Tag: Gopichand Malinane

  • ದುನಿಯಾ ವಿಜಯ್ ನಟನೆಯ ತೆಲುಗು ಸಿನಿಮಾದ ಫಸ್ಟ್ ಲುಕ್ ರಿಲೀಸ್ :  ಯಾರದು ಪ್ರತಾಪ್ ರೆಡ್ಡಿ?

    ದುನಿಯಾ ವಿಜಯ್ ನಟನೆಯ ತೆಲುಗು ಸಿನಿಮಾದ ಫಸ್ಟ್ ಲುಕ್ ರಿಲೀಸ್ : ಯಾರದು ಪ್ರತಾಪ್ ರೆಡ್ಡಿ?

    ಮೊನ್ನೆಯಷ್ಟೇ ದುನಿಯಾ ವಿಜಯ್ ತೆಲುಗಿನ ತಮ್ಮ ಚೊಚ್ಚಲು ಸಿನಿಮಾದ ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದರು. ಒಂದು ವಾರ ಶೂಟಿಂಗ್ ಮುಗಿಯುತ್ತಿದ್ದಂತೆಯೇ ಇನ್ನೂ ಹೆಸರಿಡದ ಆ ಸಿನಿಮಾದಲ್ಲಿನ ವಿಜಯ್ ಪಾತ್ರದ ಫಸ್ಟ್ ಲುಕ್ ರಿಲೀಸ್ ಮಾಡಿದೆ ಚಿತ್ರತಂಡ. ಈ ಸಿನಿಮಾದಲ್ಲಿ ವಿಜಯ್ ಅವರ ಪಾತ್ರದ ಹೆಸರನ್ನೂ ರಿವಿಲ್ ಮಾಡಲಾಗಿದೆ. ಮುಸಳಿ ಮಡಗು ಪ್ರತಾಪ್ ರೆಡ್ಡಿ ಹೆಸರಿನ ಪಾತ್ರವನ್ನು ವಿಜಯ್ ನಿರ್ವಹಿಸುತ್ತಿದ್ದಾರೆ. ಇದನ್ನೂ ಓದಿ : ಐದು ಮಕ್ಕಳಿಗೆ ‘ಪುನೀತ್ ರಾಜಕುಮಾರ್’ ಅಂತ ನಾಮಕರಣ ಮಾಡಿದ ನಟಿ ತಾರಾ

    ತೆಲುಗಿನ ಖ್ಯಾತ ನಟ ನಂದಮೂರಿ ಬಾಲಕೃಷ್ಣ ನಟನೆಯ ಈ ಹೊಸ ಸಿನಿಮಾದಲ್ಲಿ ವಿಜಯ್ ನೆಗೆಟಿವ್ ಶೇಡ್ ಇರುವಂತಹ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಶೂಟಿಂಗ್ ಗಾಗಿ ವಿಜಯ್, ಪತ್ನಿಯೊಂದಿಗೆ ಈಗಾಗಲೇ ತೆರಳಿದ್ದಾರೆ. ಇದನ್ನೂ ಓದಿ : ಅಬ್ಬಬ್ಬಾ..! 60 ಕೋಟಿ ಬಾಚಿದ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ : ಬಾಕ್ಸ್ ಆಫೀಸ್ ಚಿಂದಿ ಚಿತ್ರಾನ್ನ

    ವಿಲನ್ ಆಗಿಯೇ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟವರು ದುನಿಯಾ ವಿಜಯ್, ಆನಂತರ ದುನಿಯಾ ಚಿತ್ರ ಅವರನ್ನು ಹೀರೋ ಆಗಿ ಮಾಡಿತು. ಅಲ್ಲಿಂದ ಅವರು ನಾಯಕರಾಗಿಯೇ ಸಿನಿಮಾ ರಂಗದಲ್ಲಿ ಗುರುತಿಸಿಕೊಂಡರು. ಈಗ ಮತ್ತೆ ವಿಲನ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಅದು ತೆಲುಗು ಸಿನಿಮಾದಲ್ಲಿ ಎನ್ನುವುದು ವಿಶೇಷ. ಗೋಪಿಚಂದ್ ಮಲಿನೇನೆ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬರುತ್ತಿದ್ದು, ಬಾಲಯ್ಯನ 107ನೇ ಸಿನಿಮಾ ಇದಾಗಿದೆ.

  • ಬಾಲಯ್ಯನ ಕ್ಯಾಂಪ್ ನಲ್ಲಿ ಕಾಣಿಸಿಕೊಂಡ ದುನಿಯಾ ವಿಜಯ್

    ಬಾಲಯ್ಯನ ಕ್ಯಾಂಪ್ ನಲ್ಲಿ ಕಾಣಿಸಿಕೊಂಡ ದುನಿಯಾ ವಿಜಯ್

    ಮೊದಲ ಬಾರಿಗೆ ದುನಿಯಾ ವಿಜಯ್ ತೆಲುಗು ಸಿನಿಮಾದಲ್ಲಿ ನಟಿಸುತ್ತಿರುವ ಸುದ್ದಿ ಓದಿದ್ದೀರಿ. ಆ ಸಿನಿಮಾದ ಮುಹೂರ್ತ ಮೊನ್ನೆಯಷ್ಟೇ ನಡೆದಿದೆ. ಅಂದು ದುನಿಯಾ ವಿಜಯ್ ಹೋಗಿರಲಿಲ್ಲ. ಹಾಗಾಗಿ ವಿಜಯ್ ಆ ಚಿತ್ರದಲ್ಲಿ ಇರುತ್ತಾರಾ ಅಥವಾ ಇಲ್ಲವಾ ಎನ್ನುವ ಅನುಮಾನ ಕೂಡ ಮೂಡಿತ್ತು. ಈ ಎಲ್ಲದಕ್ಕೂ ಇಂದು ಸ್ಪಷ್ಟ ಉತ್ತರ ಸಿಕ್ಕಿದೆ. ನೆನ್ನೆಯಷ್ಟೇ ದುನಿಯಾ ವಿಜಯ್ ತೆಲುಗು ಸಿನಿಮಾದ ಶೂಟಿಂಗ್ ಗಾಗಿ ತೆರಳಿದ್ದಾರೆ. ಇದನ್ನೂ ಓದಿ : ವಾರದೊಳಗೆ 100 ಕೋಟಿ ಕ್ಲಬ್ ಸೇರಲಿದೆ ಪುನೀತ್ ನಟನೆಯ ಜೇಮ್ಸ್: ಪಕ್ಕಾ ಲೆಕ್ಕಾಚಾರ

    ತೆಲುಗಿನ ಖ್ಯಾತ ನಟ ನಂದಮೂರಿ ಬಾಲಕೃಷ್ಣ ನಟನೆಯ ಈ ಹೊಸ ಸಿನಿಮಾದಲ್ಲಿ ವಿಜಯ್ ನೆಗೆಟಿವ್ ಶೇಡ್ ಇರುವಂತಹ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಶೂಟಿಂಗ್ ಗಾಗಿ ವಿಜಯ್, ಪತ್ನಿಯೊಂದಿಗೆ ತೆರಳಿದ್ದಾರೆ. ಇದನ್ನೂ ಓದಿ : ಕಬ್ಜ ಸಿನಿಮಾದಲ್ಲಿ ಮಧುಮತಿಯಾದ ಶ್ರೀಯಾ ಶರಣ್: ಫಸ್ಟ್ ಲುಕ್ ರಿಲೀಸ್

    ವಿಲನ್ ಆಗಿಯೇ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟವರು ದುನಿಯಾ ವಿಜಯ್, ಆನಂತರ ದುನಿಯಾ ಚಿತ್ರ ಅವರನ್ನು ಹೀರೋ ಆಗಿ ಮಾಡಿತು. ಅಲ್ಲಿಂದ ಅವರು ನಾಯಕರಾಗಿಯೇ ಸಿನಿಮಾ ರಂಗದಲ್ಲಿ ಗುರುತಿಸಿಕೊಂಡರು. ಈಗ ಮತ್ತೆ ವಿಲನ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಅದು ತೆಲುಗು ಸಿನಿಮಾದಲ್ಲಿ ಎನ್ನುವುದು ವಿಶೇಷ. ಇದನ್ನೂ ಓದಿ :  ಕೇರಳದಲ್ಲಿ ಸಿಕ್ತು ನಿರ್ದೇಶಕ ರಿಷಬ್ ಶೆಟ್ಟಿಗೆ ನ್ಯಾಯ

    ಗೋಪಿಚಂದ್ ಮಲಿನೇನೆ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬರುತ್ತಿದ್ದು, ಬಾಲಯ್ಯನ 107ನೇ ಸಿನಿಮಾ ಇದಾಗಿದೆ. ಎರಡು ವಾರದಿಂದ ಸಿನಿಮಾದ ಶೂಟಿಂಗ್ ನಡೆದಿದ್ದು, ಇಂದಿನಿಂದ ದುನಿಯಾ ವಿಜಯ್ ಅವರ ದೃಶ್ಯಗಳನ್ನು ಸೆರೆ ಹಿಡಿಯುತ್ತಾರಂತೆ ನಿರ್ದೇಶಕರು.