Tag: Governed State

  • ಉತ್ತಮ ಆಡಳಿತದಲ್ಲಿ ಕೇರಳ ಫಸ್ಟ್, ಬಿಹಾರ ಲಾಸ್ಟ್

    ಉತ್ತಮ ಆಡಳಿತದಲ್ಲಿ ಕೇರಳ ಫಸ್ಟ್, ಬಿಹಾರ ಲಾಸ್ಟ್

    ಬೆಂಗಳೂರು: ಆಡಳಿತ ವ್ಯವಸ್ಥೆಯಲ್ಲಿ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿ ಕೇರಳ ಇದ್ದರೆ, ಬಿಹಾರ ಕೊನೆಯ ಕೊನೆಯ ಸ್ಥಾನದಲ್ಲಿದೆ. ಇನ್ನು ಕರ್ನಾಟಕ ನಾಲ್ಕನೇ ಸ್ಥಾನ ಪಡೆದಿದೆ ಎಂದು ಥಿಂಕ್ ಟ್ಯಾಂಕ್ ಪಬ್ಲಿಕ್ ಅಫೆರ್ಸ್ ಸೆಂಟರ್ (ಪಿಎಸಿ) ಸಾರ್ವಜನಿಕ ವ್ಯವಹಾರಗಳ ಸೂಚಂಕ್ಯದ ಆಧಾರದಲ್ಲಿ ಪಟ್ಟಿಯನ್ನು ಇಂದು ಬಿಡುಗೊಡೆಗೊಳಿಸಿದೆ.

    ಸೂಚಂಕ್ಯ ಆಧಾರದ ಅಡಿಯಲ್ಲಿ ಕೇರಳ ಮೊದಲ ಸ್ಥಾನಗಳಿಸಿದೆ. 2016ರಿಂದಲೂ ಅತಿ ದೊಡ್ಡ ರಾಜ್ಯಗಳಲ್ಲಿ ಒಂದಾದ ಕೇರಳ ಮೊದಲ ಸ್ಥಾನವನ್ನು ಪಡೆಯುತ್ತಾ ಬಂದಿದೆ. ಅತಿ ದೊಡ್ಡ ರಾಜ್ಯಗಳಲ್ಲಿ ಕೇರಳ ಮೊದಲ ಸ್ಥಾನದಲ್ಲಿದ್ದು, ನಂತರ ತಮಿಳುನಾಡು, ತೆಲಂಗಾಣ, ಕರ್ನಾಟಕ ಮತ್ತು ಗುಜರಾತ ಟಾಪ್ 5ರ ಸ್ಥಾನದಲ್ಲಿವೆ. ಮಧ್ಯ ಪ್ರದೇಶ, ಜಾರ್ಖಂಡ್ ಮತ್ತು ಬಿಹಾರ ಕೊನೆಯ ಮೂರು ಸ್ಥಾನಗಳನ್ನು ಪಡೆದುಕೊಂಡಿವೆ.

    ಅತಿ ಚಿಕ್ಕ ರಾಜ್ಯಗಳ ಪೈಕಿ (2 ಕೋಟಿಗಿಂತಲೂ ಕಡಿಮೆ ಜನಸಂಖ್ಯೆ) ಹಿಮಾಚಲ ಪ್ರದೇಶ ಮೊದಲ ಸ್ಥಾನ ಪಡೆದರೆ, ಗೋವಾ, ಮಿಜೋರಾಂ, ಸಿಕ್ಕಿಂ ಮತ್ತು ತ್ರಿಪುರ ನಂತರದ ಸ್ಥಾನಗಳನ್ನು ಆಡಳಿತ ವ್ಯವಸ್ಥೆಯಲ್ಲಿ ಪಡೆದುಕೊಂಡಿವೆ. ನಾಗಾಲ್ಯಾಂಡ್, ಮಣಿಪುರ ಮತ್ತು ಮೇಘಾಲಯ ಚಿಕ್ಕ ರಾಜ್ಯಗಳ ಪೈಕಿ ಕೊನೆಯ ಸ್ಥಾನದಲ್ಲಿವೆ.

    ವರದಿ ಹೇಗೆ ತಯಾರಿಸಲಾಗುತ್ತೆ?
    ಮೂಲಭೂತ ಸೌಲಭ್ಯ, ಸಾಮಾಜಿಕ ರಕ್ಷಣೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗು ಮಾನವ ಅಭಿವೃದ್ಧಿ ಸೇರಿದಂತೆ ದೇಶಾದ್ಯಂತ ಹತ್ತು ಅಂಶಗಳನ್ನು ಕುರಿತು ಪಿಎಸಿ ವರದಿಗೂ ಮುನ್ನ ಅಧ್ಯಯನ ನಡೆಸುತ್ತದೆ. ಜನಸಂಖ್ಯೆ ಆಧಾರದ ಮೇಲೆ ದೊಡ್ಡ ಮತ್ತು ಸಣ್ಣ ರಾಜ್ಯಗಳು ಎಂದು ಎರಡು ವರ್ಗ ಮಾಡಿ ಅಧ್ಯಯನ ನಡೆಸಲಾಗುತ್ತದೆ. 2 ಕೋಟಿಗಿಂತ ಹೆಚ್ಚಿಗೆ ಜನಸಂಖ್ಯೆಯನ್ನು ಹೊಂದಿರುವ ರಾಜ್ಯವನ್ನು ದೊಡ್ಡ ರಾಜ್ಯ ಎಂದು ವಿಭಾಗಿಸಲಾಗುತ್ತದೆ. ಒಟ್ಟು 30 ಮುಖ್ಯ ವಿಷಯಗಳು ಮತ್ತು 100 ಸೂಚಕಗಳು ಅಂದಾಜು ಮಾಡಲ್ಪಟ್ಟ, ಸರ್ಕಾರದ ಮಾಹಿತಿಯ ಮೇಲೆ ಈ ವರದಿ ಅವಲಂಬಿಸಿರುತ್ತದೆ.

    2016ರಿಂದಲೂ ಪಿಎಸಿ ಸಾರ್ವಜನಿಕ ವ್ಯವಹಾರಗಳ ಸೂಚಂಕ್ಯದ ಆಧಾರದ ಮೇಲೆ ಈ ಪಟ್ಟಿಯನ್ನು ಬಿಡುಗೊಳಿಸುತ್ತಾ ಬಂದಿದೆ. ಈ ವರದಿಯ ದತ್ತಾಂಶಗಳ ಆಧಾರದ ಮೇಲೆ ರಾಜ್ಯದ ಸಾಮಾಜಿಕ, ಆರ್ಥಿಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳಲು ದಿಕ್ಸೂಚಿಯಾಗಲಿದೆ. 1994ರಲ್ಲಿ ಭಾರತದ ಖ್ಯಾತ ಅರ್ಥಶಾಸ್ತ್ರಜ್ಞ ಸ್ಯಾಮುವೆಲ್ ಪೌಲ್ ಪಿಎಸಿ ಸಂಸ್ಥೆಯನ್ನು ಹುಟ್ಟು ಹಾಕಿದ್ದರು.