Tag: gourang pandit

  • ಮನೆಯ ಹೊಸ ಸದಸ್ಯನನ್ನು ಪರಿಚಯಿಸಿದ ಸ್ಯಾಂಡಲ್‍ವುಡ್ ಸಿಂಡ್ರೆಲಾ

    ಮನೆಯ ಹೊಸ ಸದಸ್ಯನನ್ನು ಪರಿಚಯಿಸಿದ ಸ್ಯಾಂಡಲ್‍ವುಡ್ ಸಿಂಡ್ರೆಲಾ

    ಬೆಂಗಳೂರು: ಸ್ಯಾಂಡಲ್‍ವುಡ್ ಸಿಂಡ್ರೆಲಾ ನಟಿ ರಾಧಿಕಾ ಪಂಡಿತ್ ತಮ್ಮ ಮನೆಯ ಹೊಸ ಸದಸ್ಯನನ್ನು ಪರಿಚಯಿಸಿದ್ದಾರೆ. ಸದ್ಯ ತಮ್ಮ ಮನೆಗೆ ಆಗಮಿಸಿರುವ ಹೊಸ ಸದಸ್ಯನ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.

    ಇಷ್ಟು ದಿನ ಯಶ್ ಹಾಗೂ ರಾಧಿಕಾ ಪಂಡಿತ್ ಮುದ್ದಾದ ಮಕ್ಕಳಾದ ಐರಾ, ಯಥರ್ವ ಮಾತ್ರ ಆಟ ಆಡುತ್ತಿದ್ದರು. ಆದರೆ ಇದೀಗ ಅವರಿಗೆ ಕಂಪನಿ ಕೊಡಲು ರಾಧಿಕಾ ಪಂಡಿತ್ ಸಹೋದರನ ಪುತ್ರ ಕೂಡ ಸೇರಿಕೊಂಡಿದ್ದಾನೆ.

    ಹೌದು, ರಾಧಿಕಾ ಪಂಡಿತ್‍ರವರ ಸಹೋದರ ಗೌರಂಗ್ ಪಂಡಿತ್ ಮತ್ತು ಪತ್ನಿ ಸಹನಾ ದಂಪತಿಗೆ ಮುದ್ದಾದ ಗಂಡು ಮಗು ಜನಿಸಿದೆ. ಹಾಗಾಗಿ ಪಂಡಿತ್ ಕುಟುಂಬದ ಹೊಸ ಸದಸ್ಯನನ್ನು ಸ್ವಾಗತಿಸಿರುವ ರಾಧಿಕಾ ಪಂಡಿತ್‍ರವರು ಮಗುವಿನ ಫೋಟೋವನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

     

    View this post on Instagram

     

    A post shared by Radhika Pandit (@iamradhikapandit)

    ಫೋಟೋ ಜೊತೆಗೆ ಪಂಡಿತ್ ಕುಟುಂಬದ ಪುಟ್ಟ ಮನುಷ್ಯನನ್ನು ಪರಿಚಯಿಸುತ್ತಿದ್ದೇನೆ. ಇವನಿಗೆ 4 ತಿಂಗಳು. ನನ್ನ ಲಿಟಲ್ ಸಹೋದರನ ಲಿಟಲ್ ಮಗ. ಎಲ್ಲರೂ ಆರಾವ್ ಪಂಡಿತ್‍ಗೆ ಹಾಯ್ ಹೇಳಿ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.

    ಗೌರಂಗ್ ಪಂಡಿತ್ ಮತ್ತು ಪತ್ನಿ ಸಹನಾ ದಂಪತಿ ವಿದೇಶದಲ್ಲಿ ನೆಲೆಸಿದ್ದು, ಈಗಾಗಲೇ ಅವರಿಗೆ ರಿಯಾ ಎಂಬ ಮಗಳಿದ್ದು, ಇದೀಗ ಆರವ್ ಜನಿಸಿದ್ದಾನೆ. ಇತ್ತೀಚೆಗೆ ಮಗುವಿನ ತೊಟ್ಟಿಲು ಶಾಸ್ತ್ರವನ್ನು ವಿದೇಶದಲ್ಲಿಯೇ ಮಾಡಿದ್ದು, ಆ ವೀಡಿಯೋವನ್ನು ಸಹನಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಯಲಹಂಕ ಬಳಿ ಟಿಂಬರ್ & ಟೆಂಡರ್ ಮಾಫಿಯಾ: AAP