Tag: Gopikrishna

  • ಜಾತಿಯೇ ನಿರ್ಣಾಯಕ – ತರೀಕೆರೆಯಲ್ಲಿ ಈ ಬಾರಿ ಗೆಲುವು ಯಾರಿಗೆ?

    ಜಾತಿಯೇ ನಿರ್ಣಾಯಕ – ತರೀಕೆರೆಯಲ್ಲಿ ಈ ಬಾರಿ ಗೆಲುವು ಯಾರಿಗೆ?

    ಚಿಕ್ಕಮಗಳೂರು: ಅರೆ ಮಲೆನಾಡು ಪ್ರದೇಶದ ತರೀಕೆರೆ (Tarikere) ವಿಧಾನಸಭಾ ಕ್ಷೇತ್ರದ ಚುನಾವಣೆ (Election) ವಿಷಯದಲ್ಲಿ ಜಾತಿ ಪ್ರಮುಖ ಪಾತ್ರ ವಹಿಸುತ್ತದೆ. ಲಿಂಗಾಯುತ ಸಮುದಾಯದ ಜನರೇ ಹೆಚ್ಚಿರುವ ಈ ಕ್ಷೇತ್ರದಲ್ಲಿ ಕುರುಬ, ಎಸ್ಸಿ ಹಾಗೂ ಎಸ್ಟಿ ಮತಗಳೇ ನಿರ್ಣಾಯಕವಾಗಿದೆ. ಒಂದು ಕಾಲದಲ್ಲಿ ಈ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆಯಾಗಿತ್ತು. ಈಗ ಕಳೆದ ಎರಡು ದಶಕಗಳಿಂದ ಬಿಜೆಪಿಯ ತೆಕ್ಕೆಯಲ್ಲಿದೆ.

    1985ರಲ್ಲಿ ಜನತಾ ಪಕ್ಷದಿಂದ ನೀಲಕಂಠಪ್ಪ ಶಾಸಕರಾಗಿ ಪ್ರಥಮ ಭಾರಿ ಆಯ್ಕೆಯಾಗಿದ್ದರು. ನಂತರ ಕಾಂಗ್ರೆಸ್ (Congress) ಪಕ್ಷದಿಂದ ಮತ್ತೆ ಶಾಸಕರಾಗಿ 2 ಬಾರಿ ಗೆದ್ದಿದ್ದರು. ಹೆಚ್.ಆರ್ ರಾಜು ಕಾಂಗ್ರೆಸ್‍ನಿಂದ 2 ಬಾರಿ ಗೆದ್ದಿದ್ದರು. 1994ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಎಸ್.ಎಂ ನಾಗರಾಜ್ ಆಯ್ಕೆಯಾಗಿದ್ದರು. 2004ರಲ್ಲಿ ಕಾಂಗ್ರೆಸ್ಸಿನಿಂದ ಟಿ.ಹೆಚ್ ಶಿವಶಂಕರಪ್ಪ ಶಾಸಕರಾಗಿ ಆಯ್ಕೆಯಾಗಿದ್ದರು. 2008ರಲ್ಲಿ ಬಿಜೆಪಿ (BJP) ಅಭ್ಯರ್ಥಿ ಡಿ.ಎಸ್ ಸುರೇಶ್ ಪ್ರಥಮ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. ಯಡಿಯೂರಪ್ಪನವರ ಕೆಜೆಪಿ ಉಗಮದಿಂದ ಅಚ್ಚರಿ ಎಂಬಂತೆ ಜಿ.ಎಚ್ ಶ್ರೀನಿವಾಸ್ ಮೊದಲ ಬಾರಿಗೆ ಗೆದ್ದಿದ್ದರು. 2018ರಲ್ಲಿ ಮತ್ತೆ ಡಿ.ಎಸ್ ಸುರೇಶ್ ಗೆಲವು ಸಾಧಿಸಿದ್ದರು. ಆದರೆ ಈ ಬಾರಿ ತಾಲೂಕಿನ ಸಂಪೂರ್ಣ ರಾಜಕೀಯ ಚಿತ್ರಣವೇ ಬದಲಾಗಿದೆ. ಕಳೆದ ಮೂರು ಚುನಾವಣೆಯಲ್ಲಿ ಮೂರು ಪಕ್ಷದಿಂದಲೂ ಕೊನೆ ಕ್ಷಣದಲ್ಲಿ ಟಿಕೆಟ್ ತಪ್ಪಿದ್ದ ಗೋಪಿಕೃಷ್ಣ ಈ ಬಾರಿ ಪಕ್ಷೇತರವಾಗಿ ಕಣಕ್ಕಿಳಿದಿದ್ದಾರೆ. ಇದನ್ನೂ ಓದಿ: ನಾನು ತಟಸ್ಥ, ಆದ್ರೆ ಪಕ್ಷ ವಿರೋಧಿ ಕೆಲಸ ಮಾಡಲ್ಲ : ಶಾಸಕ ಸುಕುಮಾರ ಶೆಟ್ಟಿ

    ತರೀಕೆರೆಯಲ್ಲಿ ನಿರ್ಣಾಯಕ ಪಾತ್ರವಹಿಸಿರುವ ಕುರುಬರು 30 ಸಾವಿರದಷ್ಟು ಜನಸಂಖ್ಯೆ ಇದೆ. ಆದರೆ ಕುರುಬ ಸಮುದಾಯ ಸಂಘದ ಹಣವನ್ನ ದುರುಪಯೋಗ ಮಾಡಿಕೊಂಡಿದ್ದಾರೆ ಎಂಬ ಆರೋಪದಿಂದ ಶ್ರೀನಿವಾಸ್ ಬಿಟ್ಟು ಬೇರೆ ಯಾರಿಗಾದರೂ ಟಿಕೆಟ್ ಕೊಡಿ ಎಂದು ಕುರುಬ ಸಮುದಾಯದ ಪ್ರಮುಖರು ಲಾಬಿ ಮಾಡಿದ್ದರು. ಕುರುಬ ಸಮುದಾಯ ಹಾಗೂ ನೊಣಬ ಲಿಂಗಾಯುತ ಸಮುದಾಯ ಗೋಪಿಕೃಷ್ಣ ಪರ ಬ್ಯಾಟಿಂಗ್ ಮಾಡಿದ್ದರು. ಗೋಪಿಕೃಷ್ಣ ಅವರನ್ನು ಬೇಕಾದಂತೆ ಬಳಸಿಕೊಂಡ ಕಾಂಗ್ರೆಸ್ ಪ್ರಮುಖ ಸಮುದಾಯಗಳ ಪ್ರಮುಖರ ವಿರೋಧದ ನಡುವೆಯೂ ಶ್ರೀನಿವಾಸ್ ಅವರಿಗೆ ಟಿಕೆಟ್ ಕೊಟ್ಟಿದೆ. ಕಳೆದ ಬಾರಿ ನೊಣಬ ಸಮುದಾಯದ ಮಾಜಿ ಶಾಸಕ ಎಸ್.ಎಂ ನಾಗರಾಜ್ ಕಾಂಗ್ರೆಸ್ಸಿನಿಂದ ಸ್ಪರ್ಧಿಸಿದ್ದರು. ಆಗ ಟಿಕೆಟ್ ಸಿಗದೇ ಮಾಜಿ ಶಾಸಕ ಹಾಗೂ ಈ ಬಾರಿಯ ಕಾಂಗ್ರೆಸ್ ಅಭ್ಯರ್ಥಿ ಜಿ.ಎಚ್ ಶ್ರೀನಿವಾಸ್ ಪಕ್ಷೇತರವಾಗಿ ನಿಂತು ಸೋತಿದ್ದರು. ಅಲ್ಲದೆ ಕಾಂಗ್ರೆಸ್ ಪಕ್ಷವನ್ನೂ ಸೋಲಿಸಿದ್ದರು. ಇದು ನೊಣಬ ಸಮುದಾಯದ ಮುಖಂಡರ ಕಣ್ಣನ್ನ ಕೆಂಪಾಗಿಸಿತ್ತು.

    ಈ ಕಾರಣಕ್ಕೆ ಈ ಬಾರಿ, ಜಿ.ಎಚ್ ಶ್ರೀನಿವಾಸ್ (G.H Srinivas) ವಿರೋಧಿ ಗುಂಪು ಪಕ್ಷೇತರ ಅಭ್ಯರ್ಥಿ ಗೋಪಿಕೃಷ್ಣ (Gopikrishna) ಪರ ಇದೆ. ಆದರೆ, ಅವರಿಗೆ ಜಾತಿ ಬೆಂಬಲ ಇಲ್ಲ. ಮಡಿವಾಳರ ಮತಗಳು ತರೀಕೆರೆಯಲ್ಲಿ ಹೆಚ್ಚೆಂದರೆ 3000 ಇದೆ. ಆದರೆ, ಕಳೆದ 15 ವರ್ಷದಿಂದ ಕ್ಷೇತ್ರದಲ್ಲಿ ಕೋಟ್ಯಂತರ ರೂ. ಸೇವೆ ನೀಡಿದ್ದಾರೆ. ಇದರಿಂದಾಗಿ ಅವರ ಪರ ಮತದಾರರ ಒಲವಿದೆ. ಕಾಂಗ್ರೆಸ್ ಪಕ್ಷೇತರ ಅಭ್ಯರ್ಥಿಗಳ ಜಗಳದಲ್ಲಿ ಬಿಜೆಪಿಗೆ ಇದು ಪ್ಲಸ್ ಪಾಯಿಂಟ್ ಆದರೂ ಆಶ್ಚರ್ಯವಿಲ್ಲ. ಆದರೆ, ತರೀಕೆರೆಯಲ್ಲಿ 1952ನೇ ಇಸವಿಯಿಂದ ಈವರೆಗೆ ಯಾರೂ ಸರಣಿಯಾಗಿ 2ನೇ ಸಲ ಗೆದ್ದಿಲ್ಲ. ಎಲ್ಲರೂ ಒಂದು ಸಲ ಬಿಟ್ಟು ಮತ್ತೊಮ್ಮೆ ಗೆದ್ದವರೇ ಆಗಿದ್ದಾರೆ. ಆದರೆ, ಈ ಬಾರಿ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಜನ ಯಾರಿಗೆ ಮಣೆ ಹಾಕುತ್ತಾರೆ ಎಂಬುದನ್ನು ಕಾದುನೋಡಬೇಕಿದೆ. ಇದನ್ನೂ ಓದಿ: ಸಿಲಿಕಾನ್‌ ಸಿಟಿಯಲ್ಲಿ ಮೋದಿ ಬೃಹತ್‌ ರೋಡ್‌ ಶೋ – ರೇಷ್ಮೆಯ ಮೈಸೂರು‌ ಪೇಟಾದಲ್ಲಿ ಕಂಗೊಳಿಸುತ್ತಿರುವ ಪಿಎಂ

    ಯಾವ್ಯಾವ ಜಾತಿಯಲ್ಲಿ ಎಷ್ಟೆಷ್ಟು ಮತ?
    ಲಿಂಗಾಯತ : 41,950
    ಎಸ್.ಎಸ್ಟಿ : 45,910
    ಕುರುಬ : 27,715
    ಮುಸ್ಲಿಂ : 15,807
    ಉಪ್ಪಾರ : 10,579
    ಒಕ್ಕಲಿಗ : 8,150
    ಕ್ರಿಶ್ಚಿಯನ್ : 5,150
    ಬ್ರಾಹ್ಮಣರು : 1,961
    ತಮಿಳ್ ಗೌಂಡರ್ : 6,595
    ಇತರೆ : 23,109

  • ಸಿದ್ದುಗೆ `ಅಹಿಂದ’ ಪದದ ಅರ್ಥವೇ ಗೊತ್ತಿಲ್ಲ – ಕಣ್ಣೀರಿಟ್ಟ ಗೋಪಿಕೃಷ್ಣ ದಂಪತಿ

    ಸಿದ್ದುಗೆ `ಅಹಿಂದ’ ಪದದ ಅರ್ಥವೇ ಗೊತ್ತಿಲ್ಲ – ಕಣ್ಣೀರಿಟ್ಟ ಗೋಪಿಕೃಷ್ಣ ದಂಪತಿ

    ಚಿಕ್ಕಮಗಳೂರು: ಗೋಪಿಕೃಷ್ಣಗೆ (Gopikrishna) ತರೀಕೆರೆಯ (Tarikere) ಕಾಂಗ್ರೆಸ್ (Congress) ಟಿಕೆಟ್ ತಪ್ಪಿದ್ದು, ಮನನೊಂದ ದಂಪತಿ ನೂರಾರು ಅಭಿಮಾನಿಗಳ ಮಧ್ಯೆಯೇ ಕಣ್ಣೀರಿಟ್ಟಿದ್ದಾರೆ.

    ತರೀಕೆರೆಯಲ್ಲಿ ಆರಂಭದಿಂದಲೂ ಕಾಂಗ್ರೆಸ್ ಟಿಕೆಟ್‍ಗಾಗಿ ತೀವ್ರ ಪೈಪೋಟಿ ನಡೆದಿತ್ತು. ಟಿಕೆಟ್‍ಗಾಗಿ 14 ಜನ ಹೋರಾಡುತ್ತಿದ್ದರು. ಅಂತಿಮವಾಗಿ ಗೋಪಿಕೃಷ್ಣ ಹಾಗೂ ಮಾಜಿ ಶಾಸಕ ಜಿ.ಎಚ್ ಶ್ರೀನಿವಾಸ್ ಮಧ್ಯೆ ತೀವ್ರ ಪೈಪೋಟಿ ನಡೆದಿತ್ತು. ಇದನ್ನೂ ಓದಿ: ಜಗದೀಶ್‌ ಶೆಟ್ಟರ್‌ಗೆ ಬಿಜೆಪಿ ನೀಡಿತ್ತು 2 ಬಿಗ್‌ ಆಫರ್‌

    ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಗೋಪಿಕೃಷ್ಣಗೆ ಟಿಕೆಟ್ ನೀಡುತ್ತೇವೆ ಎಂದು ಹೇಳಿದ್ದರು. ರಾಜ್ಯದಲ್ಲಿ ಮಡಿವಾಳದ ಸಮುದಾಯದವರಿಗೆ ಎಲ್ಲೂ ಟಿಕೆಟ್ ನೀಡಿಲ್ಲ. ಅವರಿಗೆ ಟಿಕೆಟ್ ಕೊಟ್ಟೆ ಕೊಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದ್ದರು. ಆದರೆ ಕೊನೆ ಘಳಿಗೆಯಲ್ಲಿ ಅವರಿಗೆ ಕೈ ಟಿಕೆಟ್ ತಪ್ಪಿದ್ದು, ದಂಪತಿ ನೂರಾರು ಅಭಿಮಾನಿಗಳ ಮಧ್ಯೆ ಕಣ್ಣೀರಿಟ್ಟಿದ್ದಾರೆ.

    ಗೋಪಿಕೃಷ್ಣಗೆ ಟಿಕೆಟ್ ಮಿಸ್ ಆಗುತ್ತಿದ್ದಂತೆ ಅಭಿಮಾನಿಗಳು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ. ಸಿಟ್ಟಿಗೆದ್ದ ಅಭಿಮಾನಿಗಳು ಆಟೋಗೆ ಬೆಂಕಿ ಹಚ್ಚಿದ್ದಾರೆ. ಸಿದ್ದರಾಮಯ್ಯನವರ (Siddaramaiah) ಅಹಿಂದ (Ahinda) ಹೆಸರಿಗೆ ಮಾತ್ರ. ಅವರಿಗೆ ಅಹಿಂದ ಪದದ ಅರ್ಥವೇ ಗೊತ್ತಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.

    ಸದ್ಯ ಟಿಕೆಟ್ ಸಿಕ್ಕಿರುವ ಮಾಜಿ ಶಾಸಕ ಶ್ರೀನಿವಾಸ್ ಗೆಲುವಿನ ಹಾದಿಯೂ ಸುಲಭವಾಗಿಲ್ಲ. ತರೀಕೆರೆಯಲ್ಲಿ ನಿರ್ಣಾಯಕ ಪಾತ್ರವಿರುವ ಕುರುಬ ಸಮುದಾಯ ಶ್ರೀನಿವಾಸ್‍ಗೆ ವಿರೋಧವಿದೆ. ಶ್ರೀನಿವಾಸ್ ಕುರುಬ ಸಂಘದ ಹಣವನ್ನ ದುರುಪಯೋಗ ಮಾಡಿಕೊಂಡಿದ್ದಾರೆ ಎಂಬ ಆರೋಪವಿದೆ. ಇದೇ ಕಾರಣದಿಂದ ಕುರುಬ (Kuruba) ಸಮುದಾಯ ಅವರ ವಿರುದ್ಧ ತಿರುಗಿದೆ. ಅವರಿಗೆ ಟಿಕೆಟ್ ಕೈತಪ್ಪಿಸಬೇಕೆಂದು ಕುರುಬ ಸಮುದಾಯದ ಪ್ರಮುಖ ನಾಯಕರು ಸಹ ಹೋರಾಡಿದ್ದರು. ಶ್ರೀನಿವಾಸ್‍ಗೆ ಟಿಕೆಟ್ ನೀಡಿದರೆ ಕುರುಬ ಸಮುದಾಯದಿಂದ ಏಳೆಂಟು ಅಭ್ಯರ್ಥಿಗಳು ಚುನಾವಣೆಗೆ ನಿಲ್ಲುತ್ತೇವೆಂದು ಎಚ್ಚರಿಕೆ ಕೂಡ ನೀಡಿದ್ದರು. ಆದರೂ ಟಿಕೆಟ್ ಅವರಿಗೆ ಸಿಕ್ಕಿರುವುದು ಸಮುದಾಯದವನ್ನ ಸಿಟ್ಟಾಗಿಸಿದೆ.

    ಶ್ರೀನಿವಾಸ್ ವಿರುದ್ಧ ಇರುವ ಕುರುಬ ಸಮುದಾಯದ ನಾಯಕರು ಗೋಪಿಕೃಷ್ಣ ಜೊತೆಗೆ ನಿಂತಿದ್ದಾರೆ. ಗೋಪಿಕೃಷ್ಣ, ಅಭಿಮಾನಿಗಳು ಹಾಗೂ ಎಲ್ಲಾ ಸಮುದಾಯದ ಮುಖಂಡರ ಜೊತೆ ಸಭೆ ಬಳಿಕ ಮುಂದಿನ ರಾಜಕೀಯದ ನಡೆ ನಿರ್ಧರಿಸುತ್ತೇನೆ ಎಂದಿದ್ದಾರೆ. ಈ ಮೂಲಕ ಅವರು ಪಕ್ಷೇತರವಾಗಿ ನಿಲ್ಲುವ ಸೂಚನೆ ನೀಡಿದ್ದಾರೆ. ಗೋಪಿಕೃಷ್ಣ ಸ್ವಂತಂತ್ರವಾಗಿ ಸ್ಪರ್ಧಿಸಿದರೆ ಶ್ರೀನಿವಾಸ್ ಗೆಲುವಿಗೆ ಕಷ್ಟವಾಗುವ ಸೂಚನೆ ಕೂಡ ಇದೆ. ಈ ಇಬ್ಬರ ನಡುವಿನ ತಿಕ್ಕಾಟ ಮೂರನೇಯವನಿಗೆ ಲಾಭ ಎಂಬಂತೆ ನಮಗೆ ಲಾಭವಾಗಬಹುದು ಎಂದು ಬಿಜೆಪಿಗರು ಅಂದಾಜಿಸಿದ್ದಾರೆ. ಇದನ್ನೂ ಓದಿ: 40% ಕಮಿಷನ್‌ ಕಡಿಮೆ ಮಾಡಿದ್ರೆ ಇಂದಿರಾ ಕ್ಯಾಂಟೀನ್‌ ಉಳಿಯುತ್ತಿತ್ತು – ಸಿದ್ದರಾಮಯ್ಯ ಟಾಂಗ್‌