Tag: Gorge

  • ಮುಂಬೈ-ಪುಣೆ ಹೆದ್ದಾರಿಯಲ್ಲಿ ಪ್ರಪಾತಕ್ಕೆ ಉರುಳಿದ ಬಸ್; 12 ಸಾವು

    ಮುಂಬೈ-ಪುಣೆ ಹೆದ್ದಾರಿಯಲ್ಲಿ ಪ್ರಪಾತಕ್ಕೆ ಉರುಳಿದ ಬಸ್; 12 ಸಾವು

    ಮುಂಬೈ: ಸಂಗೀತ ತಂಡವೊಂದರ ಸದಸ್ಯರನ್ನು ಕರೆದೊಯ್ಯುತ್ತಿದ್ದ ಬಸ್ ಪ್ರಪಾತಕ್ಕೆ (Gorge) ಉರುಳಿದ ಪರಿಣಾಮ 12 ಜನರು ಸಾವನ್ನಪ್ಪಿದ ಘಟನೆ ಮಹಾರಾಷ್ಟ್ರದ (Maharashtra) ರಾಯಗಢ ಜಿಲ್ಲೆಯ ಮುಂಬೈ-ಪುಣೆ ಹೆದ್ದಾರಿಯಲ್ಲಿ ಶನಿವಾರ ಮುಂಜಾನೆ ಸಂಭವಿಸಿದೆ.

    ಪುಣೆಯಿಂದ (Pune) ಮುಂಬೈಗೆ (Mumbai) ಹೋಗುತ್ತಿದ್ದಾಗ ಹೆದ್ದಾರಿಯ ಶಿಂಗ್ರೋಬಾ (Shingroba temple) ದೇವಸ್ಥಾನದ ಬಳಿ ಮುಂಜಾನೆ 4.50ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಘಟನೆಯಲ್ಲಿ 27 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಶಿಗ್ಗಾಂವಿ ಕ್ಷೇತ್ರದಿಂದ ಸ್ಪರ್ಧೆ – ಇಂದು ಸಿಎಂ ಬೊಮ್ಮಾಯಿ ನಾಮಪತ್ರ ಸಲ್ಲಿಕೆ

    ಬಾಜಿ ಪ್ರಭು ವಾಡಕ್ ಗ್ರೂಪ್‍ನ ಸದಸ್ಯರು ಪುಣೆ ಜಿಲ್ಲೆಯ ಪಿಂಪ್ರಿ ಚಿಂಚ್‍ವಾಡ್‍ನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮುಂಬೈನ ಗೋರೆಗಾಂವ್‍ಗೆ (Goregaon) ಹಿಂತಿರುಗುತ್ತಿದ್ದರು. ಶನಿವಾರ ನಡುರಾತ್ರಿ 1 ಗಂಟೆ ಸುಮಾರಿಗೆ ಬಸ್ ಸ್ಥಳದಿಂದ ನಿರ್ಗಮಿಸಿತ್ತು. ಪ್ರಯಾಣಿಕರು ಮುಂಬೈನ ಸಿಯಾನ್ ಮತ್ತು ಗೋರೆಗಾಂವ್‍ನ ನೆರೆಯ ಪಾಲ್ಘರ್ ಜಿಲ್ಲೆಯ ವಿರಾರ್‌ಗೆ ಸೇರಿದವರು ಎಂದು ರಾಯಗಢ ಪೊಲೀಸ್ ವರಿಷ್ಠಾಧಿಕಾರಿ ಸೋಮನಾಥ್ ಘರ್ಗೆ ತಿಳಿಸಿದ್ದಾರೆ.

    ಸ್ಥಳೀಯ ಪೊಲೀಸರ ತಂಡ ಮತ್ತು ಚಾರಣಿಗರ ತಂಡ ಸದ್ಯ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ. ಗಾಯಾಳುಗಳನ್ನು ಖೋಪೋಲಿ (Khopoli) ಗ್ರಾಮಾಂತರ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ ಅಭ್ಯರ್ಥಿ ಬಾಬುರಾವ್‌ ಚಿಂಚನಸೂರ್‌ ಕಾರು ಅಪಘಾತ – ಮಾಜಿ ಸಚಿವ ಆಸ್ಪತ್ರೆಗೆ ದಾಖಲು

  • ಕಂದಕಕ್ಕೆ ಉರುಳಿದ ಕಾರು- ಇಬ್ಬರು ಬಾಲಕಿಯರು ಸೇರಿ ಐವರು ಸಾವು

    ಕಂದಕಕ್ಕೆ ಉರುಳಿದ ಕಾರು- ಇಬ್ಬರು ಬಾಲಕಿಯರು ಸೇರಿ ಐವರು ಸಾವು

    ಶ್ರೀನಗರ: ಚಾಲನ ನಿಯಂತ್ರಣ ತಪ್ಪಿದ ಕಾರು ಆಳವಾದ ಕಂದಕಕ್ಕೆ ಬಿದ್ದು ಇಬ್ಬರು ಬಾಲಕಿಯರು ಸೇರಿದಂತೆ ಐವರು ಮೃತಪಟ್ಟ ದುರ್ಘಟನೆ ಜಮ್ಮು ಮತ್ತು ಕಾಶ್ಮೀರದ ರಾಂಬನ್ ಜಿಲ್ಲೆಯಲ್ಲಿ ಶನಿವಾರ ನಡೆದಿದೆ.

    ಖುಡ್ಮಲ್ಲಾ ದನ್ಮಾಸ್ತಾದ ಮೊಹಮ್ಮದ್ ಅಶ್ರಫ್ ಜರಾಲ್ ಅವರ ಪುತ್ರಿ ನೀಲೋಫರ್ ಬಾನೊ (16), ಬಟೋಟ್‍ದ ಧ್ಯಾನ್ ಚಂದ್ ಅವರ ಪತ್ನಿ ತರ್ಡಾ ದೇವಿ (54), ಕ್ರಿಮ್ಚಿಯ ಸುಭಾಶ್ ಸಿಂಗ್ ಅವರ ಪುತ್ರಿ ಸಾನ್ವಿ ದೇವಿ (10), ಅಲಿನ್‍ಬಾಸ್‍ನ ಮೊಹಮ್ಮದ್ ಇಕ್ಬಾಲ್ ಜರಾಲ್ ಮತ್ತು ಚಾಲಕ ಜಾವಿದ್ ಅಹ್ಮದ್ ಜರಾಲ್ (45) ಮೃತ ದುರ್ದೈವಿಗಳು.

    ರಾಂಬನ್ ಜಿಲ್ಲೆಯ ರಾಮ್ಸು ಪ್ರದೇಶದ ಅಲಿನ್‍ಬಾಸ್‍ನಿಂದ ಉಖ್ರಾಲ್‍ಗೆ ಕಾರಿನಲ್ಲಿ ಒಟ್ಟು ಎಂಟು ಮಂದಿ ಪ್ರಯಾಣಿಸುತ್ತಿದ್ದರು. ಮಾರ್ಗಮಧ್ಯೆದಲ್ಲಿ ಕಾರು ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಬಿದ್ದಿದೆ. ಸ್ಥಳದಲ್ಲಿಯೇ ನಾಲ್ವರು ಮೃತಪಟ್ಟಿದ್ದು, ಗಂಭಿರವಾಗಿ ಗಾಯಗೊಂಡಿದ್ದ ಚಾಲಕನನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಉಳಿದಂತೆ ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ರಾಂಬನ್ ಎಸ್‍ಪಿ ಅನಿತಾ ಶರ್ಮಾ ತಿಳಿಸಿದ್ದಾರೆ.

    ವೇಗವಾಗಿ ಕಾರು ಚಾಲನೆ ಮಾಡಿದ್ದೇ ಅಪಘಾತಕ್ಕೆ ಕಾರಣ ಎನ್ನುವುದು ಸ್ಪಷ್ಟವಾಗಿಲ್ಲ. ಈ ಸಂಬಂಧ ತನಿಖೆ ಆರಂಭವಾಗಿದೆ ಎಂದು ಹೇಳಿದರು.

    ಜಮ್ಮು ಮತ್ತು ಕಾಶ್ಮೀರದಲ್ಲಿ ರಸ್ತೆ ಅಪಘಾತಗಳು ಹೊಸದೇನಲ್ಲ. ಈ ಹಿಂದೆ ಜುಲೈ 1ರಂದು ಕಿಶ್‍ತ್ವಾರ್ ಜಿಲ್ಲೆಯಲ್ಲಿ ಮಿನಿ ಬಸ್ ರಸ್ತೆಯಿಂದ ಜಾರಿ ಆಳವಾದ ಕಂದಕಕ್ಕೆ ಬಿದ್ದು 35 ಜನರು ಸಾವನ್ನಪ್ಪಿದ್ದರು. ಅಷ್ಟೇ ಅಲ್ಲದೆ 17 ಮಂದಿ ಗಾಯಗೊಂಡಿದ್ದರು. ಜೂನ್ 27ರಂದು ಮೊಘಲ್ ರಸ್ತೆಯಲ್ಲಿ ವೇಗವಾಗಿ ಬರುತತ್ತಿದ್ದ ಟೆಂಪೋ ರಸ್ತೆಯಿಂದ ಜಾರಿ ಕಂದಕಕ್ಕೆ ಬಿದ್ದ ಪರಿಣಾಮ ಪೂಂಚ್‍ನ 9 ಬಾಲಕಿಯರನ್ನು ಒಳಗೊಂಡಂತೆ 11 ವಿದ್ಯಾರ್ಥಿಗಳು ಸಾವನ್ನಪ್ಪಿದ್ದರು.

  • 700 ಮೀ. ಆಳದ ಕಂದಕಕ್ಕೆ ಬಿದ್ದ 37 ಜನರಿದ್ದ ಪ್ರವಾಸದ ಬಸ್

    700 ಮೀ. ಆಳದ ಕಂದಕಕ್ಕೆ ಬಿದ್ದ 37 ಜನರಿದ್ದ ಪ್ರವಾಸದ ಬಸ್

    ಕಠ್ಮಂಡು: ಶೈಕ್ಷಣಿಕ ಪ್ರವಾಸಕ್ಕೆ ತೆರಳಿದ್ದ ಬಸ್‍ವೊಂದು ಕಂದಕಕ್ಕೆ ಬಿದ್ದ ಪರಿಣಾಮ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸೇರಿದಂತೆ 23 ಜನ ಮೃತಪಟ್ಟ ದುರ್ಘಟನೆ ನೇಪಾಳದಲ್ಲಿ ನಡೆದಿದೆ.

    ಸಲ್ಯಾನ್ ಜಿಲ್ಲೆಯ ಕಪುರ್ ಕೋಟ್‍ನಿಂದ ಬಸ್‍ನಲ್ಲಿ ಕಾಲೇಜಿಗೆ ಹಿಂದಿರುಗುತ್ತಿದ್ದಾಗ ಈ ಅನಾಹುತ ಸಂಭವಿಸಿದೆ. ಬಸ್ ನಲ್ಲಿದ್ದ 37 ಜನರು ಪೈಕಿ ಚಾಲಕ, ಇಬ್ಬರು ಶಿಕ್ಷಕರು ಹಾಗೂ 20 ಜನ ವಿದ್ಯಾರ್ಥಿಗಳು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಅಷ್ಟೇ ಅಲ್ಲದೆ 5 ಜನ ಮಹಿಳೆಯರು ಸೇರಿದಂತೆ 14 ಜನರ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ವಿದ್ಯಾರ್ಥಿಗಳು ಸುಮಾರು 16ರಿಂದ 20 ವರ್ಷದವರು ಎಂದು ವರದಿಯಾಗಿದೆ.

    ಘಟನೆಯ ವಿವರ:
    ನೇಪಾಳದ ಕೃಷ್ಣ ಸೇನ್ ಇಚ್ಚುಕ್ ಪಾಲಿಕೆಟ್ನಿಕ್ ಇನ್‍ಸ್ಟಿಟ್ಯೂಟ್‍ನ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸಸ್ಯಶಾಸ್ತ್ರ ಅಧ್ಯಯನಕ್ಕೆಂದು ಸಲ್ಯಾನ್ ಜಿಲ್ಲೆಯ ಕಪುರ್ ಕೋಟ್ ತೆರಳಿದ್ದರು. ಶೈಕ್ಷಣಿಕ ಪ್ರವಾಸ ಮುಗಿಸಿಕೊಂಡು ಶುಕ್ರವಾರ ಮರಳುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿದ ಬಸ್ 700 ಮೀ. ಆಳದ ಕಂದಕಕ್ಕೆ ಬಿದ್ದಿದೆ. ಪರಿಣಾಮ 37 ಜನ ಪ್ರಯಾಣಿಕರಲ್ಲಿ 23 ಜನರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

    ದಾಂಗ್ ಜಿಲ್ಲೆಯ ತುಲ್ಸಿಪುರ್ ಸಮೀಪದ ರಾಮ್ರಿ ಗ್ರಾಮದ ಬಳಿ ಇರುವ ಕಂದಕದಲ್ಲಿ ಈ ಅನಾಹುತ ಸಂಭವಿಸಿದೆ. ಈ ಕುರಿತು ಮಾಹಿತಿ ಪಡೆಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಗಂಭೀರವಾಗಿ ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಿದ್ದಾರೆ.

    ವೇಗವಾಗಿ ಚಾಲನೆ ಮಾಡಿದ್ದರಿಂದಲೇ ಬಸ್ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಬಿದ್ದಿ ಎಂದು ಪೊಲೀಸ್ ಅಧಿಕಾರಿ ಬೆಲ್ ಬಹುದ್ದುರ್ ಪಾಂಡೆ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಣಿವೆಗೆ ಜಾರಿ ಬಿದ್ದ ಬಸ್- 21 ಮಂದಿಗೆ ಗಾಯ

    ಕಣಿವೆಗೆ ಜಾರಿ ಬಿದ್ದ ಬಸ್- 21 ಮಂದಿಗೆ ಗಾಯ

    ಶಿಮ್ಲಾ: ಹಿಮಾಚಲ ಪ್ರದೇಶದ ಸೋಲನ್-ಶಿಮ್ಲಾ ಗಡಿಯಲ್ಲಿರುವ ಕಿಯಾರಿ ನಲ್ಲಾದ ಬಳಿಯ ಕಣಿವೆಗೆ ಪ್ರವಾಸಿಗರ ಬಸ್ಸೊಂದು ಬಿದ್ದು 21 ಮಂದಿ ಗಾಯಗೊಂಡಿರುವ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ.

    ಹಿಮಾಚಲ ಪ್ರದೇಶಕ್ಕೆ ಪ್ರವಾಸಕ್ಕೆಂದು ಈ 21 ಮಂದಿ ಬಂದಿದ್ದರು. ಈ ವೇಳೆ ಸೋಲನ್- ಶಿಮ್ಲಾದ ಗಡಿ ಭಾಗದ ಕಿಯಾರಿ ನಲ್ಲಾದ ಬಳಿ ಬರುತ್ತಿದಂತೆ ಪ್ರವಾಸಿಗರ ಬಸ್ಸು ರಸ್ತೆಯಿಂದ ಜಾರಿ ಪಲ್ಟಿಯಾಗಿ ಕಣಿವೆಗೆ ಬಿದ್ದಿದೆ. ಅಪಘಾತದಲ್ಲಿ ಬಸ್ಸಿನಲ್ಲಿದ್ದ ಎಲ್ಲಾ ಪ್ರವಾಸಿಗರು ಗಾಯಗೊಂಡಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

    ಸೋಲನ್- ಶಿಮ್ಲಾ ರಸ್ತೆಗಳಲ್ಲಿ ಬಹಳಷ್ಟು ಅಪಘಾತಗಳು ಸಂಭವಿಸುತ್ತಲೇ ಇರುತ್ತದೆ. ಈ ಭಾಗದ ರಸ್ತೆಗಳಲ್ಲಿ ಪ್ರಯಾಣಿಸುವಾಗ ಎಚ್ಚರಿಕೆಯಿಂದ ವಾಹನ ಚಾಲನೆ ಮಾಡಬೇಕು ಎಂದು ಶಿಮ್ಲಾ ಪೊಲೀಸ್ ಅಧಿಕಾರಿ ಉಮಾಪತಿ ಜಮ್ವಾಲ್ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • 300 ಅಡಿ ಕಣಿವೆಗೆ ಉರುಳಿ ಬಿತ್ತು ಬಸ್- 13 ಸಾವು!

    300 ಅಡಿ ಕಣಿವೆಗೆ ಉರುಳಿ ಬಿತ್ತು ಬಸ್- 13 ಸಾವು!

    ಜಮ್ಮು: ಚಾಲಕನ ನಿಯಂತ್ರಣ ತಪ್ಪಿ 300 ಅಡಿಯ ಕಣಿವೆಗೆ ಮಿನಿ ಬಸ್ಸೊಂದು ಉರುಳಿ ಬಿದ್ದ ಪರಿಣಾಮ ಸ್ಥಳದಲ್ಲಿಯೇ 13 ಜನ ಮೃತಪಟ್ಟ ಘಟನೆ ಜಮ್ಮು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯಲ್ಲಿ ನಡೆದಿದೆ.

    ಶುಕ್ರವಾರ ಬೆಳಗ್ಗೆ 30 ಪ್ರಯಾಣಿಕರಿದ್ದ ಮಿನಿ ಬಸ್ಸು ಕಿಸ್ತ್ವಾರ್ ದಿಂದ ಕೆಶ್ವನ್ ಕಡೆಗೆ ಹೊರಟಿತ್ತು. ಈ ವೇಳೆ ಥಾಕ್ರೈ ಸಮೀಪ್ ದಾಂದರಬ್‍ಗೆ ಬರುತ್ತಿದ್ದಂತೆ ಚಾಲಕ ನಿಯಂತ್ರಣ ತಪ್ಪಿದ ಪರಿಣಾಮ ಬಸ್ಸು 300 ಅಡಿ ಆಳದ ಕಮರಿಗೆ ಬಿದ್ದಿದೆ. ಘಟನಾ ಸ್ಥಳದಲ್ಲಿಯೇ ಚೆನಾಬ್ ನದಿ ಹರಿಯುತ್ತಿದ್ದು, ಅದೃಷ್ಟವಶಾತ್ ನದಿಯ ದಂಡೆಯ ಮೇಲೆಯೇ ಬಸ್ ನಿಂತಿದೆ.

    ಅಪಘಾತದಲ್ಲಿ 13 ಜನರು ಮೃತಪಟ್ಟರೆ, 13 ಮಂದಿ ಗಾಯಗೊಂಡಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ರಕ್ಷಣಾ ಕಾರ್ಯ ಆರಂಭಿಸಲಾಯಿತು ಎಂದು ಕಿಸ್ತ್ವಾರ್ ದ ಹಿರಿಯ ಅಧೀಕ್ಷಕ ರಾಜೇಂದ್ರ ಗುಪ್ತಾ ತಿಳಿಸಿದ್ದಾರೆ.

    ಗಂಭೀರವಾಗಿ ಗಾಯಗೊಂಡಿದ್ದ 8 ಜನರನ್ನು ಪ್ರಪಾತದಿಂದ ಮೇಲೆತ್ತಿ ಆಸ್ಪತ್ರೆಗೆ ಸಾಗಿಸಲಾಗಿದೆ. ಅಪಘಾತದಲ್ಲಿ ಮೃತರ ಕುಟುಂಬಕ್ಕೆ 5 ಲಕ್ಷ ರೂ. ಹಾಗೂ ಗಾಯಗೊಂಡವರಿಗೆ 50 ಸಾವಿರ ರೂ. ಪರಿಹಾರ ಧನ ನೀಡುವುದಾಗಿ ಕಿಸ್ತ್ವಾರ್ ಉಪ ಕಮಿಷನರ್ ಅಂಗ್ರೆಜ್ ಸಿಂಗ್ ರಾಣಾ ಘೋಷಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv