Tag: Goodbye

  • ಅಡ್ವಾನ್ಸ್ ವಾಪಸ್ ಮಾಡಿದ ಸಮಂತಾ: ಚಿತ್ರರಂಗಕ್ಕೆ ತಾತ್ಕಾಲಿಕ ಗುಡ್ ಬೈ

    ಅಡ್ವಾನ್ಸ್ ವಾಪಸ್ ಮಾಡಿದ ಸಮಂತಾ: ಚಿತ್ರರಂಗಕ್ಕೆ ತಾತ್ಕಾಲಿಕ ಗುಡ್ ಬೈ

    ದು ನಿಜಕ್ಕೂ ಸಮಂತಾ (Samantha) ಅಭಿಮಾನಿಗಳಿಗೆ ಕಹಿ ಸಮಾಚಾರ. ಇದ್ದಕ್ಕಿದ್ದಂತೆಯೇ ಸಮಂತಾ ಸಿನಿಮಾ ರಂಗದಿಂದ ದೂರ (Goodbye) ಉಳಿಯುವ ಆಲೋಚನೆ ಮಾಡಿದ್ದಾರಂತೆ. ಕೈಯಲ್ಲಿರುವ ಎರಡು ಪ್ರಾಜೆಕ್ಟ್ ಗಳನ್ನು ಶೀಘ್ರವಾಗಿ ಮುಗಿಸಿಕೊಟ್ಟು, ಒಂದು ವರ್ಷಗಳ ಕಾಲ ಚಿತ್ರರಂಗದಿಂದ ದೂರ ಇರುವ ಪ್ಲ್ಯಾನ್ ಮಾಡಿದ್ದಾರಂತೆ.

    ಸದ್ಯ ವಿಜಯ್ ದೇವರಕೊಂಡ ಜೊತೆ ಖುಷಿ (Khushi,) ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಸಮಂತಾ.  ಈ ಸಿನಿಮಾದ ಶೂಟಿಂಗ್ ನಾಲ್ಕೈದು ದಿನಗಳ ಬಾಕಿಯಷ್ಟೇ ಇದೆಯಂತೆ. ಅಲ್ಲದೇ, ಸಿಟಾಡೆಲ್ (Citadel) ಪ್ರಾಜೆಕ್ಟ್ ಅನ್ನೂ ಬಹುತೇಕ ಮುಗಿಸಿದ್ದಾರಂತೆ ಸಮಂತಾ. ಈಗಾಗಲೇ ಒಪ್ಪಿಕೊಂಡಿದ್ದ ಕೆಲವು ಪ್ರಾಜೆಕ್ಟ್ ಗಳ ನಿರ್ಮಾಪಕರಿಗೆ ಹಣ ವಾಪಸ್ಸು ಮಾಡಿದ್ದಾರೆ ಎನ್ನುವ ಮಾಹಿತಿ ಹರಿದಾಡುತ್ತಿದೆ. ಇದನ್ನೂ ಓದಿ:‘ಕೆಡಿ’ ಸಿನಿಮಾದಲ್ಲಿ ಧ್ರುವ ಸರ್ಜಾ: ರೆಟ್ರೋ ಲುಕ್ ಫೋಟೋ ಲೀಕ್

    ಸಮಂತಾ ಇಂಥದ್ದೊಂದು ಕಠಿಣ ನಿರ್ಧಾರ ತೆಗೆದುಕೊಳ್ಳಲು ಕಾರಣ ಅವರಿಗಿರುವ ಅನಾರೋಗ್ಯ. ಆಟೋಇಮ್ಯೂನ್ ಎನ್ನುವ ಅಪರೂಪದ ಕಾಯಿಲೆಯಿಂದ ಸಮಂತಾ ಬಳಲುತ್ತಿದ್ದಾರೆ. ಕಳೆದ ವರ್ಷದಿಂದ ಅದಕ್ಕಾಗಿ ಅವರು ಚಿಕಿತ್ಸೆಯನ್ನೂ ಪಡೆಯುತ್ತಿದ್ದಾರೆ. ಚಿಕಿತ್ಸೆ ಪಡೆಯುವಾಗಲೂ ಅವರು ಚಿತ್ರರಂಗದಿಂದ ದೂರವಿದ್ದರು. ಇದೀಗ ಹೆಚ್ಚುವರಿಯಾಗಿ ಮತ್ತೆ ಅವರು ಚಿಕಿತ್ಸೆ ಪಡೆದುಕೊಳ್ಳಲಿದ್ದಾರಂತೆ.

    ಈ ಕಾಯಿಲೆಗೆ ಹೆಚ್ಚು ವಿಶ್ರಾಂತಿ ಅಗತ್ಯವಿದೆ ಎಂದು ವೈದ್ಯರು ಸೂಚಿಸಿರುವ ಹಿನ್ನೆಲೆಯಲ್ಲಿ ಒಂದು ವರ್ಷಗಳ ಕಾಲ ಚಿತ್ರರಂಗದಿಂದ ದೂರವಿದ್ದು ಚಿಕಿತ್ಸೆ ಮತ್ತು ವಿಶ್ರಾಂತಿ ಪಡೆಯಲು ಸಮಂತಾ ಪ್ಲ್ಯಾನ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಿನಿಮಾ ರಂಗಕ್ಕೆ ಗುಡ್ ಬೈ : ಶಾಕಿಂಗ್ ಸುದ್ದಿ ಕೊಟ್ಟ ಸ್ಟಾರ್ ಡೈರೆಕ್ಟರ್ ಲೋಕೇಶ್

    ಸಿನಿಮಾ ರಂಗಕ್ಕೆ ಗುಡ್ ಬೈ : ಶಾಕಿಂಗ್ ಸುದ್ದಿ ಕೊಟ್ಟ ಸ್ಟಾರ್ ಡೈರೆಕ್ಟರ್ ಲೋಕೇಶ್

     ಸೂಪರ್ ಹಿಟ್ ಚಿತ್ರಗಳನ್ನೇ ನೀಡಿರುವ ಲೋಕೇಶ್ ಕನಗರಾಜ್ (Lokesh Kanagaraj) ಇದ್ದಕ್ಕಿದ್ದಂತೆ ಶಾಕಿಂಗ್ ಸುದ್ದಿ ಕೊಟ್ಟಿದ್ದಾರೆ. ವೃತ್ತಿ ಜೀವನಕ್ಕೆ ಗುಡ್ ಬೈ ಹೇಳುವುದಾಗಿ ತಿಳಿಸಿದ್ದಾರೆ. ‘ನಾನು ಸಿನಿಮಾ ರಂಗಕ್ಕೆ ಬಂದಿದ್ದು ಆಕಸ್ಮಿಕ ಮತ್ತು ಒಂದಷ್ಟು ಕೆಲಸ ಮಾಡುವ ಆಸೆಯಿತ್ತು. ಹತ್ತು ಸಿನಿಮಾಗಳನ್ನು ನಿರ್ದೇಶಿಸಿ ಸಿನಿಮಾ ರಂಗವನ್ನು ತೊರೆಯುವುದಾಗಿ (Goodbye) ಅವರು ಮಾತನಾಡಿದ್ದಾರೆ.

    ತಮಿಳು (Tamil) ಸಿನಿಮಾ ರಂಗದಲ್ಲಿ ಅತೀ ಕಡಿಮೆ ಅವಧಿಯಲ್ಲೇ ಸಾಕಷ್ಟು ಹೆಸರು ಮಾಡಿದವರು ಲೋಕೇಶ್ ಕನಗರಾಜ್. ಐವರೆಗೂ ಇವರು ಮಾಡಿದ್ದು ಐದು ಸಿನಿಮಾ. ಇನ್ನೂ ಐದು ಸಿನಿಮಾಗಳ ನಂತರ ಚಿತ್ರರಂಗಕ್ಕೆ ಗುಡ್ ಬೈ ಹೇಳುವುದಾಗಿ ಅವರು ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿ ನೀಡಿದ್ದಾರೆ.  ಇದನ್ನೂಓದಿ:ಹೆಣ್ಣು ಮಗುವಿನ ತಂದೆಯಾದ ನಟ ರಾಮ್ ಚರಣ್

    ಲೋಕೇಶ್ ಅವರ ಮುಂದಿನ ಸಿನಿಮಾ ಕೂಡ ಅನೌನ್ಸ್ ಆಗಿದೆ. ದಳಪತಿ ವಿಜಯ್ ಜೊತೆ ಲಿಯೋ ಸಿನಿಮಾವನ್ನು ಮಾಡಲಿದ್ದಾರೆ. ಇದು ಅವರ 6ನೇ ಸಿನಿಮಾ. ಭಾರೀ ಬಜೆಟ್ ಸಿನಿಮಾ ಇದಾಗಿದ್ದು, ಈಗಾಗಲೇ ಈ ಚಿತ್ರಕ್ಕೆ ಬೇಕಾದ ತಯಾರಿ ಕೂಡ ಮಾಡಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಮುಗಿದರೆ ಕೈಯಲ್ಲಿ ಉಳಿಯೋದು ನಾಲ್ಕು ಸಿನಿಮಾ ಮಾತ್ರ.

    ತಮ್ಮದೇ ಆದ ಶೈಲಿಯ ಚಿತ್ರಗಳಿಂದ ಗುರುತಿಸಿಕೊಂಡಿರುವ ಲೋಕೇಶ್, ಇಷ್ಟು ಬೇಗ ಚಿತ್ರರಂಗವನ್ನು ತೊರೆಯುತ್ತಾರೆ ಎಂದು ಯಾರೂ ಊಹೆ ಕೂಡ ಮಾಡಿರಲಿಲ್ಲ. ಸಾಕಷ್ಟು ಚಿತ್ರಗಳನ್ನು ಕೊಡುತ್ತಾರೆ ಎಂದೇ ಹಲವರು ಕನಸು ಕಂಡಿದ್ದರು. ಲೋಕೇಶ್ ಜೊತೆ ಕೆಲಸ ಮಾಡುವ ಕನಸನ್ನೂ ಹಲವರು ಹೇಳಿಕೊಂಡಿದ್ದರು. ಅವರೆಲ್ಲರಿಗೂ ಲೋಕೇಶ್ ನಿರಾಸೆ ಮಾಡಿದ್ದಾರೆ.

  • ಹೆಚ್ಚು ಸಿನಿಮಾ ಮಾಡಲಾರೆ ಎಂದು ಶಾಕಿಂಗ್ ನ್ಯೂಸ್ ಕೊಟ್ಟ ಅನುಷ್ಕಾ ಶರ್ಮಾ

    ಹೆಚ್ಚು ಸಿನಿಮಾ ಮಾಡಲಾರೆ ಎಂದು ಶಾಕಿಂಗ್ ನ್ಯೂಸ್ ಕೊಟ್ಟ ಅನುಷ್ಕಾ ಶರ್ಮಾ

    ಬಾಲಿವುಡ್ (Bollywood) ನಟಿ ಅನುಷ್ಕಾ ಶರ್ಮಾ (Anushka Sharma) ತಮ್ಮ ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿಯೊಂದನ್ನು ನೀಡಿದ್ದಾರೆ. ಮಾಧ್ಯಮವೊಂದರ ಜೊತೆ ಮಾತನಾಡಿರುವ ಅವರು, ಹೆಚ್ಚೆಚ್ಚು ಸಿನಿಮಾಗಳಲ್ಲಿ ನಟಿಸಲು ಇಷ್ಟ ಪಡುವುದಿಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.

    ಮಗುವಾದ ನಂತರ ಅನುಷ್ಕಾ ಬಹುತೇಕ ಸಮಯವನ್ನು ಕುಟುಂಬಕ್ಕಾಗಿ ಮೀಸಲಿಟ್ಟಿದ್ದಾರೆ. ಜೊತೆಗೆ ಪತಿ ವಿರಾಟ್ ಕೊಹ್ಲಿ (Virat Kohli) ಜೊತೆ ಸಾಕಷ್ಟು ಪ್ರವಾಸವನ್ನು ಮಾಡಿದ್ದಾರೆ. ಮಗುವಿನೊಂದಿಗೆ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಹಾಗಾಗಿ ಸಿನಿಮಾ ಮಾಡುವುದನ್ನು ಕಡಿಮೆ ಮಾಡಿದ್ದಾರೆ. ಮುಂದಿನ ದಿನಗಳಲ್ಲೂ ತಾವು ಹೀಗೆಯೇ ಇರುವುದಾಗಿ ಹೇಳಿದ್ದಾರೆ. ಇದನ್ನೂ ಓದಿ:‘RRR’ ರೈಟರ್ ವಿಜೇಂದ್ರ ಪ್ರಸಾದ್‌ ಜೊತೆ ಕೇದರನಾಥ್‌ಗೆ ಕಂಗನಾ ಭೇಟಿ

    ನನಗೆ ಒಪ್ಪುವಂತಹ ಮತ್ತು ಪಾತ್ರವನ್ನು ನಾನೇ ಮಾಡಬೇಕು ಅನ್ನುವಂತಹ ಚಿತ್ರಗಳನ್ನು ಮಾತ್ರ ಒಪ್ಪಿಕೊಳ್ಳುತ್ತೇನೆ. ವರ್ಷಕ್ಕೆ ಒಂದೇ ಸಿನಿಮಾ ಮಾಡಿದರೂ ಪರವಾಗಿಲ್ಲ. ಒಪ್ಪಿಕೊಂಡ ಪಾತ್ರಗಳು ಅಭಿಮಾನಿಗಳಿಗೆ ಹಿಡಿಸಬೇಕು. ನಟಿಸಲು ನನಗೇನೂ ಅವಸರವಿಲ್ಲ ಎಂದು ಅನುಷ್ಕಾ ಹೇಳಿಕೊಂಡಿದ್ದಾರೆ.

    ಬಾಲಿವುಡ್ ಸಿನಿಮಾ ರಂಗದಲ್ಲಿ ಸಾಕಷ್ಟು ಹೆಸರು ಮಾಡಿರುವ ಅನುಷ್ಕಾ, ಅನೇಕ ಹಿಟ್ ಚಿತ್ರಗಳನ್ನು ಕೊಟ್ಟವರು. ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ನಟಿಸಿದವರು. ಇದೀಗ ಸಿನಿಮಾ ರಂಗದಿಂದ ಕ್ರಮೇಣ ದೂರವಾಗುವ ಕುರಿತು ಮಾತನಾಡಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.

  • ಊರಲ್ಲಿ ವ್ಯವಸಾಯ ಮಾಡ್ತೀನಿ – ಚಿತ್ರರಂಗಕ್ಕೆ ಪ್ರಥಮ್ ಗುಡ್‍ಬೈ?

    ಊರಲ್ಲಿ ವ್ಯವಸಾಯ ಮಾಡ್ತೀನಿ – ಚಿತ್ರರಂಗಕ್ಕೆ ಪ್ರಥಮ್ ಗುಡ್‍ಬೈ?

    ಬೆಂಗಳೂರು: ಒಳ್ಳೆ ಹುಡುಗ ಪ್ರಥಮ್ ಸಿನಿಮಾ ರಂಗಕ್ಕೆ ಗುಡ್‍ಬೈ ಹೇಳಲು ತೀರ್ಮಾನಿಸಿದ್ದು, `ನಟಭಯಂಕರ’ ನನ್ನ ಕೊನೆಯ ಸಿನಿಮಾ. ಮುಂದೇ ಸ್ವಗ್ರಾಮಕ್ಕೆ ತೆರಳಿ ವ್ಯವಸಾಯ ಮಾಡಲು ನಿರ್ಧಾರಿಸಿರುವುದ್ದಾಗಿ ತಿಳಿಸಿದ್ದಾರೆ.

    ತಮ್ಮ ಫೇಸ್ ಬುಕ್ ಖಾತೆಯಲ್ಲಿ ಈ ಕುರಿತು ಬರೆದು ಕೊಂಡಿರುವ ಪ್ರಥಮ್, ಬೆಂಗಳೂರಿನ ಯಾಂತ್ರಿಕ ಬದುಕು ಸಾಕಾಗಿದೆ. ಮನೆಯಲ್ಲಿ ಮದುವೆ ವಿಚಾರ ಕುರಿತು ಚರ್ಚೆ ನಡೆಯುತ್ತಿದ್ದು, ಅದಷ್ಟು ಬೇಗ ಊರಿನಲ್ಲಿ ಸೆಟ್ಲ್ ಆಗೋಣ ಎಂದು ಚಿಂತನೆ ನಡೆಸಿದ್ದಾಗಿ ಹೇಳಿದ್ದಾರೆ.

    ಎಫ್‍ಬಿ ಪೋಸ್ಟ್ ನಲ್ಲಿ ಏನಿದೆ?
    ತುಂಬಾ ಮುಖ್ಯವಾದ ವಿಚಾರ. ನಟಭಯಂಕರ ಚಿತ್ರವು ಬಹಳ ಅದ್ಧೂರಿಯಾಗಿ, ಅಚ್ಚುಕಟ್ಟಾಗಿ ಬರುತ್ತಿದ್ದು, ಬಹಳ ಮುಖ್ಯವಾಗಿ ಇದು ನನ್ನ ಚಿತ್ರರಂಗದ ಕೊನೆಯ ಸಿನಿಮಾ. ಬೆಂಗಳೂರಿನ ಯಾಂತ್ರಿಕ ಬದುಕು ಸಾಕಾಗಿದೆ. ಊರಿನಲ್ಲಿ ವ್ಯವಸಾಯ ಮಾಡುವ ನಿರ್ಧಾರ ಮಾಡಲಾಗಿದೆ. ಇದರ ಜೊತೆಗೆ ನನ್ನ ಮದುವೆ ವಿಚಾರವೂ ಮನೆಯಲ್ಲಿ ತುಂಬಾ ಚರ್ಚೆ ನಡೆಯುತ್ತಿದ್ದು, ಮದುವೆ ಆಗುವ ಮುನ್ನವೇ ಊರಿನಲ್ಲಿ ಸೆಟ್ಲ್ ಆಗೋಣ ಎನ್ನುವುದು ಮನೆಯವರ ಎಲ್ಲರ ಆಸೆ. ಈಗಾಗಲೇ ತೋಟದಲ್ಲಿ 200 ತೆಂಗಿನ ಸಸಿಗಳನ್ನ ನೆಟ್ಟು ಮಾದರಿ ರೈತನಾಗಬೇಕೆಂದು ಅದರ ಕಡೆ ಪ್ರಯತ್ನ ಮಾಡುತ್ತಿದ್ದೇನೆ.

    ಬೆಂಗಳೂರು ಬೋರಾಗಿದೆ. ಇದೇ ಕಡೇ ಸಿನಿಮಾ ನಮ್ಮ ಮನೆಯವರ ಒತ್ತಡಕ್ಕೆ ಮಣಿದು ಮದುವೆ ಆಗುವುದರ ಬಗ್ಗೆ ಚಿಂತಿಸುತ್ತಿದ್ದೀನಿ. ನಮ್ಮ ಗುರುಗಳು ಶ್ರೀಕಾಂತ್ ಪ್ರೇಮ ಕುಮಾರ್ ಸರ್ ಮತ್ತು ಸೂರಪ್ಪಬಾಬು ನಿರ್ಮಾಪಕರ ಸಂಘದ ಅಧ್ಯಕ್ಷರು ಸುಮ್ನೆ ಬೆಂಗಳೂರಲ್ಲಿ ಇದ್ದು ಕೆಲಸ ಮಾಡು. ಎಲ್ಲಿಗೂ ಹೋಗಬೇಡ ಎಂದು ಹೇಳಿದ್ದಾರೆ. ಒಂದು ಸಿನಿಮಾದಿಂದ ನೂರು ಜನ ಅನ್ನ ತಿನ್ನುತ್ತಾರೆ. ಬಾಯ್ ಮುಚ್ಚಿಕೊಂಡು ನನ್ನ ಮಾತು ಕೇಳು. ಬೆಂಗಳೂರಲ್ಲೇ ಸಿನಿಮಾ ಮಾಡು ಅಂದಿದ್ದಾರೆ. ನೋಡೋಣ… ನನಗಂತೂ ದೇವ್ರಾಣೆ ಬೆಂಗಳೂರಿನ ಯಾಂತ್ರಿಕ ಬದುಕು ಸಾಕಾಗಿದೆ ಎಂದು ಬರೆದುಕೊಂಡಿದ್ದಾರೆ.

    ಇತ್ತ ಸಾಮಾಜಿಕ ಜಾಲತಾಣದಲ್ಲಿ ಪ್ರಥಮ್ ಅವರ ತೀರ್ಮಾನದ ಕುರಿತು ಭಾರೀ ಚರ್ಚೆ ನಡೆಯುತ್ತಿದ್ದು, ನಿಮಗೆ ಮೀಟೂ ಭಯವೇ? ಅದಕ್ಕೆ ಚಿತ್ರರಂಗ ಬಿಡುವ ನಿರ್ಧಾರ ಮಾಡಿದ್ದೀರಾ ಎಂದು ನೆಟ್ಟಿಗರು ಕಾಲೆಳೆಯುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv