Tag: Goraguntepalya

  • ಬೆಂಗಳೂರಿನಲ್ಲಿ ಪಂಚರ್ ಮಾಫಿಯಾ| ನಾಗಸಂದ್ರ – ಗೊರಗುಂಟೆಪಾಳ್ಯ ರಸ್ತೆಯಲ್ಲಿ ರಾಶಿ ರಾಶಿ ಮೊಳೆಗಳು

    ಬೆಂಗಳೂರಿನಲ್ಲಿ ಪಂಚರ್ ಮಾಫಿಯಾ| ನಾಗಸಂದ್ರ – ಗೊರಗುಂಟೆಪಾಳ್ಯ ರಸ್ತೆಯಲ್ಲಿ ರಾಶಿ ರಾಶಿ ಮೊಳೆಗಳು

    ಬೆಂಗಳೂರು: ನಗರದ ಕೆಲ ರಸ್ತೆಯಲ್ಲಿ ಪಂಚರ್ ಮಾಫಿಯಾ ಇನ್ನೂ ಜೀವಂತವಾಗಿದೆ. ಬೆಂಗಳೂರು (Bengaluru) ಹೊರವಲಯದ ಟಿ.ದಾಸರಹಳ್ಳಿಯ ನಾಗಸಂದ್ರದಿಂದ ಗೊರಗುಂಟೆ ಪಾಳ್ಯಕ್ಕೆ ತೆರಳುವ ರಸ್ತೆಯಲ್ಲಿ ಪಂಚರ್ ಮಾಫಿಯಾ (Puncture Mafia) ನಡೆಯುತ್ತಿದೆ ಎಂದು ವಾಹನ ಸವಾರರು ಸಾಕ್ಷಿ ಸಮೇತ ವಿಡಿಯೋ ಮಾಡಿದ್ದಾರೆ.

    ಹೌದು. ಗೊರಗುಂಟೆ ಪಾಳ್ಯದ (Goraguntepalya) ಮುಖ್ಯ ಸಿಗ್ನಲ್​ನಲ್ಲಿರುವ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದ ಸವಾರರೊಬ್ಬರ ಬೈಕ್‌ ಟಯರ್‌ ಆಗಾಗ ಪಂಚರ್‌ ಆಗುತ್ತಿತ್ತು. ಈ ಕಾರಣಕ್ಕೆ ಅವರು ತನಿಖೆಗೆ ಇಳಿದಾಗ ರಸ್ತೆಯಲ್ಲಿ ಭಾರೀ ಪ್ರಮಾಣದಲ್ಲಿ ಮೊಳೆ ಹಾಕಿರುವುದು ಕಂಡು ಬಂದಿದೆ. ರಸ್ತೆ ಮೇಲೆ ಬಿದ್ದಿರುವ ಸಣ್ಣ ಸಣ್ಣ ಮೊಳೆಗಳನ್ನು ನೋಡಿ ಅವರು ಶಾಕ್‌ ಆಗಿದ್ದಾರೆ. ಇದನ್ನೂ ಓದಿ:  ಮೂರು ದಿನದಲ್ಲಿ 52 ಕೋಟಿ – ಹಿಂದಿಯಲ್ಲೂ ಕಮಾಲ್‌ ಆರಂಭಿಸಿದ ಕಾಂತಾರ

     

    ಈ ಹಿಂದೆಯೂ ನಗರದ ಹಲವು ಕಡೆ ಪಂಚರ್‌ ಮಾಫಿಯಾದ ಬಗ್ಗೆ ಸುದ್ದಿಗಳು ಪ್ರಕಟವಾಗಿದ್ದವು. ಕೆಲ ದಿನಗಳ ಹಿಂದೆ ರಾಜ್‌ಕುಮಾರ್‌ ಸಮಾಧಿಯಿಂದ ಗೊರಗುಂಟೆಪಾಳ್ಯಕ್ಕೆ ಬರುವ ಕಡೆ ಮೊಳೆಗಳನ್ನು ಹಾಕಲಾಗುತ್ತದೆ ಎಂದು ನೆಟ್ಟಿಗರೊಬ್ಬರು ವಿಡಿಯೋ ಮಾಡಿದ್ದು ವೈರಲ್‌ ಆಗಿತ್ತು.  ಈ ಉದ್ದೇಶಪೂರ್ವಕವಾಗಿ ಮೊಳೆಗಳನ್ನು ಹಾಕುವವರನ್ನು ಪೊಲೀಸರು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕೆಂದು  ಸವಾರರು ಆಗ್ರಹಿಸಿದ್ದಾರೆ.

  • 1,500 ರೂ. ಪೆಟ್ರೋಲ್ ಹಾಕಿಸಿದ್ರೆ ಮಾತ್ರ ಪಿಂಕ್ ನೋಟ್ ಕೊಡಿ – ಪೆಟ್ರೋಲ್ ಬಂಕ್‌ಗಳಲ್ಲಿ ಬೋರ್ಡ್ ಅಳವಡಿಕೆ

    1,500 ರೂ. ಪೆಟ್ರೋಲ್ ಹಾಕಿಸಿದ್ರೆ ಮಾತ್ರ ಪಿಂಕ್ ನೋಟ್ ಕೊಡಿ – ಪೆಟ್ರೋಲ್ ಬಂಕ್‌ಗಳಲ್ಲಿ ಬೋರ್ಡ್ ಅಳವಡಿಕೆ

    ಬೆಂಗಳೂರು: 2,000 ರೂ. ಮುಖಬೆಲೆಯ ನೋಟುಗಳನ್ನು ಆರ್‌ಬಿಐ (RBI) ಹಿಂಪಡೆದ ನಂತರ ಪೆಟ್ರೋಲ್ ಬಂಕ್‌ಗಳಲ್ಲಿ (Petrol Bunk) ಪಿಂಕ್ ನೋಟಿನ ಹಾವಳಿ ಜಾಸ್ತಿಯಾಗಿದೆ. ಜನರು 200 ರೂ.ಗಳ ಪೆಟ್ರೋಲ್ ಹಾಕಿಸಿಕೊಂಡರೂ 2,000 ರೂ. ನೀಡುತ್ತಿದ್ದಾರೆ. ಇದರಿಂದ ಪೆಟ್ರೋಲ್ ಬಂಕ್ ಮಾಲೀಕರು ಸಂಕಷ್ಟದಲ್ಲಿ ಸಿಲುಕಿದ್ದಾರೆ.

    2,000 ರೂ. ನೋಟ್ ಬ್ಯಾನ್ (Note Ban) ಬೆನ್ನಲ್ಲೇ ಜನರು ತಮ್ಮಲ್ಲಿರುವ 2,000 ರೂ. ನೋಟುಗಳನ್ನು ಬ್ಯಾಂಕ್, ಆಸ್ಪತ್ರೆ ಹಾಗೂ ಪೆಟ್ರೋಲ್ ಬಂಕ್‌ನಲ್ಲಿ ಕೊಟ್ಟು ಬಚಾವ್ ಆಗುತ್ತಿದ್ದಾರೆ. ಆದರೆ ಇದರಿಂದ ಪೆಟ್ರೋಲ್ ಬಂಕ್ ಮಾಲೀಕರು ಕಂಗೆಟ್ಟಿದ್ದಾರೆ. ಜನರು 100-200 ರೂ. ಪೆಟ್ರೋಲ್ ಹಾಕಿಸಿದರೂ 2,000 ರೂ. ಪಿಂಕ್ ನೋಟನ್ನು ಕೊಡುತ್ತಿದ್ದಾರೆ. ಇದರಿಂದ ಬಂಕ್ ಮಾಲೀಕರಿಗೆ ಚೇಂಜ್  ಸಮಸ್ಯೆ ಆಗುತ್ತಿದೆ. ಇದನ್ನೂ ಓದಿ: ಇಂದಿನಿಂದ 2,000 ಮುಖಬೆಲೆ ನೋಟು ವಿನಿಮಯ ಪ್ರಕ್ರಿಯೆ ಆರಂಭ

    ಇದರಿಂದ ಹೈರಾಣಾದ ಗೊರಗುಂಟೆಪಾಳ್ಯ (Goraguntepalya) ಪೆಟ್ರೋಲ್ ಬಂಕ್ ಮಾಲೀಕರು ಹೊಸದೊಂದು ಬೋರ್ಡ್ ಅನ್ನು ತಮ್ಮ ಪೆಟ್ರೋಲ್ ಬಂಕ್‌ನಲ್ಲಿ ಅಳವಡಿಸಿದ್ದಾರೆ. ಆ ಬೋರ್ಡ್‌ನಲ್ಲಿ  1,500 ರೂ.ಗಳ ಪೆಟ್ರೋಲ್ ಹಾಕಿಸಿದರೆ ಮಾತ್ರ 2,000 ರೂ. ನೋಟನ್ನು ನೀಡಿ ಸಹಕರಿಸಿ ಎಂದು ಬರೆಯುವ ಮೂಲಕ ಜನರಲ್ಲಿ ಚೇಂಜ್ ನೀಡುವಂತೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಸರ್ಕಾರದ ಬಳಿ ಅಂಕಿ ಅಂಶಗಳೇ ಇಲ್ಲ – ಶೀಘ್ರವೇ ಗ್ಯಾರಂಟಿ ಯೋಜನೆ ಜಾರಿ ಅನುಮಾನ

  • ಕೊನೆಗೂ ಗೊರಗುಂಟೆಪಾಳ್ಯ ಫ್ಲೈಓವರ್ ಸಂಚಾರಕ್ಕೆ ಮುಕ್ತ – ಭಾರೀ ವಾಹನಗಳಿಗೆ ಸಂಪೂರ್ಣ ನಿಷೇಧ

    ಕೊನೆಗೂ ಗೊರಗುಂಟೆಪಾಳ್ಯ ಫ್ಲೈಓವರ್ ಸಂಚಾರಕ್ಕೆ ಮುಕ್ತ – ಭಾರೀ ವಾಹನಗಳಿಗೆ ಸಂಪೂರ್ಣ ನಿಷೇಧ

    ಬೆಂಗಳೂರು: 57 ದಿನಗಳ ಬಳಿಕ ಗೊರಗುಂಟೆ ಪಾಳ್ಯ ಫ್ಲೈಓವರ್ ಸಂಚಾರಕ್ಕೆ ಮುಕ್ತವಾಗಿದೆ. ಆದರೆ, ಲಘುವಾಹನಗಳಿಗೆ ಮಾತ್ರ ಅವಕಾಶ ಕೊಟ್ಟಿದ್ದು, ಭಾರೀ ತೂಕದ ವಾಹನಗಳಿಗೆ ಸಂಪೂರ್ಣ ನಿಷೇಧ ಹೇರಲಾಗಿದೆ.

    ರಾಜಧಾನಿ ಬೆಂಗಳೂರಿನಿಂದ ಕಲ್ಯಾಣ ಕರ್ನಾಟಕ, ಮಧ್ಯ ಕರ್ನಾಟಕ, ಕರಾವಳಿ ಕರ್ನಾಟಕದ 21 ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿ ಮೇಲ್ಸೇತುವೆ ಕಾಮಗಾರಿಯೇ ಕಳಪೆ ಆಗಿದೆ ಅನ್ನೋದು ಜಾಹೀರಾಗಿದೆ. ಜೊತೆಗೆ, ಸರ್ಕಾರಗಳ ಬೇಜವಾಬ್ದಾರಿಯನ್ನೂ ಬಹಿರಂಗಗೊಳಿಸಿದೆ. ಸುಮಾರು 4.5 ಕಿ.ಮೀ. ಉದ್ದದ ಶಿವಕುಮಾರ್ ಸ್ವಾಮೀಜಿಗಳ ಫ್ಲೈಓವರ್ ಅನ್ನು ಧ್ವಂಸ ಮಾಡಬೇಕು ಎಂದು ತಜ್ಞರು ಹೇಳ್ತಿದ್ದಾರೆ. ಉದ್ಘಾಟನೆಗೊಂಡ 12 ವರ್ಷಕ್ಕೆ ಧರಾಶಾಹಿ ಆಗುತ್ತಾ ಅನ್ನೋದು ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಇಂದು ಸಂಜೆಯಿಂದ ಲಘು ವಾಹನಗಳ ಸಂಚಾರಕ್ಕೆ ಪೀಣ್ಯ ಫ್ಲೈಓವರ್‌ ಮುಕ್ತ

    ಪೀಣ್ಯ ಪ್ಲೈ ಓವರ್ ಸಂಚಾರಕ್ಕೆ ಸುರಕ್ಷಿತವಾಗಿಲ್ಲ. ಲೋಡ್ ಟೆಸ್ಟಿಂಗ್ ನಲ್ಲಿ ಸಂಚಾರಕ್ಕೆ ಸುರಕ್ಷಿತವಾಗಿಲ್ಲ ಎಂದು ತಿಳಿದು ಬಂದಿದೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪೀಣ್ಯ ಮೇಲ್ಸೇತುವೆಯನ್ನ ನಿರ್ಮಿಸಿತ್ತು. 4.5 ಕೀ.ಮೀ ಉದ್ದದ ಈ ಮೇಲ್ಸೇತುವೆಗೆ ಆದ ವೆಚ್ಚ775..70ಕೋಟಿ ರೂ.ಗಳು ಆಗಿತ್ತು. ಫ್ಲೈಓವರ್ ದುರಸ್ಥಿಯ ಬಗ್ಗೆ ವರದಿ ನೀಡಿದ್ದ ಭಾರತೀಯ ವಿಜ್ಞಾನ ಸಂಸ್ಥೆ ವಾಹನಗಳ ಸಂಚಾರಕ್ಕೆ ಸುರಕ್ಷಿತವಲ್ಲ ಎಂದು ವರದಿಯಲ್ಲಿ ತಿಳಿಸಿದೆ.

    ಸುರಕ್ಷಿತ ಕ್ರಮಗಳೊಂದಿಗೆ ಲಘು ವಾಹನ ಸಂಚಾರಕ್ಕೆ ಎನ್‍ಎಚ್‍ಐಎ ಅನುಮತಿ ನೀಡಿದೆ. ಬೆಳಗ್ಗೆ 9 ರಿಂದ ರಾತ್ರಿ 7 ರವರೆಗೆ ಮಾತ್ರ ವಾಹನ ಓಡಾಟಕ್ಕೆ ಅವಕಾಶ ಸಾಧ್ಯತೆ ಇದೆ. ಬೈಕ್, ಆಟೋ, ಕಾರ್‍ಗಳಂಥ ಲಘು ವಾಹನಗಳಿಗೆ ಅವಕಾಶ ನೀಡಿದ್ದು, ಲಾರಿ, ಬಸ್, ಟಿಪ್ಪರ್, ಲಾರಿ, ಲೋಡ್ ಇರೋ ಮಿನಿವಾಹನಗಳಿಗೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ. ಫ್ಲೈಓವರ್ ಮೇಲೆ ಹೆವಿ ವೆಹಿಕಲ್ ಸಂಚರಿಸದಂತೆ 10 ಅಡಿ ಎತ್ತರಕ್ಕೆ ಕಬ್ಬಿಣದ ತಡೆ ಹಾಕಲಾಗಿದೆ. ಇದನ್ನೂ ಓದಿ: ಪೀಣ್ಯ ಫ್ಲೈಓವರ್‌ ಧ್ವಂಸವಾಗುತ್ತಾ?- ಅನಾಹುತ ಸಂಭವಿಸಿದರೆ ಹೊಣೆ ಯಾರು ಎಂದ ಸಿಎಂ

  • ಪ್ರತಿಭಟನೆ ವೇಳೆ ಡಿಸಿಪಿ ಮೇಲೆ ಕಾರು ಹತ್ತಿಸಲು ಯತ್ನ

    ಪ್ರತಿಭಟನೆ ವೇಳೆ ಡಿಸಿಪಿ ಮೇಲೆ ಕಾರು ಹತ್ತಿಸಲು ಯತ್ನ

    ಬೆಂಗಳೂರು: ಕೃಷಿ ಮಸೂದೆ ವಿರುದ್ಧ ಭಾರತ್ ಬಂದ್‍ಗೆ ಕರೆಕೊಟ್ಟಿರುವ ರೈತರು ಪ್ರತಿಭಟನೆ ವೇಳೆ ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ಮೇಲೆ ಕಾರು ಹತ್ನಿಸಲು ಯತ್ನಿಸಿರುವ ಘಟನೆ ಗೊರಗುಂಟೆಪಾಳ್ಯದಲ್ಲಿ ನಡೆದಿದೆ.

    ಗೊರಗುಂಟೆ ಪಾಳ್ಯ ಜಂಕ್ಷನ್‍ನ ರಸ್ತೆಯಲ್ಲಿ ರೈತ ಸಂಘದ ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಪ್ರತಿಭಟನೆ ನಡೆಸುತ್ತಿದ್ದರು. ಆ ಸಂದರ್ಭದಲ್ಲಿ ಟ್ರ್ಯಾಕ್ಟರ್ ನಲ್ಲಿ ರ್‍ಯಾಲಿ ಕೂಡ ನಡೆಯಿತು. ರ್‍ಯಾಲಿಯಲ್ಲಿ ಬರುತ್ತಿದ್ದ ರಾಜ್ಯ ರೈತ ಸಂಘದ ಬೋರ್ಡ್ ಇದ್ದ ಕಾರೊಂದು ಏಕಾಏಕಿ ಕರ್ತವ್ಯ ನಿರ್ವಹಿಸುತ್ತಿದ್ದ ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ಅವರ ಕಾಲಿನ ಮೇಲೆ ಚಲಿಸಿದೆ. ಪರಿಣಾಮ ಕಾಲಿಗೆ ಗಾಯವಾಗಿದ್ದು, ಡಿಸಿಪಿ ಕುಂಟುತ್ತ ಸಾಗಿದ್ದಾರೆ. ಇದನ್ನೂ ಓದಿ: ಪ್ರಧಾನಿ ಮೋದಿ ಭಾವಚಿತ್ರಕ್ಕೆ ಈರುಳ್ಳಿ ಹಾರ ಹಾಕಿ ರೈತರಿಂದ ವಿನೂತನ ಪ್ರತಿಭಟನೆ

    ಗೊರಗುಂಟೆ ಪಾಳ್ಯದಲ್ಲಿ ಭದ್ರತೆಗಾಗಿ 150 ಕ್ಕೂ ಹೆಚ್ಚು ಪೋಲಿಸರು, ಒಂದು ಕೆಎಸ್‌ಆರ್‌ಪಿಸಿ ತುಕಡಿ, ಬಿಎಂಟಿಸಿ ಬಸ್ ನ ನಿಯೋಜನೆ ಮಾಡಲಾಗಿತ್ತು. ಈ ವೇಳೆ ಸ್ಥಳದಲ್ಲಿದ್ದ ಡಿಸಿಪಿ ಕಾಲಿನ ಮೇಲೆ ಕಾರ್ ಚಲಿಸಿದೆ. ಕೂಡಲೇ ಪೊಲೀಸರು ಕಾರು ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಆಕಸ್ಮಿಕವಾಗಿ ಆಗಿದ್ದು, ಕಣ್ಣಿಗೆ ಕಸ ಬಿತ್ತು ಎಂದು ಕಾರ್ ಚಾಲಕ ತಪ್ಪೊಪ್ಪಿಕೊಂಡಿದ್ದಾನೆ. ಬಳಿಕ ರಸ್ತೆ ತಡೆಗೆ ಬಂದಿದ್ದ ರೈತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಸಿಎಂ ಜಿಲ್ಲೆಯಲ್ಲಿ ಮರಳು ಸಾಗಾಣಿಕೆಗೆ ಮಕ್ಕಳ ಬಳಕೆ – ಕಣ್ಣುಮುಚ್ಚಿ ಕುಳಿತ ಪೊಲೀಸ್ ಇಲಾಖೆ

  • ಸುಮನಹಳ್ಳಿ, ಸಿರ್ಸಿ ಸರ್ಕಲ್ ಆಯ್ತು, ಈಗ ಗೊರಗುಂಟೆಪಾಳ್ಯ ಮೇಲ್ಸೇತುವೆ ಸರದಿ

    ಸುಮನಹಳ್ಳಿ, ಸಿರ್ಸಿ ಸರ್ಕಲ್ ಆಯ್ತು, ಈಗ ಗೊರಗುಂಟೆಪಾಳ್ಯ ಮೇಲ್ಸೇತುವೆ ಸರದಿ

    ಬೆಂಗಳೂರು: ಈ ಹಿಂದೆ ಸುಮ್ಮನಹಳ್ಳಿ ಫ್ಲೈಓವರ್ ಗುಂಡಿ ಬಿದ್ದು ಜನರಲ್ಲಿ ಆತಂಕ ಸೃಷ್ಟಿಸಿತ್ತು. ಈಗಲೂ ಸಹ ಆ ಬ್ರೀಡ್ಜ್ ಮೇಲೆ ಭಾರೀ ವಾಹನಗಳನ್ನ ಬಿಡುತ್ತಿಲ್ಲ. ಅದೇ ಹಂತಕ್ಕೆ ಬೆಂಗಳೂರಿನ ಗೊರಗುಂಟೆಪಾಳ್ಯದ ಫ್ಲೈಓವರ್ ಬಂದಿದೆ.

    ಹೌದು…ಇದು ಸಿಲಿಕಾನ್ ಸಿಟಿಯ ಪ್ರಮುಖ ರಸ್ತೆಯಾಗಿದ್ದು, ಪ್ರತಿನಿತ್ಯ ವಾಹನಗಳಿಂದ ರೋಡ್ 24 ಗಂಟೆ ಜ್ಯಾಮ್ ಆಗಿರುತ್ತೆ. ಇದು ತುಮಕೂರು, ಹಾಸನ, ಮೈಸೂರು, ಮುಖ್ಯ ರಸ್ತೆಯಿಂದ ಹೊಸೂರು, ತಮಿಳುನಾಡು, ತಿರುಪತಿ, ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗೊದಕ್ಕೆ ಇರೋ ಮಾರ್ಗ ಇದಾಗಿದೆ. ಇಲ್ಲಿ ಯಾವಾಗಲೂ ಟ್ರಾಫಿಕ್ ಜಾಸ್ತಿಯೇ ಇರುತ್ತೆ.

    ಗೊರಗುಂಟೆಪಾಳ್ಯದಿಂದ ಹೆಬ್ಬಾಳಕ್ಕೆ ಹೋಗುವ ರಸ್ತೆಯಲ್ಲಿ ರೈಲ್ವೇ ಟ್ರಾಕ್‍ನಿಂದ ಆಗುತ್ತಿದ್ದ ಟ್ರಾಫಿಕ್ ಸಮಸ್ಯೆಗೆ ಪರಿಹಾರವಾಗಿ ಇಲ್ಲಿ ಫ್ಲೈಓವರ್ ನಿರ್ಮಾಣ ಮಾಡಿದ್ದಾರೆ. ಆದರೆ ಈ ಫ್ಲೈಓವರ್ ನ ನಿರ್ವಹಣೆ ಮಾಡದೇ ಇಂದು ಫ್ಲೈಓವರ್ ಯಾವಾಗ ಬಿದ್ದೋಗುತ್ತೋ ಅನ್ನೋ ಆಗಿದೆ. ಗುಂಡಿಗಳಿಂದ ತುಂಬಿರೋ ಈ ರೋಡ್‍ನಲ್ಲಿ ಕೆಲ ಗುಂಡಿಗಳಿಂದ ಕಬ್ಬಿಣದ ರಾಡ್‍ಗಳು ಹೊರಬಂದಿವೆ. ಭಾರೀ ವಾಹನಗಳು ಇದೇ ಮಾರ್ಗವಾಗಿ ಸಂಚಾರ ಮಾಡಬೇಕಾಗಿದೆ. ಹೀಗಾಗಿ ಇಲ್ಲಿ ವಾಹನ ಚಾಲನೆ ಮಾಡುವುದು ಕಷ್ಟವಾಗಿದೆ. ಸೇತುವೆ ಮೇಲೆ ಟ್ರಾಫಿಕ್ ಜ್ಯಾಮ್ ಆಗಿ ವಾಹನಗಳು ನಿಂತರೆ ಸೇತುವೆ ಶೇಕ್ ಕೂಡ ಆಗುತ್ತಿದೆ.

    ಈ ಮೇಲ್ಸೇತುವೆಯ ಬಗ್ಗೆ ಬಿಬಿಎಂಪಿ ಕಮಿಷನರ್ ಅವರನ್ನು ಕೇಳಿದರೆ, ಇದು ನಮ್ಮ ಗಮನಕ್ಕೆ ಬಂದಿದೆ. ಸರಿಯಾದ ಕ್ರಮಕೈಗೊಳ್ಳುವುದಕ್ಕೆ ಯೋಚನೆ ಮಾಡುತ್ತಿದ್ದೇನೆ. ಯೋಚನೆಯಾದ ಮೇಲೆ ಯೋಜನೆ ತಂದು ರಸ್ತೆ ಸರಿ ಮಾಡುತ್ತೇವೆ ಎಂದು ಬಿಬಿಎಂಪಿ ಕಮಿಷನರ್ ಅನಿಲ್ ಕುಮಾರ್ ಹೇಳಿದ್ದಾರೆ.

    ಈ ಮೇಲ್ಸೇತುವೆಯಿಂದ ಯಾವುದಾದರೂ ದೊಡ್ಡ ಅನಾಹುತ ಆಗೋವರೆಗೆ ಕಾಯದೇ ಆದಷ್ಟು ಬೇಗ ದುರಸ್ತಿ ಕಾರ್ಯ ಮಾಡಬೇಕು. ಇಲ್ಲವಾದರೆ ಇಲ್ಲಿ ದೊಡ್ಡ ಅನಾಹುತ ಆಗೋದಂತು ಪಕ್ಕ. ಬೆಂಗಳೂರಿನ ಮೇಲ್ಸೇತುವೆಗಳ ಕಳಪೆ ಕಾಮಗಾರಿಯ ಕರ್ಮಕಾಂಡಗಳು ಒಂದರ ಒಂದರಂತೆ ಹೊರ ಬರತ್ತಲೇ ಇದೆ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.