ ಒಪ್ಪಿಕೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ಯುಪಿಯಲ್ಲಿ ರೇಪಿಸ್ಟ್, ಕೊಲೆಗಾರರ ವಿರುದ್ಧ ‘ಆಪರೇಷನ್ ಲಂಗ್ಡಾ’ – 11 ಕ್ರಿಮಿನಲ್ಸ್ ಕಾಲಿಗೆ ಗುಂಡೇಟು

    ಪ್ರಮುಖ ಫೈಲ್‌ಗಳೇ ಡಿಲೀಟ್‌
    ಇನ್ನೂ ಶಕುರ್‌ ಖಾನ್‌ ಗುಪ್ತಚರ ಅಧಿಕಾರಿಗಳ ಬಲೆಗೆ ಬೀಳುತ್ತಿದ್ದಂತೆ ಮೊಬೈಲ್‌ ಮತ್ತು ಡಿಲಿಟಲ್‌ ಡಿವೈಸ್‌ಗಳಲ್ಲಿದ್ದ ಹಲವಾರು ಪ್ರಮುಖ ಫೈಲ್‌ಗಳನ್ನ ಡಿಲೀಟ್‌ ಮಾಡಲಾಗಿದೆ. ಹೀಗಾಗಿ ಸಧ್ಯಕ್ಕೆ ಆತನ ಮೊಬೈಲ್‌ನಿಂದ ಯಾವುದೇ ಸೂಕ್ಷ್ಮ ಮಾಹಿತಿಗಳು ರವಾನೆಯಾಗಿರುವ ಬಗ್ಗೆ ಸಾಕ್ಷ್ಯಗಳು ಸಿಕ್ಕಿಲ್ಲ. ಹೊರತುಪಡಿಸಿ ಆತನ ಬ್ಯಾಂಕ್‌ ಖಾತೆ ಮೇಲೂ ನಿಗಾ ವಹಿಸಲಾಗಿದೆ.

    ಸದ್ಯ ಯೂಟ್ಯೂಬರ್‌ ಜ್ಯೋತಿಒ ಮಲ್ಹೋತ್ರಾ ಸೇರಿದಂತೆ ಕಳೆದ ಎರಡು ವಾರಗಳಲ್ಲಿ ಒಟ್ಟು ಬಂಧಿತ ಪಾಕಿಸ್ತಾನಿ ಸ್ಪೈಗಳ ಸಂಖ್ಯೆ 16 ದಾಟಿದೆ. ಇದನ್ನೂ ಓದಿ: ರೈತರಿಗೆ ಗುಡ್‌ನ್ಯೂಸ್ – ಕಿಸಾನ್ ಕ್ರೆಡಿಟ್‌ಕಾರ್ಡ್ ಸಾಲದ ಬಡ್ಡಿ ರಿಯಾಯಿತಿ ಮುಂದುವರಿಕೆ

  • ಕಲ್ಯಾಣಮಂಟಪದಲ್ಲೇ ಹೈಡ್ರಾಮಾ – ಹಸೆಮಣೆ ಏರಬೇಕಿದ್ದ ಸರ್ಕಾರಿ ನೌಕರ ಜೈಲುಪಾಲು

    ಕಲ್ಯಾಣಮಂಟಪದಲ್ಲೇ ಹೈಡ್ರಾಮಾ – ಹಸೆಮಣೆ ಏರಬೇಕಿದ್ದ ಸರ್ಕಾರಿ ನೌಕರ ಜೈಲುಪಾಲು

    ಬೆಳಗಾವಿ: ಮದುವೆ ದಿನ ಕಲ್ಯಾಣಮಂಟಪದಲ್ಲೇ ಸರ್ಕಾರಿ ನೌಕರನೊಬ್ಬ (Government Employee) ವರದಕ್ಷಿಣೆಗೆ (Dowry) ಬೇಡಿಕೆಯಿಟ್ಟು ಹೈಡ್ರಾಮಾ ನಡೆಸಿ ಪೊಲೀಸರ ಅತಿಥಿಯಾದ ಘಟನೆ ಬೆಳಗಾವಿಯಲ್ಲಿ (Belagavi) ನಡೆದಿದೆ.

    ಬೆಳಗಾವಿ ಡಿಸಿ ಕಚೇರಿಯಲ್ಲಿ ಎಸ್‌ಡಿಸಿ ಆಗಿರುವ ಸಚಿನ್ ಪಾಟೀಲ್ ಹೈಡ್ರಾಮಾ ನಡೆಸಿದ ವರ. ಈತ ಕಲ್ಯಾಣಮಂಟಪದಲ್ಲಿ ನಡೆಯುತ್ತಿದ್ದ ಅರಿಶಿಣ ಕಾರ್ಯಕ್ರಮದಲ್ಲಿ 200 ಗ್ರಾಂ ಚಿನ್ನಾಭರಣ, 10 ಲಕ್ಷ ನಗದು ನೀಡುವಂತೆ ವಧುವಿನ ಮನೆಯವರಿಗೆ ಡಿಮ್ಯಾಂಡ್ ಇಟ್ಟಿದ್ದಾನೆ. ವರನ ಡಿಮ್ಯಾಂಡ್‌ಗೆ ವಧುವಿನ ಸಂಬಂಧಿಕರು, ಮದುವೆಯಲ್ಲಿ ಪಾಲ್ಗೊಂಡ ಜನರು ತಬ್ಬಿಬ್ಬಾಗಿದ್ದಾರೆ. ಅಲ್ಲದೇ ನಾವು ಬಡವರು ಇಷ್ಟೊಂದು ಹಣ, ಚಿನ್ನಾಭರಣ ಎಲ್ಲಿಂದ ಕೊಡೋದು ಎಂದು ವಧುವಿನ ಪೋಷಕರು ಅಳಲು ತೋಡಿಕೊಂಡಿದ್ದಾರೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಭೀಕರ ಸರಣಿ ಅಪಘತ – 50 ಮೀಟರ್ ಹಾರಿ ಬಿದ್ದ ಯುವತಿ ಗಂಭೀರ

    ಈ ವೇಳೆ ವರದಕ್ಷಿಣೆ ಕೊಡದ ಹಿನ್ನೆಲೆ ಹಳದಿ ಕಾರ್ಯಕ್ರಮ ನಡೆಯುವಾಗಲೇ ಮಂಟಪದಿಂದ ವರ ಎಸ್ಕೇಪ್ ಆಗಲು ಯತ್ನಿಸಿದ್ದಾನೆ. ನಾನು ಹಳದಿ ಕಾರ್ಯದಲ್ಲಿ ಪಾಲ್ಗೊಳ್ಳಲ್ಲ ಎಂದು ಹೈಡ್ರಾಮ ನಡೆಸಿದ್ದಾನೆ. ಈ ವೇಳೆ ಮದುವೆ ದಿನ ವಿಚಿತ್ರವಾಗಿ ನಡೆದುಕೊಂಡ ವರನಿಗೆ ಹುಡುಗಿ ಮನೆಯವರು ಗೂಸಾ ನೀಡಿದ್ದು, ಕಲ್ಯಾಣ ಮಂಟಪದಿಂದ ಎಸ್ಕೇಪ್ ಆಗಲು ಯತ್ನಿಸಿದ್ದ ವರನನ್ನು ರೂಂನಲ್ಲೇ ಲಾಕ್ ಮಾಡಿದ್ದಾರೆ. ಇದನ್ನೂ ಓದಿ: ಮಣಿಪುರದಲ್ಲಿ ಹೊಸವರ್ಷದ ಮೊದಲ ದಿನವೇ ಹಿಂಸಾಚಾರ – ಗುಂಡಿನ ದಾಳಿಗೆ ನಾಲ್ವರು ಬಲಿ

    ಏನಿದು ಘಟನೆ?
    ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಗ್ರಾಮವೊಂದರ ಯುವತಿ ಜೊತೆಗೆ ಸಚಿನ್ ಪಾಟೀಲ್ ನಿಶ್ಚಿತಾರ್ಥ ಆಗಿತ್ತು. ಇದ್ದ ಒಬ್ಬಳೇ ಹೆಣ್ಣುಮಗಳನ್ನು ಸರ್ಕಾರಿ ನೌಕರ ಎಂಬ ಕಾರಣಕ್ಕೆ ಸಚಿನ್‌ಗೆ ಕೊಡಲು ವಧುವಿನ ಪೋಷಕರು ನಿರ್ಧರಿಸಿದ್ದರು. ಇವರಿಬ್ಬರ ನಿಶ್ಚಿತಾರ್ಥ ಆರು ತಿಂಗಳ ಹಿಂದೆ ನಡೆದಿತ್ತು. ನಿಶ್ಚಿತಾರ್ಥ ಸಮಯದಲ್ಲೇ 25 ಸಾವಿರ ವರದಕ್ಷಿಣೆ, 50 ಗ್ರಾಂ ಚಿನ್ನಾಭರಣ ಕೊಡುವುದಾಗಿ ಮಾತುಕತೆ ಮಾಡಿದ್ದರು. ಇದರ ಜೊತೆಗೆ ಮದುವೆಯನ್ನು ತಾವೇ ಮಾಡಿಕೊಡುವುದಾಗಿ ಹುಡುಗಿ ಪೋಷಕರು ತಿಳಿಸಿದ್ದರು. ಈ ಮಾತುಕತೆಗೆ ಉಭಯ ಕುಟುಂಬಸ್ಥರೂ ಒಪ್ಪಿಗೆ ಸೂಚಿಸಿದ್ದರು. ಡಿಸೆಂಬರ್ 31ಕ್ಕೆ ಖಾನಾಪುರದ ಲೋಕಮಾನ್ಯ ಕಲ್ಯಾಣ ಮಂಟಪದಲ್ಲಿ ಮದುವೆ ನಿಶ್ಚಯವಾಗಿತ್ತು. ಎಲ್ಲಾ ಸಂಬಂಧಿಕರು, ಸ್ನೇಹಿತರಿಗೆ ಆಹ್ವಾನ ಪತ್ರಿಕೆಯನ್ನು ನೀಡಲಾಗಿತ್ತು. ಇದೀಗ ಹಸೆಮಣೆ ಏರಬೇಕಿದ್ದ ವರ ಜೈಲುಪಾಲಾಗಿದ್ದಾನೆ. ಇದನ್ನೂ ಓದಿ: ಮಕ್ಕಳಾಗದ ಮಹಿಳೆಯರನ್ನ ಗರ್ಭಿಣಿ ಮಾಡಿದ್ರೆ 13 ಲಕ್ಷ ರೂ. ಬಹುಮಾನ – ಆಫರ್‌ ಕೊಟ್ಟಿದ್ದ 8 ಮಂದಿ ಅರೆಸ್ಟ್‌

    ಮದುವೆ ದಿನವೇ ಹೈಡ್ರಾಮಾ ಮಾಡಿದ ಸರ್ಕಾರಿ ನೌಕರ ಹಿಂಡಲಗಾ ಜೈಲು ಪಾಲಾಗಿದ್ದು, ಸಚಿನ್ ಪಾಟೀಲ್‌ನನ್ನು ವಶಕ್ಕೆ ಪಡೆದು ಖಾನಾಪುರ ಪೊಲೀಸರು ವಿಚಾರಣೆ ನಡೆಸಿದ್ದಾರೆ. ನಿಶ್ಚಿತಾರ್ಥದ ಬಳಿಕ ಸಚಿನ್ ಯುವತಿ ಜೊತೆಗೆ ದೈಹಿಕ ಸಂಬಂಧ ಬೆಳೆಸಿದ್ದ ಎನ್ನಲಾಗಿದೆ. ಆಗಾಗ ಮನೆಗೆ ಹೋಗಿ ನಾಲ್ಕೈದು ಸಲ ಯುವತಿ ಜೊತೆಗೆ ದೈಹಿಕ ಸಂಪರ್ಕ ಸಾಧಿಸಿದ್ದ ಸಚಿನ್ ಆಕೆಯ ಸಹೋದರರು, ಸಂಬಂಧಿಕರ ಬಳಿ 1 ಲಕ್ಷ ಸಾಲವನ್ನೂ ಪಡೆದಿದ್ದ. ಅಲ್ಲದೇ ಹೆಚ್ಚಿನ ಪ್ರಮಾಣದಲ್ಲಿ ವರದಕ್ಷಿಣೆ ಕೊಡಲು ಒಪ್ಪದಿದ್ದಾಗ ಯುವತಿಗೂ ಜೀವ ಬೆದರಿಕೆ ಹಾಕಿದ್ದಾನೆ. ಇದೀಗ ಸಚಿನ್ ಪಾಟೀಲ್ ವಿರುದ್ಧ ಖಾನಾಪುರ ಠಾಣೆಯಲ್ಲಿ ಮೂರು ಸೆಕ್ಷನ್ ಅಡಿ ಪ್ರಕರಣ ದಾಖಲಾಗಿದೆ. ಐಪಿಸಿ ಸೆಕ್ಷನ್ 303 (ಕೊಲೆ ಬೆದರಿಕೆ), ಐಪಿಸಿ ಸೆಕ್ಷನ್ 376 (ಅತ್ಯಾಚಾರ) ಐಪಿಸಿ ಸೆಕ್ಷನ್ 420 (ವಂಚನೆ) ಪ್ರಕರಣ ದಾಖಲಾಗಿದೆ. ಸೋಮವಾರ ಪೊಲೀಸರು ಆರೋಪಿ ಸಚಿನ್ ಪಾಟೀಲ್‌ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಇದನ್ನೂ ಓದಿ: 14ರ ಹುಡುಗಿ ಮೇಲೆ ಪ್ರೀತಿ – ಶಾಲಾ ಬಸ್ ಡ್ರೈವರ್‌ ಪ್ರೇಮದಾಟಕ್ಕೆ ವಿದ್ಯಾರ್ಥಿನಿ ಬಲಿ

  • ಮುಷ್ಕರದಲ್ಲಿ ಭಾಗವಹಿಸಿದ್ದ ಸರ್ಕಾರಿ ನೌಕರ ಹೃದಯಾಘಾತದಿಂದ ಸಾವು

    ಮುಷ್ಕರದಲ್ಲಿ ಭಾಗವಹಿಸಿದ್ದ ಸರ್ಕಾರಿ ನೌಕರ ಹೃದಯಾಘಾತದಿಂದ ಸಾವು

    ರಾಯಚೂರು: ಸರ್ಕಾರಿ ನೌಕರರ ಮುಷ್ಕರದಲ್ಲಿ (Government Employee Strike) ಭಾಗವಹಿಸಿದ್ದ ವ್ಯಕ್ತಿಯೊಬ್ಬರು ಮನೆಗೆ ತೆರಳುತ್ತಿದ್ದಂತೆಯೇ ಹೃದಯಾಘಾತದಿಂದ (Heart Attack) ಸಾವನ್ನಪ್ಪಿರುವ ಘಟನೆ ರಾಯಚೂರಿನಲ್ಲಿ (Raichur) ನಡೆದಿದೆ.

    ಸಾಕ್ಷರತಾ ಇಲಾಖೆ ಕಾರ್ಯಕ್ರಮದ ಸಂಯೋಜಕ ಯಲ್ಲಪ್ಪ ಜಾಲಿಬೆಂಚಿ (54) ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಇವರು ಎಸ್‌ಟಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾಗಿದ್ದು, ಬುಧವಾರ ನಡೆದ ಸರ್ಕಾರಿ ನೌಕರರ ಮುಷ್ಕರದಲ್ಲಿ ಭಾಗವಹಿಸಿ, ಮನೆಗೆ ತೆರಳಿದ ಬಳಿಕ ಅವರಿಗೆ ತೀವ್ರ ಹೃದಯಾಘಾತವಾಗಿದೆ. ಇದನ್ನೂ ಓದಿ: ರೂಪಾ ವಿರುದ್ಧ ಮತ್ತೊಂದು ಅಸ್ತ್ರ ಪ್ರಯೋಗಿಸಿದ ರೋಹಿಣಿ

    ಯಲ್ಲಪ್ಪ ಅವರಿಗೆ ಹೃದಯಾಘಾತವಾಗುತ್ತಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಸರ್ಕಾರಿ ನೌಕರರಿಗೆ ಮಧ್ಯಂತರ ರಿಲೀಫ್‌ – ಷರತ್ತು ಏನು?

  • ಸರ್ಕಾರಿ ನೌಕರರು ಕಚೇರಿಗಳಲ್ಲಿ ಜೀನ್ಸ್-ಟೀ ಶರ್ಟ್ ಧರಿಸುವಂತಿಲ್ಲ- ನಿಯಮ ಉಲ್ಲಂಘಿಸಿದ್ರೆ ಕಠಿಣ ಕ್ರಮ

    ಸರ್ಕಾರಿ ನೌಕರರು ಕಚೇರಿಗಳಲ್ಲಿ ಜೀನ್ಸ್-ಟೀ ಶರ್ಟ್ ಧರಿಸುವಂತಿಲ್ಲ- ನಿಯಮ ಉಲ್ಲಂಘಿಸಿದ್ರೆ ಕಠಿಣ ಕ್ರಮ

    ಲಕ್ನೋ: ಉತ್ತರ ಪ್ರದೇಶದಲ್ಲಿ ಮತ್ತೊಂದು ರೂಲ್ಸ್ ಜಾರಿಗೆ ಬಂದಿದ್ದು ನೆರೆ ರಾಜ್ಯಗಳ ಗಮನ ಸೆಳೆದಿದೆ.

    ಹೌದು.. ಸರ್ಕಾರಿ ನೌಕರರು ಕಚೇರಿಗಳಲ್ಲಿ ಜೀನ್ಸ್-ಟೀ ಶರ್ಟ್ ಧರಿಸುವಂತಿಲ್ಲ ಅಂತ ಉತ್ತರ ಪ್ರದೇಶದ ಭದೋಹಿ ಜಿಲ್ಲೆಯ ಜಿಲ್ಲಾಧಿಕಾರಿ ಆರ್ಯಕಾ ಚೌಧರಿ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಭಯೋತ್ಪಾದನೆ ಕುರಿತಾದ ಚರ್ಚೆಗೆ ಪಾಕ್ ಪತ್ರಕರ್ತ ನುಸ್ರತ್ ಮಿರ್ಜಾನನ್ನು ನಾನು ಆಹ್ವಾನಿಸಿಲ್ಲ: ಹಮೀದ್ ಅನ್ಸಾರಿ

    ಈ ಜಿಲ್ಲೆ ವ್ಯಾಪ್ತಿಯ ಸರ್ಕಾರಿ ಶಾಲೆ ಶಿಕ್ಷಕರು, ಇತರೆ ಇಲಾಖೆಗಳ ನೌಕರರು ಜೀನ್ಸ್-ಟೀ ಶರ್ಟ್ ಧರಿಸುವಂತಿಲ್ಲ. ಕೇವಲ ಫಾರ್ಮಲ್ಸ್ ಧರಿಸಲಷ್ಟೇ ಅವಕಾಶ. ನಿಯಮ ಉಲ್ಲಂಘಿಸಿದ್ರೆ ಕಠಿಣ ಕ್ರಮ ಅಂತ ಎಚ್ಚರಿಕೆ ನೀಡಿದ್ದಾರೆ. ಆದ್ರೆ ಕೆಲ ಸರ್ಕಾರಿ ಕಚೇರಿಯ ನೌಕರರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕರ್ತವ್ಯದ ವೇಳೆ ಕಂಠಪೂರ್ತಿ ಕುಡಿದು ರಂಪಾಟ ಮಾಡಿದ ಸರ್ಕಾರಿ ನೌಕರ

    ಕರ್ತವ್ಯದ ವೇಳೆ ಕಂಠಪೂರ್ತಿ ಕುಡಿದು ರಂಪಾಟ ಮಾಡಿದ ಸರ್ಕಾರಿ ನೌಕರ

    ಬೆಳಗಾವಿ: ಸಾಕಷ್ಟು ಜನರು ಸರ್ಕಾರಿ ನೌಕರಿಗಾಗಿ ಪರದಾಡುತ್ತಿದ್ದಾರೆ. ಆದರೆ ಇಲ್ಲೊಬ್ಬ ಸರ್ಕಾರಿ ನೌಕರ ತನ್ನ ಕೆಲಸಕ್ಕೆ ಮರ್ಯಾದೆ ಕೊಡದೆ ರಂಪಾಟ ಮಾಡಿದ್ದಾನೆ. ಕರ್ತವ್ಯದ ವೇಳೆ ಕಂಠಪೂರ್ತಿ ಕುಡಿದು ಅಡ್ಡಲಾಗಿ ಮಲಗಿದ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ತಹಶೀಲ್ದಾರ್ ಕಚೇರಿ ಎದುರು ನಡೆದಿದೆ.

    ಸಂಜು ಬೆಣ್ಣಿ ಕಂಠಪೂರ್ತಿ ಕುಡಿದು ಮಲಗಿದ್ದ ಗ್ರಾಮ ಲೆಕ್ಕಾಧಿಕಾರಿ. ಈ ಮೊದಲು ಸಂಜು ಬೆಣ್ಣಿ ಸವದತ್ತಿ ತಾಲೂಕಿನ ಗೊರವನಕೊಳ್ಳ ಗ್ರಾಮದಲ್ಲಿ ಗ್ರಾಮಲೆಕ್ಕಾಧಿಕಾರಿಯಾಗಿ ಕೆಲಸಕ್ಕಿದ್ದ. ಅಲ್ಲಿಯೂ ಕರ್ತವ್ಯದ ವೇಳೆ ಕಂಠಪೂರ್ತಿ ಕುಡಿಯುತ್ತಿದ್ದ ಹಿನ್ನೆಲೆ ಸವದತ್ತಿ ತಹಶೀಲ್ದಾರ್ ಕಚೇರಿ ಕರ್ತವ್ಯಕ್ಕೆ ನಿಯೋಜಿಸಿದ್ದರು. ಇದನ್ನೂ ಓದಿ: 80ಕ್ಕೂ ಹೆಚ್ಚು ಮಕ್ಕಳನ್ನ ಕಾಡುತ್ತಿದೆ ಟೊಮೆಟೊ ಜ್ವರ – ಏನಿದರ ಲಕ್ಷಣ? 

    ಆದ್ರೆ, ಇಲ್ಲಿಯೂ ಸಹ ಸಂಜು ಬೆಣ್ಣಿ ತನ್ನ ಹಳೇ ಚಾಳಿ ಮುಂದುವರಿಸಿದ್ದಾನೆ. ಈತನ ರಂಪಾಟದ ಜೊತೆಗೆ ಗ್ರಾಮಸ್ಥರ ಜೊತೆ ದುರ್ವರ್ತನೆ ಮಾಡುತ್ತಿದ್ದಾನೆ ಎಂಬ ಆರೋಪ ಕೇಳಿಬರುತ್ತಿದೆ. ಇದರ ಜೊತೆ ಸಂಜು ಬೆಣ್ಣಿ ವಿರುದ್ಧ ಕ್ರಮಕೈಗೊಳ್ಳದ ತಹಶೀಲ್ದಾರ್ ಪ್ರಶಾಂತ್ ಪಾಟೀಲ್ ವಿರುದ್ಧವೂ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಸರ್ಕಾರಿ ನೌಕರರು ಬೇಕಾಬಿಟ್ಟಿ ಸಾಮಾಜಿಕ ಜಾಲತಾಣ ಬಳಕೆ ಮಾಡಿದರೆ ಹುಷಾರ್!

    ಸರ್ಕಾರಿ ನೌಕರರು ಬೇಕಾಬಿಟ್ಟಿ ಸಾಮಾಜಿಕ ಜಾಲತಾಣ ಬಳಕೆ ಮಾಡಿದರೆ ಹುಷಾರ್!

    ಬೆಂಗಳೂರು: ಸರ್ಕಾರಿ ನೌಕರರು ಇತ್ತಿಚೀನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಒಂದು ಪಕ್ಷದ ಪರ ಅಥವಾ ವಿರೋಧವಾಗಿ ತಮ್ಮ ಅಭಿಪ್ರಾಯಗಳನ್ನು ಮಂಡಿಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ, ಸರ್ಕಾರಿ ನೌಕರರ ಸಾಮಾಜಿಕ ಜಾಲತಾಣದ ಬಳಕೆಯ ಬಗ್ಗೆ ಕಡಿವಾಣ ಹಾಕಲು ಮುಂದಾಗಿದೆ.

    ಸರ್ಕಾರಿ ನೌಕರರು ರಾಜಕೀಯವಾಗಿ ತಟಸ್ಥ ಮನೋಭಾವವನ್ನು ಹೊಂದಿರಬೇಕು. ಜೊತೆಗೆ ಯಾವುದೇ ಪಕ್ಷದ ಪರ ಅಥವಾ ವಿರೋಧವಾಗಿ ಹೇಳಿಕೆ ಕೊಡುವುದಾಗಲಿ ಪಕ್ಷಗಳ ಪರ ಗುರುತಿಸಿಕೊಂಡಿರುವುದು ಕಂಡುಬಂದರೆ ಸರ್ಕಾರ ನೌಕರರ ಮೇಲೆ ಕ್ರಮ ಕೈಗೊಳ್ಳುವ ಅವಕಾಶವಿದೆ. ಹಾಗಾಗಿ ಸರ್ಕಾರಿ ನೌಕಕರು ಸಮಾಜದಲ್ಲಿ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕೆಂಬುದನ್ನು ಸರ್ಕಾರಿ ನಿಯಮದಲ್ಲಿ ಸ್ಪಷ್ಟವಾಗಿದೆ. ಇದನ್ನೂ ಓದಿ: ವೇಸ್ಟ್ ಬಾಡಿ ಯಾರು ಅಂತ ಇಡೀ ರಾಜ್ಯಕ್ಕೆ ತಿಳಿದಿದೆ: ಜಾರಕಿಹೊಳಿಗೆ ತಿವಿದ ಸಿದ್ದರಾಮಯ್ಯ

    ಆದರೆ ಇತ್ತೀಚಿನ ದಿನಗಳಲ್ಲಿ ಸರ್ಕಾರಿ ನೌಕಕರು ಸಾಮಾಜಿಕ ಜಾಲತಾಣದಲ್ಲಿ ಪಕ್ಷದ ಪರ ಅಥವಾ ವಿರೋಧವಾಗಿ ಲೇಖನ, ಅಭಿಪ್ರಾಯ, ವೀಡಿಯೋಗಳನ್ನು ಹಂಚಿಕೊಳ್ಳುವುದನ್ನು ಸರ್ಕಾರ ಗಮನಿಸಿದೆ. ಇದಕ್ಕೆ ಕಡಿವಾಣ ಹಾಕಲು ಮುಂದಾಗಿರುವ ಸರ್ಕಾರ ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರಿ ನೌಕಕರು ಪ್ರದರ್ಶಿಸುವ ವರ್ತನೆಯು ಕೂಡ ರಾಜ್ಯ ನಾಗರಿಕ ಸೇವಾ(ನಡತೆ) ನಿಮಯಗಳು, 2021ರ ವ್ಯಾಪ್ತಿಗೆ ಒಳಪಡಿಸಿದೆ. ಈ ನಿಯಮಗಳಿಗೆ ವ್ಯತಿರಿಕ್ತವಾಗಿ ನಡೆದುಕೊಳ್ಳುವ ಸರ್ಕಾರಿ ನೌಕರರ ವಿರುದ್ಧ ಕರ್ನಾಟಕ ನಾಗರಿಕ ಸೇವಾ ನಿಯಮ 1957ರ ಅವಕಾಶಗಳನ್ವಯ ಶಿಸ್ತುಕ್ರಮ ಕೈಗೊಳ್ಳುವಂತೆ ಆಯಾ ಪ್ರಾಧಿಕಾರಗಳಿಗೆ ಸರ್ಕಾರ ತಿಳಿಸಿದೆ. ಇದನ್ನೂ ಓದಿ: ಶ್ರೀನಿವಾಸ್ ಪೂಜಾರಿ ಒಂದು ರೂಪಾಯಿ ಖರ್ಚು ಮಾಡದೇ ಗೆದ್ದಿದ್ದಾರೆ: ಬಿ.ಎಲ್.ಸಂತೋಷ್

    ಇನ್ನುಮುಂದೆ ಸರ್ಕಾರಿ ನೌಕಕರು ಬೇಕಾಬಿಟ್ಟಿ ಸಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದಲ್ಲಿ ನಿಯಮಕ್ಕೆ ವಿರುದ್ಧವಾಗಿದ್ದರೆ ತಮ್ಮ ಸರ್ಕಾರಿ ಉದ್ಯೋಗಕ್ಕೆ ಕುತ್ತು ತರುವ ಸಾಧ್ಯತೆ ಹೆಚ್ಚಿದೆ.

  • ಎಸಿಬಿ ದಾಳಿ – 15 ಲಕ್ಷ ನಗದು, 750 ಗ್ರಾಂ ಚಿನ್ನ, ಅಪಾರ ಆಸ್ತಿ ಪತ್ರ ಪತ್ತೆ

    ಎಸಿಬಿ ದಾಳಿ – 15 ಲಕ್ಷ ನಗದು, 750 ಗ್ರಾಂ ಚಿನ್ನ, ಅಪಾರ ಆಸ್ತಿ ಪತ್ರ ಪತ್ತೆ

    ಬೀದರ್: ಜಿಲ್ಲಾ ಪಂಚಾಯತ್ ಬಸವಕಲ್ಯಾಣ ವಿಭಾಗದಲ್ಲಿ ಗ್ರಾಮೀಣ ಕುಡಿಯುವ ನೀರು ಯೋಜನೆಯ ಕಿರಿಯ ಅಭಿಯಂತರರಾಗಿ ಕಾರ್ಯನಿರ್ವಹಿಸುತ್ತಿದ್ದ ಸುರೇಶ್ ಮೋರೆ ನಿವಾಸದ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು. ದಾಳಿಯಲ್ಲಿ ನಗದು, ಚಿನ್ನಾಭರಣ ಮತ್ತು ಆಸ್ತಿ ಪತ್ರಗಳನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

    ಬಸವಕಲ್ಯಾಣದ ಶಿವಾಜಿ ನಗರದ ಸುರೇಶ್ ಮೋರೆ ನಿವಾಸದಲ್ಲಿ 15 ಲಕ್ಷ ನಗದು, 750 ಗ್ರಾಂ ಚಿನ್ನ, 3 ನಿವೇಶನಗಳ ಆಸ್ತಿ ಪತ್ರ ಪತ್ತೆಯಾಗಿದೆ. ಜೊತೆಗೆ 10 ಲಕ್ಷ ಎಫ್‍ಡಿ ಹಾಗೂ 20 ಲಕ್ಷ ಬ್ಯಾಂಕ್ ಬ್ಯಾಲೆನ್ಸ್ ಹೊಂದಿರೋದು ದಾಳಿಯಲ್ಲಿ ಬೆಳಕಿಗೆ ಬಂದಿದೆ. ಇದನ್ನೂ ಓದಿ: ದರ್ಶನ್ ನನ್ನ ಮೇಲೆ ಹಲ್ಲೆ ನಡೆಸಿಲ್ಲ, ಕೋಮಾದಲ್ಲಿಯೂ ಇಲ್ಲ: ಗೋಪಾಲ್ ರಾಜ್

    ಬೀದರ್ ಜಿಲ್ಲೆಯಲ್ಲಿ ಇಂದು ಮೂರು ಕಡೆ ಏಕ ಕಾಲದಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಎಸಿಬಿ ಎಸ್‍ಪಿ ಮಹೇಶ್ ಮೇಘಣ್ಣನವರ್ ಮಾರ್ಗದರ್ಶನದಲ್ಲಿ ದಾಳಿ ನಡೆದಿತ್ತು. ಇನ್ನಿಬ್ಬರು ಅಧಿಕಾರಿಗಳ ಆಸ್ತಿ ವಿವರದ ಮಾಹಿತಿ ತಿಳಿದು ಬಂದಿಲ್ಲ. ಇದನ್ನೂ ಓದಿ: ದರ್ಶನ್ ಒಮ್ಮೆ ಕೆಟ್ಟದಾಗಿ ಬೈದ್ರು ಅದಕ್ಕೆ ಕೆಲಸ ಬಿಟ್ಟೆ: ಹಾರ್ಸ್ ರೈಡರ್ ಸಂತೋಷ್

  • ಕೊರೊನಾ ನಿಯಂತ್ರಣ ಕೆಲಸಗಳಿಗೆ ಸರ್ಕಾರಿ ಉದ್ಯೋಗಿಗಳ ಬಳಕೆ- ಸರ್ಕಾರದಿಂದ ಮಹತ್ವದ ನಿರ್ಧಾರ

    ಕೊರೊನಾ ನಿಯಂತ್ರಣ ಕೆಲಸಗಳಿಗೆ ಸರ್ಕಾರಿ ಉದ್ಯೋಗಿಗಳ ಬಳಕೆ- ಸರ್ಕಾರದಿಂದ ಮಹತ್ವದ ನಿರ್ಧಾರ

    ಬೆಂಗಳೂರು: ಅನ್‍ಲಾಕ್-2 ಅವಧಿಯಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ಸರ್ಕಾರಿ ಉದ್ಯೋಗಿಗಳ ಬಳಕೆ ಮಾಡಿಕೊಳ್ಳಲು ಸರ್ಕಾರ ಮಹತ್ವ ನಿರ್ಧಾರವನ್ನು ಮಾಡಿದೆ.

    ಕೋವಿಡ್ ನಿಯಂತ್ರಣ ಮಾಡಲು ಉದ್ದೇಶಕ್ಕಾಗಿ ಕಣ್ಗಾವಲು ಮತ್ತು ಸಾರ್ವಜನಿಕ ಆರೋಗ್ಯ ಪ್ರಯತ್ನಗಳನ್ನು ಹೆಚ್ಚಿಸುವ ಅಗತ್ಯವಿರುವ ಕಾರಣ ಸರ್ಕಾರಿ ಉದ್ಯೋಗಿಗಳ ಬಳಕೆಗೆ ಸರ್ಕಾರ ಮುಂದಾಗಿದೆ. ಆದ್ದರಿಂದ ರಾಜ್ಯದ ಎಲ್ಲಾ ಇಲಾಖೆಯ, ಅನುದಾನಿತ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ 50 ವರ್ಷ ಒಳಗಿನ ಅಧಿಕಾರಿಗಳು, ಸಿಬ್ಬಂದಿಗಳ ಮಾಹಿತಿ ನೀಡಲು ಸೂಚನೆ ಇಲಾಖೆಗಳ ಮುಖ್ಯಸ್ಥರಿಗೆ ಸೂಚನೆ ನೀಡಿ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್ ಆದೇಶ ನೀಡಿದ್ದಾರೆ.

    ಇಲಾಖೆಗಳಲ್ಲಿ ಶೇ.25 ರಿಂದ 50ಕ್ಕಿಂತ ಹೆಚ್ಚದಂತೆ ಉದ್ಯೋಗಿಗಳನ್ನು ಇಲಾಖೆಯ ಕೆಲಸಕ್ಕೆ ಉಳಿಸಿಕೊಳ್ಳಬಹುದಾಗಿದೆ. ಗರ್ಭಿಣಿ, ಬಾಣಂತಿಯರು ಹಾಗೂ ವಿಕಲಚೇತರನ್ನು ಹೊರತುಪಡಿಸಿ ಉಳಿದವರು ವಿಪತ್ತು ನಿರ್ವಹಣಾ ಕಾಯ್ದೆಯ ಆದೇಶದಲ್ಲಿ ಕೆಲಸ ನಿರ್ವಹಿಸಬೇಕು ಮತ್ತು ಯಾವುದೇ ವಿನಾಯಿತಿ ಲಭ್ಯವಿರುವುದಿಲ್ಲ ಎಂದು ಸೂಚಿಸಲಾಗಿದೆ.

    ಬೆಂಗಳೂರು, ಬೆಂಗಳೂರು ಸುತ್ತಮುತ್ತ, ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ವಾಸವಾಗಿರುವ ಅಧಿಕಾರಿಗಳು, ಸಿಬ್ಬಂದಿಗಳ ಮಾಹಿತಿ ನೀಡುವಂತೆ ಸೂಚನೆ ನೀಡಲಾಗಿದೆ. ನಾಳೆ ಸಂಜೆ 5 ಗಂಟೆ ಒಳಗೆ ಬಿಬಿಎಂಪಿ ಆಯುಕ್ತರ ಇ-ಮೇಲ್ ಗೆ ಮಾಹಿತಿ ನೀಡುವಂತೆ ಎಲ್ಲಾ ಇಲಾಖೆ ಮುಖ್ಯಸ್ಥರಿಗೆ ಸಿಎಸ್ ವಿಜಯ್ ಭಾಸ್ಕರ್ ಸೂಚನೆ ನೀಡಿದ್ದಾರೆ.

  • ಮಧ್ಯರಾತ್ರಿ 12 ಗಂಟೆಯವರೆಗೂ ಕರ್ತವ್ಯ ನಿರ್ವಹಿಸಿ ಆಯುಷ್ ಅಧಿಕಾರಿಯಿಂದ ಅಧಿಕಾರ ಹಸ್ತಾಂತರ

    ಮಧ್ಯರಾತ್ರಿ 12 ಗಂಟೆಯವರೆಗೂ ಕರ್ತವ್ಯ ನಿರ್ವಹಿಸಿ ಆಯುಷ್ ಅಧಿಕಾರಿಯಿಂದ ಅಧಿಕಾರ ಹಸ್ತಾಂತರ

    ಧಾರವಾಡ: ಜಿಲ್ಲಾ ಆಯುಷ್ ಅಧಿಕಾರಿಯೊಬ್ಬರು ತಮ್ಮ ಸೇವಾ ನಿವೃತ್ತಿ ದಿನದ ಕೊನೆ ಗಳಿಗೆಯವರೆಗೂ ಕರ್ತವ್ಯ ನಿರ್ವಹಿಸಿ ಅಧಿಕಾರ ಹಸ್ತಾಂತರಿಸಿದರು.

    ನಿರ್ಗಮಿತ ಜಿಲ್ಲಾ ಆಯುಷ್ ಅಧಿಕಾರಿ ಡಾ.ಸಂಗಮೇಶ್ ಕಲಹಾಳ ಅವರು ಕರ್ತವ್ಯದ ಅವಧಿಯ ಕೊನೆಯ ಗಳಿಗೆಯವರೆಗೂ ಜವಾಬ್ದಾರಿ ನಿರ್ವಹಿಸಿ, ಸರ್ಕಾರದ ಋಣ ತೀರಿಸಬೇಕೆಂಬ ಆದರ್ಶ ಹೊಂದಿದ್ದರು. ಅದೇ ರೀತಿ ಮೇ 31ರ ಮಧ್ಯರಾತ್ರಿ 12 ಗಂಟೆಗೆ ಅಧಿಕಾರ ಹಸ್ತಾಂತರಿಸಿದರು.

    ತಮ್ಮ ನಿವೃತ್ತಿಯ ದಿನ ಮಾತನಾಡಿರುವ ಇವರು, ಸರ್ಕಾರದ ನಿಯಮದಂತೆ ಒಂದು ದಿನವೆಂದರೆ ಮಧ್ಯರಾತ್ರಿ 12 ಗಂಟೆಯಿಂದ ಮುಂದಿನ ದಿನದ ಮಧ್ಯರಾತ್ರಿ 12 ರವರೆಗೆ ಎಂದು ಸೂಚಿಸಲಾಗಿದೆ. ಒಂದು ದಿನದ ವೇತನವೆಂದರೆ 24 ತಾಸುಗಳಿಗೆ ನೀಡುವಂತಹದ್ದಾಗಿದೆ ಎಂದರು.

    ನೌಕರರು ಸಮರ್ಥವಾಗಿ ಕಾರ್ಯನಿರ್ವಹಿಸಲು ದೈಹಿಕ, ಮಾನಸಿಕ ಆರೋಗ್ಯದೃಷ್ಟಿಯಿಂದ ಕೆಲಸದ ವೇಳೆಯನ್ನು ನಿಗದಿಪಡಿಸಲಾಗಿರುತ್ತದೆ. ಹೀಗಿದ್ದರೂ ಅತ್ಯವಶ್ಯಕ ಮತ್ತು ತುರ್ತು ಸ್ಥಿತಿಯಲ್ಲಿ ದಿನದ ಯಾವುದೇ ಸಂದರ್ಭದಲ್ಲಿ ಕಾರ್ಯನಿರ್ವಹಿಸಬೇಕಾಗಿರುತ್ತದೆ. ಸರ್ಕಾರದ ಉದಾತ್ತವಾದ ಧೋರಣೆಯಂತೆ ನೌಕರರ ನಿವೃತ್ತಿ ವರ್ಗಾವಣೆ ಸಂದರ್ಭದಲ್ಲಿ ಕಾರ್ಯಭಾರ ವಹಿಸಲು ಕಾರ್ಯಭಾರ ವಹಿಸಿಕೊಡುವ ದಿನ ಸರ್ಕಾರಿ ರಜೆ ಇದ್ದಲ್ಲಿ ಹಿಂದಿನ ಕೆಲಸದ ದಿನ ಕಾರ್ಯಭಾರ ವಹಿಸಿಕೊಡಬಹುದಾಗಿದೆ ಎಂದು ಹೇಳಿದರು.

  • ಎಸ್‍ಡಿಸಿ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಗುತ್ತಿಗೆದಾರನಿಗೆ ಬಿತ್ತು ಗೂಸಾ

    ಎಸ್‍ಡಿಸಿ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಗುತ್ತಿಗೆದಾರನಿಗೆ ಬಿತ್ತು ಗೂಸಾ

    ಕಾರವಾರ: ವಿಶ್ವ ಮಹಿಳಾ ದಿನದಂದೇ ಸರ್ಕಾರಿ ಉದ್ಯೋಗಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಲು ಹೋಗಿ ಗುತ್ತಿಗೆದಾರನೊಬ್ಬ ಗೂಸಾ ತಿಂದ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನಲ್ಲಿ ನಡೆದಿದೆ.

    ಮುಂಡಗೋಡದ ನಿವಾಸಿ ಪ್ರಕಾಶ್ ಅಜ್ಜಮ್ಮನವರ್ ಲೈಂಗಿಕ ಕಿರುಕುಳ ನೀಡಲು ಹೋಗಿ ಗೂಸಾ ತಿಂದ ಗುತ್ತಿಗೆದಾರ. ಮುಂಡುಗೋಡದ ತಹಶೀಲ್ದಾರ್ ಕಚೇರಿಯ ಬಳಿಯೇ ಮಹಿಳೆಯ ಸಂಬಂಧಿಕರು, ಸ್ಥಳೀಯರು ಸೇರಿ ಪ್ರಕಾಶ್‍ಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

    ಆಗಿದ್ದೇನು?:
    ತಹಶೀಲ್ದಾರ್ ಕಚೇರಿಯಲ್ಲಿ ಮಹಿಳೆ ಎಸ್‍ಡಿಸಿ ಆಗಿ ಕೆಲಸ ಮಾಡುತ್ತಿದ್ದಾರೆ. ಪ್ರಕಾಶ್ ಕಳೆದ ಒಂದು ವರ್ಷದಿಂದ ಮಹಿಳೆಗೆ ಪತ್ರ ಬರೆದು, ಇಲ್ಲವೇ ಕಚೇರಿಗೆ ಬಂದು ಲೈಂಗಿಕ ಕಿರುಕುಳ ನೀಡುತ್ತಿದ್ದ. ಅಷ್ಟೇ ಅಲ್ಲದೆ ಮಹಿಳೆಗೆ ಕಚೇರಿಯ ಕೆಲಸ ಮುಗಿಸಿಕೊಂಡು ಮನೆಗೆ ಹೋಗುವಾಗ ಹಿಂಬಾಲಿಸುತ್ತಿದ್ದ.

    ಪ್ರಕಾಶ್ ನಿಂದ ಉಂಟಾಗುತ್ತಿದ್ದ ಸಮಸ್ಯೆಯ ಕುರಿತು ಮಹಿಳೆ ಮನೆಯಲ್ಲಿ ಹೇಳಿಕೊಂಡಿದ್ದರು. ಪ್ರಕಾಶ್ ಇಂದು ಕಚೇರಿಗೆ ಬಂದಿರುವ ವಿಚಾರವನ್ನು ತಮ್ಮ ಮಗನಿಗೆ ತಿಳಿಸಿದ್ದಾರೆ. ತಕ್ಷಣವೇ ಕಚೇರಿಗೆ ಬಂದ ಮಹಿಳೆಯ ಮಗ ಪ್ರಕಾಶ್ ಕೊರಳುಪಟ್ಟಿ ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಈ ವೇಳೆ ಮಹಿಳೆ ಕೂಡ ಪ್ರಕಾಶ್ ಕೆನ್ನೆಗೆ ಬಾರಿಸಿದ್ದಾರೆ. ಬಳಿಕ ಎಲ್ಲರೂ ಸೇರಿ ಪ್ರಕಾಶ್‍ನನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

    ಗುತ್ತಿಗೆದಾರ ಪ್ರಕಾಶ್ 2018 ಮಾರ್ಚ್ ನಲ್ಲಿ ಜಾತಿ ಪ್ರಮಾಣಪತ್ರ ಮಾಡಿಸಿಕೊಡುವ ನೆಪದಲ್ಲಿ ವಿದ್ಯಾರ್ಥಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿ ಸಿಕ್ಕಿಹಾಕಿಕೊಂಡಿದ್ದ. ಬಸ್ ನಿಲ್ದಾಣದಲ್ಲಿಯೇ ಸ್ಥಳೀಯರು ಪ್ರಕಾಶ್‍ನನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv