Tag: gouthami

  • BBK 11: ದೊಡ್ಮನೆಯಲ್ಲಿ ಪತಿ ಜೊತೆ ಮದುವೆ ಆ್ಯನಿವರ್ಸರಿ ಆಚರಿಸಿದ ಗೌತಮಿ

    BBK 11: ದೊಡ್ಮನೆಯಲ್ಲಿ ಪತಿ ಜೊತೆ ಮದುವೆ ಆ್ಯನಿವರ್ಸರಿ ಆಚರಿಸಿದ ಗೌತಮಿ

    ಬಿಗ್ ಬಾಸ್ ಮನೆಯ 11ರ (Bigg Boss Kannada 11)  ಆಟ ಇನ್ನೇನು ಕೆಲವೇ ದಿನಗಳಲ್ಲಿ ಅಂತ್ಯವಾಗಲಿದೆ. ಹೀಗಿರುವಾಗ ದೊಡ್ಮನೆಯಲ್ಲಿ ಫ್ಯಾಮಿಲಿ ರೌಂಡ್ ಶುರುವಾಗಿದೆ. ಮನೆಯಲ್ಲಿರುವ ಸ್ಪರ್ಧಿಗಳ ಕುಟುಂಬಸ್ಥರು ಬಿಗ್ ಬಾಸ್‌ಗೆ ಎಂಟ್ರಿ ಕೊಡ್ತಿದ್ದಾರೆ. ಇದೀಗ ಗೌತಮಿ (Gouthami) ಪತಿ ಅಭಿಷೇಕ್ (Abhishek Kasaragod) ಆಗಮಿಸಿದ್ದಾರೆ. ತಮ್ಮ ಮದುವೆ ಆ್ಯನಿವರ್ಸರಿಯನ್ನು ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ.

    ನಿನ್ನೆ (ಡಿ.31) ಭವ್ಯಾ, ತ್ರಿವಿಕ್ರಮ್ ಹಾಗೂ ರಜತ್ ಕುಟುಂಬ ಆಗಮಿಸಿತ್ತು. ಇಂದು ಮೋಕ್ಷಿತಾ, ಮಂಜು ಹಾಗೂ ಗೌತಮಿ ಕುಟುಂಬ ಆಗಮಿಸಿದೆ. ಮನೆಗೆ ಎಂಟ್ರಿ ಕೊಡುವಾಗಲೇ ಅಭಿಷೇಕ್ ಕೇಕ್ ಹಿಡಿದು ಬಂದರು. ಪತಿಯನ್ನು ನೋಡುತ್ತಿದ್ದಂತೆ ಗೌತಮಿ ಭಾವುಕರಾಗಿದ್ದಾರೆ. ಇದನ್ನೂ ಓದಿ:BBK 11: ತ್ರಿವಿಕ್ರಮ್‌ನಿಂದ ದೂರವಿರಲು ಪರೋಕ್ಷವಾಗಿ ಭವ್ಯಾಗೆ ಅಕ್ಕ ಸಲಹೆ

    ಬಳಿಕ ಬಿಗ್ ಬಾಸ್ ಮನೆಯ ಸ್ಪರ್ಧಿಗಳು ಹಾಗೂ ಮೋಕ್ಷಿತಾ, ಮಂಜು ಕುಟುಂಬದ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ಈ ವೇಳೆ, ಪತಿ ಜೊತೆ ನಟಿ ತರಲೆ ಮಾಡಿದ್ದಾರೆ. ಆ ನಂತರ ಮಂಜು ತಂದೆಯ ಕಾಲಿಗೆ ಬಿದ್ದು ಗೌತಮಿ ದಂಪತಿ ಆಶೀರ್ವಾದ ಪಡೆದಿದ್ದಾರೆ. ಪತ್ನಿ ಗೌತಮಿಗೆ ಕಾಲಿಗೆ ಗೆಜ್ಜೆ ಮತ್ತು ಸರವನ್ನು ಗಿಫ್ಟ್ ಆಗಿ ನೀಡಿದ್ದಾರೆ. ಈ ವೇಳೆ ಪತಿಯನ್ನು ತಬ್ಬಿ ಮುದ್ದಾಡಿದ್ದಾರೆ.

    ಇನ್ನೂ ಅಭಿಷೇಕ್ ಕಾಸರಗೋಡು ಅವರನ್ನು 2018ರ ಡಿ.31 ಗೌತಮಿ ಮದುವೆಯಾದರು. ಚಿತ್ರರಂಗದಲ್ಲಿ ಕ್ಯಾಮರಾಮ್ಯಾನ್ ಆಗಿ ಗುರುತಿಸಿಕೊಂಡಿರುವ ಅಭಿಷೇಕ್ ಅವರು ಪುನೀತ್ ರಾಜ್‌ಕುಮಾರ್ ನಿರ್ಮಾಣದ ಮಾಯಾ ಬಜಾರ್, ಗ್ರಾಮಾಯಣ, ಕೃಷ್ಣ ಟಾಕೀಸ್ ಸೇರಿದಂತೆ ಹಲವು ಚಿತ್ರಗಳಿಗೆ ಅವರು ಕೆಲಸ ಮಾಡಿದ್ದಾರೆ.

  • BBK 11: ಗೌತಮಿ ಪಕ್ಷಪಾತಿ ಎಂದು ದೂರಿದ ಮೋಕ್ಷಿತಾ

    BBK 11: ಗೌತಮಿ ಪಕ್ಷಪಾತಿ ಎಂದು ದೂರಿದ ಮೋಕ್ಷಿತಾ

    ದೊಡ್ಮನೆಯ ಆಟ ದಿನದಿಂದ ದಿನಕ್ಕೆ ರಂಗೇರುತ್ತಿದೆ. 80 ದಿನಗಳನ್ನು ಪೂರೈಸಿ ಮುನ್ನುಗ್ಗುತ್ತಿದೆ. ಸ್ಪರ್ಧಿಗಳ ಅಳಿವು ಉಳಿವಿಗಾಗಿ ಹೋರಾಟ ನಡೆಯುತ್ತಿದೆ. ಹೀಗಿರುವಾಗ ಟಾಸ್ಕ್‌ವೊಂದರಲ್ಲಿ ಮನೆಯ ಪಕ್ಷಪಾತಿ ಯಾರು? ಎಂದು ಕೇಳಿದ್ರೆ ಗೌತಮಿ ಹೆಸರು ಹೇಳಿ ಮೋಕ್ಷಿತಾ (Mokshitha Pai) ನೀರಿಗೆ ತಳ್ಳಿದ್ದಾರೆ. ಇದನ್ನು ನೋಡಿ ಮನೆ ಮಂದಿ ಶಾಕ್ ಆಗಿದ್ದಾರೆ. ಇದನ್ನೂ ಓದಿ:ಯುಐ ಚಿತ್ರಕ್ಕೆ ಬಾಲಿವುಡ್‌ನಲ್ಲೂ ಬಹುಪರಾಕ್

    ಮಂಜು, ಮೋಕ್ಷಿತಾ, ಗೌತಮಿ (Gouthami Jadav) ನಡುವಿನ ಸ್ನೇಹಕ್ಕೆ ಬ್ರೇಕ್ ಬಿದ್ದು ಹಲವು ದಿನಗಳಾಗಿದೆ. ಮೂವರು ಜಿದ್ದಿಗೆ ಬಿದ್ದಿದ್ದು ಇದೆ. ಹೀಗಿರುವಾಗ ಗೌತಮಿ ಮೇಲೆ ಮೋಕ್ಷಿತಾ ಸೇಡು ತೀರಿಸಿಕೊಳ್ಳುವ ಕೆಲಸ ಶುರು ಮಾಡಿದ್ದಾರೆ. ಸದ್ಯ ವಾಹಿನಿ ಹಂಚಿಕೊಂಡ ಪ್ರೋಮೋದಲ್ಲಿ ‘ಬಿಗ್ ಬಾಸ್’ ಟಾಸ್ಕ್‌ವೊಂದರಲ್ಲಿ ನೀಡಿದ್ದಾರೆ. ಪಕ್ಷಪಾತಿ ಹಾಗೂ ನಿರ್ಧಾರ ತೆಗೆದುಕೊಳ್ಳುವ ಅಶಕ್ತ, ಕೊಟ್ಟ ಮಾತನ್ನು ಉಳಿಸಿಕೊಳ್ಳುವಲ್ಲಿ ಅಶಕ್ತ, ಜನ ನಿರ್ವಹಣೆಯಲ್ಲಿ ಅಶಕ್ತ ಎಂಬ ಆಯ್ಕೆಗೆ ಸ್ಪರ್ಧಿಗಳನ್ನು ಸೂಚಿಸುವಂತೆ ‘ಬಿಗ್ ಬಾಸ್’ ಸೂಚನೆ ನೀಡಿದ್ದಾರೆ. ಟಾಸ್ಕ್‌ ಮುಂದುವರಿದ ಭಾಗವಾಗಿ ತಾವು ತೆಗೆದುಕೊಂಡ ವ್ಯಕ್ತಿಯ ಹೆಸರನ್ನು ಹೇಳಿ, ಅದಕ್ಕೆ ಸೂಕ್ತ ಕಾರಣ ನೀಡಿ ಸ್ವಿಮ್ಮಿಂಗ್ ಪೂಲ್‌ಗೆ ತಳ್ಳಬೇಕು ಎಂದು ಆದೇಶ ನೀಡಿದರು.

    ಅದರಂತೆಯೇ ಮೋಕ್ಷಿತಾ, ಅವರು ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಅಶಕ್ತ ಸ್ಥಾನಕ್ಕೆ ಗೌತಮಿ ಹೆಸರನ್ನು ತಿಳಿಸಿದ್ದಾರೆ. ಇದೇ ವಿಚಾರಕ್ಕೆ ಇಬ್ಬರ ನಡುವೆ ಮತ್ತೆ ವಾಕ್ಸಮರ ನಡೆದಿದೆ. ನಮ್ಮ ಮೂರು ಜನರ ಫ್ರೆಂಡ್‌ಶಿಪ್ ಕಡೆವರೆಗೂ ಕಾಪಾಡುತ್ತೇನೆ ಎಂದಿದ್ರಿ ಎಂದ ಮೋಕ್ಷಿತಾಗೆ ನೀವು ಒಮ್ಮೆ ನಮ್ಮಿಂದ ದೂರಾದ ಮೇಲೆ ಆಟದ ಸಲುವಾಗಿ ನಿಮ್ಮಲ್ಲಿ ಸಾಕಷ್ಟು ಬದಲಾವಣೆ ಆಗಿದೆ ಎಂದು ಗೌತಮಿ ತಿರುಗೇಟು ನೀಡಿದರು.

    ಅದಕ್ಕೆ ನಿಮಗೆ ಮಂಜುರವರು ಬೇಜಾರ್ ಆದರೆ ಫೀಲ್ ಆಗುತ್ತದೆ. ಅದೇ ಮೋಕ್ಷಿತಾಗೆ ಫೀಲ್ ಆದರೆ ಅಲ್ಲಿ ಗೌತಮಿ ಇರುತ್ತಿರಲಿಲ್ಲ ಎಂದು ಮೋಕ್ಷಿತಾ ತಿವಿದಿದ್ದಾರೆ. ಅವರ ಮಾತಿಗೆ ನನಗೆ ನಿಮ್ಮ ಹಾಗೆ ಯೋಚನೆ ಮಾಡೋಕೆ ಬರಲ್ಲ. ಇಂದಿಗೂ ಈ ಸ್ನೇಹವನ್ನು ನಿಭಾಯಿಸುತ್ತಿರೋದು ನಾನು ಎಂದಿದ್ದಾರೆ ಗೌತಮಿ. ನಂತರ ಗೌತಮಿರನ್ನು ಮೋಕ್ಷಿತಾ ನೀರಿಗೆ ತಳ್ಳಿದ್ದಾರೆ. ಇದರ ಜೊತೆಗೆ ಪಕ್ಷಪಾತಿ ವ್ಯಕ್ತಿಗಳ ಸಾಲಿನಲ್ಲಿ ಹೆಚ್ಚು ಮಂದಿ ಚೈತ್ರಾ ಕುಂದಾಪುರ ಹೆಸರನ್ನು ಟಾರ್ಗೆಟ್ ಮಾಡಿದ್ದಾರೆ.

  • BBK 11: ನಾನು ಮೇಲೆ ಹೋಗಿದ್ದಾಗಿದೆ, ಬಗ್ಗೋ ಮಾತೇ ಇಲ್ಲ- ಮಂಜುಗೆ ಗೌತಮಿ ತಿರುಗೇಟು

    BBK 11: ನಾನು ಮೇಲೆ ಹೋಗಿದ್ದಾಗಿದೆ, ಬಗ್ಗೋ ಮಾತೇ ಇಲ್ಲ- ಮಂಜುಗೆ ಗೌತಮಿ ತಿರುಗೇಟು

    ಬಿಗ್ ಬಾಸ್ ಮನೆಯ (Bigg Boss Kannada 11) ಆಟ 80ನೇ ದಿನದತ್ತ ಮುನ್ನುಗ್ಗುತ್ತಿದೆ. ಇನ್ನೂ ಸ್ನೇಹಿತರಾಗಿದ್ದ ಉಗ್ರಂ ಮಂಜು, ಗೌತಮಿ ಜಾಧವ್ ನಡುವೆ ಬಿರುಕು ಮೂಡಿದೆ. ತ್ರಿವಿಕ್ರಮ್ ಜೊತೆ ಆಟದ ಲಾಜಿಕ್ ಮತ್ತು ಸ್ಟ್ರಾಟಜಿ ಮಾತನಾಡುವಾಗ ಮಂಜು ಮಧ್ಯೆ ಎಂಟ್ರಿ ಕೊಟ್ಟಿದ್ದಾರೆ. ಇದು ನಟಿಗೆ ಕೋಪ ತರಿಸಿದೆ. ಟೇಕ್ ಆಫ್ ಆಗಿದೆ, ಬಗ್ಗೋ ಮಾತೇ ಇಲ್ಲ ಎಂದು ಉಗ್ರಂ ಮಂಜುಗೆ (Ugramm Manju) ಗೌತಮಿ ಜಾಡಿಸಿದ್ದಾರೆ.

    ಗೌತಮಿ (Gouthami) ಅವರು ಟಾಸ್ಕ್ ವಿಚಾರವಾಗಿ ತ್ರಿವಿಕ್ರಮ್ ಜತೆ ಮಾತನಾಡಿದ್ದಾರೆ. ಲಾಜಿಕ್ ಹಾಗೂ ಸ್ಟ್ರಾಟಜಿ ಬಗ್ಗೆ ಮಾತನಾಡಿದ್ದಾರೆ. ಇವರ ಮಾತಿನ ನಡುವೆ ಮಂಜು ಬಂದಿದ್ದಾರೆ. ಆಗ ಮಂಜು ಅವರು ನಾನು ಚಪ್ಪಾಳೆ ಹೊಡೆದೆ ಎಂದಿದ್ದಾರೆ. ಅದಕ್ಕೆ ಗೌತಮಿ ಅವರು, ಮಂಜುಗೆ ಚೆನ್ನಾಗಿ ಮಾತಿನಲ್ಲೇ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ:‘ಅಯೋಗ್ಯ 2’ಗೆ ಅದ್ಧೂರಿ ಮುಹೂರ್ತ- ಮತ್ತೆ ಜೊತೆಯಾದ ಸತೀಶ್‌ ನೀನಾಸಂ, ರಚಿತಾ ರಾಮ್

    ನಿಮಗೆ ಚಪ್ಪಾಳೆಯ ಧ್ವನಿ ಕೇಳೆ ಇಲ್ಲ. ನಾನು ಕೇಳಿದ್ದು. ನಮ್ಮ ಕಥೆ ಜೊತೆ ನಿಮ್ಮ ಕಥೆ ಸೇರಿಸಿಕೊಂಡು ಹೇಳಿದ್ರಿ ಅಂತ. ಇದೇ ಪ್ಲಾಬ್ಲಮ್ ಇರೋದು. ಎಲ್ಲರಿಗೂ ನಿಮ್ಮ ನರೇಶನ್ ಕೊಡುತ್ತೀರಾ. ಇದಕ್ಕೆ ಎಲ್ಲರಿಗೂ ಅನ್ಸೋದು, ಮಂಜು ನಾನು ನಾನು ಅಂತ ಎನ್ನುತ್ತಾರೆ ಅಂತ. ನಾನು ಮೇಲೆ ಹೋಗಿದ್ದಾಗಿದೆ, ಬಗ್ಗೋ ಮಾತೇ ಇಲ್ಲ ಎಂದು ಗೌತಮಿ ತಿರುಗೇಟು ನೀಡಿದ್ದಾರೆ.

    ನಾನು ಕ್ಯಾಪ್ಟನ್ ಆಗಿದ್ದಾಗ ನೀವು ನನ್ನನ್ನು ಲೀಡ್ ಮಾಡಬೇಡಿ. ನಿಮ್ಮ ವಾಯ್ಸ್‌ನಿಂದ ನನ್ನ ಧ್ವನಿ ಕೆಳಗೆ ಹೋಗ್ತಿದೆ ಎಂದು ನಟಿ ಮಂಜುಗೆ ಎಚ್ಚರಿಕೆ ನೀಡಿದ್ದಾರೆ.

  • BBK 11: ಮೋಕ್ಷಿತಾ ಹೇಳಿದ್ದು ಸರಿ- ಮಂಜು ಜೊತೆಗಿನ ಫ್ರೆಂಡ್‌ಶಿಪ್‌ ಕಟ್‌ ಎಂದ ಗೌತಮಿ

    BBK 11: ಮೋಕ್ಷಿತಾ ಹೇಳಿದ್ದು ಸರಿ- ಮಂಜು ಜೊತೆಗಿನ ಫ್ರೆಂಡ್‌ಶಿಪ್‌ ಕಟ್‌ ಎಂದ ಗೌತಮಿ

    ‘ಬಿಗ್‌ ಬಾಸ್‌ ಕನ್ನಡ 11’ರ (Bigg Boss Kannada 11) ಆಟ 80ನೇ ದಿನದತ್ತ ಮುನ್ನುಗ್ಗುತ್ತಿದೆ. ಸಾಕಷ್ಟು ಟಿಸ್ಟ್‌ಗಳನ್ನು ನೋಡಿ ಪ್ರೇಕ್ಷಕರಿಗೂ ಶೋ ರೋಚಕ ಎನಿಸುತ್ತಿದೆ. ಉಗ್ರಂ ಮಂಜು ಸ್ನೇಹಕ್ಕೆ ಮೋಕ್ಷಿತಾ ಗುಡ್‌ ಬೈ ಹೇಳಿರುವ ಬೆನ್ನಲ್ಲೇ ಈಗ ಗೌತಮಿ ಕೂಡ ಇಬ್ಬರ ಸ್ನೇಹ ಕಟ್‌ ಎಂದು ಹೇಳಿ ಶಾಕ್‌ ಕೊಟ್ಟಿದ್ದಾರೆ. ಗೆಳೆಯ-ಗೆಳತಿ ಎಂದೇ ಫೇಮಸ್ ಆಗಿದ್ದ ಗೌತಮಿ ಜಾಧವ್ (Gouthami) ಹಾಗೂ ಮಂಜು (Ugramm Manju) ನಡುವೆ ಬಿರುಕು ಮೂಡಿದೆ.

    ಸದ್ಯ ವಾಹಿನಿ ಹಂಚಿಕೊಂಡಿರುವ ಪ್ರೋಮೋದಲ್ಲಿ ಅದರಲ್ಲಿ ಗೌತಮಿ ಹಾಗೂ ಮಂಜು ನಡುವಿನ ಸಂಭಾಷಣೆಯನ್ನು ತೋರಿಸಲಾಗಿದೆ. ನಾನು ಕ್ಯಾಪ್ಟನ್ ಆದಾಗ ನೀವು ನನ್ನನ್ನು ಲೀಡ್ ಮಾಡಬೇಡಿ. ನಿಮ್ಮ ವಾಯ್ಸ್‌ನಿಂದ ನನ್ನ ಧ್ವನಿ ಕೆಳಗೆ ಹೋಗ್ತಿದೆ ಎಂದು ಮಂಜುಗೆ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ:ಬೆಂಗಳೂರಿಗೆ ವಿಶ್ವ ಮಾನ್ಯತೆ ದೊರಕಿಸಿದ ಶಿಸ್ತುಬದ್ಧ ರಾಜಕಾರಣಿ ಎಸ್ಎಂಕೆ – ರಾಧಿಕಾ ಪಂಡಿತ್ ಭಾವುಕ ಪೋಸ್ಟ್

    ನಂತರ ನಡೆದ ಟಾಸ್ಕ್ ಮಧ್ಯದಲ್ಲಿ ಮಂಜು ಏನೋ ಹೇಳಲು ಪ್ರಯತ್ನಿಸಿದ್ದಾರೆ. ಅದಕ್ಕೆ ಕೋಪಿಸಿಕೊಂಡ ಗೌತಮಿ, ಮಂಜು ಅವರ ನಾನು 20 ಸಾರಿ ಹೇಳಲು ಸಾಧ್ಯವಿಲ್ಲ. ನೀವು ಹೇಳಿದ ಹಾಗೆ ಇಲ್ಲ ಎಂದು ಮಂಜುಗೆ ಟಾಂಗ್ ಕೊಟ್ಟಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದಿಟ್ಟಿರುವ ಗೌತಮಿ, ಕ್ಯಾಪ್ಟನ್ಸಿ ಓಟದಿಂದ ಮಂಜು ಅವರನ್ನು ಹೊರಗೆ ಇಟ್ಟಿದ್ದಾರೆ. ಇದು ಮನೆ ಮಂದಿಗೆ ಅಚ್ಚರಿ ಮೂಡಿಸಿದೆ. ಇಲ್ಲಿ ಗೆಳೆಯ, ಗೆಳತನ ಇರಲ್ಲ ಅದೆಲ್ಲ ಮುಗಿಸುತ್ತ ಇದ್ದೀನಿ ಅನ್ನುವ ಮೂಲಕ ಗೌತಮಿ ಶಾಕ್ ನೀಡಿದ್ದಾರೆ. ಮಂಜುಗೆ ಗೌತಮಿ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಗಾರ್ಡನ್ ಏರಿಯಾದಲ್ಲಿ ಕೂತು ಮಾತನಾಡುವ ವೇಳೆ, ಗೌತಮಿ ಮಂಜುಗೆ ಬುದ್ಧಿ ಹೇಳಿದ್ದಾರೆ. ಆಗ ಮೋಕ್ಷಿತಾ ಅವರ ಏನು ಹೇಳಿದರು ಅವರು ಇಬ್ಬರೇ ಮಾತನಾಡುತ್ತಾರೆ ಎಂದು ಆರೋಪಿಸಿದರು. ಮೋಕ್ಷಿತಾ ಹೇಳಿದ್ದು ಸರಿ ಎನಿಸುತ್ತಿದೆ ಎಂದಿದ್ದಾರೆ.

    ನಾವು ಇಬ್ಬರೇ ಇರಬೇಕಾದರೂ ಕೂಡ ನೀವೇ ಮಾತನಾಡುತ್ತೀರಿ ಎಂದು ನನಗೆ ಅನಿಸುತ್ತಾ ಇದೆ. ಅವರು ಹೇಳಿದ ಲೈನ್‌ಗಳು ನನಗೆ ಸರಿಯಾಗಿ ಇದೆ ಎಂದು ಅನಿಸಿತು. ನಾವು ಹೇಳುವ ಹಾಗೆ ನೀವೇ ಇಲ್ಲ. ಇಲ್ಲಿ ಗೆಳೆಯ, ಗೆಳತಿ ಗೆಳತನ ಇರಲ್ಲ ಎಂದಿರುವ ಗೌತಮಿ, ಮಂಜು ಅವರನ್ನು ಕ್ಯಾಪ್ಟನ್ಸಿ ಟಾಸ್ಕ್‌ನಿಂದ ಹೊರಗಿಟ್ಟಿದ್ದಾರೆ. ಇದು ಮಂಜು ಅವರ ಕೋಪಕ್ಕೆ ಕಾರಣವಾಗಿದೆ. ಅಲ್ಲದೇ ಮುನಿಸು ಬಿಟ್ಟು ಗೌತಮಿ ಮತ್ತು ಮೋಕ್ಷಿತಾ (Mokshitha Pai) ಮತ್ತೆ ಒಂದು ಆಗ್ತಾರಾ ಎಂಬ ಪ್ರಶ್ನೆ ವೀಕ್ಷಕರಲ್ಲಿ ಕಾಡುತ್ತಿದೆ.

  • ಸಂಬಂಧಗಳನ್ನೆಲ್ಲ ಸೂಟ್‌ಕೇಸ್‌ಗೆ ಹಾಕಿ ತುಂಬಿಡಿ: ಮಂಜು, ಗೌತಮಿಗೆ ಕಿಚ್ಚನ ವಾರ್ನಿಂಗ್

    ಸಂಬಂಧಗಳನ್ನೆಲ್ಲ ಸೂಟ್‌ಕೇಸ್‌ಗೆ ಹಾಕಿ ತುಂಬಿಡಿ: ಮಂಜು, ಗೌತಮಿಗೆ ಕಿಚ್ಚನ ವಾರ್ನಿಂಗ್

    ಬಿಗ್ ಬಾಸ್ ಮನೆಯ (Bigg Boss Kannada 11) ಆಟ ಇದೀಗ 62 ದಿನಗಳನ್ನು ಪೂರೈಸಿ ಮುನ್ನುಗ್ಗುತ್ತಿದೆ. ಇನ್ನೂ ಈ ವಾರ ದೊಡ್ಮನೆಯ ಮಹಾರಾಜನಾಗಿ ಆಳಿದ ಉಗ್ರಂ ಮಂಜು ಅವರು ಗೌತಮಿಗೆ ಕಟುಕ ರಾಜನಾಗಿರಲಿಲ್ಲ. ಈ ವಿಷ್ಯದಲ್ಲಿ ಪಕ್ಷಪಾತವಾಗಿ ಮಂಜು ಆಡಿದ್ದರು. ಅದಕ್ಕೆ ಸುದೀಪ್ (Sudeep) ವಾರಾಂತ್ಯ ಖಡಕ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಸಂಬಂಧಗಳನ್ನೆಲ್ಲ ಸೂಟ್‌ಕೇಸ್‌ಗೆ ಹಾಕಿ ತುಂಬಿಡಿ, ಬಿಗ್ ಬಾಸ್‌ನಲ್ಲಿ ಆಟ ಆಡಿ ಎಂದು ಮಂಜು ಹಾಗೂ ಗೌತಮಿಗೆ (Gouthami) ಸುದೀಪ್ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ:BBK 11: ಬಿಗ್ ಬಾಸ್‌ನಿಂದ ಐಶ್ವರ್ಯಾ ಸಿಂಧೋಗಿ ಔಟ್?

    ಗೆಳತಿ ಮಂಜು ಅವರು ಪಕ್ಷಪಾತವಾಗಿ ಆಟ ಆಡಿದ್ದರು. ಇದು ಮನೆಯ ಉಳಿದ ಸದಸ್ಯರ ಮೇಲೂ ಪರಿಣಾಮ ಬಿದ್ದಿತ್ತು. ಇದರ ಬಗ್ಗೆ ಮನೆ ಮಂದಿಗೂ ಬೇಸರವಿದೆ. ಈ ಕುರಿತು ಸುದೀಪ್ ಅವರು ಪರೋಕ್ಷವಾಗಿಯೇ ಮಾತನಾಡಿದರು. ಬಿಗ್ ಬಾಸ್‌ಗೆ ಇಲ್ಲಿ ಯಾರೂ ಸಂಬಂಧ ಬೆಳೆಸಲು ಬಂದಿಲ್ಲ. ಈ ರಾಜನ ಆಟ ಮೊದಲಿಗೆ ಚೆನ್ನಾಗಿಯೇ ಟೇಕ್ ಓವರ್ ಆಗಿತ್ತು. ಆಮೇಲೆ ಏನಾಯ್ತು ಮುಂಜು ಅವರೆ? ಇಲ್ಲಿ ಪಾತ್ರವನ್ನೂ, ಸಂಬಂಧವನ್ನೂ ನಿಭಾಯಿಸುವಾಗ, ಈ ರೀತಿ ಆಗತ್ತದೆ. ಈ ಸಂಬಂಧಗಳನ್ನೆಲ್ಲ ಸೂಟ್‌ಕೇಸ್‌ಗೆ ಹಾಕಿ ತುಂಬಿ ಇಡಿ. ಸಂಬಂಧ ಹೊರಗಡೆ ಬೆಳೆಸಿ, ಸದ್ಯಕ್ಕೆ ಬಿಗ್ ಬಾಸ್‌ನಲ್ಲಿ ಆಟ ಆಡಿ. ವೀಕ್ಷಕರಿಗೆ ಇದೊಂದು ಉಪಕಾರ ಮಾಡಿ ಎಂದು ಗೌತಮಿ ಮತ್ತು ಮಂಜುಗೆ (Ugramm Manju) ಸುದೀಪ್ ಎಚ್ಚರಿಕೆ ನೀಡಿದ್ದಾರೆ.

    ಒಂದು ಸಲಹೆ ಏನೆಂದರೆ, ನೀವು ಅಲ್ಲಿ ಸ್ನೇಹಿತರಾಗಿಯೇ ಇರಿ. ಆದರೆ ಟಾಸ್ಕ್ ಅಂತ ಬಂದಾಗ, ನಿಮ್ಮ ಬಗ್ಗೆ ಸಾಕಷ್ಟು ಭಿನ್ನಾಭಿಪ್ರಾಯಗಳು ಮನೆಯಲ್ಲಿ ಬಂದಿವೆ. ಆದರೆ ನಾಳೆ ನೀವಿಬ್ಬರೂ ಜಗಳ ಆಡಿ ಅಂತಲ್ಲ. ಟಾಸ್ಕ್ ಅಂತ ಬಂದಾಗ ಸರಿಯಾಗಿ ಗಮನ ವಹಿಸಿ. ಆಗಿಲ್ಲ ಅಂದರೆ ಬಿಗ್ ಬಾಸ್ ಹತ್ತಿರ ಹೇಳಿ. ಉಸ್ತುವಾರಿ ವಹಿಸಿಕೊಳ್ಳಬೇಡಿ ಎಂದಿದ್ದಾರೆ ಸುದೀಪ್.

    ಇನ್ನೂ ಯುವರಾಣಿ ಮೋಕ್ಷಿತಾ ಕೆಲವು ನಿಯಮಗಳನ್ನು ಮಾಡಿರುತ್ತಾರೆ. ಆ ನಿಯಮಕ್ಕೆ ತಕ್ಕಂತೆ ಎಲ್ಲರೂ ನಡೆದುಕೊಳ್ಳಬೇಕು. ಆದರೆ ಗೌತಮಿ ಮಾತ್ರ ಫಾಲೋ ಮಾಡಲ್ಲ ಎಂದು ಹೇಳುತ್ತಾರೆ. ಸುರೇಶ್ ಅವರು ಆಟದ ನಿಯಮವನ್ನು ಹೇಳಿದರೂ ಸಹ ಗೌತಮಿ ಮಾತ್ರ ಇದಕ್ಕೆಲ್ಲ ಒಪ್ಪಿಕೊಂಡಿಲ್ಲ. ಯುವರಾಣಿ ಕಂಡಾಗೆಲ್ಲ ನೀವು ತಲೆ ಬಾಗಿ ನಮಸ್ಕಾರ ಮಾಡಬೇಕಂತೆ ಎಂದು ಸುರೇಶ್ ಅವರು ಹೇಳುತ್ತಾರೆ. ಆದರೆ ಗೌತಮಿ ಇಲ್ಲ ನಾನು ಹಾಗೆಲ್ಲ ತಲೆ ಬಾಗೋದಿಲ್ಲ. ಯಾವತ್ತು ನಾನು ಅವರಿಗೆ ತಲೆ ಬಾಗಿದರೆ, ಅವತ್ತು ನಾನು ಅವರು ಹೇಳಿದ್ದನ್ನು ಕೇಳಿದೆ ಎಂದಾಗುತ್ತದೆ. ಆ ಕಾರಣಕ್ಕಾಗಿ ನಾನು ತಲೆ ಬಾಗೋದಿಲ್ಲ ಎಂದು ಮಂಜುಗೆ ಹೇಳಿರುತ್ತಾರೆ. ರಾಜನಾಗಿ ಮಂಜು ಅವರು ಗೌತಮಿಗೆ ಮೋಕ್ಷಿತಾರ ಆಜ್ಞೆ ಪಾಲಿಸಿ ಎಂದು ಹೇಳದೇ ಬೆಂಬಲ ನೀಡಿರುತ್ತಾರೆ. ಅದಕ್ಕಾಗಿ ಸುದೀಪ್ ಇಬ್ಬರಿಗೂ ಕ್ಲಾಸ್ ತೆಗೆದುಕೊಂಡಿದ್ದಾರೆ.

  • BBK 11: ನಿಮ್ಮಲ್ಲಿ ಪಾಸಿಟಿವಿಟಿ ಇಲ್ಲ, ಇರೋದೆಲ್ಲ ನೆಗೆಟಿವ್‌: ಗೌತಮಿ ವಿರುದ್ಧ ಶೋಭಾ ರಾಂಗ್

    BBK 11: ನಿಮ್ಮಲ್ಲಿ ಪಾಸಿಟಿವಿಟಿ ಇಲ್ಲ, ಇರೋದೆಲ್ಲ ನೆಗೆಟಿವ್‌: ಗೌತಮಿ ವಿರುದ್ಧ ಶೋಭಾ ರಾಂಗ್

    ದೊಡ್ಮನೆಯ (BBK 11) ಆಟಕ್ಕೆ ವೈಲ್ಡ್ ಕಾರ್ಡ್ ಸ್ಪರ್ಧಿಗಳಾಗಿ ಶೋಭಾ ಶೆಟ್ಟಿ (Shobha Shetty) ಮತ್ತು ರಜತ್ (Rajath) ಎಂಟ್ರಿ ಕೊಟ್ಟಿದ್ದಾರೆ. ಮನೆಗೆ ಬರುತ್ತಿದ್ದಂತೆ ಶೋಭಾ ಸಖತ್ ವೈಲ್ಡ್ ಆಗಿ ಆಟ ಆಡುತ್ತಿದ್ದಾರೆ. ಇದೀಗ ನಿಮ್ಮ ಮುಖವಾಡ ಕಳಚುತ್ತೇನೆ ಅಂತ ಭಯನಾ? ಎಂದು ಗೌತಮಿಗೆ ಶೋಭಾ ಅವಾಜ್ ಹಾಕಿದ್ದಾರೆ.

    ಉಗ್ರಂ ಮಂಜು ನಂತರ ಗೌತಮಿ ಜಾಧವ್ ಕೂಡ ಶೋಭಾರನ್ನು ಕ್ಯಾಪ್ಟನ್ಸಿ ರೇಸ್‌ನಿಂದ ಹೊರಗಿಡಲು ಹೆಸರು ಸೂಚಿಸಿದ್ದಾರೆ. ‘ಬಿಗ್ ಬಾಸ್’ ನೀಡಿದ ಟಾಸ್ಕ್‌ನಲ್ಲಿ ರಜತ್ ಮತ್ತು ಶೋಭಾ ಇವರಲ್ಲಿ ಕ್ಯಾಪ್ಟನ್ ಆಗಲು ಯಾರು ಅರ್ಹ? ಅನರ್ಹ ಎಂದು ಮನೆ ಮಂದಿ ಹೇಳಬೇಕಿತ್ತು. ಗೌತಮಿ ಅವರು ಶೋಭಾರನ್ನು ಕ್ಯಾಪ್ಟನ್ ಆಗಲು ಅನರ್ಹ ಎಂದಿದ್ದಾರೆ. ಗೌತಮಿ ಅವರು ಶೋಭಾ ಶೆಟ್ಟಿ ಅವರನ್ನು ಹೊರಗೆ ಇಟ್ಟಿದ್ದಾರೆ. ಅವರು ಕೊಟ್ಟ ಕಾರಣಕ್ಕೆ, ನಿಮ್ಮಲ್ಲಿ ಪಾಸಿಟಿವ್ ಇಲ್ವೇ ಇಲ್ಲ, ಇರೋದೆಲ್ಲ ನೆಗೆಟಿವ್ ಎಂದು ಗೌತಮಿಗೆ ನೇರವಾಗಿ ಚಾಟಿ ಬೀಸಿದ್ದಾರೆ ಶೋಭಾ. ಇದನ್ನೂ ಓದಿ:ಕೊಲೆ ಯತ್ನದ ಕೇಸ್‌ನಲ್ಲಿ ನಟ ತಾಂಡವ್ ರಾಮ್ ಅರೆಸ್ಟ್

    ಶೋಭಾ ಅವರು ಅನರ್ಹ ಅಂತ ಯಾಕೆ ಹೇಳುತ್ತಿದ್ದೇನೆ ಎಂದರೆ, ಮೊದಲಿಗೆ ನನ್ನ ಮುಖವಾಡ ಕಳಚಬೇಕು ಎನ್ನುವುದು ಶೋಭಾ ಅವರ ಗುರಿ. ನಿಮ್ಮ ಟೀಮ್‌ಗೆ ನಾನು ಬಂದರೆ ನೀವು ಅದೇ ಗುಂಗಿನಲ್ಲಿ ಇರುತ್ತೀರಾ ಹೊರತು, ನನ್ನ ಪಾಸಿಟಿವ್ ಕಡೆ ನೀವು ನೋಡೋದೆ ಇಲ್ಲ. ನೆಗೆಟಿವ್ ಫಸ್ಟ್ ನೋಡುತ್ತೀರಾ ಅಂದರೆ ತಂಡದ ನಾಯಕನಿಗೆ ಇರಬೇಕಾದ ಲಕ್ಷಣ ಅಲ್ಲ ಎಂದಿದ್ದಾರೆ. ಅದಕ್ಕೆ ನಾನು ನಿಮ್ಮ ಮುಖವಾಡ ಕಳಚುತ್ತೀನಿ ಅಂತ ಭಯ ಪಡುತ್ತಿದ್ದೀರಾ? ಎಂದು ನೇರವಾಗಿ ಗೌತಮಿಗೆ ಶೋಭಾ ಪ್ರಶ್ನಿಸಿದ್ದಾರೆ. 200 ದಿನ ಇದ್ದರೂ ಅದು ಸಾಧ್ಯವಿಲ್ಲ ಎಂದು ಶೋಭಾಗೆ ಗೌತಮಿ ತಿರುಗೇಟು ನೀಡಿದ್ದಾರೆ.

    ಅದಕ್ಕೆ ಶೋಭಾ ಶೆಟ್ಟಿ ಮಾತನಾಡಿ, ಆಡಿಯನ್ಸ್ ಆಗಿ ನಾನು ನಿಮ್ಮನ್ನು ಹೊರಗೆ ನೋಡಿದಾಗ ಪಾಸಿಟಿವ್ ಅಂತ ಹೇಳುತ್ತೀರಾ. ಆದರೆ ನಿಮ್ಮಲ್ಲಿ ಇರೋದೆಲ್ಲ ನೆಗೆಟಿವ್. ಪಾಸಿಟಿವಿಟಿ ನಿಮಗೆ ಇಲ್ವೇ ಇಲ್ಲ. ಇರೋದೆಲ್ಲ ನೆಗೆಟಿವ್ ಎಂದಿದ್ದಾರೆ. ಅದಕ್ಕೆ ಗೌತಮಿ ಅವರು ಪಾಸಿಟಿವಿಟಿ ನನಗೆ ಅಂತ ಇಟ್ಟುಕೊಂಡಿದ್ದೇನೆ ಎಂದಿದ್ದಾರೆ. ಇವರ ವಾಗ್ವಾದಕ್ಕೆ ಮನೆಮಂದಿ ಗಪ್‌ಚುಪ್‌ ಎಂದಿದ್ದಾರೆ. ಇನ್ಮೇಲೆ ಮನೆಯಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿಗಳ ಹಾವಳಿ ಹೇಗಿರುತ್ತದೆ? ಎಂದು ಕಾದು ನೋಡಬೇಕಿದೆ.