Tag: gouri lankesh

  • `ಗೌರಿ ದಿನ’ ಕಾರ್ಯಕ್ರಮದಲ್ಲಿ ಭಾಗವಹಿಸಲ್ಲ ಎಂದ ಸಹೋದರ ಇಂದ್ರಜಿತ್ ಲಂಕೇಶ್

    `ಗೌರಿ ದಿನ’ ಕಾರ್ಯಕ್ರಮದಲ್ಲಿ ಭಾಗವಹಿಸಲ್ಲ ಎಂದ ಸಹೋದರ ಇಂದ್ರಜಿತ್ ಲಂಕೇಶ್

    ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ 56ರ ಹುಟ್ಟುಹಬ್ಬದ ನೆನಪು ಹಿನ್ನಲೆಯಲ್ಲಿ ಇಂದು ನಗರದಲ್ಲಿ ಗೌರಿ ದಿನ ಆಚರಿಸಲಾಗುತ್ತಿದೆ.

    ಈ ವೇಳೆ ಇಂದ್ರಜಿತ್ ಲಂಕೇಶ್ ಚಾಮರಾಜಪೇಟೆ ಗೌರಿ ಫೋಟೋ ಇಟ್ಟು ಸಮಾಧಿಗೆ ಪೂಜೆ ಸಲ್ಲಿಸಿದ್ದು ಟೌನ್ ಹಾಲ್ ನಲ್ಲಿ ಮಧ್ಯಾಹ್ನ ನಡೆಯಲಿರುವ ಕಾರ್ಯಕ್ರಮಕ್ಕೆ ನಾನು ಭಾಗವಹಿಸುವುದಿಲ್ಲ ಎಂದು ತಿಳಿಸಿದ್ದಾರೆ.

    ಇಂದು ಟೌನ್‍ಹಾಲ್ ನಲ್ಲಿ ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮ ನಡೆಯುತ್ತಿದ್ದು, ಸಿಎಂ ಸಿದ್ದರಾಮಯ್ಯ ತಮ್ಮ ಮಾಧ್ಯಮ ಸಲಹೆಗಾರ ಅಮೀನ್‍ಮಟ್ಟು ನೇತೃತ್ವದಲ್ಲಿ ಕಾರ್ಯಕ್ರಮ ನಡೆಸುತ್ತಿದ್ದಾರೆ. ಹೀಗಾಗಿ ನಾನು ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

     

    ಸಿಎಂ ಸಿದ್ದರಾಮಯ್ಯ ತಮ್ಮ ಮಾಧ್ಯಮ ಸಲಹೆಗಾರ ಅಮೀನ್‍ಮಟ್ಟು ನೇತೃತ್ವದಲ್ಲಿ ಕಾರ್ಯಕ್ರಮ ನಡೆಸ್ತಿದ್ದಾರೆ. ಇವರೇ ಸಾವಿರಾರು ರೂಪಾಯಿ ಕೊಟ್ಟು ವಿಮಾನದಲ್ಲಿ ದೆಹಲಿಯಿಂದ ಹಲವರನ್ನು ಕರೆಸ್ತಿದ್ದಾರೆ. ಇದರ ಉದ್ದೇಶ ಏನು? ಎಂದು ಸಹೋದರ ಇಂದ್ರಜಿತ್ ಲಂಕೇಶ್ ಪ್ರಶ್ನಿಸಿದ್ದಾರೆ.

    ಗೌರಿ ಹತ್ಯೆ ವಿಚಾರ ಜೀವಂತವಾಗಿರಲಿ ಎನ್ನುವುದು ರಾಜ್ಯ ಸರ್ಕಾರದ ಆಸೆ ಇರಬಹುದು. ಹಾಗಾಗಿಯೇ ಗೌರಿ ಹಂತಕರನ್ನು ಹಿಡಿಯುತ್ತಿಲ್ಲ. ಇವತ್ತು ಟೌನ್‍ಹಾಲ್ ಮುಂಭಾಗದಲ್ಲಿ ನಡೆಯುತ್ತಿರೋದು ಸರ್ಕಾರದ ಪ್ರಾಯೋಜಿತ ಕಾರ್ಯಕ್ರಮ. ನಾನು ಅಥವಾ ನಮ್ಮ ಕುಟುಂಬದ ಸದಸ್ಯರು ಯಾವುದೇ ಕಾರಣಕ್ಕೂ ಅಲ್ಲಿಗೆ ಹೋಗೋದಿಲ್ಲ ಎಂದರು.

    ಸೆಪ್ಟೆಂಬರ್ 5, 2017 ಮಂಗಳವಾರ ರಾತ್ರಿ ಸುಮಾರು 7.30 ರ ಸುಮಾರಿ ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಅವರ ಮನೆಯ ಮುಂಭಾಗವೇ ಮೂವರು ದುಷ್ಕರ್ಮಿಗಳು ಬೈಕಿನಲ್ಲಿ ಬಂದು ಗುಂಡಿಟ್ಟು ಹತ್ಯೆ ಮಾಡಿದ್ದರು. ತನಿಖೆಯ ನಂತರ ಎಸ್‍ಐಟಿ ಗೌರಿ ಹಂತಕರ ರೇಖಾಚಿತ್ರ ಮತ್ತು ವಿಡಿಯೋವನ್ನು ಬಿಡುಗಡೆ ಮಾಡಿದ್ದು, ಸಾರ್ವಜನಿಕರಿಗೆ ಹಂತಕರ ಬಗ್ಗೆ ಸುಳಿವು ನೀಡುವಂತೆ ಮನವಿ ಕೂಡ ಮಾಡಿಕೊಂಡಿದ್ದರು. ಮೂವರು ಆರೋಪಿಗಳಲ್ಲಿ ಇಬ್ಬರು ನೋಡುವುದಕ್ಕೆ ಒಂದೇ ತರಹ ಕಾಣುತ್ತಿದ್ದರು. ಆರೋಪಿಗಳು ನಗರದಲ್ಲಿ ಮೂರು ವಾರಗಳ ಕಾಲ ಉಳಿದುಕೊಂಡಿದ್ದರು ಎಂದು ಎಸ್‍ಐಟಿ ತಿಳಿಸಿತ್ತು.

  • ಗೌರಿ ಲಂಕೇಶ್ ನಂಬಿಕೆಗೆ ತಿಲಾಂಜಲಿ: ಐದನೇ ದಿನ ವೀರಶೈವ ಸಂಪ್ರದಾಯದಂತೆ ಪೂಜೆ

    ಗೌರಿ ಲಂಕೇಶ್ ನಂಬಿಕೆಗೆ ತಿಲಾಂಜಲಿ: ಐದನೇ ದಿನ ವೀರಶೈವ ಸಂಪ್ರದಾಯದಂತೆ ಪೂಜೆ

    ಬೆಂಗಳೂರು: ಪತ್ರಕರ್ತೆ, ವಿಚಾರವಾದಿ ಗೌರಿ ಲಂಕೇಶ್ ಅವರ ಅಂತ್ಯಸಂಸ್ಕಾರದಲ್ಲಿ ಯಾವುದೇ ವಿಧಿವಿಧಾನಗಳನ್ನು ಅನುಸರಿಸದೇ ಮಣ್ಣು ಮಾಡಲಾಗಿತ್ತು. ಆದರೆ ಗೌರಿ ಲಂಕೇಶ್ ಅವರು ಮೃತಪಟ್ಟು ಐದನೇ ದಿನದದಂದು ಸಂಪ್ರದಾಯಿಕ ಪೂಜೆ ನಡೆದಿದೆ.

    ಭಾನುವಾರ ಸಂಜೆ ಐದನೇ ದಿನವಾದ ತಿಥಿಯಂದು ಗೌರಿಲಂಕೇಶ್ ಸಮಾಧಿಗೆ ವೀರಶೈವ ಸಂಪ್ರದಾಯದಂತೆ ಪೂಜೆ ನಡೆದಿದೆ. ಬಾಳೆ ಕಂಬ ಕಟ್ಟಿ ಹೊಂಬಾಳೆಯನ್ನು ಇಟ್ಟು ಕುಟುಂಬದ ಸದಸ್ಯರು ಪೂಜಿಸಿದ್ದಾರೆ.

    ಗೌರಿ ಲಂಕೇಶ್ ಸಮಾಧಿಗೆ ಎಡೆಯಿಟ್ಟು ಸಂಪ್ರದಾಯಿಕವಾಗಿ ನಡೆದ ಪೂಜೆಯಲ್ಲಿ ಸಹೋದರ ಇಂದ್ರಜಿತ್ ಲಂಕೇಶ್ ಹಾಗೂ ಕುಟುಂಬಸ್ಥರು ಭಾಗಿಯಾಗಿದ್ದರು ಎಂದು ಈ ಕಾರ್ಯಕ್ರಮವನ್ನು ವೀಕ್ಷಿಸಿದ ಪ್ರತ್ಯಕ್ಷದರ್ಶಿಗಳು ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

    ಗೌರಿ ಲಂಕೇಶ್ ಧಾರ್ಮಿಕ ವಿಧಿವಿಧಾನಗಳ ನಂಬದೇ ಇದ್ದ ಕಾರಣ ಅಂತ್ಯಸಂಸ್ಕಾರದ ವೇಳೆ ವೀರಶೈವ ಸಂಪ್ರದಾಯವನ್ನು ಅನುಸರಿಸದೇ ಪಾರ್ಥಿವ ಶರೀರವನ್ನು ಚಾಮರಾಜಪೇಟೆಯಲ್ಲಿರುವ ರುದ್ರಭೂಮಿ ಟಿಬಿ ಮಿಲ್ ನಲ್ಲಿ ಬುಧವಾರ ಸಂಜೆ ಮಣ್ಣು ಮಾಡಲಾಗಿತ್ತು.

    https://youtu.be/RPYzt-kGunE

    https://youtu.be/Bxrj6mm088o