Tag: Government Bus

  • ಹೊಯ್ಸಳಲು ಗ್ರಾಮಕ್ಕೆ 75 ವರ್ಷಗಳ ಬಳಿಕ ಬಂತು ಸರ್ಕಾರಿ ಬಸ್

    ಹೊಯ್ಸಳಲು ಗ್ರಾಮಕ್ಕೆ 75 ವರ್ಷಗಳ ಬಳಿಕ ಬಂತು ಸರ್ಕಾರಿ ಬಸ್

    ಚಿಕ್ಕಮಗಳೂರು: ರಾಜ್ಯವನ್ನಾಳಿದ ಹಲವು ರಾಜ ಮನೆತನಗಳಲ್ಲಿ ಹೊಯ್ಸಳ ಮನೆತನ (Hoysala Empire) ಕೂಡ ಒಂದು. ಅಂತಹ ಹೊಯ್ಸಳ ರಾಜರ ಮೂಲ ಸ್ಥಾನವಾದ ಹೊಯ್ಸಳಲು (Hoysalalu) ಗ್ರಾಮದಲ್ಲಿ ಸ್ವಾತಂತ್ರ‍್ಯ ಸಿಕ್ಕಿ 75 ವರ್ಷಗಳ ಬಳಿಕ ಮೊದಲ ಬಾರಿಗೆ ಸರ್ಕಾರಿ ಬಸ್ (Government Bus) ಓಡಿದೆ.

    ದಶಕಗಳ ಮನವಿ ಹಾಗೂ ಹೋರಾಟದ ಬಳಿಕ ಅಂತೂ ಇಂತು ನಮ್ಮ ಊರಿಗೆ ಸರ್ಕಾರಿ ಬಸ್ ಬಂತೆಂದು ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ. ರಾಜವಂಶ ಹೊಯ್ಸಳರ ಮೂಲಸ್ಥಾನ ಜಿಲ್ಲೆಯ ಮೂಡಿಗೆರೆ ತಾಲೂಕಿನ ಹೊಯ್ಸಳಲು ಗ್ರಾಮ. ಈ ಗ್ರಾಮದಲ್ಲಿ ಹೊಯ್ಸಳರ ಕಾಲದಲ್ಲಿ ನಿರ್ಮಾಣವಾಗಿದ್ದ ದೇವಾಲಯ ಇಂದಿಗೂ ಇದೆ.

    ಹೊಯ್ಸಳಲು ಗ್ರಾಮದಲ್ಲಿ ಸುಮಾರು 200ಕ್ಕೂ ಅಧಿಕ ಕುಟುಂಬಗಳಿವೆ. ಕಾಡಂಚಿನ ಈ ಕುಗ್ರಾಮ ಮೂಲಭೂತ ಸೌಕರ್ಯದಿಂದ ವಂಚಿತವಾಗಿತ್ತು. 75 ವರ್ಷಗಳಿಂದ ಅನೇಕ ಸರ್ಕಾರಗಳು ಬಂದು ಹೋದರು ಈ ಗ್ರಾಮದಲ್ಲಿ ಸರ್ಕಾರಿ ಬಸ್ ಓಡಿರಲಿಲ್ಲ. ಈ ಗ್ರಾಮದ ಇತರೆ ಸಮಸ್ಯೆಗಳಿಗೂ ಯಾವ ಸರ್ಕಾರಗಳು ಸ್ಪಂದಿಸಿರಲಿಲ್ಲ. ಬಡವರು-ಕೂಲಿ ಕಾರ್ಮಿಕರೇ ಹೆಚ್ಚಿರುವ ಮೂಲಭೂತ ಸೌಲಭ್ಯ ಹಾಗೂ ಸರ್ಕಾರಿ ಬಸ್ ಸೇವೆಗೆ ಹಲವು ದಶಕಗಳಿಂದ ಮನವಿ ಮಾಡುತ್ತಲೇ ಬಂದಿದ್ದರು. ಆದರೆ ಮಾಡುತ್ತೇವೆ ಅನ್ನೋ ಸರ್ಕಾರ ಹಾಗೂ ಜನನಾಯಕರು ಏನನ್ನೂ ಮಾಡಿರಲಿಲ್ಲ.

    ಬಿಸಿಲು, ಮಳೆ, ಚಳಿ, ಗಾಳಿ ಎನ್ನದೆ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು 5 ಕಿ.ಮೀ ನಡೆದುಕೊಂಡು ಬಂದು ಬಸ್ ಹಿಡಿದು ಶಾಲೆ, ಕಚೇರಿಗಳಿಗೆ ಹೋಗಬೇಕಾಗಿತ್ತು. ಇಲ್ಲಿನ ನಿವಾಸಿಗಳು ಮೂಡಿಗೆರೆಗೆ ನೂತನವಾಗಿ ಆಯ್ಕೆಯಾದ ಶಾಸಕಿ ನಯನಾ ಮೋಟಮ್ಮನವರಿಗೂ ಬಸ್‌ಗಾಗಿ ಮನವಿ ಸಲ್ಲಿಸಿದ್ದರು. ಇದೀಗ ಹೊಯ್ಸಳಲು ಗ್ರಾಮಕ್ಕೆ ಸರ್ಕಾರಿ ಬಸ್ ಬಂದಿರುವುದು ಗ್ರಾಮಸ್ಥರ ದಶಕಗಳ ಹೋರಾಟಕ್ಕೆ ಸಿಕ್ಕ ಜಯವಾಗಿದೆ. ಇದನ್ನೂ ಓದಿ: ಮಳೆಗಾಗಿ ವಿಚಿತ್ರವಾದ ಆಚರಣೆ- ಸ್ಮಶಾನದ ಗೋರಿಗಳಿಗೆ ನೀರುಣಿಸಿದ ಗ್ರಾಮಸ್ಥರು

    ಹೀಗಾಗಿ ಗ್ರಾಮಸ್ಥರು ಬಸ್ಸಿಗೆ ತಳಿರು ತೋರಣಗಳನ್ನು ಕಟ್ಟಿ ಸ್ವಾಗತಿಸಿಕೊಂಡಿದ್ದಾರೆ. ಬಸ್ಸಿನ ಬಾಗಿಲಿಗೆ ಟೇಪ್ ಹಾಕಿ, ಅದನ್ನು ಕತ್ತರಿಸುವ ಮೂಲಕ ಮತ್ತೆಂದು ನಿಲ್ಲದಿರಲಿ ಎಂದು ಸಂಚಾರಕ್ಕೆ ಅಡಿ ಇಟ್ಟಿದ್ದಾರೆ. ಹೊಯ್ಸಳಲು ಗ್ರಾಮಕ್ಕೆ ಸರ್ಕಾರಿ ಬಸ್ ಸೇವೆ ಸಿಕ್ಕಿರುವುದರಿಂದ ಶಕ್ತಿ ಯೋಜನೆಯು ಈ ಭಾಗದ ಬಡ ವರ್ಗದವರಿಗೆ ಅನುಕೂಲವಾಗಲಿದೆ. ಜಿಲ್ಲೆಯ ಮಲೆನಾಡು ಭಾಗದಲ್ಲಿ ನೂರಾರು ಹಳ್ಳಿಗಳಿಗೆ ಇಂದಿಗೂ ಸರ್ಕಾರಿ ಬಸ್ ಸೌಲಭ್ಯವಿಲ್ಲ. ಹೀಗಾಗಿ ಸರ್ಕಾರ ಎಲ್ಲಾ ಭಾಗಕ್ಕೂ ಸರ್ಕಾರಿ ಬಸ್ ಬಿಡುವಂತೆ ಮಲೆನಾಡಿಗರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಬೆಲೆ ಏರಿಕೆ ಪಟ್ಟಿ ನೋಡಿದ್ರೆ ಎದೆ ನಡುಗುತ್ತೆ – ಹೆಚ್‌.ಡಿ ಕುಮಾರಸ್ವಾಮಿ

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_title” view=”carousel” /]

  • ಅನಧಿಕೃತವಾಗಿ ಮಹಾರಾಷ್ಟ್ರ ಸರ್ಕಾರಿ ಬಸ್‍ನಲ್ಲಿ ಸಾಗಿಸ್ತಿದ್ದ 27.34 ಲಕ್ಷ ರೂ. ಜಪ್ತಿ

    ಅನಧಿಕೃತವಾಗಿ ಮಹಾರಾಷ್ಟ್ರ ಸರ್ಕಾರಿ ಬಸ್‍ನಲ್ಲಿ ಸಾಗಿಸ್ತಿದ್ದ 27.34 ಲಕ್ಷ ರೂ. ಜಪ್ತಿ

    ಬೆಳಗಾವಿ: ಮಹಾರಾಷ್ಟ್ರ (Maharastra) ಸರ್ಕಾರಿ ಬಸ್‍ನಲ್ಲಿ ಸಾಗಿಸುತ್ತಿದ್ದ 27.34 ಲಕ್ಷ ಹಣವನ್ನ ಬೆಳಗಾವಿ ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ.

    ಕರ್ನಾಟಕ ಮಹಾರಾಷ್ಟ್ರ ಗಡಿಯಲ್ಲಿರುವ ಬೆಳಗಾವಿ ತಾಲೂಕಿನ ಬಾಚಿ ಚೆಕ್‍ಪೋಸ್ಟ್ ನಲ್ಲಿ ದಾಖಲೆ ಇಲ್ಲದೇ ಮಹಾರಾಷ್ಟ್ರದ ಸಾರಿಗೆ ಸಂಸ್ಥೆಯ ಬಸ್‍ನಲ್ಲಿ ಪಾಂಡುರಂಗ ಎಂಬವರು ಹಣ ಸಾಗಿಸುತ್ತಿದ್ದರು. ಇದನ್ನೂ ಓದಿ: ನರೇಗಾ ಬಿಲ್ ಪಾವತಿಗೆ ಗ್ರಾ.ಪಂ ಅಧಿಕಾರಿಯಿಂದ ಲಂಚಕ್ಕೆ ಬೇಡಿಕೆ- ಹಣವಿಲ್ಲದೆ ಎತ್ತುಗಳನ್ನು ನೀಡಲು ಮುಂದಾದ ರೈತ

    ಇತ್ತ ತಪಾಸಣೆಯ ಮಾಡುವ ಸಂದರ್ಭದಲ್ಲಿ ಟೂರಿಸ್ಟ್ ಬ್ಯಾಗ್‍ನಲ್ಲಿ 27 ಲಕ್ಷ 34 ಸಾವಿರ ಹಣ ಪತ್ತೆಯಾಗಿದೆ. ಸದ್ಯ ಹಣವನ್ನು ಜಪ್ತಿ ಮಾಡಿಕೊಂಡ ಪೊಲೀಸರು, ತನಿಖೆ ಮುಂದುವರಿಸಿದ್ದಾರೆ. ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಬಸ್ಸಿನ ರಾಡ್ ಸೊಂಟಕ್ಕೆ ತಾಗಿ ಮುರಿದೇ ಹೋಯ್ತು ವ್ಯಕ್ತಿಯ ಬೆನ್ನುಮೂಳೆ!

    ಬಸ್ಸಿನ ರಾಡ್ ಸೊಂಟಕ್ಕೆ ತಾಗಿ ಮುರಿದೇ ಹೋಯ್ತು ವ್ಯಕ್ತಿಯ ಬೆನ್ನುಮೂಳೆ!

    ಮಂಗಳೂರು: ರಸ್ತೆ ಅವ್ಯವಸ್ಥೆಯಿಂದಾಗಿ ಬಸ್ಸಿನ ರಾಡ್ ಸೊಂಟಕ್ಕೆ ತಾಗಿ ವ್ಯಕ್ತಿಯ ಬೆನ್ನು ಮೂಳೆ ಮುರಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಕಲ್ಲಡ್ಕದಲ್ಲಿ ನಡೆದಿದೆ.

    ವಿಜಯ್ ಕುಮಾರ್ ಬೆನ್ನು ಮೂಳೆ ಮುರಿತಕ್ಕೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿ. ಸುಳ್ಯ ತಾಲೂಕಿನ ಬೆಳ್ಳಾರೆ ನಿವಾಸಿಯಾಗಿರುವ ಇವರು, ಮೊಬೈಲ್ ಟೆಕ್ನೀಷಿಯನ್ ಆಗಿ ಕೆಲಸ ಮಾಡುತ್ತಿದ್ದಾರೆ. ಅಂತೆಯೇ ಇವರು ಮೊಬೈಲ್ ಬಿಡಿಭಾಗಕ್ಕಾಗಿ ಮಂಗಳೂರಿಗೆ ಬಂದಿದ್ದರು. ಮಂಗಳೂರಿನಿಂದ ಮತ್ತೆ ಬೆಳ್ಳಾರೆಗೆ ಹೋಗುವ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ.

    ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-75ರ ಕಲ್ಲಡ್ಕ ಪ್ರದೇಶದಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ಕುಂಟುತ್ತಾ ಸಾಗುತ್ತಿದೆ. ಈ ರಾಷ್ಟ್ರೀಯ ಹೆದ್ದಾರಿ ಬೃಹತ್ ಗುಂಡಿಗಳಿಂದ ಕೂಡಿದೆ. ವ್ಯಕ್ತಿ ಬಸ್ಸಿನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಸರ್ಕಾರಿ ಬಸ್ ರಸ್ತೆ ಗುಂಡಿಗೆ ಬಿದ್ದಿದೆ. ಈ ವೇಳೆ ವಿಜಯ್ ಸೀಟಿನಿಂದ ಮೇಲೆ ಹಾರಿದ್ದಾರೆ. ಪರಿಣಾಮ ಬಸ್ಸಿನ ರಾಡ್ ತಾಗಿ ವಿಜಯ್ ಕುಮಾರ್ ಬೆನ್ನಿಗೆ ಗಂಭೀರ ಪೆಟ್ಟು ಬಿದ್ದಿದೆ.

    ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿಜಯ್ ಅವರ ಬೆನ್ನು ಹುರಿ, ಕುತ್ತಿಗೆ ಭಾಗದ ಎಲುಬು ಜಖಂಗೊಂಡಿದೆ. ಬೆನ್ನು ಮೂಳೆ ಆಪರೇಷನ್ ಗೆ ವೈದ್ಯರು ಸೂಚಿಸಿದ್ದಾರೆ. ಸದ್ಯ ವಿಜಯ್ ಕುಮಾರ್ ಅವರು ಮಲಗಿದ ಸ್ಥಿತಿಯಲ್ಲೇ ಇದ್ದಾರೆ. ಇದನ್ನೂ ಓದಿ: ಎಸಿಬಿ ರದ್ದು; ಹೈಕೋರ್ಟ್‌ ಆದೇಶ ಪಾಲಿಸ್ತೀವಿ, ಸುಪ್ರೀಂಗೆ ಹೋಗಲ್ಲ – ಸಿಎಂ

    ಘಟನೆ ಸಂಬಂಧ ಬಸ್ ಚಾಲಕನ ವಿರುದ್ಧ ನಿರ್ಲಕ್ಷ್ಯದ ಚಾಲನೆ ಎಂದು ದೂರು ನೀಡಲಾಗಿದ್ದು, ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಎರಡು ಸರ್ಕಾರಿ ಬಸ್‍ಗಳ ಮಧ್ಯೆ ಮುಖಾಮುಖಿ ಡಿಕ್ಕಿ – ಹತ್ತಕ್ಕೂ ಹೆಚ್ಚು ಜನರಿಗೆ ಗಾಯ

    ಎರಡು ಸರ್ಕಾರಿ ಬಸ್‍ಗಳ ಮಧ್ಯೆ ಮುಖಾಮುಖಿ ಡಿಕ್ಕಿ – ಹತ್ತಕ್ಕೂ ಹೆಚ್ಚು ಜನರಿಗೆ ಗಾಯ

    ಬೆಳಗಾವಿ: ಎರಡು ಸರ್ಕಾರಿ ಬಸ್‍ಗಳ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿದ್ದು, ಹತ್ತಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ಬೆಳಗಾವಿ ಸವದತ್ತಿ ತಾಲೂಕಿನ ಹಲಕಿ ಕ್ರಾಸ್ ಬಳಿ ನಡೆದಿದೆ.

    ಸವದತ್ತಿ ತಾಲೂಕಿನ ಹಲಕಿ ಕ್ರಾಸ್ ಬಳಿ ಎರಡು ಸರ್ಕಾರಿ ಬಸ್‍ಗಳ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿ ಹತ್ತಕ್ಕೂ ಹೆಚ್ಚು ಜನರಿಗೆ ಗಾಯವಾಗಿದೆ. ಅದೃಷ್ಟವಶಾತ್ ಯಾರಿಗೂ ಯಾವುದೇ ರೀತಿಯ ಪ್ರಾಣಾಪಾಯ ಸಂಭವಿಸಿಲ್ಲ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ರವಾನೆ ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇದನ್ನೂ ಓದಿ: ಭಾರೀ ಮಳೆಗೆ ಕಣ್ಣೂರಿನಲ್ಲಿ ಗುಡ್ಡ ಕುಸಿತ – 2 ಮನೆಗಳಿಗೆ ಹಾನಿ

    ಸರ್ಕಾರಿ ಬಸ್ ಬೆಳಗಾವಿ ನಗರದಿಂದ ಬಾಗಲಕೋಟೆಗೆ ತೆರಳುತ್ತಿತ್ತು. ಈ ಮಧ್ಯೆ ಯರಗಟ್ಟಿಯಿಂದ ಬೆಳಗಾವಿಯತ್ತ ಬರುತ್ತಿದ್ದ ಬಸ್ ಅಪಘಾತವಾಗಿದ್ದು, ಎರಡು ಬಸ್‍ಗಳ ಮುಂಭಾಗ ನಜ್ಜುಗುಜ್ಜಾಗಿದೆ.

    ಘಟನೆಯಲ್ಲಿ ಹತ್ತಕ್ಕೂ ಹೆಚ್ಚು ಜನರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮುರಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

    Live Tv
    [brid partner=56869869 player=32851 video=960834 autoplay=true]

  • ಸರ್ಕಾರಿ ಬಸ್ ಪೂಜೆಗೆ 100 ರೂಪಾಯಿ ನೀಡಿದ ಸಾರಿಗೆ ಇಲಾಖೆ

    ಸರ್ಕಾರಿ ಬಸ್ ಪೂಜೆಗೆ 100 ರೂಪಾಯಿ ನೀಡಿದ ಸಾರಿಗೆ ಇಲಾಖೆ

    -ಕಾರ್, ಜೀಪ್ ಪೂಜೆಗೆ 40 ರೂಪಾಯಿ

    ಬೆಂಗಳೂರು: ಸರ್ಕಾರಿ ಬಸ್ ಆಯುಧ ಪೂಜೆಗಾಗಿ ಸಾರಿಗೆ ಇಲಾಖೆ ನೌಕರರಿಗೆ 100 ರೂಪಾಯಿ ನೀಡಿರುವುದು ಸುದ್ದಿಯಾಗಿದೆ.

    ಸಾರಿಗೆ ಸಚಿವರೇನೋ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಹಬ್ಬ ಮಾಡುತ್ತಾರೆ. ಅವ್ರಿಗೇನು ಕಡಿಮೆ ಹೇಳಿ, ಸಾರಿಗೆ ಇಲಾಖೆ ನನಗೆ ಬೇಡ ಎನ್ನುತ್ತಿದ್ದ ಅವರು ಕೊನೆಗೆ ಅನಿವಾರ್ಯವಾಗಿ ಸಾರಿಗೆ ಸಚಿವರಾಗಿ ಮುಂದುವರೆಯುತ್ತಿದ್ದು, ಶ್ರೀರಾಮುಲು ಅವ್ರಿಗೆ ಸಾರಿಗೆ ನೌಕರರ ಕಷ್ಟವೇನು ಅನ್ನೋದು ತಿಳಿದಿಲ್ಲ. ಸಾರಿಗೆ ನೌಕರರ ಕಷ್ಟ ತಿಳಿದಿದ್ರೆ ಖಂಡಿತ ಹೀಗೆ ಬಸ್ ಪೂಜೆಗೆ ಅಂತಾ 100 ರೂ ನೀಡ್ತಿರಲಿಲ್ಲ. ಸಾರಿಗೆ ಇಲಾಖೆಯವರು ಆಯುಧ ಪೂಜೆ ಪ್ರಯುಕ್ತ ಬಸ್ ಪೂಜೆಗೆ 100 ರೂ ನೀಡಿದ್ದಾರೆ. ಇವತ್ತಿನ ದುಬಾರಿ ದುನಿಯಾದಲ್ಲಿ 100 ರೂಪಾಯಿಗೆ ಏನ್ ಬರುತ್ತೆ ಎಂದು ನೌಕರರು ಈ ಬಗ್ಗೆ ಇಲಾಖೆಯ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ: ಇನ್ನೊಂದು ವಾರ ಶಾರೂಖ್ ಮಗನಿಗೆ ಜೈಲೇ ಗತಿ

    100 ರೂಪಾಯಿಯಲ್ಲಿ ಹೂ, ಹಣ್ಣು, ಬಾಳೆಕಂದು, ಪೂಜಾ ಸಾಮಗ್ರಿಗಳನ್ನು ತಂದು ಪೂಜೆ ಮಾಡೋದಕ್ಕೆ ಆಗುತ್ತಾ? ಕೋಟ್ಯಂತರ ರೂಪಾಯಿ ಸಂಪಾದನೆಗೆ ಕಾರಣವಾಗಿರೋ ಬಸ್ ಗಳ ಪೂಜೆಗೆ ಹಣ ಕೊಡಲು ಸಾರಿಗೆ ಇಲಾಖೆ ಹೀಗೆ ಯಾಕೆ ಮಾಡುತ್ತಿದೆ ಎನ್ನುವುದು ಗೊತ್ತಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಸಾರಿಗೆ ಇಲಾಖೆ ಸಿಬ್ಬಂದಿ ಸಮಸ್ಯೆ ಆಲಿಸಿದ ಶ್ರೀರಾಮುಲು

    100 ರೂಪಾಯಿ ಆಯುಧ ಪೂಜೆ ಮಾಡಬೇಕಾದ ದಾರುಣ ಪರಿಸ್ಥಿತಿ ಮಾತ್ರ ನಮ್ಮ ಸಾರಿಗೆ ನೌಕರರದ್ದು. ಅಷ್ಟೇ ಅಲ್ಲ ಸಾರಿಗೆ ಇಲಾಖೆಯಲ್ಲಿರುವ ಕಾರ್, ಜೀಪ್ ಪೂಜೆಗೂ ಸಾರಿಗೆ ಇಲಾಖೆ 40 ರೂಪಾಯಿ ನೀಡಿದೆ. 40 ರೂಪಾಯಿ ತಗೊಂಡು ಯಾವ ಮಾರ್ಕೆಟ್‍ಗೆ ಹೋಗಿ ಶಾಪಿಂಗ್ ಮಾಡಿ ಪೂಜೆ ಮಾಡಬೇಕೋ ಗೊತ್ತಿಲ್ಲ ಎನ್ನುತ್ತಿದ್ದಾರೆ ಸಾರಿಗೆ ನೌಕರರು.

  • ಶಾಲೆಗೆ ತೆರಳಲು ಬಸ್ ಇಲ್ಲದೆ ವಿದ್ಯಾರ್ಥಿಗಳ ಪರದಾಟ

    ಶಾಲೆಗೆ ತೆರಳಲು ಬಸ್ ಇಲ್ಲದೆ ವಿದ್ಯಾರ್ಥಿಗಳ ಪರದಾಟ

    ಬೆಂಗಳೂರು: ರಾಜ್ಯದಲ್ಲಿ ಶಾಲಾ-ಕಾಲೇಜು ಆರಂಭವಾದರೂ ಕೂಡ ಸೂಕ್ತವಾದ ಬಸ್ ವ್ಯವಸ್ಥೆ ಇಲ್ಲದೇ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಅವರ ಉಸ್ತುವಾರಿ ಜಿಲ್ಲೆಯಲ್ಲೇ ನೂರಾರು ವಿದ್ಯಾರ್ಥಿಗಳು ಕಾಲ್ನಡಿಗೆಯ ಮೂಲಕ ಶಾಲೆಗೆ ತೆರಳುವ ಪರಿಸ್ಥಿತಿ ಇದೆ.

    ಶಿಕ್ಷಣ ಸಚಿವರ ಉಸ್ತುವಾರಿ ಜಿಲ್ಲೆ ಯಾದಗಿರಿಯಲ್ಲಿ ವಿದ್ಯಾರ್ಥಿಗಳು ಸರ್ಕಾರಿ ಬಸ್ ವ್ಯವಸ್ಥೆ ಸಮರ್ಪಕವಾಗಿ ಇಲ್ಲದೆ, ಕಿಲೋ ಮೀಟರ್ ಗಟ್ಟಲೆ ನಡೆದುಕೊಂಡೆ ಶಾಲೆಗೆ ಹೋಗುತ್ತಿದ್ದಾರೆ. ನಿತ್ಯ ಅಷ್ಟು ದೂರ ನಡೆಯಬೇಕಾದರೂ ಸಹ ವಿದ್ಯಾರ್ಥಿಗಳಲ್ಲಿ ಕೊಂಚವೂ ಓದುವ ಉತ್ಸಾಹ ಮಾತ್ರ ಕಡಿಮೆ ಆಗಿಲ್ಲ. ಓದಿನಲ್ಲಿ ಗುರಿ ಹೊಂದಿರುವ ವಿದ್ಯಾರ್ಥಿಗಳು ಹುಮ್ಮಸ್ಸಿನಲ್ಲೇ ನಿತ್ಯ ನಡೆದು ಶಾಲೆಯತ್ತ ಸಾಗುತ್ತಿದ್ದಾರೆ. ಇದನ್ನೂ ಓದಿ: ಚುನಾವಣೆ ಸಂದರ್ಭ ಮಾತ್ರವಲ್ಲ, ನಿರಂತರವಾಗಿ ಜನರ ಯೋಗಕ್ಷೇಮ ವಿಚಾರಿಸಬೇಕು: ಆರ್.ಅಶೋಕ್

    ಯಾದಗಿರಿ ಮಾತ್ರವಲ್ಲದೇ ಇತ್ತ ದಾವಣಗೆರೆ ಜಿಲ್ಲೆಯಲ್ಲೂ ಇದೇ ಪರಸ್ಥಿತಿ. ಚನ್ನಗಿರಿ ತಾಲೂಕಿನ 15ಕ್ಕೂ ಅಧಿಕ ಹಳ್ಳಿಗಳಿಗೆ ಇನ್ನೂ ಸಹ ಬಸ್‍ಗಳ ವ್ಯವಸ್ಥೆಯೇ ಇಲ್ಲ. ಸಂತೆಬೆನ್ನೂರು ಹೊರವಲಯದಲ್ಲಿರುವ ಕಾಲೇಜ್‍ಗೆ ತೆರಳಲು ವಿದ್ಯಾರ್ಥಿಗಳು ನಿತ್ಯ ಎರಡು ಕಿಲೋ ಮೀಟರ್ ನಡೆಯಲೇಬೇಕು. ನಲ್ಕುದುರೆ, ವೆಂಕಟೇಶ್ವರ ಕ್ಯಾಂಪ್, ಕೋಗಲುರು ಸೇರಿ 15ಕ್ಕೂ ಅಧಿಕ ಹಳ್ಳಿಗಳಲ್ಲಿ ಬಸ್ ಇಲ್ಲದೆ ವಿದ್ಯಾರ್ಥಿಗಳು ಪರದಾಡುವಂತಾಗಿದೆ.

    ಡೀಸೆಲ್ ಬೆಲೆ ದುಬಾರಿ ಆಗಿರುವುದರಿಂದ ಖಾಸಗಿ ಬಸ್, ಆಟೋದವರು ದುಪ್ಪಟ್ಟು ಹಣ ಪೀಕುತ್ತಿದ್ದಾರೆ. ಇದರಿಂದಾಗಿ ಅವರಿಗೆ ಹಣ ನೀಡುವ ಬದಲು ವಿದ್ಯಾರ್ಥಿಗಳೇ ನಡೆದುಕೊಂಡು ಹೋಗುತ್ತಿದ್ದಾರೆ. ಇದೇ ರೀತಿಯ ಪರಿಸ್ಥಿತಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಂಡು ಬರುತ್ತಿದ್ದು, ಶಿಕ್ಷಣ ಸಚಿವರು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಬೇಕಾಗಿದೆ. ಇದನ್ನೂ ಓದಿ: ಕಲಬುರಗಿ ಮೇಯರ್ ಚುನಾವಣೆ- ಜೆಡಿಎಸ್ ಮುಂದೆ ಮಂಡಿಯೂರಲು ಕಾಂಗ್ರೆಸ್ ಸಜ್ಜಾಗಿದ್ಯಾ?

  • ಸರ್ಕಾರಿ ಬಸ್ಸಿನಲ್ಲೇ ಕೋವಿಡ್ ನಿಯಮ ಉಲ್ಲಂಘನೆ- ನೇತಾಡಿಕೊಂಡು ಹೋದ ಜನ

    ಸರ್ಕಾರಿ ಬಸ್ಸಿನಲ್ಲೇ ಕೋವಿಡ್ ನಿಯಮ ಉಲ್ಲಂಘನೆ- ನೇತಾಡಿಕೊಂಡು ಹೋದ ಜನ

    ಮಡಿಕೇರಿ: ರಾಜ್ಯದಲ್ಲಿ ಕೋವಿಡ್ ಸೋಂಕು ಇನ್ನೂ ಸಂಪೂರ್ಣ ಹೋಗಿಲ್ಲ ಎನ್ನುವ ಕಾರಣದಿಂದಲೇ ಸರ್ಕಾರ ಕೆಎಸ್‍ಆರ್ ಟಿಸಿ ಬಸ್ಸುಗಳಲ್ಲಿ ಅಥವಾ ಯಾವುದೇ ಸಾರಿಗೆ ಬಸ್ಸುಗಳಲ್ಲಿ ಶೇ.50 ರಷ್ಟು ಸೀಟುಗಳಲ್ಲಿ ಮಾತ್ರ ಜನರ ಸಾಗಾಟಕ್ಕೆ ಅವಕಾಶ ಮಾಡಲಾಗಿದೆ. ಆದರೆ ಕೊಡಗು ಜಿಲ್ಲೆಯಲ್ಲಿ ಮಾತ್ರ ಕೆಎಸ್‍ಆರ್ ಟಿಸಿ ಬಸ್ಸುಗಳಲ್ಲೇ ಕೋವಿಡ್ ನಿಯಮ ಸಂಪೂರ್ಣ ಉಲ್ಲಂಘನೆ ಆಗುತ್ತಿದೆ.

    ಎಲ್ಲಾ ಸೀಟುಗಳಲ್ಲಿ ಜನರನ್ನು ಭರ್ತಿಯಾಗಿ ಕುಳಿತುಕೊಳ್ಳುವ ಜೊತೆಗೆ ಬಸ್ಸಿನಲ್ಲಿ ಜನರು ನೇತಾಡಿಕೊಂಡು ಹೋಗುತ್ತಿದ್ದಾರೆ. ಆ ಮೂಲಕ ಕೆಎಸ್‍ಆರ್ ಟಿಸಿ ಬಸ್ಸುಗಳಲ್ಲಿ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿ ಸೋಂಕು ಇನ್ನಷ್ಟು ಹರಡುವುದಕ್ಕೆ ಕಾರಣವಾಗುತ್ತಿದ್ದಾರೆ.

    ಮಡಿಕೇರಿಯಿಂದ ಕುಶಾಲನಗರಕ್ಕೆ ಹೋಗುತ್ತಿದ್ದ ಬಸ್ಸಿನಲ್ಲಿ ಜನರು ನೇತಾಡಿಕೊಂಡು ಪ್ರಯಾಣಿಸುತ್ತಿದ್ದರು. ಮಾಧ್ಯಮಗಳನ್ನು ಕಂಡು ಮಡಿಕೇರಿಯ ಟೋಲ್ ಗೇಟ್ ನಲ್ಲಿ ಡ್ರೈವರ್ ಬಸ್ಸು ನಿಲ್ಲಿಸಿದ್ದಾನೆ. ಒಂದಷ್ಟು ಜನರು ಕೆಳಗಿಳಿಯುವಂತೆ ಹೇಳಿದ್ದಕ್ಕೆ ಜನರು ಗಲಾಟೆ ಮಾಡಿದ್ದಾರೆ. ಇದನ್ನೂ ಓದಿ: ಅಡುಗೆ ಮಾಡುವ ವರ ಬೇಕಾಗಿದ್ದಾನೆ- ಜಾಹೀರಾತು ವೈರಲ್

    ಒಂದೆಡೆ ಕೊಡಗು ಜಿಲ್ಲೆಯಲ್ಲಿ ಕೊವಿಡ್ ಸೋಂಕು ನಿಯಂತ್ರಣಕ್ಕೆ ಬಾರದೆ ಇಂದಿಗೂ ಲಾಕ್ ಡೌನ್ ಮುಂದುವರಿಸಲಾಗಿದೆ. ಆದರೂ ಕೆಎಸ್‍ಆರ್ ಟಿಸಿ ಬಸ್ಸುಗಳಲ್ಲಿ ಕೊವಿಡ್ ನಿಯಮ ಉಲ್ಲಂಘಿಸಿ ಮತ್ತಷ್ಟು ಜನರಿಗೆ ಸೋಂಕು ಹರಡುವಂತೆ ಮಾಡುತ್ತಿರುವುದು ವಿಷಾದನೀಯ.

  • ಆಸ್ಪತ್ರೆ ಬಾಗಿಲಲ್ಲೇ ಆಕ್ಸಿಜನ್ ವ್ಯವಸ್ಥೆ – ಸರ್ಕಾರಿ ಬಸ್ ಇದೀಗ ಆಕ್ಸಿಜನ್ ಬಸ್

    ಆಸ್ಪತ್ರೆ ಬಾಗಿಲಲ್ಲೇ ಆಕ್ಸಿಜನ್ ವ್ಯವಸ್ಥೆ – ಸರ್ಕಾರಿ ಬಸ್ ಇದೀಗ ಆಕ್ಸಿಜನ್ ಬಸ್

    ಚಿಕ್ಕಮಗಳೂರು: ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ಬರುವ ರೋಗಿಗಳಿಗೆ ಆಸ್ಪತ್ರೆ ಬಾಗಿಲಲ್ಲೇ ಆಕ್ಸಿಜನ್ ಕೊಡುವ ವ್ಯವಸ್ಥೆಗೆ ಕಾಫಿನಾಡು ಚಿಕ್ಕಮಗಳೂರಿನಲ್ಲಿ ತಯಾರಿ ನಡೆಸಲಾಗಿದ್ದು, ಅದಕ್ಕಾಗಿ ಸರ್ಕಾರಿ ಬಸ್‍ನ್ನು ಆಕ್ಸಿಜನ್ ಬಸ್ ಆಗಿ ಮಾರ್ಪಡಿಸಲಾಗಿದೆ.

    ಈಗಾಗಲೇ ರಾಜಧಾನಿಯಲ್ಲಿ ಈ ಯೋಜನೆ ಜಾರಿಯಲ್ಲಿದ್ದು, ಬೆಂಗಳೂರಿನ ಬಳಿಕ ಈ ಯೋಜನೆಯನ್ನು ಚಿಕ್ಕಮಗಳೂರಿನಲ್ಲೂ ಜಾರಿಗೆ ತರಲು ಈಗಾಗಲೇ ಜಿಲ್ಲಾಡಳಿತ ಸಾರಿಗೆ ಇಲಾಖೆ ಅಧಿಕಾರಿಗಳ ಜೊತೆ ಮಾತನಾಡಿದ್ದು, ಸರ್ಕಾರಿ ಬಸ್‍ನ್ನು ಆಕ್ಸಿಜನ್ ಬಸ್ ಆಗಿ ರೆಡಿ ಮಾಡಲು ಮುಂದಾಗಿದೆ. ಈ ಆಕ್ಸಿಜನ್ ಬಸ್‍ನಲ್ಲಿ ಆರರಿಂದ ಎಂಟು ಜನ ರೋಗಿಗಳಿಗೆ ಏಕಕಾಲದಲ್ಲಿ ಆಕ್ಸಿಜನ್ ನೀಡಬಹುದಾಗಿದೆ. ಬಸ್‍ನಲ್ಲಿ ಈ ಯೋಜನೆಗೆ ಬೇಕಾದ ಕೆಲ ತಾಂತ್ರಿಕ ಕೆಲಸಗಳು ನಡೆಯುತ್ತಿದ್ದ ಸೋಮವಾರ ಇದು ಸೇವೆಗೆ ಲಭ್ಯವಾಗಲಿದೆ.

    ಆಸ್ಪತ್ರೆಗೆ ಬರುವ ರೋಗಿಗಳಿಗೆ ಕೂಡಲೇ ಆಕ್ಸಿಜನ್ ಬೆಡ್ ನೀಡಲು ಸಾಧ್ಯವಾಗದಿರಬಹುದು. ಈ ವೇಳೆ ಅವರಿಗೆ ಯಾವಾಗಲು ಆಸ್ಪತ್ರೆ ಮುಂಭಾಗವೇ ಇರುವ ಬಸ್‍ನಲ್ಲಿ ಕೂರಿಸಿ ಆಕ್ಸಿಜನ್ ನೀಡಲಾಗುತ್ತದೆ. ತದನಂತರ ವೈದ್ಯರ ಪರೀಕ್ಷೆ ಮೂಲಕ ಆವರ ಆರೋಗ್ಯದ ಸ್ಥಿತಿಗತಿ ಆಧಾರದ ಮೇಲೆ ಅವರಿಗೆ ಮುಂದಿನ ಚಿಕಿತ್ಸೆ ನೀಡಬಹುದು. ರೋಗಿಗಳಿಗೆ ಈ ರೀತಿ ಬಂದ ಕೂಡಲೇ ಆಕ್ಸಿಜನ್ ಸೌಲಭ್ಯ ನೀಡಿದರೆ ಅವರಿಗೆ ಅರ್ಧ ಧೈರ್ಯ ಬರುತ್ತದೆ. ಅನ್ನೋದು ಜಿಲ್ಲಾಡಳಿತ ನಂಬಿಕೆ. ಈಗಾಗಲೇ ಆಕ್ಸಿಜನ್ ಬಸ್ ಕೆಲಸ ಬಹುತೇಕ ಮುಗಿದಿದ್ದು ನಾಳೆ ಮಧ್ಯಾಹ್ನ ಈ ಆಕ್ಸಿಜನ್ ಆನ್ ವೀಲ್ಸ್ ಯೋಜನೆಗೆ ಚಾಲನೆ ಸಿಗಲಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

  • ಮುಷ್ಕರದ ನಡುವೆಯೂ ಸಂಚರಿಸುತ್ತಿದ್ದ ಸರ್ಕಾರಿ ಬಸ್‍ಗೆ ಕಿಡಿಗೇಡಿಗಳಿಂದ ಕಲ್ಲು ತೂರಾಟ

    ಮುಷ್ಕರದ ನಡುವೆಯೂ ಸಂಚರಿಸುತ್ತಿದ್ದ ಸರ್ಕಾರಿ ಬಸ್‍ಗೆ ಕಿಡಿಗೇಡಿಗಳಿಂದ ಕಲ್ಲು ತೂರಾಟ

    ಚಿಕ್ಕೋಡಿ: ಸಾರಿಗೆ ನೌಕರರ ಮುಷ್ಕರದ ನಡುವೆಯು ಸಂಚಾರ ಮಾಡುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್‍ಗೆ ಕಿಡಿಗೇಡಿಗಳು ಕಲ್ಲು ತೂರಿ ಪರಾರಿಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಯಾದಗೂಡು ಗ್ರಾಮದ ಬಳಿ ನಡೆದಿದೆ.

    ಬಸ್‍ಗೆ ಕಲ್ಲು ತೂರಿದ್ದರಿಂದ ಬಸ್‍ನ ಮುಂಭಾಗದ ಗಾಜಿಗೆ ಹಾನಿಯಾಗಿದೆ. ಸಾರಿಗೆ ನೌಕರರ ಮುಷ್ಕರ ಮುಂದುವರೆದಿರುವ ಪರಿಣಾಮ ಮುಷ್ಕರದ ನಡುವೆಯೂ ಜಿಲ್ಲೆಯಲ್ಲಿ ಕೆಲವು ಬಸ್‍ಗಳು ಸಂಚಾರ ಮಾಡುತ್ತಿವೆ. ಈ ನಡುವೆ ಸಂಚಾರ ಮಾಡುತ್ತಿದ್ದ ಬಸ್‍ನ ಮೇಲೆ ಕಲ್ಲು ತೂರಾಟ ನಡೆದಿದೆ.

    ಕೆ.ಎಸ್‍.ಆರ್‍.ಟಿಸಿ ಬಸ್ ಸಂಚರಿಸುತ್ತಿದ್ದಂತೆ ಯಾದಗೂಡು ಗ್ರಾಮ ಬಳಿ ಬೈಕ್‍ನಲ್ಲಿ ಬಂದ ದುಷ್ಕರ್ಮಿಗಳು ಬಸ್ ಮೇಲೆ ಕಲ್ಲು ತೂರಿ ಪರಾರಿಯಾಗಿದ್ದಾರೆ. ಚಿಕ್ಕೋಡಿ- ಹುಕ್ಕೇರಿ ಪಟ್ಟಣಗಳ ನಡುವೆ ಈ ಬಸ್ ಸಂಚಾರ ಮಾಡುತ್ತಿತ್ತು. ಕಲ್ಲು ಹೊಡೆದ ಪರಿಣಾಮ ಚಾಲಕ ಸೇರಿದಂತೆ ಪ್ರಯಾಣಿಕರಿಗೆ ಯಾವುದೇ ಅಪಾಯ ಸಂಭವಿಸಿಲ್ಲ.

    ಕಲ್ಲು ತೂರಿದ ನಂತರ ಹುಕ್ಕೇರಿ ಬಸ್ ನಿಲ್ದಾಣಕ್ಕೆ ಚಾಲಕ ಬಸ್ ತೆಗೆದುಕೊಂಡು ಬಂದು ಘಟನೆಯ ಕುರಿತು ಮಾಹಿತಿ ನೀಡಿದ್ದಾರೆ. ಹುಕ್ಕೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಹುಕ್ಕೇರಿ ಠಾಣೆಯ ಪಿ.ಎಸ್.ಐ ಸಿದ್ದರಾಮಪ್ಪ ಉನ್ನದ ಭೇಟಿ ನೀಡಿ ಪರಿಶೀಲನೆ ನಡೆಸಿ, ಕಿಡಿಗೇಡಿಗಳ ಕುರಿತು ಮಾಹಿತಿ ಸಂಗ್ರಹಿಸುತ್ತಿದ್ದಾರೆ.

  • ಮುಷ್ಕರದ ನಡುವೆಯೂ ಪೀಲ್ಡಿಗಿಳಿದ ಸರ್ಕಾರಿ ಬಸ್

    ಮುಷ್ಕರದ ನಡುವೆಯೂ ಪೀಲ್ಡಿಗಿಳಿದ ಸರ್ಕಾರಿ ಬಸ್

    ಗದಗ: ಸಾರಿಗೆ ನೌಕರರು ಇಂದು ನಡೆಸುತ್ತಿರುವ ಮುಷ್ಕರದ ನಡುವೆಯೂ ಕೆ.ಎಸ್.ಆರ್.ಟಿ.ಸಿ ಬಸ್ಸೊಂದು ಪೀಲ್ಡಿಗಿಳಿದಿದೆ. ನಗರದ ಹೊಸ ಬಸ್ ನಿಲ್ದಾಣಕ್ಕೆ ಹೊಸಪೇಟೆ ಘಟಕದ ಬಸ್ ಪ್ರಯಾಣಿಕರನ್ನು ಹೊತ್ತು ತಂದಿದೆ.

    ಸರ್ಕಾರಿ ಬಸ್ ಹುಬ್ಬಳ್ಳಿಯಿಂದ ಗದಗ ಮಾರ್ಗವಾಗಿ ಹೊಸಪೇಟೆಗೆ ಸಂಚರಿಸುತ್ತಿದೆ. ಈ ವೇಳೆ ಗದಗ ಬಸ್ ನಿಲ್ದಾಣಕ್ಕೆ ಪ್ರಯಾಣಿಕರನ್ನು ಕರೆತಂದಿದೆ. ಎಲ್ಲಾ ಕಡೆಗಳಲ್ಲಿ ಸಾರಿಗೆ ನೌಕರರು ನಿನ್ನೆಯೇ ಸೆಕೆಂಡ್ ಶಿಫ್ಟ್‍ಗೆ ಗೈರು ಹಾಜರಾಗಿದ್ದರು. ಆದರೆ ಹೊಸಪೇಟೆ ಘಟಕದ ಕೆಲವು ಚಾಲಕ, ನಿರ್ವಾಹಕರು ಕರ್ತವ್ಯಕ್ಕೆ ಹಾಜರಾಗಿದ್ದರು. ನಿನ್ನೆ ಮಧ್ಯಾಹ್ನ ಬಸ್ ಹೊಸಪೇಟೆಯಿಂದ ಹೊರಟು ರಾತ್ರಿ ಹುಬ್ಬಳ್ಳಿಗೆ ತಲುಪಿದೆ. ಮತ್ತೆ ಇಂದು ಮುಂಜಾನೆ ಹುಬ್ಬಳ್ಳಿಯಿಂದ ಹೊರಟು ಗದಗ ಮಾರ್ಗವಾಗಿ ಹೊಸಪೇಟೆಗೆ ಬಸ್ ತಲುಪಲಿದೆ.

    ಕೆಲವರು ನಿನ್ನೆ ಕರ್ತವ್ಯಕ್ಕೆ ಗೈರು ಹಾಜರಾಗಿದ್ದಾರೆ ನಿಜ. ಆದರೆ ಬಂದ್ ಇರೋದು ಇಂದು. ಹಾಗಾಗಿ ಸರ್ಕಾರದ ಆದೇಶವನ್ನು ನಾವು ಪಾಲಿಸಿದ್ದೇವೆ. ಸಂಘಟಕರು ಮತ್ತು ಅಧಿಕಾರಿಗಳು ಹೇಳಿದರೆ ಮತ್ತೆ ಕರ್ತವ್ಯಕ್ಕೆ ಹಾಜರಾಗುತ್ತೇವೆ ಎಂದು ಹೊಸಪೇಟೆ ಘಟಕದ ಬಸ್ ಚಾಲಕರು ಮತ್ತು ನಿರ್ವಾಹಕರು ಅಭಿಪ್ರಾಯಪಟ್ಟಿದ್ದಾರೆ.