Tag: Google CEO

  • ಸುಂದರ್ ಪಿಚ್ಚೈಯವರ ಚೆನ್ನೈ ಮನೆ ಮಾರಾಟ- ಕಣ್ಣೀರಿಟ್ಟ ಗೂಗಲ್ ಸಿಇಓ ತಂದೆ

    ಸುಂದರ್ ಪಿಚ್ಚೈಯವರ ಚೆನ್ನೈ ಮನೆ ಮಾರಾಟ- ಕಣ್ಣೀರಿಟ್ಟ ಗೂಗಲ್ ಸಿಇಓ ತಂದೆ

    ಚೆನ್ನೈ: ಗೂಗಲ್ ಸಿಇಓ (Google CEO) ಸುಂದರ್ ಪಿಚ್ಚೈ (Sundar Pichai) ಅವರ ಚೆನ್ನೈನಲ್ಲಿರುವ ಮನೆಯನ್ನು ಮಾರಾಟ ಮಾಡಲಾಗಿದ್ದು, ಮನೆ ಹಸ್ತಾಂತರ ಮಾಡುವಾಗ ಸುಂದರ್ ಅವರ ತಂದೆ ರಘುನಾಥ್ ಭಾವುಕರಾಗಿದ್ದಾರೆ.

    ಈ ಮನೆ ಚೆನ್ನೈ (Cjhennai) ನ ಅಶೋಕ್ ನಗರದಲ್ಲಿದ್ದು, ತಮಿಳು ನಟ ಹಾಗೂ ನಿರ್ಮಾಪಕ ಸಿ ಮಣಿಕಂದನ್ (Manikandan) ಖರೀದಿಸಿದ್ದಾರೆ. ಮಣಿಕಂದನ್ ಅವರು ಖರೀದಿಸಲು ಆಸ್ತಿಯನ್ನು ಹುಡುಕುತ್ತಿದ್ದರು. ಇದೇ ವೇಳೆ ಸುಂದರ್ ಪಿಚ್ಚೈ ಅವರು ಹುಟ್ಟಿ ಬೆಳೆದ ಮನೆ ಮಾರಾಟಕ್ಕೆ ಇದೆ ಎಂಬ ವಿಚಾರ ತಿಳಿದ ತಕ್ಷಣ ಅವರು ಖರೀದಿ ಮಾಡುವ ನಿರ್ಧಾರ ಮಾಡಿದರು.

    ಈ ಸಂಬಂಧ ಮಣಿಕಂದನ್ ಪ್ರತಿಕ್ರಿಯಿಸಿ, ಸುಂದರ್ ಪಿಚ್ಚೈ ಅವರು ನಮ್ಮ ದೇಶವನ್ನು ಹೆಮ್ಮೆಪಡುವಂತೆ ಮಾಡಿದ್ದಾರೆ. ಇದೀಗ ಅವರು ವಾಸಿಸುತ್ತಿದ್ದ ಮನೆಯನ್ನು ಖರೀದಿಸುವುದು ನನ್ನ ಜೀವನದ ಹೆಮ್ಮೆಯ ಸಾಧನೆಯಾಗಿದೆ ಎಂದು ಹೇಳಿದರು. ಇದನ್ನೂ ಓದಿ: ನಮ್ಮಲ್ಲಿ ಯಾವುದೇ ಬಣ ಇಲ್ಲ, ಹಿರಿತನ ನೋಡಿ ಹಂಚಿಕೆ: ಎಂಬಿ ಪಾಟೀಲ್‌

    ಇದೇ ವೇಳೆ ಗೂಗಲ್ ಸಿಇಓ ಕುಟುಂಬದ ಸರಳತೆಯನ್ನು ಕೊಂಡಾಡಿದ ನಟ, ಸುಂದರ್ ಅವರ ತಾಯಿ ಸ್ವತಃ ಫಿಲ್ಟರ್ ಕಾಫಿ ತಂದು ಕೊಟ್ಟರು. ಅವರ ತಂದೆ ನನಗೆ ಎಲ್ಲಾ ದಾಖಲೆಗಳನ್ನು ನೀಡಿದರು. ಅವರ ಸರಳತೆ ನನ್ನನ್ನು ಅಚ್ಚರಿ ಹುಟ್ಟಿಸುವಂತೆ ಮಾಡಿತು ಎಂದರು.

    ರಿಜಿಸ್ಟ್ರಾರ್ ಕಚೇರಿಯಲ್ಲಿ ಅವರ ಮಗನ ಹೆಸರು ಹೇಳಿದರೆ ಎಲ್ಲಾವೂ ಬೇಗನೆ ಮುಗಿದುಗೋಗುತ್ತಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ. ತಾವೇ ನೋಂದಣಿ ಕಚೇರಿಯಲ್ಲಿ ಗಂಟಗಟ್ಟಲೆ ಕಾದು ಎಲ್ಲಾ ತೆರಿಗೆಗಳನ್ನು ಪಾವತಿಸಿದರು. ಸುಂದರ್ ಅವರ ತಂದೆಯವರದ್ದು ಇದು ಮೊದಲ ಆಸ್ತಿಯಾಗಿರುವುದರಿಂದ ದಾಖಲೆಗಳನ್ನು ಹಸ್ತಾಂತರಿಸುವಾಗ ಕೆಲವು ನಿಮಿಷಗಳ ಕಾಲ ಭಾವುಕರಾದರು ಎಂದು ತಿಳಿಸಿದರು.

    ಸುಂದರ್ ಪಿಚ್ಚೈ ಅವರು ಚೆನ್ನೈನಲ್ಲಿ ಬೆಳೆದರು. ಆದರೆ ಅವರು 1989 ರಲ್ಲಿ ಐಐಟಿ ಖರಗ್‍ಪುರದಲ್ಲಿ ಮೆಟಲರ್ಜಿಕಲ್ ಎಂಜಿನಿಯರಿಂಗ್ ಅಧ್ಯಯನ ಮಾಡಲು ತೆರಳಿದರು. ಅವರು 20 ವರ್ಷದವರೆಗೆ ಈ ಮನೆಯಲ್ಲಿಯೇ ವಾಸವಿದ್ದರು ಎಂದು ನೆರೆಹೊರೆಯವರು ತಿಳಿಸಿದ್ದಾರೆ. ಡಿಸೆಂಬರ್‍ನಲ್ಲಿ ಗೂಗಲ್ ಸಿಇಒ ಚೆನ್ನೈಗೆ ಭೇಟಿ ನೀಡಿದಾಗ ಭದ್ರತಾ ಸಿಬ್ಬಂದಿಗೆ ನಗದು ಮತ್ತು ಕೆಲವು ಗೃಹೋಪಯೋಗಿ ವಸ್ತುಗಳನ್ನು ನೀಡಿದ್ದರು.

  • Google ಸಿಇಒ ಸುಂದರ್ ಪಿಚೈಗೆ ಪದ್ಮಭೂಷಣ ಪ್ರಶಸ್ತಿ ಹಸ್ತಾಂತರ

    Google ಸಿಇಒ ಸುಂದರ್ ಪಿಚೈಗೆ ಪದ್ಮಭೂಷಣ ಪ್ರಶಸ್ತಿ ಹಸ್ತಾಂತರ

    ವಾಷಿಂಗ್ಟನ್: ವ್ಯಾಪಾರ ಮತ್ತು ಕೈಗಾರಿಕಾ ವಿಭಾಗದಲ್ಲಿ ಗೂಗಲ್ ಹಾಗೂ ಆಲ್ಫಾಬೆಟ್ ಸಿಇಒ (Google CEO) ಆಗಿರುವ ಸುಂದರ್ ಪಿಚೈ (Sundar Pichai) ಅವರಿಗೆ ಭಾರತ ಸರ್ಕಾರ (Government Of India) ಪದ್ಮಭೂಷಣ ಪ್ರಶಸ್ತಿ (Padma Bhushan Award) ನೀಡಿ ಗೌರವಿಸಿದೆ. ಪ್ರಶಸ್ತಿಯನ್ನು ಪಿಚೈ ಅವರಿಗೆ ಭಾರತದ ಅಮೆರಿಕ ರಾಯಭಾರಿ ಹಸ್ತಾಂತರಿಸಿದ್ದಾರೆ.

    ಅಮೆರಿಕ-ಭಾರತೀಯ ರಾಯಭಾರಿ ತರಂಜಿತ್ ಸಿಂಗ್ ಸಂಧು (Taranjit Singh Sandhu) ಶುಕ್ರವಾರ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಪಿಚೈ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಪ್ರಶಸ್ತಿ ಹಸ್ತಾಂತರಿಸಿದರು. ತಮಿಳುನಾಡಿನ ಮದುರೈ ಮೂಲದ ಪಿಚೈ ಈ ವರ್ಷಾರಂಭದಲ್ಲಿ 17 ಪ್ರಶಸ್ತಿ ಪುರಸ್ಕೃತರಲ್ಲಿ ಒಬ್ಬರಾಗಿದ್ದರು. ಇದನ್ನೂ ಓದಿ: ತಮಿಳುನಾಡಿನ ದೇವಾಲಯಗಳಲ್ಲಿ ಮೊಬೈಲ್ ಬಳಸುವಂತಿಲ್ಲ – ಮದ್ರಾಸ್ ಹೈಕೋರ್ಟ್ ಆದೇಶ

    ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಪಿಚೈ, ಈ ಅಪಾರ ಗೌರವಕ್ಕಾಗಿ ನಾನು ಭಾರತದ ಜನರಿಗೆ ಕೃತಜ್ಞನಾಗಿದ್ದೇನೆ. ನನ್ನನ್ನು ರೂಪಿಸಿದ ದೇಶದಿಂದಲೇ ಈ ರೀತಿ ಗೌರವಿಸಲ್ಪಟ್ಟಿರುವುದು ನಂಬಲು ಸಾಧ್ಯವೇ ಆಗುತ್ತಿಲ್ಲ. ಭಾರತ ದೇಶ ಎಂದಿಗೂ ನನ್ನ ಭಾಗವಾಗಿರುತ್ತದೆ. ನಾನು ಎಲ್ಲಿಗೇ ಹೋದರೂ ಭಾರತವನ್ನು ನನ್ನೊಂದಿಗೆ ಕೊಂಡೊಯ್ಯುತ್ತೇನೆ ಎಂದು ಕೊಂಡಾಡಿದರು. ಇದನ್ನೂ ಓದಿ: ನನ್ನ ಹತ್ಯೆಗೆ ಸ್ಕೆಚ್ – ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ಮುಖಂಡ ಗಂಭೀರ ಆರೋಪ

    ನನ್ನ ಆಸಕ್ತಿಗಳನ್ನು ಅನ್ವೇಷಿಸಲು ನನ್ನ ಕುಟುಂಬ ಬಹಳಷ್ಟು ತ್ಯಾಗ ಮಾಡಿದೆ. ನನ್ನ ಪೋಷಕರು ಕಲಿಕೆಗೆ ಸಹಕರಿಸಿದ್ದಾರೆ. ಅಂತಹ ಕುಟುಂಬದಲ್ಲಿ ನಾನು ಬೆಳೆಯಲು ಅದೃಷ್ಟಶಾಲಿಯಾಗಿದ್ದೇನೆ ಎಂದು ಸ್ಮರಿಸಿದರು.

    Live Tv
    [brid partner=56869869 player=32851 video=960834 autoplay=true]