Tag: Goods

  • ನಮ್ಮಿಂದ ಏನೂ ಮೋಸ ಆಗಿಲ್ಲ, ಎಲ್ಲವೂ ಗ್ರಾಹಕನದ್ದೇ ತಪ್ಪು: ತುಮಕೂರು ಶೋ ರೂಂ ಸ್ಪಷ್ಟನೆ

    ನಮ್ಮಿಂದ ಏನೂ ಮೋಸ ಆಗಿಲ್ಲ, ಎಲ್ಲವೂ ಗ್ರಾಹಕನದ್ದೇ ತಪ್ಪು: ತುಮಕೂರು ಶೋ ರೂಂ ಸ್ಪಷ್ಟನೆ

    ತುಮಕೂರು: ಅಂತರಸನಹಳ್ಳಿಯ ಟಾಟಾ ಪ್ರೇರಣಾ ಮೋಟರ್ಸ್ ನಲ್ಲಿ ಯುವ ರೈತ ಕುಮಾರ್ ಖರೀದಿಸಿದ್ದ ಟಾಟಾ ಇಂಟ್ರಾ ಗೂಡ್ಸ್ (TATA Intra Goods) ವಾಹನದಲ್ಲಿ ಮೋಸ ಮಾಡಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಶೋ ರೂಂ ಸರ್ವಿಸ್ ಮ್ಯಾನೇಜರ್ ಏಕನಾಥ್ ಸ್ಪಷ್ಟನೆ ಕೊಟ್ಟಿದ್ದಾರೆ.

    ಸ್ಪಷ್ಟನೆ ಏನು?: 27 ಸಾವಿರ ಕಿ.ಮೀ. ಗಾಡಿ ರನ್ ಆಗಿದ್ದಾಗ ಒಂದು ಬಾರಿ ಸರ್ವಿಸ್ ಮಾಡಲು ಗಾಡಿ ತಂದಿದ್ದಾರೆ. ಪವರ್ ಸ್ಟೇರಿಂಗ್ ಸಮಸ್ಯೆ ಎಂದು ಬಂದಿದ್ದರು. ಅವಾಗ ನಾವು ಬದಲಾವಣೆ ಮಾಡಿಕೊಟ್ಟಿದ್ದೇವೆ. ಈಗ ಬಂದು ಹೊಸ ಸಮಸ್ಯೆ ಹೇಳುತ್ತಿದ್ದಾರೆ. ಹೊಂಡ ಗುಂಡಿಯಲ್ಲಿ ಗಾಡಿ ಬಿದ್ರೆ ಟಕ್ ಎಂದು ಸೌಂಡ್ ಬರುತ್ತೆ ಅಂತ ಹೇಳುತ್ತಿದ್ದಾರೆ. ಅದು ನಮಗೆ ಕಂಡು ಬರುತ್ತಿಲ್ಲ. ಇದನ್ನೂ ಓದಿ: ಖರೀದಿಸಿದ ಆರೇ ತಿಂಗಳಲ್ಲಿ ವಾಹನ ರಿಪೇರಿ- ಹಳೆ ಇಂಜಿನ್‍ಗೆ ಹೊಸ ಬಾಡಿ ಹಾಕಿರುವ ಆರೋಪ

    ಗಾಡಿಯನ್ನು ಒಂದು ದಿನ ಸಂಪೂರ್ಣವಾಗಿ ಶೋ ರೂಂನಲ್ಲಿ ಬಿಟ್ಟು ಹೋಗಿ ನಾವು ರಿಪೇರಿ ಮಾಡಿಕೊಡುತ್ತೇವೆ ಎಂದು ಹೇಳಿದ್ದೇವೆ. ಆದರೂ ಅವರು ಗಾಡಿ ಬಿಟ್ಟು ಹೋಗಲಿಕ್ಕೆ ಮುಂದಾಗುತ್ತಿಲ್ಲ. ಒಂದು ದಿನ ಗಾಡಿ ಬಿಟ್ಟು ಹೋದರೆ ನಮಗೆ ವ್ಯವಹಾರ ನಷ್ಟ ಆಗುತ್ತದೆ ಅಂತ ಹೇಳುತ್ತಾರೆ. ಗಾಡಿ ರಿಪೇರಿಗೆ ಬಿಟ್ಟರೆ ಒಂದು ದಿನದ ಮಟ್ಟಿಗೆ ಬದಲಿ ಇನ್ನೊಂದು ಗಾಡಿ ಅವರಿಗೆ ಕೊಡಬೇಕಂತೆ. ಇಲ್ಲಾಂದ್ರೆ ಆ ದಿನದ ಒಂದು ಬಾಡಿಗೆ ಕೊಡಿ ಅಂತ ಹೇಳ್ತಾರೆ. ಯಾವ ಕಂಪನಿಯಲ್ಲೂ ಆ ರೀತಿ ಆಯ್ಕೆ ಇಲ್ಲ.

    ಈ ಮಾದರಿಯ ವಾಹನದಲ್ಲಿ ಇಲ್ಲಿಯವರೆಗೆ ಯಾವುದೇ ರೀತಿಯ ದೂರು ಬಂದಿಲ್ಲ. ಮೊದಲ ಬಾರಿಗೆ ದೂರು ಬಂದಿದೆ. ಅವರು ಗಾಡಿಯನ್ನು ಒಂದಿನ ಪೂರ್ತಿ ಗ್ಯಾರೇಜ್ ನಲ್ಲಿ ಬಿಟ್ಟು ಹೋದರೆ ನಾವು ಫ್ರೀ ಆಫ್ ಕಾಸ್ಟ್ಲಿ ಎಲ್ಲವೂ ರೆಡಿ ಮಾಡಿಕೊಡುತ್ತೇವೆ. ನಿಮ್ಮ ಗಾಡಿಯ ಸಮಸ್ಯೆಯನ್ನು ನೀವೇ ಮುಂದೆ ನಿಂತು ರಿಪೇರಿ ಮಾಡಿಕೊಂಡು ಹೋಗಿ ಎಂದು ನಾವು ಹೇಳಿದ್ದೇವೆ. ಆದರೆ ಅವರು ನಮ್ಮ ಮಾತು ಕೇಳುತ್ತಿಲ್ಲ.

    ಆರು ತಿಂಗಳಿಗೆ 70 ಸಾವಿರ ಕಿ.ಮೀ. ಗಾಡಿ ಓಡಿದೆ. ಅಷ್ಟೊಂದು ರನ್ ಆಗಲು ಹೇಗೆ ಸಾಧ್ಯ? ಟಾಟಾ ಮೋಟರ್ಸ್ ಮೊದಲ 72 ಸಾವಿರ ಕಿ.ಮೀ.ವರೆಗೆ ಮಾತ್ರ ಉಚಿತವಾಗಿ ರಿಪೇರಿ ಮಾಡಲಿಕ್ಕೆ ಅವಕಾಶ ಇದೆ. ನಾವು ರಿಪೇರಿ ಮಾಡಿಕೊಡುತ್ತೇವೆ ಎಂದು ಹೇಳಿದ್ದೇವೆ. ಆದರೂ ಅವರು ನಮ್ಮ ಮಾತನ್ನು ಕೇಳುತ್ತಿಲ್ಲ ಎಂದು ಏಕನಾಥ್ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಚೀಲ, ಬೆಡ್‍ಶೀಟ್‍ನಲ್ಲಿ ಸುತ್ತಿದ ರೀತಿಯಲ್ಲಿ ವೃದ್ಧನ ಮೃತದೇಹ ಪತ್ತೆ

    ಏನಿದು ಪ್ರಕರಣ?
    ಟಾಟಾ ಶೋ ರೂಂನಿಂದ ನನಗೆ ಮೋಸ ಆಗಿದೆ. ಖರೀದಿಸಿದ ಟಾಟಾ ಗೂಡ್ಸ್ ವಾಹನ (TaTa Goods) 25 ದಿನಕ್ಕೆ ಕೆಟ್ಟು ನಿಂತಿದೆ. ಹಳೇ ಇಂಜಿನ್‍ಗೆ ಹೊಸ ಬಾಡಿ ಫಿಕ್ಸ್ ಮಾಡಿ ಕೊಟ್ಟಿರಬಹುದು ಎಂದು ಅನುಮಾನ ವ್ಯಕ್ತಪಡಿಸಿ ಯುವ ರೈತನೋರ್ವ ಶೋ ರೂಂ ಎದುರುಗಡೆ ಪ್ರತಿಭಟನೆ ನಡೆಸಿದ್ದರು.

    ತುಮಕೂರಿನ ಅಂತರಸಹಳ್ಳಿಯ ಟಾಟಾ ಶೋರೂಂನಲ್ಲಿ ಹೆಬ್ಬೂರಿನ ಕುಮಾರ್ ಎಂಬ ಯುವ ರೈತನೋರ್ವ ಮೇ ತಿಂಗಳಲ್ಲಿ ಟಾಟಾ ಇಂಟ್ರಾ ಗೂಡ್ಸ್ ವಾಹನ ಖರೀದಿಸಿದ್ದರು. ಆದರೆ ವಾಹನ ಖರೀದಿಸಿದ 25 ದಿನದಲ್ಲೇ ವಾಹನ ರಿಪೇರಿಗೆ ಬಂದಿದೆ. ಸ್ಟೇರಿಂಗ್ ಸಮಸ್ಯೆ, ಚಾರ್ಸಿ ವೆಲ್ಡಿಂಗ್, ಎಕ್ಸ್ ಲೇಟರ್ ಒತ್ತಿದಾಗ ಗಾಡಿ ಪೂರ್ತಿ ಶೇಖ್ ಆಗೋ ಸಮಸ್ಯೆ ಕಂಡು ಬಂದಿದೆ. ಕಂಪನಿ ರೂಲ್ಸ್ ಪ್ರಕಾರ 72 ಸಾವಿರ ಕಿ.ಮೀ. ಒಳಗೆ ಓಡಿದರೆ ರೀಪ್ಲೇಸ್‌ಮೆಂಟ್‌ ಮಾಡಿಕೊಡಬೇಕು. ಆದರೆ ಶೋ ರೂಂನವರು ಕಳೆದ 6 ತಿಂಗಳಲ್ಲಿ ಬರೋಬ್ಬರಿ 11 ಬಾರಿ ರಿಪೇರಿ ಮಾಡಿ ಕಳುಹಿಸಿದ್ದಾರೆಯೇ ಹೊರತು ಬದಲಿ ವಾಹನ ಕೊಟ್ಟಿಲ್ಲ. ಇದರಿಂದ ರೊಚ್ಚಿಗೆದ್ದ ಯುವ ರೈತ ಕುಮಾರ್ ಟಾಟಾ ಶೋ ರೂಂ ಬಳಿ ಪ್ರತಿಭಟನೆ ಮಾಡಿದ್ದಾರೆ.

    ಯುವ ರೈತ ಕುಮಾರ್ ಕೃಷಿ ಬಳಕೆಗೆ ವಾಹನ ಬಳಸುವ ಜೊತೆಗೆ ರೈತರಿಂದ ಸಂಗ್ರಹಿಸಿದ ಹಾಲನ್ನೂ ವಾಹನದ ಮೂಲಕ ಡೈರಿಗೆ ಸರಬರಾಜು ಮಾಡುವ ಕೆಲಸ ಮಾಡುತ್ತಿದ್ದ. ಮೊನ್ನೆ ದಿನ ಗೂಡ್ಸ್ ವಾಹನ ಮತ್ತೇ ಇದ್ದಕ್ಕಿದ್ದ ಹಾಗೆ ಕೈಕೊಟ್ಟಿತು. ಪರಿಣಾಮ ಸಕಾಲಕ್ಕೆ ಡೈರಿಗೆ ತಲುಪಲು ಆಗದೇ ಸುಮಾರು 900 ಲೀಟರ್ ಹಾಲು ಕೆಟ್ಟು ಹೋಗಿ ಸುಮಾರು 27 ಸಾವಿರ ರೂ. ನಷ್ಟ ಆಗಿದೆ. ಕಾಟಾಚಾರಕ್ಕೆ ಶೋರೂಂನವರು ರಿಪೇರಿ ಮಾಡಿಕೊಡ್ತಿದ್ದಾರೆಯೇ ಹೊರತು ಬದಲಿ ವಾಹನ ಕೊಡುವ ಮಾತನಾಡುತ್ತಿಲ್ಲ. ಹಳೇ ಇಂಜಿನ್‍ಗೆ ಹೊಸ ಬಾಡಿ ಫಿಕ್ಸ್ ಮಾಡಿಕೊಟ್ಟಿದ್ದಾರೆ ಅನ್ನೋ ಆರೋಪ ಕುಮಾರ್ ಮಾಡಿದ್ದಾರೆ. ಆದರೆ ಶೋ ರೂಂನವರು ಈ ಆರೋಪವನ್ನು ತಳ್ಳಿಹಾಕಿದ್ದಾರೆ. ಇದನ್ನೂ ಓದಿ: ನವೆಂಬರ್ ಅಂತ್ಯಕ್ಕೆ ಶ್ರೀರಂಗಪಟ್ಟಣ-ಮದ್ದೂರು ಬೈಪಾಸ್ ಓಪನ್

    ಸದ್ಯ ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ವಾಹನ ಖರೀದಿಸಿ ಪರದಾಡುತ್ತಿದ್ದ ಯುವ ರೈತ ಕುಮಾರ್ ಬದಲಿ ವಾಹನ ಕೊಡುವಂತೆ ಪಟ್ಟು ಹಿಡಿದಿದ್ದಾನೆ.

    Live Tv
    [brid partner=56869869 player=32851 video=960834 autoplay=true]

  • ಬೈಕ್‍ಗೆ ಗೂಡ್ಸ್ ಕ್ಯಾಂಟರ್ ಡಿಕ್ಕಿ- ಅಂತ್ಯಕ್ರಿಯೆಗೆ ಹೊರಟಿದ್ದ ಮೂವರು ಸ್ಥಳದಲ್ಲೇ ಸಾವು

    ಬೈಕ್‍ಗೆ ಗೂಡ್ಸ್ ಕ್ಯಾಂಟರ್ ಡಿಕ್ಕಿ- ಅಂತ್ಯಕ್ರಿಯೆಗೆ ಹೊರಟಿದ್ದ ಮೂವರು ಸ್ಥಳದಲ್ಲೇ ಸಾವು

    ರಾಯಚೂರು: ಜಿಲ್ಲೆಯ ಸಿರವಾರ ತಾಲೂಕಿನ ಹೊಕ್ರಾಣಿ ಕ್ರಾಸ್ ಬಳಿ ಐಚರ್ ಗೂಡ್ಸ್ ಕ್ಯಾಂಟರ್ ಹಾಗೂ ಬೈಕ್ ಮಧ್ಯೆ ಭೀಕರ ಅಪಘಾತ ನಡೆದಿದ್ದು, ಬೈಕ್‍ನಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

    ಬಸವರಾಜ್(45), ಆತನ ಮಗ ನರೇಶ್(8) ಹಾಗೂ ಸಂಬಂಧಿ ಭೀಮವ್ವ(40) ಮೃತ ದುರ್ದೈವಿಗಳು. ಮೃತರೆಲ್ಲರೂ ಸಿರವಾರ ತಾಲೂಕಿನ ಕಲ್ಲೂರು ಗ್ರಾಮದ ನಿವಾಸಿಗಳಾಗಿದ್ದರು. ಸಂಬಂಧಿಯೊಬ್ಬರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಕಲ್ಲೂರಿನಿಂದ ಕುರ್ಡಿ ಗ್ರಾಮಕ್ಕೆ ಹೊರಟಿದ್ದ ಮೂವರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ:  ಕಾಶ್ಮೀರದಲ್ಲಿ ಮತ್ತೆ ಪಂಡಿತರು ಟಾರ್ಗೆಟ್ – ಓರ್ವನ ಹತ್ಯೆ, ಮತ್ತೋರ್ವ ಗಂಭೀರ

    ರಾಯಚೂರು ಕಡೆಯಿಂದ ಬರುತ್ತಿದ್ದ ಕ್ಯಾಂಟರ್ ಅತಿ ವೇಗದಲ್ಲಿದ್ದ ಹಿನ್ನೆಲೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬೈಕ್‍ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಕ್ಯಾಂಟರ್ ರಸ್ತೆ ಪಕ್ಕದ ಜಮೀನಿಗೆ ನುಗ್ಗಿದೆ. ಅಪಘಾತದಿಂದ ಮೂವರ ಮೃತದೇಹಗಳು ಜಮೀನಿನಲ್ಲಿ ಬಿದ್ದಿವೆ. ಘಟನೆ ಬಳಿಕ ಚಾಲಕ ಪರಾರಿಯಾಗಿದ್ದಾನೆ. ಸಿರವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ:  ಪ್ರಿಯಾಂಕ್ ಖರ್ಗೆ ಅಕ್ಕ, ತಂಗಿಯರು ಮಂಚ ಹತ್ತಿಯೆ ನೌಕರಿಗೆ ಹೋಗಿದ್ದಾರಾ: ಪಾಟೀಲ್ ಗರಂ

    Live Tv
    [brid partner=56869869 player=32851 video=960834 autoplay=true]

  • ಕಾರು-ಗೂಡ್ಸ್ ವಾಹನ ನಡುವೆ ಡಿಕ್ಕಿ – ವ್ಯಾಪಾರಿ ಸೇರಿ ಇಬ್ಬರು ಸಾವು

    ಕಾರು-ಗೂಡ್ಸ್ ವಾಹನ ನಡುವೆ ಡಿಕ್ಕಿ – ವ್ಯಾಪಾರಿ ಸೇರಿ ಇಬ್ಬರು ಸಾವು

    ಕಲಬುರಗಿ: ಗೂಡ್ಸ್ ವಾಹನ ಹಾಗೂ ಕಾರು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಎರಡು ವಾಹನಗಳ ಚಾಲಕರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಆಳಂದ ತಾಲೂಕಿನ ಚಿತಲಿ ಗ್ರಾಮದ ಬಳಿ ನಡೆದಿದೆ.

    ಆಳಂದ ಪಟ್ಟಣದ ಬಾಳೇನಗಲ್ಲಿ ನಿವಾಸಿ, ಗೂಡ್ಸ್ ಚಾಲಕ ಜಾಫರ್ ಖಾಸೀಂ (27), ಗುಜರಾತ್ ಮೂಲದ ಉದ್ಯಮಿ ಕಾರು ಚಾಲಕ ಜೋಧಾರಾಮ ಜಸ್ವಂತ್ (40) ಮೃತ ದುರ್ದೈವಿಗಳು. ಕಾರಿನಲ್ಲಿದ್ದ ಇನ್ನೋರ್ವ ಹೀರಾರಾಮ ಎಂಬಾತ ಗಂಭೀರ ಗಾಯಗೊಂಡಿದ್ದು, ಹೈದರಾಬಾದ್‍ನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಇದನ್ನೂ ಓದಿ:  ನನಗೆ ಸಿಎಂ ಆಗೋ ಎಲ್ಲಾ ಅರ್ಹತೆಯಿದೆ: ಉಮೇಶ್ ಕತ್ತಿ

    ಜಾಫರ್ ಆಳಂದನಿಂದ ಮಹಾರಾಷ್ಟ್ರದ ಉಮರ್ಗಾಕ್ಕೆ ಗೂಡ್ಸ್ ವಾಹನದಲ್ಲಿ ಸಾಗುತ್ತಿದ್ದ. ಗುಜರಾತ್ ಮೂಲದ ವ್ಯಾಪಾರಿಗಳಾದ ಜೋಧಾರಾಮ, ಹೀರಾರಾಮ ಉಮರ್ಗಾದಿಂದ ಕಾರಿನಲ್ಲಿ ಆಳಂದಕ್ಕೆ ಬರುತ್ತಿರುವಾಗ ಘಟನೆ ಸಂಭವಿಸಿದೆ. ಸ್ಥಳಕ್ಕೆ ಸಿಪಿಐ ಬಾಸು ಚವ್ಹಾಣ್, ಪಿಎಸ್‍ಐ ತಿರುಮಲೇಶ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಸೆಪ್ಟೆಂಬರ್‌ವರೆಗೂ ಉಚಿತ ಪಡಿತರ ಯೋಜನೆಯನ್ನು ವಿಸ್ತರಿಸಿದ ದೆಹಲಿ ಸರ್ಕಾರ

    Live Tv

  • ಹಳಿ ತಪ್ಪಿದ ಗೂಡ್ಸ್‌ ರೈಲು – ನಾಲ್ಕು ಬೋಗಿ ಪಲ್ಟಿ

    ಹಳಿ ತಪ್ಪಿದ ಗೂಡ್ಸ್‌ ರೈಲು – ನಾಲ್ಕು ಬೋಗಿ ಪಲ್ಟಿ

    ಲಕ್ನೋ: ಗೂಡ್ಸ್ ರೈಲು ಹಳಿ ತಪ್ಪಿದ್ದು, ನಾಲ್ಕು ಬೋಗಿಗಳು ಪಲ್ಟಿಯಾಗಿ ಬಿದ್ದಿರುವ ಘಟನೆ ಕೊತ್ವಾಲಿ ಪ್ರದೇಶದಲ್ಲಿ ನಡೆದಿದೆ.

    ಇಂದು ಮುಂಜಾನೆ ಸಿಮೆಂಟ್ ಮೂಟೆಗಳನ್ನು ತುಂಬಿಕೊಂಡು ಆಗ್ರಾದಿಂದ ದೆಹಲಿಗೆ ಹೋಗುತ್ತಿದ್ದ ಗೂಡ್ಸ್ ರೈಲು ಹಳಿ ತಪ್ಪಿದೆ. ನಾಲ್ಕು ಬೋಗಿಗಳು ಪಲ್ಟಿಯಾಗಿ ಬಿದ್ದಿವೆ. ನಾಲ್ಕು ಬೋಗಿ ಪಲ್ಟಿಯಾಗಿದ್ದರಿಂದ ಹಳಿ ಹಾಳಾಗಿದ್ದು, ಸ್ಥಳದಲ್ಲಿ ಜೆಸಿಬಿ ಹಾಗೂ ರೈಲ್ವೆ ತಂಡದಿಂದ ದುರಸ್ತಿ ಕಾರ್ಯಾಚರಣೆ ನಡೆಯುತ್ತಿದೆ. ಇದನ್ನೂ ಓದಿ: ಗೋವಾ ಚುನಾವಣೆ- ಜಗದೀಶ್ ಶೆಟ್ಟರ್ ಪ್ರಚಾರ, ಮತಯಾಚನೆ

    ಇಂದು ಮುಂಜಾನೆ ಘಟನೆ ಸಂಭವಿಸಿದೆ. ಗೂಡ್ಸ್ ರೈಲು ಬೋಗಿ ಪಲ್ಟಿಯಾದ ಬಗ್ಗೆ ಮಾಹಿತಿ ಪಡೆದ ರೈಲ್ವೆ ಇಲಾಖೆ ಅಧಿಕಾರಿಗಳು ಮತ್ತು ಆರ್‌ಪಿಎಫ್ ತಂಡ ಸ್ಥಳಕ್ಕೆ ಧಾವಿಸಿ ಮಾಹಿತಿ ಕಲೆ ಹಾಕಿದ್ದಾರೆ. ಜೊತೆಗೆ ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳ ಮಾರ್ಗ ಬದಲಿಸಲಾಗಿದೆ. ಸಿಮೆಂಟ್ ತುಂಬಿದ ಕೋಚ್‍ಗಳನ್ನು ತೆಗೆದುಹಾಕಲು 300ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಕೋವಿನ್ ಖಾಸಗಿ ಮಾಹಿತಿ ಸೋರಿಕೆ ಆಗಿಲ್ಲ: ಕೇಂದ್ರ

    ಸರಕು ಸಾಗಣೆ ರೈಲು ಹಳಿ ತಪ್ಪಿದ ನಂತರ ಮಥುರಾ ಮತ್ತು ದೆಹಲಿ ನಡುವೆ ರೈಲು ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

  • ನೈರುತ್ಯ ರೈಲ್ವೇ ಬೆಂಗಳೂರು ವಿಭಾಗದಿಂದ ದಾಖಲೆಯ ಸರಕು ಸಾಗಾಟ

    ನೈರುತ್ಯ ರೈಲ್ವೇ ಬೆಂಗಳೂರು ವಿಭಾಗದಿಂದ ದಾಖಲೆಯ ಸರಕು ಸಾಗಾಟ

    ಬೆಂಗಳೂರು: ಬೆಂಗಳೂರು ವಿಭಾಗವು ಸರಕು ಸಾಗಾಟದಲ್ಲಿ ಹೊಸ ದಾಖಲೆಯನ್ನು ಬರೆದಿದೆ. 2021-22ನೇ ಹಣಕಾಸು ವರ್ಷದಲ್ಲಿ ಅತ್ಯಧಿಕ ಮಾಸಿಕ ಸಾಧನೆಯನ್ನುಗಳಿಸಿದೆ.

    ಈ ಕುರಿತಂತೆ ನೈರುತ್ಯ ರೈಲ್ವೇ ಬೆಂಗಳೂರು ವಿಭಾಗದ ಸಾರ್ವಜನಿಕ ಸಂಪರ್ಕಾಧಿಕಾರಿ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಬಿಡುಗಡೆ ಮಾಡಿದ್ದು, ನೈಋತ್ಯ ರೈಲ್ವೇಯ ಬೆಂಗಳೂರು ವಿಭಾಗವು ಇತ್ತೀಚಿನ ದಿನಗಳಲ್ಲಿ ಸರಕು ಸಾಗಣೆಯಲ್ಲಿ ದಾಪುಗಾಲು ಹಾಕುತ್ತಿದೆ. ಅಕ್ಟೋಬರ್ ತಿಂಗಳಿನಲ್ಲಿ ವಿಭಾಗವು 0.141 ಮಿಲಿಯನ್ ಟನ್‍ಗಳಷ್ಟು ಸರಕುಲೋಡ್ ಮಾಡಿದ್ದು, Rs.14.48  ಕೋಟಿಗಳ ಸರಕು ಸಾಗಣೆ ಆದಾಯವನ್ನು ದಾಖಲಿಸಿದೆ. ಇದು 2021-22ನೇ ಹಣಕಾಸು ವರ್ಷದಲ್ಲಿ ಅತ್ಯಧಿಕ ಮಾಸಿಕ ಸಾಧನೆಯಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ದೇಶದ ಅತಿ ದೊಡ್ಡ ಜೇಬುಗಳ್ಳ ಅಂದ್ರೆ ಕಾಂಗ್ರೆಸ್: ಬಿಜೆಪಿ ತಿರುಗೇಟು

    2020ರ ಅಕ್ಟೋಬರ್‍ ನಲ್ಲಿ ದಿನಕ್ಕೆ 148 ವ್ಯಾಗನ್‍ಗಳಿಗೆ ಹೋಲಿಸಿದರೆ, 2021ರ ಅಕ್ಟೋಬರ್‍ನಲ್ಲಿ ದಿನಕ್ಕೆ ಸರಾಸರಿ 166 ವ್ಯಾಗನ್‍ಗಳನ್ನು ಲೋಡ್ ಮಾಡಲಾಗಿದೆ, ಇದು 28% ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಒಟ್ಟಾರೆಯಾಗಿ, ಕಳೆದ ಹಣಕಾಸು ವರ್ಷದಲ್ಲಿ ಅಕ್ಟೋಬರ್, 2020 ರವರೆಗಿನ ಸಂಚಿತ ಅಂಕಿಅಂಶಗಳಿಗೆ ಹೋಲಿಸಿದರೆ ವಿಭಾಗವು 7% ಟನ್ ಮತ್ತು 36.23% ಸರಕು ಸಾಗಣೆ ಆದಾಯದಲ್ಲಿ ಹೆಚ್ಚಳವನ್ನು ಕಂಡಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಪೆಟ್ರೋಲ್ 100.63, ಡೀಸೆಲ್ 85.03ರೂ. – ಸರ್ಕಾರದಿಂದ ಅಧಿಕೃತ ಅಧಿಸೂಚನೆ

    ಬಿಡದಿ ಗೂಡ್ಸ್ ಶೆಡ್‍ನಲ್ಲಿ ಟೊಯಾಟಾ ಎಸ್‍ಯುವಿ ಲೋಡಿಂಗ್, ಹೊಸೂರಿನಲ್ಲಿ ಅಶೋಕ್ ಲೇಲ್ಯಾಂಡ್ ಟ್ರಕ್ ಲೋಡಿಂಗ್, ಧರ್ಮಪುರಿ ಮತ್ತು ಹೊಸೂರು ಗೂಡ್ಸ್ ಶೆಡ್‍ಗಳಿಂದ ರೈಸ್ ಲೋಡಿಂಗ್ ವಿಭಾಗದ ಈ ಸಾಧನೆಗೆ ಕಾರಣವೆಂದು ಹೇಳಬಹುದೆಂದಿದ್ದಾರೆ.

  • ಇಂದಿನಿಂದ 23 ವಸ್ತುಗಳ ಬೆಲೆ ಇಳಿಕೆ: ಸಿನಿಮಾ ಟಿಕೆಟ್ ಬೆಲೆ ಎಷ್ಟು ಇಳಿಕೆಯಾಗುತ್ತೆ?

    ಇಂದಿನಿಂದ 23 ವಸ್ತುಗಳ ಬೆಲೆ ಇಳಿಕೆ: ಸಿನಿಮಾ ಟಿಕೆಟ್ ಬೆಲೆ ಎಷ್ಟು ಇಳಿಕೆಯಾಗುತ್ತೆ?

    ನವದೆಹಲಿ: ಹೊಸ ವರ್ಷಕ್ಕೆ ಪೆಟ್ರೋಲ್, ಡೀಸೆಲ್, ಎಲ್‍ಪಿಜಿ ದರ ಇಳಿಕೆಯಾಗುವುದರ ಜೊತೆಗೆ ಇಂದಿನಿಂದ 23 ವಸ್ತುಗಳ ಬೆಲೆಯೂ ಕಡಿಮೆಯಾಗಲಿದೆ. ಹಣಕಾಸು ಸಚಿವ ಅರುಣ್ ಜೇಟ್ಲಿ ನೇತೃತ್ವದ ಜಿಎಸ್‍ಟಿ ಮಂಡಳಿ ಶೇ.28 ತೆರಿಗೆ ಶ್ರೇಣಿಯಲ್ಲಿದ್ದ ವಸ್ತುಗಳ ತೆರಿಗೆಯನ್ನು ಕಡಿತಗೊಳಿಸಿತ್ತು. ಜಿಎಸ್‍ಟಿ ಮಂಡಳಿ ಘೋಷಿಸಿದ್ದ ಸೇವೆಗಳ ಮೇಲಿನ ತೆರಿಗೆ ಇಳಿಕೆ ಹೊಸ ವರ್ಷದ ಮೊದಲ ದಿನವಾದ ಇಂದಿನಿಂದ ಜಾರಿಗೆ ಬರಲಿದೆ.

    ಯಾವ ವಸ್ತುಗಳ ತೆರಿಗೆ ಇಳಿಕೆಯಾಗಿದೆ?
    ಮಾನಿಟರ್, 32 ಇಂಚು ಟಿ.ವಿ ಸ್ಕ್ರೀನ್, ಟೈರ್, ಪವರ್ ಬ್ಯಾಂಕ್‍ಗಳ ಲಿಥಿಯಂ ಬ್ಯಾಟರಿ, ಗೇರ್ ಬಾಕ್ಸ್, ವಿಡಿಯೊ ಗೇಮ್, ಡಿಜಿಟಲ್ ಕ್ಯಾಮೆರಾ, ವಿಡಿಯೊ ರೆಕಾರ್ಡರ್ ಮೇಲಿದ್ದ ತೆರಿಗೆ ಶೇ.28 ರಿಂದ ಶೇ.18ಕ್ಕೆ ತಗ್ಗಿದೆ. ಇದನ್ನೂ ಓದಿ: ಹೊಸ ವರ್ಷಕ್ಕೆ ಗುಡ್‍ನ್ಯೂಸ್ – ಪೆಟ್ರೋಲ್, ಡೀಸೆಲ್ ಬೆಲೆ ಮತ್ತಷ್ಟು ಇಳಿಕೆ: ಯಾವ ನಗರದಲ್ಲಿ ಎಷ್ಟು?

    ಅಂಗವಿಕಲ ವ್ಯಕ್ತಿಗಳಿಗೆ ಬೇಕಾಗುವ ಸಾಧನಗಳ ಮೇಲಿದ್ದ ತೆರಿಗೆ ಶೇ.28 ರಿಂದ ಶೇ.5ಕ್ಕೆ ಇಳಿಕೆಯಾಗಿದ್ದರೆ, ಶಿಲೆಗಳ ಮೇಲಿದ್ದ ತೆರಿಗೆ ಶೇ.18 ರಿಂದ ಶೇ. 12ಕ್ಕೆ ಇಳಿದಿದೆ. ಶೇ.18 ರಿಂದ ಶೇ.5ಕ್ಕೆ ಮಾರ್ಬಲ್ ಮೇಲಿದ್ದ ತೆರಿಗೆ ತಗ್ಗಿದರೆ, ವಾಕಿಂಗ್ ಸ್ಟಿಕ್, ಹಾರುವ ಬೂದಿಯಿಂದ ತಯಾರಿಸುವ ಇಟ್ಟಿಗೆ ಮೇಲಿದ್ದ ತೆರಿಗೆ ಶೇ.12 ರಿಂದ ಶೇ.5ಕ್ಕೆ ಇಳಿಕೆಯಾಗಿದೆ. ಮ್ಯೂಸಿಕ್ ಪುಸ್ತಕಗಳ ಮೇಲಿದ್ದ ಶೇ.12 ತೆರಿಗೆಯನ್ನು ಸಂಪೂರ್ಣ ತೆಗೆದುಹಾಕಲಾಗಿದೆ.

    ಸಿನಿಮಾ ಟಿಕೆಟ್ ಅಗ್ಗ
    ಸಿನಿ ವೀಕ್ಷಕರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, 100 ರೂ. ತನಕದ ಟಿಕೆಟ್ ಮೇಲೆ ಶೇ.18ರಷ್ಟಿದ್ದ ಜಿಎಸ್‍ಟಿಯನ್ನು ಶೇ.12ಕ್ಕೆ ಇಳಿಸಲಾಗಿದೆ. 100 ರೂ.ಗಿಂತ ಹೆಚ್ಚಿನ ದರದ ಟಿಕೆಟ್ ಮೇಲೆ ಶೇ.28ರಷ್ಟಿದ್ದ ಜಿಎಸ್‍ಟಿ ಶೇ.18ಕ್ಕೆ ತಗ್ಗಿದೆ. ಸರಕು ಸಾಗಣೆ ವಾಹನಗಳ ಮೇಲಿನ ಥರ್ಡ್ ಪಾರ್ಟಿ ಇನ್ಶೂರೆನ್ಸ್ ಪ್ರೀಮಿಯಂ ಮೊದಲಾದವುಗಳ ಮೇಲಿದ್ದ ತೆರಿಗೆ ಶೇ.18 ರಿಂದ ಶೇ.12ಕ್ಕೆ ಇಳಿಕೆಯಾಗಿದೆ. ಇದನ್ನೂ ಓದಿ: ಹೊಸ ವರ್ಷಕ್ಕೆ ಗಿಫ್ಟ್ – ಎಲ್‍ಪಿಜಿ ಸಿಲಿಂಡರ್ ಬೆಲೆ ಭಾರೀ ಇಳಿಕೆ

    ಕಳೆದ ಡಿ.22ರಂದು ಸಭೆ ಸೇರಿದ್ದ ಜಿಎಸ್‍ಟಿ ಮಂಡಳಿ ದರ ಇಳಿಕೆಗೆ ನಿರ್ಧಾರ ಕೈಗೊಂಡಿತ್ತು. ಈ ನಿರ್ಧಾರದಿಂದಾಗಿ ಶೇ.28 ತೆರಿಗೆ ದರ ಹೊಂದಿರುವ ವಸ್ತುಗಳ ಸಂಖ್ಯೆ ಸದ್ಯ 28ಕ್ಕೆ ಇಳಿಕೆಯಾಗಿದೆ. 2017ರ ಜು.1ರಂದು ಜಿಎಸ್‍ಟಿ ಜಾರಿಯಾದಾಗ ಶೇ.28ರ ತೆರಿಗೆ ವ್ಯಾಪ್ತಿಯಲ್ಲಿ 226 ಸರಕುಗಳು ಇದ್ದವು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 4 ವರ್ಷದ ಬಳಿಕ ತನ್ನ ಕೊನೆಯ ನಿಲ್ದಾಣ ತಲುಪಿದ ಗೂಡ್ಸ್ ರೈಲ್ವೆಯ ಬೋಗಿ

    4 ವರ್ಷದ ಬಳಿಕ ತನ್ನ ಕೊನೆಯ ನಿಲ್ದಾಣ ತಲುಪಿದ ಗೂಡ್ಸ್ ರೈಲ್ವೆಯ ಬೋಗಿ

    ಲಕ್ನೋ: 10 ಲಕ್ಷ ಮೌಲ್ಯದ ಗೊಬ್ಬರ ಸಾಗಿಸುತ್ತಿದ್ದ ವ್ಯಾಗನ್ (ರೈಲು ಬೋಗಿ) ನಾಲ್ಕು ವರ್ಷಗಳ ನಂತರ ಸುಮಾರು 1,400 ಕಿಮೀ ವ್ಯಾಪ್ತಿಯಲ್ಲಿ ಉತ್ತರ ಪ್ರದೇಶದ ಬಸ್ತಿಯನ್ನು ತಲುಪಿದೆ.

    2014 ರಲ್ಲಿ ಆಂಧ್ರಪ್ರದೇಶದ ವಿಶಾಖಪಟ್ಟಣಂನಿಂದ ಹೊರಟ ಸರಕು ಸಾಗಿಸುವ ರೈಲು, 2018ರಲ್ಲಿ ಉತ್ತರ ಪ್ರದೇಶದ ಬಸ್ತಿಗೆ ಬಂದು ತಲುಪಿದೆ.

    ಇಂಡಿಯನ್ ಪೊಟಾಶ್ ಕಂಪೆನಿಯು #107462 ನಂಬರಿನ ಬೋಗಿಯನ್ನು ಬುಕ್ ಮಾಡಿಕೊಂಡಿತ್ತು. ಬೋಗಿಯಲ್ಲಿ 10 ಲಕ್ಷ ರೂ. ಮೌಲ್ಯದ ರಸಗೊಬ್ಬರವನ್ನು ವಿಶಾಖಪಟ್ಟಣಂ ಬಂದರನಿಂದ ಉತ್ತರ ಪ್ರದೇಶದ ಬಸ್ತಿಯಲ್ಲಿರುವ ರಾಮಚಂದ್ರ ಗುಪ್ತ ಎಂಬವರಿಗೆ ಲೋಡ್ ಮಾಡಿ ಸಾಗಿಸಲಾಗಿತ್ತು. ಆದರೆ ಎಷ್ಟೋ ತಿಂಗಳಾದರೂ ವ್ಯಾಗನ್ ತನ್ನ ಗಮ್ಯಸ್ಥಾನವನ್ನು ತಲುಪದ ಕಾರಣ ಗುಪ್ತಾರವರು ರೈಲ್ವೇ ಇಲಾಖೆಯಲ್ಲಿ ದೂರು ನೀಡಿದರು.

    ಗುಪ್ತ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಆದ್ರೆ ಬುಧವಾರ ನಾಲ್ಕು ವರ್ಷಗಳ ಹಿಂದೆ ಬುಕ್ ಮಾಡಿದ್ದ ವ್ಯಾಗನ್ ತನ್ನ ಕೊನೆಯ ನಿಲ್ದಾಣವನ್ನು ತಲುಪಿದೆ. ಆದರೆ ವ್ಯಾಗನ್ ನಲ್ಲಿದ್ದ ಸರಕನ್ನು ಗುಪ್ತಾ ಪಡೆಯಲು ಹಿಂದೇಟು ಹಾಕಿದ್ದಾರೆ. ಸರಕುಗಳೆಲ್ಲಾ ಹಾನಿಗೊಳಗಾಗಿದ್ದು, ನನಗೆ ಲಕ್ಷಾಂತರ ರೂ. ನಷ್ಟವಾಗಿದೆ. ಈ ಸಂಬಂಧ ಗುಪ್ತಾರಿಗೆ ಆದ ನಷ್ವವನ್ನು ರೈಲ್ವೆ ಇಲಾಖೆ ಭರಿಸಲಿದೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.

    ದೂರು ದಾಖಲಿಸಿಕೊಂಡ ರೈಲ್ವೇ ಅಧಿಕಾರಿಗಳು ವ್ಯಾಗನ್ ಅನ್ನು ಹುಡುಕಲು ಪ್ರಯತ್ನಿಸಿದರೂ ಸಿಕ್ಕಿರಲಿಲ್ಲ. ವ್ಯಾಗನ್ ಕೆಲವು ಸರಿ ತಾಂತ್ರಿಕ ಸಮಸ್ಯೆಯಿಂದ ಬೇರ್ಪಡುತ್ತವೆ. ಅದೇ ರೀತಿ ಇದು ಆಗಿರಬಹುದು, ಯಾರು ಇದಕ್ಕೆ ಹೊಣೆಗಾರರಾಗಿದ್ದರೂ ಅವರ ಮೇಲೆ ಕ್ರಮ ಕೈಗೊಳ್ಳುವುದಾಗಿ ಎಂದು ರೈಲ್ವೆ ಅಧಿಕಾರಿ ಸಂಜಯ್ ಯಾದವ್ ತಿಳಿಸಿದ್ದಾರೆ.