Tag: Government Bus

  • ನಾಳೆಯಿಂದ ರಸ್ತೆಗಿಳಿಯಲ್ಲ ಬಸ್? – ಇಂದು ಸಿಎಂ ಸಭೆ, ಖಾಸಗಿ ಬಸ್‌ಗಳನ್ನ ರಸ್ತೆಗಿಳಿಸಲು ಜಿಲ್ಲಾಡಳಿತ ಕ್ರಮ

    ನಾಳೆಯಿಂದ ರಸ್ತೆಗಿಳಿಯಲ್ಲ ಬಸ್? – ಇಂದು ಸಿಎಂ ಸಭೆ, ಖಾಸಗಿ ಬಸ್‌ಗಳನ್ನ ರಸ್ತೆಗಿಳಿಸಲು ಜಿಲ್ಲಾಡಳಿತ ಕ್ರಮ

    ಬೆಂಗಳೂರು: ವೇತನ ಪರಿಷ್ಕರಣೆ ಸೇರಿ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಆಗಸ್ಟ್ 5ರಂದು ರಾಜ್ಯಾದ್ಯಾಂತ ಸಾರಿಗೆ ನೌಕರರು (Transport employees) ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ಕೊಟ್ಟಿದ್ದಾರೆ. ಇದ್ದರಿಂದ ಎಚ್ಚೆತ್ತುಕೊಂಡಿರುವ ಎಲ್ಲಾ ಜಿಲ್ಲೆಗಳ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ ಮಂಗಳವಾರ ಸರ್ಕಾರಿ ಬಸ್‌ಗಳ ಬದಲು ಖಾಸಗಿ ಬಸ್‌ಗಳನ್ನ (Private Bus) ರಸ್ತೆಗಿಳಿಸೋಕೆ ಸಕಲ ಸಿದ್ಧತೆಗಳನ್ನ ಮಾಡಿಕೊಂಡಿದೆ.

    ಹೌದು, ಈ ಹಿಂದೆಯೂ ಸಹ ವೇತನ ಪರಿಷ್ಕರಣೆ ಸೇರಿದಂತೆ ಹಲವು ಬೇಡಿಕೆಗಳನ್ನ ಮುಂದಿಟ್ಟುಕೊಂಡು ಅನಿರ್ದಿಷ್ಟಾವಧಿ ಧರಣಿ ನಡೆಸಿದ್ದ ಸಾರಿಗೆ ನೌಕರರು ಈಗ ಮತ್ತೆ ಆಗಸ್ಟ್ 5 ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಮುಂದಾಗಿದ್ದಾರೆ. ಇದನ್ನೂ ಓದಿ: ಬೆಂಗಳೂರು | Forgive Me ಅಂತ ಡೆತ್‌ ನೋಟ್‌ ಬರೆದಿಟ್ಟು 13ರ ಬಾಲಕ ಆತ್ಮಹತ್ಯೆ

    ಹೀಗಾಗಿ ಮುಷ್ಕರ ಬೇಡ ಅಂತ ಸಾರಿಗೆ ನೌಕರರ ಸಂಘಟನೆಗಳ ಜೊತೆ ಸ್ವತಃ ಸಿಎಂ ಸಿದ್ದರಾಮಯ್ಯ (Siddaramaiah) ಅವರು ಸಭೆ ನಡೆಸಲು ತೀರ್ಮಾನಿಸಿದ್ದಾರೆ. ಆದ್ರೆ ಸಭೆಯಲ್ಲಿ ಸಿಎಂ ನಿರ್ಧಾರ ಏನು ಎಂಬ ಕೂತೂಹಲ ಮನೆ ಮಾಡಿದೆ. ಇನ್ನೂ ಸಂಘಟನೆಯ ಮುಖಂಡರು ಸಹ ಈ ಬಾರಿ ಜೋರಾಗಿಯೇ ಪ್ರತಿಭಟಿಸಿ ಹೋರಾಟ ಮಾಡೋಕೆ ಸಕಲ ತಯಾರಿಗಳನ್ನ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಉತ್ತರ ಪ್ರದೇಶದ 17 ಜಿಲ್ಲೆಗಳಲ್ಲಿ ಪ್ರವಾಹ – 12 ಮಂದಿ ಸಾವು, ಪ್ರಯಾಗ್‌ರಾಜ್‌ ಬಹುತೇಕ ಮುಳುಗಡೆ

    ಒಂದು ವೇಳೆ ಮಂಗಳವಾರ ಮುಷ್ಕರ ಆರಂಭವಾದರೆ ಸಹಜವಾಗಿಯೇ ಸಾರ್ವಜನಿಕರಿಗೆ ಸಮಸ್ಯೆ ತಪ್ಪಿದ್ದಲ್ಲ. ಹೀಗಾಗಿ ಎಚ್ಚೆತ್ತಿರುವ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಅಂದು ಸಾರಿಗೆ ಬಸ್‌ಗಳ ಬದಲಾಗಿ ಖಾಸಗಿ ವಾಹನಗಳನ್ನ ರಸ್ತೆಗಿಳಿಸೋಕೆ ಪ್ಲಾನ್ ಮಾಡಿದೆ.

    ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯಲ್ಲಿ ಪ್ರತಿನಿತ್ಯ 584 ಬಸ್‌ಗಳು ಸಂಚಾರ ಮಾಡುತ್ತಿದ್ದು, 3400ಕ್ಕೂ ಹೆಚ್ಚು ಟ್ರಿಪ್‌ಗಳನ್ನ ಮಾಡುತ್ತಿದ್ದು ಸಾವಿರಾರು ಮಂದಿ ಕೆಎಸ್‌ಆರ್‌ಟಿಸಿ ಬಸ್‌ಗಳನ್ನ ಅವಲಂಬಿಸಿದ್ದಾರೆ. ಹೀಗಾಗಿ ಮುಷ್ಕರದಿಂದ ಪ್ರಯಾಣಿಕರಿಗೆ ತೊಂದರೆ ಆಗಬಾರದೆಂದು ಮುಂದಾಲೋಚನೆ ಮಾಡಿರುವ ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ ಅವರು ಈಗಾಗಲೇ ಖಾಸಗಿ ವಾಹನಗಳ ಮಾಲೀಕರ ಜೊತೆ ಸಭೆ ನಡೆಸಿದ್ದಾರೆ. ಇದನ್ನೂ ಓದಿ: ಕೈದಿ ನಂ. 15528 – ಪ್ರಜ್ವಲ್‍ಗೆ 524 ರೂ. ದಿನಗೂಲಿ, ಕೆಲಸವೇನು ಗೊತ್ತಾ?

    ಜಿಲ್ಲೆಯಲ್ಲಿರುವ 200ಕ್ಕೂ ಹೆಚ್ಚು ಸ್ಟೇಜ್ ಹಾಗೂ ಕಂಟ್ರ‍್ಯಾಕ್ಟ್ ಕ್ಯಾರೇಜ್ ಖಾಸಗಿ ಬಸ್‌ಗಳನ್ನ ರಸ್ತೆಗಿಳಿಸಲು ಮಾತುಕತೆ ಮಾಡಿದ್ದಾರೆ. ಇದರ ಜೊತೆಗೆ ಜಿಲ್ಲೆಯಲ್ಲಿರುವ 587 ಶಾಲಾ ಬಸ್‌ಗಳನ್ನ ಬಳಸಿಕೊಳ್ಳಲು ಶಾಲೆಗಳ ಮಾಲೀಕರು ಜೊತೆ ಸಮಾಲೋಚನೆ ಮಾಡಿದ್ದಾರೆ. ಮತ್ತೊಂದು ಕಡೆ ಸ್ಥಳೀಯವಾಗಿ ಆಟೋಗಳನ್ನ ಸಹ ಬಳಸಿಕೊಳ್ಳೋಕೆ ನಿರ್ಧಾರ ಮಾಡಲಾಗಿದೆ.

    ಚಾಮರಾಜನಗರದಲ್ಲೂ ಖಾಸಗಿ ಬಸ್, ಟ್ಯಾಕ್ಸಿ ಮೊರೆ
    ಸಾರಿಗೆ ನೌಕರರ ಮುಷ್ಕರಕ್ಕೆ ಪ್ಲ್ಯಾನ್ ಹಿನ್ನೆಲೆಯಲ್ಲಿ ಖಾಸಗಿ ಬಸ್, ಮ್ಯಾಕ್ಸಿ ಕ್ಯಾಬ್, ಆಟೋ ಸೇರಿದಂತೆ ಬದಲಿ ವ್ಯವಸ್ಥೆ ಮಾಡಿಕೊಳ್ಳಲು ಈಗಾಗಲೇ ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ಜನರು, ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಬದಲಿ ವ್ಯವಸ್ಥೆ ಮಾಡಿಕೊಳ್ಳಲೂ ನಿರ್ಧರಿಸಿದೆ. ಇದನ್ನೂ ಓದಿ: ಕೆಲವರು ಅಧಿಕಾರ ಹಂಚಿಕೊಳ್ಳಲು ಒಪ್ಪಲ್ಲ – ಸಿದ್ದರಾಮಯ್ಯಗೆ ಟಾಂಗ್‌ ಕೊಟ್ರಾ ಡಿಕೆಶಿ?

    ಈಗಾಗಲೇ ಈ ಸಂಬಂಧ ಅಧಿಕಾರಿಗಳಿಗೂ ಕೂಡ ಸೂಚಿಸಲಾಗಿದೆ. ಲಭ್ಯವಿರುವ ಎಲ್ಲ ಕಡೆಯೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ವ್ಯವಸ್ಥೆ ಮಾಡಿಕೊಳ್ಳಲೂ ಚರ್ಚೆ ನಡೆಸಲಾಗಿದೆ. ಈ ಬಗ್ಗೆ ಚಾಮರಾಜನಗರ (Chamarajanagara) ಡಿಸಿ ಶಿಲ್ಪಾನಾಗ್ ಮಾಹಿತಿ ಕೊಟ್ಟಿದ್ದಾರೆ.

    ಇತ್ತ ರಾಯಚೂರು (Raichur) ಜಿಲ್ಲಾಡಳಿತದಿಂದ ಪರ್ಯಾಯ ವ್ಯವಸ್ಥೆಗೆ ಸಿದ್ಧತೆ ನಡೆದಿದೆ. ರಾಯಚೂರಿನಲ್ಲಿ ಖಾಸಗಿ ಹಾಗೂ ಶಾಲಾ ಬಸ್‌ಗಳ ಬಳಕೆಗೆ ಜಿಲ್ಲಾಡಳಿತ ಮುಂದಾಗಿದೆ. ಸೋಮವಾರ ಸಭೆ ಕರೆದಿರುವ ಜಿಲ್ಲಾಡಳಿತ, ಸಭೆಯಲ್ಲಿ ಖಾಸಗಿ ವಾಹನಗಳ ಬಳಕೆ ಹಾಗೂ ದರ ನಿಗದಿ ಬಗ್ಗೆ ಚರ್ಚೆ ಮಾಡಲಿದೆ. ಇದನ್ನೂ ಓದಿ: ಗ್ರೌಂಡ್‌ ಪೆನೆಟ್ರೇಟಿಂಗ್ ರೇಡಾರ್‌ನಿಂದ ಅಸ್ಥಿಪಂಜರ ಪತ್ತೆ ಕಾರ್ಯ ನಡೆಸಿ – ಎಸ್‌ಐಟಿಗೆ ದೂರುದಾರ ಹೊಸ ರಿಕ್ವೆಸ್ಟ್‌

    373 ಶಾಲಾ ಬಸ್, 60 ಮಿನಿ ಬಸ್ ಸೇರಿ ಒಟ್ಟು 738 ವಾಹನಗಳನ್ನ ಗುರುತಿಸಿರುವ ಜಿಲ್ಲಾಡಳಿತ ಶಾಲಾ ಕಾಲೇಜು ವಿದ್ಯಾರ್ಥಿಗಳು ಪ್ರಯಾಣಿಕರ ಅನುಕೂಲಕ್ಕಾಗಿ ಖಾಸಗಿ ವಾಹನಗಳ ಬಳಕೆಗೆ ಜಿಲ್ಲಾಡಳಿತ ಮುಂದಾಗಿದೆ. ಇನ್ನೂ ಖಾಸಗಿ ಚಾಲಕರು ಹಾಗೂ ಸಾರಿಗೆ ಇಲಾಖೆ ಟ್ರೈನಿ ಚಾಲಕರ ಬಳಕೆ ಮಾಡಿಕೊಳ್ಳಲು ಅಧಿಕಾರಿಗಳು ಮುಂದಾಗಿದ್ದಾರೆ. ಅಂತರರಾಜ್ಯ ಪ್ರಯಾಣಕ್ಕಾಗಿ ಆಂಧ್ರಪ್ರದೇಶದಿಂದ ಹೆಚ್ಚುವರಿ ಬಸ್ ಓಡಾಟಕ್ಕೆ ಕರ್ನೂಲ್ ಜಿಲ್ಲಾಡಳಿತ ಜೊತೆ ಚರ್ಚಿಸಲಾಗಿದೆ.

    ಒಟ್ಟಿನಲ್ಲಿ ಸಿಎಂ ಸಭೆಯ ನಂತರವಷ್ಟೇ ಮುಷ್ಕರ ರದ್ದಾಗುತ್ತಾ, ಇಲ್ಲ ಆರಂಭವಾಗುತ್ತಾ ಅನ್ನೋ ನಿರ್ಧಾರ ಹೊರಬರಬೇಕಿದೆ. ಆದ್ರೂ ಒಂದು ವೇಳೆ ಮುಷ್ಕರ ಆರಂಭವೇ ಆದರೆ ಖಾಸಗಿ ಬಸ್‌ಗಳ ಮೂಲಕವೇ ಸಾರ್ವಜನಿಕರಿಗೆ ಸಂಪೂರ್ಣ ಸೇವೆ ಒದಗಿಸೋದು ಕಷ್ಟ ಸಾಧ್ಯವಾಗಬಹುದು.

  • ಗುದ್ದಿದ ರಭಸಕ್ಕೆ ಮೂರು ತುಂಡಾಗಿ ಬಸ್ಸು ಮೇಲೆ ಬಿತ್ತು ವಿದ್ಯುತ್‌ ಕಂಬ – ತಪ್ಪಿತು ದೊಡ್ಡ ದುರಂತ

    ಗುದ್ದಿದ ರಭಸಕ್ಕೆ ಮೂರು ತುಂಡಾಗಿ ಬಸ್ಸು ಮೇಲೆ ಬಿತ್ತು ವಿದ್ಯುತ್‌ ಕಂಬ – ತಪ್ಪಿತು ದೊಡ್ಡ ದುರಂತ

    ಬಳ್ಳಾರಿ: ಚಾಲಕನ ನಿಯಂತ್ರಣ ತಪ್ಪಿ ಸರ್ಕಾರಿ ಬಸ್ಸು (Bus)  ವಿದ್ಯುತ್ ಕಂಬಕ್ಕೆ (Electric Pole)  ಗುದ್ದಿದ ಘಟನೆ ಕುರುಗೋಡು (Kurugodu) ತಾಲೂಕಿನ ಕೋಳೂರು ಬಸ್ ನಿಲ್ದಾಣದ ಬಳಿ ನಡೆದಿದೆ.

    ಕುರುಗೋಡು ಪಟ್ಟಣದಿಂದ ಬಳ್ಳಾರಿಗೆ ಸಂಚರಿಸುತ್ತಿದ್ದ ಸರ್ಕಾರಿ ಬಸ್, ಕುರುಗೋಡು ತಾಲೂಕಿನ ಕೋಳೂರು ಬಸ್ ಸ್ಟಾಪ್ ಬಳಿ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಗುದ್ದಿದ ಪರಿಣಾಮ ವಿದ್ಯುತ್ ಕಂಬ 3 ತುಂಡಾಗಿ ಬಸ್ ಮೇಲೆಯೇ ಬಿದ್ದಿದೆ. ಇದನ್ನೂಓದಿ: ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಕದ್ರಿ ಸಂಚಾರಿ ಠಾಣೆ ಎಎಸ್‌ಐ

     

    ಗುದ್ದಿದ ಸಮಯದಲ್ಲಿ ವಿದ್ಯುತ್‌ ಪ್ರವಹಿಸದೇ ಇದ್ದ ಕಾರಣ ಎಲ್ಲಾ ಪ್ರಯಾಣಿಕರು ಪಾರಾಗಿದ್ದಾರೆ. ಬಸ್ಸಿನಲ್ಲಿ 20ಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಕುರುಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಬಸ್‌ ನಿಲ್ಲಿಸದಿದ್ದಕ್ಕೆ ಕಲ್ಲೆಸೆದು ಅನ್ಯಕೋಮಿನ ಯುವಕರಿಂದ ದಾಂಧಲೆ – ಸಾರ್ವಜನಿಕರಿಂದ ಬಿತ್ತು ಗೂಸಾ

    ಬಸ್‌ ನಿಲ್ಲಿಸದಿದ್ದಕ್ಕೆ ಕಲ್ಲೆಸೆದು ಅನ್ಯಕೋಮಿನ ಯುವಕರಿಂದ ದಾಂಧಲೆ – ಸಾರ್ವಜನಿಕರಿಂದ ಬಿತ್ತು ಗೂಸಾ

    ಮಂಡ್ಯ: ಬಸ್‌ ನಿಲ್ಲಿಸದೇ ಇದ್ದಕ್ಕೆ ಕಲ್ಲೆಸೆದು ಅನ್ಯಕೋಮಿಯನ ಯುವಕರು ದಾಂಧಲೆ ನಡೆಸಿರುವ ಘಟನೆ ಮಂಡ್ಯ (Mandya) ಜಿಲ್ಲೆಯ ಶ್ರೀರಂಗಪಟ್ಟಣ (Srirangapatna) ತಾಲೂಕಿನ ಗಂಜಾಂ ರಸ್ತೆಯಲ್ಲಿ ನಡೆದಿದೆ.

    ಸರ್ಕಾರಿ ಬಸ್‌ (Government Bus) ಮೇಲೆ ಅನ್ಯಕೋಮಿನ ಯುವಕರ ಗುಂಪು ಕಲ್ಲು ತೂರಾಟ ನಡೆಸಿದ್ದು, ಬಳಿಕ ಯುವಕರನ್ನು ಹಿಡಿದು ಥಳಿಸಿದ ಸಾರ್ವಜನಿಕರು ಪೊಲೀಸರಿಗೊಪ್ಪಿಸಿದ್ದಾರೆ. ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಪಹಲ್ಗಾಮ್ ದಾಳಿ | ಕೂಡಲೇ ಪಾಕ್‌ ತೊರೆಯಿರಿ ಭಾರತೀಯರಿಗೆ ಕೇಂದ್ರ ಸೂಚನೆ

    ಏನಿದು ಘಟನೆ?
    ಬಸ್ಸೊಂದು ಶ್ರೀರಂಗಪಟ್ಟಣದಿಂದ ಗಂಜಾಂಗೆ ತೆರಳುತ್ತಿತ್ತು. ಈ ವೇಳೆ ಮೈಸೂರಿಗೆ ಹೋಗುವ ಬಸ್‌ ಬದಲು, ಅನ್ಯಕೋಮಿನ ಯುವಕರ ಕುಟುಂಬ ಗಂಜಾಂಗೆ ತೆರಳುತ್ತಿದ್ದ ಬಸ್‌ ಹತ್ತಿದೆ. ಕಂಡಕ್ಟರ್‌ ಬಳಿ ನಾವು ಮೈಸೂರಿಗೆ ಹೋಗಬೇಕು ಎಂದು ಕುಟುಂಬಸ್ಥರು ಹೇಳಿದ್ದಾರೆ. ಇದು ಮೈಸೂರಿನ ಬಸ್‌ ಅಲ್ಲ ಎಂದು ನಿರ್ವಾಹಕ ಹೇಳ್ತಿದ್ದಂತೆ ಬಸ್‌ ನಿಲ್ಲಿಸುವಂತೆ ವಾಗ್ವಾದಕ್ಕಿಳಿದಿದ್ದಾರೆ. ಇದನ್ನೂ ಓದಿ: ಪಹಲ್ಗಾಮ್‌ ದಾಳಿ – ಪಾಕ್‌ ಉಗ್ರರ ಮಾಹಿತಿ ಕೊಟ್ಟವರಿಗೆ 20 ಲಕ್ಷ ಬಹುಮಾನ ಘೋಷಣೆ

    ಆಗ ಕಂಡಕ್ಟರ್‌ ಇಲ್ಲಿ ಸ್ಟಾಪ್‌ ಇಲ್ಲ, ಮುಂದೆ ನಿಲ್ಲಿಸೋದಾಗಿ ಹೇಳಿದ್ದಾರೆ. ಅಷ್ಟಕ್ಕೆ ಡ್ರೈವರ್‌, ಕಂಡಕ್ಟರ್‌ ಮೇಲೆ ಹಲ್ಲೆ ನಡೆಸಿ ದರ್ಪ ತೋರಿದ್ದಾರೆ. ಕೊನೆಗೆ ಬಸ್‌ ನಿಲ್ಲಿಸುತ್ತಿದ್ದಂತೆ ಕೆಳಗಿಳಿದ ಯುವಕರು ಬಸ್‌ ಮೇಲೆ ಕಲ್ಲೆಸೆದು, ಕಿಟಕಿ ಗಾಜುಗಳನ್ನು ಪುಡಿಪುಡಿ ಮಾಡಿದ್ದಾರೆ. ನಂತರ ಕಲ್ಲೆಸೆದ ಅನ್ಯಕೋಮಿನ ಯುವಕರನ್ನ ಹಿಡಿದು ಥಳಿಸಿರುವ ಸಹ ಸಾರ್ವಜನಿಕರು ಪೊಲೀಸರಿಗೊಪ್ಪಿಸಿದ್ದಾರೆ. ಇದನ್ನೂ ಓದಿ: ‘ಮ್ಯಾಕ್ಸ್’ ಖ್ಯಾತಿಯ ಶ್ರೀಧರ್‌ಗೆ ಅನಾರೋಗ್ಯ- ಚಿಕಿತ್ಸೆಗೆ ಸಹಾಯ ಕೋರಿದ ನಟ

  • ಸರ್ಕಾರಿ ಬಸ್, ಆಟೋರಿಕ್ಷಾ ನಡುವೆ ಭೀಕರ ಅಪಘಾತ – 6 ಮಂದಿ ದುರ್ಮರಣ

    ಸರ್ಕಾರಿ ಬಸ್, ಆಟೋರಿಕ್ಷಾ ನಡುವೆ ಭೀಕರ ಅಪಘಾತ – 6 ಮಂದಿ ದುರ್ಮರಣ

    ಗಾಂಧಿನಗರ: ಸರ್ಕಾರಿ ಬಸ್ ಹಾಗೂ ಆಟೋರಿಕ್ಷಾ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 6 ಮಂದಿ ಮೃತಪಟ್ಟಿರುವ ಘಟನೆ ಗುಜರಾತ್‌ನ (Gujarat) ಪಠಾಣ್‌ನಲ್ಲಿ (Patan) ನಡೆದಿದೆ.

    ಸಮಿ-ರಾಧನ್‌ಪುರ ಹೆದ್ದಾರಿಯ ಸಮಿ ಗ್ರಾಮದ ಅಪಘಾತ ಸಂಭವಿಸಿದೆ. ರಾಜ್ಯ ಸಾರಿಗೆ ಬಸ್ ಹಿಮ್ಮತ್‌ನಗರದಿಂದ ಕಚ್ ಕಡೆಗೆ ಹೋಗುತ್ತಿದ್ದ ವೇಳೆ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಆಟೋರಿಕ್ಷಾಗೆ ಡಿಕ್ಕಿಯಾಗಿದೆ. ಇದನ್ನೂ ಓದಿ: ಟಾಯ್ಲೆಟ್‌ಗೆ ಹೋಗಿದ್ದವಳು ಕೊನೆ ಕ್ಷಣದಲ್ಲಿ ಹಾಜರ್ – ಸಿಇಟಿಯಲ್ಲಿ ನಕಲಿ ವಿದ್ಯಾರ್ಥಿ, ತನಿಖೆಗೆ ಆದೇಶ

    ಅಪಘಾತದ ರಭಸಕ್ಕೆ ಆಟೋರಿಕ್ಷಾದಲ್ಲಿದ್ದ 6 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆಟೋರಿಕ್ಷಾ ಸಂಪೂರ್ಣ ನಜ್ಜುಗುಜ್ಜಾಗಿದೆ. ಇದನ್ನೂ ಓದಿ: ಪೊಲೀಸ್ ರೈಡ್ ವೇಳೆ ಹೋಟೆಲ್ ಕಿಟಕಿಯಿಂದ ನಟ ಶೈನ್ ಟಾಮ್ ಚಾಕೊ ಪರಾರಿ

    ಬಸ್ ಚಾಲಕ ಮತ್ತೊಂದು ವಾಹನವನ್ನು ಹಿಂದಿಕ್ಕಲು ಪ್ರಯತ್ನಿಸಿದಾಗ ನಿಯಂತ್ರಣ ತಪ್ಪಿ ಎದುರುಗಡೆ ಬರುತ್ತಿದ್ದ ಆಟೋರಿಕ್ಷಾಗೆ ಡಿಕ್ಕಿ ಹೊಡೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಸ್ಥಳೀಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

  • ಕೆಎಸ್‌ಆರ್‌ಟಿಸಿ ಪ್ರಯಾಣಿಕರಿಗೆ ಗುಡ್ ನ್ಯೂಸ್ – ಯುಗಾದಿಗೆ 2,000 ಹೆಚ್ಚುವರಿ ಬಸ್ ವ್ಯವಸ್ಥೆ

    ಕೆಎಸ್‌ಆರ್‌ಟಿಸಿ ಪ್ರಯಾಣಿಕರಿಗೆ ಗುಡ್ ನ್ಯೂಸ್ – ಯುಗಾದಿಗೆ 2,000 ಹೆಚ್ಚುವರಿ ಬಸ್ ವ್ಯವಸ್ಥೆ

    – ಮುಂಗಡ ಬುಕಿಂಗ್‌ಗೆ 10% ರಿಯಾಯಿತಿ

    ಬೆಂಗಳೂರು: ಯುಗಾದಿ ಹಬ್ಬದ ಪ್ರಯುಕ್ತ ಕೆಎಸ್‌ಆರ್‌ಟಿಸಿಯಿಂದ (KSRTC) 2000 ಹೆಚ್ಚುವರಿ ಬಸ್‌ಗಳು ಕಾರ್ಯಾಚರಣೆ ಮಾಡಲಿವೆ ಎಂದು ರಾಜ್ಯ ರಸ್ತೆ ಸಾರಿಗೆ ಇಲಾಖೆ ತಿಳಿಸಿದೆ.

    ಮಾ. 28ರಿಂದ 30ರವರೆಗೆ ಹೆಚ್ಚುವರಿ ಬಸ್‌ಗಳು ಸಂಚರಿಸದ್ದು ಮೆಜೆಸ್ಟಿಕ್‌ನಿಂದ(Majestic) ರಾಜ್ಯದ ವಿವಿಧ ಭಾಗಗಳಿಗೆ ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಸಾಮಾನ್ಯ ಸಾರಿಗೆ, ಐರಾವತ, ಸ್ಲೀಪರ್ ಕೋಚ್ ಸೇರಿ ಎಲ್ಲಾ ಐಷಾರಾಮಿ ಬಸ್‌ಗಳು ಲಭ್ಯವಾಗಲಿವೆ. ಮೆಜೆಸ್ಟಿಕ್, ಶಾಂತಿನಗರ, ಸ್ಯಾಟ್‌ಲೈಟ್, ಪೀಣ್ಯ ಬಸ್‌ನಿಲ್ದಾಣದಿಂದ ಬಸ್‌ಗಳ ಕಾರ್ಯಾಚರಣೆ ನಡೆಯಲಿದೆ. ಇದನ್ನೂ ಓದಿ: ಹಾಸನ ಹೊರವರ್ತುಲ ರಸ್ತೆ ಯೋಜನೆಗೆ ಅನುಮೋದನೆ ನೀಡುವಂತೆ ಕೇಂದ್ರಕ್ಕೆ ಹೆಚ್.ಡಿ.ದೇವೇಗೌಡ ಮನವಿ

    ಹಬ್ಬ ಮುಗಿದ ಬಳಿಕ ವಿಶೇಷ ಬಸ್‌ಗಳ ಕಾರ್ಯಾಚರಣೆ ನಡೆಯಲಿದ್ದು, ಮಾ. 31ರಂದು ವಾಪಸ್ ಬರುವ ಪ್ರಯಾಣಿಕರಿಗೆ ಸರ್ಕಾರಿ ಬಸ್ ವ್ಯವಸ್ಥೆಯಿದೆ. ರಾಜ್ಯದಾದ್ಯಂತ ಹಾಗೂ ಅಂತರರಾಜ್ಯದಿಂದಲೂ ಕೆಎಸ್‌ಆರ್‌ಟಿಸಿ ಬಸ್‌ಗಳು ಲಭ್ಯವಾಗಲಿವೆ.

    ಎಲ್ಲಿಂದ ಎಲ್ಲಿಗೆ ಬಸ್‌ಗಳ ಕಾರ್ಯಾಚರಣೆ ಇರಲಿದೆ

    1.ಮೆಜೆಸ್ಟಿಕ್

    ಮೆಜೆಸ್ಟಿಕ್ ನಿಂದ ಧರ್ಮಸ್ಥಳ, ಶೃಂಗೇರಿ, ಹೊರನಾಡು, ಮಂಗಳೂರು, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ಗೋಕರ್ಣ, ಕಾರವಾರ ಭಾಗಗಳಿಗೆ ಇರಲಿದೆ. ಇನ್ನೂ ಉತ್ತರ ಕರ್ನಾಟಕದ ಹುಬ್ಬಳಿ, ಬೆಳಗಾವಿ, ಧಾರವಾಡ, ವಿಜಯಪುರ, ಯಾದಗಿರಿ ಸೇರಿ ಹಲವೆಡೆ ಬಸ್ ವ್ಯವಸ್ಥೆ ಇರಲಿದೆ. ಹೊರರಾಜ್ಯಗಳಾದ ತಿರುಪತಿ, ವಿಜಯವಾಡ, ಹೈದರಾಬಾದ್ ಕಡೆಗೂ ವಿಶೇಷ ಬಸ್‌ಗಳು ಲಭ್ಯವಿರಲಿದೆ. ಇದನ್ನೂ ಓದಿ: ಹನಿಟ್ರ‍್ಯಾಪ್ ತನಿಖೆಗೆ ಹೈಕಮಾಂಡ್ ಅನುಮತಿ ಬೇಕಾ – ಸಿಎಂ ನಿಲುವೇನು?

    2.ಸ್ಯಾಟಲೈಟ್ ಬಸ್ ನಿಲ್ದಾಣ

    ಮೈಸೂರು ಭಾಗದ ಎಲ್ಲಾ ಕಡೆಗಳಿಗೆ ಬಸ್‌ಗಳ ವ್ಯವಸ್ಥೆಯಿರಲಿದೆ. ಮಂಡ್ಯ, ರಾಮನಗರ, ಕುಶಾಲನಗರ, ಚಾಮರಾಜನಗರ, ಕೊಡಗು, ವಿರಾಜಪೇಟೆ, ಪಿರಿಯಾಪಟ್ಟಣ ಭಾಗಗಳಿಗೆ ಬಸ್‌ಗಳಿರಲಿವೆ.

    3.ಶಾಂತಿನಗರ ಬಸ್ ನಿಲ್ದಾಣ

    ಈ ಬಸ್ ನಿಲ್ದಾಣದಿಂದ ತಮಿಳುನಾಡು ಮತ್ತು ಕೇರಳ ಕಡೆಗಳ ಮಧುರೈ, ಕುಂಭಕೋಣಂ, ಚೆನ್ನೈ, ಕೊಯಮತ್ತೂರ್, ತಿರುಚ್ಚಿ, ಪಾಲಕ್ಕಾಡ್, ತ್ರಿಶೂರ್, ಏರ್ನಾಕುಲಂ, ಕೋಯಿಕೋಡ್, ಕ್ಯಾಲಿಕಟ್ ಮುಂತಾದ ಸ್ಥಳಗಳಿಗೆ ಹೋಗುವ ಪ್ರತಿಷ್ಠಿತ ಸಾರಿಗೆ ಬಸ್‌ಗಳು ಲಭ್ಯವಿರಲಿದೆ. ಇದನ್ನೂ ಓದಿ: ಅಲಹಾಬಾದ್ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ತಡೆ – ಅತ್ಯಾಚಾರದ ಕುರಿತು ಅಸಂವೇದನಾಶೀಲ ಟೀಕೆ ಎಂದು ಖಂಡನೆ

    ಇನ್ನೂ ಪ್ರಯಾಣಿಕರು ಎರಡೂ ಬದಿಯ ಮುಂಗಡ ಟಿಕೆಟ್ ಬುಕ್ ಮಾಡಿದರೆ 10% ರಿಯಾಯಿತಿ ಸಿಗಲಿದೆ. ಜೊತೆಗೆ ನಾಲ್ಕು ಅಥವಾ ಹೆಚ್ಚು ಪ್ರಯಾಣಿಕರು ಒಟ್ಟಾಗಿ ಮುಂಗಡ ಟಿಕೆಟ್ ಕಾಯ್ದಿರಿಸಿದರೆ ಶೇಕಡ 5ರಷ್ಟು ರಿಯಾಯಿತಿ ದೊರಯಲಿದೆ. ಕೆಎಸ್‌ಆರ್‌ಟಿಸಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಬಸ್ ಬುಕ್ ಮಾಡಲು ಅವಕಾಶವಿದೆ.

  • ಭೀಕರ ರಸ್ತೆ ಅಪಘಾತ – ತಾಯಿ ಸಾವು, ಅದೃಷ್ಟವಶಾತ್ ಮಗ ಪ್ರಾಣಾಪಾಯದಿಂದ ಪಾರು

    ಭೀಕರ ರಸ್ತೆ ಅಪಘಾತ – ತಾಯಿ ಸಾವು, ಅದೃಷ್ಟವಶಾತ್ ಮಗ ಪ್ರಾಣಾಪಾಯದಿಂದ ಪಾರು

    ಚಿಕ್ಕೋಡಿ: ಸರ್ಕಾರಿ ಬಸ್ ಹಾಗೂ ಕಾರಿನ ಮಧ್ಯೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ (Road Accident) ಮಹಿಳೆಯೊಬ್ಬರು ಮೃತಪಟ್ಟ ಘಟನೆ ಶನಿವಾರ ನಿಪ್ಪಾಣಿ ಮುಧೋಳ ರಾಜ್ಯ ಹೆದ್ದಾರಿಯಲ್ಲಿ ಸಂಭವಿಸಿದೆ.

    ಬೆಳಗಾವಿ (Belagavi) ಜಿಲ್ಲೆಯ ರಾಯಬಾಗ ಪಟ್ಟಣದ ನಿರ್ಮಲ ಅವಟೆ (60) ಮೃತಪಟ್ಟ ಮಹಿಳೆ. ಕಾರು ಚಲಾಯಿಸುತ್ತಿದ್ದ ಚಿಕ್ಕೋಡಿ ಹೆಸ್ಕಾಂ ಉಪವಿಭಾಗ ಸಹಾಯಕ ಅಭಿಯಂತರ ನೇಮಿನಾಥ ಅವಟೆ (43) ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಚಿಕ್ಕೋಡಿ ಪಟ್ಟಣದ ಯಾದವ ನಗರದಲ್ಲಿ ವಾಸಿಸವಿದ್ದ ಇವರು ಕಾರಿನಲ್ಲಿ ಸಂಚರಿಸುವ ವೇಳೆ ಉಮರಾಣಿ ಹತ್ತಿರ ನಿಪ್ಪಾಣಿ ಮುಧೋಳ ರಾಜ್ಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಗಾಯಗೊಂಡ ನೇಮಿನಾಥ ಅವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಘಟನಾ ಸ್ಥಳಕ್ಕೆ ಚಿಕ್ಕೋಡಿ ಪೊಲೀಸ್ ಠಾಣೆ ಡಿವೈಎಸ್ಪಿ ಗೋಪಾಲಕೃಷ್ಣ ಗೌಡರ, ಸಿಪಿಐ ವಿಶ್ವನಾಥ್ ಚೌಗಲಾ, ಸಂಚಾರಿ ಪೊಲೀಸ್ ಠಾಣೆಯ ಪಿಎಸ್‌ಐ ರೂಪಾ ಗುಡೋಡ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಸರ್ಕಾರಿ ಬಸ್ – ಕಾರಿನ ನಡುವೆ ಡಿಕ್ಕಿ; ಓರ್ವ ಸಾವು, ಮತ್ತೋರ್ವನ ಸ್ಥಿತಿ ಗಂಭೀರ

    ಸರ್ಕಾರಿ ಬಸ್ – ಕಾರಿನ ನಡುವೆ ಡಿಕ್ಕಿ; ಓರ್ವ ಸಾವು, ಮತ್ತೋರ್ವನ ಸ್ಥಿತಿ ಗಂಭೀರ

    ರಾಯಚೂರು: ಜಿಲ್ಲೆಯ ಮಸ್ಕಿ (Maski) ತಾಲೂಕಿನ ಗುಡದೂರು ಬಳಿ ಸರ್ಕಾರಿ ಬಸ್ ಹಾಗೂ ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ಓರ್ವ ಸಾವನ್ನಪ್ಪಿದ್ದಾನೆ. ಇನ್ನೋರ್ವನ ಸ್ಥಿತಿ ಚಿಂತಾಜನಕವಾಗಿದೆ.

    ಅಪಘಾತದಲ್ಲಿ ಕಾರಿನಲ್ಲಿದ್ದ 45 ವರ್ಷದ ಗಿರೀಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.ಇದನ್ನೂ ಓದಿ: ವಿಜಯಪುರ | ಬೈಕ್ ಸವಾರನ ಮೇಲೆ ಕ್ರೇನ್ ಹರಿದು ಸ್ಥಳದಲ್ಲೇ ಸಾವು

    ಡಿಕ್ಕಿ ರಭಸಕ್ಕೆ ಕಾರು ನುಜ್ಜುಗುಜ್ಜಾಗಿದೆ. ಬಸ್‌ನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕಾರಿನಲ್ಲಿದ್ದ ಇನ್ನೋರ್ವ ಗಾಯಾಳು ಶಿವರಾಜ್‌ ಸ್ಥಿತಿ ಗಂಭೀರವಾಗಿದ್ದು, ಸಿಂಧನೂರು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳಿಗೆ ಚಿಕಿತ್ಸೆ ಮುಂದುವರೆದಿದೆ.

    ಸ್ಥಳಕ್ಕೆ ಬಳಗಾನೂರು ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಬಳಗಾನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.ಇದನ್ನೂ ಓದಿ: ಫ್ಯಾನ್ಸ್‌ಗೆ ಸಿಹಿಸುದ್ದಿ- ಹೊಸ ರಿಲೀಸ್ ಡೇಟ್ ಅನೌನ್ಸ್ ಮಾಡಿದ ‘ಪುಷ್ಪ 2’ ಟೀಮ್

  • ರಸ್ತೆ ಬದಿ ನಿಂತಿದ್ದ ಬಾಲಕನ ಮೇಲೆ ಹರಿದ ಸರ್ಕಾರಿ ಬಸ್ – ಬಾಲಕ ಸ್ಥಳದಲ್ಲೇ ಸಾವು!

    ರಸ್ತೆ ಬದಿ ನಿಂತಿದ್ದ ಬಾಲಕನ ಮೇಲೆ ಹರಿದ ಸರ್ಕಾರಿ ಬಸ್ – ಬಾಲಕ ಸ್ಥಳದಲ್ಲೇ ಸಾವು!

    ಚಿಕ್ಕೋಡಿ: ವೇಗವಾಗಿ ಬಂದ ಸರ್ಕಾರಿ ಬಸ್‌ವೊಂದು (Government Bus) ರಸ್ತೆ ಬದಿ ನಿಂತಿದ್ದ ಬಾಲಕನ ಮೇಲೆ ಹರಿದು, ಬಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಳಗಾವಿ (Belagavi) ಜಿಲ್ಲೆಯ ಅಥಣಿ ಪಟ್ಟಣದ ಗಲಗಲಿ ಆಸ್ಪತ್ರೆ ಬಳಿ ನಡೆದಿದೆ.

    ಸ್ಥಳೀಯ ನಿವಾಸಿ ಸುನೀಲ್ ಬಂಡರಗರ್ (10) ಸ್ಥಳದಲ್ಲೇ ಸಾವನ್ನಪ್ಪಿದ ಬಾಲಕ. ಟ್ಯೂಷನ್‌ ಮುಗಿಸಿ ತೆರಳುತ್ತಿದ್ದ ವೇಳೆ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಭೀಕರ ರಸ್ತೆ ಅಪಘಾತ ಸಿಸಿಟಿವಿ ಕ್ಯಾಮೆರಾದಲ್ಲಿ (CCTV Camera) ಸೆರೆಯಾಗಿದೆ. ಇದನ್ನೂ ಓದಿ: Digital Arrest | ಮಹಿಳೆಯರ ನಗ್ನ ವೀಡಿಯೋ ರೆಕಾರ್ಡ್ ಮಾಡಿ ಹಣಕ್ಕಾಗಿ ಬ್ಲ್ಯಾಕ್​ ಮೇಲ್!

    ಏನಿದು ಘಟನೆ?
    ಸುನೀಲ್‌ ಬಂಡರಗರ್‌ ಎಂಬ ಬಾಲಕ ಟ್ಯೂಷನ್‌ ಮುಗಿಸಿ ಮೂತ್ರ ವಿಸರ್ಜನೆಗೆಂದು ಹೊರಗೆ ಬಂದಿದ್ದ. ಈ ವೇಳೆ ರಸ್ತೆ ದಾಟಲು ಗೆಳೆಯರೊಟ್ಟಿಗೆ ರಸ್ತೆ ಬದಿ ನಿಂತಿದ್ದ. ಇದೇ ಸಮಯಕ್ಕೆ ಅಥಣಿಯಿಂದ ಕಾರವಾರಕ್ಕೆ ಹೋಗುತ್ತಿದ್ದ ಸರ್ಕಾರಿ ಬಸ್ ಬಾಲಕನ ಮೇಲೆ ಹರಿದಿದೆ. ಇದರಿಂದ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಚಾಲಕನ ನಿರ್ಲಕ್ಷ್ಯಕ್ಕೆ ಸ್ಥಳೀಯರಿಂದ ಆಕ್ರೋಶ ವ್ಯಕ್ತವಾಗಿದೆ. ಇದನ್ನೂ ಓದಿ: ವಿಜಯ್ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ ಪಕ್ಷವನ್ನು ಅಧಿಕೃತಗೊಳಿಸಿದ ಚುನಾವಣಾ ಆಯೋಗ

    ಅಥಣಿ ಪೊಲೀಸ್ ಠಾಣಾ (Athani Police Station) ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದ್ದು, ಭೀಕರ ರಸ್ತೆ ಅಪಘಾತ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಜೈಲಲ್ಲಿ ಬಾಡಿ ಫಿಟ್ನೆಸ್ ಕಾಪಾಡಿಕೊಳ್ಳಲು ವಿಟಮಿನ್ ಟ್ಯಾಬ್ಲೆಟ್ ಮೊರೆ ಹೋದ ದರ್ಶನ್ 

  • ವಿಜಯಪುರ ಟಿಪ್ಪು ಸುಲ್ತಾನ್ ಸರ್ಕಲ್‌ನಲ್ಲಿ ಬಸ್ ಕೆಳಗೆ ಬಿದ್ದು ವ್ಯಕ್ತಿ ಆತ್ಮಹತ್ಯೆ

    ವಿಜಯಪುರ ಟಿಪ್ಪು ಸುಲ್ತಾನ್ ಸರ್ಕಲ್‌ನಲ್ಲಿ ಬಸ್ ಕೆಳಗೆ ಬಿದ್ದು ವ್ಯಕ್ತಿ ಆತ್ಮಹತ್ಯೆ

    – ದೃಶ್ಯ ಸಿಸಿಟಿವಿಯಲ್ಲಿ ಸೆರೆ

    ವಿಜಯಪುರ: ಸರ್ಕಾರಿ ಬಸ್ (Government Bus) ಕೆಳಗೆ ಬಿದ್ದು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಜಯಪುರ (Vijayapura)ನಗರದ ಟಿಪ್ಪು ಸುಲ್ತಾನ್ ಸರ್ಕಲ್‌ನಲ್ಲಿ ನಡೆದಿದೆ.

    ವಿಶ್ವನಾಥ ಶಂಕರಯ್ಯ (38) ಚಲಿಸುತ್ತಿದ್ದ ಬಸ್ ಕೆಳಗೆ ಆತ್ಮಹತ್ಯೆ ಮಾಡಿಕೊಂಡ‌ ವ್ಯಕ್ತಿ. ಬಸ್‌ ಬರುತ್ತಿದ್ದಂತೆ ಕೈಯಲ್ಲಿದ್ದ ಮೊಬೈಲ್‌ (Mobile) ಎಸೆದು ಏಕಾಏಕಿ ಬಸ್‌ ಚಕ್ರದ ಕೆಳಗೆ ಬಿದಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ (CCTV) ಸೆರೆಯಾಗಿದೆ. ಇದನ್ನೂ ಓದಿ: ಪತ್ನಿಯ ಕತ್ತು ಕೊಯ್ದು ಮಾರಣಾಂತಿಕ ಹಲ್ಲೆ – ಕೊಂದೇಬಿಟ್ಟೆನೆಂದು ಪತಿ ಆತ್ಮಹತ್ಯೆ

    ವಿಶ್ವನಾಥ ಮೂಲತಃ ಹಾಸನ‌ (Hassan) ಜಿಲ್ಲೆಯ ಅರಸೀಕೆರೆ ತಾಲೂಕಿನ ಮೂಲದವರು. ಆದ್ರೆ ಬಸ್‌ ಚಕ್ರಕ್ಕೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಇದನ್ನೂ ಓದಿ: ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಮನೆಯಲ್ಲಿ 2.50 ಲಕ್ಷ ರೂ. ಕಳ್ಳತನ!

    ಆತ್ಮಹತ್ಯೆ ಮಾಡಿಕೊಂಡ ಯುವಕನ ಕುಟುಂಬಸ್ಥರ ಮೊಬೈಲ್ ಸಂಖ್ಯೆ ಪತ್ತೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಬಂಕ್‌ಗಳಲ್ಲಿ ಪೆಟ್ರೋಲ್‌, ಡೀಸೆಲ್‌ ದರ ಪಟ್ಟಿ ಕನ್ನಡದಲ್ಲೂ ಇರುತ್ತೆ: ಕೇಂದ್ರ ಸಚಿವ ಹರ್ದೀಪ್‌ ಸಿಂಗ್‌ ಪುರಿ

  • ಓವರ್‌ಲೋಡ್‌ನಿಂದ ಕೊಳಕ್ಕೆ ಉರುಳಿದ ಬಸ್ – 17 ಮಂದಿ ಸಾವು, 35 ಮಂದಿಗೆ ಗಾಯ

    ಓವರ್‌ಲೋಡ್‌ನಿಂದ ಕೊಳಕ್ಕೆ ಉರುಳಿದ ಬಸ್ – 17 ಮಂದಿ ಸಾವು, 35 ಮಂದಿಗೆ ಗಾಯ

    ಢಾಕಾ: ಬಸ್‌ವೊಂದು ಕೊಳಕ್ಕೆ ಉರುಳಿದ ಪರಿಣಾಮ ಮೂರು ಮಕ್ಕಳೂ ಸೇರಿದಂತೆ 17 ಮಂದಿ ಸಾವನ್ನಪ್ಪಿದ್ದು 35 ಮಂದಿ ಗಾಯಗೊಂಡಿರುವ ಘಟನೆ ಬಾಂಗ್ಲಾದೇಶದ (Bangladesh) ಜಲಕತಿ ಸದರ್ ಉಪಜಿಲಾ ವ್ಯಾಪ್ತಿಯಲ್ಲಿ ನಡೆದಿದೆ.

    ಬಂಢಾರಿಯಾದಿಂದ ಹೊರಟಿದ್ದ ಬಸ್ (Government Bus) ಚಾಲಕನ ನಿಯಂತ್ರಣ ತಪ್ಪಿ ಇದ್ದಕ್ಕಿದ್ದಂತೆ ಕೊಳಕ್ಕೆ ಉರುಳಿದೆ. ಬಸ್ ಮಿತಿಮೀರಿ ಜನರನ್ನ ತುಂಬಿದ್ದರಿಂದ ಕೊಳದಲ್ಲಿ ಮುಳುಗಿದೆ. ನಾನು ಹರಸಾಹದ ಮಾಡಿ ಹೊರಬಂದೆ ಎಂದು ಬದುಕುಳಿದ ಸಂತ್ರಸ್ತ ಮೊಮಿನ್ ಹೇಳಿದ್ದಾರೆ. ಇದನ್ನೂ ಓದಿ: ಪ್ರಿಯಕರನಿಗಾಗಿ 6 ವರ್ಷದ ಮಗಳೊಂದಿಗೆ ಭಾರತಕ್ಕೆ ಹಾರಿಬಂದ 49ರ ಪೋಲೆಂಡ್‌ ಮಹಿಳೆ

    17 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಗಾಯಾಳುಗಳನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತಪಟ್ಟವರಲ್ಲಿ ಫಿರೋಜ್‌ಪುರದ ಭಂಡಾರಿಯಾ ಉಪಜಿಲಾ ಮತ್ತು ಜಲ್ಕತಿಯ ರಾಜಾಪುರ ಪ್ರದೇಶದ ನಿವಾಸಿಗಳು ಹೆಚ್ಚಿನವರಿದ್ದಾರೆ ಎಂದು ಬಾರಿಶಾಲ್ ವಿಭಾಗೀಯ ಆಯುಕ್ತ ಎಂ.ಡಿ ಶೌಕತ್ ಅಲಿ ತಿಳಿಸಿದ್ದಾರೆ.

    ಬಾಂಗ್ಲಾದೇಶದಲ್ಲಿ ರಸ್ತೆ ಅಪಘಾತಗಳು ಸಾಮಾನ್ಯವಾಗಿಬಿಟ್ಟಿವೆ. ರೋಡ್ ಸೇಫ್ಟಿ ಫೌಂಡೇಶನ್ ಪ್ರಕಾರ, ಕಳೆದ ಜೂನ್‌ನಲ್ಲಿ ಒಟ್ಟು 559 ರಸ್ತೆ ಅಪಘಾತಗಳು ಸಂಭವಿಸಿದ್ದು ಅಪಘಾತಗಳಲ್ಲಿ 562 ಜನರು ಸಾವನ್ನಪ್ಪಿದ್ದು, 812 ಜನರು ಗಾಯಗೊಂಡಿದ್ದಾರೆ. ದೇಶಾದ್ಯಂತ ನಡೆದ 207 ಮೋಟಾರ್‌ಸೈಕಲ್ ಅಪಘಾತಗಳಲ್ಲಿ 169 ಜನರು ಸಾವನ್ನಪ್ಪಿದ್ದಾರೆ ಅದರಲ್ಲಿ 78 ಮಹಿಳೆಯರು ಮತ್ತು 114 ಮಕ್ಕಳೂ ಸೇರಿದ್ದಾರೆ ಎಂಬುದು ತಿಳಿದುಬಂದಿದೆ.

    ಜಲಮಾರ್ಗಗಳಲ್ಲಿ ನಡೆದ ಅಪಘಾತದಲ್ಲಿ 9 ಮಂದಿ ಸಾವನ್ನಪ್ಪಿದ್ದು, 7 ಮಂದಿ ನಾಪತ್ತೆಯಾಗಿದ್ದಾರೆ. ಅದೇ ಸಮಯದಲ್ಲಿ 21 ರೈಲ್ವೆ ಅಪಘಾತಗಳು ಸಂಭವಿಸಿದ್ದು 18 ಜನ ಸಾವನ್ನಪ್ಪಿದ್ದಾರೆ ಮತ್ತು 11 ಮಂದಿ ಗಾಯಗೊಂಡಿರುವುದಾಗಿ ವರದಿಗಳು ಹೇಳಿವೆ. ಜೊತೆಗೆ 38 ಪ್ರಾಣಿಗಳು ಬಲಿಯಾಗಿವೆ. ಇದನ್ನೂ ಓದಿ: ಮಣಿಪುರದಲ್ಲಿ ನಡೆದ ಘಟನೆ ದುಃಖಕರ – ಮಹಿಳೆಯರ ಬೆತ್ತಲೆ ಮೆರವಣಿಗೆ ಪ್ರಕರಣಕ್ಕೆ ಬ್ರಿಜ್‌ ಭೂಷಣ್‌ ಸಿಂಗ್‌ ಖಂಡನೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]