Tag: goolihatti shekhar

  • ಬಿಜೆಪಿ, ಸಂಘಪರಿವಾರದ ನಾಯಕರಿಗೆ ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಸವಾಲ್

    ಬಿಜೆಪಿ, ಸಂಘಪರಿವಾರದ ನಾಯಕರಿಗೆ ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಸವಾಲ್

    ಚಿತ್ರದುರ್ಗ:‌ ಬಿಜೆಪಿ (BJP) ನಾಯಕರು ಹಾಗೂ ಸಂಘಪರಿವಾರದ ವಿರುದ್ಧ ಬಿಜೆಪಿ ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ (Goolihatti Shekhar) ಸವಾಲು ಹಾಕಿರುವ ಮತ್ತೊಂದು ಆಡಿಯೋ ವೈರಲ್ ಆಗಿದೆ.

    ಈ ಹಿಂದೆ ನಾಗ್ಪುರದ ಹೆಡ್ಗೆವಾರ್ ಸ್ಮಾರಕದೊಳಗೆ ದಲಿತರ ಪ್ರವೇಶಕ್ಕೆ ನಿಷೇಧವಿರುವ ಬಗ್ಗೆ ರಾಷ್ಟ್ರೀಯ ಬಿಜೆಪಿ ‌ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್‌ಗೆ ಕಳುಹಿಸಿದ್ದ ಆಡಿಯೋ‌ದಲ್ಲಿ ಆಕ್ರೋಶ ಹೊರಹಾಕಿದ್ದ ಗೂಳಿಹಟ್ಟಿ ಶೇಖರ್ ವಿರುದ್ಧ‌ ಬಿಜೆಪಿ ನಾಯಕರು ಹಾಗೂ ಸಂಘಪರಿವಾರದ ಮುಖಂಡರು ಪ್ರತಿಕ್ರಿಯೆ ನೀಡಿದ್ದರು. ಇದನ್ನೂ ಓದಿ: ನನಗಾದ ನೋವು ಹೇಳಿದ್ದೇನೆ, RSS ಬಗ್ಗೆ ಗೌರವವಿದೆ: ಗೂಳಿಹಟ್ಟಿ ಶೇಖರ್ ಸ್ಪಷ್ಟನೆ

    ಗೂಳಿಹಟ್ಟಿ ಶೇಖರ್‌ ಆರೋಪ ಅಲ್ಲೆಗೆಳೆದಿದ್ದರು. ಹೀಗಾಗಿ ಮತ್ತಷ್ಟು ಕೆಂಡಂಮಡಲವಾಗಿರುವ ಹೊಸದುರ್ಗ ಕ್ಷೇತ್ರದ ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಮತ್ತೆ ಬಿಜೆಪಿ ವಿರುದ್ಧ ಗುಡುಗಿರುವ ಆಡಿಯೋ ವೈರಲ್ ಆಗಿದೆ. ‘ಹೆಡ್ಗೆವಾರ್ ಸ್ಮಾರಕದೊಳಗೆ ನಾನು ಹೋಗಿದ್ದ ವೀಡಿಯೋ ರಿಲೀಸ್ ಮಾಡುವಂತೆ ಆಗ್ರಹಿಸಿದ್ದಾರೆ. ಒಂದು ವೇಳೆ ‌ನನ್ನ ಮಾತು ಸುಳ್ಳಾಗಿದ್ರೆ, ನಿಮ್ಮ ಮನೆಗಳಲ್ಲಿ ಕಸ ಗುಡಿಸುವ ಕೆಲಸ ಮಾಡಿಕೊಂಡಿರುತ್ತೇನೆ ಎಂದು ಟಾಂಗ್‌ ಕೊಟ್ಟಿದ್ದಾರೆ.

    ನಿಮ್ಮಲ್ಲಿ ಸಿಸಿಟಿವಿ ಫೂಟೇಜ್ ಇರುತ್ತದಲ್ಲ ರಿಲೀಸ್ ಮಾಡಿ. ನಾನು ಹೇಳಿರುವ ಸಂಪ್ರದಾಯ ಸುಳ್ಳಾದ್ರೆ, ನಿಮ್ಮ ಮನೆ ಗೇಟ್‌ಕೀಪರ್ ಆಗಿ ಕೆಲಸ ಮಾಡಿಕೊಂಡಿರುತ್ತೇನೆ. ಅಲ್ದೇ ಕೆಲ ತಿಂಗಳ ಮುನ್ನ ನಾನು ಈ ವಿಷಯ ಹೇಳಿದ್ದರೆ, ಇನ್ನಷ್ಟು ಸೀಟ್ ಕಳೆದುಕೊಳ್ಳುತ್ತಿದ್ರಿ ಎಂದು ಸಂಘಪರಿವಾರದ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಗೂಳಿಹಟ್ಟಿ ಶೇಖರ್- ಪಕ್ಷೇತರನಾಗಿ ಸ್ಪರ್ಧೆ

    ಬಿಜೆಪಿ ಮಾಜಿ ಶಾಸಕ ಪಿ.ರಾಜೀವ್ ಹೇಳಿಕೆಗೆ ಕೆಂಡಕಾರಿರುವ ಅವರು, ನಾನು ರಾತ್ರಿಯೆಲ್ಲಾ ಕುಡಿಯುತ್ತೇನೆ ರಾಜೀವ್ ಅಣ್ಣ. ನಮ್ಮಂಥ ಕುಡುಕರಿಂದ ನೀನು ಮಾಜಿ ಶಾಸಕರ ಪೆನ್ಷನ್ ತೆಗೆದುಕೊಳ್ತೀಯಣ್ಣ. ಸರ್ಕಾರ ಪ್ರಿಂಟ್ ಹಾಕಲ್ಲ, ಎಣ್ಣೆಯ ದುಡ್ಡೇ ಸರ್ಕಾರಕ್ಕೆ ಆದಾಯ ಎಂದು ತಿರುಗೇಟು ನೀಡಿದ್ದಾರೆ.

    ವಿರೋಧ ಪಕ್ಷದ‌ ನಾಯಕ ನಮ್ಮ ಆರ್.ಅಶೋಕಣ್ಣ, ಸುರೇಶ್ ಕುಮಾರ್ ಸರ್ ಬಹಳ ಹಿರಿಯರು. ನಿನ್ನೆ ಮೊನ್ನೆ ನನ್ನ ಹೇಳಿಕೆ ಬಗ್ಗೆ ಅನೇಕರು ಕಾಮೆಂಟ್ ಮಾಡಿದ್ದಾರೆ. ನಾನು ಜನರಲ್ ಕ್ಷೇತ್ರದಲ್ಲಿ ಗೆದ್ದು 38 ವರ್ಷಕ್ಕೆ ಮಂತ್ರಿ ಆಗಿದ್ದೆ. ಪಿ.ರಾಜೀವಣ್ಣ ನಿನ್ನಂತೆ ರಿಸರ್ವ್ ಕ್ಷೇತ್ರದಲ್ಲಿ ಗೆದ್ದಿಲ್ಲ ನಾನು. 35 ವರ್ಷಕ್ಕೆ ನಾನು ಸಾಯಬೇಕಿತ್ತು. ಕೊಲೆ ಆಗಬೇಕಿತ್ತು ಇಲ್ಲ ಅಂದ್ರೆ ಆತ್ಮಹತ್ಯೆ ಮಾಡಿಕೊಳ್ಳಬೇಕಿತ್ತು. ಆದರೂ ನಾನು ಈಗ 55 ವರ್ಷ ಬದುಕಿದ್ದೇ ಗ್ರೇಟ್ ಎಂದು ಟೀಕಿಸಿರುವ ಗೂಳಿಹಟ್ಟಿ ಆಡಿಯೋ ಎಲ್ಲೆಡೆ ವೈರಲ್‌ ಆಗಿದೆ.

  • ಆರ್‌ಎಸ್‌ಎಸ್‌ನಲ್ಲಿ ಜಾತಿ ಕೇಳಿ ಒಳಬಿಡುವ ಪದ್ಧತಿಯಿಲ್ಲ: ರಾಜಕುಮಾರ್

    ಆರ್‌ಎಸ್‌ಎಸ್‌ನಲ್ಲಿ ಜಾತಿ ಕೇಳಿ ಒಳಬಿಡುವ ಪದ್ಧತಿಯಿಲ್ಲ: ರಾಜಕುಮಾರ್

    ಕಲಬುರಗಿ: ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ (Goolihatti Shekhar) ಅವರ ಮಾತು ಸತ್ಯಕ್ಕೆ ಅತ್ಯಂತ ದೂರವಾಗಿದ್ದು, ಆರ್‌ಎಸ್‌ಎಸ್ (RSS) ಜಾತ್ಯತೀತ ಹಾಗೂ ಸರ್ವಹಿತ ಕಾಪಾಡುವ ಸಂಘಟನೆಯಾಗಿದೆ ಎಂದು ಬಿಜೆಪಿ ರಾಜ್ಯ ವಕ್ತಾರ ರಾಜಕುಮಾರ್ ಪಾಟೀಲ್ ತೆಲ್ಕೂರ್ (Rajkumar Patil Telkur) ತಿಳಿಸಿದ್ದಾರೆ.

    ಈ ಕುರಿತು ಪ್ರಕಟಣೆ ನೀಡಿದ ಅವರು, ಆರ್‌ಎಸ್‌ಎಸ್ ಅಥವಾ ಸಂಘ ಪರಿವಾರದ ಯಾವುದೇ ಕಚೇರಿಯಲ್ಲಿ ಜಾತಿ, ವರ್ಗ ಕೇಳಿ ಒಳಬಿಡುವ ಪದ್ಧತಿಯಿಲ್ಲ. ಗೂಳಿಹಟ್ಟಿ ಶೇಖರ್ ಅವರ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಕೇಳಿದ್ದೇನೆ. ಅವರ ಆರೋಪ ಶುದ್ಧ ಸುಳ್ಳು ಮತ್ತು ರಾಜಕೀಯ ದುರುದ್ದೇಶ ಎನಿಸುತ್ತದೆ ಎಂದರು. ಇದನ್ನೂ ಓದಿ: ಹಲ್ಲೆ ಪ್ರಕರಣ ಮುಚ್ಚಿ ಹಾಕಲು ಪ್ರಿಯಾಂಕ್ ಖರ್ಗೆ ಯತ್ನ – ಸುಳ್ಳು ಕೇಸ್‌ಗಳಿಗೆ ನಾವು ಭಯಪಡಲ್ಲ: ಮಣಿಕಂಠ್ ರಾಠೋಡ್

    ನಾನು ಆರ್‌ಎಸ್‌ಎಸ್‌ನಲ್ಲಿ ವಿದ್ಯಾರ್ಥಿ ದಿಸೆಯಿಂದ ವಿದ್ಯಾರ್ಥಿ ಪರಿಷತ್ತಿನಲ್ಲಿ ಕಾರ್ಯನಿರ್ವಹಿಸಿದ್ದೇನೆ. ಹೀಗಾಗಿ ರಾಷ್ಟ್ರಪ್ರೇಮ, ರಾಷ್ಟ್ರಭಕ್ತಿ ಮೆರೆಯುವ ಸಂಘದ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುವ ಕೆಲಸ ಮಾಡಲಾಗುತ್ತಿದೆ. ಗೂಳಿಹಟ್ಟಿಯವರು ಒಂದೆರಡು ಬೈಠಕ್‌ನಲ್ಲಿ ಭಾಗಿಯಾದರೆ ಆರ್‌ಎಸ್‌ಎಸ್ ಎಂತಹ ದೇಶಭಕ್ತ ಸಂಘಟನೆ ಎಂದು ಅವರಿಗೆ ತಿಳಿಯಲಿದ್ದು, ಬರುವುದಾದರೆ ಮುಕ್ತ ಅವಕಾಶ ಇದೆ ಎಂದು ಹೇಳಿದರು. ಇದನ್ನೂ ಓದಿ: ಪ್ರಮಾಣವಚನ ಸ್ವೀಕರಿಸಿದ ಕೆಲವೇ ನಿಮಿಷಗಳಲ್ಲಿ ಪ್ರಮುಖ ಭರವಸೆ ಈಡೇರಿಸಿದ ಸಿಎಂ ರೇವಂತ್ ರೆಡ್ಡಿ

    ಸುಳ್ಳು ಹೇಳುವುದು, ಗಾಳಿಯಲ್ಲಿ ಗುಂಡು ಹಾರಿಸುವ ಪ್ರವೃತ್ತಿಯಿಂದ ಗೂಳಿಹಟ್ಟಿ ಸೇರಿದಂತೆ ಉಳಿದ ನಾಯಕರು ಹೊರ ಬರಬೇಕು. ಪುರಾವೆ, ದಾಖಲೆಗಳು ಇದ್ದಲ್ಲಿ ಮಾತನಾಡಬೇಕು. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ನಾಯಕರು ತೋರಿದ ಅಗೌರವ ಏನು ಎನ್ನುವುದು ದೇಶದ ಜನತೆಗೆ ಗೊತ್ತಿದೆ. ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದು ಇದೇ ಕಾಂಗ್ರೆಸ್ (Congress) ಮತ್ತು ಅವರು ನಿಧನರಾದ ಸಂದರ್ಭದಲ್ಲಿ ಕಾಂಗ್ರೆಸ್ ತೋರಿದ ಅಗೌರವ. ಇದು ಕಾಂಗ್ರೆಸ್ ಬಾಬಾ ಸಾಹೇಬರನ್ನು ಕಂಡ ರೀತಿ ಎಂದು ಕಿಡಿಕಾರಿದರು. ಇದನ್ನೂ ಓದಿ: ಯತ್ನಾಳ್ ಆರೋಪಿಸಿದ ಅದೇ ಮೌಲ್ವಿ ಜೊತೆ ಗಡ್ಕರಿ ಫೋಟೋ ಬಿಡುಗಡೆ ಮಾಡಿದ ಕಾಂಗ್ರೆಸ್ ಮುಖಂಡ

  • ನನಗಾದ ನೋವು ಹೇಳಿದ್ದೇನೆ, RSS ಬಗ್ಗೆ ಗೌರವವಿದೆ: ಗೂಳಿಹಟ್ಟಿ ಶೇಖರ್ ಸ್ಪಷ್ಟನೆ

    ನನಗಾದ ನೋವು ಹೇಳಿದ್ದೇನೆ, RSS ಬಗ್ಗೆ ಗೌರವವಿದೆ: ಗೂಳಿಹಟ್ಟಿ ಶೇಖರ್ ಸ್ಪಷ್ಟನೆ

    ಬೆಂಗಳೂರು: ನನಗಾದ ನೋವನ್ನು ನಾನು ಹೇಳಿದ್ದೇನೆ. ಆರ್ ಎಸ್‍ಎಸ್ ಬಗ್ಗೆ ನನಗೆ ಅಪಾರ ಗೌರವವಿದೆ ಎಂದು ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ (Goolihatti Shekhar) ಸ್ಪಷ್ಟನೆ ನೀಡಿದ್ದಾರೆ.

    ಆರ್ ಎಸ್‍ಎಸ್‍ನ(RSS) ಕಚೇರಿ ಪ್ರವೇಶ ನೀಡದ ವಿಚಾರದ ಕುರಿತು ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿ, ಸಂಘದ ಕಚೇರಿಯಲ್ಲಲ್ಲ, ಹೆಗ್ಡೆವಾರ್ ಮ್ಯೂಸಿಯಂಗೆ ಹೋದಾಗ ನನಗೆ ಈ ಅನುಭವ ಆಗಿತ್ತು. ಅದಕ್ಕೆ ಈಗಾಗ್ಲೇ ಆರ್‍ಎಸ್‍ಎಸ್ ಅವರೇ ಅಸ್ಪøಶ್ಯತೆ ಇಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಬಹಳ ಸಂತೋಷ ಆಗುತ್ತಿದೆ. ಆರ್‍ಎಸ್‍ಎಸ್ ಬಗ್ಗೆ ಗೌರವ ಇದೆ ಎಂದು ತಿಳಿಸಿದ್ದಾರೆ.

    ಆಗಿದ್ದೇನು..?: ಚುನಾವಣೆಗೂ ಮುನ್ನ ಸದನ ಸಮಿತಿ ಸದಸ್ಯರು ಟ್ರಿಪ್ ಹೋಗಿದ್ದೆವು. ಎಲ್ಲರು ಟ್ರಿಪ್ ಮುಗಿಸಿ ಬೇರೆ ಬೇರೆ ಕಡೆ ತೆರಳಿದ್ರು. ಆದರೆ ನಾನು ನಮ್ಮ ಆರ್‍ಎಸ್‍ಎಸ್‍ನ ಸಂಘ ಅಂತೇಳಿ ಹೆಗ್ಡೆವಾರ್ ಮ್ಯೂಸಿಯಂಗೆ ಹೋದೆ. ಮ್ಯೂಸಿಯಂ ಎಂಟ್ರಿಗೂ ಮುನ್ನ ನಮ್ಮ ಮಾಹಿತಿ ಬರೆಯುವಾಗ ನನ್ನ ಜೊತೆ ಇದ್ದ ವ್ಯಕ್ತಿಗೆ ಒಬ್ಬರು ಹೇಳಿದ್ರು. ಅವರಿಗೆ ಹೇಳಿದ ಹಿನ್ನೆಲೆ ನಾನೇ ಒಳ ಹೋಗದೇ ಅಲ್ಲೇ ಉಳಿದೆ. ಮನಸ್ಸಲ್ಲಿ ಆ ನೋವು ಇನ್ನೂ ಕಾಡುತ್ತಿದೆ. ಹಾಗಾಗಿಯೇ ಆಡಿಯೋ ರಿಲೀಸ್ ಮಾಡಿರುವುದಾಗಿ ತಿಳಿಸಿದರು.

    ಸಾಂದರ್ಭಿಕ ಚಿತ್ರ

    ಟಿಕೆಟ್ ಸಿಗಲಿಲ್ಲ, ಹಾಗಾಗಿ ಹೀಗೆ ಮಾಡಿದ್ದಾರಾ ಎಂದು ಕೆಲವರು ಹೇಳಿದ್ರು. ಆ ಕಾರಣ ಅಲ್ಲ. ನನಗೆ ಇನ್ನೂ ಘಟನೆ ಬಗ್ಗೆ ನೋವಿದೆ. ದಕ್ಷಿಣ ಕರ್ನಾಟಕದಲ್ಲಿ ಮೊದಲು ಬಿಜೆಪಿಯಲ್ಲಿ ಗೆದ್ದವನು ನಾನು. ಟಿಕೆಟ್ ವಿಚಾರಕ್ಕೆಲ್ಲ ಹೀಗೆಲ್ಲ ಮಾಡಲ್ಲ. ಇಂತಹ ವಿಚಾರದಲ್ಲಿ ರಾಜಕೀಯ ಸರಿಯಲ್ಲ. ಆಡಿಯೋ ಬಳಿಕ ಅನೇಕರು ಕರೆ ಮಾಡಿದ್ರು. ಅಲ್ಲಿ ಹಾಗಿಲ್ಲ ಅಂತ ಹೇಳಿದ್ರು. ಆದರೆ ನಾನು ನನಗೆ ಆದಂತಹ ಅನುಭವವನ್ನ ಹೇಳಿದೆ. ಅಲ್ಲಿ ಹಾಗಿಲ್ಲ ಅಂದ್ರೆ ಸಂತೋಷವೇ ಎಂದರು.

    ನಾನು ಅಲ್ಲಿಂದ ಬಂದಾಗಲೇ ಈ ಬಗ್ಗೆ ತಾಲೂಕಿನ ಕೆಲ ಪ್ರಮುಖರ ಜೊತೆ ಹೇಳಿದ್ದೆ. ತಪ್ಪು ಸಂದೇಶ ನಿಮಗೆ ಕೊಟ್ಟಿದ್ದಾರೆ ಅಂತ ಹೇಳಿದ್ರು. ಸದ್ಯ ನಾನೀಗ ಪಕ್ಷದಲ್ಲಿಲ್ಲ. ಅವರನ್ನ ಪ್ರಶ್ನೆ ಮಾಡೋಕೆ ಆಗಲ್ಲ. ಅವರಿಗೂ ಗೊತ್ತಿಲ್ಲ ಅನ್ನಿಸುತ್ತೆ. ಹೋದವರಿಗೆ ಆದ ಅನುಭವವನ್ನ ನಾನು ಹೇಳಿದ್ದೇನೆ. ಆ ನೋವು ಯಾವಾಗಲೂ ಕಾಡುತ್ತಿದೆ ಎಂದು ಗೂಳಿಹಟ್ಟಿ ಶೇಖರ್ ಬೇಸರ ವ್ಯಕ್ತಪಡಿಸಿದರು.

  • ಗೂಳಿಹಟ್ಟಿ ವಿರುದ್ಧವೇ ಗುಡುಗಿದ ಖನಿಜ ನಿಗಮ ಅಧ್ಯಕ್ಷ ಲಿಂಗಮೂರ್ತಿ

    ಗೂಳಿಹಟ್ಟಿ ವಿರುದ್ಧವೇ ಗುಡುಗಿದ ಖನಿಜ ನಿಗಮ ಅಧ್ಯಕ್ಷ ಲಿಂಗಮೂರ್ತಿ

    ಚಿತ್ರದುರ್ಗ: ವಿಧಾನಸಭೆ ಚುನಾವಣೆಯಲ್ಲಿ ಗೆಲುವಿಗೆ ಕಾರಣ ಆದವರನ್ನು ಶಾಸಕರು ಕಡೆಗಣಿಸುತ್ತಿದ್ದಾರೆ ಎಂದು ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ವಿರುದ್ಧ ಖನಿಜ ನಿಗಮ ಅಧ್ಯಕ್ಷ ಲಿಂಗಮೂರ್ತಿ ಗುಡುಗಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು 2023ಕ್ಕೆ ಹೊಸದುರ್ಗ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ಈ ಹಿಂದೆ 2008, 2013ರಲ್ಲಿ ಚುನಾವಣೆಗೆ ಸ್ಪರ್ಧಿಸಿ ಸೋಲು ಕಂಡಿದ್ದೇನೆ. 2018ರಲ್ಲಿ ಮತ್ತೆ ನನಗೆ ಬಿಜೆಪಿಯಿಂದ ಸ್ಪರ್ಧಿಸುವ ಅವಕಾಶವಿದ್ದರೂ, ಕ್ಷೇತ್ರದಲ್ಲಿ ಕಾಂಗ್ರೆಸ್‍ನ್ನು ಸೋಲಿಸಬೇಕು ಹಾಗೂ ಬಿಎಸ್‍ವೈ ಸಿಎಂ ಆಗಬೇಕೆಂಬ ದೃಷ್ಟಿಯಿಂದ ಶಾಸಕ ಗೂಳಿಹಟ್ಟಿ ಶೇಖರ್ ಅವರಿಗೆ ಬಿಜೆಪಿ ಟಿಕೆಟ್ ತ್ಯಾಗ ಮಾಡಿದ್ದೆನು ಎಂದರು.

    ಚುನಾವಣೆಯಲ್ಲಿ ಗೂಳಿಹಟ್ಟಿ ಶೇಖರ್ ಅವರು ಅಭ್ಯರ್ಥಿಯಾದರೂ, ನಾನೇ ಅಭ್ಯರ್ಥಿ ಎಂಬಂತೆ ನಾನು ಹಾಗೂ ನನ್ನ ಕಾರ್ಯಕರ್ತರು ಕೆಲಸ ಮಾಡಿ ಬಿಜೆಪಿ ಗೆಲ್ಲಿಸಿದ್ದೆವು. ಆದರೆ ನಮ್ಮ ಬೆಂಬಲದಿಂದ ಗೆದ್ದ ಬಳಿಕ ಶಾಸಕರು ನಮ್ಮನ್ನು ಕಡೆಗಣನೆ ಮಾಡುತ್ತಿದ್ದಾರೆಂದು ಆರೋಪಿಸಿದರು. ಇದನ್ನೂ ಓದಿ: ‘ಆಕ್ಟ್ -1978’ ಸಿನಿಮಾ ಪ್ರೇರಣೆ – ಬ್ಯಾಂಕ್ ಮುಂದೆ ಪ್ರತಿಭಟಿಸಿ ನ್ಯಾಯ ಪಡೆದ ಮಹಿಳೆ

    ರಾಜ್ಯದ ಜನರು ಕೋವಿಡ್ ಸಂಕಷ್ಟಕ್ಕೆ ಸಿಲುಕಿರುವ ವೇಳೆ ಬಿಜೆಪಿ ನಾಯಕರಿಂದ ಚುನಾವಣೆ ಜಪ ನಡೆಯುತ್ತಿದೆ. ವಿಧಾನಸಭಾ ಚುನಾವಣೆಗೂ ಮುನ್ನ ಟಿಕೆಟ್ ವಿಚಾರದಲ್ಲಿ ಹೊಸದುರ್ಗ ಬಿಜೆಪಿ ನಾಯಕರ ನಡುವೇ ಭಿನ್ನಮತ ಸ್ಫೋಟಗೊಂಡಿದೆ. ಹಾಗೆಯೇ ನಾನು 2023ಕ್ಕೆ ಬಿಜೆಪಿ ಅಭ್ಯರ್ಥಿ ಆಕಾಂಕ್ಷಿ ಆಗಿದ್ದೇನೆಂದು ತಿಳಿದ ಶಾಸಕ ಶೇಖರ್ ಹತಾಶರಾಗಿ ನನ್ನನ್ನು ಅವಮಾನಿಸುವ ರೀತಿಯಲ್ಲಿ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ನೆಚ್ಚಿನ ಶಿಕ್ಷಕನ ವರ್ಗಾವಣೆ – ಬಿಕ್ಕಿ ಬಿಕ್ಕಿ ಅತ್ತ ವಿದ್ಯಾರ್ಥಿಗಳು

  • ಓಬವ್ವನ ನಾಡಿಗೆ ನೂತನ ಮಹಿಳಾ ಎಸ್‍ಪಿ- ಸರ್ಕಾರದ ವಿರುದ್ಧ ಗೂಳಿಹಟ್ಟಿ ಗುಡುಗು

    ಓಬವ್ವನ ನಾಡಿಗೆ ನೂತನ ಮಹಿಳಾ ಎಸ್‍ಪಿ- ಸರ್ಕಾರದ ವಿರುದ್ಧ ಗೂಳಿಹಟ್ಟಿ ಗುಡುಗು

    – ನಾಲ್ವರು ಶಾಸಕರ ಮಾತಿಗೆ ಸರ್ಕಾರದಲ್ಲಿ ಕಿಮ್ಮತ್ತಿಲ್ಲ

    ಚಿತ್ರದುರ್ಗ: ಜಿಲ್ಲೆಯ ನೂತನ ಎಸ್‍ಪಿಯಾಗಿ ರಾಧಿಕಾ ನೇಮಕಗೊಂಡ ಬೆನ್ನಲ್ಲೇ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಚಿತ್ರದುರ್ಗ ಜಿಲ್ಲೆಯ ಶಾಸಕರ ವಿರೋಧದ ನಡುವೆಯೂ ರಾಧಿಕಾ ಅವರನ್ನು ಸರ್ಕಾರ ನೇಮಿಸಿದ್ದು, ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಯನ್ನು ನೇಮಿಸಿ ಜಿಲ್ಲೆಯಲ್ಲಿನ ಸಮಸ್ಯೆಗಳನ್ನು ನಿರ್ಮೂಲನೆ ಮಾಡಬೇಕೆಂದು ಮನವಿ ಮಾಡಲಾಗಿತ್ತು. ಆದರೆ ಶಾಸಕರ ಮಾತಿಗೆ ಸರ್ಕಾರ ಸೊಪ್ಪು ಹಾಕಿಲ್ಲ ಅಂತ ತೀವ್ರ ಗರಂ ಆಗಿರುವ ಹೊಸದುರ್ಗ ಬಿಜೆಪಿ ಶಾಸಕ ಗೂಳಿಹಟ್ಟಿ ಡಿ ಶೇಖರ್, ಸರ್ಕಾರದ ವಿರುದ್ಧ ಗರಂ ಆಗಿದ್ದಾರೆ. ಅಲ್ಲದೆ ಹೊಸದುರ್ಗ ಕ್ಷೇತ್ರದ ವಾಟ್ಸಪ್ ಗ್ರೂಪ್‍ಗಳಲ್ಲಿ ಮೆಸೇಜ್ ಮೂಲಕ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

    ಚಿತ್ರದುರ್ಗ ಜಿಲ್ಲೆಯ ನಾಲ್ಕು ಜನ ಶಾಸಕರ ದೌರ್ಭಾಗ್ಯ ಹಾಗೂ ಶಾಸಕರು ಹೇಳಿದರೂ ಕೇಳದ ಸರ್ಕಾರ ಅಂತ ಅಸಮಾಧಾನ ಅಂತ ವಾಟ್ಸಪ್ ನಲ್ಲಿ ಮೊಬೈಲ್ ಸ್ಟೇಟಸ್ ಹಾಕಿಕೊಂಡು ನೇರವಾಗಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

    ಇದೇ ವೇಳೆ ಪಬ್ಲಿಕ್ ಟಿವಿ ಜೊತೆ ದೂರವಾಣಿಯಲ್ಲಿ ಮಾತನಾಡಿರುವ ಶಾಸಕ ಗೂಳಿಹಟ್ಟಿ, ಚಿತ್ರದುರ್ಗ ಜಿಲ್ಲೆಯ ನಾಲ್ಕು ಜನ ಶಾಸಕರ ಮಾತಿಗೆ ಈ ಸರ್ಕಾರದಲ್ಲಿ ಕಿಮ್ಮತ್ತಿಲ್ಲ. ಆದರೆ ಬಿಜೆಪಿ ಸರ್ಕಾರದಲ್ಲಿ ವಿರೋಧ ಪಕ್ಷದವರಿಗೆ ಹೆಚ್ಚು ಬೆಲೆ ಇದೆ. ಹಾಗೆಯೇ ನಮ್ಮ ಜಿಲ್ಲೆ ಪ್ರಯೋಗಾತ್ಮಕ ಜಿಲ್ಲೆಯಾಗಿದ್ದು, ಐಎಎಸ್, ಐಪಿಎಸ್ ಹಾಗೂ ರಾಜಕಾರಣಿಗಳಿಗೆ ಪ್ರಯೋಗಾತ್ಮಕ ಜಿಲ್ಲೆಯಾಗಿದೆ ಎಂದು ಆರೋಪಿಸಿದ್ದಾರೆ.

    ಈ ಜಿಲ್ಲೆಯ ನಾಲ್ಕು ಜನ ಶಾಸಕರಾದ ತಿಪ್ಪಾರೆಡ್ಡಿ, ಪೂರ್ಣಿಮ, ಚಂದ್ರಪ್ಪ ಹಾಗೂ ನಾನು ಸಂಪುಟದಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ರು ಸಹ ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಲ್ಲಿ ಒಗ್ಗಟ್ಟಾಗುತ್ತಿದ್ದೆವು. ಹೀಗಾಗಿ ನಮ್ಮ ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಒಳ್ಳೆಯ ಎಸ್‍ಪಿಯನ್ನು ನೇಮಿಸುವಂತೆ ಸಿಎಂಗೆ ಮನವಿ ಮಾಡಿದ್ದೆವು. ಬಲವಂತವಾಗಿ ನಮ್ಮಿಂದ ಎಸ್‍ಪಿ ರಾಧಿಕಾ ನೇಮಕಕ್ಕೆ ಪತ್ರ ತೆಗೆದುಕೊಂಡಿದ್ದು, ಹಿರಿಯೂರಿನ ಕಾಂಗ್ರೆಸ್ ನಾಯಕರೊಬ್ಬರ ಸಂಬಂಧಿಯನ್ನು ಎಸ್‍ಪಿಯಾಗಿ ನೇಮಿಸಿದ್ದಾರೆ ಅಂತ ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಓಬವ್ವನ ನಾಡಲ್ಲಿ ಮಹಿಳೆಯರ ಆಡಳಿತ- ಮಹಿಳಾಮಣಿಗಳ ಕೈಯಲ್ಲಿ ಜಿಲ್ಲೆಯ ಚುಕ್ಕಾಣಿ

    ಈ ಹಿಂದೆ ಮರಳು ದಂಧೆ ವಿಚಾರವಾಗಿ ನಮ್ಮ ಮತದಾರರಿಗಾಗಿ ಸಾಯಲು ಸಿದ್ಧವಾಗಿದ್ದವನು ನಾನು. ಆದರೆ ಜಿಲ್ಲೆಯಲ್ಲಿ ಮತ್ತೆ ಕಾಂಗ್ರೆಸ್ ನಾಯಕರ ಸಂಬಂಧಿ ಎಸ್‍ಪಿಯಾಗಿರೋದು ಎಲ್ಲೋ ಒಂದು ಕಡೆ ದೌರ್ಜನ್ಯ ಮತ್ತೆ ಮುಂದುವರಿಯುವ ಭೀತಿ ಕಾಡುತ್ತಿದೆ ಅಂತ ಆತಂಕ ವ್ಯಕ್ತಪಡಿಸಿದ್ದಾರೆ.

    ಇದೇ ವೇಳೆ ಸಿಎಂ ಬಳಿ ಮತ್ತೆ ಎಸ್‍ಪಿ ಬದಲಾವಣೆಗೆ ಮನವಿ ಮಾಡುತ್ತೀರಾ ಎಂದು ಪ್ರಶ್ನಿಸಿದಾಗ ಕೆಂಡಂಮಡಲವಾದ ಶಾಸಕ ಶೇಖರ್, ಇನ್ಮುಂದೆ ಸಿಎಂ ಬಿಎಸ್‍ವೈ ಅವರನ್ನು ಮನವಿ ಮಾಡುವ ಪ್ರಶ್ನೆಯೇ ಇಲ್ಲ. ಸರ್ಕಾರದಲ್ಲಿ ನಮ್ಮ ಮನವಿಗೆ ಬೆಲೆ ಇಲ್ಲ. ನೋಡೋಣ ಮುಂದೆ ಏನಾಗುತ್ತೆ, ಜಸ್ಟ್ ವೈಟ್ ಆ್ಯಂಡ್ ಸಿ ಅಷ್ಟೇ ಎನ್ನುವ ಮೂಲಕ ಅವರ ಮುಂದಿನ ನಡೆಯ ಬಗ್ಗೆ ರಾಜ್ಯದ ಜನರಲ್ಲಿ ತೀವ್ರ ಕುತೂಹಲ ಮೂಡಿಸಿದ್ದಾರೆ.

  • ಡಿಕೆಶಿ ಡಿನ್ನರ್ ಪಾರ್ಟಿಯಲ್ಲಿ ಗೂಳಿಹಟ್ಟಿ ಭಾಗಿ: ಸ್ಪಷ್ಟನೆ ಕೊಟ್ಟ ಆರ್.ಅಶೋಕ್

    ಡಿಕೆಶಿ ಡಿನ್ನರ್ ಪಾರ್ಟಿಯಲ್ಲಿ ಗೂಳಿಹಟ್ಟಿ ಭಾಗಿ: ಸ್ಪಷ್ಟನೆ ಕೊಟ್ಟ ಆರ್.ಅಶೋಕ್

    ಬೆಂಗಳೂರು: ಸಚಿವ ಡಿಕೆ ಶಿವಕುಮಾರ್ ಅವರ ಜೊತೆ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಭೋಜನ ಮಾಡಿರುವುದಕ್ಕೆ ಶಾಸಕ ಆರ್ ಅಶೋಕ್ ಸ್ಪಷ್ಟನೆ ನೀಡಿದ್ದಾರೆ.

    ಈ ಕುರಿತು ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಗಳವಾರ ರಾತ್ರಿ ಗೂಳಿಹಟ್ಟಿ ಶೇಖರ್, ಸುಧಾಕರ್ ಅವರನ್ನು ಡ್ರಾಪ್ ಮಾಡಲು ಖಾಸಗಿ ಹೋಟೆಲ್ ಗೆ ಹೋಗಿದ್ದಾರೆ. ನಾನು ಅವರ ಜೊತೆ ಮಾತಾಡಿದ್ದೇನೆ. ಹೋಟೆಲ್ ನಲ್ಲಿ ಶಾಸಕರಿಗೆ ಪಾರ್ಟಿ ನಡೆಯುತ್ತಿದ್ದ ವೇಳೆಯೇ ಅವರು ಹೋಗಿದ್ದು ಬೇರೆ ರೀತಿಯ ಅರ್ಥಕ್ಕೆ ಕಾರಣವಾಗಿದೆ ಅಂತ ಹೇಳಿದ್ರು.

    ಶೇಖರ್ ಅವರು ಯಾವುದೇ ರೀತಿಯಲ್ಲಿ ಬಿಜೆಪಿಗೆ ಮುಜುಗರ ತರುವ ಕೆಲಸ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸುಮ್ಮನೆ ಕಾಂಗ್ರೆಸ್ ನವರು ಈ ಕುರಿತು ಅಪಪ್ರಚಾರ ಮಾಡುತ್ತಿದ್ದಾರೆ. ಅವರು ನಾಯಿ ನರಿಗಳ ರೀತಿ ಕಚ್ಚಾಡುತ್ತಿದ್ದಾರೆ ಅಂತ ಅವರು ಹೇಳಿದ್ದಾರೆ.

    ಏನಿದು ಘಟನೆ?:
    ಸಚಿವ ಡಿಕೆ ಶಿವಕುಮಾರ್ ಅವರು ಮಂಗಳವಾರ ರಾತ್ರಿ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರಿಗೆ ಡಿನ್ನರ್ ಪಾರ್ಟಿ ಆಯೋಜಿಸಿದ್ದರು. ಈ ವೇಳೆ ಕಾರಿನಲ್ಲಿ ಸುಧಾಕರ್ ಜೊತೆ ಗೂಳಿಹಟ್ಟಿ ಶೇಖರ್ ಇರುವುದನ್ನು ನೋಡಿದ ಜೆಡಿಎಸ್, ಕಾಂಗ್ರೆಸ್ ಶಾಸಕರು ಬನ್ನಿ ಬನ್ನಿ ಊಟ ಮಾಡೋದಕ್ಕೆ ಯಾವ ಪಕ್ಷ ಆದರೇನು? ಊಟ ಮಾಡಿ ಅಂತಾ ಹೇಳಿ ಗೂಳಿಹಟ್ಟಿಯನ್ನು ಪೇಚಿಗೆ ಸಿಲುಕಿಸಿದ್ರು. ನಂತರ ಊಟ ಮಾಡಿದ ಗೂಳಿಹಟ್ಟಿ ಸುಧಾಕರ್ ಅವರ ಕಾರಿನಲ್ಲೆ ವಾಪಾಸಾಗಿದ್ದಾರೆ ಎಂದು ವರದಿಯಾಗಿತ್ತು.