Tag: Goods Vehicle

  • ಬೆಂಗ್ಳೂರಲ್ಲಿ ರೇಷ್ಮೆ ಗೂಡು ಸಾಗಿಸುತ್ತಿದ್ದ ವಾಹನ ಪಲ್ಟಿ!

    ಬೆಂಗ್ಳೂರಲ್ಲಿ ರೇಷ್ಮೆ ಗೂಡು ಸಾಗಿಸುತ್ತಿದ್ದ ವಾಹನ ಪಲ್ಟಿ!

    ಬೆಂಗಳೂರು: ಗೂಡ್ಸ್ ತುಂಬಿಕೊಂಡು ತೆರಳುತ್ತಿದ್ದ ವಾಹನವೊಂದು ಪಲ್ಟಿಯಾದ ಘಟನೆ ಗೊರಗುಂಟೆ ಪಾಳ್ಯದ ಮಾರ್ಡನ್ ಬ್ರೀಡ್ ಫ್ಯಾಕ್ಟರಿ ಬಳಿ ನಡೆದಿದೆ.

    ವಾಹನದಲ್ಲಿ ರೇಷ್ಮೆ ಗೂಡನ್ನ ತುಂಬಿಕೊಂಡು ಶಿಡ್ಲಘಟ್ಟದಿಂದ ರಾಮನಗರಕ್ಕೆ ಸಾಗಿಸಲಾಗುತ್ತಿತ್ತು. ಈ ವೇಳೆ ಗೊರಗುಂಟೆ ಪಾಳ್ಯದ ಮಾರ್ಡನ್ ಬ್ರೀಡ್ ಫ್ಯಾಕ್ಟರಿ ಬಳಿ ತಿರುವು ತೆಗೆದುಕೊಳ್ಳುವ ವೇಳೆ ಮರದ ಕೊಂಬೆಗೆ ಟಚ್ ಆಗಿ ಗೂಡ್ಸ್ ಗಾಡಿ ಪಲ್ಟಿ ಹೊಡೆದಿದೆ.

    ಅದೃಷ್ಟವಶಾತ್ ಘಟನೆಯಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಯಶವಂತಪುರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ಕಾರು ತಪಾಸಣೆ ವೇಳೆ ಗೂಡ್ಸ್ ಲಾರಿ ಡಿಕ್ಕಿ- ಕರ್ತವ್ಯ ನಿರತ ಮುಖ್ಯಪೇದೆ ದುರ್ಮರಣ

    ಕಾರು ತಪಾಸಣೆ ವೇಳೆ ಗೂಡ್ಸ್ ಲಾರಿ ಡಿಕ್ಕಿ- ಕರ್ತವ್ಯ ನಿರತ ಮುಖ್ಯಪೇದೆ ದುರ್ಮರಣ

    ರಾಮನಗರ: ಚುನಾವಣೆ ಹಿನ್ನೆಲೆಯಲ್ಲಿ ಚೆಕ್ ಪೋಸ್ಟ್ ನಲ್ಲಿ ತಪಾಸಣೆ ನಿರತ ಮುಖ್ಯಪೇದೆಗೆ ಗೂಡ್ಸ್ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಮೃತಪಟ್ಟ ಘಟನೆ ರಾಮನಗರ ತಾಲೂಕಿನ ಹೆಜ್ಜಾಲ ಬಳಿ ನಡೆದಿದೆ.

    ಮಹಾಲಿಂಗ(39) ಸಾವನ್ನಪ್ಪಿದ ಪೇದೆಯಾಗಿದ್ದು, ಇವರು ಬಿಡದಿ ಪೊಲೀಸ್ ಠಾಣೆಯ ಮುಖ್ಯಪೇದೆ. ಚುನಾವಣೆ ಹಿನ್ನೆಲೆ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ರಾತ್ರಿ ಚೆಕ್ ಪೋಸ್ಟ್ ನಲ್ಲಿ ಕಾರು ತಪಾಸಣೆ ನಡೆಸುವ ವೇಳೆ ವೇಗವಾಗಿ ಬಂದ ಗೂಡ್ಸ್ ವಾಹನ ಇವರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ಪೇದೆ ಮಹಾಲಿಂಗ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲು ತೆರಳುವ ವೇಳೆ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ.

    ಇನ್ನೂ ಗೂಡ್ಸ್ ವಾಹನದ ಚಾಲಕ ಪರಾರಿಯಾಗಿದ್ದು, ಬಿಡದಿಯ ಕುಂಬಳಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.