Tag: goshala

  • ರಾಗಿಗುಡ್ಡದ ಬಳಿ ಗೋಶಾಲೆ ನಿರ್ಮಾಣಕ್ಕೆ ಸ್ಥಳೀಯರ ವಿರೋಧ

    ರಾಗಿಗುಡ್ಡದ ಬಳಿ ಗೋಶಾಲೆ ನಿರ್ಮಾಣಕ್ಕೆ ಸ್ಥಳೀಯರ ವಿರೋಧ

    ಶಿವಮೊಗ್ಗ: ಮಹಾನಗರ ಪಾಲಿಕೆ ವತಿಯಿಂದ ನಿರ್ಮಿಸಲಾಗುತ್ತಿರುವ ಸರ್ಕಾರಿ ಗೋಶಾಲೆ ನಿರ್ಮಾಣಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿ, ಪ್ರತಿಭಟನೆ ನಡೆಸಿದ್ದಾರೆ. ಆದರೆ ಪಾಲಿಕೆಯ ಮೇಯರ್, ಸ್ಥಳೀಯರ ವಿರೋಧದ ನಡುವೆಯೂ ಅದೇ ಸ್ಥಳದಲ್ಲೇ ಗೋಶಾಲೆ ನಿರ್ಮಿಸುತ್ತೇವೆ ಎಂದು ಕಠುವಾಗಿ ನುಡಿದರು.

    ಶಿವಮೊಗ್ಗ ನಗರ ಪ್ರದೇಶದಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದೆ. ಜೊತೆಗೆ ನಗರದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ರಸ್ತೆಗಳನ್ನು ಅಗೆದು ಹಾಕಲಾಗಿದೆ. ಪರಿಣಾಮ ನಗರದ ಪ್ರಮುಖ ರಸ್ತೆಗಳೇ ಬಿಡಾಡಿ ದನಗಳ ಆವಾಸ ಸ್ಥಾನವಾಗಿದೆ. ಇದನ್ನೂ ಓದಿ: ಕಾಲೇಜುಗಳಿಗೆ ಹಣ ಬಿಡುಗಡೆ ಮಾಡಿ – ದೆಹಲಿ ಸರ್ಕಾರದ ವಿರುದ್ಧ ತಿರುಗಿಬಿದ್ದ ಶಿಕ್ಷಕರು

    ರಸ್ತೆಯಲ್ಲಿ ಜಾನುವಾರುಗಳು ಅಡ್ಡಾದಿಡ್ಡಿ ಓಡಾಡುವುದರಿಂದ ಅಪಘಾತಗಳು ಸಹ ನಡೆಯುತ್ತಿವೆ. ಒಂದೆಡೆ ಮಹಾನಗರ ಪಾಲಿಕೆ ಬಿಡಾಡಿ ದನಗಳ ರಕ್ಷಿಸಲು ಹಾಗೂ ಬಿಡಾಡಿ ದನಗಳಿಂದ ಸಂಭವಿಸುತ್ತಿದ್ದ ಅಪಘಾತ ತಪ್ಪಿಸಲು ಮಹಾನಗರ ಪಾಲಿಕೆ ನಗರದ ಹೊರ ವಲಯದ ರಾಗಿಗುಡ್ಡದ ಸಮೀಪ ಗೋಶಾಲೆ ನಿರ್ಮಿಸಲು ಮುಂದಾಗಿದೆ. ಆದರೆ ಮಹಾನಗರ ಪಾಲಿಕೆಯ ಗೋಶಾಲೆ ನಿರ್ಮಾಣಕ್ಕೆ ಸ್ಥಳೀಯ ನಿವಾಸಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.

    ರಾಗಿಗುಡ್ಡದ ಸಮೀಪ ಜಿಲ್ಲಾಧಿಕಾರಿ ಅವರು ಗೋಶಾಲೆ ನಿರ್ಮಾಣಕ್ಕೆ ಐದು ಎಕರೆ ಜಮೀನು ಮಂಜೂರು ಮಾಡಿ ಪಾಲಿಕೆಗೆ ಹಸ್ತಾಂತರಿಸಿದ್ದಾರೆ. ಆದರೆ ಈ ಜಮೀನು ವಿವಾದದಲ್ಲಿದ್ದು, ನ್ಯಾಯಾಲಯದಲ್ಲಿ ಕೇಸ್ ನಡೆಯುತ್ತಿದೆ. ಜೊತೆಗೆ ಈ ಪ್ರದೇಶದಲ್ಲಿ ಗೋಶಾಲೆ ನಿರ್ಮಾಣವಾದರೆ ಇಲ್ಲಿನ ನಿವಾಸಿಗಳಿಗೆ ತೊಂದರೆ ಆಗುತ್ತದೆ. ಅಲ್ಲದೇ ಮುಂದೆ ಕೋಮುಗಲಭೆ ಉಂಟಾಗುವ ಸಂಭವ ಸಹ ಇದೆ. ಪಾಲಿಕೆ ನಿರ್ಮಾಣ ಮಾಡುತ್ತಿರುವ ಗೋಶಾಲೆ ನಗರ ಪ್ರದೇಶದಿಂದ 5 ಕಿ.ಮೀ ದೂರದಲ್ಲಿ ಇರಬೇಕು. ಜನ ವಸತಿ ಪ್ರದೇಶದಲ್ಲಿ ಇರಬಾರದು ಎಂಬ ನಿಯಮವನ್ನು ಉಲ್ಲಂಘಿಸಿ ಗೋಶಾಲೆ ನಿರ್ಮಾಣ ಮಾಡುತ್ತಿದ್ದಾರೆ. ಈ ಹಿನ್ನೆಲೆ ಯಾವುದೇ ಕಾರಣಕ್ಕು ಈ ಸ್ಥಳದಲ್ಲಿ ಗೋಶಾಲೆ ನಿರ್ಮಿಸದಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

    ಈ ನಡುವೆ ಪಾಲಿಕೆ ಮೇಯರ್, ನಾವು ಇದೇ ಸ್ಥಳದಲ್ಲಿ ಗೋಶಾಲೆ ನಿರ್ಮಿಸಲು ತೀರ್ಮಾನಿಸಿದ್ದೇವೆ. ಈ ಜಮೀನಿನ ಮೇಲೆ ಯಾವುದೇ ವಿವಾದ ಇಲ್ಲ. ಇದು ಸರ್ಕಾರಿ ಭೂಮಿಯಾಗಿದೆ. ಕೆಲವು ಪಟ್ಟಾಭದ್ರ ಹಿತಾಸಕ್ತಿಗಳು ಕೋಟ್ಯಾಂತರ ರೂ. ಮೌಲ್ಯದ ಭೂಮಿ ಕಬಳಿಸುವ ಸಲುವಾಗಿ ಈ ರೀತಿ ಹುನ್ನಾರ ನಡೆಸುತ್ತಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಕಿಟ್‌ಕ್ಯಾಟ್ ರ‍್ಯಾಪರ್‌ನಲ್ಲಿ ಲಾರ್ಡ್ ಪುರಿ ಜಗನ್ನಾಥ ಫೋಟೋ – ಪ್ಯಾಕ್‌ಗಳನ್ನು ಹಿಂತೆಗೆದುಕೊಂಡ ನೆಸ್ಲೆ ಇಂಡಿಯಾ

    ಕೆಲವರು ಸ್ಥಳೀಯರನ್ನು ಎತ್ತಿಕಟ್ಟಿ ಗಲಭೆ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ. ಏನೇ ಅಡ್ಡಿ ಆತಂಕ ಎದುರಾದರೂ ಇದೇ ಸ್ಥಳದಲ್ಲಿ ಗೋಶಾಲೆ ನಿರ್ಮಾಣ ಮಾಡುತ್ತೇವೆ ಎಂದರು.

    ಒಟ್ಟಿನಲ್ಲಿ ಗೋಶಾಲೆ ನಿರ್ಮಾಣದ ಹೆಸರಿನಲ್ಲಿ ರಾಜಕಾರಣ ಬೆರೆತು ಹೋಗಿರುವುದಂತು ಸತ್ಯ. ಗೋಶಾಲೆ ನಿರ್ಮಾಣ ಕೈಬಿಡದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ. ಪಾಲಿಕೆ ಇದೇ ಸ್ಥಳದಲ್ಲಿ ಗೋಶಾಲೆ ನಿರ್ಮಾಣ ಮಾಡುತ್ತೇವೆ ಎಂಬ ಹಠಕ್ಕೆ ಬಿದ್ದಿದೆ. ಮುಂದಿನ ದಿನಗಳಲ್ಲಿ ಏನಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

  • ಮತ್ತೆ ಜೋಡೆತ್ತು ಸದ್ದು- ಗೋಶಾಲೆಗೆ ಬೆಳಕಾದ ದರ್ಶನ್, ಯಶ್

    ಮತ್ತೆ ಜೋಡೆತ್ತು ಸದ್ದು- ಗೋಶಾಲೆಗೆ ಬೆಳಕಾದ ದರ್ಶನ್, ಯಶ್

    ಮಂಡ್ಯ: ಜಿಲ್ಲೆಯಲ್ಲಿ ಮತ್ತೆ ಜೋಡೆತ್ತು ಸದ್ದು ಮಾಡಿದ್ದು, ರಾಜಕೀಯವಾಗಿ ಅಲ್ಲದೆ ಜೋಡೆತ್ತುಗಳು ಮಾನವೀಯತೆ ಮೆರೆದಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ರಾಕಿಂಗ್ ಸ್ಟಾರ್ ಗೋಮಾತೆ ಸೇವೆಗೆ ಸಿದ್ಧರಾಗಿದ್ದಾರೆ.

    ನಟ ದರ್ಶನ್ ಕಳೆದ ದಿನ ಚೈತ್ರ ಗೋಶಾಲೆಗೆ ಸುಮಾರು 15 ಟ್ರ್ಯಾಕ್ಟರ್ ಭತ್ತದ ಹುಲ್ಲನ್ನು ಅನುದಾನ ಮಾಡಿದ್ದರು. ಇದೀಗ ನಟ ಯಶ್ ಕೂಡ ಚೈತ್ರ ಗೋಶಾಲೆಗೆ ಸಹಾಯ ಮಾಡುತ್ತಿದ್ದಾರೆ. ಈ ಮೂಲಕ ಮಂಡ್ಯದ ಚೈತ್ರ ಗೋಶಾಲೆಗೆ ದರ್ಶನ್ ಮತ್ತು ಯಶ್ ಬೆಳಕಾಗಿದ್ದಾರೆ.

    ಯಶ್ ಪಾಂಡವಪುರದ ತಾಲೂಕಿನ ದೊಡ್ಡಬ್ಯಾಡರಹಳ್ಳಿಯಲ್ಲಿರುವ ಚೈತ್ರ ಗೋಶಾಲೆಯ ಕಟ್ಟಡ ನಿರ್ಮಾಣ ಕೆಲಸದ ಜವಾಬ್ದಾರಿ ಹೊಂದಿಕೊಂಡಿದ್ದರು. ಕೊಟ್ಟ ಮಾತಿನಂತೆ ಕಟ್ಟಡ ಮೇಲ್ಛಾವಣಿ ನಿರ್ಮಾಣದ ಕೆಲಸವನ್ನು ಯಶ್ ತಂಡ ಆರಂಭಿಸಿದೆ. ಯಶ್ ನಂತರ ಗೋಶಾಲೆಯ ಸಹಾಯಕ್ಕೆ ದರ್ಶನ್ ಮುಂದಾಗಿದ್ದು, ಗೋಶಾಲೆಗೆ ಭೇಟಿಕೊಟ್ಟು ಹಸುಗಳಿಗೆ ಹುಲ್ಲು ತರಿಸಿಕೊಟ್ಟಿದ್ದರು.

    ಚೈತ್ರ ಗೋ ಶಾಲೆಗೆ 15 ಟ್ರಾಕ್ಟರ್ ಭತ್ತದ ಹುಲ್ಲನ್ನು ದರ್ಶನ್ ನೀಡಿದ್ದರು. ಈ ವಿಡಿಯೋವನ್ನು ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದು, ಇದೀಗ ವಿಡಿಯೋ ಹರಿದಾಡುತ್ತಿದೆ.

     

    ಬೇಸಿಗೆ ಕಾಲ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಜಾನುವಾರುಗಳಿಗೆ ಮೇವಿನ ಅಭಾವ ಉಂಟಾಗುವುದು ಸಹಜವಾಗಿದೆ. ಹೀಗಾಗಿ ಗೋ ಶಾಲೆಯಲ್ಲಿರುವ ಸುಮಾರು 50 ದನಗಳಿಗೆ ಯಾವುದೇ ರೀತಿಯ ಮೇವಿನ ಅಭಾವ ಉಂಟಾಗಬಾರದು ಎಂದು ದರ್ಶನ್ 15 ಟ್ರ್ಯಾಕ್ಟರ್ ಹುಲ್ಲನ್ನು ಖರೀದಿ ಮಾಡಿ, ಈ ಗೋ ಶಾಲೆಗೆ ನೀಡಿದ್ದಾರೆ. ಈ ಹಿಂದೆಯೂ ಸಹ ದರ್ಶನ್ ಸಾಕಷ್ಟು ಗೋಶಾಲೆಗಳಿಗೆ ಇದೇ ರೀತಿ ಮೇವು ಹಾಗೂ ಧನ ಸಹಾಯ ಎರಡನ್ನು ಮಾಡಿದ್ದರು.

    ಸದ್ಯ ಮೂಕ ಪ್ರಾಣಿಗಳ ಸಹಾಯಕ್ಕೆ ನಿಂತಿರುವ ಮೂಲಕ ಜೋಡೆತ್ತುಗಳು ಸದ್ದು ಮಾಡಿದ್ದಾರೆ. ಈ ಹಿಂದೆ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸುಮಲತಾ ಅಂಬರೀಶ್ ಪರ ಪ್ರಚಾರ ನಡೆಸಿ ಸಾಕಷ್ಟು ಸುದ್ದಿಯಾಗಿದ್ದರು.

  • ಗೋಶಾಲೆಗೆ ಸಾರಥಿ ಅನುದಾನ

    ಗೋಶಾಲೆಗೆ ಸಾರಥಿ ಅನುದಾನ

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಪ್ರಾಣಿಗಳೆಂದರೆ ತುಂಬಾ ಪ್ರೀತಿ. ಯಾವಾಗಲೂ ಮೂಕ ಪ್ರಾಣಿಗಳಿಗೆ ತಮ್ಮ ಕೈಲಾದ ಸಹಾಯ ಮಾಡುತ್ತಿರುತ್ತಾರೆ. ಇದೀಗ ದರ್ಶನ್ ಗೋಶಾಲೆಗೆ ಅನುದಾನ ನೀಡಿದ್ದಾರೆ.

    ನಟ ದರ್ಶನ್ ಗೋ ಶಾಲೆಗೆ ಟ್ರ್ಯಾಕ್ಟರ್ ಗಟ್ಟಲೇ ಮೇವನ್ನು ಅನುದಾನ ಮಾಡಿದ್ದಾರೆ. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ದೊಡ್ಡ ಬ್ಯಾಡರಹಳ್ಳಿ ಗ್ರಾಮದಲ್ಲಿರುವ ಚೈತ್ರ ಗೋಶಾಲಾಗೆ ಅನುದಾನ ಮಾಡಿದ್ದಾರೆ. ಚೈತ್ರ ಗೋಶಾಲೆಗೆ ಮೇವು ಸಾಗಿಸುತ್ತಿರುವ ವಿಡಿಯೋವನ್ನು ಅಭಿಮಾನಿಗಳು ತಮ್ಮ ಟ್ಟಿಟ್ಟರಿನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

    ವಿಡಿಯೋದಲ್ಲಿ ಸಾಲು ಸಾಲು ಆಗಿ ಸುಮಾರು 15 ರಿಂದ 20 ಟ್ರ್ಯಾಕ್ಟರ್ ಹುಲ್ಲನ್ನು ಗೋಶಾಲೆಗೆ ಅನುದಾನ ಮಾಡಿದ್ದಾರೆ. ಅಷ್ಟೇ ಅಲ್ಲದೇ ಸ್ವತಃ ದರ್ಶನ್ ಅವರು ಗೋಶಾಲೆಗೆ ಹೋಗಿ ಹಸುಗಳನ್ನು ನೋಡಿ ಖುಷಿ ಪಟ್ಟಿದ್ದು, ಗೋಗಳ ಜೊತೆ ಕೆಲ ಸಮಯ ಕಳೆದಿದ್ದಾರೆ. ದರ್ಶನ್ ಅವರಿಗೆ ಪ್ರಾಣಿಗಳ ಮೇಲೆ ಇರುವ  ಪ್ರೀತಿಗೆ ಅಭಿಮಾನಿಗಳು ಮನಸೋತಿದ್ದಾರೆ.

    ಈಗಾಗಲೇ ಅಭಿಮಾನಿಗಳು ದರ್ಶನ್ ಹುಟ್ಟುಹಬ್ಬಕ್ಕೆ ಸಾಕಷ್ಟು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಆದರೆ ತಮ್ಮ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸದಂತೆ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಅಭಿಮಾನಿಗಳಿಗೆ ತಿಳಿಸಲು ದರ್ಶನ್ ತಮ್ಮ ಮನೆ ಮುಂದೆ ದೊಡ್ಡ ಬೋರ್ಡ್ ಹಾಕಿದ್ದಾರೆ.

    “ಬ್ಯಾನರ್, ಕೇಕ್ ಹಾಗೂ ಹಾರಗಳನ್ನು ದಯಮಾಡಿ ತರಬೇಡಿ. ಅದೇ ಹಣದಲ್ಲಿ ಈ ವರ್ಷವೂ ಸಹ ನಿಮ್ಮ ಕೈಲಾದ ಅಕ್ಕಿ, ಬೇಳೆ, ಸಕ್ಕರೆ ಹಾಗೂ ಇತರೆ ದವಸ-ಧಾನ್ಯಗಳನ್ನು ದಾನ ನೀಡಿ, ಅದನ್ನು ಒಗ್ಗೂಡಿಸಿ ಸೇರಬೇಕಾದ ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ಪ್ರಾಮಾಣಿಕವಾಗಿ ತಲುಪಿಸುವ ಜವಾಬ್ದಾರಿ ನನ್ನದು” ಎಂದು ಪ್ರೀತಿಯ ಅಭಿಮಾನಿಗಳಲ್ಲಿ ದರ್ಶನ್ ವಿನಂತಿ ಮಾಡಿಕೊಂಡಿದ್ದಾರೆ.