Tag: Gouribidanur

  • ಮೃತ ಮಹಿಳೆಯ ಗುರುತಿಗಾಗಿ ಪೊಲೀಸರ ಹರಸಾಹಸ – ಗುರುತು ಪತ್ತೆಹಚ್ಚಿದವರಿಗೆ ಬಹುಮಾನ ಘೋಷಣೆ

    ಮೃತ ಮಹಿಳೆಯ ಗುರುತಿಗಾಗಿ ಪೊಲೀಸರ ಹರಸಾಹಸ – ಗುರುತು ಪತ್ತೆಹಚ್ಚಿದವರಿಗೆ ಬಹುಮಾನ ಘೋಷಣೆ

    – ಮಹಿಳೆ ಕೊಲೆ ಮಾಡಿ ಸುಟ್ಟು ಹಾಕಿರೋ ಹಂತಕರು

    ಚಿಕ್ಕಬಳ್ಳಾಪುರ: ಜಿಲ್ಲೆಯ ಗೌರಿಬಿದನೂರು (Gouribidanur)  ಮಾರ್ಗದ ಕಣಿವೆ ಬಳಿ ಪತ್ತೆಯಾಗಿದ್ದ ಮಹಿಳೆಯ ಮೃತದೇಹದ ಗುರುತು ಪತ್ತೆಹಚ್ಚುವಲ್ಲಿ ಪೊಲೀಸರು ನಿರತರಾಗಿದ್ದು, ಪತ್ತೆ ಹಚ್ಚಿದವರಿಗೆ ಚಿಕ್ಕಬಳ್ಳಾಪುರ ಪೊಲೀಸ್ (Chikkaballapura Police) ಇಲಾಖೆಯಿಂದ ಬಹುಮಾನ ಘೋಷಿಸಿದ್ದಾರೆ.ಇದನ್ನೂ ಓದಿ: ಯಶವಂತಪುರ ಫ್ಲೈಓವರ್‌ನಲ್ಲಿ ಸಾಲು ಸಾಲು ಅಪಘಾತ – 18 ಜಿಲ್ಲೆ ಸಂಪರ್ಕಿಸುವ ಪ್ಲೈಓವರ್ ಬಳಿ ಸೂಚನಾ ಫಲಕಗಳೇ ಇಲ್ಲ

    ಅ.10 ರಂದು ಜಿಲ್ಲೆಯ ಗೌರಿಬಿದನೂರು ಮಾರ್ಗದ ಕಣಿವೆ ಬಳಿ ಮಹಿಳೆಯ ಮೃತದೇಹವೊಂದು ಪತ್ತೆಯಾಗಿತ್ತು. ಅಪರಿಚಿತ ಮಹಿಳೆಯನ್ನ ಕೊಲೆ ಮಾಡಿ ಸುಟ್ಟು ಹಾಕಿದ್ದರು. ಸಂಪೂರ್ಣವಾಗಿ ಸುಟ್ಟು ಕರಕಲಾಗಿ ಬರಿ ಮೂಳೆ, ಬಟ್ಟೆಬರೆ ಹಾಗೂ ಮೂಗುತಿ ಪತ್ತೆಯಾಗಿತ್ತು.

    ಪೊಲೀಸರಿಗೆ ಮೃತ ಮಹಿಳೆಯ ಗುರುತು ಪತ್ತೆ ಹಚ್ಚುವುದೇ ಸವಾಲಾಗಿದ್ದು, ಕಂಪ್ಯೂಟರ್ ಆಧಾರಿತ ಮಹಿಳೆಯ ತ್ರೀಡಿ ಇಮೇಜ್ ರಚಿಸಲು ಮೊರೆ ಹೋಗಿದ್ದಾರೆ. ಅರೆಬರೆ ಬಟ್ಟೆ ಬರೆ, ಮೂಗುತಿ, ಬಳೆ ಆಧರಿಸಿ ಮಹಿಳೆಯ ಗುರುತು ಪತ್ತೆಗೆ ಮನವಿ ಮಾಡಲಾಗಿದ್ದು, ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಮಹಿಳೆಯ ಗುರುತು ಪತ್ತೆಹಚ್ಚಿದರೆ ಬಹುಮಾನ ನೀಡುವುದಾಗಿ ಚಿಕ್ಕಬಳ್ಳಾಪುರ ಎಸ್ಪಿ ಕುಶಾಲ್ ಚೌಕ್ಸಿ ತಿಳಿಸಿದ್ದಾರೆ.ಇದನ್ನೂ ಓದಿ: ಪಾಕಿಸ್ತಾನಕ್ಕೆ ವಾಯುಮಾಲಿನ್ಯ ಕಂಟಕ – ಜನರ ಓಡಾಟಕ್ಕೆ ನಿಷೇಧ, ಅಂಗಡಿ-ಮಾರ್ಕೆಟ್‌ ತೆರೆಯಲು ಮಿತಿ

  • ಭಾರೀ ಸ್ಫೋಟಕ್ಕೆ ಮನೆ ಸಂಪೂರ್ಣ ಛಿದ್ರ ಛಿದ್ರ- ದಂಪತಿಗೆ ಗಂಭೀರ ಗಾಯ

    ಭಾರೀ ಸ್ಫೋಟಕ್ಕೆ ಮನೆ ಸಂಪೂರ್ಣ ಛಿದ್ರ ಛಿದ್ರ- ದಂಪತಿಗೆ ಗಂಭೀರ ಗಾಯ

    ಚಿಕ್ಕಬಳ್ಳಾಪುರ: ಭಾರೀ ಸ್ಫೋಟದ ತೀವ್ರತೆಗೆ ಇಡೀ ಮನೆ ಸಂಪೂರ್ಣ ಛಿದ್ರಗೊಂಡಿದ್ದು, ದಂಪತಿ ಗಂಭೀರ ಗಾಯಗೊಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಕಲ್ಲೂಡಿ ಗ್ರಾಮದಲ್ಲಿ ನಡೆದಿದೆ.

    ವಿನಯ್ ಹಾಗೂ ನಂದಿನಿ ಗಂಭೀರ ಗಾಯಗೊಂಡವರು. ಶಾಂತರಾಜು ಅವರ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ವಿನಯ್ ಹಾಗೂ ನಂದಿನಿ ವಾಸವಾಗಿದ್ದರು. ಬೆಳಗ್ಗಿನ ಜಾವ ಮನೆಯಲ್ಲಿ ಸ್ಫೋಟಗೊಂಡಿದ್ದು,  ಸ್ಫೋಟದ ತೀವ್ರತೆಗೆ ಮನೆ ಕುಸಿದುಬಿದ್ದು, ಮನೆಯಲ್ಲಿದ್ದ ವಸ್ತುಗಳೆಲ್ಲವೂ ಚೆಲ್ಲಾಪಿಲ್ಲಿಯಾಗಿವೆ.

    ಮನೆಯಲ್ಲಿದ್ದ ವಿನಯ್ ಹಾಗೂ ನಂದಿನಿಗೆ ಸುಟ್ಟು ಗಾಯಗಳಾಗಿವೆ. ವಿನಯ್ ತಲೆ ಮೇಲೆ ಕಲ್ಲು ಬಿದ್ದು ಗಂಭೀರ ಗಾಯವಾಗಿದೆ. ಇಬ್ಬರನ್ನೂ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಅಕ್ಕಪಕ್ಕದ ಮನೆಗಳಿಗೂ ಹಾನಿಯಾಗಿದ್ದು, ವಿದ್ಯುತ್ ಕಂಬವೂ ಹಾನಿಗೊಳಗಾಗಿದೆ. ಇದನ್ನೂ ಓದಿ: ಉಕ್ರೇನ್‍ನಿಂದ 2ನೇ ವಿಮಾನದಲ್ಲಿ ದೆಹಲಿಗೆ ಬಂದ 250 ಭಾರತೀಯರು

    ಘಟನಾ ಸ್ಥಳಕ್ಕೆ ಗೌರಿಬಿದನೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳಕ್ಕೆ ಬೆಂಗಳೂರಿನಿಂದ ಎಫ್‍ಎಸ್‍ಎಲ್ ತಂಡ ಸಹ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ. ಮೇಲ್ನೋಟಕ್ಕೆ ಎಲ್‍ಪಿಜಿ ಸಿಲಿಂಡರ್ ಸೋರಿಕೆಯಾಗಿ ಸ್ಪೋಟ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: ಅಪ್ಪ-ಅಮ್ಮ ಬಳಿ ಸುಳ್ಳು ಹೇಳಿದ್ದೆವು- ಉಕ್ರೇನ್ ಅನುಭವ ಹಂಚಿಕೊಂಡ ವಿದ್ಯಾರ್ಥಿನಿ

  • ಕೃಷಿ ಹೊಂಡದಲ್ಲಿ ಮುಳುಗಿ ಇಬ್ಬರು ಬಾಲಕರ ಸಾವು

    ಕೃಷಿ ಹೊಂಡದಲ್ಲಿ ಮುಳುಗಿ ಇಬ್ಬರು ಬಾಲಕರ ಸಾವು

    ಚಿಕ್ಕಬಳ್ಳಾಪುರ: ಕೃಷಿಹೊಂಡದಲ್ಲಿ ಮುಳುಗಿ ಇಬ್ಬರು ಬಾಲಕರು ಸಾವನ್ನಪ್ಪಿರುವ ದಾರುಣ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ವಾಟದಹೊಸಹಳ್ಳಿ ಬಳಿಯ ಹಳೆ ಊರು ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಲಿಖಿತ್(14) ಹಾಗೂ ಹರಿ ಚರಣ್(13) ಮೃತರು. ಮೃತ ಬಾಲಕರು ನಿನ್ನೆ ಮಧ್ಯಾಹ್ನ 3 ಗಂಟೆ ವೇಳೆ ಈಜಾಡಲು ಗ್ರಾಮದ ಹೊರವಲಯದ ಜಯಣ್ಣ ಎಂಬುವವರಿಗೆ ಸೇರಿದ ಕೃಷಿಹೊಂಡದ ಬಳಿ ತೆರಳಿದ್ದಾರೆ. ಆದರೆ ಇಬ್ಬರು ಬಾಲಕರಿಗೂ ಈಜು ಬಾರದೇ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಗಣೇಶ ಹಬ್ಬದಲ್ಲಿ ನಿರಾಶ್ರಿತರೊಂದಿಗೆ ಕುಣಿದು ಕುಪ್ಪಳಿಸಿದ ತಹಶೀಲ್ದಾರ್

    ಸಂಜೆಯಾದರೂ ಬಾಲಕರು ಮನೆಗೆ ಬಾರದ ಕಾರಣ ಪೋಷಕರು ಹುಡುಕಾಡಿದಾಗ ಕೃಷಿಹೊಂಡದಲ್ಲಿ ಬಾಲಕರ ಮೃತ ದೇಹಗಳು ಪತ್ತೆಯಾಗಿದೆ. ಇನ್ನೂ ಗ್ರಾಮಸ್ಥರೇ ಮೃತದೇಹಗಳನ್ನು ಹೊರತೆಗೆದು ಮೃತರ ಮನೆ ಬಳಿ ತೆಗೆದುಕೊಂಡು ಹೋಗಿದ್ದು, ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ. ಇದನ್ನೂ ಓದಿ:  ಇಂದಿನಿಂದ ಮಳೆಗಾಲದ ಅಧಿವೇಶನ ಆರಂಭ- ಕಾಂಗ್ರೆಸ್, ಬಿಜೆಪಿ ಮಧ್ಯೆ ಗದ್ದುಗೆ ಗುದ್ದಾಟ

    ವಿಷಯ ತಿಳಿದ ಗೌರಿಬಿದನೂರು ಸಿಪಿಐ ಶಶಿಧರ್ ಹಾಗೂ ಗ್ರಾಮಾಂತರ ಠಾಣಾ ಪಿಎಸ್‍ಐ ವಿಜಯ್ ಮೃತ ಕುಟುಂಬಸ್ಥರ ಮನವೊಲಿಸಿ ಮೃತದೇಹಗಳನ್ನು ತಡರಾತ್ರಿ ಗೌರಿಬಿದನೂರು ಸರ್ಕಾರಿ ಆಸ್ಪತ್ರೆ ಯ ಶವಾಗಾರಕ್ಕೆ ರವಾನೆ ಮಾಡಿದ್ದಾರೆ. ನಂತರ ಮರಣೋತ್ತರ ಪರೀಕ್ಷೆ ನಡೆಸಲು ಮುಂದಾಗಿದ್ದಾರೆ. ಇದನ್ನೂ ಓದಿ:  ನಾನು ಕೂಡು ಒಕ್ಕಲಿಗ ಪಂಗಡದವನು, ಆದರೆ ನಾವು ಲಿಂಗಾಯತರು: ಎಂ.ಬಿ.ಪಾಟೀಲ್

    ಇಬ್ಬರು ಬಾಲಕರು ಅಕ್ಕಪಕ್ಕದ ಮನೆಯವರಾಗಿದ್ದು, ಸ್ನೇಹಿತರಾಗಿದ್ದರು. ಸಾವಿನಲ್ಲೂ ಸಹ ಇಬ್ಬರು ಒಂದಾಗಿ ಜೀವ ಬಿಟ್ಟಿದ್ದಾರೆ. ಸದ್ಯ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಅವನನ್ನೇ ಮದ್ವೆ ಆಗ್ತೀನಿ- ಚಿಕ್ಕಬಳ್ಳಾಪುರದಲ್ಲಿ ಮರ್ಯಾದಾ ಹತ್ಯೆ

    ಅವನನ್ನೇ ಮದ್ವೆ ಆಗ್ತೀನಿ- ಚಿಕ್ಕಬಳ್ಳಾಪುರದಲ್ಲಿ ಮರ್ಯಾದಾ ಹತ್ಯೆ

    -ಕತ್ತು ಹಿಸುಕಿ ಕೊಂದು ಕಲ್ಲು ಕಟ್ಟಿ ಕೆರೆಗೆ ಎಸೆದ್ರು
    -ಅಂತರ್ಜಾತಿ ಮದ್ವೆಗೆ ಪೋಷಕರ ವಿರೋಧ

    ಚಿಕ್ಕಬಳ್ಳಾಪುರ: ಅಂತರ್ಜಾತಿ ಯುವಕನನ್ನು ಪ್ರೀತಿಸಿದ ಯುವತಿಯನ್ನು ಪೋಷಕರು ಕೊಲೆಗೈದಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನ ಗಡಿ ಗ್ರಾಮದಲ್ಲಿ ನಡೆದಿದೆ.

    ನೆರೆಯ ಆಂಧ್ರಪ್ರದೇಶ ಗೌರಿಬಿದನೂರು ಗಡಿಭಾಗದ ತೂಮಕುಂಟೆ ಗ್ರಾಮದ 18 ವರ್ಷದ ಸಂಧ್ಯಾ ಮೃತ ಯುವತಿ. ಮೃತ ಸಂಧ್ಯಾ ತಾಯಿ ರಾಮಾಂಜಿನಮ್ಮ, ಅಣ್ಣ ಅಶೋಕ್, ಅಕ್ಕ ನೇತ್ರಾವತಿ ಹಾಗೂ ಬಾವ ಬಾಲಕೃಷ್ಣ ಸೇರಿ ಕೊಲೆ ಮಾಡಿದ್ದಾರೆ. ಕೊಲೆಯ ಬಳಿಕ ಮೃತದೇಹಕ್ಕೆ ದೊಡ್ಡ ಗಾತ್ರದ ಕಲ್ಲು ಕಟ್ಟಿ ಗೌರಿಬಿದನೂರು ತಾಲೂಕು ಹುಲಿಕುಂಟೆ ಗ್ರಾಮದ ಬಳಿ ಕೆರೆಯಲ್ಲಿ ಬಿಸಾಡಿದ್ದರು. ಜೂನ್ 23ರಂದು ಮೃತದೇಹ ಪತ್ತೆಯಾದಾಗ ಪ್ರಕರಣ ಬೆಳಕಿಗೆ ಬಂದಿದೆ.

    ಸಂದ್ಯಾಳ ತಾಯಿ, ಸೋದರ, ಅಕ್ಕ ಮತ್ತು ಬಾವ

    ಮೃತ ಸಂಧ್ಯಾ ಎರಡ್ಮೂರು ವರ್ಷಗಳ ಹಿಂದೆ ಅಂತರ್ಜಾತಿ ಯುವಕನೊಬ್ಬನನ್ನ ಪ್ರೀತಿಸುತ್ತಿದ್ದು, ಆತನ ಜೊತೆ ಪರಾರಿಯಾಗಿದ್ದಳು. ಈ ಸಂಬಂಧ ಹಿಂದೂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಅಪ್ರಾಪ್ತೆ ಸಂಧ್ಯಾ ಜೊತೆ ಪರಾರಿಯಾಗಿದ್ದ ಪ್ರಕರಣ ಸಂಬಂದ ಆರೋಪಿ ಜೈಲು ಶಿಕ್ಷೆಗೆ ಗುರಿಯಾಗಿದ್ದು ಜೈಲುವಾಸ ಅನುಭಸುತ್ತಿದ್ದಾನೆ.

    ಇತ್ತ ಸಂಧ್ಯಾ ಮನೆಯವರು ಈಕೆಗೆ ಬೇರೊಂದು ಮದುವೆ ಮಾಡಲು ವರನನ್ನ ಹುಡುಕುತ್ತಿದ್ದು ಇದು ಈಕೆಗೆ ಇಷ್ಟವಿರಲಿಲ್ಲ. ತನ್ನ ಪ್ರಿಯಕರನನ್ನೇ ಮದುವೆಯಾಗುವುದಾಗಿ ಪಟ್ಟು ಹಿಡಿದ್ದಳಂತೆ. ಇದರಿಂದ ರೋಸಿ ಹೋದ ಮೃತ ಸಂಧ್ಯಾಳ ಪೋಷಕರು ಕತ್ತು ಹಿಸುಕಿ ಆಕೆಯನ್ನ ಕೊಲೆ ಮಾಡಿ ತದನಂತರ ಮೃತದೇಹವನ್ನ ಗೌರಿಬಿದನೂರು ತಾಲೂಕು ಹುಲಿಕುಂಟೆ ಗ್ರಾಮದ ಬಳಿ ಕೆರೆಯಲ್ಲಿ ಆಕೆಯ ಮೃತದೇಹಕ್ಕೆ ದೊಡ್ಡ ಸೈಜುಗಲ್ಲು ಕಟ್ಟಿ ಹಾಕಿ ಬಿಸಾಡಿದ್ದರು.

    ಜೂನ್ 23 ರಂದು ಮೃತದೇಹ ಪತ್ತೆಯಾಗಿ ಪ್ರಕರಣ ದಾಖಲಿಸಿಕೊಂಡ ಗೌರಿಬಿದನೂರು ಗ್ರಾಮಾಂತರ ಸಿಪಿಐ ರವಿಕುಮಾರ್, ಪ್ರಕರಣದಲ್ಲಿನ ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ತಾಯಿ, ಅಣ್ಣ, ಅಕ್ಕ, ಭಾವನನ್ನ ಬಂಧಿಸಿರುವ ಪೊಲೀಸರು ಪ್ರಕರಣದಲ್ಲಿ ತಂದೆಯ ಪಾತ್ರದ ಬಗ್ಗೆ ಮತ್ತಷ್ಟು ವಿಚಾರಣೆ ಮುಂದುವರೆಸಿದ್ದಾರೆ.

  • ಖಾಸಗಿ ಶಾಲೆಯ ಶಿಕ್ಷಕಿ ಆತ್ಮಹತ್ಯೆ

    ಖಾಸಗಿ ಶಾಲೆಯ ಶಿಕ್ಷಕಿ ಆತ್ಮಹತ್ಯೆ

    ಚಿಕ್ಕಬಳ್ಳಾಪುರ: ಖಾಸಗಿ ಶಾಲಾ ಶಿಕ್ಷಕಿಯೊಬ್ಬರು ತಮ್ಮ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅನಾರೋಗ್ಯ ಸಮಸ್ಯೆ ಹಿನ್ನೆಲೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.

    ಚಿಕ್ಕಬಳ್ಳಾಪುರದ ಗೌರಿಬಿದನೂರು ನಗರದ ಕರೇಕಲ್ಲಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಖಾಸಗಿ ಶಾಲಾ ಶಿಕ್ಷಕಿಯಾಗಿದ್ದ ಜ್ಯೋತಿ (33) ಆತ್ಮಹತ್ಯೆಗೆ ಶರಣಾಗಿದ್ದಾರೆ. ಶಿಕ್ಷಕಿ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಬಹುಶಃ ಅನಾರೋಗ್ಯ ಹಿನ್ನೆಲೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಆದರೆ ಆತ್ಮಹತ್ಯಗೆ ನಿಖರ ಕಾರಣ ಏನು ಎಂಬುದು ತಿಳಿದು ಬಂದಿಲ್ಲ.

    ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಗೌರಿಬಿದನೂರು ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸ್ಥಳೀಯರು ಹಾಗೂ ಮನೆಮಂದಿಯಿಂದ ಶಿಕ್ಷಕಿಯ ಬಗ್ಗೆ ಮಾಹಿತಿ ಪಡೆದಿದ್ದಾರೆ.

  • ಚಿಕ್ಕಬಳ್ಳಾಪುರ, ಗೌರಿಬಿದನೂರುನಲ್ಲಿ ಸದ್ಯಕ್ಕಿಲ್ಲ ಎಣ್ಣೆ ಭಾಗ್ಯ – ಮದ್ಯಪ್ರಿಯರಿಗೆ ನಿರಾಸೆ

    ಚಿಕ್ಕಬಳ್ಳಾಪುರ, ಗೌರಿಬಿದನೂರುನಲ್ಲಿ ಸದ್ಯಕ್ಕಿಲ್ಲ ಎಣ್ಣೆ ಭಾಗ್ಯ – ಮದ್ಯಪ್ರಿಯರಿಗೆ ನಿರಾಸೆ

    ಚಿಕ್ಕಬಳ್ಳಾಪುರ: ಇಂದು ಬೆಳಗ್ಗೆ 9 ಗಂಟೆಗೆ ಮದ್ಯದಂಗಡಿ ಬಾಗಿಲು ತೆರೆಯುತ್ತೆ ಅಂತ ಕಾಯುತ್ತಿದ್ದ ಚಿಕ್ಕಬಳ್ಳಾಪುರ ಹಾಗೂ ಗೌರಿಬಿದನೂರು ನಗರದ ಮದ್ಯಪಾನ ಪ್ರಿಯರಿಗೆ ನಿರಾಸೆಯಾಗಿದೆ.

    ಚಿಕ್ಕಬಳ್ಳಾಪುರ ನಗರದ 10 ಹಾಗೂ ಗೌರಿಬಿದನೂರು ನಗರದ 6 ಮದ್ಯದಂಗಡಿಗಳನ್ನ ಸದ್ಯಕ್ಕೆ ತೆರೆಯದಂತೆ ಅಬಕಾರಿ ಇಲಾಖೆ ಮೌಖಿಕ ಆದೇಶ ನೀಡಿದೆ. ಅಂದಹಾಗೆ ಚಿಕ್ಕಬಳ್ಳಾಪುರ ಹಾಗೂ ಗೌರಿಬಿದನೂರು ನಗರದಲ್ಲಿ ಕೊರೊನಾ ವೈರಸ್ ಕಂಟೈನ್‍ಮೆಂಟ್ ಝೋನ್‍ಗಳಿದ್ದು, ಈ ಎರಡು ನಗರಗಳು ಸಹ ಬಫರ್ ಝೋನ್ ವ್ಯಾಪ್ತಿಯಲ್ಲಿವೆ. ಹೀಗಾಗಿ ಜಿಲ್ಲಾಧಿಕಾರಿಗಳ ಜೊತೆ ಸಭೆ ನಡೆಸಿ ಚಿಕ್ಕಬಳ್ಳಾಪುರ ಹಾಗೂ ಗೌರಿಬಿದನೂರು ನಗರದಲ್ಲಿ ಮದ್ಯದಂಗಡಿಗಳನ್ನ ತೆರೆಯುವುದಾ ಅಥವಾ ಬೇಡವಾ ಎಂಬುದನ್ನ ನಿರ್ಧರಿಸುವುದಾಗಿ ಅಬಕಾರಿ ಡಿ ಸಿ ನರೇಂದ್ರ ಅವರು ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

    ಇತ್ತ ಇಂದಿನಿಂದ ಮದ್ಯದಂಗಡಿ ಆರಂಭ ಮಾಡಬಹುದು ಅಂತ ತಡೆಗೋಡೆಗಳನ್ನ ಕಟ್ಟಿ, ಬಾಕ್ಸ್ ಹಾಕಿ ಸಕಲ ಸಿದ್ಧತೆಗಳನ್ನ ಮದ್ಯದಂಗಡಿ ಮಾಲೀಕರು ಮಾಡಿಕೊಂಡಿದ್ದರು. ಆದ್ರೆ ಸದ್ಯ ಮದ್ಯ ಮಾರಾಟಕ್ಕೆ ಬ್ರೇಕ್ ಹಾಕಿದ ಹಿನ್ನೆಲೆ ಮದ್ಯ ಸಿಗುತ್ತೆ ಅಂತ ಬಂದಿದ್ದ ಮದ್ಯಪ್ರಿಯರು ಗ್ರಾಮೀಣ ಭಾಗಗಳ ಮದ್ಯದಂಗಡಿಗಳತ್ತ ಮುಖ ಮಾಡಿದ್ದಾರೆ.

  • ಗೌರಿಬಿದನೂರಿನಲ್ಲಿ ಕೊರೊನಾ ಸೋಂಕಿತ ಪತ್ತೆ – ತಾಲೂಕಿನಾದ್ಯಾಂತ 144 ಸೆಕ್ಷನ್

    ಗೌರಿಬಿದನೂರಿನಲ್ಲಿ ಕೊರೊನಾ ಸೋಂಕಿತ ಪತ್ತೆ – ತಾಲೂಕಿನಾದ್ಯಾಂತ 144 ಸೆಕ್ಷನ್

    – ಚಿಕಿತ್ಸೆ ನೀಡಿದ ವೈದ್ಯರು ಹೋಂ ಐಸೋಲೇಷನ್‍ಗೆ

    ಚಿಕ್ಕಬಳ್ಳಾಪುರ: ಜಿಲ್ಲೆಯ ಗೌರಿಬಿದನೂರು ನಗರದ ಹಿರೇಬಿದನೂರು ನಿವಾಸಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು ಮುಂಜಾಗ್ರತಾ ಕ್ರಮವಾಗಿ ಗೌರಿಬಿದನೂರು ತಾಲೂಕಿನಾದ್ಯಾಂತ 144 ಸೆಕ್ಷನ್ ಜಾರಿ ಮಾಡಲಾಗಿದೆ.

    ಮಾರ್ಚ್ 31ರವರೆಗೂ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ ಎಂದು ತಹಶೀಲ್ದಾರ್ ರಾಜಣ್ಣ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ. ಮೆಕ್ಕಾಗೆ ತಾಯಿ ಹಾಗೂ ಅಕ್ಕನೊಂದಿಗೆ ಪ್ರವಾಸಕ್ಕೆ ತೆರಳಿ ವಾಪಸ್ ಆಗಿದ್ದ 31 ವರ್ಷದ ವ್ಯಕ್ತಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ಆಗಮಿಸಿ ಅಲ್ಲಿಂದ ಟ್ರಾವೆಲ್ ಏಜೆನ್ಸಿಯವರ ಬಸ್ ಮೂಲಕ ಹಿಂದೂಪುರಕ್ಕೆ ಬಂದಿದ್ದು, ಅಲ್ಲಿಂದ ಅವರ ಭಾವನ ಕಾರಿನ ಮೂಲಕ ಹಿಂದೂಪುರದಿಂದ ಗೌರಿಬಿದನೂರಿಗೆ ಆಗಮಿಸಿದ್ದರು.

    ಮಾರ್ಚ್ 16ರ ಬೆಳಗ್ಗೆ ಮನೆಗೆ ಬಂದಿದ್ದ ವ್ಯಕ್ತಿಗೆ ಒಂದು ದಿನದ ತರುವಾಯ ಜ್ವರ ಕಾಣಿಸಿಕೊಂಡಿತ್ತು. ಹೀಗಾಗಿ ಸ್ಥಳೀಯ ಖಾಸಗಿ ಕ್ಲಿನಿಕ್ ವೈದ್ಯರ ಬಳಿ ಚಿಕಿತ್ಸೆ ಪಡೆದಿದ್ದರು. ತದನಂತರ ಕೊರೊನಾ ಸೋಂಕಿನ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ತಾಯಿ ಜೊತೆ ರಾಜೀವ್ ಗಾಂಧಿ ಆಸ್ಪತ್ರೆಗೆ ಹೋಗಿ ಪರಿಶೀಲನೆಗೆ ಒಳಗಾಗಿ ಇಬ್ಬರು ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಸದ್ಯ ವ್ಯಕ್ತಿಗೆ ಸೋಂಕು ತಗುಲಿರುವುದನ್ನು ಸ್ವತಃ ಸಚಿವ ಶ್ರೀರಾಮುಲು ಟ್ವೀಟ್ ಮೂಲಕ ಧೃಢೀಕರಿಸಿದ್ದಾರೆ. ಆದರೆ ಜಿಲ್ಲಾಡಳಿತ ಸಂಜೆಯವರೆಗೂ ಕಾದು ನೋಡೋಣ ಮತ್ತೊಂದು ವರದಿ ಬರಬೇಕಿದೆ ಎಂದು ಡಿಸಿ ಆರ್.ಲತಾ ತಿಳಿಸುತ್ತಿದ್ದಾರೆ. ಆದರೂ ಸದ್ಯ ಮುಂಜಾಗ್ರತಾ ಕ್ರಮವಾಗಿ ಸೋಂಕಿತ ವ್ಯಕ್ತಿಯ 24 ಮಂದಿಯನ್ನು ಗೌರಿಬಿದನೂರು ತಾಲೂಕು ಆಸ್ಪತ್ರೆಯಲ್ಲಿ ಐಸೋಲೇಷನ್‍ಗೆ ಒಳಪಡಿಸಿಲಾಗಿದೆ. ಇದರಲ್ಲಿ ಮೆಕ್ಕಾದಿಂದ ಇವರ ಜೊತೆ ವಾಪಸ್ ಬಂದಿದ್ದ ಇವರ ಅಕ್ಕ ಸಹ ಇದ್ದಾರೆ.

    ಮತ್ತೊಂದೆಡೆ ಈ ವ್ಯಕ್ತಿಗೆ ಚಿಕಿತ್ಸೆ ನೀಡಿದ ಖಾಸಗಿ ಕ್ಲಿನಿಕ್ ವೈದ್ಯರೂ ಹೋಂ ಐಸೋಲೇಷನ್‍ಗೆ ಒಳಪಟ್ಟಿದ್ದಾರೆ. ಮನೆಗೆ ಬಂದ ಒಂದೂವರೆ ದಿನದಲ್ಲಿ ಈತ ಯಾರ್ಯಾರನ್ನು ಭೇಟಿ ಮಾಡಿದ್ದ ಎಂಬ ಟ್ರಾವೆಲ್ ಹಿಸ್ಟರಿಯನ್ನು ಜಿಲ್ಲಾಡಳಿತ ಕಲೆ ಹಾಕುತ್ತಿದೆ. ಈಗಾಗಲೇ ಜಿಲ್ಲೆಯ ಗೌರಿಬಿದನೂರು ತಾಲೂಕಿನಲ್ಲಿ 144 ಸೆಕ್ಷನ್ ಜಾರಿ ಮಾಡಿದ್ದು, ಇಡೀ ಜಿಲ್ಲೆಗೆ 144 ಸೆಕ್ಷೆನ್ ಜಾರಿ ಮಾಡಲು ಚಿಂತನೆ ನಡೆಸಿರುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

  • ಟಾಟಾಏಸ್‍ಗೆ ಡಿಕ್ಕಿ ಹೊಡೆದು ಸೇತುವೆ ಕೆಳಗೆ ಬಿದ್ದ ಬೈಕ್ – ಅಯ್ಯಪ್ಪ ಭಕ್ತನ ಸಾವು

    ಟಾಟಾಏಸ್‍ಗೆ ಡಿಕ್ಕಿ ಹೊಡೆದು ಸೇತುವೆ ಕೆಳಗೆ ಬಿದ್ದ ಬೈಕ್ – ಅಯ್ಯಪ್ಪ ಭಕ್ತನ ಸಾವು

    ಚಿಕ್ಕಬಳ್ಳಾಪುರ: ಟಾಟಾ ಏಸ್ ಗೆ ಬೈಕ್ ಡಿಕ್ಕಿ ಹೊಡೆದು ಸೇತುವೆ ಕೆಳಗೆ ಬೈಕ್ ಬಿದ್ದ ಪರಿಣಾಮ ಅಯ್ಯಪ್ಪ ಮಾಲಾಧಾರಿ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಮುದುಗೆರೆ ಗ್ರಾಮದ ಬಳಿ ನಡೆದಿದೆ.

    ರಮಾಪುರ ಗ್ರಾಮದ 27 ವರ್ಷದ ರಾಜೇಶ್ ಮೃತ ಬೈಕ್ ಸವಾರ. ರಮಾಪುರ ಗ್ರಾಮದಿಂದ ಗೌರಿಬಿದನೂರು ನಗರದ ಅಯ್ಯಪ್ಪನ ಸನ್ನಿಧಾನಕ್ಕೆ ರಾಜೇಶ್ ತೆರಳುತ್ತಿದ್ದರು. ಟಾಟಾ ಏಸ್ ವಾಹನ ಕಾದಲವೇಣಿ ಬಳಿಯ ಗ್ಯಾಸ್ ಗೋಡಾನ್ ನಿಂದ ಎಲ್.ಪಿ.ಜಿ ಸಿಲಿಂಡರ್ ಗಳನ್ನ ತುಂಬಿಕೊಂಡು ಕೋಟಾಲದಿನ್ನೆ ಕಡೆಗೆ ಸಾಗಿತ್ತು. ಮುದುಗೆರೆ ಬಳಿ ಸೇತುವೆ ಕಾಮಗಾರಿ ನಡೆಯುತ್ತಿದ್ದ ಪರಿಣಾಮ ಕಿರಿದಾದ ಸೇತುವೆ ಮೇಲೆ ವೇಗವಾಗಿ ಬಂದ ಬೈಕ್ ಸವಾರ ಟಾಟಾ ಏಸ್ ಗೆ ಡಿಕ್ಕಿ ಹೊಡೆದು ಸೇತುವೆ ಕೆಳಗೆ ಬೈಕ್ ಉರುಳಿದೆ. ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

    ಇದೇ ವೇಳೆ ಟಾಟಾ ಏಸ್ ವಾಹನ ಸಹ ಪಲ್ಟಿಯಾಗಿದ್ದು, ಅದೃಷ್ಟವಶಾತ್ ಯಾವುದೇ ಸಿಲಿಂಡರ್ ಗಳಿಗೆ ಹಾನಿಯಾಗಿಲ್ಲ. ಈ ಸಂಬಂಧ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.