Tag: Gorakhpur

  • ಡುಮ್ಮ ಅಂದಿದ್ದಕ್ಕೆ ಅತಿಥಿಗಳಿಗೆ ಗುಂಡಿಕ್ಕಿದ ಭೂಪ

    ಡುಮ್ಮ ಅಂದಿದ್ದಕ್ಕೆ ಅತಿಥಿಗಳಿಗೆ ಗುಂಡಿಕ್ಕಿದ ಭೂಪ

    ಲಕ್ನೋ (ಗೋರಖ್‌ಪುರ): ತನ್ನನ್ನು ಡುಮ್ಮ, ಬೊಬ್ಬು ಎಂದು ಕರೆದಿದ್ದಕ್ಕೆ ಕೋಪಗೊಂಡ ಯುವಕ, ಇಬ್ಬರು ಅತಿಥಿಗಳ ಮೇಲೆ ಗುಂಡು ಹಾರಿಸಿ ಕೊಲೆಗೆ ಯತ್ನಿಸಿರುವ ಘಟನೆ ಉತ್ತರ ಪ್ರದೇಶದ ಗೋರಖ್‌ಪುರ (Gorakhpur) ಜಿಲ್ಲೆಯಲ್ಲಿ ನಡೆದಿದೆ.

    ಘಟನೆ ನಡೆದ ಮರುದಿನ ಖಜ್ನಿ ಪೊಲೀಸ್ ಠಾಣೆಯಲ್ಲಿ (Khajni police Station) ದೂರು ದಾಖಲಾಗಿದ್ದು, ನಂತರ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ. ಬೆಲ್‌ಘಾಟ್ ಪ್ರದೇಶದ ನಿವಾಸಿ ಅರ್ಜುನ್ ಚೌಹಾಣ್ ಬಂಧಿತ ಆರೋಪಿ. ಇದನ್ನೂ ಓದಿ: ನಾಗ್ರೋಟಾದಲ್ಲಿ ಭಾರತೀಯ ಸೇನೆ & ಶಂಕಿತ ಉಗ್ರರ ನಡುವೆ ಗುಂಡಿನ ಚಕಮಕಿ

    ಅಷ್ಟಕ್ಕೂ ಆಗಿದ್ದೇನು?
    ಅರ್ಜುನ್‌ ಇತ್ತೀಚೆಗೆ ತನ್ನ ಚಿಕ್ಕಪ್ಪನೊಂದಿಗೆ ದೇವಸ್ಥಾನವೊಂದರಲ್ಲಿ ನಡೆಯುತ್ತಿದ್ದ ಔತಣಕೂಟಕ್ಕೆ ಹೋಗಿದ್ದ. ಈ ವೇಳೆ ಮಂಜರಿಯಾದ ಅನಿಲ್ ಚೌಹಾಣ್ ಮತ್ತು ಶುಭಮ್ ಚೌಹಾಣ್ ಎಂಬ ಇಬ್ಬರು ಅತಿಥಿಗಳು ತಾನು ಡುಮ್ಮ, ಬೊಜ್ಜು ಅಂತ ಸಿಕ್ಕಾಪಟ್ಟೆ ಅಪಹಾಸ್ಯ ಮಾಡುತ್ತಿದ್ದರು. ಇದರಿಂದ ಕೋಪಗೊಂಡ ಅರ್ಜುನ್‌ ತನ್ನ ಸ್ನೇಹಿತ ಆಸಿಫ್‌ ಖಾನ್‌ ಜೊತೆಗೆ ಆ ಇಬ್ಬರು ಅತಿಥಿಗಳನ್ನ ಹಿಂಬಾಲಿಸಿದ್ದ. ಗೋರಖ್‌ಪುರದ ತೆನುವಾ ಟೋಲ್ ಪ್ಲಾಜಾ ಬಳಿ ಕಾರು ನಿಲ್ಲಿಸಿ, ಇಬ್ಬರನ್ನೂ ಹೊರಗೆಳೆದು ಗುಂಡು ಹಾರಿಸಿ ಪರಾರಿಯಾಗಿದ್ದ ಎಂದು ದಕ್ಷಿಣ ಎಸ್ಪಿ ಜಿತೇಂದ್ರ ಕುಮಾರ್‌ ತಿಳಿಸಿದ್ದಾರೆ. ಇದನ್ನೂ ಓದಿ: ಪಹಲ್ಗಾಮ್‌ ಭಯೋತ್ಪಾದಕ ದಾಳಿಯನ್ನು ಚೀನಾ ಖಂಡಿಸುತ್ತದೆ: ಅಜಿತ್‌ ದೋವಲ್‌ಗೆ ಫೋನ್‌ ಕರೆಯಲ್ಲಿ ಚೀನಾ ಸ್ಪಷ್ಟನೆ

    ಗುಂಡೇಟು ಬಿದ್ದಿದ್ದ ಇಬ್ಬರನ್ನೂ ಅಲ್ಲಿನ ದಾರಿಹೋಕರು ಸ್ಥಳೀಯ ಆಸ್ಪತ್ರೆಗೆ ಸೇರಿಸಿದ್ದರು, ಹೆಚ್ಚುವರಿ ಚಿಕಿತ್ಸೆಗಾಗಿ ಅವರನ್ನ ಗೋರಖ್‌ ಪುರ ಜಿಲ್ಲಾ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಯಿತು. ಸದ್ಯ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವರದಿಗಳು ತಿಳಿಸಿವೆ. ಶುಭಂ ಚೌಹಾಣ್ ಅವರ ತಂದೆಯ ದೂರಿನ ಆಧಾರದ ಮೇಲೆ, ಎಫ್‌ಐಆರ್ ದಾಖಲಿಸಲಾಗಿದ್ದು, ಶುಕ್ರವಾರ ಆರೋಪಿಯನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಪದ್ಮಶ್ರೀ ಪುರಸ್ಕೃತ ಡಾ.ಸುಬ್ಬಣ್ಣ ಅಯ್ಯಪ್ಪನ್ ನಿಗೂಢ ಸಾವು – ಕಾವೇರಿ ನದಿಯಲ್ಲಿ ಶವ ಪತ್ತೆ

  • ಬಿಹಾರದಿಂದ ಕಳ್ಳಸಾಗಾಣಿಕೆಯಾಗುತ್ತಿದ್ದ 95 ಮಕ್ಕಳ ರಕ್ಷಣೆ

    ಬಿಹಾರದಿಂದ ಕಳ್ಳಸಾಗಾಣಿಕೆಯಾಗುತ್ತಿದ್ದ 95 ಮಕ್ಕಳ ರಕ್ಷಣೆ

    ಲಕ್ನೋ: ಬಿಹಾರದಿಂದ (Bihar) ಉತ್ತರ ಪ್ರದೇಶಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ 95 ಮಕ್ಕಳನ್ನು ಅಯೋಧ್ಯೆಯಲ್ಲಿ (Ayodhya) ಮಕ್ಕಳ ಆಯೋಗದ (Child Commission) ಅಧಿಕಾರಿಗಳು ರಕ್ಷಿಸಿದ್ದಾರೆ. ಈ ಪ್ರಕರಣ ಮಕ್ಕಳ ಕಳ್ಳಸಾಗಣೆಯ ಬಗ್ಗೆ ಆತಂಕವನ್ನು ಹೆಚ್ಚಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಈ ಬಗ್ಗೆ ಮಾಹಿತಿ ನೀಡಿದ ಅಯೋಧ್ಯೆಯ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಸರ್ವೇಶ್ ಅವಸ್ತಿ, ಯುಪಿ ಮಕ್ಕಳ ಆಯೋಗದ ಸದಸ್ಯೆ ಸುಚಿತ್ರಾ ಚತುರ್ವೇದಿ ಅವರಿಂದ ಮಾಹಿತಿ ಪಡೆದ ಸಿಡಬ್ಲ್ಯೂಸಿ ಸದಸ್ಯರು ಮಕ್ಕಳನ್ನು ರಕ್ಷಿಸಿದ್ದಾರೆ. ಸುಚಿತ್ರಾ ಚತುರ್ವೇದಿಯವರು ಕರೆ ಮಾಡಿ, ಬಿಹಾರದಿಂದ ಅಪ್ರಾಪ್ತ ಮಕ್ಕಳನ್ನು ಅಕ್ರಮವಾಗಿ ಸಹರಾನ್‍ಪುರಕ್ಕೆ ಸಾಗಿಸಲಾಗುತ್ತಿದೆ. ಅವರು ಗೋರಖ್‍ಪುರದಲ್ಲಿದ್ದಾರೆ (Gorakhpur) ಮತ್ತು ಅಯೋಧ್ಯೆಯ ಮೂಲಕ ಹೋಗುತ್ತಾರೆ ಎಂದು ಮಾಹಿತಿ ನೀಡಿದರು. ಮಾಹಿತಿ ಬಂದ ತಕ್ಷಣ ಮಕ್ಕಳನ್ನು ರಕ್ಷಿಸಿದ್ದೇವೆ ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಎನ್‌ಕೌಂಟರ್ – ಇಬ್ಬರು ಉಗ್ರರ ಹತೈಗೈದ ಸೇನೆ

    ಮಕ್ಕಳನ್ನು ಕರೆತಂದವರಿಗೆ ಪೋಷಕರಿಂದ ಯಾವುದೇ ಒಪ್ಪಿಗೆ ಪತ್ರವಿಲ್ಲ. ಮಕ್ಕಳನ್ನು ಎಲ್ಲಿಗೆ ಕರೆದೊಯ್ಯುತ್ತಿದ್ದಾರೆಂದು ತಿಳಿದಿಲ್ಲ. ಮಕ್ಕಳ ಪೋಷಕರನ್ನು ಸಂಪರ್ಕಿಸಲಾಗುತ್ತಿದೆ. ರಕ್ಷಿಸಲ್ಪಟ್ಟ ಮಕ್ಕಳು 4-12 ವರ್ಷದೊಳಗಿನವರಾಗಿದ್ದಾರೆ. ಮಕ್ಕಳಿಗೆ ಆಹಾರ ಮತ್ತು ವೈದ್ಯಕೀಯ ನೆರವು ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಸಂದೇಶ್‌ಖಾಲಿಯಲ್ಲಿ ಸಿಬಿಐ ದಾಳಿ – ವಿದೇಶಿ ನಿರ್ಮಿತ ಗನ್‌, ಮದ್ದು-ಗುಂಡುಗಳು ಸೀಜ್‌

  • ನನ್ನ ಕ್ರೀಡಾ ಜೀವನದ ಆರಂಭ ಸುಖಕರವಾಗಿರಲಿಲ್ಲ- ಬೆಳ್ಳಿ ಗೆದ್ದ ಸಹಾನಿ

    ನನ್ನ ಕ್ರೀಡಾ ಜೀವನದ ಆರಂಭ ಸುಖಕರವಾಗಿರಲಿಲ್ಲ- ಬೆಳ್ಳಿ ಗೆದ್ದ ಸಹಾನಿ

    ಲಕ್ನೋ: ನನ್ನ ಕ್ರೀಡಾ ಜೀವನದ ಆರಂಭ ದಿನಗಳು ಅಷ್ಟೊಂದು ಸುಖಕರವಾಗಿರಲಿಲ್ಲ ಎಂದು ಸ್ಟ್ರಾಂಡ್ಜಾ ಸ್ಮಾರಕ ಬಾಕ್ಸಿಂಗ್ (Strandja Memorial Boxing Tournament) ಚಾಂಪಿಯನ್‍ಶಿಪ್ 48 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದ ಗೋವಿಂದ್ ಕುಮಾರ್ ಸಹಾನಿ ತಮ್ಮ ಕ್ರೀಡಾ ಜೀವನದ ಆರಂಭವನ್ನು ಮೆಲಕು ಹಾಕಿದ್ದಾರೆ.

    ಗೋರಖ್‍ಪುರದ (Gorakhpur) ರೈತನ (Farmer) ಮಗನಾಗಿ ಜನಿಸಿದ ನಾನು ನನ್ನ ತಂದೆ ತಾಯಿಗೆ ನಾಲ್ಕನೆ ಮಗ. ನಾನು ಕರಾಟೆ ಮತ್ತು ಬಾಕ್ಸಿಂಗ್‍ನಲ್ಲಿ ತೊಡಗಿಸಿಕೊಂಡೆ. ಕುಟುಂಬವನ್ನು ನಿರ್ವಹಿಸಿಕೊಂಡು ನನ್ನ ಕ್ರೀಡೆಗೆ ಹಣ ವ್ಯಯಿಸುವುದು ಕುಟುಂಬಕ್ಕೆ ಕಷ್ಟವಾಗುತ್ತಿತ್ತು. ನನ್ನ ಕುಟುಂಬ ಸಂಪಾದನೆಗಾಗಿ ಕಷ್ಟಪಡುತ್ತಿತ್ತು. ನನ್ನ ಕ್ರೀಡೆಯ ಕನಸಿಗೆ ತಾಯಿ ಆಗೆಲ್ಲ ಗದರಿಸುತ್ತಿದ್ದರು ಎಂದರು. ಇದನ್ನೂ ಓದಿ:  ಸಂಚಾರ ನಿಯಮ ಉಲ್ಲಂಘನೆ ದಂಡಕ್ಕೆ 50 ಪರ್ಸೆಂಟ್‌ ಆಫರ್‌ – ದಂಡ ಕಟ್ಟಲು ಮತ್ತೆ 15 ದಿನ ಅವಧಿ ವಿಸ್ತರಣೆ

    ನಾನು ತರಬೇತಿ ಆರಂಭಿಸಿದಾಗ ನನ್ನ ತಾಯಿ ಸಮಯ ಮತ್ತು ಹಣ (Money) ಎರಡನ್ನು ಹಾಳು ಮಾಡುತ್ತಿದ್ದಿಯಾ ಎನ್ನುತ್ತಿದ್ದರು. ಮಧ್ಯಮ ವರ್ಗದ ಕುಟುಂಬದ ಪರಿಸ್ಥಿತಿ ಹೇಗಿರುತ್ತದೆ ಎಂದರೆ ಅದನ್ನೆಲ್ಲ ನಗುತ್ತಾ ಸಹಿಸಿಕೊಳ್ಳಬೇಕಾಗಿತ್ತು ಎಂದು ಹೇಳಿದ್ದಾರೆ.

    ಭಾರತದ ಬಾಕ್ಸರ್‍ಗಳು ಮೂರು ಬೆಳ್ಳಿ ಹಾಗೂ ಐದು ಕಂಚಿನ ಪದಕಗಳೊಂದಿಗೆ ಹಿಂತಿರುಗಿದ್ದಾರೆ. ಉಜ್ಬೆಕಿಸ್ಥಾನದ (Uzbekistan) ಶೋಡಿಯೋರ್ಜಾನ್  ಮೆಲಿಕುಝಿವ್  (Shodiyorjon Melikuziev) ಚಿನ್ನವನ್ನು ಕಳೆದುಕೊಂಡರು.

    ನನ್ನ ತಾಯಿಯ ನಿರಂತರ ನಿಂದನೆಯಿಂದ ತಪ್ಪಿಸಿಕೊಳ್ಳಲು ನಾನು 2011ರಲ್ಲಿ ಮನೆ ತೊರೆದು ಹಾಸ್ಟೆಲ್ ಸೇರಿದೆ. ಹಣ ಕೇಳಲು ಮನೆಗೆ ಹೋಗುತ್ತಿರಲಿಲ್ಲ. ಕೆಲವು ವರ್ಷಗಳು ಕಳೆದ ನಂತರ ನನ್ನ ಸುದ್ದಿ ಹರದಾಡಲು ಆರಂಭಿಸಿತು. ಆಗ ನನ್ನ ಕುಟುಂಬಕ್ಕೆ ಹಣ ವ್ಯರ್ಥ ಮಾಡುತ್ತಿಲ್ಲ ಎಂಬುದು ಮನವರಿಕೆಯಾಯಿತು ಎಂದು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: CCL 2023 ಬೆಂಗಳೂರಿನಲ್ಲಿ : ಕಿಚ್ಚನ ಟೀಮ್ ಜೊತೆ ತೆಲುಗು ವಾರಿಯರ್ಸ್ ರೋಚಕ ಪಂದ್ಯ

  • ಚಿರತೆ ಮರಿಗೆ ಬಾಟಲಿಯಲ್ಲಿ ಹಾಲು ಕುಡಿಸಿದ ಯೋಗಿ ಆದಿತ್ಯನಾಥ್

    ಚಿರತೆ ಮರಿಗೆ ಬಾಟಲಿಯಲ್ಲಿ ಹಾಲು ಕುಡಿಸಿದ ಯೋಗಿ ಆದಿತ್ಯನಾಥ್

    ಲಕ್ನೋ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಅವರು ಗೋರಖ್‍ಪುರ (Gorakhpur) ಮೃಗಾಲಯಕ್ಕೆ (Zoo) ಭೇಟಿ ನೀಡಿ ಚಿರತೆ ಮರಿಗೆ (Leopard) ಹಾಲು ಕುಡಿಸಿದ್ದಾರೆ.

    ಯೋಗಿ ಆದಿತ್ಯನಾಥ್ ಹಾಲಿನ ಬಾಟಲಿಯಲ್ಲಿ ಚಿರತೆ ಮರಿಗೆ ಹಾಲು ಕುಡಿಸುತ್ತಿರುವ ವೀಡಿಯೋವನ್ನು ಸರ್ಕಾರದ ಅಧಿಕೃತ ಖಾತೆ ಹಂಚಿಕೊಂಡಿದೆ. ಈ ವೇಳೆ ಸಂಸದ ರವಿ ಕೀಶನ್, ಪಶುವೈದ್ಯರು ಹಾಗೂ ಮೃಗಾಲಯ ಅಧಿಕಾರಿಗಳು ಭಾಗಿಯಾಗಿದ್ದರು.

    ವೀಡಿಯೋದಲ್ಲಿ ಮೊದಲು ಚಿರತೆ ಮರಿ ಹಾಲು ಕುಡಿಯಲು ಹಿಂದೇಟು ಹಾಕುತ್ತದೆ. ನಂತರ ಪಶುವೈದ್ಯರು  ಚಿರತೆ ಮರಿಯನ್ನು ಕರೆದುಕೊಂಡು ಯೋಗಿ ಆದಿತ್ಯನಾಥ್ ಅವರ ಬಳಿಗೆ ತರುತ್ತಾರೆ. ಅದಾದ ಬಳಿಕ ಆ ಚಿರತೆ ಮರಿಗೆ ಆಹಾರ ನೀಡಲು ಪ್ರಯತ್ನಿಸುತ್ತಾರೆ. ಈ ಸಮಯದಲ್ಲಿ ಚಿರತೆ ಮರಿ ಬಾಟಲಿಯಿಂದ ಹಾಲು ಕುಡಿಯುತ್ತದೆ. ಇದನ್ನೂ ಓದಿ: ಜಮ್ಮು ಕಾಶ್ಮೀರದಿಂದ ಭಯೋತ್ಪಾದನೆಯನ್ನು ನಿರ್ನಾಮ ಮಾಡುತ್ತೇವೆ: ಅಮಿತ್ ಶಾ

    ಶಹೀದ್ ಅಶ್ಫಾಕ್ ಉಲ್ಲಾ ಖಾನ್ ಝೂಲಾಜಿಕಲ್ ಪಾರ್ಕ್ ಎಂಬ ಈ ಮೃಗಾಲಯವನ್ನು ಕಳೆದ ವರ್ಷ ಮಾರ್ಚ್‍ನಲ್ಲಿ ಯೋಗಿ ಆದಿತ್ಯನಾಥ್ ಅವರು ಉದ್ಘಾಟಿಸಿದ್ದರು. ಮೃಗಾಲಯದ ಅಧಿಕೃತ ವೆಬ್‍ಸೈಟ್‍ನ ಪ್ರಕಾರ ಇದು ಪೂವಾರ್ಂಚಲ್ ಪ್ರದೇಶದಲ್ಲಿ ಮೊದಲ ಮತ್ತು ಉತ್ತರ ಪ್ರದೇಶದ ಮೂರನೇ ಪ್ರಾಣಿಶಾಸ್ತ್ರೀಯ ಉದ್ಯಾನವನವಾಗಿದೆ. ಇದನ್ನೂ ಓದಿ: ನಕಲಿ ಉದ್ಯೋಗ ದಂಧೆ – ಮ್ಯಾನ್ಮಾರ್‌ನಲ್ಲಿ ಸಿಲುಕಿದ್ದ 45 ಭಾರತೀಯರ ರಕ್ಷಣೆ

    Live Tv
    [brid partner=56869869 player=32851 video=960834 autoplay=true]

  • ಯೋಗಿ ಗೋರಖ್‍ಪುರದಲ್ಲಿಯೇ ಇರಲಿ, ಮತ್ತೆ ಬರುವುದು ಬೇಡ : ಅಖಿಲೇಶ್ ಯಾದವ್

    ಯೋಗಿ ಗೋರಖ್‍ಪುರದಲ್ಲಿಯೇ ಇರಲಿ, ಮತ್ತೆ ಬರುವುದು ಬೇಡ : ಅಖಿಲೇಶ್ ಯಾದವ್

    ಲಕ್ನೋ: ಯೋಗಿ ಆದಿತ್ಯನಾಥ್ ಗೋರಖ್‍ಪುರದಲ್ಲಿಯೇ ಇರಲಿ. ಅಲ್ಲಿಂದ ಮತ್ತೆ ಬರುವ ಅವಶ್ಯಕತೆ ಇಲ್ಲ ಎಂದು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಹೇಳಿದರು.

    ಮುಂದಿನ ತಿಂಗಳು ಚುನಾವಣೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಗೋರಖ್‍ಪುರ (ನಗರ) ಕ್ಷೇತ್ರದಿಂದ ಸ್ಪರ್ಧಿಸುತ್ತಿರುವುದಾಗಿ ಘೋಷಿಸಿದ ಕೆಲವೇ ಹೊತ್ತಲ್ಲಿ ಅಖಿಲೇಶ್ ಯಾದವ್ ವಾಗ್ದಾಳಿ ನಡೆಸಿದರು. ಈ ಮುನ್ನ ಯೋಗಿ ಆದಿತ್ಯನಾಥ್ ಅವರು ಅಯೋಧ್ಯೆಯಿಂದ ಸ್ಪರ್ಧಿಸುತ್ತಾರೆ ಅಥವಾ ಮಥುರಾದಿಂದ ಸ್ಪರ್ಧಿಸುತ್ತಾರೆ ಅಥವಾ ಪ್ರಯಾಗ್‍ರಾಜ್‍ನಿಂದ ಸ್ಫರ್ಧಿಸುತ್ತಾರೆ ಎಂದು ಹೇಳುತ್ತಿದ್ದರು. ಈಗ ನೋಡಿ ಬಿಜೆಪಿ ಅವರನ್ನು ಗೋರಖ್‍ಪುರಕ್ಕೆ ಕಳುಹಿಸಿದೆ. ಎಂದು ನಾನು ಇಷ್ಟಪಡುತ್ತೇನೆ (ಮುಖ್ಯಮಂತ್ರಿ ) ಗೋರಖ್‍ಪುರಕ್ಕೆ. ಯೋಗಿ ಅಲ್ಲಿಯೇ ಇರಲಿ. ಅಲ್ಲಿಂದ ಅವರು ಮತ್ತೆ ಬರುವ ಅವಶ್ಯಕತೆ ಇಲ್ಲ. ನಾನು ಅವರನ್ನು ಅಲ್ಲಿಯೇ ನೋಡಲು ಬಯಸುತ್ತೇನೆ ಎಂದು ವ್ಯಂಗ್ಯವಾಡಿದರು.

    ಅಖಿಲೇಶ್ ಯಾದವ್ ಅವರ ನೇತೃತ್ವದ ಸಮಾಜವಾದಿ ಪಕ್ಷ ಉತ್ತರಪ್ರದೇಶದ ಮರುಚುನಾವಣೆಯ ಬಿಜೆಪಿಗೆ ದೊಡ್ಡ ಸವಾಲಾಗಿ ಎದುರಾಗಿದೆ. ಕಳೆದ ಕೆಲವು ತಿಂಗಳಿನಿಂದ ಅಖಿಲೇಶ್ ಯಾದವ್ ಹಾಗೂ ಯೋಗಿ ಆದಿತ್ಯನಾಥ್ ರಾಜಕೀಯ ವಾಗ್ದಾಳಿ ನಡೆಸಲು ಆರಂಭಿಸಿದ್ದಾರೆ. ಅಲ್ಲದೇ ಶುಕ್ರವಾರ ಈ ಚುನಾವಣೆ 80 ವರ್ಸಸ್ 20 ಆಗಿದೆ ಎಂಬ ಯೋಗಿ ಆದಿತ್ಯನಾಥ್ ಅವರು ಹೇಳಿಕೆಗೆ ವ್ಯಾಪಕವಾಗಿ ಆಕ್ರೋಶ ವ್ಯಕ್ತವಾಗಿತ್ತು. ಇದನ್ನೂ ಓದಿ: ರಸ್ತೆಗಳನ್ನು ಕಂಗನಾ ಕೆನ್ನೆಗಿಂತ ಸುಗಮವಾಗಿಸುತ್ತೇನೆ: ಇರ್ಫಾನ್ ಅನ್ಸಾರಿ

    ರಾಷ್ಟ್ರೀಯತೆ, ಉತ್ತಮ ಆಡಳಿತ ಮತ್ತು ಅಭಿವೃದ್ಧಿಗೆ ಒಲವು ತೋರುವ ಶೇ 80 ಮತದಾರರು ತಮ್ಮ ಪಕ್ಷಕ್ಕೆ ಮತ ಹಾಕುತ್ತಾರೆ. ಆದರೆ ರಾಷ್ಟ್ರೀಯತೆ, ಅಭಿವೃದ್ಧಿಯ ವಿರುದ್ಧ ಇರುವವರು ತಮ್ಮ ಪಕ್ಷಕ್ಕೆ ಮತ ಹಾಕುವುದಿಲ್ಲ ಅವರು ಗೂಂಡಾಗಳಿಗೆ ಬೆಂಬಲ ನೀಡುತ್ತಾರೆ ಎಂದು ಹೇಳಿದ್ದರು. ಇದನ್ನೂ ಓದಿ: ಅಯೋಧ್ಯೆ ಅಲ್ಲ, ಗೋರಖ್‌ಪುರ ಕ್ಷೇತ್ರದಿಂದ ಯೋಗಿ ಆದಿತ್ಯನಾಥ್ ಸ್ಪರ್ಧೆ

    ಸ್ಪರ್ಧೆಯು ಬಹಳ ಮುಂದಕ್ಕೆ ಸಾಗಿದೆ. ಹೋರಾಟವು ಈಗ 80 ವರ್ಸಸ್ 20 ಆಗಿದೆ ಎಂದು ಅವರು ಸೂಕ್ಷ್ಮವಾಗಿ ರಾಜ್ಯದಲ್ಲಿ 19 ರಷ್ಟು ಮುಸ್ಲಿಂ ಜನಸಂಖ್ಯೆಯ ಬಗ್ಗೆ ಮಾತನಾಡಿದ್ದಾರೆ. ಶೇ. 80ರಷ್ಟು ಜನ ಯಾವಾಗಲೂ ಧನಾತ್ಮಕ ಮತ್ತು ಅಭಿವೃದ್ಧಿ – ಪರರಾಗಿರುತ್ತಾರೆ ಎಂದಿದ್ದರು.

  • ಅಯೋಧ್ಯೆ ಅಲ್ಲ, ಗೋರಖ್‌ಪುರ ಕ್ಷೇತ್ರದಿಂದ ಯೋಗಿ ಆದಿತ್ಯನಾಥ್ ಸ್ಪರ್ಧೆ

    ಅಯೋಧ್ಯೆ ಅಲ್ಲ, ಗೋರಖ್‌ಪುರ ಕ್ಷೇತ್ರದಿಂದ ಯೋಗಿ ಆದಿತ್ಯನಾಥ್ ಸ್ಪರ್ಧೆ

    ಲಕ್ನೋ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ತನ್ನ ಅಭ್ಯರ್ಥಿಗಳ ಮೊದಲ ಹಾಗೂ ಎರಡನೇ ಹಂತದ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಹಾಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಗೋರಖ್‌ಪುರ (ನಗರ) ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.

    ಸಿಎಂ ಯೋಗಿ ಆದಿತ್ಯನಾಥ್ ಅಯೋಧ್ಯೆ ಅಥವಾ ಮಥುರಾದಿಂದ ಸ್ಪರ್ಧಿಸಲಿದ್ದಾರೆ ಎಂಬ ವರದಿಗಳು ಬಂದಿದ್ದವು. ಆದರೆ ಮೊದಲ ಹಂತದ 57 ಹಾಗೂ ಎರಡನೇ ಹಂತದ 38 ಸೀಟುಗಳಲ್ಲಿ ಸ್ಪರ್ಧಿಸಲಿರುವ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಯೋಗಿ ಆದಿತ್ಯನಾಥ್ ಗೋರಖ್‌ಪುರ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ. ಇದನ್ನೂ ಓದಿ: ರಸ್ತೆಗಳನ್ನು ಕಂಗನಾ ಕೆನ್ನೆಗಿಂತ ಸುಗಮವಾಗಿಸುತ್ತೇನೆ: ಇರ್ಫಾನ್ ಅನ್ಸಾರಿ

    2017ರವರೆಗೆ ಸತತ ಐದು ಬಾರಿ ಲೋಕಸಭೆಗೆ ಆಯ್ಕೆಯಾಗಿರುವ ಪ್ರಬಲ ಕ್ಷೇತ್ರದಿಂದಲೇ ಯೋಗಿ ಆದಿತ್ಯನಾಥ್ ಅವರನ್ನು ಕಣಕ್ಕಿಳಿಸಲು ಬಿಜೆಪಿ ನಿರ್ಧರಿಸಿದೆ. ಪಕ್ಷ ಹೇಳುವ ಯಾವುದೇ ಕ್ಷೇತ್ರದಿಂದ ಸ್ಪರ್ಧಿಸಲು ನಾನು ಸಿದ್ಧ ಎಂದು ಯೋಗಿ ಅವರು ಹೇಳಿದ್ದರು.

    ಈ ಕುರಿತು ಪ್ರತಿಕ್ರಿಯಿಸಿರುವ ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್, ಬಿಜೆಪಿ ಯೋಗಿ ಆದಿತ್ಯನಾಥ್ ಅವರನ್ನು ಗೋರಖ್‌ಪುರಕ್ಕೆ ಕಳುಹಿಸಿರುವುದು ನನಗೆ ಇಷ್ಟವಾಗಿದೆ. ಯೋಗಿ ಅಲ್ಲೇ ಉಳಿಯಬೇಕು, ಅಲ್ಲಿಂದ ಬರುವ ಅಗತ್ಯವಿಲ್ಲ ಎಂದು ತಿವಿದಿದ್ದಾರೆ. ಇದನ್ನೂ ಓದಿ: ನೇತಾಜಿ ಜನ್ಮದಿನವಾದ ಜನವರಿ 23 ರಿಂದಲೇ ಗಣರಾಜ್ಯೋತ್ಸವ ಆಚರಣೆ ಪ್ರಾರಂಭ

    ಉತ್ತರ ಪ್ರದೇಶದಲ್ಲಿ ಫೆ.10ರಿಂದ ಮಾ.7ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಮಾ.10ರಂದು ಫಲಿತಾಂಶ ಹೊರಬೀಳಲಿದೆ.

  • ಮುಂದಿನ ತಿಂಗಳು ಗೋರಖ್‍ಪುರದಲ್ಲಿ AIIMS ಉದ್ಘಾಟನೆ: ಯೋಗಿ ಆದಿತ್ಯನಾಥ್

    ಮುಂದಿನ ತಿಂಗಳು ಗೋರಖ್‍ಪುರದಲ್ಲಿ AIIMS ಉದ್ಘಾಟನೆ: ಯೋಗಿ ಆದಿತ್ಯನಾಥ್

    ಲಕ್ನೋ: ಗೋರಖ್‍ಪುರದಲ್ಲಿ ಆಲ್ ಇಂಡಿಯಾ ಇನ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಎಐಐಎಂಎಸ್) ಅನ್ನು ಡಿಸೆಂಬರಲ್ಲಿ ಉದ್ಘಾಟಿಸಲಾಗುವುದು ಮತ್ತು 1990 ರಿಂದ ಮುಚ್ಚಿದ್ದ ರಸಗೊಬ್ಬರ ಕಾರ್ಖಾನೆಯನ್ನು ಪುನರಾರಂಭಿಸಲಾಗುವುದು ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾನುವಾರ ಹೇಳಿದ್ದಾರೆ.

    316 ಕೋಟಿ ರೂಪಾಯಿಗೂ ಅಧಿಕ ಮೊತ್ತದ 86 ಅಭಿವೃದ್ಧಿ ಯೋಜನೆಗಳ ಉದ್ಘಾಸಿದ ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಮುಂದಿನ ತಿಂಗಳು ಗೋರಖ್‍ಪುರದಲ್ಲಿ ಏಮ್ಸ್ ಉದ್ಘಾಟನೆ ನಡೆಯಲಿದೆ. 2004ರಿಂದ ಗೋರಖ್‍ಪುರದಲ್ಲಿ ಏಮ್ಸ್ ಸ್ಥಾಪಿಸಬೇಕೆಂಬ ಬೇಡಿಕೆ ಇತ್ತು. ಇದೀಗ ಆ ಬೇಡಿಕೆ ಪೂರ್ಣಗೊಂಡಿದೆ ಎಂದರು. ಇದೇ ವೇಳೆ 1990ರಿಂದ ಮುಚ್ಚಲಾಗಿರುವ ರಸಗೊಬ್ಬರ ಕಾರ್ಖಾನೆಯನ್ನು ಮುಂದಿನ ತಿಂಗಳು ಪುನರಾರಂಭಿಸಲಾಗುವುದಾಗಿ ತಿಳಿಸಿದರು. ಇದನ್ನೂ ಓದಿ:  ಮೃತ ವೃದ್ಧೆಯ ಹೆಬ್ಬೆಟ್ಟನ್ನು ಪೇಪರ್‌ಗೆ ಒತ್ತಿಸಿಕೊಂಡ ಪ್ರಕರಣ – ಎಫ್‍ಐಆರ್ ದಾಖಲು

    ಪ್ರಧಾನಿ ನರೇಂದ್ರ ಮೋದಿ ಅವರು ಎರಡು ರೀತಿಯ ಸೌಲಭ್ಯಗಳನ್ನು ಸಾರ್ವಜನಿಕರಿಗೆ ಅರ್ಪಿಸಲಿದ್ದಾರೆ. ಮೋದಿಯವರ ಆಡಳಿತದಲ್ಲಿ ರಾಜ್ಯದ ಆರೋಗ್ಯ ಕ್ಷೇತ್ರದಲ್ಲಿ ಮಹತ್ತರವಾದ ಬದಲಾವಣೆಗಳಾಗಿದೆ. ಸ್ವಾತಂತ್ರ್ಯದ ನಂತರ ರಾಜ್ಯದಲ್ಲಿ ಕೇವಲ 12 ವೈದ್ಯಕೀಯ ಕಾಲೇಜುಗಳಿದ್ದವು, ಆದರೆ ಇಂದು ಸರ್ಕಾರ 33 ಹೊಸ ವೈದ್ಯಕೀಯ ಕಾಲೇಜುಗಳನ್ನು ನಿರ್ಮಿಸುತ್ತಿದೆ. ಮುಂದಿನ ವರ್ಷದ ಆರಂಭದಲ್ಲಿ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ನಡೆಯಲಿದೆ ಎಂದರು. ಇದನ್ನೂ ಓದಿ: ಹವಾಮಾನ ಬದಲಾವಣೆಯಿಂದ ಪಕ್ಷಿಗಳಲ್ಲೂ ಡೈವೋರ್ಸ್!

  • ಒಂದೇ ಮಂಟಪದಲ್ಲಿ ಮದ್ವೆಯಾದ ತಾಯಿ- ಮಗಳು

    ಒಂದೇ ಮಂಟಪದಲ್ಲಿ ಮದ್ವೆಯಾದ ತಾಯಿ- ಮಗಳು

    – ಕನ್ಯಾದಾನದ ಬಳಿಕ ಹಸೆಮಣೆ ಏರಿದ ಅಮ್ಮ
    – ಅತ್ತಿಗೆಯನ್ನ ಮದ್ವೆಯಾದ ಮೈದುನ

    ಲಕ್ನೋ: ಒಂದೇ ಮಂಟಪದಲ್ಲಿ ತಾಯಿ- ಮಗಳು ಮದುವೆಯಾಗಿರುವ ವಿಚಿತ್ರ ಘಟನೆ ಉತ್ತರ ಪ್ರದೇಶದ ಗೋರಖ್‍ಪುರ ಜಿಲ್ಲೆಯಲ್ಲಿ ನಡೆದಿದೆ. ಕನ್ಯಾದಾನದ ಬಳಿಕ ವಧುವಾಗಿ ಬಂದ ಅಮ್ಮ ಮೈದುನ ಜೊತೆ ಮದುವೆಯಾಗಿದ್ದಾರೆ.

    ಗೋರಖ್‍ಪುರನಲ್ಲಿ ಮುಖ್ಯಮಂತ್ರಿ ಸಾಮೂಹಿಕ ವಿವಾಹ ಯೋಜನೆ ಅಡಿಯಲ್ಲಿ 63 ಜೋಡಿಗಳ ಮದುವೆ ಆಯೋಜಿಸಲಾಗಿತ್ತು. 63ರ ಜೋಡಿಗಳಲ್ಲಿ ತಾಯಿ -ಮಗಳು ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದರು. ಪಿಪರೌಲಿಯ ಬೇಲಾ ದೇವಿ ಮೊದಲಿಗೆ ತಮ್ಮ ಕಿರಿಯ ಮಗಳ ಮದುವೆ ಮಾಡಿದ್ದಾರೆ. ನಂತರ ಅದೇ ಮಂಟಪದಲ್ಲಿ 55 ವರ್ಷದ ಮೈದುನ ಜಗದೀಶ್ ಜೊತೆ ಹಸೆಮಣೆ ಏರಿದ್ದಾರೆ.

    ಕುಟುಂಬಸ್ಥರಿಂದ ಮದ್ವೆಗೆ ಸಮ್ಮತಿ: ಬೇಲಾದೇವಿ ಅವರಿಗೆ ಒಟ್ಟು 5 ಮಕ್ಕಳಿದ್ದು, ಅದರಲ್ಲಿ ನಾಲ್ವರ ಮದುವೆ ಮಾಡಿದ್ದರು. ಇದೀಗ ಕೊನೆಯ ಮಗಳ ಮದುವೆಯನ್ನ ರಾಹುಲ್ ಎಂಬ ಯುವಕನ ಜೊತೆ ನೆರೆವೇರಿಸಿದ್ದಾರೆ. ಈಗಾಗಲೇ ಮದುವೆಯಾಗಿರುವ ಗಂಡು ಮಕ್ಕಳು ತಾಯಿಯಿಂದ ಪ್ರತ್ಯೇಕರಾಗಿ ಜೀವನ ನಡೆಸುತ್ತಿದ್ದಾರೆ. ಹೀಗಾಗಿ ಕೊನೆಯ ಮಗಳ ಮದುವೆ ಬಳಿಕ ಬೇಲಾದೇವಿ ಒಂಟಿಯಾಗಿದ್ದರು. ಕುಟುಂಬಸ್ಥರ ಸಮ್ಮತಿಯ ಮೇರೆಗೆ ಈ ಮದುವೆ ಆಗಿದ್ದಾರೆ.  ಇದನ್ನೂ ಓದಿ: ಅಣ್ಣನಿಲ್ಲದ ರಾತ್ರಿ ಬೆಡ್ ರೂಮಿಗೆ ಬಂದು ಅತ್ತಿಗೆಗೆ I Love You ಅಂದ ಮೈದುನ

    25 ವರ್ಷಗಳ ನಂತ್ರ ಸಿಂಧೂರವಿಟ್ಟ ತಾಯಿ: 25 ವರ್ಷಗಳ ಹಿಂದೆ ಬೇಲಾದೇವಿ ಪತಿ ಮರಣ ಹೊಂದಿದ್ದರು. ಎರಡು ಗಂಡು ಮತ್ತು ಮೂರು ಹೆಣ್ಣು ಮಕ್ಕಳ ಜೊತೆ 25 ವರ್ಷ ಜೀವನ ನಡೆಸಿದ್ದರು. ಇದೀಗ ಕುಟುಂಬಸ್ಥರು ಒಂಟಿಯಾದ ಬೇಲಾದೇವಿಗೆ ಮದುವೆ ಮಾಡಿಸಿದ್ದಾರೆ. 25 ವರ್ಷದ ಬಳಿಕ ಬೇಲಾದೇವಿ ಮತ್ತೊಮ್ಮೆ ಸಿಂಧೂರವಿಟ್ಟ ಸಂಭ್ರಮದಲ್ಲಿದ್ದಾರೆ. ಇದನ್ನೂ ಓದಿ: ಅತ್ತಿಗೆ ಜೊತೆ ಮದುವೆ- ಆತ್ಮಹತ್ಯೆಗೆ ಶರಣಾದ 9ನೇ ಕ್ಲಾಸ್ ಬಾಲಕ

  • ಈಕೆಯೇ ನನ್ನ ಮಗಳು, ಆದ್ರೆ ನನ್ನ ಪಾಲಿಗೆ ಸತ್ತಿದ್ದಾಳೆ – ಪುತ್ರಿಯನ್ನ ನೋಡಿ ಕಣ್ಣೀರಿಟ್ಟ ತಂದೆ

    ಈಕೆಯೇ ನನ್ನ ಮಗಳು, ಆದ್ರೆ ನನ್ನ ಪಾಲಿಗೆ ಸತ್ತಿದ್ದಾಳೆ – ಪುತ್ರಿಯನ್ನ ನೋಡಿ ಕಣ್ಣೀರಿಟ್ಟ ತಂದೆ

    – ಜೀವಂತವಾಗಿ ಬಂದ ಸುಂದರಿ ಹೇಳಿದ್ದು ಮೈ ನಡುಗಿಸೋ ಕೊಲೆ ಕಥೆ
    – ಸ್ವಾರ್ಥಕ್ಕಾಗಿ 3 ವರ್ಷದ ಮಗುವಿನ ತಾಯಿಯ ಪ್ರಾಣ ತೆಗೆದ ಚೆಲುವೆಯ ಭಯಾನಕ ಕಹಾನಿ

    ಗೊರಖಪುರ: 2011ರ ಗೊರಖಪುರ ಜಿಲ್ಲೆಯಲ್ಲಿ ನಡೆದ ಶಿಖಾ ದುಬೆ ಕೊಲೆ ಪ್ರಕರಣ ಇಡೀ ಉತ್ತರ ಪ್ರದೇಶವನ್ನ ಬೆಚ್ಚಿ ಬೀಳಿಸಿತ್ತು. ಆ ಥ್ರಿಲ್ಲರ್ ಕೊಲೆ ಪ್ರಕರಣದ ಕಹಾನಿಯ ವಿವರ ಇಲ್ಲಿದೆ. ತನ್ನ ಇನಿಯನ ಜೊತೆ ಲಲ್ಲೆ ಹೊಡೆಯೋಕೆ ಹೋದ ಸುಂದರಿ ಮುಗ್ಧ ಮಹಿಳೆಯ ಜೀವವನ್ನ ತೆಗೆದಿರುವ ಭಯಾನಕ ಪ್ರಕರಣವಿದು.

    2011 ಜೂನ್ 11ರಂದು ಗೊರಖಪುರದಲ್ಲಿ ಗುರುತು ಸಿಗದ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆಯಾಗಿತ್ತು. ಯುವತಿ ಬಟ್ಟೆ, ಅಲ್ಲಿದ್ದ ಕೆಲ ವಸ್ತುಗಳ ಆಧಾರದ ಮೇಲೆ ಆಕೆ ಇಂಜಿನೀಯರಿಂಗ್ ವಿದ್ಯಾರ್ಥಿನಿ ಅನ್ನೋದು ಗೊತ್ತಾಗಿತ್ತು. ಇತ್ತ ಮಗಳು ಶಿಖಾ ಕಾಣೆಯಾಗಿದ್ದಾಳೆ ಅಂತಾ ದೂರು ದಾಖಲಿಸಿದ್ದ ಪೋಷಕರು ಪುತ್ರಿಯ ಶವ ಎಂದು ಗುರುತಿಸಿ ಅಂತ್ಯಕ್ರಿಯೆ ನಡೆಸಿದ್ದರು. ಪುತ್ರಿ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ತಂದೆ ರಾಮ್ ಪ್ರಕಾಶ್ ದುಬೆ ನೆರೆಮನೆಯ ದೀಪು ಎಂಬವನ ವಿರುದ್ಧ ದೂರು ದಾಖಲಿಸಿದ್ದರು.

    ಪೊಲೀಸರು ಆರೋಪಿ ದೀಪುವಿನ ಬೆನ್ನತ್ತಿದ್ದಾಗ ಆತ ಸಹ ಕಾಣೆಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಪೊಲೀಸರ ಅನುಮಾನ ಮತ್ತಷ್ಟು ಬಲವಾದಾಗ ಆರೋಪಿ ಬಂಧನಕ್ಕೆ ಬಲೆ ಬೀಸಿದ್ದರು. ದೀಪು ಸೋನಭದ್ರ ನಗರದಲ್ಲಿರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ಆತನ ಬಂಧನಕ್ಕೆ ತೆರಳಿದ್ದ ಗೊರಖಪುರ ಪೊಲೀಸರಿಗೆ ಶಾಕ್ ಎದುರಾಗಿತ್ತು. ಯಾರ ಕೊಲೆಯಲ್ಲಿ ದೀಪುನನ್ನು ಬಂಧಿಸಲು ಬಂದಿದ್ದರೋ ಆಕೆಯ ಅವನ ಜೊತೆಯಲ್ಲಿದ್ದಳು. ಒಂದು ಕ್ಷಣ ಆಶ್ಚರ್ಯಗೊಂಡು ಇಬ್ಬರನ್ನ ಬಂಧಿಸಿ ಗೊರಖಪುರಕ್ಕೆ ಕರೆ ತಂದಿದ್ದರು.

    ಮಗಳ ಕೆನ್ನೆ ಮುಟ್ಟಿ ಕಣ್ಣೀರಿಟ್ಟ ತಂದೆ: ಇನ್ನು ಮಗಳು ಸತ್ತೇ ಹೋದಳು ಅಂತ್ಯಕ್ರಿಯೆ ಮಾಡಿ ದುಃಖದಲ್ಲಿ ಮಡುವಿನಲ್ಲಿದ್ದ ಕುಟುಂಬಕ್ಕೆ ಶಿಖಾ ಬದುಕಿರುವ ವಿಷಯ ತಿಳಿದಿದೆ. ಪೊಲೀಸ್ ಠಾಣೆಗೆ ತೆರಳಿದ್ದ ಶಿಖಾ ತಂದೆಗೆ ಅಧಿಕಾರಿಗಳು ಎಲ್ಲ ಮಾಹಿತಿ ನೀಡಿದ್ದಾರೆ. ಶಿಖಾ ಬಳಿ ತಂದೆ ರಾಮ್ ಪ್ರಕಾಶ್ ಪುತ್ರಿಯ ಕೆನ್ನೆ ಮುಟ್ಟಿ ಈಕೆಯ ನನ್ನ ಮಗಳು. ಆದ್ರೆ ನನ್ನ ಪಾಲಿಗೆ ಸತ್ತು ಹೋಗಿದ್ದಾಳೆ ಎಂದು ಹೇಳಿ ಕಣ್ಣೀರು ಹಾಕಿ ಹೊರ ನಡೆದಿದ್ದರು. ಸೋಶಿಯಲ್ ಮೀಡಿಯಾದಲ್ಲಿ ತಂದೆ ಮಗಳನ್ನ ಗುರುತಿಸೋ ಫೋಟೋ ಲಭ್ಯವಿದೆ. ಇದನ್ನೂ ಓದಿ: ಲವ್ ಮಾಡಿ ಗರ್ಭಿಣಿ ಮಾಡ್ದ, ಮದುವೆಯಾಗು ಎಂದಿದ್ದಕ್ಕೆ ಕೊಲೆಯೇ ಮಾಡ್ಬಿಟ್ಟ ಪಾಪಿ!

    ಮೈ ನಡುಗಿಸೋ ಕೊಲೆ ಕಥೆ: ಶಿಖಾ ಮತ್ತು ದೀಪು ಒಂದೇ ಏರಿಯಾದ ನಿವಾಸಿಗಳಾಗಿದ್ದರಿಂದ ಇಬ್ಬರ ಮಧ್ಯೆ ಲವ್ ಆಗಿತ್ತು. ಮದುವೆಗೆ ಎರಡೂ ಕುಟುಂಬಗಳು ವಿರೋಧ ವ್ಯಕ್ತಪಡಿಸುತ್ತೇವೆ ಎಂಬುದನ್ನ ಖಾತ್ರಿ ಮಾಡಿಕೊಂಡು ಕಿಲ್ಲರ್ ಜೋಡಿ ಭಯಾನಕ ಕೊಲೆಯ ಬಲೆಯನ್ನ ಹೆಣೆದಿತ್ತು. ಶಿಖಾ ಲವರ್ ದೀಪು ಜೊತೆ ಓಡಿ ಹೋಗಲು ಪ್ಲಾನ್ ಮಾಡ್ಕೊಂಡಿದ್ದಳು. ಆದ್ರೆ ಓಡಿ ಹೋದ್ರೂ ಮನೆಯವರಿಗೆ ಈ ವಿಷಯ ತಿಳಿಯಬಾರದು ಅಂತ ಇನಿಯನ ಜೊತೆ ಸೇರಿ ತನ್ನ ಕೊಲೆಯ ಕಥೆಯನ್ನ ಬರೆದಿದ್ದಳು.

    ತನ್ನಷ್ಟೆ ಎತ್ತರ, ಹೋಲಿಕೆ ಇರುವಂತಹ ಯುವತಿಯನ್ನ ಕೊಂದು ಅದನ್ನ ತನ್ನ ಕೊಲೆ ಎಂದು ಬಿಂಬಿಸಲು ಶಿಖಾ ಪ್ಲಾನ್ ಮಾಡಿದ್ದಳು. ಇದಕ್ಕೆ ಇನಿಯ ದೀಪು ತನ್ನ ಗೆಳೆಯರ ಮೂಲಕ ಶಿಖಾಗೆ ಸಾಥ್ ನೀಡಿದ್ದನು. ಇದನ್ನೂ ಓದಿ: ಕಾರಿನಲ್ಲಿ ಸೆಕ್ಸ್, ಲವ್ವರ್ ಕೊಲೆ- ನಗ್ನ ದೇಹವನ್ನ ಪೋಷಕರ ಬಳಿ ಕೊಂಡೊಯ್ದು ತಪ್ಪೊಪ್ಪಿಕೊಂಡ ಆರೋಪಿ

    ಮೂರು ವರ್ಷದ ಮಗುವಿನ ತಾಯಿಯ ಕೊಲೆ: ಕೊಲೆಗೆ ದೀಪು ಸೋನಭದ್ರ ಜಿಲ್ಲೆಯಲ್ಲಿ ಟ್ರಾನ್ಸಪೋರ್ಟ್ ಕೆಲಸ ಮಾಡಿಕೊಂಡಿದ್ದ ಸುಗ್ರೀವ್ (35) ಬಳಿ ಸಹಾಯ ಕೇಳಿದ್ದನು. ದೀಪುವಿನ ಗೆಳತಿಯಷ್ಟು ಎತ್ತರ ಮತ್ತು ಹೋಲಿಕೆಯುಳ್ಳ ಮೂರು ವರ್ಷದ ಮಗುವಿನ ತಾಯಿ ಪೂಜಾ (25) ಎಂಬವರ ಕೊಲೆಗೆ ರೂಪುರೇಷ ಸಿದ್ಧಪಡಿಸಿದ್ದನು. ಇದನ್ನೂ ಓದಿ: ತಾಯಿಯನ್ನೇ ಕೊಂದ ಟೆಕ್ಕಿ ಪ್ರಕರಣಕ್ಕೆ ಟ್ವಿಸ್ಟ್ – ಕೊಲೆ ಮಾಡಿ ಲವ್ವರ್ ಜೊತೆ ಜೂಟ್

    ಗೊರಖಪುರದಲ್ಲಿ ಮೂರು ಸಾವಿರ ರೂಪಾಯಿ ಕೆಲಸ ಕೊಡಿಸುವದಾಗಿ ಇಬ್ಬರು ಪೂಜಾಗೆ ಹೇಳಿದ್ದರು. ಆರ್ಥಿಕ ಸಂಕಷ್ಟದಲ್ಲಿದ್ದ ಕೆಲಸ ಒಪ್ಪಿಕೊಂಡ ಪೂಜಾ ಗೊರಖಪುರಕ್ಕೆ ಬರಲು ಒಪ್ಪಿದ್ದರು. ಜೂನ್ 10ರಂದು ಟ್ರಕ್ ನಲ್ಲಿ ಪೂಜಾಳನ್ನ ಕರೆತಂದ ದೀಪು ಮತ್ತು ಸುಗ್ರೀವ್ ಗೆ ಶಿಖಾ ಜೊತೆಯಾಗಿದ್ದಳು. ಟ್ರಕ್ ನಲ್ಲಿ ರಾಡ್‍ನಿಂದ ಹೊಡೆದು ಪೂಜಾಳನ್ನ ಕೊಲೆಗೈದಿದ್ದರು. ಗುರುತು ಸಿಗದಂತೆ ಮುಖವನ್ನ ವಿಕಾರಗೊಳಿಸಿದ್ದರು. ನಂತರ ಶಿಖಾ ಪ್ರತಿನಿತ್ಯ ಕೊರಳಲ್ಲಿ ಧರಿಸುತ್ತಿದ್ದ ದಾರ ಮತ್ತು ಬಟ್ಟೆಯನ್ನ ಹಾಕಿದ್ದಾರೆ. ಇದನ್ನೂ ಓದಿ: ಅನ್ಯ ಜಾತಿ ಯುವಕನ ಜೊತೆ ಲವ್- ಅಣ್ಣ, ಬಾವನಿಂದ ಯುವತಿ ಕೊಲೆ ಯತ್ನ

    ಈ ಕೊಲೆಗೆ ಟ್ರಕ್ ಚಾಲಕ ಹಣದಾಸೆಗಾಗಿ ಮೂವರಿಗೆ ಸಾಥ್ ನೀಡಿದ್ದನು. ರಾತ್ರಿ ಶವವನ್ನ ಸಿಂಗಾಡಿಯಾ ಬಳಿ ಎಸೆದು ಪರಾರಿಯಾಗಿದ್ದರು. ಜೊತೆಗೆ ಪ್ರತಿನಿತ್ಯ ಶಿಖಾ ಬಳಸುತ್ತಿದ್ದ ವಸ್ತುಗಳನ್ನ ಸಹ ಶವದ ಪಕ್ಕದಲ್ಲಿ ಎಸೆದು ಪಾರಾಗಿದ್ದರು. ಪೊಲೀಸರು ಇಬ್ಬರನ್ನ ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಸದ್ಯ ಜಾಮೀನು ಪಡೆದು ಹೊರ ಬಂದಿರುವ ಶಿಖಾ ಮತ್ತು ದೀಪು ಬೇರೆ ಬೇರೆ ಮದುವೆಯಾಗಿ ಜೀವನ ನಡೆಸುತ್ತಿದ್ದಾರೆ. ಪ್ರಕರಣ ನ್ಯಾಯಾಲಯದಲ್ಲಿದೆ. ಇದನ್ನೂ ಓದಿ: ಗಂಡನನ್ನು ಬಿಟ್ಟು ಲವ್ವರ್ ಜೊತೆ ಮಗಳು ಎಸ್ಕೇಪ್- ರೊಚ್ಚಿಗೆದ್ದ ತಂದೆಯಿಂದ ಇಬ್ಬರ ಕೊಲೆ

  • ಚಾಕಲೇಟ್ ಆಸೆ ತೋರಿಸಿ 7ರ ಬಾಲೆಯನ್ನು ರೇಪ್ ಮಾಡಿ, ಕೊಲೆಗೈದ 48ರ ಕಾಮುಕ

    ಚಾಕಲೇಟ್ ಆಸೆ ತೋರಿಸಿ 7ರ ಬಾಲೆಯನ್ನು ರೇಪ್ ಮಾಡಿ, ಕೊಲೆಗೈದ 48ರ ಕಾಮುಕ

    ಲಕ್ನೋ: 48 ವರ್ಷದ ವ್ಯಕ್ತಿಯೊಬ್ಬ 7 ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿ, ಕೊಲೆ ಮಾಡಿದ ಅಮಾನವೀಯ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

    ಪಪ್ಪು ರೈ ಅತ್ಯಾಚಾರ ಎಸಗಿದ ಕಾಮುಕ. ಗೋರಖ್‍ಪುರ್ ಜಿಲ್ಲೆಯಲ್ಲಿ ಶುಕ್ರವಾರ ಘಟನೆ ನಡೆದಿದ್ದು, ಆರೋಪಿಯನ್ನು ಸಿಕ್ರಿಗಂಜ್ ಪೊಲೀಸರು ಬಂಧಿಸಿದ್ದಾರೆ.

    ಪಪ್ಪು ಕೊಲೆಯಾದ ಬಾಲಕಿಯ ತಂದೆಗೆ ಪರಿಚಯವಿರುವ ವ್ಯಕ್ತಿ. ಶುಕ್ರವಾರ ಬಾಲಕಿಗೆ ಚಾಕಲೇಟ್ ಕೊಡಿಸುವ ಆಸೆ ತೋರಿಸಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾನೆ. ಬಳಿಕ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಈ ವೇಳೆ ಬಾಲಕಿ ಅಳಲು ಆರಂಭಿಸುತ್ತಿದ್ದಂತೆ ಆಕೆಯನ್ನು ಹೊಡೆದು ಕೊಲೆ ಮಾಡಿ, ಮೃತ ದೇಹವನ್ನು ಬೀಸಾಡಿ ಹೋಗಿದ್ದಾನೆ.

    ಇತ್ತ ಬಾಲಕಿ ನಾಪತ್ತೆಯಾದ ಕುರಿತು ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು, ಪಪ್ಪುನನ್ನು ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ ಆರೋಪಿ ತನ್ನ ತಪ್ಪು ಒಪ್ಪಿಕೊಂಡು ಕೃತ್ಯ ಎಸಗಿದ ಜಾಗಕ್ಕೆ ಪೊಲೀಸರನ್ನು ಕರೆದುಕೊಂಡು ಹೋಗಿದ್ದನು. ಆಗ ಬಾಲಕಿಯ ಮೃತದೇಹ ಪತ್ತೆಯಾಗಿದ್ದು, ಅದನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

    ಆರೋಪಿ ಪಪ್ಪು ವಿರುದ್ಧ ಪೊಸ್ಕೊ ಸೇರಿದಂತೆ ಐಪಿಸಿ ಸೆಕ್ಷನ್ 364 (ಅಪಹರಣ), 376 (ಅತ್ಯಾಚಾರ) ಹಾಗೂ 302 (ಕೊಲೆ) ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.

    ಮುಗ್ಧ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಕಾಮುಕನಿಗೆ ಸೂಕ್ತ ಶಿಕ್ಷೆಯಾಗಬೇಕು ಎಂದು ಉತ್ತರ ಪ್ರದೇಶದ ವಿವಿಧ ಸಂಘಟನೆಗಳು, ವಿದ್ಯಾರ್ಥಿಗಳು ಪ್ರತಿಭಟನೆ ಆರಂಭಿಸಿದ್ದಾರೆ.