‘ಬಿಗ್ ಬಾಸ್’ ಬೆಡಗಿ ಗೌತಮಿ ಜಾಧವ್ (Gouthami Jadav) ದೊಡ್ಮನೆ ಆಟ ಮುಗಿದ್ಮೇಲೆ ಅದ್ಯಾವ ಪ್ರಾಜೆಕ್ಟ್ ಮೂಲಕ ಬರುತ್ತಾರೆ ಎಂದು ಕಾಯುತ್ತಿದ್ದ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಸಿಕ್ಕಿದೆ. ಲೇಡಿ ಪೊಲೀಸ್ ಆಫೀಸರ್ ಸಿಂಧೂರಿಯಾಗಿ ನಟಿ ಎಂಟ್ರಿ ಕೊಟ್ಟಿದ್ದಾರೆ. ಇದನ್ನೂ ಓದಿ:RRR ಚಿತ್ರದಂತೆ 3 ವರ್ಷ ಕಾಯಿಸಲ್ಲ: ‘ಕೂಲಿ’ ನಿರ್ದೇಶಕ ಲೋಕೇಶ್ ಕನಗರಾಜ್
‘ಸತ್ಯ’ ಸೀರಿಯಲ್, ‘ಬಿಗ್ ಬಾಸ್ ಕನ್ನಡ 11’ರ ಶೋ ಮುಗಿದ ಬಳಿಕ ಸಿನಿಮಾ ಅಥವಾ ಸೀರಿಯಲ್ ಬಗ್ಗೆ ಅಪ್‌ಡೇಟ್ ಸಿಕ್ಕಿರಲಿಲ್ಲ. ಈಗ ‘ಭಾರ್ಗವಿ LLB’ ಸೀರಿಯಲ್ ಮೂಲಕ ಕಿರುತೆರೆಗೆ ರೀ ಎಂಟ್ರಿ ಕೊಟ್ಟಿದ್ದಾರೆ. ಈ ಸೀರಿಯಲ್‌ನಲ್ಲಿ ಕೇಡಿಗಳ ಚಕ್ರವ್ಯೂಹದಲ್ಲಿ ಸಿಕ್ಕಿ ಬಿದ್ದಿರುವ ನಾಯಕಿ ಭಾರ್ಗವಿಯ ರಕ್ಷಣೆಗೆ ಬರುವ ಸಿಂಧೂರಿ ಪಾತ್ರದಲ್ಲಿ ಗೌತಮಿ ಬಣ್ಣ ಹಚ್ಚಿದ್ದಾರೆ. ಇದನ್ನೂ ಓದಿ: ಟಾಲಿವುಡ್‌ನತ್ತ ನಟ- ‘ಪುಷ್ಪ 2’ ನಿರ್ಮಿಸಿದ್ದ ಸಂಸ್ಥೆ ಜೊತೆ ಕೈಜೋಡಿಸಿದ ಉಪೇಂದ್ರ
ಈ ಸೀರಿಯಲ್‌ನಲ್ಲಿ ಖಡಕ್ ಡೈಲಾಗ್ ಹೊಡೆಯುತ್ತಾ ಎಂಟ್ರಿ ಕೊಟ್ಟಿದ್ದಾರೆ. ನಾನು ಎಲ್ಲಿ ಕಾಲಿಟ್ರೂ ಅಲ್ಲೊಂದು ಸೌಂಡ್ ಇರುತ್ತಮ್ಮ ಎಂದು ಅವರು ವಿಲನ್‌ಗಳಿಗೆ ಸಖತ್ ಮಾಸ್ ಆಗಿ ಪಂಚಿಂಗ್ ಡೈಲಾಗ್ ಹೊಡೆದಿದ್ದಾರೆ. ಡೈಲಾಗ್ ಕೇಳಿದ್ರೆ ಅಭಿಮಾನಿಗಳಿಗೆ ‘ಸತ್ಯ’ ಸೀರಿಯಲ್‌ನ ಸತ್ಯಳ ಪಾತ್ರವನ್ನೇ ನೆನಪಿಸುವಂತೆ ಮಾಡಿದೆ. ಆದರೆ ಈ ಪಾತ್ರದಲ್ಲಿ ಅವರು ಸೀರೆಯಲ್ಲಿ ಮಿಂಚಿದ್ದಾರೆ. ಒಟ್ನಲ್ಲಿ ಗೌತಮಿ ಹೊಸ ಪಾತ್ರ, ಹೊಸ ಅವತಾರ ಫ್ಯಾನ್ಸ್‌ಗೆ ಖುಷಿ ಕೊಟ್ಟಿದೆ.
‘ಬಿಗ್ ಬಾಸ್ ಕನ್ನಡ 11’ರ (Bigg Boss Kannada 11) ಶೋ ಅದ್ಧೂರಿಯಾಗಿ ತೆರೆಬಿದ್ದಿದೆ. ಶೋ ಮುಗಿದು ಹಲವು ದಿನಗಳು ಕಳೆದಿದೆ. ಹೀಗಿರುವಾಗ ದೊಡ್ಮನೆ ಆಟದ ನಂತರವೂ ಗೌತಮಿ, ಉಗ್ರಂ ಮಂಜು ಗೆಳೆತನ ಮುಂದುವರೆದಿದೆ. ಗೌತಮಿ (Gouthami) ಕುಟುಂಬದಲ್ಲಿ ಮಂಜು ಒಬ್ಬರಾಗಿದ್ದಾರೆ. ಸದ್ಯ ಗೌತಮಿ ದಂಪತಿ ಜೊತೆ ಶ್ರೀ ವನದುರ್ಗಾ ದೇವಾಲಯಕ್ಕೆ (Vanadurga Temple) ಉಗ್ರಂ ಮಂಜು ಕೂಡ ಭೇಟಿ ನೀಡಿದ್ದಾರೆ. ಇದನ್ನೂ ಓದಿ:ಐಶ್ವರ್ಯ ರೈ ಕಾರಿಗೆ ಬಸ್ ಡಿಕ್ಕಿ – ನಟಿ ಸೇಫ್
ಬಿಗ್ ಬಾಸ್‌ನಲ್ಲಿ (Bigg Boss) ಶುರುವಿನಲ್ಲಿ ಗೌತಮಿ, ಮಂಜು ಗೆಳೆತನ ಚೆನ್ನಾಗಿತ್ತು. ಆ ನಂತರ ಗೌತಮಿ ಮತ್ತು ಮಂಜು (Ugramm Manju) ನಡುವೆ ಬಿರುಕು ಮೂಡಿತ್ತು. ಇಬ್ಬರ ಜಿದ್ದಾಜಿದ್ದಿ ಫಿನಾಲೆವರೆಗೂ ಮುಂದುವರೆದಿತ್ತು. ಶೋ ಮುಗಿದ ಬಳಿಕ ಇಬ್ಬರ ನಡುವಿನ ಸ್ನೇಹ ಮತ್ತೆ ಗಟ್ಟಿಯಾಗಿದೆ. ಆಗಾಗ ಗೌತಮಿ ದಂಪತಿಯನ್ನು ಉಗ್ರಂ ಮಂಜು ಭೇಟಿಯಾಗುತ್ತಿರುತ್ತಾರೆ. ಇದನ್ನೂ ಓದಿ:ಗೋಲ್ಡ್ ಸ್ಮಗ್ಲಿಂಗ್ ಕೇಸ್ – ರನ್ಯಾ ರಾವ್ ಜಾಮೀನು ಅರ್ಜಿ ಆದೇಶ ಇಂದು
ಗೌತಮಿ ಅವರು ವನದುರ್ಗಾ ದೇವಿಯನ್ನು ಅಪಾರವಾಗಿ ನಂಬುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ವನದುರ್ಗಾ ದೇವಾಲಯ ಇದೆ. ಇಲ್ಲಿಗೆ ಅವರು ಅನೇಕ ಬಾರಿ ಭೇಟಿ ಕೊಟ್ಟಿದ್ದರು. ಈಗ ಮಂಜು ಫ್ಯಾಮಿಲಿ ಹಾಗೂ ಗೌತಮಿ ದಂಪತಿ ಒಟ್ಟಾಗಿ ಈ ದೇವಾಲಯಕ್ಕೆ ತೆರಳಿದ್ದಾರೆ. ಶೋ ಮುಗಿದ ಮೇಲೆಯೂ ಇವರ ಬಾಂಧವ್ಯ ನೋಡಿ ಫ್ಯಾನ್ಸ್ ಮೆಚ್ಚುಗೆ ಸೂಚಿಸಿದ್ದಾರೆ.
ಇನ್ನೂ ‘ಬಿಗ್ ಬಾಸ್’ ಮತ್ತು ‘ಮ್ಯಾಕ್ಸ್’ ಸಿನಿಮಾದ ಸಕ್ಸಸ್ ಬಳಿಕ ಉಗ್ರಂ ಮಂಜು ಹಲವು ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಗೌತಮಿ ಉತ್ತಮ ಪ್ರಾಜೆಕ್ಟ್‌ಗಳಿಗಾಗಿ ಎದುರು ನೋಡ್ತಿದ್ದಾರೆ.
‘ಬಿಗ್ ಬಾಸ್ ಕನ್ನಡ 11’ರ (Bigg Boss Kannada 11) ಆಟಕ್ಕೆ ತೆರೆ ಬಿದ್ದಿದೆ. ಇನ್ನೂ ಗೆಳೆತನದಿಂದ ಆಟಕ್ಕೆ ಅಡ್ಡಿಯಾಯ್ತು, ಈ ಸ್ನೇಹ ಮತ್ತೆ ಮುಂದುವರೆಯುತ್ತಾ? ಇದು ಅಂಕಲ್, ಆಂಟಿ ಲವ್‌ಸ್ಟೋರಿ ಎಂದವರಿಗೆ ಗೌತಮಿ (Gouthami Jadav) ತಿರುಗೇಟು ನೀಡಿದ್ದಾರೆ. ಉಗ್ರಂ ಮಂಜು ಜೊತೆ ಗೌತಮಿ ದಂಪತಿ ಪೋಸ್ ಕೊಟ್ಟಿರುವ ಫೋಟೋ ಶೇರ್ ಮಾಡಿ ಗಾಸಿಪ್ ಹಬ್ಬಿಸುವವರಿಗೆ ತಕ್ಕ ಉತ್ತರ ನೀಡಿದ್ದಾರೆ. ಇದನ್ನೂ ಓದಿ:ಬಿಗ್ ಬಾಸ್ ವಿನ್ನರ್ ಹನುಮಂತಗೆ ಹುಟ್ಟೂರಲ್ಲಿ ಅದ್ದೂರಿ ಸ್ವಾಗತ
‘ಬಿಗ್ ಬಾಸ್’ ಆಟದ ಶುರುವಿನಲ್ಲಿ ಗೌತಮಿ, ಮಂಜು ಹಾಗೂ ಮೋಕ್ಷಿತಾ ಮಧ್ಯೆ ಉತ್ತರ ಗೆಳೆತನವಿತ್ತು. ದಿನ ಕಳೆದಂತೆ ಮಂಜು ಹಾಗೂ ಗೌತಮಿ ಜೊತೆಗೆ ವೈಮನಸ್ಸು ಬೆಳೆದು ಮೋಕ್ಷಿತಾ ಈ ಗುಂಪಿನಿಂದ ಹೊರ ನಡೆದರು. ಮಂಜು ತಮ್ಮನ್ನು ಕುಗ್ಗಿಸುತ್ತಾರೆ ಎಂದು ಮೋಕ್ಷಿತಾ ಹೊರಬಂದರು. ಆ ನಂತರ ಗೌತಮಿ ಹಾಗೂ ಮಂಜು ಜೊತೆಯಾದರು. ಹೀಗೆ ದಿನ ಕಳೆದಂತೆ ಮಂಜುವಿನ ನಡೆಯಿಂದ ಗೌತಮಿ ರಾಂಗ್ ಆದರು. ಇಬ್ಬರೂ ಸಾಕಷ್ಟು ಬಾರಿ ಕಿರಿಕ್ ಮಾಡಿಕೊಂಡಿದ್ದು ಇದೆ. ಗೌತಮಿ ಫಿನಾಲೆಗೂ ಮೊದಲೇ ಔಟ್ ಆದರು. ಫಿನಾಲೆ ಮೆಟ್ಟಿಲು ಅವರಿಗೆ ಜಸ್ಟ್ ಮಿಸ್ ಆಗಿತ್ತು. ಮಂಜು (Ugramm Manju) ಅವರು ಫಿನಾಲೆಯಲ್ಲಿ ಕಪ್ ಗೆಲ್ಲಲಾಗದೆ 4ನೇ ರನ್ನರ್ ಅಪ್ ಆದರು.
ಗೌತಮಿ ಹಾಗೂ ಅವರ ಪತಿ ಅಭಿಷೇಕ್ ಮಧ್ಯೆ ಮಂಜು ಪ್ರವೇಶ ಎಂದೆಲ್ಲ ಟ್ರೋಲ್ ಮಾಡಿದ್ದರು. ‘ಅಂಕಲ್- ಆಂಟಿ ಲವ್‌ಸ್ಟೋರಿ’ ಎಂದು ಟೀಕಿಸಿದ್ದು ಇದೆ. ಹೀಗೆ ಟೀಕಿಸದವರಿಗೆ ಗೌತಮಿ ಅವರು ಒಂದೇ ಒಂದು ಫೋಟೋ ಮೂಲಕ ಉತ್ತರ ಕೊಟ್ಟಿದ್ದಾರೆ.
‘ಬಿಗ್ ಬಾಸ್ ಕನ್ನಡ 11’ರ (Bigg Boss Kannada 11) ಆಟ ಈ ವಾರಾಂತ್ಯದಲ್ಲಿ ಬ್ರೇಕ್ ಬೀಳಲಿದೆ. ಸದ್ಯ ಬಿಗ್ ಬಾಸ್‌ನಿಂದ ಹೊರಬಂದಿರುವ ಗೌತಮಿ ಜಾಧವ್ ತಮ್ಮ ಜರ್ನಿ ಬಗ್ಗೆ ಮಾತನಾಡಿದ್ದಾರೆ. ಅದಷ್ಟೇ ಅಲ್ಲ, ಅಂಕಲ್, ಆಂಟಿ ಎಂದು ಕೆಟ್ಟದಾಗಿ ಮಂಜು ಜೊತೆ ಟ್ರೋಲ್ (Troll) ಮಾಡಿದವರಿಗೆ ಗೌತಮಿ (Gouthami Jadav) ತಕ್ಕ ಉತ್ತರ ನೀಡಿದ್ದಾರೆ. ಟ್ರೋಲ್ ಮಾಡುತ್ತಿರುವವರಿಗೆ ನಾನು ಏನು ಅಂತನೇ ಗೊತ್ತಿಲ್ಲ ಎಂದಿದ್ದಾರೆ. ಇದನ್ನೂ ಓದಿ:ಹನುಮಂತ ಆ ಹುಡುಗಿಯ ಮನಸ್ಸನ್ನು ಗೆದ್ದಿದ್ದಾನೆ: ಗೆಳೆಯನ ಮದುವೆ ಬಗ್ಗೆ ಧನರಾಜ್ ಮಾತು
ಹೀಗೆ ಟ್ರೋಲ್ ಮಾಡಿರೋದನ್ನು ನೋಡಿ ಥ್ಯಾಂಕ್ ಗಾಢ್ ನನ್ನ ಕುಟುಂಬ ಉತ್ತಮ ರೀತಿಯಲ್ಲಿ ತೆಗೆದುಕೊಂಡಿದ್ದಾರೆ. ನನ್ನನ್ನು ಹೊಸಬರು ಎರಡ್ಮೂರು ತಿಂಗಳಿನಿಂದ ನೋಡುತ್ತಿರುವವರು. ಆದರೆ ನನ್ನ ಫ್ಯಾಮಿಲಿ ಇದನ್ನೆಲ್ಲಾ ಧೈರ್ಯವಾಗಿ ಸ್ವೀಕರಿಸಿದ್ದಾರೆ. ಯಾಕೆಂದರೆ ಅವರಿಗೆ ನಾನು ಏನು ಅಂತ ಗೊತ್ತು. ಟ್ರೋಲ್ ಮಾಡುವವರಿಗೆ ನಾನು ಏನು ಅಂತನೇ ಗೊತ್ತಿಲ್ಲ. ಅವರುಗಳು ಆಟದಲ್ಲಿ ನೋಡಿದ್ದಾರೆ. ನನ್ನ ಬಗ್ಗೆ ಗೊತ್ತಿದಿದ್ರೆ ಅವರು ಟ್ರೋಲ್ ಮಾಡುತ್ತಿರಲಿಲ್ಲ ಎಂದಿದ್ದಾರೆ ಗೌತಮಿ.
ಅಂಕಲ್, ಆಂಟಿ ಸ್ಟೋರಿ ಅನ್ನೋಕೆ ಅಲ್ಲಿ ಏನು ಇರಲಿಲ್ಲ. ಅಲ್ಲಿ ಲವ್ ಸ್ಟೋರಿ ಇರಲಿಲ್ಲ. ಒಂದು ಒಳ್ಳೆಯ ಸ್ನೇಹವಿತ್ತು. ಅದು ಕೇವಲ ಟ್ರೋಲ್ ಅಷ್ಟೇ. ಟ್ರೋಲ್‌ಗೂ ಅಭಿಪ್ರಾಯಕ್ಕೂ ವ್ಯತ್ಯಾಸವಿದೆ. ನನ್ನ ಕೊಡೋ ಸ್ಪಷ್ಟತೆ ಏನು ಅಂದರೆ ನನ್ನ ಮತ್ತು ಮಂಜು ನಡುವೆ ಅಂತಹದ್ದು ಏನು ಇರಲಿಲ್ಲ. ನನ್ನ ಜೀವನದಲ್ಲಿ ಅಭಿಷೇಕ್ ಜೊತೆ ಮಾತ್ರ ಒಂದು ಬ್ಯೂಟಿಫುಲ್ ಲವ್ ಸ್ಟೋರಿ ಇದೆ. ಅದು ನನಗೆ ಏಳೇಳು ಜನ್ಮಕ್ಕೂ ಬೇಕು ಅಂತ ಬಯಸುವವಳು. ನನ್ನ ಜೀವನದಲ್ಲಿ ಪ್ರೀತಿಗೆ ಕೊರತೆಯಿಲ್ಲ. ಮಂಜು (Ugramm Manju) ಜೊತೆಗಿನ ಸ್ನೇಹಕ್ಕೆ ಬೇರೆ ಅರ್ಥ ಕಲ್ಪಿಸಬೇಡಿ ಎಂದಿದ್ದಾರೆ. ಅವರೊಂದಿಗೆ ಒಂದೊಳ್ಳೆಯ ಫ್ರೆಂಡ್‌ಶಿಪ್ ಸ್ಟೋರಿ ಅಂತೂ ಖಂಡಿತ ಇದೆ ಎಂದಿದ್ದಾರೆ.
ಇನ್ನೂ ‘ಬಿಗ್ ಬಾಸ್ ಕನ್ನಡ 11’ರಲ್ಲಿ ಯಾರು ಗೆಲ್ಲಬೇಕು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಗೌತಮಿ, ನನಗೆ ಹನುಮಂತ ಗೆಲ್ಲಬೇಕು. ಅವರು ಚೆನ್ನಾಗಿ ಆಟ ಆಡುತ್ತಿದ್ದಾರೆ ಎಂದಿದ್ದಾರೆ.
ಬಿಗ್ ಬಾಸ್ ಮನೆಯ (Bigg Boss Kannada 11) ಆಟ 80ನೇ ದಿನದತ್ತ ಮುನ್ನುಗ್ಗುತ್ತಿದೆ. ದೊಡ್ಮನೆಯಲ್ಲಿ ಕ್ಯಾಪ್ಟನ್ಸಿ ರೇಸ್ ಸ್ಪರ್ಧೆ ಜೋರಾಗಿದೆ. ಹನುಮಂತ ಹಾಗೂ ಗೌತಮಿ ನೇತೃತ್ವದಲ್ಲಿ ಎರಡು ತಂಡಗಳಾಗಿ ವಿಭಾಗಿಸಿದ್ದು, ಕ್ಯಾಪ್ಟನ್ ಆಯ್ಕೆಯ ಪ್ರಕ್ರಿಯೆಗಳು ಜಾರಿಯಲ್ಲಿವೆ. ಈ ಮಧ್ಯೆ ಅವಕಾಶಕ್ಕಾಗಿ ಚೈತ್ರಾ ಕುಂದಾಪುರ (Chaithra Kundapura) ಸಣ್ಣ ಮಕ್ಕಳಂತೆ ಕಣ್ಣೀರು ಇಟ್ಟಿದ್ದಾರೆ. ನನಗೆ ಆಟ ಆಡೋಕೆ ಅವಕಾಶ ಕೊಡ್ತಿಲ್ಲ ಅಂತ ಗಳೋ ಅಂತ ಅತ್ತಿದ್ದಾರೆ.
ಕ್ಯಾಪ್ಟನ್ ಗೌತಮಿ (Gouthami) ತಂಡದಲ್ಲಿರುವ ಚೈತ್ರಾಗೆ ಆಡಲು ಅವಕಾಶ ಸಿಗುತ್ತಿಲ್ಲ ಅನ್ನೋದು ಆರೋಪವಾಗಿದೆ. ನಿನ್ನೆ ನಡೆದ ಒಂದು ಪಂದ್ಯದಲ್ಲಿ ಗೌತಮಿ ತಂಡದ ಪರ ಚೈತ್ರಾ ಹಾಗೂ ಮಂಜು (Ugramm Manju) ಆಡಿದ್ದರು. ಚೈತ್ರಾ ಹಾಗೂ ಮಂಜು ಜೋಡಿ ಸೋಲನ್ನು ಕಂಡಿದೆ. ನಂತರದ ಗೇಮ್‌ಗೆ ಚೈತ್ರಾ ಅವರನ್ನು ಉಸ್ತುವಾರಿಯಾಗಿ ಗೌತಮಿ ನೇಮಕ ಮಾಡಿದ್ದರು. ಇದನ್ನೂ ಓದಿ:1000 ಕೋಟಿ ದಾಟಿದ ‘ಪುಷ್ಪ 2’- ಗಲ್ಲಾಪೆಟ್ಟಿಗೆಯಲ್ಲಿ ಅಲ್ಲು ಅರ್ಜುನ್ ಸಿನಿಮಾ ರಣಕೇಕೆ
ಬೇಸರಗೊಳ್ಳುವ ಚೈತ್ರಾ, ನನಗೆ ಆಟ ಆಡಕ್ಕೆ ಅವಕಾಶ ಕೊಡಲ್ಲ. ಉಸ್ತುವಾರಿ ಮಾಡಲ್ಲ ಹೇಳುತ್ತೀದ್ದೀನಿ, ನನಗೆ ಅದನ್ನೇ ಕೊಡ್ತಾರೆ. ಕಳೆದ ವಾರ ಎಲಿಮಿನೇಟ್ ಆಗಿ ವಾಪಸ್ ಬಂದಿದ್ದೀನಿ. ಇಡೀ ವಾರ ಆಟ ಆಡಿಲ್ಲ. ಆಡ್ತೀನಿ ಅಂದರೆ ಆಡಕ್ಕೆ ಕೊಡಲ್ಲ. ಆಮೇಲೆ ಆಟಕ್ಕೆ ಉಂಟು, ಲೆಕ್ಕಕ್ಕೆ ಇಲ್ಲ ಅಂತಾರೆ ಎನ್ನುತ್ತ ಕಣ್ಣೀರು ಇಟ್ಟಿದ್ದಾರೆ. ಕೇಳಿದ ತಕ್ಷಣ ನಾನು ಆಡಲು ಬಿಡೋಕೆ ಆಗೋದಿಲ್ಲ ಎಂದು ಕಡ್ಡಿ ಮುರಿದಂತೆ ಗೌತಮಿ ಉತ್ತರ ಕೊಟ್ಟಿದ್ದಾರೆ.
ಇತರೆ ಟಾಸ್ಕ್‌ನಲ್ಲೂ ಮತ್ತೆ ಗೌತಮಿ ತಂಡ ಸೋಲನ್ನು ಕಂಡಿದೆ. ಹೀಗಾಗಿ ಬಿಗ್ ಬಾಸ್, ನಿಮ್ಮ ತಂಡದಿಂದ ಕ್ಯಾಪ್ಟನ್ಸಿ ರೇಸ್‌ನಿಂದ ಒಬ್ಬರನ್ನು ಹೊರಗೆ ಇಡಬೇಕು ಎನ್ನುತ್ತಾರೆ. ಆಗ ಗೌತಮಿ ಚೈತ್ರಾ ಹೆಸರನ್ನು ತೆಗೆದುಕೊಂಡಿದ್ದಾರೆ. ಇದು ಚೈತ್ರಾಗೆ ಸಹಿಸಲಾರ ಸಂಕಟ ಆಗಿದೆ. ಇಂದಿನ ಸಂಚಿಕೆಯಲ್ಲಿ ಏನೆಲ್ಲಾ ಹೈಡ್ರಾಮಗಳು ನಡೆಯುತ್ತವೆ ಎಂದು ತಿಳಿದುಕೊಳ್ಳಲು ವೀಕ್ಷಕರು ಕ್ಯೂರಿಯಸ್ ಆಗಿದ್ದಾರೆ.
ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಶೋ ‘ಬಿಗ್ ಬಾಸ್’ (Bigg Boss Kannada 11) 7ನೇ ವಾರಕ್ಕೆ ಕಾಲಿಟ್ಟಿದೆ. ಈಗ ದೊಡ್ಮನೆಯಲ್ಲಿ ಸ್ಪರ್ಧಿಗಳನ್ನು ಜೋಡಿಗಳಾಗಿ ಪರಿವರ್ತನೆ ಮಾಡಿದ್ದಾರೆ. ಆದರೆ ಮನೆಯ ಯಾವ ಮೂಲೆಗೂ ಹೋದರು ಸ್ಪರ್ಧಿಗಳು ಪರಸ್ಪರ ಅಂಟಿಕೊಂಡು ಓಡಾಡಬೇಕು. ಮಿಸ್ ಆಗಿ ಜೋಡಿಗಳನ್ನು ಬಿಟ್ಟು ಹಾಗೇ ಹೋಗಿದ್ದೇ ಆದರೆ ‘ಬಿಗ್ ಬಾಸ್’ ಕಡೆಯಿಂದ ಬಿಗ್ ಶಿಕ್ಷೆ ಸಿಗೋದು ಗ್ಯಾರಂಟಿ. ಇದನ್ನೂ ಓದಿ:‘ಕುಬೇರ’ ಸಿನಿಮಾದಲ್ಲಿ ನಾಗಾರ್ಜುನ ಅಕ್ಕಿನೇನಿ ಹೊಸ ಪೋಸ್ಟರ್ ಔಟ್
ಇನ್ನೂ ಮನೆಯಲ್ಲಿರೋ ಸ್ಪರ್ಧಿಗಳಿಗೆ ಬಿಗ್ ಬಾಸ್, ತಾವೇ ಜೋಡಿಗಳನ್ನು ಆಯ್ಕೆ ಮಾಡಿದ್ದಾರೆ. ಹಳ್ಳಿ ಹೈದ ಹನುಮಂತಗೆ ಗೌತಮಿ, ಉಗ್ರಂ ಮಂಜು ಜೊತೆ ಭವ್ಯಾ ಗೌಡ, ಶಿಶಿರ್ ಮತ್ತು ಚೈತ್ರಾ ಕುಂದಾಪುರ, ಧರ್ಮ- ಐಶ್ವರ್ಯಾ ಸಿಂಧೋಗಿ, ಅನುಷಾ ರೈ- ಗೋಲ್ಡ್ ಸುರೇಶ್ ಹಾಗೂ ಧನರಾಜ್- ಮೋಕ್ಷಿತಾ ಪೈ ಅವರನ್ನು ಜೋಡಿಗಳನ್ನಾಗಿ ಮಾಡಿ ಈ ವಾರದ ಟಾಸ್ಕ್ ನೀಡುತ್ತಿದ್ದಾರೆ.
ಒಂದೊಂದು ಜೋಡಿಯು ಇನ್ಮುಂದೆ ಯಾವ ರೀತಿ ಮನರಂಜನೆ ನೀಡುತ್ತಾರೆ ಅಂತ ವೀಕ್ಷಕರು ಕಾಯುತ್ತಿದ್ದಾರೆ. ಇಂದಿನ ಸಂಚಿಕೆಯಲ್ಲಿ ಗೌತಮಿ ಜಾಧವ್ (Gouthami Jadav) ಅವರು ಹನುಮಂತನಾಗಿ (Hanumantha) ಚೇಂಚ್ ಆಗಿದ್ದಾರೆ. ಹನುಮಂತನಂತೆಯೇ ನಟಿ ಗೆಟಪ್ ಬದಲಿಸಿದ್ದಾರೆ. ಹನುಮಂತ ಧರಿಸುವ ಹಾಗೇ ವೇಷ ಭೂಷಣ ತೊಟ್ಟು ಉತ್ತರ ಕರ್ನಾಟಕದ ಶೈಲಿಯಲ್ಲಿ ಮಾತಾಡಿದ್ದಾರೆ. ಬಳಿಕ ಮನೆಮಂದಿಗೆ ಗೌತಮಿ ಕ್ವಾಟ್ಲೆ ಕೊಟ್ಟಿದ್ದಾರೆ. ಗೌತಮಿ ನಯಾ ಲುಕ್ ನೋಡಿ ಮನೆ ಮಂದಿ ಫುಲ್ ಶಾಕ್ ಆಗಿದ್ದಾರೆ.
ಇನ್ನೂ ಕಳೆದ ವಾರ ಎಲಿಮಿನೇಷನ್ ಪ್ರತಿಕ್ರಿಯೆ ನಡೆದಿಲ್ಲ. ಭವ್ಯಾರನ್ನು ಪ್ರ್ಯಾಂಕ್ ಎಲಿಮಿನೇಷನ್ ಮಾಡಿ `ಬಿಗ್ ಬಾಸ್’ ಉಲ್ಟಾ ಹೊಡೆದಿದ್ದರು. ಈ ವಾರ ಡಬಲ್ ಎಲಿಮಿನೇಷನ್ ನಡೆಯುವ ಸಾಧ್ಯತೆ ಇದೆ.
ಪ್ರೇಕ್ಷಕರು ಕಾಯುತ್ತಿದ್ದ ಕಿರುತೆರೆಯ ಅತೀ ದೊಡ್ಮ ರಿಯಾಲಿಟಿ ಶೋ ಬಿಗ್ ಬಾಸ್‌ಗೆ (Bigg Boss Kannada 11) ಅದ್ಧೂರಿಯಾಗಿ ಚಾಲನೆ ಸಿಕ್ಕಾಗಿದೆ. 17 ಸ್ಪರ್ಧಿಗಳ ನಡುವೆ ಈಗಾಗಲೇ ಗೆಲುವಿಗಾಗಿ ಪೈಪೋಟಿ ಶುರುವಾಗಿದೆ. ಹೀಗಿರುವಾಗ ಮೊದಲ ವಾರವೇ ಅರ್ಧಕರ್ಧ ಜನ ಮನೆಯಲ್ಲಿ ನಾಮಿನೇಟ್ ಆಗಿದ್ದಾರೆ. ಇದನ್ನೂ ಓದಿ:ವಿಜಯ್ ದಳಪತಿ ಸಿನಿಮಾದಲ್ಲಿ ಬಾಬಿ ಡಿಯೋಲ್- ಗುಡ್ ನ್ಯೂಸ್ ಕೊಟ್ಟ ‘ಕೆವಿಎನ್’ ಸಂಸ್ಥೆ
ಬಿಗ್ ಬಾಸ್ ಮನೆಗೆ ಸಿನಿಮಾ, ಸೀರಿಯಲ್, ರಂಗಭೂಮಿ, ಸೋಶಿಯಲ್ ಮೀಡಿಯಾದಲ್ಲಿ ಹೆಸರು ಮಾಡಿದವರು ಬಂದಿದ್ದಾರೆ. ತಮ್ಮ ತಮ್ಮ ಕ್ಷೇತ್ರದಲ್ಲಿ ಸಾಧನೆ ಮಾಡಿರೋರು ಬಿಗ್ ಬಾಸ್‌ನಲ್ಲೂ ಸದ್ದು ಮಾಡೋಕೆ ಎಂಟ್ರಿ ಕೊಟ್ಟಿದ್ದಾರೆ. ಆಟ ಶುರುವಾದ ಮೂರೇ ದಿನಕ್ಕೆ ಈಗ ದೊಡ್ಮನೆಯಲ್ಲಿ ನಾಮಿನೇಷನ್ ಕಿಡಿ ಹೊತ್ತಿಕೊಂಡಿದೆ. ತಮ್ಮ ಉಳಿವಿಗಾಗಿ ಇನ್ನೊಬ್ಬರನ್ನು ಹರಿಕೆಯ ಕುರಿ ಮಾಡೋಕೆ ಪಣ ತೊಟ್ಟಿದ್ದಾರೆ.
ದೊಡ್ಮನೆ ಆಟದಲ್ಲಿ ಮೊದಲ ವಾರದ ಎಲಿಮಿನೇಷನ್ ಕತ್ತಿ ಇದೀಗ ಗೌತಮಿ ಜಾದವ್ (Gouthami Jadav), ಶಿಶಿರ್, ಉಗ್ರಂ ಮಂಜು, ಯಮುನಾ, ಹಂಸ, ಭವ್ಯಾ, ಮೋಕ್ಷಿತಾ ಪೈ (Mokshitha Pai), ಮಾನಸಾ, ಚೈತ್ರಾ ಕುಂದಾಪುರ (Chaithra Kundapura) ಮೇಲೆ ತೂಗುತ್ತಿದೆ. ಇವರೆಲ್ಲರೂ ನಾಮಿನೇಟ್ ಆಗಿದ್ದಾರೆ. ಹಾಗಾದ್ರೆ ಬಿಗ್ ಬಾಸ್ ಮನೆಯ ಆಟದಲ್ಲಿ ಮೊದಲ ವಾರ ಔಟ್ ಆಗೋದು ಯಾರು? ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.
ಯಾರಿಗೆ ಮೊದಲ ವಾರವೇ ಬಿಗ್ ಬಾಸ್ ಅಂತ್ಯವಾಗುತ್ತದೆ ಎಂದು ಕಾದುನೋಡಬೇಕಿದೆ. ಇಡೀ ಮನೆ ಚೈತ್ರಾ ಕುಂದಾಪುರ ಆಟಕ್ಕೆ ಕತ್ತಿ ಮಸೆಯಲು ಶುರು ಮಾಡಿದ್ದಾರೆ. ಯಮುನಾ ಮಾತಿನ ವರಸೆಗೆ ಕಿಡಿಕಾರುತ್ತಿದ್ದಾರೆ. ಇತ್ತ ಮೋಕ್ಷಿತಾ, ಗೌತಮಿ, ಹಂಸ ಸೈಲೆಂಟ್ ಆಗಿದ್ರೆ, ಶಿಶಿರ್ ಮತ್ತು ಮಾನಸಾ ಸಂದರ್ಭಕ್ಕೆ ತಕ್ಕಂತೆ ಎದುರಾಳಿಯ ಮಾತಿಗೆ ಮಾತು, ಏಟಿಗೆ ಏದುರೇಟು ಕೊಡುತ್ತಿದ್ದಾರೆ. ಇನ್ನೇನು ಈ ವಾರಾಂತ್ಯ ಕಿಚ್ಚನ ಪಂಚಾಯ್ತಿಯಲ್ಲಿ ಯಾವ ಸ್ಪರ್ಧಿಗೆ ಗೇಟ್ ಪಾಸ್ ಸಿಗುತ್ತೆ ಎಂಬುದಕ್ಕೆ ಉತ್ತರ ಸಿಗಲಿದೆ.
ಬಿಗ್ ಬಾಸ್ (Bigg Boss Kannada 11) ಪ್ರಾರಂಭಕ್ಕೂ ಮೊದಲೇ ಗೌತಮಿ ಜಾದವ್ (Gouthami Jadav) ಹೆಸರು ರಿವೀಲ್ ಆಗಿತ್ತು. ಇದೀಗ ಅವರು 1 ಲಕ್ಷಕ್ಕೂ ಅಧಿಕ ವೋಟ್ ಗಳಿಸಿ ದೊಡ್ಮನೆಯ ಸ್ವರ್ಗಕ್ಕೆ ಕಾಲಿಟ್ಟಿದ್ದಾರೆ. ಇದನ್ನೂ ಓದಿ:BBK 11: ವಿಶೇಷ ಅಧಿಕಾರದೊಂದಿಗೆ ಸ್ವರ್ಗದ ಮನೆಗೆ ಕಾಲಿಟ್ಟ ಭವ್ಯಾ, ಯಮುನಾ
ಸತ್ಯ ಸೀರಿಯಲ್ ಮೂಲಕ ಖ್ಯಾತಿ ಗಳಿಸಿದ್ದ ನಟಿ ಗೌತಮಿ ಅವರು ಸೆ.28ರಂದೇ ಬಿಗ್ ಬಾಸ್‌ಗೆ ಬರುವ ರಾಜ ರಾಣಿ ಶೋನಲ್ಲಿ ರಿವೀಲ್ ಆಗಿತ್ತು. ರಿವೀಲ್ ಆದ 15 ನಿಮಿಷಗಳಲ್ಲಿ 1 ಲಕ್ಷ 16 ಸಾವಿರಕ್ಕೂ ಅಧಿಕ ವೋಟ್ ಪಡೆದು ಇಂದು (ಸೆ.29) ಬಿಗ್ ಬಾಸ್‌ನ ಸ್ವರ್ಗದ ಲೋಕಕ್ಕೆ ಅವರು ಎಂಟ್ರಿ ಕೊಟ್ಟಿದ್ದಾರೆ.
ಅಂದಹಾಗೆ, ಮೊದಲ ಎರಡು ಸ್ವರ್ಧಿಗಳಾಗಿ ಭವ್ಯಾ(Bhavya Gowda) ಮತ್ತು ಯಮುನಾ ಕಾಲಿಟ್ಟಿದ್ದಾರೆ. ಬಳಿಕ ಧನರಾಜ್, ಗೌತಮಿ ಮತ್ತು ಅನುಷಾ ರೈ ಜೊತೆ ಧರ್ಮ ಕೀರ್ತಿರಾಜ್ ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದಾರೆ.
ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 11 ಇಂದು (ಸೆ.29) ಸಂಜೆ 6 ಗಂಟೆಗೆ ಅದ್ಧೂರಿಯಾಗಿ ಚಾಲನೆ ಸಿಗಲಿದೆ. ಅದಕ್ಕೂ ಮುನ್ನ ದೊಡ್ಮನೆಗೆ ಈಗಾಗಲೇ ಕಾಲಿಟ್ಟಿರುವ ಸ್ಪರ್ಧಿಗಳ ಪಕ್ಕಾ ಲಿಸ್ಟ್ ಇಲ್ಲಿದೆ.
‘ಗೀತಾ’ ಸೀರಿಯಲ್ ಮೂಲಕ ಮನೆ ಮಾತಾಗಿದ್ದ ನಟಿ ಭವ್ಯಾ ಗೌಡ (Bhavya Gowda) ದೊಡ್ಮನೆಗೆ ಕಾಲಿಟ್ಟಿದ್ದಾರೆ. ಈ ಹಿಂದೆ ಮಿನಿ ಬಿಗ್ ಬಾಸ್‌ನಲ್ಲೂ ಇವರು ಒಂದು ವಾರಗಳ ಕಾಲ ಆಟ ಆಡಿದ್ದರು. ಇದು ಈ ಬಾರಿ ಅವರ ಕೈಹಿಡಿಯುತ್ತಾ? ಸ್ವರ್ಗಕ್ಕೆ ಹೋಗುತ್ತಾರಾ? ಅಥವಾ ನರಕಕ್ಕೆ ಹೋಗ್ತಾರಾ? ಇಂದಿನ ಗ್ರ್ಯಾಂಡ್ ಲಾಂಚ್‌ನಲ್ಲಿ ಉತ್ತರ ಸಿಗಲಿದೆ.
‘ಅಶ್ವಿನಿ ನಕ್ಷತ್ರ’ ಸೀರಿಯಲ್‌ನಲ್ಲಿ ನಟಿ ಮಯೂರಿ ತಾಯಿಯಾಗಿ ನಟಿಸಿದ್ದ ಯಮುನಾ ಶ್ರೀನಿಧಿ ಅವರು ಹಲವು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.
‘ಗಿಚ್ಚಿ ಗಿಲಿಗಿಲಿ’ ಖ್ಯಾತಿಯ ಧನರಾಜ್ ಆಚಾರ್ (Dhanraj Achar) ಅವರು ದೊಡ್ಮನೆಗೆ ಕಾಲಿಟ್ಟಿರೋದು ಪಕ್ಕಾ ಆಗಿದೆ. ತುಕಾಲಿ ಸಂತೋಷ್ ಅವರಂತೆಯೇ ಧನರಾಜ್ ಕೂಡ ಕಾಮಿಡಿ ಮೂಲಕ ಜನರ ಮನ ಗೆಲ್ತಾರಾ? ಕಾಯಬೇಕಿದೆ.
‘ಸತ್ಯ’ ಸೀರಿಯಲ್ ಮೂಲಕ ಮನೆ ಮಾತಾಗಿದ್ದ ಡೇರಿಂಗ್ ಲೇಡಿ ಗೌತಮಿ ಜಾದವ್ (Gouthami Jadav) ‘ಬಿಗ್’ ಮನೆಗೆ ಕಾಲಿಟ್ಟಿದ್ದಾರೆ. ಸತ್ಯ ಪಾತ್ರದ ಸ್ಟೈಲಿನಲ್ಲಿಯೇ ನಟಿ ಎಂಟ್ರಿ ಕೊಟ್ಟಿದ್ದಾರೆ.
ಮುದ್ದು ಮುಖದ ಚೆಲುವೆ ಅನುಷಾ ರೈ (Anusha Rai) ಅವರು ದೊಡ್ಮನೆಗೆ ಕಾಲಿಟ್ಟಿದ್ದಾರೆ. ಖಡಕ್, ದಮಂಯತಿ, ರೈಡರ್ ಸಿನಿಮಾ ಸೇರಿದಂತೆ ಹಲವು ಚಿತ್ರಗಳಲ್ಲಿ ಅವರು ನಟಿಸಿದ್ದಾರೆ.
ಖಳನಟ ಕೀರ್ತಿರಾಜ್ ಅವರ ಪುತ್ರ ಧರ್ಮ ಕೀರ್ತಿರಾಜ್ ಅವರು ಖಡಕ್, ನವಗ್ರಹ, ಸುಮನ್, ಓ ಮನಸೇ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಬಿಗ್ ಬಾಸ್ ಶೋ ಮೂಲಕ ಅವರು ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.
ಕಿರುತೆರೆ ನಟ ಶಿಶಿರ್ ಶಾಸ್ತ್ರಿ ಅವರು ಸೊಸೆ ತಂದ ಸೌಭಾಗ್ಯ, ಕುಲವಧು, ಭಾರತಿ ಸೇರಿದಂತೆ ಹಲವು ಸೀರಿಯಲ್‌ನಲ್ಲಿ ನಟಿಸಿದ್ದಾರೆ. ತೆಲುಗಿನ ಧಾರಾವಾಹಿಗಳ ಮೂಲಕ ಗುರುತಿಸಿಕೊಂಡಿದ್ದಾರೆ. ಎರಡ್ಮೂರು ಸಿನಿಮಾಗಳಲ್ಲಿ ನಟಿಸಿದರೂ ಅವರಿಗೆ ಹೇಳಿಕೊಳ್ಳುವಂತಹ ಯಶಸ್ಸು ಸಿಗಲಿಲ್ಲ.
‘ಪದ್ಮಾವತಿ’ ಸೀರಿಯಲ್ ಮೂಲಕ ಟಿವಿ ಪ್ರೇಕ್ಷಕರ ಮನಗೆದ್ದ ನಟ ತ್ರಿವಿಕ್ರಮ್ ಈ ಬಾರಿ ದೊಡ್ಮನೆಗೆ ಕಾಲಿಟ್ಟಿದ್ದಾರೆ.
ಪುಟ್ಟಕ್ಕನ ಮಕ್ಕಳು ಸೀರಿಯಲ್‌ನಲ್ಲಿ ಹಂಸ ವಿಲನ್ ಆಗಿ ನಟಿಸುತ್ತಿದ್ದರು. ಇತ್ತೀಚಿನ `ರಾಜ ರಾಣಿ’ ಶೋನಲ್ಲಿಯೂ ಸ್ಪರ್ಧಿಯಾಗಿದ್ದರು. ಈಗ ಹಂಸ ಬಿಗ್ ಬಾಸ್‌ಗೆ ಎಂಟ್ರಿ ಕೊಟ್ಟಿದ್ದಾರೆ.
ತುಕಾಲಿ ಸಂತೋಷ್ ಅವರು ಕಳೆದ ಬಾರಿ ಬಿಗ್ ಬಾಸ್‌ನಲ್ಲಿ ಕಾಮಿಡಿ ಮೂಲಕ ಕಿಕ್ ಕೊಟ್ಟಿದ್ದರು. ಈ ಬಾರಿ ಅವರ ಪತ್ನಿ ಮಾನಸಾ ತುಕಾಲಿ ಸಂತೋಷ್ ಬಿಗ್ ಬಾಸ್‌ಗೆ ಕಾಲಿಟ್ಟಿದ್ದಾರೆ. ಗಿಚ್ಚಿ ಗಿಲಿಗಿಲಿ 3ರ ರನ್ನರ್ ಅಪ್ ಕೂಡ ಆಗಿದ್ದರು ಮಾನಸಾ.
‘ನಾಗಿಣಿ 2’ ಸೀರಿಯಲ್‌ನಲ್ಲಿ ವಿಲನ್ ಆಗಿದ್ದ ಐಶ್ವರ್ಯಾ ಸಿಂಧೋಗಿ ಈ ಬಾರಿ ಬಿಗ್ ಬಾಸ್‌ಗೆ ಎಂಟ್ರಿ ಕೊಟ್ಟಿದ್ದಾರೆ.
‘ಪಾರು’ ಸೀರಿಯಲ್ ಮೂಲಕ ಮನಗೆದ್ದ ನಟಿ ಮೋಕ್ಷಿತಾ ಪೈ (Mokshitha Pai) ಅವರು ಈ ಬಾರಿ ಬಿಗ್ ಬಾಸ್‌ಗೆ ಹೋಗಿರೋದು ಖಾತ್ರಿಯಾಗಿದೆ.
ಇನ್ನೂ ಉಗ್ರಂ ಖ್ಯಾತಿಯ ಮಂಜು, ಚೈತ್ರಾ ಕುಂದಾಪುರ, ರಂಜಿತ್, ಗೋಲ್ಡ್ ಸುರೇಶ್ ಕೂಡ ಬಿಗ್ ಬಾಸ್‌ಗೆ ಬಂದಿದ್ದಾರೆ. ಈಗ ಸದ್ಯದ ಕುತೂಹಲ ಏನೆಂದರೆ ಇವರೆಲ್ಲಾ ಥೀಮ್ ಪ್ರಕಾರ, ಸ್ವರ್ಗಕ್ಕೆ ಹೋಗ್ತಾರಾ? ಅಥವಾ ನರಕಕ್ಕೆ ಹೋಗ್ತಾರಾ? ಎಂಬುದು ಕಾದುನೋಡಬೇಕಿದೆ.
ದೊಡ್ಮನೆಗೆ ಉದ್ಯಮಿ, ರೈತ ಗೋಲ್ಡ್ ಸುರೇಶ್ ಕಾಲಿಟ್ಟಿದ್ದಾರೆ. ಬಿಗ್ ಬಾಸ್ ಕನ್ನಡ 11ರ (Bigg Boss Kannada 11) 4ನೇ ಸ್ಪರ್ಧಿಯಾಗಿ ಗೋಲ್ಡ್ ಸುರೇಶ್ (Gold Suresh) ಎಂಟ್ರಿ ಕೊಟ್ಟಿದ್ದಾರೆ. ಇದನ್ನೂ ಓದಿ:BBK 11: ದೊಡ್ಮ,ನೆ ಎಂಟ್ರಿ ಕೊಡಲಿದ್ದಾರೆ ಮೋಕ್ಷಿತಾ ಪೈ
ಗೋಲ್ಡ್ ಸುರೇಶ್ ಅವರು ಮೂಲತಃ ಉತ್ತರ ಕರ್ನಾಟಕದ ಮೂಲದವರಾಗಿದ್ದಾರೆ. ಕೃಷಿಯಲ್ಲಿ ಹೆಚ್ಚಿನ ಆಸಕ್ತಿ ಇರುವ ಗೋಲ್ಡ್ ಸುರೇಶ್ ಚಿನ್ನದ ವ್ಯಾಪಾರಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಇದೀಗ ಮೊದಲ ಕ್ಯಾಮೆರಾ ಮುಂದೆ ಸುರೇಶ್ ಬಂದಿದ್ದಾರೆ. ಈ ವಿಚಾರ ರಾಜ ರಾಣಿ ಫಿನಾಲೆಯಲ್ಲಿ ಆಗಿದೆ. ದೊಡ್ಮನೆಗೆ ಕಾಲಿಟ್ಟಿದ್ದಾರೆ. ಇವರ ಬಗ್ಗೆ ಹೆಚ್ಚಿನ ವಿವರ ಬಿಗ್ ಬಾಸ್ ಮನೆಯಲ್ಲೇ ರಿವೀಲ್ ಆಗಲಿದೆ.
ಇನ್ನೂ ಈಗಾಗಲೇ ಕಿರುತೆರೆ ನಟಿ ಗೌತಮಿ ಜಾದವ್, ಚೈತ್ರಾ ಕುಂದಾಪುರ ದೊಡ್ಮನೆಗೆ ಎಂಟ್ರಿ ಕೊಟ್ಟಾಗಿದೆ. ಇತ್ತ ಕಿರುತೆರೆ ನಟಿ ಮೋಕ್ಷಿತಾ ಪೈ ಕೂಡ ದೊಡ್ಮನೆಗೆ ಹೋಗಿರುವುದು ಪಕ್ಕಾ ಆಗಿದೆ. ಇನ್ನೂ ಯಾರೆಲ್ಲಾ ಬರಲಿದ್ದಾರೆ ಎಂಬುದನ್ನು ಕಾಯಬೇಕಿದೆ. ಸೆ.29ರಂದು ಬಿಗ್ ಬಾಸ್ ಕನ್ನಡ 11ರ ಗ್ರ್ಯಾಂಡ್ ಓಪನಿಂಗ್ ಆಗಲಿದೆ.