Tag: google

  • ಅಮೆರಿಕದ ಟಾಪ್ ಕಂಪೆನಿಗಳ ಸಿಇಒಗಳ ಜೊತೆ ಮೋದಿ ಚರ್ಚೆ: ಸಭೆ ಬಳಿಕ ಸಿಇಒಗಳು ಹೇಳಿದ್ದು ಹೀಗೆ

    ಅಮೆರಿಕದ ಟಾಪ್ ಕಂಪೆನಿಗಳ ಸಿಇಒಗಳ ಜೊತೆ ಮೋದಿ ಚರ್ಚೆ: ಸಭೆ ಬಳಿಕ ಸಿಇಒಗಳು ಹೇಳಿದ್ದು ಹೀಗೆ

    ವಾಷಿಂಗ್ಟನ್: ಉದ್ಯಮ ಸ್ನೇಹಿ ರಾಷ್ಟ್ರವಾಗಿ ಭಾರತ ಬದಲಾಗುತ್ತಿದ್ದು, ಸರಕು ಮತ್ತು ಸೇವಾ ತೆರಿಗೆ(ಜಿಎಸ್‍ಟಿ)ಯಿಂದಾಗಿ ಮತ್ತಷ್ಟು ಉದ್ಯಮ ಸ್ನೇಹಿಯಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕ ಟಾಪ್ ಕಂಪೆನಿಗಳ ಸಿಇಒಗಳ ಜೊತೆ ಸಂವಹನ ನಡೆಸಿದರು. ಜಿಎಸ್‍ಟಿ ಗೇಮ್ ಚೇಂಜರ್ ಆಗಿದ್ದು ದೇಶದಲ್ಲಿ ಮತ್ತಷ್ಟು ಬಂಡವಾಳವನ್ನು ಹೂಡುವಂತೆ ಕೇಳಿಕೊಂಡಿದ್ದಾರೆ.

    ಆಪಲ್ ನ ಟಿಮ್ ಕುಕ್, ಗೂಗಲ್ ನ ಸುಂದರ್ ಪಿಚ್ಚೈ, ಅಮೇಜಾನ್ ಸ್ಥಾಪಕ ಜೆಫ್ ಬಿಜೋಸ್, ಅಡೋಬ್ ಶಂತನು ನಾರಾಯಣ ಸೇರಿದಂತೆ 21 ಕಂಪೆನಿಗಳ ಸಿಇಒಗಳ ಜೊತೆ ಮಾತನಾಡಿದ್ದಾರೆ.

    ಗೂಗಲ್ ಸಿಇಒ ಸುಂದರ್ ಪಿಚೈ ಪ್ರತಿಕ್ರಿಯಿಸಿ, ಬಹಳ ಚೆನ್ನಾಗಿ ಚರ್ಚೆ ನಡೆಯಿತು. ಈ ರೀತಿಯ ಚರ್ಚೆಗಳು ಹಲವು ದೇಶಗಳ ನಡುವೆ ನಡೆಯಬೇಕು. ಪ್ರಧಾನಿ ಮೋದಿ ಅವರ ಮಾತುಗಳನ್ನು ಕೇಳಿ ನಾವು ಸೇರಿದಂತೆ ಹಲವು ಮಂದಿ ಭಾರತದಲ್ಲಿ ಬಂಡವಾಳ ಹೂಡಲು ಉತ್ಸುಕರಾಗಿದ್ದೇವೆ ಎಂದು ತಿಳಿಸಿದರು.

     

  • ಭಾರತೀಯ ಮೂಲದ ಸಿಇಒ ಸುಂದರ್ ಪಿಚೈಗೆ ಗೂಗಲ್ 2016ರಲ್ಲಿ ನೀಡಿದ ಸಂಬಳ ಎಷ್ಟು ಗೊತ್ತೆ?

    ಭಾರತೀಯ ಮೂಲದ ಸಿಇಒ ಸುಂದರ್ ಪಿಚೈಗೆ ಗೂಗಲ್ 2016ರಲ್ಲಿ ನೀಡಿದ ಸಂಬಳ ಎಷ್ಟು ಗೊತ್ತೆ?

    ಕ್ಯಾಲಿಫೋರ್ನಿಯಾ: ಗೂಗಲ್ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಮೂಲದ 44 ವರ್ಷದ ಸುಂದರ್ ಪಿಚೈ ಅವರಿಗೆ 200 ದಶಲಕ್ಷ ಡಾಲರ್(ಅಂದಾಜು 1,285 ಕೋಟಿ ರೂ.) ಸಂಭಾವನೆ ನೀಡಿದೆ.

    2015ರ ಸಂಬಳಕ್ಕೆ ಹೋಲಿಸಿದರೆ ಸಂಬಳ ಡಬಲ್ ಆಗಿದೆ. 2015ರಲ್ಲಿ ವಾರ್ಷಿಕ ಪರಿಹಾರ ಮೊತ್ತ ಸೇರಿದಂತೆ 6,50,000 ಡಾಲರ್ ಸಂಬಳ ಸಿಕ್ಕಿತ್ತು. 2015ರಲ್ಲಿ ಷೇರು ರೂಪದಲ್ಲಿ 99.8 ದಶಲಕ್ಷ ಡಾಲರ್ ಪಡೆದಿದ್ದ ಸುಂದರ್ ಪಿಚೈ ಅವರು 2016ರಲ್ಲಿ 198.7 ದಶಲಕ್ಷ ಡಾಲರ್ ಹಣವನ್ನು ಪಡೆದಿದ್ದಾರೆ.

    ಕಂಪೆನಿಯ ಪರವಾಗಿ ಉತ್ತಮ ಉತ್ಪನ್ನವನ್ನು ಹೊರ ತಂದಿದ್ದಕ್ಕೆ ಗೂಗಲ್ ಸಂಬಳವನ್ನು ಏರಿಕೆ ಮಾಡಿದೆ ಎಂದು ಸಿಎನ್‍ಎನ್ ವರದಿ ಮಾಡಿದೆ.

    2016ರಲ್ಲಿ ಗೂಗಲ್ ಹೊಸ ಸ್ಮಾರ್ಟ್ ಫೋನ್, ವರ್ಚುವಲ್ ರಿಯಾಲಿಟಿ ಹೆಡ್ ಸೆಟ್, ರೂಟರ್, ವಾಯ್ಸ್ ಆಧಾರಿತ ಸ್ಪೀಕರ್ ಬಿಡುಗಡೆ ಮಾಡಿತ್ತು. ಈ ಎಲ್ಲ ಕೆಲಸಕ್ಕೆ ಗೂಗಲ್ ಪಿಚೈ ಸಂಬಳವನ್ನು ಭಾರೀ ಏರಿಕೆ ಮಾಡಿದೆ.

    ಯಾರು ಸುಂದರ್ ಪಿಚೈ:
    ಸುಂದರ್ ಪಿಚೈ ಭಾರತೀಯ ಮೂಲದ ಅಮೆರಿಕದ ಕಂಪ್ಯೂಟರ್ ಎಂಜಿನಿಯರ್. ಮೂಲತಃ ಚೆನ್ನೈರವರಾದ ಸುಂದರ್ ಇಲ್ಲಿಯವರಗೆ ಗೂಗಲ್ ಕ್ರೋಮ್,ಆಂಡ್ರಾಯ್ಡ್ ಅಪ್ಲಿಕೇಶನ್, ಮತ್ತು ಗೂಗಲ್ ಡ್ರೈವ್ ವಿಭಾಗದ ಮುಖ್ಯಸ್ಥರಾಗಿ ನಿಯೋಜನೆಗೊಂಡಿದ್ದರು. 2004ರಲ್ಲಿ ಗೂಗಲ್‍ಗೆ ಸೇರಿದ ಸುಂದರ್, ಖರಗ್‍ಪುರ್ ಐಐಟಿಯಿಂದ ಬಿ.ಟೆಕ್ ಪದವಿ,ಸ್ಟಾನ್‍ಫೋರ್ಡ್ ವಿಶ್ವವಿದ್ಯಾಲಯದಿಂದ ಎಂಎಸ್ ಪದವಿಗಳಿಸಿದ್ದಾರೆ. ಮೈಕ್ರೋ ಸಾಫ್ಟ್ ಸಿಇಒ ಆಗಿ ಸತ್ಯ ನಾಡೆಲ್ಲಾ ನೇಮಕವಾದ ಬಳಿಕ ಆಗಸ್ಟ್ 10, 2015ರಂದು ಪಿಚೈ ಅವರನ್ನು ಗೂಗಲ್ ಸಿಇಒ ಆಗಿ ನೇಮಕಗೊಳಿಸಿತ್ತು.

  • ಇಂದು ಅಣ್ಣಾವ್ರ ಹುಟ್ಟುಹಬ್ಬ: ರಾಜ್ ಸಮಾಧಿ ಬಳಿ ವಿಶೇಷ ಪೂಜೆಗೆ ಸಕಲ ಸಿದ್ಧತೆ

    ಇಂದು ಅಣ್ಣಾವ್ರ ಹುಟ್ಟುಹಬ್ಬ: ರಾಜ್ ಸಮಾಧಿ ಬಳಿ ವಿಶೇಷ ಪೂಜೆಗೆ ಸಕಲ ಸಿದ್ಧತೆ

    – ಗೂಗಲ್ ಮುಖಪುಟದಲ್ಲಿ ರಾಜ್‍ಕುಮಾರ್ ಡೂಡಲ್

    ಬೆಂಗಳೂರು: ಇಂದು ವರನಟ ಡಾ.ರಾಜ್‍ಕುಮಾರ್ ಅವರ 89ನೇ ಜನುಮದಿನ. ಇಡೀ ಸ್ಯಾಂಡಲ್‍ವುಡ್ ಮತ್ತು ಕನ್ನಡ ನಾಡು ಮೆಚ್ಚಿದ ಅಪೂರ್ವ ಕಲಾವಿದ ಡಾ.ರಾಜ್‍ಕುಮಾರ್ ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳು ಅತ್ಯಂತ ಸಡಗರ ಸಂಭ್ರಮದಿಂದ ಆಚರಣೆ ಮಾಡುತ್ತಿದ್ದಾರೆ.

    ಪ್ರತಿ ವರ್ಷದಂತೆ ಇಂದು ಬೆಳಗ್ಗೆ 10 ಗಂಟೆಯ ಸುಮಾರಿಗೆ ಕಂಠೀರವ ಸ್ಟುಡಿಯೋದಲ್ಲಿರುವ ಡಾ. ರಾಜ್‍ಕುಮಾರ್ ಸಮಾಧಿ ಬಳಿ ಕುಟುಂಬಸ್ಥರು ಮತ್ತು ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ನಂತರ ಅನ್ನಸಂತರ್ಪಣೆ, ರಕ್ತದಾನ ಶಿಬಿರ, ಉಚಿತ ಆರೋಗ್ಯ ತಪಾಸಣೆ, ರಾಜ್ ಹಾಡುಗಳ ಗಾನಲಹರಿ ಮುಂತಾದ ಕಾರ್ಯಕ್ರಮಗಳಿರುತ್ತವೆ.

    ಅಣ್ಣಾವ್ರ ಹುಟ್ಟುಹಬ್ಬದ ಅಂಗವಾಗಿ “ರಾಜಕುಮಾರ” ಚಿತ್ರತಂಡದಿಂದ ಅಭಿಮಾನಿ ದೇವರುಗಳಿಗಾಗಿ ವಿಶೇಷ ಆಫರ್ ನೀಡಲಾಗಿದೆ. ಸಿನಿಮಾದ ಟಿಕೆಟ್ ದರವನ್ನ ಶೇ.50 ರಷ್ಟು ಇಳಿಸಲಾಗಿದೆ. ಗೂಗಲ್ ಸಂಸ್ಥೆಯೂ ಸಹ ತನ್ನ ಮುಖಪುಟದಲ್ಲಿ ಡಾ.ರಾಜ್ ಅವರ ಚಿತ್ರವನ್ನು ಅಳವಡಿಸುವ ಮೂಲಕ ಅವರಿಗೆ ಹುಟ್ಟು ಹಬ್ಬದ ಶುಭಾಶಯವನ್ನು ತಿಳಿಸಿದೆ.

  • ಗೂಗಲ್ ಜೊತೆಗೂಡಿ ಕಡಿಮೆ ಬೆಲೆಯಲ್ಲಿ ಜಿಯೋದಿಂದ ಆಂಡ್ರಾಯ್ಡ್ ಫೋನ್!

    ಗೂಗಲ್ ಜೊತೆಗೂಡಿ ಕಡಿಮೆ ಬೆಲೆಯಲ್ಲಿ ಜಿಯೋದಿಂದ ಆಂಡ್ರಾಯ್ಡ್ ಫೋನ್!

    ಮುಂಬೈ: ರಿಲಯನ್ಸ್ ಜಿಯೋ ಎಲ್‍ಟಿಇ ಟೆಕ್ನಾಲಜಿ ಸಪೋರ್ಟ್ ಮಾಡುವ ಫೀಚರ್ ಫೋನ್ ತಯಾರಿಸುತ್ತಿರುವ ವಿಚಾರ ನಿಮಗೆ ಗೊತ್ತೆ ಇದೆ. ಈಗ ಗೂಗಲ್ ಜೊತೆಗೂಡಿ ಆಂಡ್ರಾಯ್ಡ್ ಫೋನ್ ತಯಾರಿಸಲು ಮುಂದಾಗಿದೆ.

    ಈ ವರ್ಷದ ಜನವರಿಯಲ್ಲಿ ಗೂಗಲ್ ಸಿಇಒ ಸುಂದರ್ ಪಿಚೈ ಭಾರತಕ್ಕೆ ಬಂದಿದ್ದಾಗ ಕಡಿಮೆ ಬೆಲೆಯಲ್ಲಿ ಆಂಡ್ರಾಯ್ಡ್ ಫೋನ್ ತಯಾರಿಸಲಾಗುವುದು ಎಂದು ತಿಳಿಸಿದ್ದರು. ಭಾರತಕ್ಕೆ 30 ಡಾಲರ್(2 ಸಾವಿರ ರೂ.) ಬೆಲೆಯ ಆಂಡ್ರಾಯ್ಡ್ ಫೋನ್ ಅಗತ್ಯವಿದೆ ಎಂದು ಹೇಳಿದ್ದರು. ಇದಕ್ಕೆ ಪೂರಕ ಎಂಬಂತೆ ಜಿಯೋ ಕಂಪೆನಿ ಮತ್ತು ಗೂಗಲ್ ಜೊತೆಗೂಡಿ ಆಂಡ್ರಾಯ್ಡ್ ಫೋನ್ ತಯಾರಿಸಲಿದೆ ಎಂದು ಟೆಕ್ ಮೂಲಗಳ ಮಾಹಿತಿಯನ್ನು ಆಧರಿಸಿ ಮಾಧ್ಯಮವೊಂದು ವರದಿ ಮಾಡಿದೆ.

    ಈ ಫೋನಿನಲ್ಲಿ ಪ್ರಿಲೋಡೆಡ್ ಜಿಯೋ ಅಪ್ಲಿಕೇಶನ್ ಇರಲಿದ್ದು, ಈ ವರ್ಷದ ಅಂತ್ಯಕ್ಕೆ ಈ ಫೋನ್ ಮಾರುಕಟ್ಟೆಗೆ ಬಿಡುಗಡೆಯಾಗುವ ಸಾಧ್ಯತೆಯಿದೆ. ಅಷ್ಟೇ ಅಲ್ಲದೇ ಗೂಗಲ್ ಮತ್ತು ಜಿಯೋ ಸ್ಮಾರ್ಟ್ ಟಿವಿಗಾಗಿ ವಿಶೇಷವಾಗಿ ಅಪ್ಲಿಕೇಶನ್ ತಯಾರು ಮಾಡಲಿದೆ ಎಂದು ವರದಿ ತಿಳಿಸಿದೆ.

    ಈ ಸುದ್ದಿಗೆ ಸಂಬಂಧಿಸಿದಂತೆ ಮಾಧ್ಯಮಗಳು ಗೂಗಲ್ ಮತ್ತು ರಿಲಯನ್ಸ್ ಜಿಯೋ ಸಂಪರ್ಕಿಸಿದ್ದು, ಅಲ್ಲಿಂದ ಯಾವುದೇ ಪ್ರತ್ರಿಕಿಯೆ ಬಂದಿಲ್ಲ.

    ಗೂಗಲ್ ಈ ಹಿಂದೆ ಏಷ್ಯಾ, ಆಫ್ರಿಕಾ ಖಂಡದಲ್ಲಿ ಮಾರುಕಟ್ಟೆ ವಿಸ್ತರಿಸಲು ಆಂಡ್ರಾಯ್ಡ್ ಓಎಸ್ ಆಧಾರಿತ ಆಂಡ್ರಾಯ್ಡ್ ಒನ್ ಫೋನ್‍ಗಳನ್ನು ಬಿಡುಗಡೆ ಮಾಡಿತ್ತು. ಈ ಫೋನ್‍ಗಳ ಬೆಲೆ ಕಡಿಮೆ ಇದ್ದು, ಗೂಗಲ್ ಮಾನದಂಡಕ್ಕೆ ಅನುಗುಣವಾಗಿ ಹಾರ್ಡ್‍ವೇರ್ ಮತ್ತು ಸಾಫ್ಟ್ ವೇರ್‍ಗಳನ್ನು ಹೊಂದಿದ ಈ ಫೋನ್‍ಗಳನ್ನು ಕಂಪೆನಿಗಳು ತಯಾರಿಸಬೇಕಿತ್ತು. ವಿಶ್ವದಲ್ಲೇ ಮೊದಲ ಬಾರಿಗೆ 2014ರಲ್ಲಿ ಭಾರತದಲ್ಲಿ ಆಂಡ್ರಾಯ್ಡ್ ಓನ್ ಫೋನ್‍ಗಳು ಬಿಡುಗಡೆಯಾಗಿತ್ತು. ಭಾರತದಲ್ಲಿ ಕಾರ್ಬನ್, ಮೈಕ್ರೋಮ್ಯಾಕ್ಸ್, ಸ್ಪೈಸ್ ಕಂಪೆನಿಗಳು ಆಂಡ್ರಾಯ್ಡ್ ಓನ್ ಅಡಿಯಲ್ಲಿ ಫೋನ್ ತಯಾರಿಸಿತ್ತು.

    ಜಿಯೋ 999 ರೂ.ನಿಂದ ಆರಂಭವಾಗಿ 1500 ರೂ ಒಳಗಡೆ ಕೀ ಪ್ಯಾಡ್ ಹೊಂದಿರುವ ಎಲ್‍ಟಿಇ ತಂತ್ರಜ್ಞಾನಕ್ಕೆ ಸಪೋರ್ಟ್ ಮಾಡುವ ಫೀಚರ್ ಫೋನ್‍ಗಳನ್ನು ಬಿಡುಗಡೆ ಮಾಡಲಿದೆ ಎನ್ನುವ ವರದಿ ಈ ಹಿಂದೆ ಮಾಧ್ಯಮಗಳಲ್ಲಿ ಪ್ರಕಟಗೊಂಡಿತ್ತು. ಪ್ರಸ್ತುತ ಜಿಯೋ ಎಲ್‍ವೈಎಫ್ ಹೆಸರಿನಲ್ಲಿ ಆಂಡ್ರಯ್ಡ್ ಫೋನ್‍ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ.

    ಇದನ್ನೂ ಓದಿ: ಪ್ರೈಮ್ ಗ್ರಾಹಕರಿಗೆ ಗುಡ್‍ನ್ಯೂಸ್: ಜಿಯೋದಿಂದ ಈಗ ಬೈ ಒನ್ ಗೆಟ್ ಒನ್ ಡೇಟಾ ಆಫರ್

  • ಉದ್ಯೋಗ ನೀಡುವಂತೆ ಗೂಗಲ್‍ಗೆ 7ರ ಬಾಲಕಿಯಿಂದ ಪತ್ರ: ಸಿಇಒ ಪಿಚೈ ನೀಡಿದ ಉತ್ತರ ಇದು

    ಉದ್ಯೋಗ ನೀಡುವಂತೆ ಗೂಗಲ್‍ಗೆ 7ರ ಬಾಲಕಿಯಿಂದ ಪತ್ರ: ಸಿಇಒ ಪಿಚೈ ನೀಡಿದ ಉತ್ತರ ಇದು

    ಕ್ಯಾಲಿಫೋರ್ನಿಯಾ: 7 ವರ್ಷದ ಬಾಲಕಿಯೊಬ್ಬಳು ಗೂಗಲ್ ಸಿಇಒ ಸುಂದರ್ ಪಿಚೈಗೆ ಕೆಲಸ ಬೇಕೆಂದು ಬರೆದ ಪತ್ರ ಈಗ ವೈರಲ್ ಆಗಿದೆ.

    ಇಂಗ್ಲೆಂಡಿನ ಕೋಲೆ ಬ್ರಿಡ್ಜ್ ವಾಟರ್ ಎಂಬಾಕೆ ನನಗೆ ಗೂಗಲ್‍ನಲ್ಲಿ ಉದ್ಯೋಗ ಬೇಕೆಂದು ನೇರವಾಗಿ ಸುಂದರ್ ಪಿಚೈಗೆ ಪತ್ರ ಬರೆದಿದ್ದಾಳೆ. ಈ ಪತ್ರಕ್ಕೆ ಪ್ರತಿಕ್ರಿಯಿಸಿದ ಪಿಚೈ, ಶ್ರಮವಹಿಸಿ ಓದಿ ನಿನ್ನ ಕನಸನ್ನ ನನಸು ಮಾಡು. ಶಾಲಾ ಶಿಕ್ಷಣದ ಬಳಿಕ ಗೂಗಲ್‍ನಲ್ಲಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸು ಎಂದು ಮರು ಪತ್ರ ಬರೆದಿದ್ದಾರೆ.

    ಕೆಲ ದಿನಗಳ ಹಿಂದೆ ಬಾಲಕಿ ತನ್ನ ತಂದೆಯ ಜೊತೆ ಉದ್ಯೋಗಕ್ಕೆ ಯೋಗ್ಯವಾದ ಸ್ಥಳ ಯಾವುದು ಎಂದು ಪ್ರಶ್ನೆ ಕೇಳಿದ್ದಾಳೆ. ಇದಕ್ಕೆ ತಂದೆ ಗೂಗಲ್ ಅತ್ಯುತ್ತಮ ಸ್ಥಳ ಎಂದು ಉತ್ತರಿಸಿದ್ದಾರೆ. ಗೂಗಲ್ ಬಗ್ಗೆ ಮತ್ತಷ್ಟು ಪ್ರಶ್ನೆ ಕೇಳಿದ ಈಕೆ ಕೊನೆಗೆ ನಾನು ಗೂಗಲ್‍ನಲ್ಲಿ ಉದ್ಯೋಗ ಮಾಡಬೇಕು ಎಂದು ಕೇಳಿದ್ದಾಳೆ.

    ಈಕೆಯ ಪ್ರಶ್ನೆಗೆ ತಂದೆ ನನಗೆ ಉದ್ಯೋಗ ಬೇಕೆಂದು ಗೂಗಲ್‍ಗೆ ಒಂದು ಪತ್ರ ಬರೆ ಎಂದು ಸೂಚಿಸಿದ್ದಾರೆ. ಅದರಂತೆ ಆಕೆ ಕಂಪ್ಯೂಟರ್, ರೊಬೊಟ್, ಟ್ಯಾಬ್ಲೆಟ್ ಅಂದರೆ ನನಗೆ ಇಷ್ಟ. ಹೀಗಾಗಿ ನಿಮ್ಮ ಕಂಪೆನಿಯಲ್ಲಿ ಉದ್ಯೋಗ ಬೇಕೆಂದು ಪಿಚೈಗೆ ಪತ್ರ ಬರೆದಿದ್ದಾಳೆ.

    ಈ ಪತ್ರಕ್ಕೆ ಸುಂದರ್ ಪಿಚೈ,”ಪತ್ರ ಬರೆದಿದ್ದಕ್ಕೆ ಧನ್ಯವಾದಗಳು, ರೊಬೊಟ್ ಮತ್ತು ಕಂಪ್ಯೂಟರ್ ಅಂದರೆ ಇಷ್ಟ ಎಂದು ನೀನು ತಿಳಿಸಿರುವುದನ್ನು ಓದಿ ಸಂತೋಷವಾಯಿತು. ಮುಂದೆ ಚೆನ್ನಾಗಿ ಓದಿ ಕನಸನ್ನು ನನಸು ಮಾಡು. ಶಾಲಾ ಶಿಕ್ಷಣ ಮುಗಿದ ಬಳಿಕ ಉದ್ಯೋಗಕ್ಕೆ ಅರ್ಜಿ ಸಲ್ಲಿಸು. ನಿನಗೆ ಮತ್ತು ನಿನ್ನ ಕುಟುಂಬಕ್ಕೆ ಒಳ್ಳೆದಾಗಲಿ” ಎಂದು ಮರು ಪತ್ರ ಬರೆದಿದ್ದಾರೆ.