ಬೆಂಗಳೂರು: ಸರ್ಕಾರದ ಖಜಾನೆ ತುಂಬಿ ತುಳುಕುತ್ತಿದೆ ಅಂತಿರೋರಿಗೆ ನೌಕರರ ಸಮಸ್ಯೆ ಪರಿಹಾರ ಮಾಡೋಕೆ ಯಾಕೆ ಆಗ್ತಿಲ್ಲ ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಕಿಡಿಕಾರಿದ್ದಾರೆ.
ಸಾರಿಗೆ ನೌಕರರ ಮುಷ್ಕರದ (Transport Employees Strike) ಬಗ್ಗೆ ಬೆಂಗಳೂರಿನಲ್ಲಿ (Bengaluru) ಪ್ರತಿಕ್ರಿಯೆ ನೀಡಿದ ಅವರು, ಸಾರಿಗೆ ನೌಕರರ ಜೊತೆ ಸರ್ಕಾರ ಮಾತುಕತೆ ನಡೆಸುವಲ್ಲಿ ವಿಫಲವಾಗಿದೆ. ಹಿಂದೆ ಯಡಿಯೂರಪ್ಪ ಇದ್ದಾಗ ಇದೇ ಸಿದ್ದರಾಮಯ್ಯ ನಮಗೆ ಪ್ರಶ್ನೆ ಮಾಡಿದ್ರು. ಸಾರಿಗೆ ನೌಕರರ ಮೇಲೆ ಎಸ್ಮಾ ಹಾಕಿ ಹೆದರಿಸಿದ್ರು. ನಿನ್ನ ಕುರ್ಚಿ ಎಷ್ಟು ಶಾಶ್ವತ ಎಂದು ತಿಳಿದುಕೊಂಡಿದ್ದೀಯಾ ಅಂತಾ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದರು. ಈಗ ನಾನು ಸಿದ್ದರಾಮಯ್ಯಗೆ (Siddaramaiah) ಪ್ರಶ್ನೆ ಮಾಡ್ತೀನಿ.ನೀವು ಎಷ್ಟು ದಿನ ಅಧಿಕಾರದಲ್ಲಿ ಇರುತ್ತೀರಾ ಎಂದುಕೊಂಡಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಸರ್ಕಾರದ ಪರಿಸ್ಥಿತಿಯನ್ನೂ ಸಾರಿಗೆ ನೌಕರರು ಅರ್ಥಮಾಡಿಕೊಳ್ಳಬೇಕು: ಡಿಕೆಶಿ
ನೀವು ಫ್ರೀ ಅಂತಾ ನೌಕರರಿಗೆ ಸಂಬಳವನ್ನೇ ಕೊಡುತ್ತಿಲ್ಲ. ನೌಕರರನ್ನು ಕರೆದು ಮಾತಾಡಿ ಸಮಸ್ಯೆ ಬಗೆಹರಿಸಬೇಕಿತ್ತು. ಇದರಿಂದ ಜನರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಸಮಸ್ಯೆ ಅನುಭವಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಸಾರಿಗೆ ಮುಷ್ಕರ | ಇದು ಪಾಪರ್ ಸರ್ಕಾರ, ಪರಿಹಾರ ಕೊಡದಿದ್ರೆ ಅಧಿಕಾರ ಬಿಟ್ಟು ತೊಲಗಿ – ಅಶೋಕ್ ವಾಗ್ದಾಳಿ
ಖಾಸಗಿ ಬಸ್‌ನವರು ಹೆಚ್ಚು ಹಣ ವಸೂಲಿ ಮಾಡ್ತಿದ್ದಾರೆ. ಜನಸಾಮಾನ್ಯರ ಹಣ ವ್ಯರ್ಥ ಆಗ್ತಿದೆ. ಇದಕ್ಕೆ ಕಡಿವಾಣ ಹಾಕಲು ತಕ್ಷಣವೇ ಸರ್ಕಾರ ಒಂದು ನಿರ್ಧಾರ ತೆಗೆದುಕೊಳ್ಳಬೇಕು. ಎಲ್ಲದಕ್ಕೂ ನಮ್ಮ ಮೇಲೆ ಬೆರಳು ತೋರಿಸ್ತಾರೆ. ಅವರು ಮಾಡಿದನ್ನು ನಾವು ತೀರಿಸಿದ್ದೇವೆ ಎನ್ನುತ್ತಾರೆ. ಹೌದಪ್ಪ ನಾವು ಕೆಟ್ಟದನ್ನು ಮಾಡಿದ್ದೇವೆ. ಜನ ನಮ್ಮನ್ನು ಸೋಲಿಸಿದ್ದಾರೆ. ನಿಮ್ಮನ್ನು ಗೆಲ್ಲಿಸಿದ್ದಾರಲ್ಲ ನೀವು ಅವರಿಗೆ ಒಳ್ಳೆಯದು ಮಾಡಬೇಕಿತ್ತಲ್ಲ. ಖಜಾನೆ ತುಂಬಿ ತುಳುಕುತ್ತಿದೆ ಎಂದು ಬೊಬ್ಬೆ ಹೊಡೆಯುತ್ತಿದ್ರಿ. ಈಗ ಹಣ ಇಲ್ಲ ಅಂತೀರಲ್ಲ. ನುಡಿದಂತೆ ನಡೆದಿದ್ದೇವೆ ಅಂತೀರಲ್ಲ ಇದೇನಾ ನಿಮ್ಮ ಮಾತು. ಗ್ರಾಮೀಣ ಭಾಗದಲ್ಲಿ ತುಂಬಾ ಸಮಸ್ಯೆ ಆಗಿದೆ. ಕೂಡಲೇ ಸಮಸ್ಯೆ ಪರಿಹಾರ ಮಾಡಿ ಎಂದು ಆಗ್ರಹಿಸಿದ್ದಾರೆ.





ದೂರದೂರುಗಳಿಂದ ಅಪ್ಪ ಅಮ್ಮನನ್ನ ಬಿಟ್ಟು ನಗರಗಳಿಗೆ ಹೋಗಿ ಹೇಗಾದ್ರೂ ಒಂದು ಬಿಸಿನೆಸ್ ಮಾಡಿ ಕುಟುಂಬದವರನ್ನ ನೋಡಿಕೊಳ್ಳೋಣ ಅನ್ನೋ ಸಣ್ಣ ಆಸೆಯಿಂದ ಸಾವಿರಾರು ಜನ ಇಂದು ಬೇಕರಿ (Bakery), ಟೀ ಶಾಪ್, ಪಾನ್ ಶಾಪ್, ಕಾಂಡಿಮೆಂಟ್ ಅಂತಾ ಮಾಡಿಕೊಂಡು ಜೀವನ ಮಾಡ್ತಿದ್ದಾರೆ. ಇತಂಹ ಶಾಪ್‌ಗಳಲ್ಲಿ ಇವತ್ತಿನ ಡಿಜಿಟಲ್ ದುನಿಯಾದಲ್ಲಿ ಅತಿಹೆಚ್ಚು ವ್ಯವಹಾರ ಆಗ್ತಿರೋದು ಆನ್‌ಲೈನ್ ಪೇಮೆಂಟ್ ಅಂದರೆ ಗೂಗಲ್‌ಪೇ, ಪೆಟಿಎಂ, ಪೋನ್ ಪೇ ಮೂಲಕವೇ ಟೀ, ಸಿಗರೇಟ್, ಕಾಫಿ, ತಿಂಡಿ, ಬೀಡಾ ಅಂತಾ ಗ್ರಾಹಕರು ಸಣ್ಣ ಪುಟ್ಟ ಖರೀದಿಗೂ ಡಿಜಿಟಲ್ ಪೇಮೆಂಟ್ ಮಾಡ್ತಿದ್ದಾರೆ. ಇದನ್ನೂ ಓದಿ:
ಈ ನೋಟಿಸ್ ಪಡೆದವರೆಲ್ಲ, ಕಾರ್ಮಿಕ ಪರಿಷತ್ತಿ ಸಂಘದ ಅಧ್ಯಕ್ಷ ರವಿ ಶೆಟ್ಟಿ ಅವರ ಬಳಿ ಹೋಗಿ ತಮಗೆ ನೋಟಿಸ್ ಬಂದಿರೋ ಬಗ್ಗೆ ಹೇಳಿಕೊಂಡಿದ್ದಾರೆ. ಸರ್ಕಾರ ಗ್ಯಾರಂಟಿ ಯೋಜನೆ ನೀಡಿ, ಈಗ ಈ ರೀತಿ ವಸೂಲಿಗೆ ನಿಂತಿದೆ. ಇದು ಸರಿಯಾದ ಕ್ರಮವಲ್ಲ. ಇಡೀ ರಾಜ್ಯದಲ್ಲಿ 60 ಸಾವಿರಕ್ಕೂ ಹೆಚ್ಚು ಸಣ್ಣ ಬೇಕರಿ, ಕಾಂಡಿಮೆಂಟ್ಸ್ ಇದೆ. ಅವರೆಲ್ಲ ನಮ್ಮನ್ನ ಸಂಪರ್ಕ ಮಾಡ್ತಿದ್ದಾರೆ. ಸರ್ಕಾರ ಈ ಟ್ಯಾಕ್ಸ್ ಹಿಂಪಡೆಯಬೇಕು ಎಂದು ನಾವು ಸಿಎಂಗೆ ಮನವಿ ಮಾಡುತ್ತೇವೆ. ಇಲ್ಲವಾದಲ್ಲಿ 1 ಲಕ್ಷಕ್ಕೂ ಅಧಿಕ ಜನರು ಸೇರಿ ಹೋರಾಟ ಮಾಡುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: 



