Tag: governament office

  • ಬಾಗಲಕೋಟೆ: ಸರ್ಕಾರಿ ಕಚೇರಿ ಬಾಗಿಲಿಗೆ ನೇಣು ಹಾಕಿಕೊಂಡು ನಿವೃತ್ತ ಜವಾನ ಆತ್ಮಹತ್ಯೆ

    ಬಾಗಲಕೋಟೆ: ಸರ್ಕಾರಿ ಕಚೇರಿ ಬಾಗಿಲಿಗೆ ನೇಣು ಹಾಕಿಕೊಂಡು ನಿವೃತ್ತ ಜವಾನ ಆತ್ಮಹತ್ಯೆ

    ಬಾಗಲಕೋಟೆ: ಕಚೇರಿ ಬಾಗಿಲಿಗೆ ನೇಣು ಹಾಕಿಕೊಂಡು ನಿವೃತ್ತ ಜವಾನ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಾಗಲಕೋಟೆ ಜಿಲ್ಲಾಡಳಿತ ಭವನದಲ್ಲಿ ನಡೆದಿದೆ.

    ಅಯ್ಯಪ್ಪ ನಾಯ್ಕರ್ (63) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಛೇರಿ ಬಾಗಿಲಿಗೆ ನೇಣು ಹಾಕಿಕೊಂಡಿದ್ದು ಸ್ಥಳಕ್ಕೆ ನವನಗರ ಪೊಲೀಸರ ಹೋಗಿ ಪರಿಶೀಲನೆ ನಡೆಸ್ತಿದ್ದಾರೆ.

    ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡಿ ಕಳೆದ ವರ್ಷ ಮೇನಲ್ಲಿ ನಿವೃತ್ತರಾಗಿದ್ದ ಅಯ್ಯಪ್ಪ ಡೆತ್‍ನೋಟ್ ಕೂಡ ಬರೆದಿಟ್ಟಿದ್ದಾರೆ. ಸಾಲ ಮಾಡ್ಕೊಂಡು ಈ ರೀತಿ ಮಾಡ್ಕೊಂಡಿದ್ದಾರೆ ಅಂತ ಹೇಳಲಾಗ್ತಿದೆ. ಆದ್ರೆ, ನಿವೃತ್ತಿ ನಂತ್ರ ಸಿಗಬೇಕಾದ ಸವಲತ್ತು ನೀಡದೇ ಸತಾಯಿಸಿದ್ರಿಂದ ಕಚೇರಿಗೆ ಬಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಅಂತಾ ಕೆಲ ಸಿಬ್ಬಂದಿ ಮಾತನಾಡಿಕೊಳ್ತಿದ್ದಾರೆ.