Tag: Goolihatti shekar

  • ಮಾಜಿ ಸಚಿವ ಗೂಳಿಹಟ್ಟಿ ಶೇಖರ್‌ಗೆ ಮಾತೃವಿಯೋಗ

    ಮಾಜಿ ಸಚಿವ ಗೂಳಿಹಟ್ಟಿ ಶೇಖರ್‌ಗೆ ಮಾತೃವಿಯೋಗ

    ಚಿತ್ರದುರ್ಗ: ಮಾಜಿ ಸಚಿವ ಗೂಳಿಹಟ್ಟಿ ಶೇಖರ್ (Goolihatti Shekar) ತಾಯಿ ಪುಟ್ಟಮ್ಮ ಇಂದು ಮುಂಜಾನೆ 5 ಗಂಟೆಗೆ ನಿಧನರಾಗಿದ್ದಾರೆ.

    ಹೊಸದುರ್ಗ (Hosadurga) ಕ್ಷೇತ್ರದ ಮಾಜಿಸಚಿವ ಗೂಳಿಹಟ್ಟಿ ಶೇಖರ್ ತಾಯಿ ಬೋವಿಹಟ್ಟಿಯ ಪುಟ್ಟಮ್ಮ (79) ಭಾನುವಾರ ಬೆಳಗಿನ ಜಾವ ಕೊನೆಯುಸಿರೆಳೆದಿದ್ದಾರೆ. ಈ ಹಿಂದೆ ಪುಟ್ಟಮ್ಮ ಕ್ರೈಸ್ತ ಧರ್ಮಕ್ಕೆ ಮತಾಂತರವಾಗಿದ್ದರು. ಬಳಿಕ ಮಗನ ಒತ್ತಾಯಕ್ಕೆ ಮಣಿದು ಹಿಂದೂ ಧರ್ಮಕ್ಕೆ ಮರಳಿದ್ದರು. ಇದನ್ನೂ ಓದಿ: ಬಿಹಾರ ಬಜೆಟ್ ಕನ್ನಡಿಗರಿಗೆ ಅನ್ಯಾಯ ಮಾಡಿದೆ: ಪ್ರಿಯಾಂಕ್ ಖರ್ಗೆ

    ಇಂದು ಸಂಜೆ ಹಿಂದೂ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಪುತ್ರ ಗೂಳಿಹಟ್ಟಿ ಶೇಖರ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಉಡುಪಿ: ಡಿಸಿ ಕಚೇರಿಯಲ್ಲಿ ಶರಣಾದ ನಕ್ಸಲ್‌ ತೊಂಬಟ್ಟು ಲಕ್ಷ್ಮೀ

  • ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಗೂಳಿಹಟ್ಟಿ ಶೇಖರ್- ಪಕ್ಷೇತರನಾಗಿ ಸ್ಪರ್ಧೆ

    ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಗೂಳಿಹಟ್ಟಿ ಶೇಖರ್- ಪಕ್ಷೇತರನಾಗಿ ಸ್ಪರ್ಧೆ

    ಕಾರವಾರ: ಚಿತ್ರದುರ್ಗದ (Chitradurga) ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್‌ರವರು (Goolihatti Shekar) ತಮ್ಮ ಶಾಸಕ ಸ್ಥಾನಕ್ಕೆ ರಾಜಿನಾಮೆ (Resignation) ನೀಡಿದ್ದಾರೆ.

    ಉತ್ತರ ಕನ್ನಡ (Uttara Kannada) ಜಿಲ್ಲೆಯ ಶಿರಸಿಗೆ (Sirsi) ಆಗಮಿಸಿದ ಗೂಳಿಹಟ್ಟಿ ಶೇಖರ್, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರ (Vishweshwar Hegde Kageri) ಕಚೇರಿಗೆ ತೆರಳಿ ರಾಜೀನಾಮೆ ಸಲ್ಲಿಕೆ ಮಾಡಿದರು. ಈ ಸಂದರ್ಭದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, 2023ರ ಚುನಾವಣೆಗೆ (Election) ಪಕ್ಷೇತರನಾಗಿ ಸ್ಪರ್ಧೆ ಮಾಡುತ್ತೇನೆ. ಎಸ್‌ಸಿ (SC) ಜನಾಂಗದವರು ಎಸ್‌ಸಿ ಕ್ಷೇತ್ರದಲ್ಲಿ ನಿಲ್ಲಬೇಕು, ಎಸ್‌ಟಿ (ST) ಕ್ಷೇತ್ರದಲ್ಲಿ ಎಸ್‌ಟಿ ಜನಾಂಗದವರು ಚುನಾವಣೆಗೆ ನಿಲ್ಲಬೇಕು. ಜನರಲ್‌ನವರು (General) ಜನರಲ್‌ನಲ್ಲಿ ನಿಲ್ಲಬೇಕು ಎಂಬ ನಿಯಮ ನಾವೇ ಮಾಡಿಕೊಂಡಿದ್ದೇವೆ. ಈ ನಿಯಮದಡಿ ಪಕ್ಷ ಸಿದ್ಧಾಂತ ಹಾಗೂ ಸಾಮಾಜಿಕ ನ್ಯಾಯದ ನಿಯಮ ಮಾಡಿಕೊಂಡಿದೆ ಎಂದರು. ಇದನ್ನೂ ಓದಿ: ಒಂದು ಲಕ್ಷ ಮತಗಳೊಂದಿಗೆ ಗೆಲುವು ಸಾಧಿಸುವೆ: ಪ್ರೀತಂ ಗೌಡ 

    ಎಸ್‌ಸಿ ಜನಾಂಗದವನಾಗಿ ಜನರಲ್‌ನಲ್ಲಿ ಟಿಕೆಟ್ ಕೇಳಿರುವುದು ನನ್ನ ತಪ್ಪು. ಪಕ್ಷದಲ್ಲಿ ಸಾಮಾಜಿಕ ನ್ಯಾಯ ಮತ್ತು ತತ್ವ ಸಿದ್ಧಾಂತಗಳು ಅವರದ್ದೇ ಆಗಿರುತ್ತದೆ. ಪಕ್ಷದ ಜನರಲ್‌ನಲ್ಲಿ ಟಿಕೆಟ್ ಕೇಳಿದ್ದರಿಂದ ಬೇರೆಯವರಿಗೆ ಅವಕಾಶ ಮಾಡಿಕೊಟ್ಟಿದೆ. ಹೀಗಾಗಿ ಜನರ ಮಧ್ಯದಿಂದ ಬಂದವನಾಗಿ ಜನರ ಮಧ್ಯೆ ಇರಬೇಕು ಎನ್ನುವ ದೃಷ್ಟಿಯಿಂದ ಕ್ಷೇತ್ರದ ಮತದಾರರ ಆಕಾಂಕ್ಷೆಯಂತೆ ಈ ಚುನಾವಣೆಯಲ್ಲಿ ಪಕ್ಷೇತರನಾಗಿ ಸ್ಪರ್ಧೆ ಮಾಡುತ್ತೇನೆ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ವರುಣಾ, ಚಾಮರಾಜನಗರ ಎರಡೂ ಕ್ಷೇತ್ರದಲ್ಲಿ ಗೆಲ್ಲುತ್ತೇವೆ: ಪುಟ್ಟರಂಗಶೆಟ್ಟಿ

  • ಪಿಎಸ್‍ಐ ವರ್ಗಾವಣೆಯಲ್ಲಿ ಶಿವಮೊಗ್ಗ ಸಂಸದರು ಹಸ್ತಕ್ಷೇಪ ಮಾಡ್ತಿದ್ದಾರೆ: ಗೂಳಿಹಟ್ಟಿ

    ಪಿಎಸ್‍ಐ ವರ್ಗಾವಣೆಯಲ್ಲಿ ಶಿವಮೊಗ್ಗ ಸಂಸದರು ಹಸ್ತಕ್ಷೇಪ ಮಾಡ್ತಿದ್ದಾರೆ: ಗೂಳಿಹಟ್ಟಿ

    ಚಿತ್ರದುರ್ಗ: ಪಿಎಸ್‍ಐ ವರ್ಗಾವಣೆಯಲ್ಲಿ ಶಿವಮೊಗ್ಗ ಸಂಸದ ಬಿ.ವೈ ರಾಘವೇಂದ್ರ ಹಸ್ತಕ್ಷೇಪ ಮಾಡಿದ್ದಾರೆ ಎಂದು ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಆರೋಪ ಮಾಡಿದ್ದಾರೆ.

    ಇಂದು ಪಬ್ಲಿಕ್ ಟಿವಿ ಜೊತೆ ದೂರವಾಣಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಸ್ವಪಕ್ಷ ಶಾಸಕರನ್ನು ಕಡೆಗಣನೆ ಮಾಡುತ್ತಿದೆ. ಕ್ಷೇತ್ರಕ್ಕೆ ಅನುಧಾನ ನೀಡುವಲ್ಲಿ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಪಿಎಸ್‍ಐ ವರ್ಗಾವಣೆ ವಿಚಾರದಲ್ಲಿ ಶಾಸಕರ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕಿದ್ದಾರೆ ಎಂದು ಅಸಮಧಾನ ಹೊರಹಾಕಿದ್ದಾರೆ.

    ಬಿಜೆಪಿಯಲ್ಲಿ ನನ್ನ ಜೊತೆ ಹೆಚ್ಚು ಒಡನಾಟ ಹೊಂದಿರೋ ಆರ್. ಅಶೋಕ್‍ಗೆ ಉನ್ನತವಾದ ಸ್ಥಾನಮಾನ ಸಿಕ್ಕರೆ ನಮ್ಮ ಕ್ಷೇತ್ರವನ್ನು ಗುರುತಿಸುತ್ತಾರೆ. ಆದ್ದರಿಂದ ಇಂದು ನಾನು ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಅಶೋಕ್ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವಂತೆ ಒತ್ತಾಯ ಮಾಡುತ್ತೇನೆ. ನಂತರ ಸಚಿವ ಆರ್.ಅಶೋಕ್ ಜೊತೆ ಚರ್ಚಿಸಿ ಮುಂದಿನ ತೀರ್ಮಾನ ಮಾಡುತ್ತೇನೆ ಎಂದು ಹೇಳಿದ್ದಾರೆ.

    ಬಿಜೆಪಿ ಸರ್ಕಾರದಲ್ಲಿ ಸ್ವಪಕ್ಷ ಶಾಸಕರ ಮಾತಿಗೆ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಮನನೊಂದ ಗೂಳಿಹಟ್ಟಿ ಶೇಖರ್, ಕ್ಷೇತ್ರದಲ್ಲಿ ಕಾರ್ಯಕರ್ತರ ಸಭೆ ಮಾಡಿ ಕಾರ್ಯಕರ್ತರ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದಾರೆ.