Tag: Goods Vehicle

  • ಗೂಡ್ಸ್ ವಾಹನದಲ್ಲಿ ಜನರ ಪ್ರಯಾಣ ಕಾನೂನು ಬಾಹಿರ: ಎಡಿಜಿಪಿ ಅಲೋಕ್ ಕುಮಾರ್

    ಗೂಡ್ಸ್ ವಾಹನದಲ್ಲಿ ಜನರ ಪ್ರಯಾಣ ಕಾನೂನು ಬಾಹಿರ: ಎಡಿಜಿಪಿ ಅಲೋಕ್ ಕುಮಾರ್

    -ನಿಯಮಗಳು ಉಲ್ಲಂಘನೆಯಾದರೆ ಕಠಿಣ ಕ್ರಮ ಕಟ್ಟಿಟ್ಟ ಬುತ್ತಿ

    ಹುಬ್ಬಳ್ಳಿ: ಗೂಡ್ಸ್ ವಾಹನದಲ್ಲಿ ಜನರ ಪ್ರಯಾಣ ಕಾನೂನು ಬಾಹಿರ. ಉಲ್ಲಂಘನೆಯಾಗಿ ಜನರನ್ನು ಕರೆದುಕೊಂಡು ಹೋದರೆ ಅತ್ಯಂತ ಕಠಿಣ ಕ್ರಮ ಕಟ್ಟಿಟ್ಟ ಬುತ್ತಿ ಎಂದು ಹುಬ್ಬಳ್ಳಿಯಲ್ಲಿ (Hubballi) ರಾಜ್ಯ ಸಂಚಾರ ಮತ್ತು ಅಪರಾಧ ಎಡಿಜಿಪಿ ಅಲೋಕ್ ಕುಮಾರ್ (ADGP Alok Kumar) ಹೇಳಿಕೆ ನೀಡಿದ್ದಾರೆ.

    ಮಾಧ್ಯಮಗಳ ಮುಂದೆ ಮಾತನಾಡಿದ ಅವರು, ಗೂಡ್ಸ್ ವಾಹನದಲ್ಲಿ  ಜನರು ಪ್ರಯಾಣಿಸುವುದು ಸರಿಯಲ್ಲ. ಒಂದು ವೇಳೆ ವಾಹನ ಅಪಘಾತ ಆದರೆ 10-15 ಜನ ಪ್ರಾಣ ಕಳೆದುಕೊಳ್ಳುತ್ತಾರೆ. ಯಾರು ಗೂಡ್ಸ್ ವಾಹನದಲ್ಲಿ ಜನರನ್ನು ಕರೆದುಕೊಂಡು ಹೋಗುತ್ತಾರೋ ಅಂತವರ ಮೇಲೆ ಮುಲಾಜಿಲ್ಲದೆ ಕೇಸ್ ದಾಖಲು ಮಾಡುತ್ತೇವೆ. ಡ್ರೈವಿಂಗ್ ಲೈಸೆನ್ಸ್ ಹಾಗೂ ವಾಹನದ ಪರಮಿಟ್ ಕೂಡ ರದ್ದು ಮಾಡುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಆಪರೇಷನ್ ಹಸ್ತದ ನಡುವೆ ಮಂಡ್ಯ ನಗರಸಭೆ ಗದ್ದುಗೆ ಏರಿದ ಜೆಡಿಎಸ್-ಬಿಜೆಪಿ

    ರಾಜ್ಯದಲ್ಲಿ ಎರಡು ಚಕ್ರದ ಸಂಚಾರದಿಂದ 60% ಹಾಗೂ 20% ಪಾದಚಾರಿಗಳಿಂದ ಸಾವಾಗುತ್ತಿದೆ. ಹಾಗಾಗಿ ಸಂಚಾರ ನಿಯಮಗಳು ಉಲ್ಲಂಘನೆ ಮಾಡುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು. ಇದನ್ನೂ ಓದಿ: ಜೈಲಿನಲ್ಲಿದ್ದುಕೊಂಡೇ ವೀಡಿಯೋ ಕಾಲ್‌ – ತನಿಖಾಧಿಕಾರಿಗಳ ಮುಂದೆ ದರ್ಶನ್‌ ಜಾಣನಡೆ!

  • ಕಾರು, ಗೂಡ್ಸ್ ವಾಹನ ಮುಖಾಮುಖಿ ಡಿಕ್ಕಿ – ಇಬ್ಬರು ಮಹಿಳೆಯರ ಸಾವು, 8 ಮಂದಿಗೆ ಗಾಯ

    ಕಾರು, ಗೂಡ್ಸ್ ವಾಹನ ಮುಖಾಮುಖಿ ಡಿಕ್ಕಿ – ಇಬ್ಬರು ಮಹಿಳೆಯರ ಸಾವು, 8 ಮಂದಿಗೆ ಗಾಯ

    ಬಾಗಲಕೋಟೆ: ಕಾರು (Car) ಹಾಗೂ ಗೂಡ್ಸ್ ವಾಹನ (Goods Vehicle) ಮುಖಾಮುಖಿ ಡಿಕ್ಕಿಯಾದ ಪರಿಣಾಮ ಇಬ್ಬರು ಮಹಿಳೆಯರು (Women) ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬಾಗಲಕೋಟೆ (Bagalkote) ಜಿಲ್ಲೆಯ ಹುನಗುಂದ (Hungund) ತಾಲೂಕಿನ ರಕ್ಕಸಗಿಯಲ್ಲಿ (Rakkasagi) ನಡೆದಿದೆ.

    ಮೃತ ಮಹಿಳೆಯರು ಗೂಡ್ಸ್ ವಾಹನದಲ್ಲಿದ್ದು, ಹುನಗುಂದದಿಂದ ಅಮೀನಗಢ ಮಾರ್ಗವಾಗಿ ಬರುತ್ತಿದ್ದರು. ಈ ವೇಳೆ ಕಾರು ಮತ್ತು ಗೂಡ್ಸ್ ವಾಹನ ಮುಖಾಮುಖಿ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಗಾಯಗೊಂಡ ಎಂಟು ಜನರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನಲ್ಲಿದ್ದ ಏರ್‌ಬ್ಯಾಗ್ ಓಪನ್ ಆದ ಕಾರಣ ಕಾರು ಚಾಲಕ ಸಾವಿನಿಂದ ಪಾರಾಗಿದ್ದಾನೆ. ಇದನ್ನೂ ಓದಿ: ಪ್ರಿಯಕರನ ಜೊತೆ ಸೇರಿ ಉಸಿರುಗಟ್ಟಿಸಿ ಅತ್ತೆ ಕೊಂದಿದ್ದ ಸೊಸೆ ಅರೆಸ್ಟ್

    ಮೃತರು ರಾಯಚೂರು (Raichur) ಜಿಲ್ಲೆಯ ಲಿಂಗಸೂರು ಭಾಗದವರು ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಅಮೀನಗಢ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಘಟನೆ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಇದನ್ನೂ ಓದಿ: ಶಿವಾಜಿಗೆ ಅವಮಾನ – ಠಾಣೆ ಮುಂದೆ ಜನ ಸೇರುತ್ತಿದ್ದಂತೆ ಕಿಡಿಗೇಡಿಗಳ ವಿರುದ್ಧ ಎಫ್‌ಐಆರ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಟ್ಯೂಶನ್ ಮುಗಿಸಿ ಹೋಗ್ತಿದ್ದ ಮಕ್ಕಳಿಗೆ ಗೂಡ್ಸ್ ವಾಹನ ಡಿಕ್ಕಿ – ಗಾಯಗೊಂಡಿದ್ದ ಮತ್ತೊಂದು ಬಾಲಕ ಸಾವು

    ಟ್ಯೂಶನ್ ಮುಗಿಸಿ ಹೋಗ್ತಿದ್ದ ಮಕ್ಕಳಿಗೆ ಗೂಡ್ಸ್ ವಾಹನ ಡಿಕ್ಕಿ – ಗಾಯಗೊಂಡಿದ್ದ ಮತ್ತೊಂದು ಬಾಲಕ ಸಾವು

    ರಾಮನಗರ: ಟ್ಯೂಶನ್ (Tuition) ಮುಗಿಸಿ ಮನೆಗೆ ಹೋಗುತ್ತಿದ್ದ ಮಕ್ಕಳಿಗೆ ಗೂಡ್ಸ್ ವಾಹನ (Goods Vehicle) ಡಿಕ್ಕಿ ಹೊಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಯಗೊಂಡಿದ್ದ ಮತ್ತೊಂದು ಬಾಲಕ ಸಾವನ್ನಪ್ಪಿದ ಘಟನೆ ರಾಮನಗರದಲ್ಲಿ (Ramanagara) ನಡೆದಿದೆ.

    ಸುಚಿತ್ (10) ಮೃತ ದುರ್ದೈವಿ. ರಾಮನಗರ ತಾಲೂಕಿನ ಗೊಲ್ಲರದೊಡ್ಡಿ ಗ್ರಾಮದಲ್ಲಿ ಅಪಘಾತ ನಡೆದಿದ್ದು, ಸಾವಿನ ಸಂಖ್ಯೆ ಒಟ್ಟು ಮೂರಕ್ಕೆ ಏರಿದೆ. ಆಗಸ್ಟ್ 9ರಂದು ಟ್ಯೂಶನ್ ಮುಗಿಸಿಕೊಂಡು ಐವರು ಮಕ್ಕಳು ಮನೆಗೆ ಹೋಗುತ್ತಿದ್ದ ಸಂದರ್ಭ ಗೂಡ್ಸ್ ವಾಹನ ಡಿಕ್ಕಿಯಾಗಿದ್ದು, ಇಬ್ಬರು ಸಾವನ್ನಪ್ಪಿದ್ದರು. ಇದನ್ನೂ ಓದಿ: ರಾತ್ರಿ ತಡವಾಗಿ ಬಂದ ಮಗನಿಗೆ ಬುದ್ಧಿವಾದ ಹೇಳಿದ ತಾಯಿ- ಮನನೊಂದು ಯುವಕ ಆತ್ಮಹತ್ಯೆ

    ಘಟನೆಯಿಂದ ಬದುಕುಳಿದ ಮೂವರು ಮಕ್ಕಳಿಗೆ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಈ ಪೈಕಿ ಸುಚಿತ್ ಗುರುವಾರ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಇನ್ನಿಬ್ಬರು ಮಕ್ಕಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಕೂಲಿ ಕಾರ್ಮಿಕನ ಕುಟುಂಬದ ಮೇಲೆ ಮೇಸ್ತ್ರಿಯಿಂದ ಮಾರಣಾಂತಿಕ ಹಲ್ಲೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಗೂಡ್ಸ್ ವಾಹನ ಡಿಕ್ಕಿಯಾಗಿ ಮಕ್ಕಳಿಬ್ಬರ ದುರ್ಮರಣ

    ಗೂಡ್ಸ್ ವಾಹನ ಡಿಕ್ಕಿಯಾಗಿ ಮಕ್ಕಳಿಬ್ಬರ ದುರ್ಮರಣ

    ರಾಮನಗರ: ಗೂಡ್ಸ್ ವಾಹನ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದ ಇಬ್ಬರು (Children) ಮಕ್ಕಳು ಸಾವಿಗೀಡಾಗಿದ್ದಾರೆ.

    ರಾಮನಗರ (Ramanagar) ತಾಲೂಕಿನ ಲಕ್ಷ್ಮೀಪುರ ಗ್ರಾಮದ ಬಳಿ ಟ್ಯೂಶನ್ ಮುಗಿಸಿ ಮನೆಗೆ ಹೊಗುತ್ತಿದ್ದಾಗ ಮಕ್ಕಳಿಗೆ ಗೂಡ್ಸ್ ವಾಹನ ಡಿಕ್ಕಿ ಹೊಡೆದಿತ್ತು. ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಐವರು ಮಕ್ಕಳನ್ನ ರಾಮನಗರದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆ ಕೊಡಿಸಲಾಗ್ತಿತ್ತು.

    ಆದರೆ ಚಿಕಿತ್ಸೆ ಫಲಿಸದೇ ರೋಹಿತ್ (5), ಶಾಲಿನಿ (8) ಮೃತಪಟ್ಟಿದ್ದಾರೆ. ಉಳಿದ ಸುಚಿತ್, ಗೌತಮಿ, ಲೇಖನಗೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಆಸ್ಪತ್ರೆಗೆ ಎಎಸ್ಪಿ ಸುರೇಶ್ ಭೇಟಿ, ಅಪಘಾತದ ಕುರಿತು ಮಾಹಿತಿ ಸಂಗ್ರಹಿಸಿದ್ದಾರೆ.  ಇದನ್ನೂ ಓದಿ: ಯುವತಿ ಮದ್ವೆಗೆ ಒಪ್ಪಿಲ್ಲ ಅಂತ 850 ಅಡಿಕೆ ಗಿಡ ನಾಶ ಮಾಡಿದ ಕಿರಾತಕ

    ಮಕ್ಕಳಿಗೆ ಗುದ್ದಿ ಎಸ್ಕೇಪ್ ಆಗಿದ್ದ ಗೂಡ್ಸ್ ವಾಹನ ಚಾಲಕ ತನ್ನ ವಾಹನವನ್ನ ಬೇರೆಡೆ ನಿಲ್ಲಿಸಿ ಎಸ್ಕೇಪ್ ಆಗಿದ್ದಾನೆ. ಈ ಸಂಬಂಧ ರಾಮನಗರ ಗ್ರಾಮಾಂತರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಿಂತಿದ್ದ ಟಾಟಾ ಏಸ್ ವಾಹನಕ್ಕೆ ಕಾರು ಡಿಕ್ಕಿ

    ನಿಂತಿದ್ದ ಟಾಟಾ ಏಸ್ ವಾಹನಕ್ಕೆ ಕಾರು ಡಿಕ್ಕಿ

    ಮಡಿಕೇರಿ: ತರಕಾರಿ ತುಂಬಿ ರಸ್ತೆ ಬದಿ ನಿಂತಿದ್ದ ಟಾಟಾ ಏಸ್ ವಾಹನಕ್ಕೆ ಕಾರು ಡಿಕ್ಕಿಯಾದ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಸುಂಟಿಕೊಪ್ಪ ಸಮೀಪದ 7ನೇ ಮೈಲಿ ಬಳಿ ಸಂಭವಿಸಿದೆ. ಅದೃಷ್ಟವಶಾತ್ ಎರಡೂ ವಾಹನಗಳಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಬೆಂಗಳೂರಿನಿಂದ ಮಡಿಕೇರಿ ಕಡೆಗೆ ತೆರಳುತ್ತಿದ್ದ ಮಾರುತಿ ಸುಜುಕಿ ಬಲೆನೋ ಕಾರು (ಕೆಎ13-ಪಿ.5434) ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ 7ನೇ ಮೈಲಿ ಬಳಿ, ತರಕಾರಿ ತುಂಬಿ ರಸ್ತೆ ಬದಿ ನಿಂತಿದ್ದ ಟಾಟಾ ಏಸ್ ವಾಹನಕ್ಕೆ ಡಿಕ್ಕಿಯಾಗಿದೆ. ಕಾರು ಡಿಕ್ಕಿಯಾದ ರಭಸಕ್ಕೆ ಟಾಟಾ ಏಸ್ ವಾಹನದಲ್ಲಿದ್ದ ತರಕಾರಿ ಚೆಲ್ಲಾಪಿಲಿಯಾಗಿ ರಸ್ತೆಗೆ ಬಿದ್ದಿವೆ.

    ಕಾರು ಅತೀ ವೇಗದಲ್ಲಿದ್ದ ಪರಿಣಾಮ ಎರಡು ಬಾರಿ ಪಲ್ಟಿಯಾಗಿ ರಸ್ತೆಗೆ ಬಿದ್ದಿದೆ. ಆದರೆ ವಾಹನದಲ್ಲಿದ್ದವರಿಗೆ ಸಣ್ಣ ಪ್ರಮಾಣದ ಗಾಯಗಳಿಂದ ಪಾರಾಗಿದ್ದಾರೆ. ಸುಂಟಿಕೊಪ್ಪ ಠಾಣಾಧಿಕಾರಿ ಪುನೀತ್ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

  • ಗೂಡ್ಸ್ ವಾಹನ ಚಾಲಕರಿಗೆ ಸರ್ಕಾರ ಸಹಾಯ ಮಾಡದಿದ್ದರೆ ಪ್ರತಿಭಟನೆಯ ಎಚ್ಚರಿಕೆ

    ಗೂಡ್ಸ್ ವಾಹನ ಚಾಲಕರಿಗೆ ಸರ್ಕಾರ ಸಹಾಯ ಮಾಡದಿದ್ದರೆ ಪ್ರತಿಭಟನೆಯ ಎಚ್ಚರಿಕೆ

    – ಪ್ಯಾಕೇಜ್ ಘೋಷಣೆಗೆ ಆಗ್ರಹ

    ನೆಲಮಂಗಲ: ರಾಜ್ಯ ಸರ್ಕಾರ ಗೂಡ್ಸ್ ವಾಹನ ಚಾಲಕರಿಗೆ ವಾಹನಗಳ ವಿಮಾಕಂತು ಹಾಗೂ ತೆರಿಗೆಗಳನ್ನು ಒಂದು ವರ್ಷ ಮುಂದೂಡುವ ಜೊತೆ ಚಾಲಕರಿಗೆ ಸಹಾಯವನ್ನು ಸರ್ಕಾರ ಮಾಡಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ ಮಾಡಲಾಗುವುದು ಎಂದು ಕರ್ನಾಟಕ ವಾಣಿಜ್ಯ ವಾಹನಗಳ ಮಾಲೀಕರು ಮತ್ತು ಚಾಲಕರ ಸಂಘ ಸಂಸ್ಥಾಪಕ ಅಧ್ಯಕ್ಷ ಎಂಪಿ ರವೀಶ್ ಎಚ್ಚರಿಕೆ ನೀಡಿದ್ದಾರೆ.

    ನೆಲಮಂಗಲ ಪೊಲೀಸ್ ಉಪವಿಭಾಗ ವ್ಯಾಪ್ತಿಯ ಮಾದವಾರದ ಬಳಿ ಕರ್ನಾಟಕ ವಾಣಿಜ್ಯ ವಾಹನಗಳ ಮಾಲೀಕರು ಮತ್ತು ಚಾಲಕರ ಸಂಘ ವತಿಯಿಂದ ಗೂಡ್ಸ್ ವಾಹನಗಳ ಚಾಲಕರಿಗೆ ಆಹಾರ ಪ್ಯಾಕೇಟ್ ನೀಡಿ ಮಾತನಾಡಿದ ಎಂಪಿ ರವೀಶ್, ಕೊರೊನಾ ಸಂಕಷ್ಟದಲ್ಲಿ ವೈದ್ಯಕೀಯ ಸಲಕರಣೆಗಳು, ದಿನಸಿ ಸಾಮಗ್ರಿಗಳು ಸೇರಿದಂತೆ ಪ್ರತಿಯೊಂದು ಸಾಮಗ್ರಿಗಳನ್ನು ಸಾಗಿಸುವ ಕೆಲಸ ನಾವು ಮಾಡುತ್ತಿದ್ದೇವೆ. ಈಗಾಗಲೇ ಅನೇಕ ಚಾಲಕರು ಕೊರೊನಾ ಸೋಂಕಿನಿಂದ ನಲುಗುತ್ತಿದ್ದಾರೆ. ಸರಿಯಾದ ಬಾಡಿಗೆಗಳು ಸಿಗದೇ ಗೂಡ್ಸ್ ವಾಹನಗಳು ನಷ್ಟ ಅನುಭವಿಸುತ್ತಿದ್ದು ಸರ್ಕಾರ ನಮ್ಮ ವಾಹನಗಳ ಇಎಮ್‍ಐ ಪಾವತಿಯಲ್ಲಿ ವಿನಾಯಿತಿ, ವಿಮಾಕಂತು ಹಾಗೂ ತೆರಿಗೆಯನ್ನು ಒಂದು ವರ್ಷ ಮುಂದೂಡಬೇಕೆಂದು ಆಗ್ರಹಿಸಿದರು. ಇದನ್ನೂ ಓದಿ: ಪಬ್ಲಿಕ್ ಟಿವಿ ಇಂಪ್ಯಾಕ್ಟ್ – ಕಾಸು ಕೊಟ್ರೆ ಡೆತ್ ಸರ್ಟಿಫಿಕೇಟ್ ಡೀಲ್ ತನಿಖೆಗೆ ಅಶೋಕ್ ಆರ್ಡರ್!

    ಗೂಡ್ಸ್ ವಾಹನ ಮಾಲೀಕರು ಹಾಗೂ ಚಾಲಕರ ಕಷ್ಟಕ್ಕೆ ಸರ್ಕಾರ ಸ್ಪಂದನೆ ನೀಡಬೇಕು, ನಮ್ಮ ಬೇಡಿಕೆಯ ಮನವಿ ಸ್ಪಂದನೆ ಸಿಗದಿದ್ದರೇ ರಾಜ್ಯಾದ್ಯಂತ ಗೂಡ್ಸ್ ವಾಹನಗಳನ್ನು ಸ್ಥಗಿತಗೊಳಿಸಿ ಹೋರಾಟ ಮಾಡಲಾಗುತ್ತದೆ ಎಂದರು. ಮಾದವರದ ಬಳಿ ಬೆಂಗಳೂರು ಹಾಗೂ ನೈಸ್ ರಸ್ತೆಯ ಮೂಲಕ ಹೋಗುವ ಗೂಡ್ಸ್ ವಾಹನಗಳ ಚಾಲಕರಿಗೆ ಕರ್ನಾಟಕ ವಾಣಿಜ್ಯ ವಾಹನಗಳ ಮಾಲೀಕರು ಮತ್ತು ಚಾಲಕರ ಸಂಘದಿಂದ ಒಂದು ಸಾವಿರದಷ್ಟು ನೀರಿನ ಬಾಟಲ್, ಆಹಾರದ ಪ್ಯಾಕೇಟ್ ಹಾಗೂ ಮಾಸ್ಕ್, ಸ್ಯಾನಿಟೈಸರ್ ನೀಡಲಾಯಿತು. ಈ ಸಂದರ್ಭದಲ್ಲಿ ಸಂಘದ ಗೌರವ ಅಧ್ಯಕ್ಷ ಹೆಚ್.ವಿಜಯಕುಮಾರ್, ರಾಜ್ಯಾಧ್ಯಕ್ಷ ಎಂ.ಮುನಿಕೃಷ್ಣ, ಉಪಾಧ್ಯಕ್ಷ ಕುಪ್ಪುಸ್ವಾಮಿ, ರಾಜ್ಯ ಸಹಕಾರ್ಯದರ್ಶಿ ರಮೇಶ್ ಮತ್ತಿತರರಿದ್ದರು.

  • ಶೂಟಿಂಗ್ ಮುಗಿಸಿ ಬರ್ತಿದ್ದ ರಂಜನಿ ರಾಘವನ್‍ಗೆ ರಾತ್ರಿ ಏನಾಯ್ತಂತೆ ಗೊತ್ತಾ?

    ಶೂಟಿಂಗ್ ಮುಗಿಸಿ ಬರ್ತಿದ್ದ ರಂಜನಿ ರಾಘವನ್‍ಗೆ ರಾತ್ರಿ ಏನಾಯ್ತಂತೆ ಗೊತ್ತಾ?

    ಬೆಂಗಳೂರು: ಕನ್ನಡತಿ ಧಾರಾವಾಹಿ ಖ್ಯಾತಿಯ ನಟಿ ರಂಜನಿ ರಾಘವನ್‍ರವರು ಶೂಟಿಂಗ್ ಮುಗಿಸಿ ಬರುತ್ತಿದ್ದ ವೇಳೆ ನಿನ್ನೆ ರಾತ್ರಿ ತಮಗಾದ ಅನುಭವವನ್ನು ವೀಡಿಯೋ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ವೀಡಿಯೋದಲ್ಲಿ ನಟಿ ರಂಜನಿ ರಾಘವನ್‍ ಕತ್ತಲಿನಲ್ಲಿ ಗೂಡ್ಸ್ ಗಾಡಿ ಹತ್ತಿ, ಸುಂದರವಾಗಿ ಕಾಣಿಸುತ್ತಿದ್ದ ಲೈಟಿಂಗ್‍ನನ್ನು ತೋರಿಸುತ್ತಾ, ಈ ವೀಡಿಯೋವನ್ನು ನೋಡುತ್ತಿರುವವರಿಗೆ ನನ್ನ ತಲೆಯಲ್ಲಿ ಏನು ಓಡುತ್ತಿದೆ ಎಂಬುವುದನ್ನು ಲೇಟಾಗಿ ಹೇಳುತ್ತೇನೆ. ನಾನು ಒಳಗೆ ಭಯದಿಂದ ಒದ್ದಾಡುತ್ತಿದ್ದೇನೆ. ಆದರೆ ಮೇಲ್ನೋಟಕ್ಕೆ ಹೊರಗಡೆ ನಗುತ್ತಿದ್ದೇನೆ ಎಂದು ಹೇಳಿದ್ದಾರೆ.

    ನಂತರ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಈ ವೀಡಿಯೋವನ್ನು ಶೇರ್ ಮಾಡಿಕೊಂಡಿದ್ದು, ಇದು ನೈಜ ಘಟನೆ ಆಧರಿತ ಥ್ರಿಲ್ಲರ್ ಕತೆ! ಇದರಲ್ಲಿ ಬರುವ ಎಲ್ಲಾ ಪಾತ್ರಗಳು ಕಾಲ್ಪನಿಕವಲ್ಲ, ನಮ್ಮ ಅನುಭವ. ಇದಕ್ಕೆ ಈ ವೀಡಿಯೋ ಸಾಕ್ಷಿ ಎಂದು ನಟಿ ರಂಜನಿ ಕ್ಯಾಪ್ಷನ್‍ನಲ್ಲಿ ಬರೆಯುವ ಮೂಲಕ ಕಥೆ ಹೇಳಲು ಆರಂಭಿಸಿದ್ದಾರೆ. ಇದನ್ನು ಓದಿ: ಕ್ರೇಜಿಸ್ಟಾರ್‌ಗೆ 59ನೇ ಜನ್ಮದಿನದ ಸಂಭ್ರಮ – ಪ್ರೀತಿಯ ಅಪ್ಪನಿಗೆ ಮನೋರಂಜನ್‍ನಿಂದ ವಿಶ್

    ರಂಜನಿ ಹೇಳಿದ್ದು ಏನು?
    ಜೊತೇಲಿದ್ದೋನಿಗೆ ನನ್ನ ಭಯ ಗೊತ್ತಾಗ್ದೇ ಇರ್ಲಿ ಅಂತ ಇಂಗ್ಲೀಶ್‍ನಲ್ಲಿ ಮಾತಾಡಿರೋದು, ಬೈಕೋಬೇಡಿ!

    ಏನಾಯ್ತು ಗೊತ್ತಾ? ಇವತ್ತು ರಾಮೋಜಿ ಫಿಲ್ಮ್ ಸಿಟಿಯಲ್ಲಿ ಶೂಟಿಂಗ್ ಬೇಗ ಮುಗಿದಿತ್ತು. ನಮ್ ಟೀಮ್ ದಿನ್ನೂ ಶೂಟ್ ಮುಗ್ದಿರ್ಲಿಲ್ಲ (ಅಂದ್ರೆ ನಮ್ ಸೀನ್ಸ್ ಮುಗ್ದಿತ್ತು ಪ್ಯಾಕ್ ಅಪ್ ಆಗಿರ್ಲಿಲ್ಲ) ಎಲ್ಲಾರೂ ಬರುವುದಕ್ಕೆ ಇನ್ನೂ ಸಮಯ ಇತ್ತು, ಒಟ್ಟಿಗೆ ವಾಪಸ್ ಹೋಟೆಲ್‍ಗೆ ಹೋಗೋಕೆ ಕಾಯ್ತಾ ಹಾಗೇ ಏನೋ ಮಾತಾಡ್ತಾ ಕೂತಿದ್ದೆ. “ಹೇ ಗಾಡಿ ಇದೆ ಬರ್ತೀರಾ?” ಎಂದು ಕಿರಣ್ ರಾಜ್ ಕೇಳಿದರು. ನೋಡಿದರೆ ಒಂದು ಲಗೇಜ್ ಗಾಡಿ ನಿಂತಿತ್ತು, ಇದರಲ್ಲಿ ಹೋಗೋಣ ಮಜಾ ಇರುತ್ತೆ ಅಂತ ನಾನು ಏನೂ ಯೋಚನೆ ಮಾಡದೇ ಗಾಡಿ ಹತ್ತಿದೆ.

    ಸಾರಾ ಅಣ್ಣಯ್ಯ ಕೂಡ ಆಲ್ ರೆಡಿ ಗಾಡಿ ಹತ್ತಿದ್ರು. ಬೇಗ ರೂಮ್ ತಲುಪುತ್ತೇವೆ, ಸುತ್ತ ಮುತ್ತ ಜಾಗನ ಓಪನ್ ಗಾಡೀಲಿ ಎಕ್ಸ್ಪ್ಲೋರ್ ಮಾಡ್ಬೋದು ಅಂತ ಜೋಶ್ ಅಲ್ಲಿ ಹೊರಟ್ವಿ. ಗಾಡಿ ಗಡ ಗಡ ಅಂತ ಶಬ್ದ ಮಾಡ್ತಾ ಸೆಟ್ ಇಂದ ಒಂದೆರಡು ಕಿಲೋ ಮೀಟರ್ ದೂರ ಬಂತು. “ಏನ್ ಗೊತ್ತಾ? ಇವ್ರು ಎಲ್ಲಿಗ್ ಕಕೊರ್ಂಡ್ ಹೋಗ್ತಿದ್ದಾರೆ? ನನ್ ಮೈಮೇಲೇ ಮಿನಿಮಮ್ ಮೂರು ಲಕ್ಷ ಚಿನ್ನ ಇದೆ” ಕಿರಣ್ ಗುಟ್ಟಾಗಿ ಹೇಳಿದ್ ತಕ್ಷಣ ನನ್ ಎದೆ ಧಸಕ್ ಅನಿಸಿತು. ನೋಡಿದರೆ ಗಾಡಿ ಎಲ್ಲೋ ಆಫ್ ರೋಡ್ ಹೋಗ್ತಿದೆ. ಗಾಡಿಯಲ್ಲಿ ಒಬ್ಬ ಕನ್ನಡ ಮಾತಾಡೋನಿದ್ದ ಅಂತ ಅವನ ಹತ್ತಿರ ಮಾತಾಡಿಕೊಂಡು ಹೊರಟಿದ್ವಿ ನೋಡಿದ್ರೆ ಸ್ವಲ್ಪ ಹೊತ್ತಿನ ಮೇಲೆ ಗೊತ್ತಾಯ್ತು ಅವನು ಕುಡಿದಿದ್ದ ಅಂತ. ಇದನ್ನು ಓದಿ: ಶಿವರಾಜ್‍ಕುಮಾರ್ ಬಳಿ ಸಹಾಯಕ್ಕೆ ಅಂಗಲಾಚಿದ ನಟಿ ವಿಜಯಲಕ್ಷ್ಮಿ

    ರಾಮೋಜಿ ಫಿಲ್ಮ್ ಸಿಟಿಯ ಮಾಮೂಲಿ ರೋಡ್ ಬಿಟ್ಟು ಕತ್ತಲೇಲಿ ನಮ್ಮನ್ನ ಎಲ್ಲಿಗೆ ಕಕೊರ್ಂಡ್ ಹೋಗ್ತಿದ್ದಾರೆ? ಮುಂದೆ ಕೂತಿರೋ ಡ್ರೈವರ್ ಗೊತ್ತಿರೀದಿರ್ಲಿ ಅವರ ಮುಖಾನೂ ನೋಡಿಲ್ಲ! ನಮೆಗೇನಾದ್ರು ಮಾಡ್ಬಿಡ್ತಾರಾ? ಹೊರ ರಾಜ್ಯದಲ್ಲಿ, ಗೊತ್ತಿಲ್ದೇರೋ ಗಾಡೀಲಿ ಗೊತ್ತೂ ಗುರಿ ಇಲ್ದೇ ಹೊರಟಿದ್ದೀವಿ, ಏನಪ್ಪಾ ಗತಿ ಅಂತ ಹೆದರಿಕೊಂಡು ಈ ವಿಡಿಯೋ ಮಾಡಿದ್ದು, ಕ್ರೈಮ್ ಇನ್ವೆಸ್ಟಿಗೇಶನ್ ನಡೀವಾಗ ಪ್ರೂಫ್‍ಗೇ ಅಂತ ವೀಡೀಯೋ ಸಿಗುತ್ತಲ್ಲ? ಆತರ! ಟೈಟಲ್ ಕಾರ್ಡ್ ಚೇಂಜ್ ಮಾಡಿ ಅಂತ ಎಲ್ರೂ ಕೇಳ್ತಿದ್ರು, ಟೈಟಲ್ ಕಾರ್ಡ್ ಅಲ್ಲಿರೋರನ್ನ ಚೇಂಜ್ ಮಾಡೋ ಪರಿಸ್ಥಿತಿ ತಂದುಕೊಂಡು ಬಿಟ್ವಾ ಗುರು ಅಂತ ಹೆವೀ ಭಯ ಆಯ್ತು. ಮುಂದೇನಾಯ್ತು? ಭಾಗ ಎರಡರಲ್ಲಿ ನಿರೀಕ್ಷಿಸಿ! ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.

    ಒಟ್ಟಾರೆ ಈ ಸಸ್ಪೆನ್ಸ್ ಥ್ರಿಲ್ಲರ್ ಸ್ಟೋರಿ ಇಲ್ಲಿಗೆ ಮುಗಿದಿಲ್ಲ ಇದರ ಮುಂದುವರೆದ ಭಾಗ ಇನ್ನೂ ಇದೆ ಎಂದು ರಂಜನಿ ರಾಘವನ್ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದಾರೆ. ಸದ್ಯ ಈ ಕಥೆಯ ಮುಂದುವರೆದ ಭಾಗದಲ್ಲಿ ಏನು ಹೇಳಬಹುದು ಎಂದು ಕಾದುನೋಡಬೇಕಾಗಿದೆ.

  • ಅಂಬುಲೆನ್ಸ್ ಸಿಗದೇ ಗೂಡ್ಸ್ ವಾಹನದಲ್ಲಿ ಮಹಿಳೆಯನ್ನು ಹೊತ್ತೊಯ್ದ ಕುಟುಂಬಸ್ಥರು

    ಅಂಬುಲೆನ್ಸ್ ಸಿಗದೇ ಗೂಡ್ಸ್ ವಾಹನದಲ್ಲಿ ಮಹಿಳೆಯನ್ನು ಹೊತ್ತೊಯ್ದ ಕುಟುಂಬಸ್ಥರು

    ಬೆಂಗಳೂರು: ಅಂಬ್ಯುಲೆನ್ಸ್ ಸಿಗದೇ ಗೂಡ್ಸ್ ವಾಹನದಲ್ಲಿ ಆಕ್ಸಿಜನ್ ಹಾಕಿ ಮಹಿಳೆಯನ್ನು ಮಲಗಿಸಿಕೊಂಡು ಆಸ್ಪತ್ರೆಗೆ ಕರೆದೊಯ್ದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

     

    ಸದ್ಯ ಬೆಂಗಳೂರಿನ ರಾಮಚಂದ್ರಪುರದ ಮಹಿಳೆಯೊಬ್ಬರಿಗೆ ಐಸಿಯುನಲ್ಲಿ ಸರಿಯಾಗಿ ಬೆಡ್ ಸಿಗಲಿಲ್ಲ ಹಾಗೂ ಸರಿಯಾದ ಸಮಯಕ್ಕೆ ಅಂಬುಲೆನ್ಸ್ ಕೂಡ ಸಿಗಲಿಲ್ಲ. ಹೀಗಾಗಿ ಕುಟುಂಬಸ್ಥರು ಸಿಕ್ಕ ಗೂಡ್ಸ್ ವಾಹನದಲ್ಲಿ ಮಹಿಳೆಯನ್ನು ಮಲಗಿಸಿಕೊಂಡು ಏರ್ ಪೋರ್ಟ್ ರಸ್ತೆಯಲ್ಲಿರುವ ದೇವನಹಳ್ಳಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

    ಸದ್ಯ ಮಹಿಳೆಗೆ ಅಂಬುಲೆನ್ಸ್ ಸಿಗದೇ ಗೂಡ್ಸ್ ಗಾಡಿಯಲ್ಲಿ ಕುಟುಂಬಸ್ಥರು ಕರೆದೊಯ್ಯುತ್ತಿರುವ ಮನಕಲಕುವ ದೃಶ್ಯ ಕ್ಯಾಮೆರದಲ್ಲಿ ಸೆರೆಯಾಗಿದ್ದು, ನೋಡಿದವರ ಕರುಳು ಹಿಂಡುವಂತಿದೆ.

  • ಅವಾಚ್ಯ ಪದಗಳಿಂದ ನಿಂದಿಸಿದ ಪಿಎಸ್‍ಐಗೆ ಚಾಲಕನಿಂದ ತರಾಟೆ

    ಅವಾಚ್ಯ ಪದಗಳಿಂದ ನಿಂದಿಸಿದ ಪಿಎಸ್‍ಐಗೆ ಚಾಲಕನಿಂದ ತರಾಟೆ

    ಹುಬ್ಬಳ್ಳಿ: ಅವಾಚ್ಯ ಪದಗಳಿಂದ ನಿಂದಿಸಿದ ಪಿಎಸ್‍ಐಯೊಬ್ಬರಿಗೆ ವಾಹನ ಚಾಲಕನೋರ್ವ ನಡು ರಸ್ತೆಯಲ್ಲಿಯೇ ತರಾಟೆಗೆ ತಗೆದುಕೊಂಡಿರುವ ಪ್ರಸಂಗ ಧಾರವಾಡ ಜಿಲ್ಲೆಯಲ್ಲಿ ನಡೆದಿದೆ.

    ಕುಂದಗೋಳ ಠಾಣೆಯ ಪಿಎಸ್‍ಐ ವಿ.ಡಿ.ಪಾಟೀಲ್ ಅವರು ಗೂಡ್ಸ್ ವಾಹನ ತಡೆದು ಪರಿಶೀಲನೆ ನಡೆಸಿದ್ದರು. ಚಾಲಕ ರಾಘವೇಂದ್ರ ಎಲ್ಲಾ ದಾಖಲೆಗಳನ್ನು ಹೊಂದಿದ್ದರೂ ಸಮವಸ್ತ್ರ ಇಲ್ಲ ಎಂದು ಪಿಎಸ್‍ಐ 200 ರೂ. ದಂಡ ಹಾಕಿದ್ದಾರೆ. ಇದಕ್ಕೆ ಚಾಲಕ ರಾಘವೇಂದ್ರ ವಿರೋಧ ವ್ಯಕ್ತಪಡಿಸಿದ್ದರಿಂದ ಕೋಪಗೊಂಡ ವಿ.ಡಿ.ಪಾಟೀಲ್ ಅವರು ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ಇದನ್ನೂ ಓದಿ: ಸರ್ಕಾರ ಸೂಚನೆ ಕೊಟ್ಟರೂ ಹೊಸ ಟ್ರಾಫಿಕ್ ದಂಡವೇ ಪ್ರಯೋಗ!

    ಪಿಎಸ್‍ಐ ಅವರ ವರ್ತನೆಯಿಂದ ರಾಘವೇಂದ್ರ ಕುಪಿತಗೊಂಡು, ನನಗೆ 200 ರೂ. ದಂಡ ಹಾಕಿದಲ್ಲದೇ ಅವಾಚ್ಯ ಪದಗಳಿಂದ ಯಾಕೆ ನಿಂದಿಸಿದ್ದೀರಿ? ಸಾರ್ವಜನಿಕರಿಗೆ ಹೀಗೆ ಬೈಯಲು ನೀವ್ಯಾರು? ಎಂದು ಹಿಗ್ಗಾಮುಗ್ಗಾ ತರಾಟೆಗೆ ತಗೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ ಅವಾಚ್ಯ ಪದಗಳಿಂದ ನಿಂದಿಸಿದಕ್ಕೆ ಕ್ಷಮೆ ಕೇಳುವಂತೆ ಚಾಲಕ ಪಟ್ಟು ಹಿಡಿದ್ದಾರೆ.

    ರಾಘವೇಂದ್ರ ಅವರ ಜೊತೆಗಿದ್ದ ವ್ಯಕ್ತಿಯೊಬ್ಬರು ಈ ದೃಶ್ಯವನ್ನು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದು, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದಕ್ಕೆ ಪ್ರತಿಯಾಗಿ ಪೊಲೀಸ್ ಸಿಬ್ಬಂದಿ ಕೂಡ ದೃಶ್ಯವನ್ನು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ.

  • ಕುರಿಗಳಂತೆ ಮಕ್ಕಳನ್ನು ತುಂಬಿ ಗೂಡ್ಸ್ ಟೆಂಪೋದಲ್ಲಿ ಸ್ಕೂಲ್ ಟ್ರಿಪ್!

    ಕುರಿಗಳಂತೆ ಮಕ್ಕಳನ್ನು ತುಂಬಿ ಗೂಡ್ಸ್ ಟೆಂಪೋದಲ್ಲಿ ಸ್ಕೂಲ್ ಟ್ರಿಪ್!

    ಬೆಂಗಳೂರು: ಗೂಡ್ಸ್ ಟೆಂಪೋದಲ್ಲಿ ಬೆಂಗಳೂರಿನ ಶಾಲೆಯೊಂದು ಮಕ್ಕಳನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದು ಚರ್ಚೆಗೆ ಗ್ರಾಸವಾಗಿದೆ.

    ನಗರದ ಬನಶಂಕರಿ ಮೂರನೇ ಹಂತದಲ್ಲಿರುವ ಇಟ್ಟುಮಡುವಿನ ಎಸ್.ಎಂ ಅಕಾಡೆಮಿಗೆ ಸೇರಿದ ವಿವೇಕಾನಂದ ವಿದ್ಯಾಲಯ ಶಾಲಾ ಮಕ್ಕಳನ್ನು ಫ್ರೀಡಂ ಪಾರ್ಕಿಗೆಂದು ಟ್ರಿಪ್ ಕರೆದುಕೊಂಡು ಹೋಗಿದ್ದಾರೆ.

    ಬಸ್, ವ್ಯಾನಿನಲ್ಲಿ ಟ್ರಿಪ್ ಕರೆದುಕೊಂಡು ಹೋಗುವ ಬದಲು ಗೂಡ್ಸ್ ಟೆಂಪೋದಲ್ಲಿ ವಿದ್ಯಾರ್ಥಿಗಳನ್ನು ತುಂಬಿ ಪ್ರವಾಸ ಮಾಡಿದ್ದಾರೆ. ಎರಡು ಹಳೆ ಕಾಲದ ಟೆಂಪೋ ಹಾಗೂ ಒಂದು ಟಾಟಾ ಏಸ್ ಗಾಡಿನಲ್ಲಿ ಕುರಿಗಳಂತೆ 150 ಮಕ್ಕಳನ್ನು ತುಂಬಿದ್ದಾರೆ.

    ಈ ದೃಶ್ಯವನ್ನು ನೋಡಿದ ಸಾರ್ವಜನಿಕರು, ಪ್ರವಾಸದ ಸಮಯದಲ್ಲಿ ಒಂದು ವೇಳೆ ಏನಾದರೂ ಹೆಚ್ಚು ಕಡಿಮೆ ಆಗಿದ್ದರೆ ಅದಕ್ಕ ಹೊಣೆ ಯಾರು ಎಂದು ಪ್ರಶ್ನಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv