Tag: goosa

  • ಮದ್ವೆಯಾಗಿದ್ರೂ ವಿದ್ಯಾರ್ಥಿನಿಯನ್ನ ಮಂಚಕ್ಕೆ ಕರೆದ ಅಂಕಲ್‍ಗೆ ಗೂಸಾ

    ಮದ್ವೆಯಾಗಿದ್ರೂ ವಿದ್ಯಾರ್ಥಿನಿಯನ್ನ ಮಂಚಕ್ಕೆ ಕರೆದ ಅಂಕಲ್‍ಗೆ ಗೂಸಾ

    – ಕೇಳಿದಷ್ಟು ಹಣ ಕೊಡ್ತೇನೆ ಮಂಚಕ್ಕೆ ಬಾ ಎಂದ
    – ಮದ್ವೆಯಾಗಿದ್ರೂ ವಿದ್ಯಾರ್ಥಿನಿ ಜೊತೆ ಮಂಚಕ್ಕೇರಲು ಪ್ಲಾನ್

    ವಿಜಯಪುರ: ರೋಡ್ ರೋಮಿಯೋ ಆದ ಸಿವಿಲ್(ಕಟ್ಟಡ ನಿರ್ಮಿಸುವ ಗುತ್ತಿಗೆದಾರ) ಕಾಂಟ್ರ್ಯಾಕ್ಟರ್‌ಗೆ ಸಖತ್ ಗೂಸಾ ನೀಡಿದ ಘಟನೆ ವಿಜಯಪುರದ ನಿಡಗುಂದಿ ಪಟ್ಟಣದಲ್ಲಿ ನಡೆದಿದೆ.

    ನಿಡಗುಂದಿ ನಿವಾಸಿಯಾದ ಕಾಮುಕ ಮೋತಿಸಾಬ್ ತಳೇವಾಡ ಗೂಸಾ ತಿಂದ ಕಾಂಟ್ರ್ಯಾಕ್ಟರ್. ಈತ ಪರಿಚಯಸ್ಥ ಕಾಲೇಜು ವಿದ್ಯಾರ್ಥಿನಿಯೊಬ್ಬಳಿಗೆ ಕೇಳಿದಷ್ಟು ಹಣ ಕೊಡುತ್ತೇನೆ ಮಂಚಕ್ಕೆ ಬಾ ಎಂದು ಕರೆದಿದ್ದಾನೆ. ತನಗೆ ಮದುವೆಯಾಗಿದ್ದರೂ ಯುವತಿಯ ಹಿಂದೆ ಬಿದ್ದು ಸುಮಾರು ದಿನದಿಂದ ಪೀಡಿಸುತ್ತಿದ್ದನು. ಅಲ್ಲದೇ ವಿದ್ಯಾರ್ಥಿನಿಯ ಫೋಟೋಗಳನ್ನು ತೆಗೆದುಕೊಂಡು ಮಂಚಕ್ಕೆರಲು ಪ್ಲಾನ್ ಮಾಡಿಕೊಂಡಿದ್ದನು.

    ಈ ವಿಷಯ ತಿಳಿದ ಯುವತಿಯ ಸಂಬಂಧಿಕರು ಪಟ್ಟಣದ ಹೊರವಲಯಕ್ಕೆ ಕಾಮುಕ ಮೋತಿಸಾಬ್ ತಳೇವಾಡನನ್ನು ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಚಪ್ಪಲಿಯಿಂದ ಧರ್ಮದೇಟು ನೀಡಿ ಬುದ್ಧಿ ಕಲಿಸಿದ್ದಾರೆ. ಎರಡು ದಿನದ ಹಿಂದೆ ಈ ಘಟನೆ ನಡೆದಿದ್ದು, ಸದ್ಯಕ್ಕೆ ಕಾಂಟ್ರ್ಯಾಕ್ಟರ್‌ಗೆ ಗೂಸಾ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಈ ಘಟನೆ ನಿಡಗುಂಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

  • ಯುವತಿಯನ್ನ ಚುಡಾಯಿಸಿದಕ್ಕೆ ಮಹಿಳೆಯರಿಂದ ಬಿತ್ತು ಸಖತ್ ಗೂಸ

    ಯುವತಿಯನ್ನ ಚುಡಾಯಿಸಿದಕ್ಕೆ ಮಹಿಳೆಯರಿಂದ ಬಿತ್ತು ಸಖತ್ ಗೂಸ

    ಬೀದರ್: ಯುವತಿಯನ್ನು ಚುಡಾಯಿಸಿದಕ್ಕೆ ಕಾಮುಕನಿಗೆ ಮಹಿಳೆ ಮತ್ತು ಯುವತಿಯಿಂದ ಸಖತ್ ಗೂಸ ನೀಡಿದ ಘಟನೆ ಜಿಲ್ಲೆಯ ಹುಮನಾಬಾದ್ ಬಸ್ ನಿಲ್ದಾಣದಲ್ಲಿ ನಡೆದಿದೆ.

    ಯುವಕನಿಗೆ ಚಪ್ಪಲಿಯಿಂದ ಥಳಿಸಿರುವ ವಿಡಿಯೋ ವೈರಲ್ ಫುಲ್ ವೈರಲ್ ಆಗಿದ್ದು, ಫೇಸ್‍ಬುಕ್, ವಾಟ್ಸಾಪ್‍ನಲ್ಲಿ ಹರಿದಾಡುತ್ತಿದೆ. ಮಂಗಳವಾರ ಹುಮನಾಬಾದ್ ಬಸ್ ನಿಲ್ದಾಣದಲ್ಲಿ ಯುವತಿಯರು ನಿಂತಿದ್ದರು. ಈ ವೇಳೆ ಬಸ್ ನಿಲ್ದಾಣಕ್ಕೆ ಬಂದ ಕಾಮುಕ ಯುವತಿಯರನ್ನು ಅಸಭ್ಯವಾಗಿ ಚುಡಾಯಿಸಿದ್ದಾನೆ.

    ಅದೇ ಬಸ್ ನಿಲ್ದಾಣದಲ್ಲಿ ನಿಂತಿದ್ದ ಮಹಿಳೆ ಯುವತಿಯನ್ನು ಚುಡಾಯಿಸುತ್ತಿದ್ದನ್ನು ನೋಡಿದ್ದು, ಕಾಮುಕನ ಅಂಗಿ ಹಿಡಿದು ಚಪ್ಪಲಿ ಸೇವೆ ಮಾಡಿದ್ದಾರೆ. ಮಹಿಳೆ ಯುವಕನಿಗೆ ಥಳಿಸುತ್ತಿರುವುನ್ನು ಬಸ್ ನಿಲ್ದಾಣದಲ್ಲಿದ್ದ ಮಹಿಳೆಯರು ಗಮನಿಸಿದ್ದು, ಅವರು ಸಹ ಬಂದು ಕಾಮುಕನಿಗೆ ಸಖತ್ ಆಗಿಯೇ ಥಳಿಸಿದ್ದಾರೆ.

  • ಬರ್ತಿಯಾ, ನಂಬರ್ ಕೊಡು ಎಂದಿದ್ದಕ್ಕೆ ಮಹಿಳೆಯಿಂದಲೇ ಸಖತ್ ಗೂಸಾ!

    ಬರ್ತಿಯಾ, ನಂಬರ್ ಕೊಡು ಎಂದಿದ್ದಕ್ಕೆ ಮಹಿಳೆಯಿಂದಲೇ ಸಖತ್ ಗೂಸಾ!

    ದಾವಣಗೆರೆ: ಚುಡಾಯಿಸುತ್ತಿದ್ದ ಕಾಮುಕನಿಗೆ ಮಹಿಳೆಯೇ ಸಖತ್ ಗೂಸಾ ಕೊಟ್ಟಿರುವ ಘಟನೆ ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.

    ಬುಧವಾರ ರಾತ್ರಿ ಜಿಲ್ಲಾಸ್ಪತ್ರೆಗೆ ರೋಗಿಯ ಜೊತೆ ಮಹಿಳೆಯೊಬ್ಬರು ಬಂದಿದ್ದಾರೆ. ರೋಗಿ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿ ಇವರು ಆಸ್ಪತ್ರೆಯ ಆವರಣದಲ್ಲಿ ಕುಳಿತಿದ್ದರು. ಈ ವೇಳೆ ಆಸ್ಪತ್ರೆಗೆ ಬಂದ ವ್ಯಕ್ತಿಯೊಬ್ಬ ಅಸಭ್ಯವಾಗಿ ವರ್ತಿಸಿದ್ದಾನೆ. ಅಲ್ಲದೇ ಬರ್ತಿಯಾ, ನಂಬರ್ ಕೊಡು ಎಂದು ಪೀಡಿಸಿದ್ದಾನೆ.

    ಮಹಿಳೆ ಆತನ ಅಸಭ್ಯ ವರ್ತನೆಯನ್ನು ಆಸ್ಪತ್ರೆಯ ಸೆಕ್ಯೂರಿಟಿ ಗಾರ್ಡ್ ಗೆ ಹೇಳಿದ್ದಾರೆ. ನಂತರ ಸೆಕ್ಯೂರಿಟಿ ಗಾರ್ಡ್ ಆತನನ್ನು ಹಿಂಬಾಲಿಸಿಕೊಂಡು ಹೋಗಿದ್ದಾರೆ. ಆದರೆ ಆತ ತಪ್ಪಿಸಿಕೊಂಡು ಹೋಗಿದ್ದಾನೆ. ಬಳಿಕ ಕೆಲ ನಿಮಿಷಗಳ ನಂತರ ಕಾಮುಕ ಮತ್ತೆ ಆಸ್ಪತ್ರೆಗೆ ಬಂದು ತನ್ನ ಚಾಳಿಯನ್ನು ಶುರುಮಾಡಿದ್ದಾನೆ.

    ಇದರಿಂದ ರೋಸಿಹೋದ ಮಹಿಳೆ ಆತನನ್ನು ಹಿಡಿದು ಸಖತ್ ಗೂಸಾ ಕೊಟ್ಟಿದ್ದಾರೆ. ನಂತರ ಇತರೆ ಜನರು ಮತ್ತು ಸೆಕ್ಯೂರಿಟಿ ಗಾರ್ಡ್ ಬಂದು ಅವರು ಹೊಡೆದಿದ್ದಾರೆ. ಬಳಿಕ ಪೊಲೀಸರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಆಸ್ಪತ್ರೆಗೆ ಪೊಲೀಸರು ಬಂದು ಆರೋಪಿ ಕಾಮುಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

  • KSRTC ಬಸ್‍ನಲ್ಲಿ ಲೈಟ್ ಆಫ್ ಮಾಡಿ ಯುವತಿಯ ಮೈ ಕೈ ಮುಟ್ಟಿದ ಕಾಮುಕ ಕಂಡಕ್ಟರ್ ಗೆ ಗೂಸಾ

    KSRTC ಬಸ್‍ನಲ್ಲಿ ಲೈಟ್ ಆಫ್ ಮಾಡಿ ಯುವತಿಯ ಮೈ ಕೈ ಮುಟ್ಟಿದ ಕಾಮುಕ ಕಂಡಕ್ಟರ್ ಗೆ ಗೂಸಾ

    ತುಮಕೂರು: ಕೆ.ಎಸ್.ಆರ್.ಟಿ.ಸಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಯುವತಿ ಜೊತೆ ಅಸಭ್ಯವಾಗಿ ವರ್ತಿಸಿದ ಕಾಮುಕ ಕಂಡಕ್ಟರ್ ಗೆ ಸಹಪ್ರಯಾಣಿಕರೆಲ್ಲರೂ ಸೇರಿ ಸಖತ್ ಗೂಸಾ ಕೊಟ್ಟಿರುವ ಘಟನೆ ತುಮಕೂರಿನ ಕುಣಿಗಲ್ ನಲ್ಲಿ ನಡೆದಿದೆ.

    ಹೊಳೆನರಸೀಪುರ ಡಿಪೋ ಕಂಡಕ್ಟರ್ ಜವಾಹರ್ ಅಹಮದ್ ಪ್ರಯಾಣಿಕರಿಂದ ಗೂಸಾ ತಿಂದ ಕಂಡಕ್ಟರ್. ಹಾಸನದಿಂದ ಬೆಂಗಳೂರಿಗೆ ಹೊರಟ್ಟಿದ್ದ ಬಸ್ಸಿನಲ್ಲಿ ಸೋಮವಾರ ತಡರಾತ್ರಿ ಈ ಘಟನೆ ನಡೆದಿದೆ. ರೇಖಾ ಎಂಬ ಯುವತಿ ಹಾಸನದಿಂದ ಬಸ್ ಹತ್ತಿದ್ದಾರೆ. ಸೀಟ್ ಇಲ್ಲದೆ ಇದ್ದ ಕಾರಣ ನಿರ್ವಾಹಕನ ಸೀಟ್ ಪಕ್ಕದಲ್ಲಿ ಕುಳಿತಿದ್ದರು.

    ಬಸ್ ಚನ್ನರಾಯಪಟ್ಟಣ ದಾಟಿ ಕುಣಿಗಲ್ ಕಡೆ ಬರುತ್ತಿದ್ದಂತೆ ಆರೋಪಿ ಜವಾಹರ್ ಬಸ್ ಲೈಟ್ ಆಫ್ ಮಾಡಿದ್ದಾನೆ. ಬಳಿಕ ಕತ್ತಲೆಯಲ್ಲಿ ಜವಾಹರ್ ಯುವತಿ ರೇಖಾ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ. ಮೈ ಕೈ ಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಯುವತಿ ನಿರ್ವಾಹಕನ ವರ್ತನೆಗೆ ಪ್ರತಿರೋಧ ಒಡ್ಡಿ ಕಿರುಚಿಕೊಂಡಿದ್ದಾರೆ.

    ಯುವತಿಯ ಕಿರುಚಾಟ ಕೇಳಿದ ತಕ್ಷಣ ಸಹಪ್ರಯಾಣಿಕರು ಯುವತಿ ನೆರವಿಗೆ ಬಂದು ಕಾಮುಕ ಕಂಡಕ್ಟರ್ ಗೆ ಥಳಿಸಿದ್ದಾರೆ. ಈ ಸಂಬಂಧ ಕುಣಿಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಜವಾಹರ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.