Tag: Gotabaya Rajapaksa

  • ರಾಜೀನಾಮೆಗೂ ಮುನ್ನವೇ ಮಾಲ್ಡೀವ್ಸ್‌ಗೆ ಹಾರಿದ ಗೊಟಬಯ ರಾಜಪಕ್ಸೆ

    ರಾಜೀನಾಮೆಗೂ ಮುನ್ನವೇ ಮಾಲ್ಡೀವ್ಸ್‌ಗೆ ಹಾರಿದ ಗೊಟಬಯ ರಾಜಪಕ್ಸೆ

    ಕೊಲಂಬೋ: ಶ್ರೀಲಂಕಾದಲ್ಲಿ ಎದುರಾಗಿರುವ ಆರ್ಥಿಕ ಬಿಕ್ಕಟ್ಟಿನಿಂದ ಜನರು ಒಂದು ತಿಂಗಳಿನಿಂದ ವ್ಯಾಪಕವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ನಡುವೆ ಅಧ್ಯಕ್ಷ ಗೊಟಬಯ ರಾಜಪಕ್ಸೆ ರಾಜೀನಾಮೆ ನೀಡುವ ಮುನ್ನವೇ ದೇಶದಿಂದ ಮಾಲ್ಡೀವ್ಸ್‌ಗೆ ಹಾರಿದ್ದಾರೆ.

    ಶನಿವಾರ ರಾಜಪಕ್ಸೆಯವರ ನಿವಾಸಕ್ಕೆ ಸಾವಿರಾರು ಪ್ರತಿಭಟನಾಕಾರರು ನುಗ್ಗಿ ದಾಂಧಲೆ ನಡೆಸಿದ್ದರು. ದೇಶದ ಆರ್ಥಿಕತೆ ಉಳಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ, ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ದರು. ಈ ಹಿನ್ನೆಲೆ ರಾಜಪಕ್ಸೆ ತಮ್ಮ ನಿವಾಸ ತೊರೆದು ಬುಧವಾರ ರಾಜೀನಾಮೆ ನೀಡುವುದಾಗಿ ಶನಿವಾರ ಭರವಸೆ ನೀಡಿದ್ದರು. ಇದನ್ನೂ ಓದಿ: ರಾಜಪಕ್ಸೆ U-turn? ಕುಟುಂಬ ಸುರಕ್ಷಿತ ಸ್ಥಳ ತಲುಪುವವರೆಗೆ ರಾಜೀನಾಮೆ ನೀಡಲ್ಲ

    ಆದರೀಗ ಬಂಧನದ ಭೀತಿಯಿಂದ ರಾಜೀನಾಮೆ ನೀಡುವುದಕ್ಕೂ ಮುನ್ನವೇ ರಾಜಪಕ್ಸೆ ಗೊಟಬಯ ಅವರು ಮಾಲ್ಡೀವ್ಸ್‌ಗೆ ತಮ್ಮ ಪತ್ನಿ ಹಾಗೂ ಇಬ್ಬರು ಅಂಗರಕ್ಷಕರೊಂದಿಗೆ ಲಂಕಾ ವಾಯುಪಡೆಯ ವಿಮಾನದಲ್ಲಿ ಮಾಲ್ಡೀವ್ಸ್‍ನ ರಾಜಧಾನಿ ಮಾಲೆಗೆ ಹೊರಟಿದ್ದಾರೆ ಎಂದು ಏಜೆನ್ಸಿಗಳು ವರದಿ ಮಾಡಿವೆ. ಇದನ್ನೂ ಓದಿ: ಶಾರ್ಟ್‌ಕಟ್‌ ರಾಜಕೀಯದ ಮೂಲಕ ಮತಗಳನ್ನು ಸೆಳೆಯುವುದು ತುಂಬಾ ಸುಲಭ: ಪ್ರಧಾನಿ ಮೋದಿ

    ಈ ಕುರಿತಂತೆ ಪ್ರತಿಕ್ರಿಯಿಸಿರುವ ವಲಸೆ ಅಧಿಕಾರಿಯೊಬ್ಬರು, ಅವರ ಪಾಸ್‍ಪೋರ್ಟ್‍ಗಳನ್ನು ಸ್ಟ್ಯಾಂಪ್ ಮಾಡಲಾಗಿದ್ದು, ವಿಶೇಷ ವಾಯುಪಡೆಯ ವಿಮಾನ ಮೂಲಕ ತೆರಳಿದರು. ವಿಮಾನಕ್ಕಾಗಿ 24 ಗಂಟೆ ಕಾದು ರಾಜಪಕ್ಸೆ ಗೊಟಬಯ ಅವರು ವಾಣಿಜ್ಯ ವಿಮಾನದಲ್ಲಿ ದುಬೈಗೆ ಹೋಗಬೇಕೆಂದುಕೊಂಡರು. ಆದರೆ ವಿಮಾನ ನಿಲ್ದಾಣ ಸಿಬ್ಬಂದಿ ಗೊಟಬಯ ರಾಜಪಕ್ಸೆ ಅವರಿಗೆ ವಿಐಪಿ ಸೇವೆಗಳನ್ನು ನೀಡಲು ನಿರಾಕರಿಸಿದರು ಮತ್ತು ಎಲ್ಲಾ ಪ್ರಯಾಣಿಕರಂತೆ ಸಾರ್ವಜನಿಕ ಕೌಂಟರ್ ಮೂಲಕ ಹೋಗಬೇಕೆಂದು ಒತ್ತಾಯಿಸಿದರು ಎಂದು ಹೇಳಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ರಾಜಪಕ್ಸೆ  U-turn? ಕುಟುಂಬ ಸುರಕ್ಷಿತ ಸ್ಥಳ ತಲುಪುವವರೆಗೆ ರಾಜೀನಾಮೆ ನೀಡಲ್ಲ

    ರಾಜಪಕ್ಸೆ U-turn? ಕುಟುಂಬ ಸುರಕ್ಷಿತ ಸ್ಥಳ ತಲುಪುವವರೆಗೆ ರಾಜೀನಾಮೆ ನೀಡಲ್ಲ

    ಕೊಲಂಬೋ: ಶ್ರೀಲಂಕಾದಲ್ಲಿ ನಡೆಯುತ್ತಿರುವ ಅನಿರೀಕ್ಷಿತ ತಿರುವುಗಳ ನಡುವೆ ಅಧ್ಯಕ್ಷ ಗೊಟಬಯ ರಾಜಪಕ್ಸೆ ತಮ್ಮ ಕುಟುಂಬ ದೇಶದಿಂದ ಸುರಕ್ಷಿತವಾಗಿ ನಿರ್ಗಮಿಸುವವರೆಗೂ ರಾಜೀನಾಮೆ ನೀಡುವುದಿಲ್ಲ ಎಂದು ಸುಳಿವು ನೀಡಿರುವುದಾಗಿ ವರದಿಯಾಗಿದೆ.

    3 ದಿನಗಳ ಹಿಂದೆ ರಾಜಪಕ್ಸೆ ಅವರು ಸ್ಪೀಕರ್ ಜೊತೆ ಮಾತನಾಡಿ ಬುಧವಾರ ರಾಜೀನಾಮೆ ನೀಡುವುದಾಗಿ ತಿಳಿಸಿದ್ದರು. ಆದರೆ ಅದರ ಬಳಿಕ ಅವರು ರಾಜೀನಾಮೆ ನೀಡುವ ಬಗ್ಗೆ ಯಾವುದೇ ಸುಳಿವನ್ನು ನೀಡಿಲ್ಲ.

    ರಾಜಪಕ್ಸೆ ತಮ್ಮ ರಾಜೀನಾಮೆಯನ್ನು ನೀಡುವುದಕ್ಕೂ ಮೊದಲು ದೇಶವನ್ನು ತೊರೆಯಲು ಹಾಗೂ ತಮ್ಮ ಕುಟುಂಬವನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲು ಬಯಸುತ್ತಾರೆ ಎಂದು ವರದಿಯಾಗಿದೆ. ಆದರೆ ಅವರ ಸಹೋದರ ಬೆಸಿಲ್ ರಾಜಪಕ್ಸೆ ಅವರನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಲಸೆ ಇಲಾಖೆ ಹಾಗೂ ನಿಲ್ದಾಣದ ಸಿಬ್ಬಂದಿ ತಡೆದಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಬುಮ್ರಾ ಬೌಲಿಂಗ್‌ ದಾಳಿಗೆ ತತ್ತರಿಸಿದ ಆಂಗ್ಲರು – ಭಾರತಕ್ಕೆ 10 ವಿಕೆಟ್‌ಗಳ ಭರ್ಜರಿ ಜಯ

    ಗೊಟಬಯ ರಾಜಪಕ್ಸೆ ಬುಧವಾರ ರಾಜೀನಾಮೆ ನೀಡದೇ ಹೋದಲ್ಲಿ ರಾಜಧಾನಿ ಕೊಲಂಬೋದಲ್ಲಿ ಪರಿಸ್ಥಿತಿ ಇನ್ನಷ್ಟು ಉಲ್ಬಣಗೊಳ್ಳುವ ಸಾಧ್ಯತೆಯಿದೆ. ಶನಿವಾರ ರಾಜಪಕ್ಸೆಯವರ ನಿವಾಸಕ್ಕೆ ಸಾವಿರಾರು ಪ್ರತಿಭಟನಾಕಾರರು ನುಗ್ಗಿ ದಾಂಧಲೆ ನಡೆಸಿದ್ದರು. ದೇಶದ ಆರ್ಥಿಕತೆ ಉಳಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ, ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ದರು. ಈ ಹಿನ್ನೆಲೆ ರಾಜಪಕ್ಸೆ ತಮ್ಮ ನಿವಾಸ ತೊರೆದು ಪಲಾಯನಗೈದಿದ್ದರು. ಇದನ್ನೂ ಓದಿ: ರಾಜ್ಯದಲ್ಲಿ ಇಂದು 891 ಕೊರೊನಾ ಕೇಸ್ – ಉತ್ತರ ಕನ್ನಡದಲ್ಲಿ 1 ಮರಣ ಪ್ರಕರಣ ದಾಖಲು

    Live Tv
    [brid partner=56869869 player=32851 video=960834 autoplay=true]

  • ಗೊಟಬಯ ರಾಜಪಕ್ಸೆ ಇನ್ನೂ ದೇಶದಲ್ಲಿಯೇ ಇದ್ದಾರೆ: ಮಹಿಂದಾ ಯಾಪಾ ಅಬೇವರ್ಧನ

    ಗೊಟಬಯ ರಾಜಪಕ್ಸೆ ಇನ್ನೂ ದೇಶದಲ್ಲಿಯೇ ಇದ್ದಾರೆ: ಮಹಿಂದಾ ಯಾಪಾ ಅಬೇವರ್ಧನ

    ಕೊಲಂಬೋ: ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸೆ ಅವರು ದೇಶದಲ್ಲಿಲ್ಲ ಎಂದಿದ್ದ ಸ್ಪೀಕರ್ ಮಹಿಂದಾ ಯಾಪಾ ಅಬೇವರ್ಧನ ಅವರು ಇದೀಗ ಅಧ್ಯಕ್ಷರು ಇನ್ನೂ ದೇಶದಲ್ಲಿಯೇ ಇದ್ದಾರೆ ಎಂದು ಹೇಳಿದ್ದಾರೆ.

    ಗೊಟಬಯ ರಾಜಪಕ್ಸೆ ಅವರೊಂದಿಗೆ ಮಹಿಂದಾ ಯಾಪಾ ಅಬೇವರ್ಧನ ಅವರು ಸಂಪರ್ಕದಲ್ಲಿದ್ದು, ಅಧ್ಯಕ್ಷರು ಸ್ಪೀಕರ್ ಜೊತೆಗೆ ಸಂವಹನ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಗೊಟಬಯ ರಾಜಪಕ್ಸೆ

    ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟಿನಿಂದ ರೊಚ್ಚಿಗೆದ್ದ ಜನ ಅಧ್ಯಕ್ಷ ಗೊಟಬಯ ರಾಜಪಕ್ಸೆ ಮತ್ತು ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರ ಮನೆಗೆ ನುಗ್ಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ರಾಷ್ಟ್ರಪತಿ ಹಾಗೂ ಪ್ರಧಾನಿ ಇಬ್ಬರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವವರೆಗೂ ಅವರ ನಿವಾಸಗಳನ್ನು ಒತ್ತುವರಿ ಮಾಡಿಕೊಂಡಿಕೊಳ್ಳುವುದಾಗಿ ಪ್ರತಿಭಟನಾಕಾರರು ಹೇಳಿದ್ದರು.

    ದೇಶದಲ್ಲಿ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದ ಹಿನ್ನೆಲೆ ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸೆ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ಸೋಮವಾರ ಅಧಿಕೃತವಾಗಿ ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರಿಗೆ ತಿಳಿಸಿದ್ದರು. ಇದನ್ನೂ ಓದಿ: ಲಂಕಾ ಪ್ರತಿಭಟನೆ: ಪ್ರಧಾನಿಯ ಬೆಡ್‌ರೂಂನಲ್ಲಿ WWE ಪ್ರದರ್ಶನ

    ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಮಹಿಂದಾ ಯಾಪಾ ಅಬೇವರ್ಧನ ಅವರು, ಭದ್ರತೆ ಇಲ್ಲದ ಕಾರಣ ಗೊಟಬಯ ರಾಜಪೆಕ್ಸೆ ಅವರು ದೇಶದಿಂದ ಹೊರಗಿದ್ದಾರೆ ಎಂದಿದ್ದರು. ಆದರೀಗ ರಾಜಕೀಯ ಬಿಕ್ಕಟ್ಟಿನಿಂದ ಸಂದರ್ಭಾನುಸಾರವಾಗಿ ಹೀಗೆ ಹೇಳಿದ್ದೆ. ಆದರೆ ಗೊಟಬಯ ರಾಜಪಕ್ಸೆ ಇನ್ನೂ ದೇಶದಲ್ಲಿಯೇ ಇದ್ದಾರೆ ಎಂದು ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಗೊಟಬಯ ರಾಜಪಕ್ಸೆ

    ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಗೊಟಬಯ ರಾಜಪಕ್ಸೆ

    ಕೊಲಂಬೊ: ಪ್ರತಿಭಟನಾಕಾರರು ಹೆಚ್ಚುತ್ತಿರುವ ಒತ್ತಡದ ನಡುವೆ ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸೆ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ಅಧಿಕೃತವಾಗಿ ಪ್ರಧಾನಿ ರನಿಲ್ ವಿಕ್ರಮಸಿಂಘೆ ತಿಳಿಸಿದರು.

    ಈ ಹಿಂದೆ ಸ್ಪೀಕರ್ ಮಹಿಂದ ಯಾಪಾ ಅಬೇವರ್ಧನ ಮಾಧ್ಯಮದವರೊಂದಿಗೆ ಮಾತನಾಡಿ ಶ್ರೀಲಂಕಾ ಅಧ್ಯಕ್ಷ ರಾಜಪಕ್ಸೆ ಅವರು ಜುಲೈ 13 ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ಘೋಷಿಸಿದ್ದರು. ಆದರೆ ಶನಿವಾರದಂದು ಅಧ್ಯಕ್ಷರ ಭವನಕ್ಕೆ ಸಾವಿರಾರು ಜನರು ನುಗ್ಗಿ ದಾಂಧಲೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಇಂದೇ ರಾಜೀನಾಮೆ ನೀಡಿದ್ದಾರೆ.

    ಈ ಹಿಂದೆ ಪ್ರಧಾನಿ ರನಿಲ್ ವಿಕ್ರಮ ಸಿಂಘೆ ಕೂಡ ತಮ್ಮ ಸ್ಥಾನದಿಂದ ಕೆಳಗಿಳಿಯುವುದಾಗಿ ಘೋಷಿಸಿದ್ದರು. ಆದರೆ ಆರ್ಥಿಕ ಬಿಕ್ಕಟ್ಟಿನಿಂದ ರೊಚ್ಚಿಗೆದ್ದಿರುವ ಶ್ರೀಲಂಕಾ ಜನ ಎಲ್ಲೆಡೆ ಪ್ರತಿಭಟನೆ ನಡೆಸುತ್ತಿದ್ದಾರೆ. ರಾಷ್ಟ್ರಪತಿ ಹಾಗೂ ಪ್ರಧಾನಿ ಇಬ್ಬರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವವರೆಗೂ ಅವರ ನಿವಾಸಗಳನ್ನು ಒತ್ತುವರಿ ಮಾಡಿಕೊಂಡಿಕೊಳ್ಳುವುದಾಗಿ ಪ್ರತಿಭಟನಾಕಾರರು ತಿಳಿಸಿದ್ದಾರೆ.

    ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರ ಅಧಿಕೃತ ನಿವಾಸ ಟೆಂಪಲ್ ಟ್ರೀ ಅನ್ನು ಆಕ್ರಮಿಸಿಕೊಂಡಿರುವ ಪ್ರತಿಭಟನಾಕಾರರು ಅಲ್ಲಿಯೇ ಮೊಕ್ಕಾಂ ಹೂಡಿ, ಅವರ ಮನೆಯ ಆವರಣದಲ್ಲಿಯೇ ಅಡುಗೆ ಮಾಡಿದ್ದಾರೆ. ಇದನ್ನೂ ಓದಿ: ಶ್ರೀಲಂಕಾದಲ್ಲಿ ಜನಾಕ್ರೋಶ ಉಲ್ಬಣ – ಪ್ರಧಾನಿ ಸ್ಥಾನಕ್ಕೆ ರನಿಲ್‌ ವಿಕ್ರಮಸಿಂಘೆ ರಾಜೀನಾಮೆ

    ಈ ಬಗ್ಗೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ ಪ್ರತಿಭಟನಾಕಾರನೋರ್ವ, ನಾವು ಪ್ರಧಾನಿ ಮನೆಯೊಳಗಿದ್ದೇವೆ. ಪ್ರತಿಭಟನಾಕಾರರಾದ ನಾವೆಲ್ಲರೂ ಒಟ್ಟಿಗೆ ಸೇರಿ ಅಡುಗೆ ಮಾಡುತ್ತಿದ್ದೇವೆ. ನಾವು ಪಿಎಂ ವಿಕ್ರಮಸಿಂಘೆ ಮತ್ತು ಅಧ್ಯಕ್ಷ ರಾಜಪಕ್ಸೆ ಅವರ ರಾಜೀನಾಮೆಗಾಗಿ ಹೋರಾಟ ನಡೆಸುತ್ತಿದ್ದೇವೆ. ಅವರು ರಾಜೀನಾಮೆ ನೀಡಿದಾಗ ನಂತರ ಈ ಮನೆಯನ್ನು ತೊರೆಯುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಶ್ರೀಲಂಕಾ ಅಧ್ಯಕ್ಷರ ಮನೆಯಲ್ಲೇ ಅಡುಗೆ ಮಾಡಿ ತಿಂದ ಪ್ರತಿಭಟನಾಕಾರರು

    ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರ ಟೆಂಪಲ್ ಟ್ರೀ ನಿವಾಸದಲ್ಲಿ ಪ್ರತಿಭಟನಾಕಾರರು ಕೇರಂ ಆಟ ಆಡುವುದು, ಆರಾಮವಾಗಿ ಮಲಗಿರುವುದು ಮತ್ತು ಡುವುದು, ಅಡುಗೆ ಮಾಡುವುದು ಮಾಡುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಶ್ರೀಲಂಕಾ ಅಧ್ಯಕ್ಷರ ಮನೆಯಲ್ಲಿ ಪ್ರತಿಭಟನಾಕಾರರಿಗೆ ಸಿಕ್ತು ಲಕ್ಷ ಲಕ್ಷ ಹಣ!

    ಶ್ರೀಲಂಕಾ ಅಧ್ಯಕ್ಷರ ಮನೆಯಲ್ಲಿ ಪ್ರತಿಭಟನಾಕಾರರಿಗೆ ಸಿಕ್ತು ಲಕ್ಷ ಲಕ್ಷ ಹಣ!

    ಕೊಲಂಬೊ: ದೇಶದ ಅತ್ಯಂತ ಭೀಕರ ಆರ್ಥಿಕ ಬಿಕ್ಕಟ್ಟಿನ ಮಧ್ಯೆ ಶನಿವಾರ ಅಧ್ಯಕ್ಷ ಗೊಟಬಯ ರಾಜಪಕ್ಸೆ ಅವರ ಮನೆಗೆ ಮುತ್ತಿಗೆ ಹಾಕಿದ ಪ್ರತಿಭಟನಾಕಾರರು, ನಿವಾಸದಲ್ಲಿ ದೊಡ್ಡ ಮೊತ್ತದ ಹಣವನ್ನು ಪತ್ತೆ ಹಚ್ಚಿದ್ದಾರೆ.

    ಪ್ರತಿಭಟನಾಕಾರರು ಶ್ರೀಲಂಕಾ ಅಧ್ಯಕ್ಷರ ಮನೆಯಲ್ಲಿ ಲಕ್ಷಾಂತರ ರೂ. ಹಣವನ್ನು ಪತ್ತೆ ಮಾಡಿದ್ದಾರೆ. ಹಣವನ್ನು ತೆಗೆದುಕೊಂಡು ಎಣಿಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. 1.78 ಲಕ್ಷ ರೂ. (17.8 ಮಿಲಿಯನ್‌ ಶ್ರೀಲಂಕನ್‌ ರುಪಿ) ಪ್ರತಿಭಟನಾಕಾರರಿಗೆ ಸಿಕ್ಕಿತ್ತು. ನಂತರ ಅದನ್ನು ಭದ್ರತಾ ಸಿಬ್ಬಂದಿಗೆ ಒಪ್ಪಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

    https://twitter.com/SJIMYAKUS/status/1546005772920066049?ref_src=twsrc%5Etfw%7Ctwcamp%5Etweetembed%7Ctwterm%5E1546005772920066049%7Ctwgr%5E%7Ctwcon%5Es1_&ref_url=https%3A%2F%2Fwww.hindustantimes.com%2Fworld-news%2Fprotestors-find-millions-in-cash-at-sri-lanka-president-rajapaksa-s-mansion-101657432246136.html

    ರಾಜಪಕ್ಸೆ ಮನೆತನದ ಆಡಳಿತ ವಿರೋಧಿಸಿ ಶ್ರೀಲಂಕಾ ಜನತೆ ವ್ಯಾಪಕ ಪ್ರತಿಭಟನೆ ನಡೆಸುತ್ತಿದ್ದಾರೆ. ಆಕ್ರೋಶಿತ ಜನಸಮೂಹ ಶನಿವಾರ ಅಧ್ಯಕ್ಷ ಗೊಟಬಯ ರಾಜಪಕ್ಸೆ ಅವರ ನಿವಾಸಕ್ಕೆ ಲಗ್ಗೆಯಿಟ್ಟು ದಾಂಧಲೆ ಸೃಷ್ಟಿಸಿದರು. ಸ್ವಿಮ್ಮಿಂಗ್‌ ಪೂಲ್‌ನಲ್ಲಿ ಈಜಾಡಿದರು. ಅಡುಗೆ ಕೋಣೆಯಲ್ಲಿನ ತಿಂಡಿ-ತಿನಿಸು ತಿಂದರು. ಹಾಸಿಗೆಯಲ್ಲಿ ಬಿದ್ದು ಹೊರಳಾಡಿದರು.

    ಇದೇ ವೇಳೆ ಪ್ರತಿಭಟನಾಕಾರರು ರಾಜಪಕ್ಸೆ ಅವರ ತಿಜೋರಿಯನ್ನೂ ಪತ್ತೆ ಹಚ್ಚಿ ಹಣವನ್ನು ತೆಗೆದುಕೊಂಡಿದ್ದಾರೆ. ಅಧ್ಯಕ್ಷರ ನಿವಾಸದಿಂದ ಪ್ರತಿಭಟನಾಕಾರರು ಇನ್ನೂ ಹೊರಬಂದಿಲ್ಲ. ಅಲ್ಲೇ ಠಿಕಾಣಿ ಹೂಡಿ ಪ್ರತಿಭಟನೆ ಮುಂದುವರಿಸಿದ್ದಾರೆ. ಇದರ ನಡುವೆ ನಿನ್ನೆ ರಾತ್ರಿ ಪ್ರಧಾನಿ ರನಿಲ್‌ ವಿಕ್ರಮಸಿಂಘೆ ಅವರ ಮನೆಗೂ ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದರು.

    Live Tv
    [brid partner=56869869 player=32851 video=960834 autoplay=true]

  • ಲಂಕಾ ಅಧ್ಯಕ್ಷರ ಸ್ಥಿತಿ ಪ್ರಧಾನಿ ಮೋದಿಗೂ ಬರಲಿದೆ- ಟಿಎಂಸಿ ಶಾಸಕ ಎಚ್ಚರಿಕೆ

    ಲಂಕಾ ಅಧ್ಯಕ್ಷರ ಸ್ಥಿತಿ ಪ್ರಧಾನಿ ಮೋದಿಗೂ ಬರಲಿದೆ- ಟಿಎಂಸಿ ಶಾಸಕ ಎಚ್ಚರಿಕೆ

    ಕೋಲ್ಕತ್ತಾ: ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸೆ ಅವರ ಸ್ಥಿತಿ ಪ್ರಧಾನಿ ನರೇಂದ್ರ ಮೋದಿ ಅವರೂ ಎದುರಿಸಬೇಕಾಗುತ್ತದೆ ಎಂದು ತೃಣಮೂಲ ಕಾಂಗ್ರೆಸ್ (TMC) ಶಾಸಕ ಇದ್ರಿಸ್ ಅಲಿ ಎಚ್ಚರಿಕೆ ನೀಡಿದ್ದಾರೆ.

    ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟಿನ ನಡುವೆ ಅಲ್ಲಿನ ಜನರು ತಮ್ಮ ಅಧ್ಯಕ್ಷ ಗೊಟಬಯ ರಾಜಪಕ್ಸೆ ಅವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸಾವಿರಾರು ಪ್ರತಿಭಟನಾಕಾರರು ರಾಜಪಕ್ಸೆಯವರ ನಿವಾಸಕ್ಕೆ ಮುತ್ತಿಗೆ ಹಾಕಿ ಸ್ವಿಮ್ಮಿಂಗ್ ಪೂಲ್‌ನಲ್ಲಿ ಈಜಿದ್ದಾರೆ. ಇಂದು ಸಹ ಪ್ರಧಾನಿ ನಿವಾಸದಲ್ಲಿ ಪ್ರಜೆಗಳದ್ದೇ ದರ್ಬಾರ್  ಮುಂದುವರಿದಿದೆ.  ಇದನ್ನೂ ಓದಿ: ಶ್ರೀಲಂಕಾ ಅಧ್ಯಕ್ಷರ ಮನೆಗೆ ನುಗ್ಗಿದ ಸಾವಿರಾರು ಜನ – ಪೂಲ್‌ನಲ್ಲಿ ಪ್ರತಿಭಟನಾಕಾರರು, ರಾಜಪಕ್ಸೆ ಪರಾರಿ

    ಜುಲೈ 11ರಂದು ನಡೆಯಲಿರುವ ಕೋಲ್ಕತ್ತಾದ ಸೀಲ್ದಾಹ್ ಮೆಟ್ರೋ ನಿಲ್ದಾಣದ ಉದ್ಘಾಟನಾ ಸಮಾರಂಭಕ್ಕೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಹ್ವಾನಿಸಿದ ನಂತರ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು.  ಇದನ್ನೂ ಓದಿ: ಕೊಲೆ ಯತ್ನ ನಡೆದ ಬಗ್ಗೆ ಮಾಹಿತಿ ಬಿಚ್ಚಿಟ್ಟ ಹಾಸ್ಯ ನಟ ಬಾಬು ಮೋಹನ್

    ಮಮತಾ ಬ್ಯಾನರ್ಜಿ ಅವರು ರೈಲ್ವೆ ಸಚಿವರಾಗಿದ್ದಾಗ ಈ ಯೋಜನೆಯನ್ನು ಪ್ರಾರಂಭಿಸಿದರು. ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸದಿರುವುದು ಅನ್ಯಾಯ. ಈ ಹಿಂದೆಯೂ ಕೇಂದ್ರ ಗೃಹಸಚಿವ ಅಮಿತ್ ಶಾರ ಅಧ್ಯಕ್ಷತೆಯಲ್ಲಿ ನಡೆದ ಅಧಿಕೃತ ಕಾರ್ಯಕ್ರಮದಿಂದ ಮಮತಾ ಬ್ಯಾನರ್ಜಿ ಅವರನ್ನು ಹೊರಗಿಡಲಾಗಿತ್ತು. ಇದರಿಂದ ಕೇಂದ್ರ ಸರ್ಕಾರ ಒಡೆದು ಆಳುವ ನೀತಿ ಅನುಸರಿಸುತ್ತಿದೆ ಎಂದು ಟಿಎಂಸಿ ಆರೋಪಿಸಿತ್ತು.

    Live Tv
    [brid partner=56869869 player=32851 video=960834 autoplay=true]

  • ಶ್ರೀಲಂಕಾ ಅಧ್ಯಕ್ಷರ ಮನೆಗೆ ನುಗ್ಗಿದ ಸಾವಿರಾರು ಜನ – ಪೂಲ್‌ನಲ್ಲಿ ಪ್ರತಿಭಟನಾಕಾರರು, ರಾಜಪಕ್ಸೆ ಪರಾರಿ

    ಶ್ರೀಲಂಕಾ ಅಧ್ಯಕ್ಷರ ಮನೆಗೆ ನುಗ್ಗಿದ ಸಾವಿರಾರು ಜನ – ಪೂಲ್‌ನಲ್ಲಿ ಪ್ರತಿಭಟನಾಕಾರರು, ರಾಜಪಕ್ಸೆ ಪರಾರಿ

    ಕೊಲಂಬೋ: ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟಿನ ನಡುವೆ ಅಲ್ಲಿನ ಜನರು ತಮ್ಮ ಅಧ್ಯಕ್ಷ ಗೊಟಬಯ ರಾಜಪಕ್ಸೆ ಅವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಶನಿವಾರ ಸಾವಿರಾರು ಪ್ರತಿಭಟನಾಕಾರರು ರಾಜಪಕ್ಸೆಯವರ ನಿವಾಸಕ್ಕೆ ಮುತ್ತಿಗೆ ಹಾಕಿ ಸ್ವಿಮ್ಮಿಂಗ್ ಪೂಲ್‌ನಲ್ಲಿ ಈಜಿದ್ದಾರೆ.

    ಶ್ರೀಲಂಕಾದ ರಾಜಧಾನಿ ಕೊಲಂಬೋದಲ್ಲಿ ಇಂದು ಸಾವಿರಾರು ಪ್ರತಿಭಟನಾಕಾರರು ಪೊಲೀಸ್ ಬ್ಯಾರಿಕೇಡ್‌ಗಳನ್ನು ಭೇದಿಸಿ, ಅಧ್ಯಕ್ಷರ ಅಧಿಕೃತ ನಿವಾಸಕ್ಕೆ ಮುತ್ತಿಗೆ ಹಾಕಿದ್ದಾರೆ. ಪ್ರತಿಭಟನಾಕಾರರು ಶ್ರೀಲಂಕಾದ ಧ್ವಜ, ಹೆಲ್ಮೆಟ್‌ಗಳನ್ನು ಹಿಡಿದುಕೊಂಡು ಅಧ್ಯಕ್ಷರ ನಿವಾಸಕ್ಕೆ ನುಗ್ಗಿದ್ದಾರೆ. ಇದನ್ನೂ ಓದಿ: ಆಪರೇಷನ್ ಅಮರನಾಥ ಚಾಲೆಂಜ್ ಆಗಿದೆ: ಕರ್ನಲ್ ವಿ.ಎಂ. ನಾಯಕ್

    ರಾಜಪಕ್ಸೆ ವಿರುದ್ಧ ಘೋಷಣೆ ಕೂಗಿರುವ ಜನರು ಅವರ ನಿವಾಸದಲ್ಲಿ ದಾಂಧಲೆ ನಡೆಸಿದ್ದಾರೆ. ಸ್ವಿಮ್ಮಿಂಗ್ ಪೂಲ್‌ಗೆ ಇಳಿದು ಈಜಾಡಿದ್ದಾರೆ. ಸೋಫಾ, ಬೆಡ್‌ಗಳ ಮೇಲೆ ಕುಣಿದಾಡಿದ್ದಾರೆ. ಅಡುಗೆ ಮನೆಗೂ ನುಗ್ಗಿ, ಹಸಿವನ್ನು ನೀಗಿಸಿಕೊಂಡಿದ್ದಾರೆ. ಇಷ್ಟು ಮಾತ್ರವಲ್ಲದೇ ಸಾಮಾಜಿಕ ಮಾಧ್ಯಮಗಳಲ್ಲಿ ಲೈವ್ ಸ್ಟ್ರೀಮ್‌ಗಳನ್ನು ಮಾಡಿ ಆನಂದಿಸಿದ್ದಾರೆ.

    ಅಧ್ಯಕ್ಷ ಗೊಟಬಯ ರಾಜಪಕ್ಸೆ ಅವರನ್ನು ಶುಕ್ರವಾರ ತಮ್ಮ ಸುರಕ್ಷತೆಗಾಗಿ ನಿವಾಸದಿಂದ ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಇಂದಿನ ಪ್ರತಿಭಟನೆಯಲ್ಲಿ ಇಬ್ಬರು ಪೊಲೀಸರು ಸೇರಿದಂತೆ ಕನಿಷ್ಠ 21 ಜನರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದನ್ನೂ ಓದಿ: ಬೈಕ್ ಜಪ್ತಿ ಮಾಡಿ ವಿಮೆ ಮಾಡಿಸಿದ ಪೊಲೀಸರು – ಕಣ್ಣೀರಿಟ್ಟ ಸವಾರ

    ತೀವ್ರವಾದ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಸಿಂಹಳದಲ್ಲಿ 2.2 ಕೋಟಿ ಜನರು ಹೋರಾಡುತ್ತಿದ್ದಾರೆ. ಇಂಧನ, ಆಹಾರ, ಔಷಧಿಗಳಂತಹ ಅಗತ್ಯ ವಸ್ತುಗಳ ಕೊರತೆ ಉಂಟಾಗಿದ್ದು, ಜನರು ಸಾವು ಬದುಕಿನ ನಡುವೆ ಹೆಣಗಾಡುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಶ್ರೀಲಂಕಾ ಅಧ್ಯಕ್ಷ ರಾಜಪಕ್ಸೆಯ ಸಹೋದರ ಸಂಸತ್ ಸ್ಥಾನಕ್ಕೆ ರಾಜೀನಾಮೆ

    ಶ್ರೀಲಂಕಾ ಅಧ್ಯಕ್ಷ ರಾಜಪಕ್ಸೆಯ ಸಹೋದರ ಸಂಸತ್ ಸ್ಥಾನಕ್ಕೆ ರಾಜೀನಾಮೆ

    ಕೊಲೊಂಬೊ: ಶ್ರೀಲಂಕಾ ಅಧ್ಯಕ್ಷ ಗೋತಬಯ ರಾಜಪಕ್ಸೆ ಸಹೋದರ ಹಾಗೂ ಮಾಜಿ ಹಣಕಾಸು ಸಚಿವ ಬಸಿಲ್ ರಾಜಪಕ್ಸೆ ಗುರುವಾರ ಸಂಸತ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

    ತೀವ್ರ ಆರ್ಥಿಕ ಬಿಕ್ಕಟ್ಟಿನ ಮಧ್ಯೆ ಸರ್ಕಾರದಿಂದ ಹಿಂದೆ ಸರಿದ ಪ್ರಭಾವಿ ಕುಟುಂಬದ ಎರಡನೆಯವರಾಗಿದ್ದಾರೆ. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದಿನಿಂದ ನಾನು ಯಾವುದೇ ಸರ್ಕಾರಿ ಚಟುವಟಿಕೆಗಳಲ್ಲಿ ಭಾಗಿಯಾಗುವುದಿಲ್ಲ. ಆದರೆ ನಾನು ರಾಜಕೀಯದಿಂದ ಹಿಂದೆಯೂ ಸರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ತಪ್ಪದ ಇಡಿ ಸಂಕಷ್ಟ – ಸತೇಂದ್ರ ಜೈನ್‍ಗೆ ಜೂನ್ 13ವರೆಗೂ ಕಸ್ಟಡಿ ವಿಸ್ತರಣೆ

    ಶ್ರೀಲಂಕಾದಾದ್ಯಂತ ಆರ್ಥಿಕ ಬಿಕ್ಕಟ್ಟಿನ ವಿರುದ್ಧ ಅಲ್ಲಿನ ಜನರು ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಶ್ರೀಲಂಕಾ ಅಧ್ಯಕ್ಷ ಗೋತಬಯ ರಾಜಪಕ್ಸೆ ಅವರ ಹಿರಿಯ ಸಹೋದರ ಮಹಿಂದಾ ರಾಜಪಕ್ಸೆ ಈ ಹಿಂದೆ ರಾಜೀನಾಮೆ ನೀಡಿದ್ದರು. ಆದರೆ ಸಂಸತ್ ಸದಸ್ಯರಾಗಿಯೇ ಮಹಿಂದಾ ರಾಜಪಕ್ಸೆ ಉಳಿದುಕೊಂಡಿದ್ದಾರೆ. ಇದನ್ನೂ ಓದಿ: ಏಮ್ಸ್ ಆಸ್ಪತ್ರೆಯ ಏಳನೇ ಮಹಡಿಯಿಂದ ಬಿದ್ದು ವೈದ್ಯ ಸಾವು

  • ಕಂಗೆಟ್ಟ ಶ್ರೀಲಂಕಾಕ್ಕೆ ಎಲ್‌ಟಿಟಿಇ ದಾಳಿಯ ಭೀತಿ – ಹೈ ಅಲರ್ಟ್

    ಕಂಗೆಟ್ಟ ಶ್ರೀಲಂಕಾಕ್ಕೆ ಎಲ್‌ಟಿಟಿಇ ದಾಳಿಯ ಭೀತಿ – ಹೈ ಅಲರ್ಟ್

    ಕೊಲಂಬೊ: ಈಗಾಗಲೇ ಆರ್ಥಿಕ ಬಿಕ್ಕಟ್ಟು, ಇಂಧನ ಕೊರತೆ ಹಾಗೂ ನಿರುದ್ಯೋಗ ಸಮಸ್ಯೆಯ ವಿರುದ್ಧ ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ನಾಗರಿಕರು ದಂಗೆ ಎದ್ದಿದ್ದಾರೆ. ಈ ನಡುವೆಯೂ ಶ್ರೀಲಂಕಾದಲ್ಲಿ LTTE ಭಯೋತ್ಪಾದಕ ಸಂಘಟನೆ ಸದ್ಯದಲ್ಲೇ ದಾಳಿ ನಡೆಸುವ ಸಾಧ್ಯತೆಯಿದೆ ಎಂಬ ಗುಪ್ತಚರ ಇಲಾಖೆಯ ಮಾಹಿತಿ ಜನರ ನಿದ್ದೆಗೆಡಿಸಿದೆ.

    sri lanka

    3 ದಶಕಗಳ ಕಾಲ ಶ್ರೀಲಂಕಾದಲ್ಲಿ ನಾಗರಿಕ ಯುದ್ಧ ನಡೆಸಿ, 2009ರಲ್ಲಿ ನಿಷ್ಕ್ರಿಯಗೊಂಡ ಎಲ್‌ಟಿಟಿಇ ಮೇ 18ರಂದು ನಡೆಯುವ ಮುಲ್ಲಿವೈಕಲ್ ದಿನಾಚರಣೆ ವೇಳೆ ದಾಳಿ ನಡೆಸುವ ಸಾಧ್ಯತೆಯಿದೆ. ಹೀಗಾಗಿ ಶ್ರೀಲಂಕಾದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ. ಇದನ್ನೂ ಓದಿ: ಥಾಮಸ್ ಕಪ್ ಗೆದ್ದ ಭಾರತ ತಂಡದೊಂದಿಗೆ ಇಡೀ ದೇಶವೇ ಸಂಭ್ರಮಿಸಿದೆ: ಮೋದಿ

    ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಷ ಈ ಹಿಂದೆ ಎಲ್‌ಟಿಟಿಇಯನ್ನು ನಿರ್ಮೂಲನೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರ ವಿರುದ್ಧ ಸೇಡಿಗೆ ಎಲ್‌ಟಿಟಿಇ ಮುಂದಾಗಬಹುದು. ಈ ಹಿನ್ನೆಲೆಯಲ್ಲಿ ಸರ್ಕಾರ, ಭಾರತದ ಗುಪ್ತಚರ ಸಂಸ್ಥೆಗಳ ಬಳಿ ಹೆಚ್ಚಿನ ಮಾಹಿತಿ ಕೇಳಿದೆ. ಜೊತೆಗೆ ಭದ್ರತೆ ಬಿಗಿಗೊಳಿಸಿ ಎಲ್‌ಟಿಟಿಇ ಚಟುವಟಿಕೆಗಳು ಪುನಾರಂಭಗೊಂಡಿವೆಯೇ ಎಂದು ತನಿಖೆ ಆರಂಭಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

    ಮುಂದುವರಿದ ನೆರವಿನ ಹಸ್ತ: ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಸಂಘರ್ಷ ಪೀಡಿತವಾಗಿರುವ ದ್ವೀಪ ರಾಷ್ಟ್ರ ಶ್ರೀಲಂಕಾಕ್ಕೆ ಭಾರತದಿಂದ ನೆರವಿನ ಹಸ್ತ ಮುಂದುವರೆದಿದ್ದು, ಮತ್ತೆ 4 ಲಕ್ಷ ಮೆಟ್ರಿಕ್ ಟನ್ ಇಂಧನವನ್ನು ರವಾನೆ ಮಾಡಿದೆ. ಇದನ್ನೂ ಓದಿ: ಥಾಮಸ್‌ ಕಪ್‌ ಬ್ಯಾಡ್ಮಿಂಟನ್‌ – ಭಾರತ ಚಾಂಪಿಯನ್‌, ಇತಿಹಾಸ ಸೃಷ್ಟಿ

    ಈ ಕುರಿತು ಕೊಲಂಬೊದಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿ ಟ್ವೀಟ್ ಮೂಲಕ ಮಾಹಿತಿ ನೀಡಿದ್ದು, ಶ್ರೀಲಂಕಾಕ್ಕೆ ಇತ್ತೀಚಿನ ಕೊಡುಗೆಯಾಗಿ 4 ಲಕ್ಷ ಮೆಟ್ರಿಕ್ ಟನ್ ಡೀಸೆಲ್ ಅನ್ನು ಭಾರತವು ಕಳುಹಿಸಿಕೊಟ್ಟಿದೆ. ಹಣ ಪಾವತಿಸುವ ಬಗ್ಗೆ ಬ್ಯಾಂಕ್ ಖಾತರಿ ನೀಡಿರುವ (ಲೈನ್ ಆಫ್ ಕ್ರೆಡಿಟ್ ಅಥವಾ ಎಲ್‌ಒಸಿ) ಆಧಾರದಲ್ಲಿ ಇಂಧನ ಕಳುಹಿಸಿಕೊಡಲಾಗಿದೆ ಎಂದು ಟ್ವೀಟ್ ಮೂಲಕ ತಿಳಿಸಿದೆ.

    srilanka

    ಅಂತೆಯೇ ಪ್ರಜಾಸತ್ತಾತ್ಮಕವಾಗಿ ರಚನೆಯಾದ ಶ್ರೀಲಂಕಾದ ಹೊಸ ಸರ್ಕಾರದೊಂದಿಗೆ ಕೆಲಸ ಮಾಡಲು ಭಾರತ ಎದುರು ನೋಡುತ್ತಿದೆ. ದ್ವೀಪ ರಾಷ್ಟ್ರದ ಜನರಿಗೆ ಭಾರತದ ಕಾಳಜಿ ಮತ್ತು ಬದ್ಧತೆ ಮುಂದುವರಿಯುತ್ತದೆ ಎಂದು ಹೇಳಿದೆ.

  • ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ ಘೋಷಣೆ – 5 ವಾರಗಳಲ್ಲಿ ಎರಡನೇ ಬಾರಿ ಹೇರಿಕೆ

    ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ ಘೋಷಣೆ – 5 ವಾರಗಳಲ್ಲಿ ಎರಡನೇ ಬಾರಿ ಹೇರಿಕೆ

    ಕೊಲಂಬೋ: ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಶ್ರೀಲಂಕಾದಲ್ಲಿ ಮತ್ತೆ ತುರ್ತು ಪರಿಸ್ಥಿತಿ ಹೇರಳಾಗಿದೆ. ಈ ಮೂಲಕ ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಸೆ 5 ವಾರಗಳ ಅಂತರದಲ್ಲಿ ಎರಡನೇ ಬಾರಿಗೆ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ.

    ಆರ್ಥಿಕ ಬಿಕ್ಕಟ್ಟಿನ ಬಳಿಕ ಶ್ರೀಲಂಕಾ ಅಧ್ಯಕ್ಷ ರಾಜಪಕ್ಸೆ ರಾಜೀನಾಮೆಗೆ ಆಗ್ರಹಿಸಿ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿದೆ. ಈ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಭದ್ರತಾ ಪಡೆಗಳಿಗೆ ಹೆಚ್ಚಿನ ಅಧಿಕಾರ ನೀಡಲಾಗಿದೆ. ಕಳೆದ ಕೆಲ ತಿಂಗಳ ಬಳಿಕ ಶ್ರೀಲಂಕಾದಲ್ಲಿ ಅಗತ್ಯ ವಸ್ತುಗಳು, ಆಹಾರ ಸೇರಿದಂತೆ ತೈಲ ಸಿಗದೆ ಜನ ತತ್ತರಿಸಿ ಹೋಗಿದ್ದರು. ಆ ಬಳಿಕ ಜನ ಪ್ರತಿಭಟನೆಗೆ ಮುಂದಾಗಿದ್ದರು. ಇದನ್ನೂ ಓದಿ: ಮುಂದಿನ 20 ವರ್ಷಗಳಲ್ಲಿ ಬರಲಿದೆ ಇನ್ನೊಂದು ಸಾಂಕ್ರಾಮಿಕ: ಬಿಲ್ ಗೇಟ್ಸ್ ಭವಿಷ್ಯ

    ನಿನ್ನೆ ಅಧ್ಯಕ್ಷರ ವಕ್ತಾರರು ತುರ್ತು ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡಿದ್ದು, ಸಾರ್ವಜನಿಕ ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ತಾವು ಕಠಿಣ ಕಾನೂನುಗಳನ್ನು ಜಾರಿಗೊಳಿಸುತ್ತಿದ್ದು, ಅಗತ್ಯ ಸೇವೆಗಳು ಹಾಗೂ ಶಾಂತಿ ಸುವ್ಯವಸ್ಥೆಗಳ ನಿರ್ವಹಣೆಯ ದೃಷ್ಟಿಯಿಂದ ಅಧ್ಯಕ್ಷರು ತಮ್ಮ ಅಧಿಕಾರ ಬಳಸಿ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ ಎಂದು ಮಾಹಿತಿ ಹಂಚಿಕೊಂಡರು.

    ಈ ಮೊದಲು ರಾಜಪಕ್ಸೆ ರಾಜೀನಾಮೆಗೆ ಆಗ್ರಹಿಸಿ ಸಂಸತ್‍ನತ್ತ ಪ್ರತಿಭಟನಾ ಮೆರವಣಿಗೆ ಹೊರಟಿದ್ದ ವಿದ್ಯಾರ್ಥಿಗಳನ್ನು ಚದುರಿಸಲು ಅಶ್ರುವಾಯು ಪ್ರಯೋಗಿಸಲಾಗಿತ್ತು. ಇದೀಗ ತುರ್ತುಪರಿಸ್ಥಿತಿ ಹೇರಿಕೆ ಮಾಡಿರುವುದರಿಂದ ಸೇನೆಗೆ ಶಂಕಿತರನ್ನು ಬಂಧಿಸಿ ದೀರ್ಘಾವಧಿಯವರೆಗೂ ನ್ಯಾಯಾಂಗದ ಮೇಲ್ವಿಚಾರಣೆ ಇಲ್ಲದೇ ಬಂಧನದಲ್ಲಿಡುವುದಕ್ಕೆ ಸಾಧ್ಯವಾಗಲಿದೆ. ಇದನ್ನೂ ಓದಿ: ಶನಿವಾರದಿಂದ್ಲೇ ಆಪರೇಷನ್ ಕಮಲ ಶುರು- ಮಂಡ್ಯದಲ್ಲಿ ಲಕ್ಷ್ಮೀ, ಅಶೋಕ್ ಜಯರಾಂ ಸೇರ್ಪಡೆ

    ದ್ವೀಪ ದೇಶ ಕೆಲ ತಿಂಗಳುಗಳಿಂದ ವಿದ್ಯುತ್, ಆಹಾರ, ಇಂಧನ ಹಾಗೂ ಔಷಧಗಳ ತೀವ್ರ ಕೊರತೆಯನ್ನು ಎದುರಿಸುತ್ತಿದೆ. 1946ರಲ್ಲಿ ಶ್ರೀಲಂಕಾಗೆ ಸ್ವಾತಂತ್ರ ಲಭಿಸಿದ ಬಳಿಕ ಇಷ್ಟೊಂದು ಭಯಾನಕವಾದ ಆರ್ಥಿಕ ಬಿಕ್ಕಟ್ಟನ್ನು ಇದೇ ಮೊದಲ ಬಾರಿಗೆ ನೋಡುತ್ತಿದೆ. ಈಗಾಗಲೇ ಇಂಧನ ಕೊರತೆ, ವಿದ್ಯುತ್ ಸಂಪರ್ಕ ಕಡಿತ, ನಿರುದ್ಯೋಗ ಸಮಸ್ಯೆ ಹಾಗೂ ಔಷಧಗಳ ಕೊರತೆ ಜನರನ್ನು ಬಾಧಿಸುತ್ತಿದೆ. ಇದರಿಂದಾಗಿ ಶ್ರೀಲಂಕಾ ಅಧ್ಯಕ್ಷರ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆಗಳು ನಡೆಯುತ್ತಿದೆ.