Tag: Gourishankar

  • ಗೌರಿ ಶಂಕರ್ ಅನರ್ಹತೆ ಪ್ರಕರಣ – ಮೇಲ್ಮನವಿ ಸಲ್ಲಿಸುತ್ತೇವೆ ಎಂದ ಸಿಎಂ ಇಬ್ರಾಹಿಂ

    ಗೌರಿ ಶಂಕರ್ ಅನರ್ಹತೆ ಪ್ರಕರಣ – ಮೇಲ್ಮನವಿ ಸಲ್ಲಿಸುತ್ತೇವೆ ಎಂದ ಸಿಎಂ ಇಬ್ರಾಹಿಂ

    ಬೆಂಗಳೂರು: ತುಮಕೂರು ಗ್ರಾಮಾಂತರ (Tumkauru Rural) ಶಾಸಕ ಗೌರಿ ಶಂಕರ್ (Gourishankar) ಅನರ್ಹತೆ ವಿರುದ್ದ ಹೈಕೋರ್ಟ್ ದ್ವಿಸದಸ್ಯ ಪೀಠಕ್ಕೆ ಮೇಲ್ಮನವಿ ಸಲ್ಲಿಸುತ್ತೇವೆ ಅಂತ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ(CM Ibrahim) ತಿಳಿಸಿದ್ದಾರೆ.

    ಕಲಬುರಗಿ ಹೈಕೋರ್ಟ್‌ನ (Kalaburagi Highcourt) ಏಕ ಸದಸ್ಯ ಪೀಠದ ತೀರ್ಪಿನ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಇದು ಏಕ ಸದಸ್ಯ ಪೀಠದ ಆದೇಶ. ಈ ಆದೇಶವನ್ನು ಪ್ರಶ್ನೆ ಮಾಡಿ ಮೇಲ್ಮನವಿ ಸಲ್ಲಿಸುತ್ತೇವೆ. ಅಲ್ಲಿ ಈ ಕೇಸ್‌ ನಿಲ್ಲುವುದಿಲ್ಲ ಎಂದು ಆಶಾವಾದ ವ್ಯಕ್ತಪಡಿಸಿದರು ಇದನ್ನೂ ಓದಿ: ಹಳೇ ಮೈಸೂರು ಭಾಗದಲ್ಲಿ ಪ್ರಾಬಲ್ಯ ಉಳಿಸಿಕೊಳ್ಳಲು ಜೆಡಿಎಸ್ ಸರ್ಕಸ್


    5 ವರ್ಷದ ಹಳೆ ಕೇಸ್ ಇದು.‌ ಈಗ ಬಹಿರಂಗವಾಗಿ ಹಣ ಹಂಚಿದರೂ ಏನು ಮಾಡುತ್ತಿಲ್ಲ. ನಮಗೆ ಈ ಬಗ್ಗೆ ಆತಂಕ ಇಲ್ಲ.ಗೌರಿ ಶಂಕರ್ ಗೆಲ್ಲುತ್ತಾರೆ. ಅದಕ್ಕೆ ಹೀಗೆಲ್ಲ ಮಾಡ್ತಿದ್ದಾರೆ. ರೋಡ್ ‌ನಲ್ಲಿ ಹೋಗೋವಾಗ ರಸ್ತೆ ಉಬ್ಬು ಇರುತ್ತದೆ. ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳಬಾರದು. ಆ ಸೀಟು ಚೆನ್ನಿಗಪ್ಪನ ಮನೆ ಸೀಟು, ಅವರು ಗೆಲ್ಲುತ್ತಾರೆ. ತೀರ್ಪಿನ ವಿರುದ್ದ ಮೇಲ್ಮನವಿ ಸಲ್ಲಿಸುತ್ತೇವೆ ಎಂದರು.

    ಗೌರಿ ಶಂಕರ್ ಶಾಸಕರಾಗಿ ಒಳ್ಳೆ ಸೇವೆ ಮಾಡಿದ್ದಾರೆ. ಮೊನ್ನೆ 50 ಸಾವಿರ ಜನ ಸೇರಿ ಸಭೆ ಮಾಡಿದ್ದೇವೆ. ಅ ಸೀಟು ಜೆಡಿಎಸ್ ಸೀಟು ಅಲ್ಲಿ ಜೆಡಿಎಸ್ ಗೆಲುವು ಶತಸಿದ್ದ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಗೌರಿ ಶಂಕರ್ ಅನರ್ಹವಾದರೆ ಅವರ ಪತ್ನಿಗೆ ಸೀಟು ಕೊಡ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು,‌ ಅದನ್ನ ಗೌರಿ ಶಂಕರ್ ತೀರ್ಮಾನ ಮಾಡ್ತಾರೆ. ಗೌರಿ ಶಂಕರ್ ಪತ್ನಿ ನಿಂತರೇ ಇನ್ನು ಹೆಚ್ಚು ಮತ ಬರುತ್ತೆ ಎಂದರು.

  • ದೇಶದಲ್ಲಿ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ರೆ ಬೆಲೆ ಇಲ್ಲ: ದೇವೇಗೌಡ

    ದೇಶದಲ್ಲಿ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ರೆ ಬೆಲೆ ಇಲ್ಲ: ದೇವೇಗೌಡ

    ತುಮಕೂರು: ದೇಶದಲ್ಲಿ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ರೆ ಬೆಲೆ ಇಲ್ಲ ಎಂದು ಮಾಜಿ ಪ್ರಧಾನಿ ದೇವೇಗೌಡರು ಹೇಳಿದ್ದಾರೆ.

    ಪರಿಷತ್ ಚುನಾವಣೆ ಹಿನ್ನೆಲೆ, ತುಮಕೂರು ತಾಲೂಕಿನ ಬಳಗೆರೆಯ ಶಾಸಕ ಗೌರಿಶಂಕರ್ ನಿವಾಸದಲ್ಲಿ ದೇವೇಗೌಡರು ಸುದ್ದಿಗೋಷ್ಠಿ ನಡೆಸಿ ಪ್ರಧಾನಿ ನರೇಂದ್ರ ಮೋದಿ ಭೇಟಿ ಮತ್ತು ಪರಿಷತ್ ಚುನಾವಣೆಯ ಬಗ್ಗೆ ಮಾತನಾಡಿದರು.

    ಪ್ರಧಾನಿ ನರೇಂದ್ರ ಮೋದಿ ಭೇಟಿ ವಿಚಾರವಾಗಿ ಮಾತನಾಡಿದ ಅವರು, ಪ್ರಧಾನಿಗೆ ಇರುವಂತಹ ಕಷ್ಟ ಒಂದು ಮಾತಲ್ಲಿ ಹೇಳೋಕೆ ಆಗಲ್ಲ. ಇಡೀ ಪ್ರಪಂಚವನ್ನ ಪೀಡಿಸ್ತಿರೋ ಕೊರೊನಾನ ಎದುರಿಸೋದು ಅಷ್ಟು ಸುಲಭ ಅಲ್ಲ. ನಮ್ಮ ದೇಶ ಚಿಕ್ಕ ದೇಶವಲ್ಲ, 130 ಕೋಟಿ ಜನಸಂಖ್ಯೆ ಇರೋ ದೇಶವಾಗಿದೆ. ಕೋವಿಡ್ ನಿರ್ವಹಣೆಯಲ್ಲಿ ಆರ್ಥಿಕ ಅವ್ಯವಹಾರ ಇದೆ ಎಂದು ಅಧಿಕೃತ ವಿರೋಧ ಪಕ್ಷ ಇದರ ಬಗ್ಗೆ ವ್ಯಾಖ್ಯಾನ ಮಾಡ್ತಿದೆ ಎಂದು ವಿರೋಧ ವ್ಯಕ್ತಪಡಿಸಿದರು. ಇದನ್ನೂ ಓದಿ: ರಸ್ತೆ ಗುಂಡಿ – ಎಎಪಿಯಿಂದ ಬೃಹತ್ ಸಹಿ ಸಂಗ್ರಹ ಅಭಿಯಾನ ಆರಂಭ

    ಎಂಎಲ್ ಸಿ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಅನಿಲ್‍ಕುಮಾರ್ ಅವರನ್ನು ಸ್ಪರ್ಧೆಗೆ ನಿಲ್ಲಿಸಿದ್ದೇವೆ. ಸ್ಥಳೀಯ ಸಂಸ್ಥೆಗಳ ಚುನಾಯಿತ ಮತದಾರರನ್ನು ಭೇಟಿಯಾಗುತ್ತಿದ್ದೇವೆ. 7 ಕ್ಷೇತ್ರಗಳಲ್ಲಿ ಮಾತ್ರ ನಾವು ಸ್ಪರ್ಧೆ ಮಾಡುತ್ತಿದ್ದೇವೆ. ಎಲ್ಲರೂ ಚುನಾವಣೆಯಲ್ಲಿ ಗೆಲ್ಲಲೇ ಬೇಕು. ಶಾಸಕರು, ಮಾಜಿ ಶಾಸಕರು, ಮುಖಂಡರು ಎಲ್ಲರು ಸೇರಿ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದರು.

    ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ತುಮಕೂರು ಕ್ಷೇತ್ರಗಳಲ್ಲಿ ಬಹಳ ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದೇವೆ. ವಿಜಯಪುರದಲ್ಲಿ 890, ಗುಲ್ಬರ್ಗಾದಲ್ಲಿ ಸಾವಿರ ಚಿಲ್ಲರೆ ವೋಟ್ ಗಳಿವೆ. ಬೀದರ್ ನಲ್ಲಿ 490, ರಾಯಚೂರಿನಲ್ಲಿ 890 ವೋಟ್ ಗಳಿವೆ. ಧಾರವಾಡ, ಗದಗ, ಹಾವೇರಿಯಲ್ಲಿ ವೋಟ್ ಗಳಿವೆ. ಅಲ್ಲಿ ನಾವು ಅಭ್ಯರ್ಥಿಗಳನ್ನು ಹಾಕಲು ಸಾಧ್ಯವಾಗಿಲ್ಲ. ಇಲ್ಲಿ ಕಾಂಗ್ರೆಸ್, ಬಿಜೆಪಿ ಅವರಿಗೆ ಹೆಚ್ಚಿನ ಮತಗಳಿವೆ. ಭಾನುವಾರ ಸಭೆ ನಡೆಸಿ ಧಾರವಾಡ, ಗದಗ ಹಾವೇರಿಯಲ್ಲಿ ಮತಗಳನ್ನು ಯಾರಿಗೆ ಕೊಡಬೇಕು ಎಂದು ತಿಳಿಸುತ್ತೇವೆ ಎಂದು ಹೇಳಿದರು.

    ದೇಶದಲ್ಲಿ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ರೆ ಬೆಲೆ ಇಲ್ಲ. ಇಲ್ಲಿ ಬಿಜೆಪಿ ಕಾಂಗ್ರೆಸ್ ಅವರು ಸತ್ಯವಂತರು ಎಂದು ಹೇಳೋರು ಇದ್ದರೆ ಚರ್ಚೆ ಮಾಡೋಣ. ಮಣ್ಣಿನಮಗ ಅಂತಾ ನನ್ನ ತಂದೆ ನನಗೆ ನಾಮಕರಣ ಮಾಡಿಲ್ಲ. ಯಾರು ನಾಮಕರಣ ಮಾಡಿದ್ರೋ ನನಗೆ ಗೊತ್ತಿಲ್ಲ. ಯಾರು ಹೇಳಿದ್ರೋ, ಯಾವಾಗ ಹೇಳಿದ್ರೋ ಗೊತ್ತಿಲ್ಲ. ಅದನ್ನ ಹೇಳಿಕೊಂಡು ಬರ್ತಿದ್ದಾರೆ, ಯಾರು ಅಂತಾ ಹುಡುಕಲಿ. ಹೀಗೆ ಹೇಳಿ ಅಂತಾ ನಾನು ಯಾರಿಗಾದರೂ ಹೇಳಿದ್ದೀನಾ. ಜನರಿಗೆ ನನ್ನ ಮೇಲೆ ಪ್ರೀತಿ ಹಾಗೂ ಹೋರಾಟದ ಮೇಲೆ ನಂಬಿಕೆಯಿಂದ ಹಾಗೆ ಕೂಗ್ತಾರೆ ಎಂದರು. ಇದನ್ನೂ ಓದಿ: ಸಾಮಾನ್ಯ ವ್ಯಕ್ತಿಯಲ್ಲ ಶಿವರಾಂ, ಅವರಂತೆ ಯಾರು ಮತ್ತೆ ಹುಟ್ಟಿ ಬರಲು ಸಾಧ್ಯವಿಲ್ಲ: ದ್ವಾರಕೀಶ್

    ಮಾಜಿ ಸಿಎಂ ಕುಮಾರಸ್ವಾಮಿ ಅವರು ಆ ಭಾಗದ ಮುಖಂಡರ ಸಭೆ ನಡೆಸಲಿದ್ದಾರೆ. ಯಾರಿಗೆ ಬೆಂಬಲ ನೀಡಬೇಕು ಎಂದು ಭಾನುವಾರ ತೀರ್ಮಾನ ಮಾಡುತ್ತೇವೆ. ತುಮಕೂರು ಜಿಲ್ಲೆಯ ಜವಾಬ್ದಾರಿಯನ್ನು ನಾನು ತೆಗೆದುಕೊಂಡಿದ್ದೇನೆ. ಈ ಚುನಾವಣೆಯಲ್ಲಿ ಸ್ವಂತ ಶಕ್ತಿಯಿಂದ ಗೆಲ್ಲುವ ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದರು.

     

  • ಉಚಿತ ಕಬ್ಬಿಗಾಗಿ ಕಾದಾಟ – ಮುಗಿಬಿದ್ದು ಕಿತ್ತಾಡಿಕೊಂಡ ಜನ

    ಉಚಿತ ಕಬ್ಬಿಗಾಗಿ ಕಾದಾಟ – ಮುಗಿಬಿದ್ದು ಕಿತ್ತಾಡಿಕೊಂಡ ಜನ

    ತುಮಕೂರು: ಸಂಕ್ರಾಂತಿ ಹಬ್ಬದ ಪ್ರಯುಕ್ತ ತುಮಕೂರಿನಲ್ಲಿ ಉಚಿತವಾಗಿ ಹಂಚುತ್ತಿದ್ದ ಕಬ್ಬಿಗಾಗಿ ಜನರು ಮುಗಿಬಿದ್ದು ಕಿತ್ತಾಡಿಕೊಂಡಿದ್ದಾರೆ.

    ತುಮಕೂರು ತಾಲೂಕಿನ ಮಲ್ಲಸಂದ್ರದ ಎಸ್.ಕೆ ಕಲ್ಯಾಣ ಮಂಟಪದಲ್ಲಿ ಕಬ್ಬಿಗಾಗಿ ಕದನವೇ ನಡೆದಿದೆ. ಗ್ರಾಮಾಂತರ ಜೆಡಿಎಸ್ ಶಾಸಕ ಗೌರಿಶಂಕರ್ ತಮ್ಮ ಆಪ್ತ ಹಾಲನೂರು ಅನಂತ್ ಅವರ ಹುಟ್ಟು ಹಬ್ಬ ಹಾಗೂ ಸಂಕ್ರಾಂತಿ ಪ್ರಯುಕ್ತವಾಗಿ ಸಾರ್ವಜನಿಕರಿಗೆ ಕಬ್ಬು ವಿತರಣೆ ಮಾಡುತ್ತಿದ್ದರು.

    ಸುಮಾರು 1.5 ಲಕ್ಷಕ್ಕೂ ಹೆಚ್ಚು ಕಬ್ಬನ್ನು ಲಾರಿಯಲ್ಲಿ ತಂದು ವಿತರಣೆ ಮಾಡುತ್ತಿದ್ದರು. ಕಬ್ಬಿನ ಜೊತೆಗೆ ಸೀರೆ, ಬಾಗಿನವೂ ನೀಡಲಾಗುತಿತ್ತು. ಉಚಿತ ವಿತರಣೆಯ ಸುದ್ದಿ ತಿಳಿದ ಸಾವಿರಾರು ಸಾರ್ವಜನಿಕರು ಹುಟ್ಟುಹಬ್ಬ ಕಾರ್ಯಕ್ರಮಕ್ಕೆ ಬಂದಿದ್ದರು. ಈ ವೇಳೆ ಕಬ್ಬು ತೆಗೆದುಕೊಳ್ಳಲು ತಾ ಮುಂದು ನಾ ಮುಂದು ಎಂದು ಮುಗಿಬಿದ್ದಿದ್ದಾರೆ. ಕೆಲವರು ಪರಸ್ಪರ ಕಿತ್ತಾಟ ಕೂಡ ಮಾಡಿಕೊಂಡಿದ್ದಾರೆ. ಜನಸಂದಣಿಯಲ್ಲಿ ಪುಟ್ಟ ಮಕ್ಕಳು, ವೃದ್ಧೆಯರು ಸಿಲುಕಿ ಪ್ರಯಾಸಪಟ್ಟಿದ್ದಾರೆ.

  • ನನ್ನಕ್ಳು ಜೆಡಿಎಸ್‍ನವರನ್ನು ಹೆದರಿಸ್ಬೇಕು- ಹೇಳಿಕೆ ಸಮರ್ಥಿಸಿಕೊಂಡ್ರು ಸುರೇಶ್ ಗೌಡ

    ನನ್ನಕ್ಳು ಜೆಡಿಎಸ್‍ನವರನ್ನು ಹೆದರಿಸ್ಬೇಕು- ಹೇಳಿಕೆ ಸಮರ್ಥಿಸಿಕೊಂಡ್ರು ಸುರೇಶ್ ಗೌಡ

    ತುಮಕೂರು: ಯಾವನ್ ಬರ್ತಾನೋ ಬರ್ಲಿ, ನನ್ಮಕ್ಳು ಜೆಡಿಎಸ್‍ನವರನ್ನ ಹೆದರಿಸ್ಬೇಕು ಎಂಬ ಹೇಳಿಕೆಗೆ ಮಾಜಿ ಶಾಸಕ ಸುರೇಶ್ ಗೌಡ ಸಮರ್ಥಿಸಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಗೆ ಮಾತನಾಡಿದ ಸುರೇಶ್ ಗೌಡ, ನಾನೇ ಮಾತನಾಡಿರುವುದು. ನಾನು ಮಾತನಾಡಿದ್ದು ನಿಜ. ಅವರು ಈಗ ನಮ್ಮ ಕ್ಷೇತ್ರದ ಕೌರವನಾಗಿದ್ದಾನೆ. ಆತ ಚುನಾವಣಾ ಸಮಯದಲ್ಲಿ ಹಣ, ಹೆಂಡ, ಸೀರೆ ಹಂಚುತ್ತಾರೆ. ಚುನಾವಣಾ ಸಮಯದಲ್ಲಿ ಜನರಿಗೆ ಹಣದ ಆಮೀಶವೊಡ್ಡಿ ಕಳೆದ ಚುನಾವಣೆಯಲ್ಲಿ ಗೆದಿದ್ದಾರೆ. ಈ ವಿಷಯ ಈಗ ಕೋರ್ಟ್‍ನಲ್ಲಿ ಇದೆ. ಈ ಚುನಾವಣೆಯಲ್ಲೂ ಹೀಗೆ ಮಾಡುತ್ತಿದ್ದಾರೆ. ಹಾಗಾಗಿ ನಾನು ಊರಿಗೆ ಸೇರಿಸಬೇಡಿ. ಅವರ ಏನು ಕೆಲಸ ಮಾಡಿದ್ದಾರೆ ಎಂದು ಕೇಳಿ ಎಂದು ಹೇಳಿದೆ.

    ಹೇಮಾವತಿ ನೀರನ್ನು ನಮ್ಮ ಜೆಲ್ಲೆಗೆ ಒಂದು ಹನಿ ಕೂಡ ಬಿಟ್ಟಿಲ್ಲ. ಕೆರೆ ಪಕ್ಕದಲ್ಲಿದ್ದ ರೈತರು 5 ಕೋಟಿ ರೂ. ಒಟ್ಟು 50 ಕೋಟಿ ರೂ. ಬೋರ್ ವೆಲ್ ಹಾಕಿಸಿದ್ದಾರೆ. ಹಾಗಾಗಿ ದೇವೇಗೌಡ ಅವರನ್ನು ಕರೆದುಕೊಂಡು ಬಂದಾಗ ಪ್ರಶ್ನೆ ಮಾಡಿ. ನೀರು ಬಿಡದ ಶಾಸಕ, ಕೈ ಸಿಗದ ಶಾಸಕ ನೀನು ಊರಿಗೆ ಯಾಕೆ ಬರುತ್ತೀಯಾ. ಯಾವ ನೈತಿಕತೆಯಿಂದ ದೇವೇಗೌಡ ಅವರನ್ನು ಇಲ್ಲಿ ಕರೆದುಕೊಂಡು ಬಂದಿದ್ದೀಯಾ. ನೀನೇ ಕೆಲಸ ಮಾಡಿಲ್ಲ. ನಮ್ಮ ದುಡ್ಡಿನಲ್ಲಿ ಹೆಂಡ, ಸೀರೆ ಕೊಟ್ಟು ರಾಜಕಾರಣ ಮಾಡುತ್ತಿದ್ದೀಯಾ. ಇದನ್ನು ವಿರೋಧಿಸಿ ಎಂದು ರೈತರಿಗೆ ಸಲಹೆ ನೀಡಿದೆ.

    ನೇರವಾಗಿ ಜನರಿಗೆ ಹಣ, ಸೀರೆ, ಮೂಗುಬಟ್ಟು, ಕೋಳಿ ಮಾಂಸ, ಎಣ್ಣೆ ಬಾಟಲ್‍ಗಳನ್ನು ನೀಡುತ್ತಾರೆ. ಪ್ರಜಾಪ್ರಭುತ್ವದಲ್ಲಿ ಚುನಾವಣೆಯನ್ನು ನೇರವಾಗಿ ಸ್ಪರ್ಧಿಸಬೇಕು. ಲೋಕಕಲ್ಯಾಣ ಮಾಡಿ ವೋಟ್ ಕೇಳಬೇಕು. ಆಮೀಶವೊಡ್ಡಿ ವೋಟ್ ಕೇಳುವುದು ಸರಿಯಲ್ಲ. ನಾನು ಭಾವನಾತ್ಮಕವಾಗಿ ಮಾತನಾಡಿದ್ದೇನೆ. ರಾಜಕೀಯ ವಿಷಯದಲ್ಲಿ ನಮ್ಮ ಜನರಿಗೆ ಬೇಗ ಅರ್ಥವಾಗುವುದಿಲ್ಲ. ನಮ್ಮ ನೋವುಗಳನ್ನು ವ್ಯಕ್ತಪಡಿಸಿದ್ದಾಗ ಜನರು ಅವರಿಗೆ ತಿರುಗೇಟು ನೀಡುತ್ತಾರೆ ಎಂದು ಸುರೇಶ್ ಗೌಡ ಹೇಳಿದ್ದಾರೆ.