Tag: Goods Auto

  • ದ್ರಾವಿಡ್‌ ಕಾರಿಗೆ ಗುದ್ದಿದ ಗೂಡ್ಸ್‌ ಆಟೋ

    ದ್ರಾವಿಡ್‌ ಕಾರಿಗೆ ಗುದ್ದಿದ ಗೂಡ್ಸ್‌ ಆಟೋ

    ಬೆಂಗಳೂರು: ಟೀಂ ಇಂಡಿಯಾದ (Team India) ಮಾಜಿ ಕೋಚ್‌ ರಾಹುಲ್‌ ದ್ರಾವಿಡ್‌ (Rahul Dravid) ಅವರ ಕಾರಿಗೆ ಗೂಡ್ಸ್‌ ಅಟೋ (Goods Auto) ಗುದ್ದಿದ ಘಟನೆ ಇಂದು ಸಂಜೆ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿ ನಡೆದಿದೆ.

    ರಾಹುಲ್ ದ್ರಾವಿಡ್‌ ಅವರು ಸಂಜೆ 6:30ಕ್ಕೆ ಇಂಡಿಯನ್ ಎಕ್ಸ್‌ಪ್ರೆಸ್‌ ಸಿಗ್ನಲ್‌ನಿಂದ ಹೈಗ್ರೌಂಡ್ಸ್‌ ಕಡೆಗೆ ಕಾರಿನಲ್ಲಿ ಹೋಗುತ್ತಿದ್ದಾಗ ಟ್ರಾಫಿಕ್‌ ಜಾಮ್‌ ಆಗಿತ್ತು. ದ್ರಾವಿಡ್‌ ಅವರು ಕಾರನ್ನು ನಿಲ್ಲಿಸಿದ್ದಾಗ ಹಿಂದಿನಿಂದ ಗೂಡ್ಸ್‌ ರಿಕ್ಷಾ ಗುದ್ದಿದೆ.

    ಗುದ್ದಿದ ನಂತರ ದ್ರಾವಿಡ್‌ ಕಾರಿನಿಂದ ಕೆಳಗಡೆ ಇಳಿದು ಪರಿಶೀಲನೆ ನಡೆಸಿದ್ದಾರೆ. ನಂತರ ಅಟೋ ಚಾಲಕನನ್ನು ಪ್ರಶ್ನೆ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ. ಹೈ ಗ್ರೌಂಡ್ಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದರೂ ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ. ಇದನ್ನೂ ಓದಿ: ಕೊಹ್ಲಿ ವಿಶ್ವದಾಖಲೆ ನಿರ್ಮಾಣಕ್ಕೆ ಬೇಕಿದೆ ಕೇವಲ 94 ರನ್‌!

    ರಾಹುಲ್‌ ದ್ರಾವಿಡ್‌ ರಿಕ್ಷಾ ಚಾಲಕನ ಜೊತೆ ಮಾತನಾಡಿದ ವಿಡಿಯೋವನ್ನು ಯಾರೋ ತೆಗೆದು ಸಾಮಾಜಿಕ ಜಾಲತಾಣಕ್ಕೆ ಹಾಕಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

     

  • ತುಂಬಿ ಹರಿಯುತ್ತಿದ್ದ ಕಾಲುವೆಗೆ ಇಳಿದ ಗೂಡ್ಸ್ ಆಟೋ – ಕೂಲಿ ಕಾರ್ಮಿಕರು ಪಾರು

    ತುಂಬಿ ಹರಿಯುತ್ತಿದ್ದ ಕಾಲುವೆಗೆ ಇಳಿದ ಗೂಡ್ಸ್ ಆಟೋ – ಕೂಲಿ ಕಾರ್ಮಿಕರು ಪಾರು

    ರಾಯಚೂರು: ಕೃಷಿ ಕೂಲಿ ಕಾರ್ಮಿಕರನ್ನ ಹೊತ್ತೊಯ್ಯುತ್ತಿದ್ದ ಗೂಡ್ಸ್ ಆಟೋ ಚಾಲಕನ ನಿಯಂತ್ರಣ ತಪ್ಪಿ ತುಂಬಿ ಹರಿಯುತ್ತಿದ್ದ ಕಾಲುವೆಗೆ ಇಳಿದ ಘಟನೆ ರಾಯಚೂರು (Raichuru) ಜಿಲ್ಲೆಯಲ್ಲಿ ನಡೆದಿದೆ.ಇದನ್ನೂ ಓದಿ: ವೆಂಬರ್ ಅಂತ್ಯದಿಂದ ಡಿಸೆಂಬರ್‌ವರೆಗೂ ಅಧಿಕ ಚಳಿ: ಹವಾಮಾನ ತಜ್ಞ ಸಿ.ಎಸ್. ಪಾಟೀಲ್

    ಜಿಲ್ಲೆಯ ದೇವದುರ್ಗ (Devadurga) ತಾಲ್ಲೂಕಿನ ಮಸರಕಲ್ ಬಳಿಯಿರುವ ಎನ್‌ಆರ್‌ಬಿಸಿ ಕಾಲುವೆಯಲ್ಲಿ ಈ ಘಟನೆ ನಡೆದಿದೆ. ಕಾಲುವೆ ದಡದ ಸರ್ವೀಸ್ ರಸ್ತೆಯಲ್ಲಿ ಹೋಗುವಾಗ ಚಾಲಕನ ನಿಯಂತ್ರಣ ತಪ್ಪಿ ಕಾಲುವೆಗೆ ಗೂಡ್ಸ್ ಆಟೋ ಬಿದ್ದಿದೆ. ಕಾಲುವೆಗೆ ಬಿದ್ದ ಬಳಿಕ ಚಾಲಕ ಸೇರಿ ಹತ್ತು ಜನ ಪ್ರಯಾಣಿಕರು ಪರದಾಟ ನಡೆಸಿದ್ದಾರೆ. ಅದೃಷ್ಟವಶಾತ್ ಕೂದಲೆಳೆ ಅಂತರದಲ್ಲಿ ಭಾರಿ ಅನಾಹುತ ತಪ್ಪಿದೆ. ಈ ವೇಳೆ ಸ್ಥಳೀಯರು ಕೂಡಲೇ ಆಟೋದಲ್ಲಿ ಪ್ರಯಾಣಿಸುತ್ತಿದ್ದವರ ರಕ್ಷಣೆಗೆ ಬಂದಿದ್ದು, ಜಮೀನುಗಳಲ್ಲಿದ್ದ ಹಗ್ಗಗಳ ಮೂಲಕ ಎಲ್ಲರನ್ನ ರಕ್ಷಿಸಿದ್ದಾರೆ.

    ಗಬ್ಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಗೂಡ್ಸ್ ವಾಹನಗಳಲ್ಲಿ ಪ್ರಯಾಣಿಕರನ್ನ ಕರೆದೊಯ್ಯುವ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.ಇದನ್ನೂ ಓದಿ: ಕೊಲೆ ಯತ್ನ ಕೇಸ್; ನಟ ತಾಂಡವೇಶ್ವರ್ ಅರೆಸ್ಟ್- ಕಮಿಷನರ್ ದಯಾನಂದ್ ಹೇಳೋದೇನು?

  • ಬಸ್ಸುಗಳ ಮಧ್ಯೆ ಸಿಲುಕಿ ಅಟೋ ಅಪ್ಪಚ್ಚಿ – ಹೊರಬರಲಾಗದೆ ಚಾಲಕನ ಗೋಳಾಟ

    ಬಸ್ಸುಗಳ ಮಧ್ಯೆ ಸಿಲುಕಿ ಅಟೋ ಅಪ್ಪಚ್ಚಿ – ಹೊರಬರಲಾಗದೆ ಚಾಲಕನ ಗೋಳಾಟ

    ಧಾರವಾಡ: ಎರಡು ಬಸ್ ಮತ್ತು ಗೂಡ್ಸ್ ಆಟೋ ಮಧ್ಯೆ ಅಪಘಾತ ಸಂಭವಿಸಿದ ಪರಿಣಾಮ ಆಟೋ ಚಾಲಕ ವಾಹನದಲ್ಲೇ ಸಿಲುಕಿ ಗೋಳಾಡಿದ ಘಟನೆ ಧಾರವಾಡದಲ್ಲಿ ನಡೆದಿದೆ.

    ನಗರದ ಪಾಲಿಕೆ ಕಚೇರಿ ಎದುರಿನ ರಸ್ತೆಯಲ್ಲಿ ಎರಡು ಬಸ್‍ಗಳ ಮಧ್ಯೆಯಿಂದ ಹೋಗಲು ಹೋಗಿ ಗೂಡ್ಸ್ ಆಟೋ ಮಧ್ಯದಲ್ಲಿ ಸಿಲುಕಿ ಅಪಚ್ಚಿಯಾಗಿದೆ. ಪರಿಣಾಮ ಗಂಭೀರವಾಗಿ ಗಾಯಗೊಂಡ ಗೂಡ್ಸ್ ಚಾಲಕ ಲೋಹಿತ ಲಕ್ಕುಂಡಿಮಠ (26) ಕುಳಿತಲ್ಲೇ ಸಿಲುಕಿಕೊಂಡು ಹೊರಬರಲಾಗದೆ ಗೋಳಾಡಿದ್ದಾನೆ.

    ಆಟೋ ಒಳಗೆ ಸಿಲುಕಿ ಹೊರಬರಲಾರದೇ ನೋವಿನಿಂದ ಗೋಳಾಡ್ತಾ ಇದ್ದಾಗ ಸ್ಥಳೀಯರೆಲ್ಲ ಸೇರಿ ಆತನನ್ನು ಹೊರತೆಗೆಯಲು ಹರಸಾಹಸ ಪಟ್ಟಿದ್ದಾರೆ. ಆದರೆ ಕೊನೆಗೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಚಾಲಕ ಲೋಹಿತನನ್ನು ಸುರಕ್ಷಿತವಾಗಿ ಹೊರತೆಗೆದು ಜಿಲ್ಲಾಸ್ಪತ್ರೆಗೆ ದಾಖಲಿಸಿದರು. ರಸ್ತೆಯಲ್ಲೇ ಘಟನೆ ನಡೆದಿದ್ದರಿಂದ ಹಾಗೂ ಇದನ್ನು ನೋಡಲು ಸಾಕಷ್ಟು ಜನ ಸೇರಿದ್ದರಿಂದ ಸುಮಾರು ಒಂದೂವರೆ ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು.