Tag: Goods train

  • ಅಂಗಡಿಗಳಿಗೆ ಗೂಡ್ಸ್ ರೈಲು ಡಿಕ್ಕಿ – ಕಾಂಪೌಂಡ್ ಛಿದ್ರ, 10 ಅಡಿ ದೂರ ಸರಿದ ಬುಕ್‍ಸ್ಟಾಲ್

    ಅಂಗಡಿಗಳಿಗೆ ಗೂಡ್ಸ್ ರೈಲು ಡಿಕ್ಕಿ – ಕಾಂಪೌಂಡ್ ಛಿದ್ರ, 10 ಅಡಿ ದೂರ ಸರಿದ ಬುಕ್‍ಸ್ಟಾಲ್

    ಯಾದಗಿರಿ: ಗೂಡ್ಸ್ ರೈಲೊಂದು ಹಳಿ ಬಿಟ್ಟು ಪ್ಲಾಟ್‍ಫಾರ್ಮ್ ಮೇಲೆ ಬಂದ ಘಟನೆ ಯಾದಗಿರಿ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ರೈಲು ಗುದ್ದಿದ ರಭಸಕ್ಕೆ ನಿಲ್ದಾಣದ ಕಾಂಪೌಂಡ್ ಛಿದ್ರ ಛಿದ್ರವಾಗಿದ್ದು, ಅಂಗಡಿ ಹಾಗೂ ಬುಕ್ ಸ್ಟಾಲ್‍ಗೆ ಹಾನಿಯಾಗಿದೆ.

    ರೈಲಿನಿಂದ ಗೂಡ್ಸ್ ಖಾಲಿ ಮಾಡುವಾಗ ಈ ಘಟನೆ ನಡೆದಿದೆ. ಲೊಕೋ ಪೈಲಟ್ ರೈಲನ್ನು ರಿವರ್ಸ್ ತರುತ್ತಿದ್ದಾಗ ರೈಲು ಹಳಿ ದಾಟಿ ಪ್ಲಾಟ್‍ಫಾರ್ಮ್ ಮೇಲೆ ಬಂದಿದೆ. ಹಿಂಬದಿಯಿಂದ ನಿಲ್ದಾಣದ ಕಾಂಪೌಂಡ್‍ಗೆ ಡಿಕ್ಕಿ ಹೊಡೆದು, ಬಳಿಕ ಪ್ಲಾಟ್‍ಫಾರ್ಮ್ ಮೇಲಿದ್ದ ಬುಕ್ ಸ್ಟಾಲ್‍ಗೆ ರೈಲು ಡಿಕ್ಕಿ ಹೊಡೆದಿದೆ. ಪರಿಣಾಮ ಕಾಂಪೌಂಡ್ ಒಡೆದು ಬಿದ್ದಿದ್ದು, ಇದ್ದ ಸ್ಥಳದಿಂದ ಸುಮಾರು 10 ಅಡಿ ದೂರಕ್ಕೆ ಬುಕ್ ಸ್ಟಾಲ್ ಅನ್ನು ರೈಲು ತಳ್ಳಿದೆ.

    ಅದೃಷ್ಟವಶಾತ್ ಘಟನೆ ವೇಳೆ ಅಂಗಡಿಯಲ್ಲಿ ಯಾರು ಇರಲಿಲ್ಲ. ಹಾಗೂ ಪ್ರಯಾಣಿಕರು ಕೂಡ ಸ್ಥಳದಲ್ಲಿ ಇರಲಿಲ್ಲ. ಹೀಗಾಗಿ ಯಾವುದೇ ಪ್ರಾಣಹಾನಿಯಾಗಿಲ್ಲ. ಘಟನಾ ಸ್ಥಳದಲ್ಲಿ ಯಾವುದೇ ಸಿಗ್ನಲ್ ಹಾಗೂ ಸ್ಟಾಪ್ ಪಾಯಿಂಟ್ ಇಲ್ಲದಿರುವುದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಸದ್ಯ ಸ್ಥಳಕ್ಕೆ ಗುಂತಕಲ್ ರೈಲ್ವೆ ವಿಭಾಗದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಗೂಡ್ಸ್ ರೈಲಿನ ಅಡಿ ಮಲಗಿ ಪ್ರಾಣ ಉಳಿಸಿಕೊಂಡ- ವೈರಲ್ ವಿಡಿಯೋ ನೋಡಿ

    ಗೂಡ್ಸ್ ರೈಲಿನ ಅಡಿ ಮಲಗಿ ಪ್ರಾಣ ಉಳಿಸಿಕೊಂಡ- ವೈರಲ್ ವಿಡಿಯೋ ನೋಡಿ

    ಅಮರಾವತಿ: ಗೂಡ್ಸ್ ರೈಲಿನ ಅಡಿ ಮಲಗಿ ವ್ಯಕ್ತಿಯೊಬ್ಬರು ತನ್ನ ಪ್ರಾಣವನ್ನು ಉಳಿಸಿಕೊಂಡ ಘಟನೆ ಆಂಧ್ರಪ್ರದೇಶದ ಅನಂತಪುರ ರೈಲು ನಿಲ್ದಾಣದಲ್ಲಿ ನಡೆದಿದೆ.

    ಶನಿವಾರ ರೈಲು ನಿಲ್ದಾಣದಲ್ಲಿ ಲಕ್ನೋ-ಯಶವಂತಪುರ ಟ್ರೈನ್‍ನಿಂದ ಇಳಿದ ಅಪರಿಚಿತ ವ್ಯಕ್ತಿಯೊಬ್ಬರು, ತಮ್ಮ 2ನೇ ಪ್ಲಾಟ್ ಫಾರಂನಿಂದ 1ನೇ ಪ್ಲಾಟ್ ಫಾರಂಗೆ ಹೋಗಲು ಮೇಲುಸೇತುವೆಯನ್ನು ಬಳಸದೇ, ರೈಲ್ವೇ ಹಳಿಗಳನ್ನು ದಾಟುವ ಯತ್ನ ಮಾಡುತ್ತಿದ್ದರು. ಈ ವೇಳೆ ಅದೇ ಮಾರ್ಗವಾಗಿ ಗೂಡ್ಸ್ ರೈಲು ಬಂದಿದೆ.

    ತಾನಿದ್ದ ಹಳಿಯಲ್ಲೇ ರೈಲು ಬರುತ್ತಿರುವುದನ್ನು ಅರಿತ ವ್ಯಕ್ತಿ ಧೃತಿಗೆಡದೇ ಟ್ರಾಕ್ ಮೇಲೆಯೇ ಮಲಗಿದ್ದಾರೆ. ನಂತರ ಗೂಡ್ಸ್ ರೈಲು ಆ ವ್ಯಕ್ತಿಯ ಮೇಲೆ ಹರಿದು ಹೋಗಿದೆ. ರೈಲು ಹೋದ ಬಳಿಕ ತನ್ನಪಾಡಿಗೆ ತಾನು ಎದ್ದು, ಏನೂ ಆಗದಂತೆ ವ್ಯಕ್ತಿ ಹೋಗಿದ್ದಾನೆ. ಇದನ್ನು ಪ್ರಯಾಣಿಕರೊಬ್ಬರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.

    ಅನಂತಪುರ ರೈಲ್ವೇ ಪೊಲೀಸರು ಪ್ರತಿಕ್ರಿಯಿಸಿ, ವ್ಯಕ್ತಿಯೊಬ್ಬರು ರೈಲ್ವೇ ಹಳಿಯನ್ನು ದಾಟುತ್ತಿರುವಾಗ ಏಕಾಏಕಿ ಗೂಡ್ಸ್ ರೈಲು ಆಗಮಿಸಿತ್ತು. ಈ ವೇಳೆ ವ್ಯಕ್ತಿ ಹಳಿ ಮೇಲೆಯೇ ಮಲಗಿಕೊಂಡು, ಆಗಬಹುದಾಗಿದ್ದ ಅನಾಹುತದಿಂದ ಪಾರಾಗಿದ್ದಾರೆ. ಆದರೆ ಈ ಬಗ್ಗೆ ರೈಲ್ವೇ ನಿಲ್ದಾಣದಲ್ಲಿದ್ದ ಯಾವುದೇ ಪ್ರಯಾಣಿಕರು ನಮ್ಮ ಗಮನಕ್ಕೆ ತಂದಿರಲಿಲ್ಲ. ವಿಡಿಯೋ ವೈರಲ್ ಬಳಿಕ ಮಾಹಿತಿ ಲಭಿಸಿದೆ. ಈ ಘಟನೆ ಶನಿವಾರ ನಡೆದಿದೆ. ಪ್ರಯಾಣಿಕ ಹಳಿಯನ್ನು ದಾಟುವುದಕ್ಕೆ ಮೇಲುಸೇತುವೆಯನ್ನು ಬಳಸದೇ ಇರುವುದೇ ಕಾರಣ ಎಂದು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಕಾರವಾರದಲ್ಲಿ ಹಳಿತಪ್ಪಿತ್ತು ರೇಷನ್ ಹೊತ್ತ ಗೂಡ್ಸ್ ರೈಲು

    ಕಾರವಾರದಲ್ಲಿ ಹಳಿತಪ್ಪಿತ್ತು ರೇಷನ್ ಹೊತ್ತ ಗೂಡ್ಸ್ ರೈಲು

    ಕಾರವಾರ: ಆಂಧ್ರದಿಂದ ಕಾರವಾರಕ್ಕೆ ರೇಷನ್ ತರುತಿದ್ದ ಗೂಡ್ಸ್ ರೈಲೊಂದು ನಿಲ್ದಾಣದ ವಾಕ್ ಪಾತ್ ಗೆ ಡಿಕ್ಕಿ ಹೊಡೆದು ಹಳಿತಪ್ಪಿ ನೆಲಕ್ಕೆ ಕುಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ರೈಲ್ವೇ ನಿಲ್ದಾಣದಲ್ಲಿ ನೆಡೆದಿದೆ.

    ಮಂಗಳವಾರ ಮಧ್ಯರಾತ್ರಿ ವೇಳೆ ಆಂಧ್ರದಿಂದ ಕಾರವಾರ ರೈಲ್ವೇ ನಿಲ್ದಾಣಕ್ಕೆ ಆಗಮಿಸಿದ್ದ ಗೂಡ್ಸ್ ರೈಲು ನಿಲ್ದಾಣದಲ್ಲಿ ನಿಲ್ಲಿಸುವ ವೇಳೆ ಈ ಘಟನೆ ನೆಡೆದಿದೆ. ಅಪಘಾತದಿಂದ ನಿಲ್ದಾಣದ ವಾಕ್ ಪಾತ್ ಸಂಪೂರ್ಣ ಹಾಳಾಗಿದ್ದು ಡಿಕ್ಕಿ ಹೊಡೆದ ರಭಸಕ್ಕೆ ಬೊಗಿ ಹಳಿತಪ್ಪಿ ನೆಲಕ್ಕೆ ಕುಸಿದಿದೆ.

    ಸ್ಥಳಕ್ಕೆ ರೈಲ್ವೆ ಪೊಲೀಸರು ಹಾಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನೆಡೆಸಿದ್ದಾರೆ.

  • ಟ್ರ್ಯಾಕ್ ದಾಟಲು ವೃದ್ಧ ಗೂಡ್ಸ್ ರೈಲಿನ ಕೆಳಗೆ ನುಗ್ಗಿದ ತಕ್ಷಣ ಚಲಿಸಲು ಶುರುವಾಯ್ತು ರೈಲು – ಮುಂದೇನಾಯ್ತು? ವಿಡಿಯೋ ನೋಡಿ

    ಟ್ರ್ಯಾಕ್ ದಾಟಲು ವೃದ್ಧ ಗೂಡ್ಸ್ ರೈಲಿನ ಕೆಳಗೆ ನುಗ್ಗಿದ ತಕ್ಷಣ ಚಲಿಸಲು ಶುರುವಾಯ್ತು ರೈಲು – ಮುಂದೇನಾಯ್ತು? ವಿಡಿಯೋ ನೋಡಿ

    ಭೋಪಾಲ್: ರೈಲ್ವೆ ಟ್ರ್ಯಾಕ್ ಮೇಲೆ ಬಿದ್ದು, ರೈಲು ಡಿಕ್ಕಿಯಾಗಿ ಅಥವಾ ಇನ್ನೂ ಹಲವಾರು ಸಂದರ್ಭಗಳಲ್ಲಿ ವ್ಯಕ್ತಿ ಪವಾಡಸದೃಶವಾಗಿ ಬದುಕುಳಿರುವ ಬಗ್ಗೆ ಅನೇಕ ಬಾರಿ ಕೇಳಿದ್ದಿವಿ. ಹೀಗೆ ಮಧ್ಯಪ್ರದೇಶದಲ್ಲಿ ಅಂತಹದ್ದೇ ಒಂದು ಘಟನೆ ನಡೆದಿದೆ.

    ಭಾನುವಾರದಂದು ಇಲ್ಲಿನ ಸತ್ನಾ ರೈಲ್ವೆ ನಿಲ್ದಾಣದಲ್ಲಿ ವೃದ್ಧರೊಬ್ಬರ ಮೇಲೆ ಗೂಡ್ಸ್ ರೈಲು ಹರಿದರೂ ಅವರಿಗೆ ಸಣ್ಣ ಪುಟ್ಟ ಗಾಯಗಳೂ ಆಗದೆ ಬದುಕುಳಿದಿದ್ದಾರೆ. ಜವಹಾರ್ ನಗರದ ನಿವಾಸಿಯಾದ ವೃದ್ಧ ರಾಧೆಶ್ಯಾಮ್ ಎರಡು ಪ್ಲಾಟ್‍ಫಾರ್ಮ್‍ಗಳ ನಡುವೆ ಇದ್ದ ಟ್ರ್ಯಾಕ್‍ಗಳನ್ನ ದಾಟುತ್ತಿದ್ದರು. ಟ್ರ್ಯಾಕ್‍ನಲ್ಲಿ ನಿಂತಿದ್ದ ಗೂಡ್ಸ್ ರೈಲಿನ ಕೆಳಗೆ ನುಗ್ಗಿ ಮತ್ತೊಂದು ಬದಿಗೆ ಹೋಗಲು ಪ್ರಯತ್ನಿಸುತ್ತಿದ್ದರು. ಈ ವೇಳೆ ರೈಲು ಚಲಿಸಲು ಶುರುವಾಗಿದೆ. ತಕ್ಷಣ ಆ ವೃದ್ಧ ಟ್ರ್ಯಾಕ್ ಮೇಲೆ ಉದ್ದಕ್ಕೆ ಮಲಗಿದ್ದಾರೆ. ರೈಲಿನ ಎಲ್ಲಾ ಬೋಗಿಗಳು ಹಾದು ಹೋಗಲು ಸುಮಾರು 3 ನಿಮಿಷ ಹಿಡಿದಿದೆ. ಅಲ್ಲಿಯತನಕ ವೃದ್ಧ ಟ್ರ್ಯಾಕ್ ಮೇಲೆಯೇ ಮಲಗಿದ್ದಾರೆ. ಒಂದು ವೇಳೆ ಅವರು ಗಾಬರಿಯಿಂದ ಅಲುಗಾಡಿದ್ದರೆ ಪ್ರಾಣವೇ ಹೋಗುವ ಸಂಭವವಿತ್ತು.

    ಈ ಘಟನೆಯನ್ನ ಪ್ರತ್ಯಕ್ಷವಾಗಿ ಕಂಡ ಕೆಲವರು ಇದನ್ನ ಮೊಬೈಲ್‍ನಲ್ಲಿ ಸರೆಹಿಡಿದಿದ್ದಾರೆ. ನಂತರ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಇದೀಗ ವೈರಲ್ ಆಗಿದೆ. ರೈಲು ಮುಂದಕ್ಕೆ ಹೋದ ನಂತರ ವ್ಯಕ್ತಿಯೊಬ್ಬರು ಟ್ರ್ಯಾಕ್ ಬಳಿ ಹೋಗಿ ವೃದ್ಧರನ್ನು ಮೇಲೆತ್ತಿ ಕೈ ಹಿಡಿದುಕೊಂಡು ಅಲ್ಲಿಂದ ಕರೆದುಕೊಂಡು ಬಂದಿದ್ದಾರೆ. ಅದೃಷ್ಟವಶಾತ್ ಘಟನೆಯಲ್ಲಿ ವೃದ್ಧರಿಗೆ ಯಾವುದೇ ಗಾಯಗಳಾಗಿಲ್ಲ.

    ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ವೃದ್ಧ ರಾಧೆಶ್ಯಾಮ್, ದೇವರ ದಯದಿಂದ ನಾನು ಬದುಕುಳಿದೆ ಎಂದಿದ್ದಾರೆ.

  • ಗಮನಿಸಿ, ಸೋಲಾಪುರದಲ್ಲಿ ಹಳಿ ತಪ್ಪಿದ ಗೂಡ್ಸ್ ರೈಲು- ಈ ರೈಲುಗಳ ಮಾರ್ಗ ಬದಲಾವಣೆ

    ಗಮನಿಸಿ, ಸೋಲಾಪುರದಲ್ಲಿ ಹಳಿ ತಪ್ಪಿದ ಗೂಡ್ಸ್ ರೈಲು- ಈ ರೈಲುಗಳ ಮಾರ್ಗ ಬದಲಾವಣೆ

    ಕಲಬುರಗಿ: ರೈಲಿನ ಬ್ರೇಕ್ ಫೇಲಾದ ಪರಿಣಾಮ 6 ಗೂಡ್ಸ್ ಬೋಗಿಗಳು ಹಳಿ ತಪ್ಪಿರುವ ಘಟನೆ, ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ದುಧನಿ ಗ್ರಾಮದ ಬಳಿ ಭಾನುವಾರ ತಡರಾತ್ರಿ ನಡೆದಿದೆ.

    ಕಲಬುರಗಿಯ ಮಳಖೇಡದಿಂದ ಮಹಾರಾಷ್ಟ್ರಕ್ಕೆ ಹೋಗುತ್ತಿದ್ದ ಗೂಡ್ಸ್ ಟ್ರೇನ್ ಗಂಟೆಗೆ 50 ಕಿಮಿ ಹೋಗುತ್ತಿರುವಾಗ ಬ್ರೇಕ್ ಫೇಲ್ ಆಗಿದೆ. ಕೂಡಲೇ ರೈಲು ಚಾಲಕ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

    ಇನ್ನು ಈ ಘಟನೆಯಿಂದ ಕಲಬುರಗಿ ಮಾರ್ಗವಾಗಿ ಮುಂಬೈ ಕಡೆ ಹೋಗಬೇಕಾದ ಬಹುತೇಕ ರೈಲುಗಳು ಮಾರ್ಗ ಬದಲಾವಣೆ ಮಡಲಾಗಿದೆ. ಹೂಟಗಿ-ಗುಂಟ್ಕಲ್, ವಾಡಿ-ಲಾತುರ್ ಸೇರಿದಂತೆ ಒಟ್ಟು 12 ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ.