Tag: Gorilla

  • ವ್ಯಕ್ತಿ ಕಾಲಿಡಿದು ಒಳಗೆ ಎಳೆದುಕೊಳ್ಳಲು ಯತ್ನಿಸಿದ ಗೊರಿಲ್ಲಾ – ಬೋನ್‌ದಲ್ಲಿದ್ರೂ ಫುಲ್ ಸ್ಟ್ರಾಂಗ್

    ವ್ಯಕ್ತಿ ಕಾಲಿಡಿದು ಒಳಗೆ ಎಳೆದುಕೊಳ್ಳಲು ಯತ್ನಿಸಿದ ಗೊರಿಲ್ಲಾ – ಬೋನ್‌ದಲ್ಲಿದ್ರೂ ಫುಲ್ ಸ್ಟ್ರಾಂಗ್

    ಜಕಾರ್ತ: ಪ್ರಾಣಿಗಳ ಜೊತೆ ತಮಾಷೆ ಮಾಡಲು ಹೋಗಿ ಜನರು ಸಂಕಷ್ಟಕ್ಕೆ ಸಿಕ್ಕಿಕೊಳ್ಳುವುದು ಹೊಸದೇನು ಅಲ್ಲ. ಹಿಂದೆ ಝೂನಲ್ಲಿದ್ದ ಸಿಂಹವನ್ನು ರೇಗಿಸಲು ಹೋಗಿ ಒಬ್ಬ ತನ್ನ ಕೈ ಬೆರಳನ್ನೇ ಕಳೆದುಕೊಂಡಿದ್ದ. ಅದೇ ರೀತಿ ಇಲ್ಲೊಬ್ಬ ವ್ಯಕ್ತಿ, ಗೊರಿಲ್ಲಾವನ್ನು ರೇಗಿಸಿದ್ದಾನೆ. ಕೋಪಗೊಂಡ ಗೊರಿಲ್ಲಾ ಆತನ ಮೇಲೆ ದಾಳಿ ಮಾಡಲು ಯತ್ನಿಸಿದ ಆಘಾತಕಾರಿ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    ಈ ಘಟನೆ ಇಂಡೋನೇಷ್ಯಾದ ಕಸಾಂಗ್ ಕುಲಿಮ್ ಮೃಗಾಲಯದಲ್ಲಿ ನಡೆದಿದೆ. ಟ್ವಿಟ್ಟರ್ ಬಳಕೆದಾರರು ಈ ವೀಡಿಯೋ ಶೇರ್ ಮಾಡಿಕೊಂಡಿದ್ದಾರೆ. ಇಂಡೋನೇಷ್ಯಾದ ಕಸಾಂಗ್ ಕುಲಿಮ್ ಮೃಗಾಲಯದಲ್ಲಿ ಟೀನಾ ಎಂಬ ಗೊರಿಲ್ಲಾ ಬೋನ್‌ನಲ್ಲಿ ಇರುತ್ತೆ. ಹಸನ್ ಅರಿಫಿನ್ ಎಂದು ಗುರುತಿಸಲಾದ ವ್ಯಕ್ತಿ ಬೋನ್‌ ಬಳಿಗೆ ಬಂದು ಗೊರಿಲ್ಲಾವನ್ನು ರೇಗಿಸುತ್ತಾನೆ. ಪರಿಣಾಮ ಅವನ ಮೇಲೆ ದಾಳಿ ಮಾಡಲು ಗೊರಿಲ್ಲಾ ಯತ್ನಿಸಿರುವುದು ವೀಡಿಯೋದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಕೋವಿಡ್ ಸೊಂಕು ಏರಿಕೆ: ರಾಜ್ಯದಲ್ಲಿ 376, ಬೆಂಗಳೂರಿನಲ್ಲಿ 358 ಕೇಸ್ ದಾಖಲು

    ವೀಡಿಯೋದಲ್ಲಿ ಏನಿದೆ?
    ಹಸನ್ ಪಂಜರದ ಬಳಿಗೆ ಬಂದಿದ್ದು, ಗೊರಿಲ್ಲಾವನ್ನು ರೇಗಿಸಿದ್ದಾನೆ. ಸಿಟ್ಟಿಗೆದ್ದ ಗೊರಿಲ್ಲಾ, ಹಸನ್ ಬಟ್ಟೆಯನ್ನು ಬಲವಾಗಿ ಎಳೆಯಲು ಪ್ರಾರಂಭಿಸುತ್ತೆ. ಅವನು ಎಷ್ಟೇ ಕಷ್ಟಪಟ್ಟರು ಗೊರಿಲ್ಲಾ ಕೈಯಿಂದ ಬಟ್ಟೆಯನ್ನು ಬಿಡಿಸಿಕೊಳ್ಳಲು ಆಗಿಲ್ಲ. ಈ ವೇಳೆ ಹಸನ್ ಸ್ನೇಹಿತ ಸಹ ಬಂದಿದ್ದು, ಅವನ ಕೈಯಿಂದಲೂ ಬಿಡಿಸಿಕೊಳ್ಳಲು ಸಾಧ್ಯವಾಗಿಲ್ಲ. ಉದ್ರೇಕಗೊಂಡ ಗೊರಿಲ್ಲಾ ತನ್ನ ಎಲ್ಲ ಶಕ್ತಿಯಿಂದ ಹಸನ್ ಕಾಲನ್ನು ಹಿಡಿದು ತನ್ನ ಕಡೆಗೆ ಎಳೆಯಲು ಪ್ರಯತ್ನಿಸುತ್ತಿರುವುದನ್ನು ನೋಡಬಹುದು.

    ಹಸನ್‍ಗೆ ಸಹಾಯ ಮಾಡಲು ಅವನ ಸ್ನೇಹಿತ ಗೊರಿಲ್ಲಾಗೆ ಒದೆಯಲು ಪ್ರಯತ್ನಿಸಿದ್ರೂ ಯಾವುದೇ ಪ್ರಯೋಜನವಾಗಿಲ್ಲ. ನಂತರ ಅವರಿಗೆ ಸಹಾಯ ಮಾಡುವುದಕ್ಕೆ ಬೇರೆಯವರನ್ನು ಕರೆಯುತ್ತಾನೆ. ಇದನ್ನೂ ಓದಿ: ಬೀದಿ ನಾಯಿಯನ್ನ ದೊಣ್ಣೆಯಿಂದ ಹೊಡೆದು ಎರಡನೇ ಪ್ಲೋರ್‌ನಿಂದ ಬಿಸಾಕಿದ ಪಾಪಿ – ಪ್ರಕರಣ ದಾಖಲು 

    ಮೃಗಾಲಯದ ಅಧಿಕಾರಿಗಳು ಇನ್‍ಸ್ಟಾಗ್ರಾಮ್‍ನಲ್ಲಿ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಝೂಕೀಪರ್ ಒಬ್ಬರು ಗೊರಿಲ್ಲಾ ಆವರಣದ ಮುಂದೆ ಅಳವಡಿಸಲಾಗಿರುವ ಎಚ್ಚರಿಕೆ ಫಲಕವನ್ನು ತೋರಿಸುತ್ತಿರುವುದು ಕಂಡುಬಂದಿದೆ.

  • ಮೈಸೂರಿನ ಮೃಗಾಲಯದಲ್ಲಿ ಗೊರಿಲ್ಲಾದ ಹುಟ್ಟುಹಬ್ಬ ಆಚರಿಸಿದ ಸಿಬ್ಬಂದಿ

    ಮೈಸೂರಿನ ಮೃಗಾಲಯದಲ್ಲಿ ಗೊರಿಲ್ಲಾದ ಹುಟ್ಟುಹಬ್ಬ ಆಚರಿಸಿದ ಸಿಬ್ಬಂದಿ

    ಮೈಸೂರು: ಶ್ರೀಚಾಮರಾಜೇಂದ್ರ ಒಡೆಯರ್‌ ಮೃಗಾಲಯದಲ್ಲಿಂದು ಹಬ್ಬದ ವಾತಾವರಣ ಮನೆ ಮಾಡಿತ್ತು. ಮೃಗಾಲಯದ ಹೊಸ ಅತಿಥಿ ಡೆಂಬಾ ಹೆಸರಿನ ಗೊರಿಲ್ಲಾದ ಹುಟ್ಟುಹಬ್ಬ ಸಂಭ್ರಮದಿಂದ ಜರುಗಿತು.

    ಹ್ಯಾಪಿ ಬರ್ತ್ ಡೇ ಡೆಂಬ ಎಂದು ಹುಲ್ಲಿನ ಮೇಲೆ ತಿನಿಸಿನ ಮೂಲಕ ಬರೆದು ಮೃಗಾಲಯದ ಸಿಬ್ಬಂದಿ ಡೆಂಬಾಗೆ ವಿಶೇಷ ತಿನಿಸುಗಳನ್ನು ತಿನ್ನಿಸುವ ಮೂಲಕ ಹುಟ್ಟುಹಬ್ಬವನ್ನು ಆಚರಿಸಿ ಸಂತಸಪಟ್ಟರು. ಡೆಂಬ ಹುಲ್ಲಿನ ಮೇಲಿದ್ದ ತಿನಿಸುಗಳನ್ನು ನೋಡಿ ತಿನ್ನಲಾರಂಭಿಸಿತು. ಇದೀಗ ಡೆಂಬ ಹುಟ್ಟುಹಬ್ಬದ ವೀಡಿಯೋ ವೈರಲ್ ಆಗುತ್ತಿದೆ. ಇದನ್ನೂ ಓದಿ: ಜಲ್ಲಿಕಟ್ಟು ಕ್ರೀಡೆಗೆ ಕೊರೊನಾ ಮಾರ್ಗಸೂಚಿ ಜಾರಿಗೊಳಿಸಿದ ತಮಿಳುನಾಡು ಸರ್ಕಾರ

    ಕೆಲದಿನಗಳ ಹಿಂದೆ ಚೀನಾದ ಹುನಾನ್ ಪ್ರಾಂತ್ಯದ ಚಾಂಗ್‍ಶಾದ ಕ್ಸಿಯಾಂಗ್‍ಜಿಯಾಂಗ್ ನದಿ ಬಳಿ ಪ್ರಾಣಿಪ್ರೇಮಿ ತನ್ನ ಸಾಕುನಾಯಿಯ 10ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಲು ಸುಮಾರು 1,00,000 ಯುವಾನ್(ರೂ. 11 ಲಕ್ಷ) ರೂ. ಖರ್ಚು ಮಾಡಿದ್ದಾಳೆ. ಈ ಹುಟ್ಟುಹಬ್ಬಕ್ಕೆ 520 ಡ್ರೋನ್‍ಗಳನ್ನು ಬಾಡಿಗೆಗೆ ತೆಗೆದುಕೊಂಡಿರುವ ಸುದ್ದಿ ಎಲ್ಲರ ಹುಬ್ಬು ಏರಿಸುವಂತೆ ಮಾಡಿತ್ತು. ಇದನ್ನೂ ಓದಿ: ನಾಯಿ ಹುಟ್ಟುಹಬ್ಬ ಆಚರಿಸಲು 11 ಲಕ್ಷ ರೂ. ಖರ್ಚು ಮಾಡಿದ ಮಹಿಳೆ

  • ಅಟ್ಲಾಂಟಾ ಮೃಗಾಲಯದ ಗೊರಿಲ್ಲಾಗಳಲ್ಲಿ ಕೊರೊನಾ ಸೋಂಕು ದೃಢ

    ಅಟ್ಲಾಂಟಾ ಮೃಗಾಲಯದ ಗೊರಿಲ್ಲಾಗಳಲ್ಲಿ ಕೊರೊನಾ ಸೋಂಕು ದೃಢ

    ವಾಷಿಂಗ್ಟನ್: ಅಮೇರಿಕಾದ ಅಟ್ಲಾಂಟಾ ಮೃಗಾಲಯದಲ್ಲಿರುವ ಗೊರಿಲ್ಲಾಗಳಿಗೆ ಕೊರೊನಾ ಸೋಂಕು ದೃಢ ಪಟ್ಟಿದೆ.

    ಗೊರಿಲ್ಲಾಗಳಲ್ಲಿ ಕೆಲವು ದಿನಗಳಿಂದ ಕೆಮ್ಮು, ನೆಗಡಿ ಮತ್ತು ಹಸಿವಿಲ್ಲದಿರುವಿಕೆ ಮುಂತಾದ ಬದಲಾವಣೆಗಳು ಗೋಚರಿಸಿರುವುದಾಗಿ ಶುಕ್ರವಾರ ಮೃಗಾಲಯದ ಅಧಿಕಾರಿಗಳು ಹಾಗೂ ಸಿಬ್ಬಂದಿ ತಿಳಿಸಿದ್ದಾರೆ. ಇನ್ನೂ ಗೋರಿಲ್ಲಾಗಳ ಮಲ, ಮೂಗಿನ ಗಂಟಲಿನ ದ್ರವ ಮಾದರಿಯನ್ನು ಜಾರ್ಜಿಯಾ ವಿಶ್ವವಿದ್ಯಾಲಯದ ಪಶುವೈದ್ಯಕೀಯ ಪ್ರಯೋಗಾಲಯವು ಪರೀಕ್ಷಿಸಿದಾಗ ಗೊರಿಲ್ಲಾಗಳಿಗೆ ಸೋಂಕು ದೃಢಪಟ್ಟಿರುವ ವಿಚಾರ ತಿಳಿದುಬಂದಿದೆ.

    Gorilla

    ಸದ್ಯ ಈ ಕುರಿತ ಮಾಹಿತಿಯನ್ನು ಮೃಗಾಲಯವು ಏಮ್ಸ್‌ನಲ್ಲಿರುವ ರಾಷ್ಟ್ರೀಯ ಪಶುವೈದ್ಯಕೀಯ ಸೇವಾ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದೆ. ಪ್ರಾಣಿಗಳನ್ನು ನೋಡಿಕೊಳ್ಳುವ ಸಿಬ್ಬಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಅವರಿಂದ ಪ್ರಾಣಿಗಳಿಗೂ ಸೋಂಕು ಹರಡಿದೆ ಎಂದು ಹೇಳಲಾಗುತ್ತಿದೆ. ಅಲ್ಲದೇ ಆ ಸಿಬ್ಬಂದಿ ಲಸಿಕೆ ಪಡೆದು ಪ್ರಾಣಿಗಳನ್ನು ನೋಡಿಕೊಳ್ಳುತ್ತಿದ್ದರು ಎನ್ನಲಾಗುತ್ತಿದೆ. ಇದನ್ನೂ ಓದಿ:  ಕಲಬುರಗಿ ಪಾಲಿಕೆಯಲ್ಲಿ ಗದ್ದುಗೆ ಗದ್ದಲ ಮುಂದುವರಿಕೆ – ಜೆಡಿಎಸ್ ಒಲವು ಯಾರ ಕಡೆಗೆ?

    ಇದೀಗ ಮೃಗಾಲಯದಲ್ಲಿರುವ ಎಲ್ಲಾ ಪ್ರಾಣಿಗಳ ಮಾದರಿಗಳನ್ನು ಮೃಗಾಲಯ ಸಿಬ್ಬಂದಿ ಸಂಗ್ರಹಿಸಿ, ಪರೀಕ್ಷೆಸಲು ಕಳುಹಿಸಲಾಗುತ್ತಿದೆ. ಇದನ್ನೂ ಓದಿ: ಗುಜರಾತ್ ಮುಂದಿನ ಸಿಎಂ ಯಾರು?- ಪಟೇಲ್ ಸಮುದಾಯಕ್ಕೆ ಮಣೆ ಹಾಕುವ ಚಿಂತನೆ

  • ವಿಡಿಯೋ: ಕೈ ಕೊಳೆಯಾಗಬಾರದೆಂದು ಮನುಷ್ಯರಂತೆ 2 ಕಾಲಲ್ಲಿ ನಡೆದಾಡುತ್ತೆ ಈ ಗೊರಿಲ್ಲಾ

    ವಿಡಿಯೋ: ಕೈ ಕೊಳೆಯಾಗಬಾರದೆಂದು ಮನುಷ್ಯರಂತೆ 2 ಕಾಲಲ್ಲಿ ನಡೆದಾಡುತ್ತೆ ಈ ಗೊರಿಲ್ಲಾ

    ವಾಷಿಂಗ್ಟನ್: ಗೊರಿಲ್ಲಾಗಳು ಒಮ್ಮೊಮ್ಮೆ ಮನುಷ್ಯನ ರೀತಿ ಎರಡು ಕಾಲುಗಳ ಮೇಲೆ ನಡೆದಾಡೋದು ಹೊಸದೇನಲ್ಲ. ಹಾಗಂತ ಯಾವಾಗಲೂ ಅದು ಕಾಣಸಿಗುವುದಿಲ್ಲ. ಆದ್ರೆ ಅಮೆರಿಕದ ಮೃಗಾಲಯದಲ್ಲಿರೋ ಈ ಗೊರಿಲ್ಲಾ ತನ್ನ ಕೈ ತುಂಬಾ ತಿಂಡಿ ಇದ್ದರೆ ಅಥವಾ ನೆಲ ಕೆಸರಾಗಿದ್ದರೆ ತನ್ನ ಕೈಗಳು ಕೊಳೆಯಾಗಬಾರದೆಂದು ಎರಡು ಕಾಲುಗಳ ಮೇಲೆ ಮನುಷ್ಯನಂತೆ ನಡೆದಾಡುತ್ತದೆ.

    ಇಲ್ಲಿನ ಫಿಲಡೆಲ್ಫಿಯಾದ ಮೃಗಾಲಯದಲ್ಲಿರೋ ಈ ಗೊರಿಲ್ಲಾ ಹೆಸರು ಲೂಯಿಸ್. ಮೃಗಾಲಯದ ಸಿಬ್ಬಂದಿ 18 ವರ್ಷದ ಈ ವೆಸ್ಟರ್ನ್ ಲೋಲ್ಯಾಂಡ್ ಗೊರಿಲ್ಲಾದ ವಿಡಿಯೋವನ್ನ ಟ್ವಿಟ್ಟರ್ ಹಾಗೂ ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿದ್ದಾರೆ. ಸಾಮಾನ್ಯವಾಗಿ ಗೊರಿಲ್ಲಾಗಳು ಇತರೆ ಪ್ರಾಣಿಗಳಂತೆ ನಾಲ್ಕು ಕಾಲುಗಳ ಮೇಲೆ ನಡೆದಾಡಿದ್ರೆ ಇದು ಮಾತ್ರ ಮನುಷ್ಯರಂತೆ ಓಡಾಡೋದನ್ನ ವಿಡಿಯೋದಲ್ಲಿ ಕಾಣಬಹುದು.

    ‘ಸಿಕ್ಕಾಪಟ್ಟೆ ಕ್ಲೀನ್’ ಎನಿಸಿಕೊಂಡಿರೋ ಈ ಲೂಯಿಸ್‍ಗಾಗಿ ಕೆಸರು ಹೊಂಡದ ಮೇಲೆ ಅಗ್ನಿಶಾಮಕ ಕೊಳಾಯಿ ಹಾಕಬೇಕಾಯಿತು ಎಂದು ಮೃಗಾಲಯದ ಅಧಿಕಾರಿಯೊಬ್ಬರು ಹೇಳಿದ್ದಾರೆ. ಗೊರಿಲ್ಲಾಗಳು ಹೀಗೆ ಮನುಷ್ಯರಂತೆ ಓಡಾಡೋದು ತುಂಬಾ ಅಪರೂಪ ಎಂದು ಅವರು ಹೇಳಿದ್ದಾರೆ.

    ಆದ್ರೆ ಇದನ್ನ ನೋಡಿದವರು ತಮಾಷೆ ಮಾಡಿದ್ದು, ಇದು ಫೇಕ್. ಮನುಷ್ಯನೇ ಗೊರಿಲ್ಲಾ ರೀತಿ ವೇಷ ಧರಿಸಿರುವಂತಿದೆ. ಎರಡು ಕಾಲುಗಲ ಮೇಲೆ ನಡೆಯುವಾಗ ಕಯಲ್ಲಿ ಹೆಚ್ಚಿಗೆ ತಿಂಡಿ ಹಿಡಿದುಕೊಳ್ಳಬಹುದು. ಆದ್ದರಿಂದ ಇದರ ಬಗ್ಗೆ ದೂರಲು ಆಗಲ್ಲ ಎಂದು ಕಮೆಂಟ್ ಮಾಡಿದ್ದಾರೆ.

    ಗೊರಿಲ್ಲಾ ಲೂಯಿಸ್, 6 ಅಡಿ ಎತ್ತರ ಹಾಗೂ 200 ಕೆಜಿ ತೂಕವಿದ್ದು, 1999ರಲ್ಲಿ ಮಿಸ್ಸೌರಿಯ ಸೆಂಟ್ ಲೂಯಿಸ್ ಮೃಗಾಲಯದಲ್ಲಿ ಜನಿಸಿತ್ತು. 2004ರಲ್ಲಿ ಫಿಲಡೆಲ್ಫಿಯಾದ ಮೃಗಾಲಯಕ್ಕೆ ಕರೆತರಲಾಗಿದೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.

  • ಮನುಷ್ಯರೇ ನಾಚುವಂತೆ ಡ್ಯಾನ್ಸ್ ಮಾಡಿತು ಗೋರಿಲ್ಲಾ: ವಿಡಿಯೋ ನೋಡಿ

    ಮನುಷ್ಯರೇ ನಾಚುವಂತೆ ಡ್ಯಾನ್ಸ್ ಮಾಡಿತು ಗೋರಿಲ್ಲಾ: ವಿಡಿಯೋ ನೋಡಿ

    ವಾಷಿಂಗ್ಟನ್: ನೀರು ಅಂದ್ರೆ ಯಾರಿಗಾದ್ರೂ ಉತ್ಸಾಹ ಉಕ್ಕಿ ಬರೋದು ಸಹಜ. ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರ ತನಕ ನೀರು ಅಂದ್ರೆ ತುಂಬಾನೇ ಇಷ್ಟ ಪಡುತ್ತಾರೆ. ಈಗ ಗೋರಿಲ್ಲಾ ಒಂದು ನೀರಿನಲ್ಲಿ ನೃತ್ಯ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ.

    ಅಮೆರಿಕಾದ ಡಲ್ಲಾಸ್ ಮೃಗಾಲಯದಲ್ಲಿ ಗೋರಿಲ್ಲಾವೊಂದು ನೀರಿನ ತೊಟ್ಟಿಯಲ್ಲಿ ನಿಂತು ಡ್ಯಾನ್ಸ್ ಮಾಡಿದೆ. ಹೌದು, ಈ 14 ವರ್ಷದ ಗಂಡು ಗೊರಿಲ್ಲ ಬಕೆಟ್ ನೀರಿನಲ್ಲಿ ನಿಂತು ಸಖತ್ ಡ್ಯಾನ್ಸ್ ಮಾಡಿದೆ. ಇದನ್ನು ಪ್ರವಾಸಿಗರೊಬ್ಬರು ಚಿತ್ರೀಕರಿಸಿದ್ದು, ವಿಡಿಯೋವನ್ನು ಯುಟ್ಯೂಬ್‍ಗೆ ಅಪ್ಲೋಡ್ ಮಾಡಲಾಗಿದೆ.

    ಈ ವಿಡಿಯೋವನ್ನು ಇದೂವರೆಗೆ 19 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.