Tag: google

  • 5 ದಿನದಲ್ಲಿ ಮತ್ತೆ ಗೂಗಲ್‌ಗೆ ಭಾರತ ದಂಡ – 936 ಕೋಟಿ ಫೈನ್ ಹಾಕಿದ ಸಿಸಿಐ

    5 ದಿನದಲ್ಲಿ ಮತ್ತೆ ಗೂಗಲ್‌ಗೆ ಭಾರತ ದಂಡ – 936 ಕೋಟಿ ಫೈನ್ ಹಾಕಿದ ಸಿಸಿಐ

    ನವದೆಹಲಿ: 5 ದಿನಗಳ ಹಿಂದಷ್ಟೇ ಭಾರತೀಯ ಸ್ಪರ್ಧಾ ಆಯೋಗ (CCI) ಟೆಕ್ ದೈತ್ಯ ಗೂಗಲ್‌ಗೆ (Google) ತನ್ನ ಪ್ರಬಲ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿದ್ದಕ್ಕೆ 1,337 ಕೋಟಿ ರೂ. ದಂಡವನ್ನು (Fine) ವಿಧಿಸಿತ್ತು. ಇದೀಗ ಸಿಸಿಐ ಇಂತಹುದೇ ಕಾರಣವನ್ನು ನೀಡಿ ಗೂಗಲ್‌ಗೆ ಮತ್ತೊಮ್ಮೆ ಭಾರೀ ಮೊತ್ತದ ದಂಡವನ್ನು ವಿಧಿಸಿದೆ.

    ಪ್ಲೇ ಸ್ಟೋರ್ ನೀತಿಗಳಿಗೆ ಸಂಬಂಧಿಸಿದಂತೆ ಗೂಗಲ್ ತನ್ನ ಪ್ರಬಲ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿರುವುದಕ್ಕೆ ಮಂಗಳವಾರ ಸಿಸಿಐ ಬರೋಬ್ಬರಿ 936.44 ಕೋಟಿ ರೂ. ದಂಡವನ್ನು ವಿಧಿಸಿದೆ. ಇದು 1 ವಾರದೊಳಗೆ ಗೂಗಲ್‌ಗೆ ಸಿಸಿಐ ವಿಧಿಸಿರುವ 2ನೇ ದಂಡವಾಗಿದೆ.

    ಸ್ಮಾರ್ಟ್ ಫೋನ್‌ಗಳಲ್ಲಿ ಅಪ್ಲಿಕೇಶನ್‌ಗಳು ಹಾಗೂ ಪ್ರೋಗ್ರಾಂಗಳನ್ನು ಚಲಾಯಿಸಲು ಆಪರೇಟಿಂಗ್ ಸಿಸ್ಟಮ್‌ನ (OS) ಅಗತ್ಯವಿರುತ್ತದೆ. ಗೂಗಲ್ 2005ರಲ್ಲಿ ಸ್ವಾಧೀನಪಡಿಸಿಕೊಂಡ ಆಂಡ್ರಾಯ್ಡ್ (Android) ಕೂಡಾ ಅಂತಹುದೇ ಒಂದು ಮೊಬೈಲ್ ಆಪರೇಟಿಂಗ್ ಸಿಸ್ಟಮ್ ಆಗಿದೆ. ಇದೀಗ ಸಿಸಿಐ ಆಂಡ್ರಾಯ್ಡ್ ಮೊಬೈಲ್ ಆಪರೇಟಿಂಗ್ ಸಿಸ್ಟಮ್‌ನ ಪರವಾನಗಿಗೆ ಸಂಬಂಧಿಸಿದಂತೆ ಗೂಗಲ್‌ನ ವಿವಿಧ ಚಟುವಟಿಕೆಗಳನ್ನು ಪರಿಶೀಲಿಸಿದೆ. ಪ್ಲೇ ಸ್ಟೋರ್, ಗೂಗಲ್ ಸರ್ಚ್, ಗೂಗಲ್ ಕ್ರೋಮ್, ಯೂಟ್ಯೂಬ್‌ನಂತಹ ಗೂಗಲ್ ಸ್ವಾಮ್ಯದ ವಿವಿಧ ಮೊಬೈಲ್ ಅಪ್ಲಿಕೇಶನ್‌ಗಳಲ್ಲೂ ಪರಿಶೀಲನೆ ನಡೆಸಿದೆ. ಇದನ್ನೂ ಓದಿ: ವಿಶ್ವದ ಅತ್ಯಂತ ಕೊಳಕು ಮನುಷ್ಯ ನಿಧನ

    ಪ್ಲೇಸ್ಟೋರ್‌ನಲ್ಲಿ ಪಾವತಿ ಮಾಡಿದ ಆಪ್‌ಗಳಿಗಾಗಿ ಗೂಗಲ್ ತನ್ನದೇ ಆದ ಬಿಲ್ಲಿಂಗ್ ವ್ಯವಸ್ಥೆಯನ್ನು ಅನುಸರಿಸುತ್ತಿದೆ. ಆದರೆ ಇದು ಕಾನೂನು ಸಮ್ಮತವಲ್ಲದ ನಡವಳಿಕೆ. ಈ ಎಲ್ಲಾ ಅನ್ಯಾಯದ ವ್ಯಾಪಾರದ ಅಭ್ಯಾಸಗಳನ್ನು ನಿಲ್ಲಿಸುವಂತೆ ಹಾಗೂ ನಿರ್ದಿಷ್ಟ ಸಮಯದೊಳಗೆ ತನ್ನ ನಡಾವಳಿಯನ್ನು ಸರಿಪಡಿಸಿಕೊಳ್ಳುವಂತೆ ಗೂಗಲ್‌ಗೆ ಸಿಸಿಐ ನಿರ್ದೇಶಿಸಿದೆ.

    ಆದರೆ ಗೂಗಲ್ ದಂಡ ವಿಧಿಸಿರುವ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ಕ್ರಮದಿಂದ ಭಾರತದ ಗ್ರಾಹಕರು ಹಾಗೂ ಉದ್ದಿಮೆಗಳಿಗೆ ದೊಡ್ಡ ಹಿನ್ನಡೆಯಾಗಲಿದೆ ಎಂದು ಕಂಪನಿ ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ಮೌಢ್ಯಕ್ಕೆ ಸೆಡ್ಡು – ಗ್ರಹಣ ವೇಳೆ ಬಾಳೆಹಣ್ಣು, ಚುರುಮುರಿ ಸೇವಿಸಿದ ಜನ

    Live Tv
    [brid partner=56869869 player=32851 video=960834 autoplay=true]

  • ಭಾರತದ ಸ್ಪರ್ಧಾತ್ಮಕ ಆಯೋಗದಿಂದ ಗೂಗಲ್‌ಗೆ 1,337 ಕೋಟಿ ದಂಡ

    ಭಾರತದ ಸ್ಪರ್ಧಾತ್ಮಕ ಆಯೋಗದಿಂದ ಗೂಗಲ್‌ಗೆ 1,337 ಕೋಟಿ ದಂಡ

    ನವದೆಹಲಿ: ತನ್ನ ಪ್ರಬಲ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿರುವುದಕ್ಕೆ ಆಲ್ಫಾಬೆಟ್ ಇಂಕ್‌ನ ಗೂಗಲ್‌ಗೆ (Google) ಭಾರತದ ಸ್ಪರ್ಧಾತ್ಮಕ ಆಯೋಗ (CCI) ಬರೋಬ್ಬರಿ 1,337 ಕೋಟಿ ರೂ. ದಂಡವನ್ನು (Fine) ವಿಧಿಸಿದೆ.

    ಆಂಡ್ರಾಯ್ಡ್ ಮೊಬೈಲ್ ಸಾಧನಗಳಿಗೆ ಸಂಬಂಧಿಸಿದಂತೆ ಗೂಗಲ್ ಸ್ಪರ್ಧಾತ್ಮಕ ವಿರೋಧಿ ಅಭ್ಯಾಸಗಳನ್ನು ನಡೆಸಿರುವುದಕ್ಕಾಗಿ ಸಿಸಿಐ ದಂಡ ವಿಧಿಸಿರುವುದಾಗಿ ಟ್ವೀಟ್‌ನಲ್ಲಿ ತಿಳಿಸಿದೆ.

    2019ರ ಏಪ್ರಿಲ್‌ನಲ್ಲಿ ದೇಶದಲ್ಲಿ ಆಂಡ್ರಾಯ್ಡ್ ಆಧಾರಿತ ಸ್ಮಾರ್ಟ್ಫೋನ್ ಗ್ರಾಹಕರು ಗೂಗಲ್ ವಿರುದ್ಧ ದೂರು ನೀಡಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ನಿಯಂತ್ರಕರು ಆದೇಶಿಸಿದ್ದರು. ಮೊಬೈಲ್ ಆಪ್ ವಿತರಣೆ ಒಪ್ಪಂದ (ಎಂಎಡಿಎ) ಹಾಗೂ ವಿಘಟನೆ ವಿರೋಧಿ ಒಪ್ಪಂದಕ್ಕೆ (ಎಎಫ್‌ಎ) ಸಂಬಂಧಿಸಿದಂತೆ ಗೂಗಲ್ ವಿರುದ್ಧ ಅಕ್ರಮ ವ್ಯವಹಾರಗಳ ಆರೋಪ ಕೇಳಿಬಂದಿದೆ. ಇದನ್ನೂ ಓದಿ: ಪೊಲೀಸ್ ಅಧಿಕಾರಿಗಳು ಶಿಸ್ತು ಮೀರಿದರೆ ದಂಡ, ಕೆಲಸದಿಂದ ವಜಾ – ಸರ್ಕಾರದಿಂದ ನಿಯಮ ಜಾರಿ

    ಇದೀಗ ಸಿಸಿಐ ಗೂಗಲ್‌ಗೆ ತನ್ನ ಪ್ರಬಲ ಸ್ಥಾನವನ್ನು ದುರುಪಯೋಗಪಡಿಸಿರುವುದಕ್ಕೆ 1,337 ಕೋಟಿ ರೂ. ದಂಡ ವಿಧಿಸಿದೆ. ಮಾತ್ರವಲ್ಲದೇ ಅನ್ಯಾಯದ ವ್ಯವಹಾರಗಳನ್ನು ನಿಲ್ಲಿಸಿ, ನಿರ್ದಿಷ್ಟ ಸಮಯದೊಳಗೆ ಎಲ್ಲಾ ಸರಿಪಡಿಸಿಕೊಳ್ಳುವಂತೆ ಹೇಳಿದೆ. ಇದನ್ನೂ ಓದಿ: ಅಧಿಕಾರಕ್ಕೆ ಬಂದ ಕೆಲವೇ ವಾರಗಳಲ್ಲಿ ಬ್ರಿಟನ್‌ ಪ್ರಧಾನಿ ಸ್ಥಾನಕ್ಕೆ ಲಿಜ್‌ ಟ್ರಸ್‌ ರಾಜೀನಾಮೆ

    Live Tv
    [brid partner=56869869 player=32851 video=960834 autoplay=true]

  • ಆಪಲ್ ಆಯ್ತು ಈಗ ಭಾರತದಲ್ಲೇ ಪಿಕ್ಸೆಲ್ ಫೋನ್ ತಯಾರಿಸಲು ಮುಂದಾದ ಗೂಗಲ್

    ಆಪಲ್ ಆಯ್ತು ಈಗ ಭಾರತದಲ್ಲೇ ಪಿಕ್ಸೆಲ್ ಫೋನ್ ತಯಾರಿಸಲು ಮುಂದಾದ ಗೂಗಲ್

    ವಾಷಿಂಗ್ಟನ್: ಆಪಲ್ ಬಳಿಕ ಇದೀಗ ಗೂಗಲ್(Google) ಕೂಡಾ ತನ್ನ ಕೆಲವು ಪಿಕ್ಸೆಲ್ ಫೋನ್‌ಗಳನ್ನು(Pixel Phone) ಭಾರತದಲ್ಲಿ ತಯಾರಿಸಲು ಯೋಜಿಸುತ್ತಿದೆ. ಗೂಗಲ್ ಭಾರತದಲ್ಲಿಯೇ(India) ಸುಮಾರು 5 ಲಕ್ಷದಿಂದ 10 ಲಕ್ಷದವರೆಗೆ ಪಿಕ್ಸೆಲ್ ಫೋನ್‌ಗಳನ್ನು ತಯಾರಿಸುವ ಬಗ್ಗೆ ಯೋಜನೆ ರೂಪಿಸಿರುವುದಾಗಿ ವರದಿಯಾಗಿದೆ.

    ಜಾಗತಿಕ ಬೇಡಿಕೆ, ಪೂರೈಕೆಯ ಸಮಸ್ಯೆ ಸೇರಿದಂತೆ ವಿವಿಧ ಕಾರಣಗಳನ್ನು ಉಲ್ಲೇಖಿಸಿ ಗೂಗಲ್ ಕಳೆದ 3 ವರ್ಷಗಳಿಂದ ಭಾರತದಲ್ಲಿ ತನ್ನ ಪ್ರಮುಖ ಫೋನ್‌ಗಳನ್ನು ಬಿಡುಗಡೆ ಮಾಡಿರಲಿಲ್ಲ. ಇದೀಗ ಗೂಗಲ್ ತನ್ನ ಫೋನ್‌ಗಳನ್ನು ಭಾರತದಲ್ಲಿಯೇ ತಯಾರಿಸಲು ಯೋಜಿಸಿದ್ದು, ಇದು ಕಾರ್ಯಗತವಾಯಿತು ಎಂದಾದರೆ ಭಾರತ ವಿಧಿಸುವ ಶೇ.20 ರಷ್ಟು ಆಮದು ಸುಂಕವನ್ನು ಉಳಿತಾಯ ಮಾಡಬಹುದಾಗಿದೆ.

    ಗೂಗಲ್ ಈ ಹಿಂದೆ ಪಿಕ್ಸೆಲ್ ಫೋನ್‌ಗಳನ್ನು ಚೀನಾದಲ್ಲಿ(China) ತಯಾರಿಸಲು ಪ್ರಾರಂಭಿಸಿತ್ತು. 2019ರಲ್ಲಿ ಅಮೆರಿಕ(America) ಹಾಗೂ ಚೀನಾ ನಡುವೆ ವ್ಯಾಪಾರದ ಉದ್ವಿಗ್ನತೆ ಉಂಟಾಗಿ, ತನ್ನ ತಯಾರಿಕಾ ಸ್ಥಳವನ್ನು ವಿಯೆಟ್ನಾಂಗೆ ಬದಲಾಯಿಸಲು ನಿರ್ಧರಿಸಿತ್ತು. ಆದರೂ ಕೋವಿಡ್ ಪ್ರಭಾವದಿಂದಾಗಿ ಪಿಕ್ಸೆಲ್‌ನ 6ನೇ ಸರಣಿಯನ್ನು ಚೀನಾದಲ್ಲಿಯೇ ತಯಾರಿಸಬೇಕಾಯಿತು. ಇದನ್ನೂ ಓದಿ: ಕರ್ನಾಟಕವನ್ನು ಹಿಂದಿಕ್ಕಿ 1.54 ಲಕ್ಷ ಕೋಟಿ ಹೂಡಿಕೆಯ ಸೆಮಿಕಂಡಕ್ಟರ್‌ ಘಟಕ ತನ್ನದಾಗಿಸಿಕೊಂಡ ಗುಜರಾತ್‌

    ಇದೀಗ ಕಂಪನಿ ತನ್ನ ಕೆಲವು ಸಾಧನಗಳನ್ನು ಸಂಗ್ರಹಿಸಲು ಕಷ್ಟಪಡುತ್ತಿರುವ ಕಾರಣ ಫೋನ್ ಉತ್ಪಾದನೆಯನ್ನು ಚೀನಾದಿಂದ ಸ್ಥಳಾಂತರಿಸಲು ಮತ್ತೊಮ್ಮೆ ಯೋಜಿಸುತ್ತಿದೆ. ಈ ಬಾರಿ ಪಿಕ್ಸೆಲ್‌ನ ಉತ್ಪಾದನಾ ಕೇಂದ್ರವನ್ನು ಭಾರತದಲ್ಲಿ ಸ್ಥಾಪಿಸುವ ಬಗ್ಗೆ ಮಾತುಕತೆ ನಡೆದಿರುವುದಾಗಿ ವರದಿಯಾಗಿದೆ.

    ಆಪಲ್ ಕಂಪನಿಯ ಐಫೋನ್‌ಗಳನ್ನು ಫಾಕ್ಸ್‌ಕಾನ್ ಮತ್ತು ವಿಸ್ಟ್ರಾನ್ ಕಂಪನಿ ತಯಾರಿಸುತ್ತಿದೆ. ಈಗಾಗಲೇ ಫಾಕ್ಸ್‌ಕಾನ್ ಚೆನ್ನೈನಲ್ಲಿ ಘಟಕ ತೆರೆದಿದ್ದರೆ ವಿಸ್ಟ್ರಾನ್ ಕಂಪನಿ ಬೆಂಗಳೂರಿನ ಬಿಡದಿ ಮತ್ತು ಕೋಲಾರದ ನರಸಪುರದಲ್ಲಿ ಘಟಕ ತೆರೆದಿದೆ. ಇದನ್ನೂ ಓದಿ: ಟಾಟಾ ಕಂಪನಿಯಿಂದ ಮೇಡ್‌ ಇನ್‌ ಇಂಡಿಯಾ ಐಫೋನ್‌ ಉತ್ಪಾದನೆ?

    Live Tv
    [brid partner=56869869 player=32851 video=960834 autoplay=true]

  • ‘ಇಂಡಿಯಾ ಕಿ ಉಡಾನ್’ ಮೂಲಕ ಸ್ವಾತಂತ್ರ್ಯ ನಂತರದ ದಿನ ನೆನಪಿಸಲಿರುವ ಗೂಗಲ್

    ‘ಇಂಡಿಯಾ ಕಿ ಉಡಾನ್’ ಮೂಲಕ ಸ್ವಾತಂತ್ರ್ಯ ನಂತರದ ದಿನ ನೆನಪಿಸಲಿರುವ ಗೂಗಲ್

    ನವದೆಹಲಿ: ಸ್ವಾತಂತ್ರ್ಯದ ನಂತರ 75 ವರ್ಷಗಳ ಪಯಣದಲ್ಲಿ ಭಾರತ ಸಾಧಿಸಿದ ಮೈಲಿಗಲ್ಲುಗಳನ್ನು ಸೆರೆಹಿಡಿಯುವ ಸಾಫ್ಟ್‌ವೇರ್ ಅನ್ನು ಗೂಗಲ್ ಅನಾವರಣಗೊಳಿಸಿದೆ.

    ಈ ದೈತ್ಯ ಯೋಜನೆಗೆ ‘ಇಂಡಿಯಾ ಕಿ ಉಡಾನ್‘ ಎಂದು ಹೆಸರಿಸಲಾದ. ದೇಶದ ಕಥೆಯನ್ನು ಹೇಳಲು ಕಲಾತ್ಮಕ ಚಿತ್ರಣಗಳನ್ನು ಒಳಗೊಂಡಿದೆ. ಗೂಗಲ್ ಆರ್ಟ್ಸ್ ಮತ್ತು ಕಲ್ಚರ್ ಮೂಲಕ ಕಾರ್ಯಗತಗೊಳಿಸಿದ ಯೋಜನೆಯು ದೇಶದ ಸಾಧನೆಗಳನ್ನು ಆಚರಿಸುತ್ತದೆ. ಕಳೆದ 75 ವರ್ಷಗಳಲ್ಲಿ ಭಾರತ ಸಾಧಿಸಿದ ಮೈಲಿಗಲ್ಲುಗಳನ್ನು ಈ ಸಾಫ್ಟ್‌ವೇರ್ ಆಧರಿಸಿದೆ. ಇದನ್ನೂ ಓದಿ: ಪೈಪ್‍ಲೈನ್ ಅಡುಗೆ ಅನಿಲದ ಬೆಲೆ ಪ್ರತಿ ಯೂನಿಟ್‍ಗೆ 2.63 ರೂ. ಏರಿಕೆ 

    ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಜಿ.ಕಿಶನ್ ರೆಡ್ಡಿ, ಸಂಸ್ಕೃತಿ ಸಚಿವಾಲಯ ಮತ್ತು ಗೂಗಲ್‍ನ ಹಿರಿಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಈ ಯೋಜನೆಯನ್ನು ಅಧಿಕೃತವಾಗಿ ಪ್ರಾರಂಭಿಸಲಾಯಿತು. ರಾಷ್ಟ್ರವ್ಯಾಪಿ ಆಚರಣೆಗಳ ಭಾಗವಾಗಿ ಗೂಗಲ್, ಸಂಸ್ಕೃತಿ ಸಚಿವಾಲಯದೊಂದಿಗಿನ ತನ್ನ ಸಹಯೋಗವನ್ನು ಘೋಷಿಸಿತು. ಭಾರತೀಯರ ಕೊಡುಗೆಗಳನ್ನು ಮತ್ತು 1947 ರಿಂದ ಭಾರತದ ವಿಕಾಸವನ್ನು ಪ್ರದರ್ಶಿಸುವ ಮಾಹಿತಿಯುಕ್ತ ವಿಷಯವನ್ನು ಆನ್‍ಲೈನ್ ಮೂಲಕ ತಲುಪಲು ಕೇಂದ್ರೀಕರಿಸಿದೆ.

    2022ರ ಜನಪ್ರಿಯ Doodle4Google ಸ್ಪರ್ಧೆಯು ‘ಮುಂದಿನ 25 ವರ್ಷಗಳಲ್ಲಿ, ನನ್ನ ಭಾರತ’ ಎಂಬ ವಿಷಯದ ಕುರಿತು, 1-10 ತರಗತಿಗಳ ವಿದ್ಯಾರ್ಥಿಗಳಿಗೆ ಎಂಟ್ರೇಸ್ ವಿಷಯವಾಗಿ ನೀಡಲಾಗಿದೆ ಎಂದು ಘೋಷಿಸಿತು. ಇದನ್ನೂ ಓದಿ:  ನನ್ನ ಪತ್ನಿ ಜೊತೆ ಮಾತನಾಡಬೇಡ ಅಂದಿದ್ದಕ್ಕೆ ಕ್ರಿಕೆಟ್ ಬ್ಯಾಟ್, ವಿಕೇಟ್‍ನಿಂದ ಹೊಡೆದು ಕೊಲೆಗೈದ್ರು 

    ಈ ವರ್ಷದ Doodle4Google ವಿಜೇತರು ನವೆಂಬರ್ 14 ರಂದು ಭಾರತದಲ್ಲಿನ Google ಮುಖಪುಟದಲ್ಲಿ ತಮ್ಮ ಕಲಾಕೃತಿಯನ್ನು ಪ್ರದರ್ಶನ ಮಾಡಲಾಗುವುದು. 5,00,000 ರೂ. ಕಾಲೇಜು ವಿದ್ಯಾರ್ಥಿವೇತನ, 2,00,000 ರೂ. ತಂತ್ರಜ್ಞಾನ ಪ್ಯಾಕೇಜ್ ಅನ್ನು ತಮ್ಮ ಶಾಲೆ/ಲಾಭರಹಿತ ಸಂಸ್ಥೆಗೆ, ಸಾಧನೆಯ ಗುರುತಿಸುವಿಕೆ, ಗೂಗಲ್ ಹಾರ್ಡ್‍ವೇರ್ ಮತ್ತು ಗೂಗಲ್ ಸಂಗ್ರಹಣೆಗಳನ್ನು ನೀಡಲಾಗುವುದು. ನಾಲ್ಕು ವಿಜೇತರು ಮತ್ತು 15 ಫೈನಲಿಸ್ಟ್‍ಗಳು ಅತ್ಯಾಕರ್ಷಕ ಬಹುಮಾನಗಳನ್ನು ಗೆಲ್ಲುತ್ತಾರೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಹೆಣ್ಮಕ್ಕಳ ಮನಸ್ಸು ಅರ್ಥ ಆಗಲ್ಲ ಅನ್ನೋರು ಗೂಗಲ್ ಮಿ ಅಂದ್ರು `ಕನ್ನಡತಿ’ ನಟಿ

    ಹೆಣ್ಮಕ್ಕಳ ಮನಸ್ಸು ಅರ್ಥ ಆಗಲ್ಲ ಅನ್ನೋರು ಗೂಗಲ್ ಮಿ ಅಂದ್ರು `ಕನ್ನಡತಿ’ ನಟಿ

    ಕಿರುತೆರೆ ಮತ್ತು ಹಿರಿತೆರೆ ಎರಡರಲ್ಲೂ ಸಕ್ರಿಯರಾಗಿರುವ ರಂಜನಿ ರಾಘವನ್ ಇದೀಗ ವಿಭಿನ್ನ ಫೋಟೋಶೂಟ್ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಈ ಭಿನ್ನ ಫೋಟೋಶೂಟ್ ಸಾಮಾಜಿಕ ಜಾಲತಾಣದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿದೆ.

    ಪುಟ್ಟಗೌರಿ ಮದುವೆ, ಕನ್ನಡತಿ ಸೀರಿಯಲ್ ಮೂಲಕ ಮನೆಮಾತಾಗಿರುವ ನಟಿ ರಂಜನಿ ರಾಘವನ್, ದೊಡ್ಡಪರದೆಯಲ್ಲಿ ಕೂಡ ಕಮಾಲ್ ಮಾಡ್ತಿದ್ದಾರೆ. ಇದೀಗ ಗೂಗಲ್ ಎಂದು ಬರೆದುಕೊಂಡಿರುವ ಸೀರೆ ಉಟ್ಟು ಮಿರ ಮಿರ ಅಂತಾ ಮಿಂಚ್ತಿದ್ದಾರೆ. ಭುವಿಯ ನಯಾ ಲುಕ್‌ಗೆ ನೆಟ್ಟಿಗರ ಗಮನ ಸೆಳೆದಿದೆ. ಇದನ್ನೂ ಓದಿ:ಮಾಲಿವುಡ್ ನಟ ಶರತ್ ಚಂದ್ರನ್ ನಿಧನ

    ನಟಿ ಮಾತ್ರವಲ್ಲ ಬರಹಗಾರ್ತಿಯಾಗಿ ಗುರುತಿಸಿಕೊಂಡಿರುವ ಮೈಸೂರು ಸಾಹಿತ್ಯ ಸಂಭ್ರಮದಲ್ಲಿ ಇತ್ತೀಚೆಗೆ ರಂಜನಿ ಭಾಗಿಯಾಗಿದ್ದರು. ಈ ಸಮಾರಂಭದಲ್ಲಿ ಗೂಗಲ್ ಸೀರೆ ಉಟ್ಟು ವಿಭಿನ್ನ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಈ ಕುರಿತ ಫೋಟೋ ಶೇರ್ ಮಾಡಿ, ಚೆಂದದ ಅಡಿಬರಹ ನೀಡಿದ್ದಾರೆ. `ಹೆಣ್ಮಕ್ಕಳ ಮನಸ್ಸು ಅರ್ಥ ಆಗಲ್ಲ ಅನ್ನೋರು ಗೂಗಲ್ ಮಿ’ ಎಂದು ಪೋಸ್ಟ್ ಮಾಡಿದ್ದಾರೆ. ಒಟ್ನಲ್ಲಿ ನಟಿಯ ಸೀರೆ ಅಭಿಮಾನಿಗಳ ಪ್ರಶಂಸೆಗೆ ಪಾತ್ರವಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಬೆಂಗಳೂರು ಸೇರಿದಂತೆ ಭಾರತದ 10 ನಗರಗಳಲ್ಲಿ ಸಿಗಲಿದೆ ಗೂಗಲ್ ಸ್ಟ್ರೀಟ್ ವ್ಯೂ ಸೇವೆ

    ಬೆಂಗಳೂರು ಸೇರಿದಂತೆ ಭಾರತದ 10 ನಗರಗಳಲ್ಲಿ ಸಿಗಲಿದೆ ಗೂಗಲ್ ಸ್ಟ್ರೀಟ್ ವ್ಯೂ ಸೇವೆ

    ನವದೆಹಲಿ: ನಗರಗಳ ರಸ್ತೆಗಳ ಚಿತ್ರಗಳನ್ನು ನೋಡಲು ಹಾಗೂ ನ್ಯಾವಿಗೇಟ್ ಮಾಡುವ ಸಾಮರ್ಥ್ಯವಿರುವ ಫೀಚರ್ ಅನ್ನು ಗೂಗಲ್ ಬುಧವಾರದಿಂದ ಭಾರತದಲ್ಲೂ ಪ್ರಾರಂಭಿಸಿದೆ. ಬೆಂಗಳೂರು ಸೇರಿದಂತೆ ಭಾರತದ ಪ್ರಮುಖ 10 ನಗರಗಳಲ್ಲಿ ಗೂಗಲ್ ಈ ಫೀಚರ್ ಸಿಗಲಿದೆ.

    ಗೂಗಲ್ ಮ್ಯಾಪ್‌ನ ಅತ್ಯಂತ ಉಪಯುಕ್ತವಾಗಿರುವ ಈ ಫೀಚರ್ 2016ರಲ್ಲೇ ಭಾರತದಲ್ಲೂ ಪ್ರಾರಂಭವಾಗಬೇಕಿತ್ತು. ಆದರೆ ಭಾರತ ಸರ್ಕಾರ ಈ ಫೀಚರ್ ಭದ್ರತಾ ಹಿತಾಸಕ್ತಿಗೆ ಧಕ್ಕೆ ತರುತ್ತದೆ ಎಂಬ ಕಾರಣಕ್ಕೆ ಅದನ್ನು ಪ್ರಾರಂಭಿಸಲು ಬಿಟ್ಟಿರಲಿಲ್ಲ. ಆದರೆ ಇದೀಗ ಈ ಫೀಚರ್ ಕೊನೆಗೂ ಭಾರತಕ್ಕೂ ಲಗ್ಗೆಯಿಟ್ಟಿದೆ.

    ಬೆಂಗಳೂರು, ಚೆನ್ನೈ, ದೆಹಲಿ, ಮುಂಬೈ, ಹೈದರಾಬಾದ್, ಪುಣೆ, ನಾಸಿಕ್, ವಡೋದರಾ, ಅಹಮದ್‌ನಗರ ಮತ್ತು ಅಮೃತಸರ ನಗರಗಳಲ್ಲಿ ಈ ಫೀಚರ್  ಆರಂಭಿಕ ಹಂತದಲ್ಲಿ ಸಿಗಲಿದ್ದು, ಶೀಘ್ರವೇ ಭಾರತದಾದ್ಯಂತ ಈ ಸೇವೆ ಲಭ್ಯವಾಗಲಿದೆ. ಇದನ್ನೂ ಓದಿ: 4Gಗಿಂತ 5G ಎಷ್ಟು ಭಿನ್ನ, ಪರಿಣಾಮಕಾರಿ? ಇಲ್ಲಿದೆ ಮಾಹಿತಿ..

    ಇದರ ಕೆಲಸವೇನು?
    ಗೂಗಲ್ ಸ್ಟ್ರೀಟ್ ವ್ಯೂ ಫೀಚರ್ ನಾವು ನೋಡಲು ಬಯಸುವ ಸ್ಥಳದ ರಸ್ತೆಯ ಮಟ್ಟದಿಂದ ಫೋಟೋಗಳನ್ನು ಒದಗಿಸುತ್ತದೆ. ಪ್ರವಾಸಿಗರು ಮುಖ್ಯವಾಗಿ ಮೊದಲ ಬಾರಿ ಯಾವುದಾದರೂ ಒಂದು ಸ್ಥಳಕ್ಕೆ ಭೇಟಿ ನೀಡುವ ಸಂದರ್ಭ ಈ ಫೀಚರ್ ಬಹು ಉಪಯುಕ್ತವಾಗಲಿದೆ. ನಾವು ನೋಡಬಯಸುವ ಸ್ಥಳ ಮುಂಚಿತವಾಗಿಯೇ ಹೇಗೆ ಕಾಣಿಸುತ್ತದೆ ಎಂಬುದನ್ನು ನಾವು ರಸ್ತೆಯ ಮಟ್ಟದಿಂದಲೇ ನೋಡಬಹುದು. ಮಾತ್ರವಲ್ಲದೇ ಅದು ತೋರಿಸುವ ಒಂದೇ ಫೋಟೋ 360 ಡಿಗ್ರಿ ಆಂಗಲ್‌ನಿಂದಲೂ(ಪನರೊಮಾ) ವೀಕ್ಷಿಸಬಹುದು.

    ಗೂಗಲ್ ಈ ಬಗ್ಗೆ ಬುಧವಾರ ನವದೆಹಲಿಯ ಪತ್ರಿಕಾಗೋಷ್ಠಿಯಲ್ಲಿ ಜೆನೆಸಿಸ್ ಹಾಗೂ ಟೆಕ್ ಮಹೀಂದ್ರಾ ಸಹಯೋಗದೊಂದಿಗೆ ಸ್ಟ್ರೀಟ್ ವ್ಯೂ ಅನ್ನು ಭಾರತಕ್ಕೂ ತರುವುದಾಗಿ ಘೋಷಿಸಿತು. ಆರಂಭದಲ್ಲಿ 1,50,000 ಕಿ.ಮೀ ರಸ್ತೆಗಳನ್ನು ಒಳಗೊಂಡ 10 ನಗರಗಳಲ್ಲಿ ಈ ಫೀಚರ್‌ಗೆ ಚಾಲನೆ ನೀಡುವುದಾಗಿ ತಿಳಿಸಿತು. ಈ ವರ್ಷದ ಅಂತ್ಯದ ವೇಳೆಗೆ ದೇಶದ 50 ನಗರಗಳಲ್ಲಿ ಈ ಫೀಚರ್ ಅನ್ನು ವಿಸ್ತರಿಸುವ ಗುರಿಯನ್ನು ಗೂಗಲ್ ಹೊಂದಿದೆ. ಇದನ್ನೂ ಓದಿ: 5ಜಿ ಹರಾಜು – ಮೊದಲ ದಿನವೇ 1.45 ಲಕ್ಷ ಕೋಟಿ ಮೀರಿದ ಬಿಡ್ ಮೊತ್ತ

    ವೀಕ್ಷಣೆ ಮಾಡುವುದು ಹೇಗೆ?
    ಗೂಗಲ್ ಸ್ಟ್ರೀಟ್ ವ್ಯೂನಲ್ಲಿ ವೀಕ್ಷಣೆ ಮಾಡಲು ಮೊದಲು ಗೂಗಲ್ ಮ್ಯಾಪ್ ಅನ್ನು ತೆರೆಯಬೇಕು. ನೀವು ವೀಕ್ಷಿಸಲು ಬಯಸುವ ಪ್ರದೇಶದ ಹೆಸರನ್ನು ನಮೂದಿಸಿ, ಹುಡುಕಿ. ನೀವು ವೀಕ್ಷಿಸಲು ಬಯಸುವ ಪ್ರದೇಶವನ್ನು ಟ್ಯಾಪ್ ಮಾಡಿ ಹಾಗೂ ಸ್ಥಳೀಯ ಕಟ್ಟಡ, ಹೋಟೆಲ್, ರಸ್ತೆ ಇನ್ನಿತರ ಫೋಟೋಗಳನ್ನು ಸುಲಭವಾಗಿ ನೋಡಬಹುದು.

    ಫೋಟೋಗಳನ್ನು 360 ಡಿಗ್ರಿ ಆಂಗಲ್‌ನಲ್ಲೂ ವೀಕ್ಷಿಸಲು ಸಾಧ್ಯವಿದ್ದು, ಸ್ಟ್ರೀನ್‌ನಲ್ಲಿ ತೋರುವ ಎಡ, ಬಲ, ಮೇಲೆ ಕೆಳಗೆ, ಬಟನ್‌ಗಳನ್ನು ಟ್ಯಾಪ್ ಮಾಡುವ ಮೂಲಕ ಸಂಪೂರ್ಣ ಚಿತ್ರವನ್ನು ವೀಕ್ಷಿಸಬಹುದು.

    Live Tv
    [brid partner=56869869 player=32851 video=960834 autoplay=true]

  • ಸುದ್ದಿಗಳಿಗೆ ಗೂಗಲ್, ಫೇಸ್‌ಬುಕ್ ಪಾವತಿಸಬೇಕು – ಹೊಸ ಕಾನೂನಿಗೆ ಸರ್ಕಾರ ಯೋಜನೆ

    ಸುದ್ದಿಗಳಿಗೆ ಗೂಗಲ್, ಫೇಸ್‌ಬುಕ್ ಪಾವತಿಸಬೇಕು – ಹೊಸ ಕಾನೂನಿಗೆ ಸರ್ಕಾರ ಯೋಜನೆ

    ನವದೆಹಲಿ: ಭಾರತ ಸರ್ಕಾರ ಗೂಗಲ್, ಫೇಸ್‌ಬುಕ್‌ಗಳಲ್ಲಿ ಪ್ರಕಟವಾಗುವ ಡಿಜಿಟಲ್ ಸುದ್ದಿಗಳಿಗೆ ಹೊಸದಾದ ಕಾನೂನನ್ನು ರಚಿಸಲು ಮುಂದಾಗಿದೆ. ಆಸ್ಟ್ರೇಲಿಯಾ, ಕೆನಡಾ, ಫ್ರಾನ್ಸ್ ಬಳಿಕ ಇದೀಗ ಭಾರತವೂ ಗೂಗಲ್ ಹಾಗೂ ಫೇಸ್‌ಬುಕ್‌ನಂತಹ ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರಕಟವಾಗುವ ಸುದ್ದಿಗಳಿಗೆ ಪಾವತಿಸುವ ಕಾನೂನನ್ನು ತರಲು ಯೋಜಿಸಿದೆ.

    ಸರ್ಕಾರದ ಯೋಜನೆಯ ಪ್ರಕಾರ ಜಾಗತಿಕ ದೈತ್ಯ ಟೆಕ್ ಪ್ಲಾಟ್‌ಫಾರ್ಮ್‌ಗಳಾದ ಆಲ್ಫಾಬೆಟ್ (ಗೂಗಲ್, ಯೂಟ್ಯೂಬ್), ಮೆಟಾ (ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಹಾಗೂ ವಾಟ್ಸಪ್), ಟ್ವಿಟ್ಟರ್ ಹಾಗೂ ಅಮೆಜಾನ್ ಮಾಲೀಕರು ಭಾರತೀಯ ಪತ್ರಿಕೆಗಳು ಹಾಗೂ ಡಿಜಿಟಲ್ ಸುದ್ದಿ ಪ್ರಕಾಶಕರಿಗೆ ತಮ್ಮ ಆದಾಯದ ಪಾಲನ್ನು ಪಾವತಿಸಬೇಕಾಗುತ್ತದೆ. ಏಕೆಂದರೆ ಸಾಮಾನ್ಯವಾಗಿ ಸುದ್ದಿ ವಾಹಿನಿಗಳು ತಯಾರಿಸಿದ ವಿಷಯಗಳನ್ನು ಬಳಸಿಕೊಂಡು ಈ ಪ್ಲಾಟ್‌ಫಾರ್ಮ್‌ಗಳು ಹಣ ಗಳಿಸುತ್ತವೆ. ಇದನ್ನೂ ಓದಿ: ಈ ದೇಶಗಳಿಗೂ ಬರಲಿದೆ ಶ್ರೀಲಂಕಾ ಪರಿಸ್ಥಿತಿ – ಆರ್ಥಿಕ ಸಂಕಷ್ಟದ ಹೊಸ್ತಿಲಲ್ಲಿ 12 ರಾಷ್ಟ್ರಗಳು

    ಈ ಪ್ಲಾಟ್‌ಫಾರ್ಮ್‌ಗಳು ಸುದ್ದಿ ಸಂಸ್ಥೆಗಳಿಂದ ವಿಷಯಗಳನ್ನು ಹಾಕಿ ಆದಾಯ ಗಳಿಸಿದರೆ, ಅದರ ಪಾಲನ್ನು ನ್ಯಾಯುತವಾಗಿ ಸಂಸ್ಥೆಗಳೊಂದಿಗೆ ಹಂಚಿಕೊಳ್ಳುವುದಿಲ್ಲ ಎಂಬ ಕಾರಣಕ್ಕೆ ಈ ಕಾನೂನಿನ ಅಗತ್ಯತೆ ಇದೀಗ ಉದ್ಭವವಾಗುತ್ತಿದೆ. ಡಿಜಿಟಲ್ ಮಧ್ಯವರ್ತಿಗಳು ಸುದ್ದಿ ಸಂಸ್ಥೆಗಳೊಂದಿಗೆ ತಮ್ಮ ಆದಾಯದ ಮಾಹಿತಿಗಳನ್ನು ಗೌಪ್ಯವಾಗಿಡುತ್ತವೆ ಎಂಬ ಕಾರಣಕ್ಕೆ ಇದೀಗ ಆತಂಕಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಮೈಕ್ರೋಸಾಫ್ಟ್‌ನೊಂದಿಗೆ ನೆಟ್‌ಫ್ಲಿಕ್ಸ್ ಪಾರ್ಟ್ನರ್‌ಶಿಪ್ – ಅಗ್ಗದ ಯೋಜನೆಗೆ ತಯಾರಿ

    ಇದೀಗ ದೊಡ್ಡ ಟೆಕ್ ಕಂಪನಿಗಳು ತಮ್ಮ ಪ್ರಾಬಲ್ಯವನ್ನು ದುರುಪಯೋಗಪಡಿಸಿಕೊಳ್ಳುತ್ತಿವೆ ಎಂದು ವಿಶ್ವದಾದ್ಯಂತ ಸುದ್ದಿ ಸಂಸ್ಥೆಗಳು ಹೋರಾಟ ಪ್ರಾರಂಭಿಸಿವೆ. ಈಗಾಗಲೇ ಕೆಲವು ದೇಶಗಳು ಟೆಕ್ ಕಂಪನಿಗಳ ಮೇಲೆ ಕಾನೂನು ಅಸ್ತ್ರ ಹಾಗೂ ದಂಡಗಳನ್ನು ವಿಧಿಸುವ ಮೂಲಕ ಪ್ರಾಬಲ್ಯವನ್ನು ದುರುಪಯೋಗಪಡಿಸಿಕೊಳ್ಳುವುದನ್ನು ನಿಗ್ರಹಿಸಲು ಮುಂದಾಗುತ್ತಿವೆ.

    Live Tv
    [brid partner=56869869 player=32851 video=960834 autoplay=true]

  • ಗರ್ಭಪಾತ ಚಿಕಿತ್ಸಾಲಯಗಳಿಗೆ ಭೇಟಿ ನೀಡಿದ್ರೆ ಲೊಕೇಶನ್ ಹಿಸ್ಟರಿ ಅಳಿಸುತ್ತೇವೆ: ಗೂಗಲ್

    ಗರ್ಭಪಾತ ಚಿಕಿತ್ಸಾಲಯಗಳಿಗೆ ಭೇಟಿ ನೀಡಿದ್ರೆ ಲೊಕೇಶನ್ ಹಿಸ್ಟರಿ ಅಳಿಸುತ್ತೇವೆ: ಗೂಗಲ್

    ವಾಷಿಂಗ್ಟನ್: ಅಮೆರಿಕದ ಸುಪ್ರೀಂ ಕೋರ್ಟ್ ಗರ್ಭಪಾತದ ಸಾಂವಿಧಾನಿಕ ಹಕ್ಕನ್ನು ರದ್ದುಗೊಳಿಸಿದ ಬಳಿಕ ಅಮೆರಿಕದಾದ್ಯಂತ ಪ್ರತಿಭಟನೆಗಳು ಭುಗಿಲೆದ್ದಿವೆ. ಹಲವು ಟೆಕ್ನಾಲಜಿ ಕಂಪನಿಗಳು ತಮ್ಮ ಮಹಿಳಾ ಉದ್ಯೋಗಿಗಳಿಗೆ ಗರ್ಭಪಾತ ಮಾಡಿಸಿಕೊಳ್ಳಲು ವಿದೇಶ ಪ್ರಯಾಣಕ್ಕೆ ಸಹಕರಿಸುವುದಾಗಿ ತಿಳಿಸಿವೆ. ಇದೀಗ ಗೂಗಲ್ ಕೂಡಾ ಒಂದು ಮಹತ್ವದ ಸೇವೆ ನೀಡಲು ಮುಂದಾಗಿದೆ.

    ಗೂಗಲ್ ತನ್ನ ಬಳಕೆದಾರರಿಗೆ ಗರ್ಭಪಾತ ಕ್ಲಿನಿಕ್‌ಗಳಿಗೆ ಭೇಟಿ ನೀಡಿದ ಬಳಿಕ ಅವರ ಲೊಕೇಶನ್ ಹಿಸ್ಟರಿಗಳನ್ನು ಅಳಿಸುವುದಾಗಿ ತಿಳಿಸಿದೆ. ಈ ಮೂಲಕ ಮಹಿಳೆಯರಿಗೆ ತಮ್ಮ ಗೌಪ್ಯತೆಯನ್ನು ಕಾಪಾಡಲು ಸಹಕರಿಸಲು ಮುಂದಾಗಿದೆ. ಇದನ್ನೂ ಓದಿ: ಅಮೆರಿಕದಲ್ಲಿ ಗರ್ಭಪಾತ ಹಕ್ಕು ನಿಷೇಧ: ಆಸ್ಟ್ರೇಲಿಯಾದಲ್ಲಿ ಹೋರಾಟದ ಕಿಚ್ಚು

    ಫರ್ಟಿಲಿಟಿ ಸೆಂಟರ್, ವ್ಯಸನ ಚಿಕಿತ್ಸಾಲಯ, ಗರ್ಭಪಾತದ ಆಸ್ಪತ್ರೆಗಳಿಗೆ ಯಾರಾದರೂ ಭೇಟಿ ನೀಡಿದರೆ, ಅದನ್ನು ನಮ್ಮ ಸಿಸ್ಟಂ ಗುರುತಿಸಿದ್ದಲ್ಲಿ ನಾವು ಆ ಲೊಕೇಶನ್ ಹಿಸ್ಟರಿ ಡೇಟಾಗಳನ್ನು ಅಳಿಸಿಹಾಕುತ್ತೇವೆ. ಈ ಹೊಸ ವ್ಯವಸ್ಥೆ ಮುಂದಿನ ವಾರಗಳಲ್ಲಿ ಜಾರಿಗೆ ಬರಲಿದೆ ಎಂದು ಗೂಗಲ್‌ನ ಹಿರಿಯ ಉಪಾಧ್ಯಕ್ಷ ಫಿಟ್ಜ್ಪ್ಯಾಟ್ರಿಕ್ ತಿಳಿಸಿದ್ದಾರೆ. ಇದನ್ನೂ ಓದಿ: 48 ವರ್ಷಗಳ ಹಿಂದೆ ಹೀಗಿತ್ತು ನನ್ನ ರೆಸ್ಯೂಮ್ – ಉದ್ಯೋಗಾಕಾಂಕ್ಷಿಗಳಿಗೆ ಆತ್ಮವಿಶ್ವಾಸ ತುಂಬಿದ ಬಿಲ್‌ಗೇಟ್ಸ್

    ಕಳೆದ 50 ವರ್ಷಗಳಿಂದ ಅಮೆರಿಕದಲ್ಲಿ ಜಾರಿಯಲ್ಲಿದ್ದ ಮಹಿಳೆಯರ ಗರ್ಭಪಾತದ ಸಾಂವಿಧಾನಿಕ ಹಕ್ಕನ್ನು ಅಲ್ಲಿನ ಸುಪ್ರೀಂ ಕೋರ್ಟ್ ಜೂನ್ 24 ರಂದು ರದ್ದುಗೊಳಿಸಿದೆ. ಇದನ್ನು ವಿರೋಧಿಸಿ ಅಮೆರಿಕದ ಹಲವು ರಾಜ್ಯಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿದ್ದು, ಅಮೆರಿಕ ಅಧ್ಯಕ್ಷ ಜೋ ಬೈಡನ್ ಈ ಹಕ್ಕನ್ನು ರಕ್ಷಿಸಲು ಯತ್ನಿಸುವುದಾಗಿ ತಿಳಿಸಿದ್ದಾರೆ.

    Live Tv

  • ಮಹಿಳಾ ಉದ್ಯೋಗಿಗಳಿಗೆ ತಾರತಮ್ಯ – 921 ಕೋಟಿ ನೀಡಲು ಮುಂದಾದ ಗೂಗಲ್‌

    ಮಹಿಳಾ ಉದ್ಯೋಗಿಗಳಿಗೆ ತಾರತಮ್ಯ – 921 ಕೋಟಿ ನೀಡಲು ಮುಂದಾದ ಗೂಗಲ್‌

    ಸ್ಯಾನ್‌ಫ್ರಾನ್ಸಿಸ್ಕೋ: ಮಹಿಳಾ ಉದ್ಯೋಗಿಗಳಿಗೆ ಸಂಬಳದ ವಿಚಾರದಲ್ಲಿ ತಾರತಮ್ಯ ಮಾಡಿದ್ದಕ್ಕೆ ಗೂಗಲ್‌ 118 ದಶಲಕ್ಷ ಡಾಲರ್‌(ಅಂದಾಜು 921 ಕೋಟಿ ರೂ.) ಪರಿಹಾರ ನೀಡಲು ಒಪ್ಪಿಕೊಂಡಿದೆ.

    ಕ್ಯಾಲಿಫೋರ್ನಿಯಾದಲ್ಲಿ ಕೆಲಸ ಮಾಡುತ್ತಿರುವ 15,500 ಮಹಿಳಾ ಉದ್ಯೋಗಿಗಳು ನಮಗೆ ಸಂಬಳದಲ್ಲಿ ಅನ್ಯಾಯವಾಗಿದೆ. ಪುರುಷರಷ್ಟೇ ಕೆಲಸ ಮಾಡುತ್ತಿದ್ದರೂ ನಮ್ಮ ಸಂಬಳ ಕಡಿಮೆ ಎಂದು ಆರೋಪಿಸಿದ್ದರು.

    ಈ ಸಂಬಂಧ ಮಾಜಿ ಮಹಿಳಾ ಉದ್ಯೋಗಿಗಳು 2017ರಲ್ಲಿ ಗೂಗಲ್‌ ವಿರುದ್ಧ ಕೋರ್ಟ್‌ ಮೆಟ್ಟಿಲೇರಿದ್ದರು. ಇದನ್ನೂ ಓದಿ: ಇನ್ಮುಂದೆ ಅಮೆಜಾನ್‌ನಲ್ಲಿ ಶೂ ಕೊಳ್ಳುವುದಕ್ಕೂ ಮೊದಲು ವರ್ಚುವಲ್ ಆಗಿ ಟ್ರೈಮಾಡಿ

    ಗೂಗಲ್‌ ಎಲ್ಲ ಆರೋಪಗಳನ್ನು ತಿರಸ್ಕರಿಸಿ, ಉದ್ಯೋಗಿಗೆ ಸಂಬಂಧಿಸಿದ ಎಲ್ಲ ಕಾನೂನುಗಳನ್ನು ಸರಿಯಾಗಿ ಪಾಲಿಸಲಾಗುತ್ತಿದೆ ಎಂದು ಹೇಳಿತ್ತು. ಈಗ ಎಲ್ಲ ಮಾಜಿ ಉದ್ಯೋಗಿಗಳಿಗೆ ಪರಿಹಾರ ನೀಡುವುದಾಗಿ ಗೂಗಲ್‌ ಕೋರ್ಟ್‌ ಮುಂದೆ ಹೇಳಿದೆ.

    ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿದ ಗೂಗಲ್‌, 5 ವರ್ಷಗಳ ಕಾಲ ನಡೆದ ಈ ಕಾನೂನು ಹೋರಾಟಕ್ಕೆ ಕೊನೆ ಹಾಡಲು ಮುಂದಾಗಿದ್ದೇವೆ. ಎರಡು ಕಡೆಯುವರು ಸಹಮತದ ನಿರ್ಧಾರಕ್ಕೆ ಬಂದಿದ್ದೇವೆ ಎಂದು ತಿಳಿಸಿದೆ.

  • ಗೂಗಲ್, ಆಪಲ್, ಮೈಕ್ರೋಸಾಫ್ಟ್‌ಗಳಲ್ಲಿ ಶೀಘ್ರವೇ ಬರಲಿದೆ ಪಾಸ್‌ವರ್ಡ್ ಲೆಸ್ ಸೈನ್ ಇನ್ ಸೇವೆ

    ವಾಷಿಂಗ್ಟನ್: ಮೂರು ದೊಡ್ಡ ತಂತ್ರಜ್ಞಾನ ಕಂಪನಿಗಳಾದ ಗೂಗಲ್, ಆಪಲ್ ಹಾಗೂ ಮೈಕ್ರೋಸಾಫ್ಟ್ ಪಾಸ್‌ವರ್ಡ್ ಬಳಕೆಯನ್ನು ಸಂಪೂರ್ಣವಾಗಿ ತೆಗೆದು ಹಾಕಲು ನಿರ್ಧರಿಸಿವೆ.

    ಹೌದು, ಇನ್ನು ಮುಂದೆ ಜನರು ತಮ್ಮ ಮೊಬೈಲ್, ಡೆಸ್ಕ್ ಟಾಪ್ ಹಾಗೂ ಬ್ರೌಸರ್ ಸಾಧನಗಳಲ್ಲಿ ಪಾಸ್‌ವರ್ಡ್ಗಳನ್ನು ನಮೂದಿಸುವ ಅಗತ್ಯವಿರುವುದಿಲ್ಲ. ಈ ಮೂರು ದೈತ್ಯ ತಂತ್ರಜ್ಞಾನ ಕಂಪನಿಗಳು ಒಟ್ಟಾಗಿ ಬಳಕೆದಾರರಿಗೆ ಪಾಸ್‌ವರ್ಡ್ ರಹಿತ ಸೇವೆ ನೀಡಲು ಮುಂದಾಗಿವೆ.

    ಆಪಲ್, ಗೂಗಲ್ ಹಾಗೂ ಮೈಕ್ರೋಸಾಫ್ಟ್ ಮೂಲಕ ಕಾರ್ಯನಿರ್ವಹಿಸುವ ಐಒಎಸ್, ಮ್ಯಾಕ್ ಒಎಸ್, ಆಂಡ್ರಾಯ್ಡ್, ವಿಂಡೋಸ್ ಬ್ರೌಸರ್‌ಗಳಾದ ಕ್ರೋಮ್, ಎಡ್ಜ್, ಸಫಾರಿ ಹಾಗೂ ಪ್ರಮುಖ ತಂತ್ರಜ್ಞಾನ ಸಾಧನಗಳ ಪ್ಲಾಟ್‌ಫಾರ್ಮ್ಗಳಿಗೆ ಪಾಸ್‌ವರ್ಡ್ ರಹಿತ ದೃಢೀಕರಣ ತರುವ ನಿಟ್ಟಿನಲ್ಲಿ ಈ 3 ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ. ಇದನ್ನೂ ಓದಿ: 2024ರಲ್ಲಿ ಶುಕ್ರಯಾನಕ್ಕೆ ISRO ಸಜ್ಜು- ಇಲ್ಲಿದೆ ಶುಕ್ರಗ್ರಹದ ಸ್ವಾರಸ್ಯಕರ ಸಂಗತಿ

    ಬಳಕೆದಾರರ ಆನ್‌ಲೈನ್ ಖಾತೆಗಳಿಗೆ ಸೈನ್ ಇನ್ ಮಾಡಲು ತಯಾರಾಗುತ್ತಿರುವ ಪಾಸ್‌ವರ್ಡ್ ರಹಿತ ಸೇವೆ, ಪಾಸ್‌ವರ್ಡ್ ಮೂಲಕ ಅನ್‌ಲಾಕ್ ಮಾಡುವುದಕ್ಕಿಂತಲೂ ಸುಲಭ ಹಾಗೂ ಸುರಕ್ಷಿತವಾಗಿರಲಿದೆ. ನಿಮ್ಮ ಫೋನ್ ಅನ್ನು ಅನ್‌ಲಾಕ್ ಮಾಡಲು ನೀವು ಪಾಸ್‌ವರ್ಡ್, ಪಿನ್ ಅಥವಾ ಪ್ಯಾಟರ್ನ್ ಅನ್ನು ಬಳಸುತ್ತೀರಿ ಹಾಗೂ ಫೋನ್ ಅನ್ನು ಅನ್‌ಲಾಕ್ ಮಾಡಲು ಪ್ರತಿ ಬಾರಿಯೂ ಇದನ್ನೇ ಬಳಸುತ್ತೀರಿ. ನಿಮ್ಮ ಆನ್‌ಲೈನ್ ಖಾತೆಗಳಿಗೂ ಅನುಮತಿಸಲು ಇದೇ ಪ್ರಕ್ರಿಯೆಯನ್ನು ಬಳಸಿದರೆ ಆಯ್ತು. ಪಾಸ್‌ವರ್ಡ್ ನಮೂದಿಸುವ ಅಗತ್ಯ ಇರುವುದಿಲ್ಲ.

    ಈ 3 ಕಂಪನಿಗಳು ಕಾರ್ಯನಿರ್ವಹಿಸುತ್ತಿರುವ ಹೊಸ ಎಫ್‌ಐಡಿಒ(ಫಾಸ್ಟ್ ಐಡಿ ಆನ್‌ಲೈನ್) ಸೇವೆ ಸಹಾಯದಿಂದ ಪಾಸ್‌ವರ್ಡ್ ರಹಿತವಾಗಿ ಅನ್‌ಲಾಕ್ ಮಾಡಲು ಸಹಾಯವಾಗಲಿದೆ ಎಂದು ಕಂಪನಿಗಳು ತಿಳಿಸಿವೆ. ಇದನ್ನು ಪಾಸ್‌ಕೀ ಎಂತಲೂ ಕರೆಯಲಾಗುತ್ತಿದ್ದು, ಬಳಕೆದಾರರು ತಮ್ಮ ಮೊಬೈಲ್ ಹಾಗೂ ವೆಬ್‌ಸೈಟ್‌ಗಳಲ್ಲಿ ಪಾಸ್‌ವರ್ಡ್ ರಹಿತವಾಗಿ ಸೈನ್ ಇನ್ ಆಗಲು ಸಹಾಯವಾಗಲಿದೆ. ಇದನ್ನೂ ಓದಿ: ಭಾರತದಲ್ಲಿ ಡೆಬಿಟ್, ಕ್ರೆಡಿಟ್ ಕಾರ್ಡ್ ಮೂಲಕದ ಪಾವತಿಯನ್ನು ಸ್ಥಗಿತಗೊಳಿಸಿದ ಆಪಲ್

    ಪಾಸ್‌ಕೀ ಸಹಾಯದಿಂದ ಬಳಕೆದಾರರು ಇನ್ನು ಮುಂದೆ ತಮ್ಮ ಪಾಸ್‌ವರ್ಡ್ಗಳನ್ನು ನೆನಪಿಟ್ಟುಕೊಳ್ಳುವ ಅಗತ್ಯ ಇರುವುದಿಲ್ಲ. ಕೆಲವರು ಪಾಸ್‌ವರ್ಡ್ಗಳನ್ನು ನೆನಪಿಟ್ಟುಕೊಳ್ಳಬೇಕೆಂಬ ಕಾರಣಕ್ಕೆ ತಮ್ಮ ಹಲವಾರು ಬೇರೆ ಬೇರೆ ರೀತಿಯ ಸಾಮಾಜಿಕ ಮಾಧ್ಯಮ ಅಕೌಂಟ್‌ಗಳಿಕೆ ಒಂದೇ ರೀತಿಯ ಪಾಸ್‌ವರ್ಡ್ ಬಳಸುತ್ತಾರೆ. ಈ ಕಾರಣದಿಂದ ಹ್ಯಾಕರ್‌ಗಳು ಸುಲಭವಾಗಿ ಬಳಕೆದಾರರ ಖಾತೆಗಳನ್ನು ಹ್ಯಾಕ್ ಮಾಡುತ್ತಾರೆ. ಆದರೆ ಪಾಸ್‌ಕೀ ಇಂತಹ ಅಪಾಯಗಳನ್ನು ಕಡಿಮೆ ಮಾಡುತ್ತದೆ ಎಂದು ಕಂಪನಿಗಳು ತಿಳಿಸಿವೆ.

    ಈ ಹೊಸ ಪಾಸ್‌ವರ್ಡ್ ರಹಿತ ದೃಢೀಕರಣ ವ್ಯವಸ್ಥೆಯನ್ನು ಆಪಲ್, ಗೂಗಲ್ ಹಾಗೂ ಮೈಕ್ರೋಸಾಫ್ಟ್ ಮುಂದಿನ ವರ್ಷ ಹೊರತರಲಿದೆ. ಒಂದುವೇಳೆ ನಿಮ್ಮ ಫೋನ್ ಅಥವಾ ಇತರ ಸಾಧನಗಳು ಕಳೆದು ಹೋದಲ್ಲಿ ಕ್ಲೌಡ್ ಬ್ಯಾಕ್‌ಅಪ್ ಮೂಲಕ ಪಾಸ್‌ಕೀಗಳನ್ನು ಹೊಸ ಸಾಧನಗಳಿಗೆ ಸಿಂಕ್ ಮಾಡಬಹುದು ಎಂದು ಗೂಗಲ್ ತಿಳಿಸಿದೆ.