ಮದುವೆ ನಂತರ ಸಿನಿಮಾ ರಂಗದಿಂದಲೇ ದೂರವಾಗಿದ್ದಾರೆ ನಟಿ ರಾಧಿಕಾ ಪಂಡಿತ್. ಕನ್ನಡ ಸಿನಿಮಾ ರಂಗದಲ್ಲಿ ಬಹುಬೇಡಿಕೆ ಇರುವಾಗಲೇ ಮದುವೆ, ಸಂಸಾರ, ಮಕ್ಕಳು ಕಾರಣದಿಂದಾಗಿ ಮತ್ತೆ ಚಿತ್ರಗಳನ್ನು ಒಪ್ಪಿಕೊಂಡಿಲ್ಲ. ರಾಧಿಕಾ ಪಂಡಿತ್ (Radhika Pandit) ಮತ್ತು ಸಿನಿಮಾ ರಂಗಕ್ಕೆ ಬರಬೇಕು. ಅಭಿಮಾನಿಗಳನ್ನು ರಂಜಿಸಬೇಕು ಅನ್ನುವುದು ಅಸಂಖ್ಯಾತ ಅಭಿಮಾನಿಗಳ ಮನವಿ ಆಗಿತ್ತು.
ಹೌದು, ಮತ್ತೆ ರಾಧಿಕಾ ಅವರನ್ನು ಸ್ಕ್ರೀನ್ ಮೇಲೆ ನೋಡಬೇಕು ಎನ್ನುವುದು ಅವರ ಫ್ಯಾನ್ಸ್ ಬೇಡಿಕೆಯಾಗಿತ್ತು. ಅದಕ್ಕೆ ಈಗ ರಾಧಿಕಾ ಸ್ಪಂದಿಸಿದ್ದಾರೆ. ಅಭಿಮಾನಿಯೊಬ್ಬ ಕೇಳಲಾದ ಪ್ರಶ್ನೆಗೆ ಉತ್ತರಿಸಿರುವ ರಾಧಿಕಾ, ಸಮಯ ಕೂಡಿ ಬರಲಿ ಸಿನಿಮಾ ರಂಗಕ್ಕೆ ಮತ್ತೆ ಬರುತ್ತೇನೆ ಅಂದಿದ್ದಾರೆ.
ಯಶ್ ಮತ್ತು ರಾಧಿಕಾ ಅಪರೂಪದ ಜೋಡಿ. ಸಿನಿಮಾ ಮತ್ತು ಖಾಸಗಿ ಬದುಕಿನಲ್ಲೂ ಅಷ್ಟೇ ಪ್ರೀತಿ ವಿಶ್ವಾಸವನ್ನು ಉಳಿಸಿಕೊಂಡಿದ್ದಾರೆ. ಸತಿಪತಿಯಾದ ನಂತರ ಮತ್ತೆ ಈ ಜೋಡಿ ಜೊತೆಯಾಗಿ ನಟಿಸಬೇಕು ಎನ್ನುವುದು ಅಭಿಮಾನಿಗಳ ಆಸೆ. ಆದರೆ, ಆ ದಿನ ಯಾವತ್ತು ಬರತ್ತೋ ಕಾದು ನೋಡಬೇಕು.
ಸದ್ಯ ರಾಧಿಕಾ ಪಂಡಿತ್ ಕುಟುಂಬವನ್ನು ನಿಭಾಯಿಸ್ತಾ ಇದ್ದಾರೆ. ಯಶ್ ಸಿನಿಮಾ ಮಾಡುತ್ತಿದ್ದಾರೆ. ಯಶ್ ನಟನೆಯ ಟಾಕ್ಸಿಕ್ ಸಿನಿಮಾ ಇನ್ನಷ್ಟೇ ಚಿತ್ರೀಕರಣ ಪ್ರಾರಂಭಿಸಬೇಕು. ಈ ಸಮಯದಲ್ಲಿ ರಾಧಿಕಾ ಅಭಿಮಾನಿಗಳ ಜೊತೆ ಸೋಷಿಯಲ್ ಮೀಡಿಯಾದಲ್ಲಿ ಹಲವು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.
ಕನ್ನಡವೂ ಸೇರಿದಂತೆ ಹಲವಾರು ಭಾಷೆಗಳ ಸಿನಿಮಾದಲ್ಲಿ ನಟಿಸಿರುವ ಅಮಲಾ ಪೌಲ್ (Amala Paul), ತಮ್ಮ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದ್ದಾರೆ. ತಾವು ಅವಳಿ ಮಕ್ಕಳ (Twins) ತಾಯಿ ಆಗುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ. ಈ ಸುದ್ದಿಯನ್ನು ಕೇಳಿದ ಅವರ ಅಭಿಮಾನಿಗಳಿಗೆ ಶುಭ ಹಾರೈಸಿದ್ದಾರೆ.
ಒಂದು ಕಡೆ ಅವಳಿ ಮಕ್ಕಳ ತಾಯಿ ಆಗುತ್ತಿರುವುದು ಖುಷಿ ಇದ್ದರೆ, ಮತ್ತೊಂದು ಕಡೆ ಅಮಲಾ ನಟನೆಯ ‘ಆಡುಜೀವಿತಂ’ (Aadujeevitham) ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಈ ಚಿತ್ರದಲ್ಲಿ ಪೃಥ್ವಿರಾಜ್ ಸುಕುಮಾರ್‌ಗೆ ಅಮಲಾ ನಾಯಕಿಯಾಗಿದ್ದಾರೆ. ಈ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಬೋಲ್ಡ್ ಬಟ್ಟೆಯಲ್ಲಿ ಕಾಣಿಸಿಕೊಂಡ ಅಮಲಾಗೆ ನೆಟ್ಟಿಗರು ಕಾಲೆಳೆದಿದ್ದಾರೆ. ಬಟ್ಟೆ ಮ್ಯಾಟರ್‌ಗೆ ನಟಿಯ ಹಿಗ್ಗಾಮುಗ್ಗಾ ಟ್ರೋಲ್ ಮಾಡಿದ್ದಾರೆ.
ಇತ್ತೀಚೆಗೆ ನಟಿ ಅಮಲಾ ಅವರು ಉದ್ಯಮಿ ಜಗತ್ ದೇಸಾಯಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆಯಾಗಿ ಒಂದು ತಿಂಗಳ ನಂತರ ತಾಯಿಯಾಗಿರುವ ಗುಡ್ ನ್ಯೂಸ್ ತಿಳಿಸಿದ್ದರು. ಚೊಚ್ಚಲ ಮಗುವಿನ ಆಗಮನಕ್ಕೆ ಎದುರು ನೋಡ್ತಿರುವಾಗ ತಾವು ನಟಿಸಿರುವ ಸಿನಿಮಾಗೂ ಪ್ರಚಾರಕ್ಕೆ ನಟಿ ಸಾಥ್ ನೀಡುತ್ತಿದ್ದಾರೆ.
ಇದೀಗ ಸಂದರ್ಶನಕ್ಕೆ ಬರುವಾಗ ಕಡುನೀಲಿ ಬಣ್ಣದ ಸ್ಲೀವ್‌ಲೆಸ್ ಡ್ರೆಸ್ ಧರಿಸಿ ಬಂದಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ನೆಗೆಟಿವ್ ಕಾಮೆಂಟ್ ಹಾಕಿದ್ದಾರೆ. ಇದೆಂಥಾ ಡ್ರೆಸ್ ಬೆಡ್‌ನಿಂದ ಎದ್ದ ಕೂಡಲೇ ಬಾತ್‌ರೂಮ್‌ಗೆ ಹಾಕಿಕೊಂಡು ಹೋಗುವ ಡ್ರೆಸ್ ಎಂದು ನೆಟ್ಟಿಗರೊಬ್ಬರು ಕುಟುಕಿದ್ದಾರೆ. ನಾನು ಅಮಲಾ ಪೌಲ್ ದೊಡ್ಡ ಅಭಿಮಾನಿಯಾಗಿದ್ದೆ. ಈಗ ಅಭಿಮಾನಿಯಲ್ಲ ಎಂದು ಮತ್ತೊಬ್ಬರು ಹೇಳಿದ್ದಾರೆ. ನಟಿಯ ವಿಡಿಯೋ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ. ಆದರೆ ನೆಗೆಟಿವ್ ಕಾಮೆಂಟ್‌ಗೆ ನಟಿ ಕ್ಯಾರೆ ಎನ್ನದೇ ತಮ್ಮ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ.
ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಬ್ಲೆಸ್ಸಿ ನಿರ್ದೇಶನದ ಈ ‘ಆಡುಜೀವಿತಂ’ ಚಿತ್ರದ ಕಥೆ ಇಮಿಗ್ರಟ್ಸ್ ಸುತ್ತವೇ ಸಾಗುತ್ತದೆ. ತನ್ನ ಹೊಟ್ಟೆ ಪಾಡಿಗಾಗಿ ಕೆಲಸ ಅರಸಿ ಸೌದಿ ಅರೇಬಿಯಾಗೆ ವಲಸೆ ಹೋಗುವ ನಸೀಬ್ ಮೊಹಮ್ಮದ್ ಎನ್ನುವ ಕೇರಳದ ವ್ಯಕ್ತಿ ಅಲ್ಲಿ ಅನುಭವಿಸುವ ಕಷ್ಟ, ಎದುರಿಸುವ ಸಮಸ್ಯೆ ಹೈಲೆಟ್. ಇನ್ನು ಆತನ ಪಾಸ್ಪೋರ್ಟ್ ಕಸಿದು ಆತನಿಗೆ ಕೊಡುವ ಹಿಂಸೆಗಳು ಆ ಬಿಸಿಲಿನ ಮರುಭೂಮಿಯಲ್ಲಿ ಆತ ಪಡುವ ಯಾತನೆ ಕುರಿತು ಸಾಗುವ ಕಥೆ ಇಲ್ಲಿದೆ.
ನಿರ್ದೇಶಕ ಬ್ಲೆಸ್ಸಿ ಅವರ 15 ವರ್ಷದ ಕನಸಿನ ಕಥೆ ಇದು. ಅವರ ಕಲ್ಪನೆಯ ಪಾತ್ರದಲ್ಲಿ ವಲಸಿಗ ವ್ಯಕ್ತಿಯಾಗಿ ಹೊಸ ಲುಕ್ ಮೂಲಕ ಕಾಣಿಸಿಕೊಂಡಿರುವ ಪೃಥ್ವಿರಾಜ್ ಸುಕುಮಾರನ್, ಹಲವಾರು ವರ್ಷಗಳಿಂದ ಈ ಚಿತ್ರಕ್ಕಾಗಿ ದುಡಿದಿದ್ದಾರೆ. ಇಡೀ ಚಿತ್ರತಂಡ ಹಗಲು ರಾತ್ರಿ ಎನ್ನದೆ ಚಿತ್ರದ ಔಟ್ಪುಟ್ ಗಾಗಿ ದುಡಿದಿದೆ. ಪೃಥ್ವಿರಾಜ್ ನಿರೀಕ್ಷೆಯ ಚಿತ್ರ ಇದಾಗಿದ್ದು, ಬ್ಲೆಸ್ಸಿ ನಿರ್ದೇಶನದ ;ಆಡುಜೀವಿತಂ’ 2008ರಲ್ಲಿ ಬೆನ್ಯಾಮಿನ್ ಬರೆದ ಅದೇ ಹೆಸರಿನ ಮಲಯಾಳಂ ಕಾದಂಬರಿ ಸಿನಿಮಾ ಇದು.
ಎರಡ್ಮೂರು ದಿನಗಳ ಹಿಂದೆಯಷ್ಟೇ ಸೋಷಿಯಲ್ ಮೀಡಿಯಾ ಮೂಲಕ ಗುಡ್ ನ್ಯೂಸ್ ಕೊಡುವುದಾಗಿ ನಟಿ ಹರಿಪ್ರಿಯಾ (Haripriya) ಹೇಳಿಕೊಂಡಿದ್ದರು. ಮದುವೆಯಾಗಿ ಎರಡು ತಿಂಗಳು ಕೂಡ ಕಳೆದಿಲ್ಲ ಏನಿರಬಹುದಪ್ಪಾ ಗುಡ್ ನ್ಯೂಸ್ (Good News) ಎಂದು ಅಭಿಮಾನಿಗಳು ತಲೆಕೆರೆದುಕೊಂಡಿದ್ದರು. ತಮ್ಮದೇ ಆದ ರೀತಿಯಲ್ಲಿ ಕಾಮೆಂಟ್ ಕೂಡ ಮಾಡಿದ್ದರು. ಪತಿ ವಸಿಷ್ಠ ಸಿಂಹ (Vasishtha Simha) ಅವರನ್ನೂ ಎಳೆದು ತಂದಿದ್ದರು.
ಹರಿಪ್ರಿಯಾ ನಾನಾ ರೀತಿಯಲ್ಲಿ ಅರ್ಥ ಕೊಡುವಂತೆ ಪೋಸ್ಟ್ ಮಾಡಿದ್ದರಿಂದ, ಗುಡ್ ನ್ಯೂಸ್ ಯಾವುದರ ಬಗ್ಗೆ ಇರಬಹುದು ಎನ್ನುವ ಚರ್ಚೆ ಕೂಡ ಶುರುವಾಗಿತ್ತು. ಸಿನಿಮಾ ಬಗ್ಗೆ ಹೇಳ್ತಾರಾ? ವೈಯಕ್ತಿಕ ಜೀವನದ ಬಗ್ಗೆ ಸುದ್ದಿ ಕೊಡ್ತಾರಾ? ಅಥವಾ ಬೇರೆ ಯಾವುದರ ಬಗ್ಗೆ ಹೇಳಬಹುದು ಎನ್ನುವ ಅಂದಾಜನ್ನಂತೂ ಕೆಲವರು ಮಾಡಿದ್ದರು. ಈ ಎಲ್ಲಾ ಲೆಕ್ಕಾಚಾರ ಉಲ್ಟಾ ಆಗುವಂತಹ ಸುದ್ದಿಯನ್ನು ಹರಿಪ್ರಿಯಾ ನೀಡಿದ್ದಾರೆ. ಇದನ್ನೂ ಓದಿ: ತೆರೆಗೆ ಅಪ್ಪಳಿಸಲು ಸಜ್ಜಾದ ರಕ್ಷಿತ್ ನಟನೆಯ `ಸಪ್ತಸಾಗರದಾಚೆ ಎಲ್ಲೋ’ ಚಿತ್ರ
ಈ ಗುಡ್ ನ್ಯೂಸ್ ನಿಜವಾಗಿಯೂ ಶುಭಸುದ್ದಿನಾ? ಅಥವಾ ಅಭಿಮಾನಿಗಳಿಗೆ ಆತಂಕ ಮೂಡಿಸುವಂತಹ ಸುದ್ದಿನಾ ಗೊತ್ತಿಲ್ಲ. ಒಟ್ಟಿನಲ್ಲಿ ಗುಡ್ ನ್ಯೂಸ್ ಎಂದು ಹೇಳುತ್ತಾ, ತಾವೊಂದು ಯೂಟ್ಯೂಬ್ ಚಾನೆಲ್ ಶುರು ಮಾಡುತ್ತಿರುವ ಕುರಿತು ಹಂಚಿಕೊಂಡಿದ್ದಾರೆ. ಈ ಯೂಟ್ಯೂಬ್ ಮೂಲಕ ಅಭಿಮಾನಿಗಳಿಗೆ ಹೊಸ ಹೊಸ ವಿಷಯವನ್ನು ಹೇಳಲಿದ್ದಾರಂತೆ. ಅಲ್ಲದೇ, ಅಭಿಮಾನಿಗಳ ಜೊತೆ ಸಂವಹನವನ್ನೂ ಇಟ್ಟುಕೊಳ್ಳುತ್ತಾರಂತೆ.
ಮದುವೆಯ ನಂತರ ಹರಿಪ್ರಿಯಾ ಸಿನಿಮಾ ರಂಗದಲ್ಲಿ ಮುಂದುವರೆಯುತ್ತಾರಾ? ಅಥವಾ ಬ್ರೇಕ್ ತಗೆದುಕೊಳ್ಳುತ್ತಾರೆ ಎನ್ನುವ ಗೊಂದಲ ಕೂಡ ಇದೆ. ಯೂಟ್ಯೂಬ್ ಚಾನೆಲ್ ಶುರು ಮಾಡಿ, ಸಿನಿಮಾ ರಂಗದಿಂದ ದೂರ ಆಗುವಂತಹ ಪ್ಲ್ಯಾನ್ ಏನಾದರೂ ಮಾಡಿರಬಹುದಾ? ಈ ಕುರಿತು ಯಾವುದೇ ಕ್ಲ್ಯಾರಿಟಿ ನೀಡಿಲ್ಲ ಹರಿಪ್ರಿಯಾ.
ಮಂಗಳೂರು: ಕರಾವಳಿಯ ಪ್ರಸಿದ್ಧ ಜಾನಪದ ಕಲೆ ಹುಲಿವೇಷ (Tiger Dance). ಅದು ಮೈಮನ ನವಿರೇಳಿಸುವಂತಹ ಕುಣಿತದ ಜೊತೆಗೆ ಜನತೆಗೆ ಮನರಂಜನೆ ಒದಗಿಸುತ್ತದೆ. ಇಷ್ಟು ಮಾತ್ರ ಅಲ್ಲ ಮಂಗಳೂರಿನ ಯುವಕರ ಹುಲಿವೇಷದ ತಂಡ ಮನೋರಂಜನೆಯ ಜೊತೆಗೆ ಹಲವು ಕುಟುಂಬಗಳಿಗೆ ಬೆಳಕು ನೀಡುವ ಪ್ರಯತ್ನ ಮಾಡಿದೆ. ಇತ್ತೀಚೆಗೆ ಹುಲಿ ವೇಷ ಹಾಕಿ ಕುಣಿದ ಯುವಕರು ಅದರಿಂದ ಬಂದ ದೇಣಿಗೆ ಮೊತ್ತವನ್ನ ಕ್ಯಾನ್ಸರ್ (Cancer) ಪೀಡಿತರು ಮತ್ತು ಅಶಕ್ತರಿಗೆ ನೀಡಿ ಮಾದರಿಯಾಗಿದ್ದಾರೆ.
ಹೌದು. ಕರಾವಳಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಬರ್ತಾ ಇದ್ದಂತೆ ಶುರು ಆಗೋದು ನಾಡ ಹುಲಿಗಳ ಅಬ್ಬರ. ಇಲ್ಲಿ ಹುಲಿವೇಷ ಇಲ್ಲದೆ ಯಾವುದೇ ಹಬ್ಬವೂ ನಡೆಯುವುದು ಕಡಿಮೆ. ಹುಲಿ ವೇಷ ಹಾಕುವವರು ಸಮಾಜಮುಖಿಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಮಂಗಳೂರು (Mangaluru) ಹೊರವಲಯದ ತೊಕ್ಕೊಟ್ಟುವಿನಲ್ಲಿ ಹುಲಿ ವೇಷ ಹಾಕಿ ಕುಣಿದ ಯುವಕರು (Youths) ಅದರಿಂದ ದೇಣಿಗೆ ರೂಪದಲ್ಲಿ ಬಂದ 60ಸಾವಿರ ಹಣವನ್ನು ಕ್ಯಾನ್ಸರ್ ಪೀಡಿತರು ಮತ್ತು ಅಶಕ್ತರಿಗೆ ನೀಡಿದ್ದಾರೆ.
ತೊಕ್ಕೊಟ್ಟಲ್ಲಿ ನಡೆದ 2022ರ ಸಾಲಿನ ಮೊಸರು ಕುಡಿಕೆ ಉತ್ಸವದ ಶೋಭಾ ಯಾತ್ರೆಯಲ್ಲಿ ಉಳ್ಳಾಲ (Ullal) ಬೈಲಿನ ವೈದ್ಯನಾಥ ಫ್ರೆಂಡ್ಸ್ (ರಿ) ಹಾಗೂ ಟೀಮ್ ಛತ್ರಪತಿ ತಂಡವು ಹುಲಿ ವೇಷದ ಟ್ಯಾಬ್ಲೊ ಇಳಿಸಿ ಜನರನ್ನ ರಂಜಿಸಿತ್ತು. ಆ ದಿನ ಬಂದ ಹಣವನ್ನು ಸ್ವಂತಕ್ಕೆ ಬಳಸದೇ ಅಶಕ್ತರಿಗೆ ನೀಡಿದೆ. ಇದನ್ನೂ ಓದಿ: ವಿಧಾನ ಪರಿಷತ್‍ನಲ್ಲಿಂದು ಮತಾಂತರ ನಿಷೇಧ ವಿಧೇಯಕ ಮಂಡನೆ
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ಮದ್ಯ ಪ್ರಿಯರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದ್ದು, ಲಾಕ್‍ಡೌನ್ ವೇಳೆ ಮದ್ಯ ಮಾರಾಟದ ಸಮಯವಾಕಾಶವನ್ನು 2 ಗಂಟೆ ವಿಸ್ತರಣೆ ಮಾಡಲಾಗಿದೆ.
ಈ ಹಿಂದೆ ಕೊರೊನಾ ಲಾಕ್‍ಡೌನ್‍ನಿಂದ ಮದ್ಯದಂಗಡಿಗಳನ್ನು ಬಂದ್ ಮಾಡಲಾಗಿತ್ತು. ಆ ನಂತರ ಮೇ 4ರಂದು ಷರತ್ತು ವಿಧಿಸಿ ರಾಜ್ಯಾದ್ಯಂತ ಮದ್ಯದಂಗಡಿಗಳನ್ನು ಒಪನ್ ಮಾಡಲಾಗಿತ್ತು. ಆಗ ಬೆಳಗ್ಗೆ 9ರಿಂದ ಸಂಜೆ 7ರವರೆಗೆ ಓಪನ್ ಮಾಡುವಂತೆ ಸೂಚಿಸಲಾಗಿತ್ತು. ಈಗ ಈ ಸಮಯವನ್ನು ವಿಸ್ತರಣೆ ಮಾಡಲಾಗಿದೆ.
ಈ ವಿಚಾರವಾಗಿ ರಾಜ್ಯ ಅಬಕಾರಿ ಇಲಾಖೆ ಇಂದು ಸುತ್ತೋಲೆಯನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಬೆಳಗ್ಗೆ 9ರಿಂದ ಸಂಜೆ 9ರವರಗೆ ಮದ್ಯದಂಗಡಿಗಳನ್ನು ತೆರೆಯಬಹುದು ಎಂದು ಹೇಳಿದೆ. ಈ ಮೂಲಕ ಇರುವ ಸ್ಟಾಕ್‍ಗಳನ್ನು ಖಾಲಿ ಮಾಡುವಂತೆ ಸೂಚಿಸಿ ಎರಡು ಗಂಟೆಗಳ ಹೆಚ್ಚುವರಿ ಸಮಯವನ್ನು ನೀಡಿದೆ.
ಬೆಂಗಳೂರು: ಬಿಗ್ ಬಾಸ್-7ರ ವಿಜೇತ ಶೈನ್ ಶೆಟ್ಟಿ ಬಿಗ್ ಮನೆಯಿಂದ ಹೊರ ಬರುತ್ತಿದ್ದಂತೆ ಪ್ರೇಕ್ಷಕರಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಶೈನ್, ನಾನು ಬಿಗ್ ಬಾಸ್ ಮನೆಗೆ ಹೋಗುವ ಮೊದಲೇ ಒಂದು ಸಿನಿಮಾದ ಮಾತುಕತೆ ಆಗಿತ್ತು. ಬಿಗ್ ಬಾಸ್ ಆಫರ್ ಬಂದಾಗ ನಾನು ಚಿತ್ರತಂಡದ ಜೊತೆ ಮಾತಕತೆ ನಡೆಸಿದೆ. ಆಗ ಅವರು ಬಿಗ್ ಬಾಸ್‍ಗೆ ಹೋಗಿ ಎಂದು ಹೇಳಿದ್ದರು. ನಾನು ಬಿಗ್ ಬಾಸ್ ಗೆದ್ದಾಗ ಅವರು ಕರೆ ಮಾಡಿದ್ದರು. ಶೀಘ್ರದಲ್ಲೇ ಯಾರು, ಯಾವ ಪ್ರೊಡಕ್ಷನ್ ಹೌಸ್, ಯಾವ ಬ್ಯಾನರ್ ಎನ್ನುವುದನ್ನು ಹೇಳುತ್ತೇನೆ ಎಂದು ಶೈನ್ ತಿಳಿಸಿದ್ದಾರೆ. ಇದನ್ನೂ ಓದಿ: ವಾಸುಕಿ ವಿನ್ ಆಗ್ತಾರೆ ಅಂದ್ಕೊಂಡಿದ್ದೆ: ಶೈನ್ ಶೆಟ್ಟಿ
ಶೈನ್ ಶೆಟ್ಟಿ ಅವರು ನಟಿಸುತ್ತಿರುವ ಸಿನಿಮಾವನ್ನು ‘ರಿಷಬ್ ಶೆಟ್ಟಿ ಫಿಲ್ಮ್ಸ್’ ನಿರ್ಮಿಸುತ್ತಿದೆ ಎಂಬ ವಿಷಯ ಮೂಲಗಳಿಂದ ತಿಳಿದು ಬಂದಿದೆ. ಆದರೆ ಈ ಚಿತ್ರವನ್ನು ಯಾರು ನಿರ್ದೇಶನ ಮಾಡುತ್ತಿದ್ದಾರೆ ಎಂಬುದು ತಿಳಿದು ಬಂದಿಲ್ಲ. ‘ಕಥಾಸಂಗಮ’ ಚಿತ್ರದ ಏಳು ನಿರ್ದೇಶಕರಲ್ಲಿ ಒಬ್ಬರು ಈ ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಬಿಗ್ ಬಾಸ್ ಮನೆಗೆ ಹೋಗುವ ಮೊದಲೇ ಶೈನ್ ಈ ಸಿನಿಮಾದ ಮಾತುಕತೆ ನಡೆಸಿದ್ದರು.
ಬಿಗ್ ಬಾಸ್ ಗೆದ್ದ ಬಳಿಕ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಶೈನ್, ಈ ಕ್ಷಣ ನಾನು ಖುಷಿಯಲ್ಲಿ ತೇಲಾಡುತ್ತಿದ್ದೇನೆ. ನನ್ನ ಇಷ್ಟು ವರ್ಷ ಶ್ರಮಕ್ಕೆ ಹಾಗೂ ಪ್ರಯತ್ನಕ್ಕೆ ಒಂದು ಫಲ ಸಿಕ್ಕಿದೆ. ದೇವರು ಕೊಡಬೇಕಾದರೆ ಎಲ್ಲವನ್ನು ಕೊಡುತ್ತಾರೆ ಎನ್ನುವಂತ ಫೀಲಿಂಗ್ ನಲ್ಲಿ ನಾನಿದ್ದೇನೆ ಎಂದು ಗೆಲುವಿನ ಅನುಭವವನ್ನು ಹಂಚಿಕೊಂಡಿದ್ದರು.
ಅಕ್ಷಯ್ ಕುಮಾರ್ ಅವರು ಮುಂಚಿನಿಂದಲೂ ದೇಶದ ಸಮಸ್ಯೆಗಳಿಗೆ ಬೇಗ ಸ್ಪಂದಿಸುತ್ತಾರೆ. ಹಿಂದೆ ಕೇರಳದಲ್ಲಾದ ಪ್ರವಾಹ ಮತ್ತು ಚೆನ್ನೈ ಪ್ರವಾಹಗಳಿಗೂ ಧನ ಸಹಾಯ ಮಾಡಿದ್ದರು. ಭಾರತೀಯ ಸೇನೆಯ ಬಗ್ಗೆ ವಿಶೇಷ ಅಸಕ್ತಿಯನ್ನು ಹೊಂದಿರುವ ಅವರು ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರ ಕುಟುಂಬಕ್ಕೂ ಧನ ಸಹಾಯ ಮಾಡಿದ್ದರು. ಇದನ್ನು ಓದಿ: ಅಕ್ಷಯ್ ಕುಮಾರ್ ಆರ್ಮಿಗೆ ಸೇರ್ತಾರಂತೆ!
ಅಕ್ಷಯ್ ಕುಮಾರ್ ಅವರು ಸದ್ಯ ರಾಜ್ ಮೆಹ್ತಾ ನಿರ್ದೇಶನದ ಗೂಡ್ ನ್ಯೂಸ್ ಚಿತ್ರದಲ್ಲಿ ಅಭಿನಯ ಮಾಡುತ್ತಿದ್ದು, 9 ವರ್ಷಗಳ ನಂತರ ಬಾಲಿವುಡ್ ಬೆಬೊ ಕರೀನಾ ಕಪೂರ್ ಅವರ ಜೊತೆ ನಟಿಸಲಿದ್ದಾರೆ.
ಬೆಂಗಳೂರು: ಡಿಸಿಪಿ ರವಿ ಚನ್ನಣ್ಣನವರ್ ಅವರು ನವರಸನಾಯಕ ಜಗ್ಗೇಶ್ ಅವರಿಗೆ ಸಿಹಿ ಸುದ್ದಿಯನ್ನು ನೀಡಿದ್ದಾರೆ. ಈ ಬಗ್ಗೆ ಜಗ್ಗೇಶ್ ಅವರು ಟ್ವೀಟ್ ಮಾಡಿ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.
ಇತ್ತೀಚೆಗೆ ಬೆಂಗಳೂರಿನಲ್ಲಿ ಅಂಧ ದಂಪತಿಯ ಮಗುವನ್ನು ಅಪಹರಣ ಮಾಡಲಾಗಿತ್ತು. ಈಗ ಆ ಮಗು ಪತ್ತೆಯಾಗಿದ್ದು, ಈ ಬಗ್ಗೆ ನಟ ಜಗ್ಗೇಶ್ ತಮ್ಮ ಟ್ವೀಟ್ ಮಾಡಿದ್ದಾರೆ. ಜಗ್ಗೇಶ್ ಅವರು, “ರಾಯರಿಗೆ ಅಂಗಲಾಚಿ ಅಮಾಯಕ ದಂಪತಿ ಕಳೆದುಕೊಂಡ ಮಗುವಿನ ಪತ್ತೆಗಾಗಿ ಹುಚ್ಚನಂತೆ ಪ್ರಾರ್ಥಿಸಿದ್ದೆ. ನಲ್ಮೆಯ ಅಧಿಕಾರಿ ಡಿಸಿಪಿ ರವಿಚನ್ನಣ್ಣನವರ್ ಮಗು ಸಿಕ್ಕಿದ ಸಿಹಿ ಸುದ್ದಿ ನೀಡಿದರು ಧನ್ಯವಾದಗಳು. ಅಲ್ಲದೆ ಬೆಂಗಳೂರು ಪೊಲೀಸ್ ಅಧಿಕಾರಿಗಳಿಗೂ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ:ಸಹಾಯ ಮಾಡೋ ನೆಪದಲ್ಲಿ ಅಂಧ ದಂಪತಿಯ ಮಗುವನ್ನು ಕಿಡ್ನಾಪ್‍ಗೈದ ಮಹಿಳೆ
ಈ ಮೊದಲು ಜಗ್ಗೇಶ್ ಅವರು, ಮಾನ್ಯ ಅಧಿಕಾರಿ ಬಂಧುಗಳೆ ಈ ವಿದ್ರಾವಕ ಘಟನೆ ನನಗೆ ಕಣ್ಣೀರು ತರಿಸಿತು. ತಮ್ಮಲ್ಲಿ ನನ್ನ ಕಳಕಳಿ ಮನವಿ ಆ ಮಗು ಪತ್ತೆ ಮಾಡಿ ಅಂದ ದಂಪತಿಗೆ ಕಂದಮ್ಮ ಸಿಗುವಂತೆ ಮಾಡಿ. ಮಕ್ಕಳ ಕಳ್ಳರಿಗೆ ತಕ್ಕ ಪಾಠ ಕಲಿಸಿ. ಕಣ್ಣಿಲ್ಲದ ಅಮಾಯಕರ ಮಕ್ಕಳು ಕದಿಯುವಂತ ರಾಕ್ಷಸರ ಕಾನೂನಿನ ಕ್ರಮಕ್ಕೆ ನನ್ನ ಪ್ರಾರ್ಥನೆ ಎಂದು ಟ್ವೀಟ್ ಮಾಡಿದ್ದರು.
ಏನಿದು ಘಟನೆ?
ಮಗುವಿಗೆ ನೀರು ಕುಡಿಸಲು ಸಹಾಯ ಮಾಡುವಂತೆ ಅಂಧ ದಂಪತಿಯ ಸಹಾಯಕ್ಕೆ ಬಂದ ಮಹಿಳೆ ಮಗುವಿನೊಂದಿಗೆ ಪರಾರಿಯಾಗಿರುವ ಮೆಜೆಸ್ಟಿಕ್ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಘಟನೆ ನಡೆದಿತ್ತು. ರಾಯಚೂರು ಮೂಲದ ಅಂಧ ದಂಪತಿಯಾದ ಚಿನ್ನು ಮತ್ತು ಬಸವರಾಜು ಅವರ ಮಗುವನ್ನು ಶನಿವಾರ ಬೆಳಗ್ಗೆ ಅಪಹರಣವಾಗಿತ್ತು. ಬಸ್ ನಿಲ್ದಾಣಕ್ಕೆ ಆಗಮಿಸಿದ್ದ ದಂಪತಿ ತಮ್ಮ 8 ತಿಂಗಳ ಮಗುವಿಗೆ ನೀರು ಕುಡಿಸಲು ಮುಂದಾಗಿದ್ದರು. ಈ ಸಂದರ್ಭದಲ್ಲಿ ಅನಾಮಿಕ ಮಹಿಳೆ ಸಹಾಯ ನೆಪದಲ್ಲಿ ಧಾವಿಸಿದ್ದು, ಮಗುವಿನೊಂದಿಗೆ ಎಸ್ಕೇಪ್ ಆಗಿದ್ದಳು.
ಈ ಬಗ್ಗೆ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಾಗಿದ್ದು, ಈಗ ಮಗು ಪತ್ತೆಯಾಗಿದೆ.
ಬೆಂಗಳೂರು: ಭಾರದ ಶಾಲಾ ಬ್ಯಾಗ್ ಹೊತ್ತುಕೊಂಡು ಹೋಗುವ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ.
ಭಾರದ ಶಾಲಾ ಬ್ಯಾಗ್‍ಗಳಿಗೆ ಮಿತಿ ಹೇರಲಾಗಿದ್ದು, ಮಕ್ಕಳಿಗೆ ಕೊಡುವ ಹೋಂ ವರ್ಕ್ ಕಿರಿಕಿರಿಗೂ ನಿಯಂತ್ರಣ ನೀಡಲಾಗಿದೆ. ಶಾಲಾ ಮಕ್ಕಳ ಬ್ಯಾಗ್‍ನ ತೂಕ ಮತ್ತು ಮಕ್ಕಳಿಗೆ ಹೋಂ ವರ್ಕ್ ಕೊಡುವ ಕುರಿತು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಲಾಯದಿಂದ ನಿರ್ದೇಶನಗಳ ಪಾಲನೆಗೆ ಸುತ್ತೋಲೆ ಪ್ರಕಟವಾಗಿದೆ. ಎಲ್ಲ ರಾಜ್ಯಗಳ ಶಿಕ್ಷಣ ಇಲಾಖೆಗಳು ಈ ನಿರ್ದೇಶನಗಳನ್ನು ಕಡ್ಡಾಯವಾಗಿ ಪಾಲಿಸಲು ಸೂಚನೆ ನೀಡಲಾಗಿದೆ.
ಎಷ್ಟು ಕೆಜಿ ತೂಕ? 1. 1 ಮತ್ತು 2 ನೇ ತರಗತಿ ಮಕ್ಕಳ ಸ್ಕೂಲ್ ಬ್ಯಾಗ್ ನ ತೂಕ 1.5 ಕೆ.ಜಿ ದಾಟುವಂತಿಲ್ಲ 2. 3 ಮತ್ತು 4 ನೇ ತರಗತಿ ಮಕ್ಕಳ ಸ್ಕೂಲ್ ಬ್ಯಾಗ್ ತೂಕ 2 ರಿಂದ 3 ಕೆ.ಜಿ ಇರಬೇಕು 3. 6 ಮತ್ತು 7 ನೇ ತರಗತಿಗೆ ಮಕ್ಕಳ ಸ್ಕೂಲ್ ಬ್ಯಾಗ್ 4 ಕೆ.ಜಿ ಮಾತ್ರ ಇರಬೇಕು 4. 8 ಮತ್ತು 9 ನೇ ತರಗತಿ ಮಕ್ಕಳಿಗೆ 4.5 ಕೆ.ಜಿ ಶಾಲಾ ಬ್ಯಾಗ್ 5. 10 ನೇ ತರಗತಿ ಮಕ್ಕಳಿಗೆ 5 ಕೆ.ಜಿ ತೂಕದ ಸ್ಕೂಲ್ ಬ್ಯಾಗ್
ಸುತ್ತೋಲೆಯಲ್ಲಿ ಏನಿದೆ?1 ಮತ್ತು 2 ನೇ ತರಗತಿ ಮಕ್ಕಳಿಗೆ ಶಿಕ್ಷಕರು ಹೋಂ ವರ್ಕ್ ಕೊಡುವಂತಿಲ್ಲ. ಹೋಂ ವರ್ಕ್ ಕೊಟ್ಟರೂ ಭಾಷೆ ಮತ್ತು ಗಣಿತ ವಿಷಯಗಳಷ್ಟೇ ಕೊಡಬೇಕು. ಮಕ್ಕಳಿಗೆ ಹೆಚ್ಚುವರಿ ಬುಕ್ ಗಳನ್ನು ತರುವಂತೆ ಶಿಕ್ಷಕರು ಒತ್ತಾಯಿಸುವಂತಿಲ್ಲ. ಅಲ್ಲದೇ ಹೆಚ್ಚುವರಿ ಶಾಲಾ ಪರಿಕರಗಳನ್ನು ತರುವಂತೆಯೂ ಬಲವಂತ ಮಾಡಬಾರದು. ಎಲ್ಲ ರಾಜ್ಯಗಳೂ ಈ ನಿರ್ದೇಶನಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ತಾಕೀತು ಮಾಡಲಾಗಿದೆ.
ಬೆಂಗಳೂರು: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದ ಸುಸ್ತಾಗಿರುವ ವಾಹನ ಸವಾರರಿಗೆ ಬೆಸ್ಕಾಂ ಗುಡ್ ನ್ಯೂಸ್ ಕೊಡುತ್ತಿದೆ.
ಹೌದು. ವಾಹನ ಸವಾರರಿಗೆ ಬೆಸ್ಕಾಂ ಸಂಜೀವಿನಿ ನೀಡಿದೆ. ಕಡಿಮೆ ದರದಲ್ಲಿ ವಿದ್ಯುತ್ ವಾಹನಗಳಿಗೆ ಚಾರ್ಜಿಂಗ್ ಮಾಡುವ ಕೇಂದ್ರಗಳಿಗೆ ಚಾಲನೆ ನೀಡಿದೆ. ನೂತನ ಚಾರ್ಜಿಂಗ್ ಕೇಂದ್ರಗಳಿಗೆ ಸಿಎಂ ಕುಮಾರಸ್ವಾಮಿ ವಿಧಾನಸೌಧದಲ್ಲಿ ಚಾಲನೆ ನೀಡಿದ್ದಾರೆ.
ಬೈಕ್ ಮತ್ತು ಕಾರ್ ಗಳಿಗೆ ಚಾರ್ಜಿಂಗ್ ಕೇಂದ್ರದ ಮೂಲಕ ಚಾರ್ಜ್ ಮಾಡಲಾಗುತ್ತದೆ. ಬೆಂಗಳೂರಿನಲ್ಲಿ 14 ಕಡೆ ಚಾರ್ಜಿಂಗ್ ಸ್ಟೇಷನ್ ಗಳ ನಿರ್ಮಾಣ ಮಾಡಲಾಗುತ್ತಿದೆ. ಮೊದಲ ಹಂತದಲ್ಲಿ ಬೆಸ್ಕಾಂ ಕೇಂದ್ರ ಕಚೇರಿ, ವಿಧಾನಸೌಧ ಹಾಗೂ ಕೆಇಆರ್ ಸಿ ಕಚೇರಿಯಲ್ಲಿ ಈ ವ್ಯವಸ್ಥೆ ಇರಲಿದೆ. ಪ್ರತಿ ಯೂನಿಟ್ ಚಾರ್ಜ್ ಗೆ 4 ರೂಪಾಯಿ 85 ಪೈಸೆ ನಿಗದಿ ಪಡಿಸಿದ್ದು, ಕಿಲೋ ವ್ಯಾಟ್ ಗೆ 50 ರೂಪಾಯಿ ಆಗಲಿದೆ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಶಿಖಾ ಅವರು ಹೇಳಿದ್ದಾರೆ.
ಚಾರ್ಜಿಂಗ್ ಹೇಗೆ..?
* ಎರಡು ಹಂತದಲ್ಲಿ ಚಾರ್ಜಿಂಗ್ ವ್ಯವಸ್ಥೆ
1- ಡಿಸಿ ಫಾಸ್ಟ್ ಚಾರ್ಜಿಂಗ್
2- ಎಸಿ ಸ್ಲೋ ಚಾರ್ಜಿಂಗ್
* ಪೂರ್ತಿ ಚಾರ್ಜ್ ಆಗಲು 90 ನಿಮಿಷ ಬೇಕಾಗಿದ್ದು 15 ಕಿಲೋ ವ್ಯಾಟ್ ವಿದ್ಯುತ್.
* ಪೂರ್ತಿ ಚಾರ್ಜ್ ಗೆ 6-7 ಗಂಟೆ. 3.3 ಕಿಲೋ ವ್ಯಾಟ್ ವಿದ್ಯುತ್.
* ಎಸಿ ರಹಿತ ವಾಹನ 120 ಕಿಲೋ ಮೀಟರ್ ಬಳಸಬಹುದು.
* ಎಸಿ ಸಹಿತ 100 ಕಿಲೋಮೀಟರ್ ದೂರ ಬಳಸಬಹುದು.
ಹೀಗಾಗಿ ಜನರು ವಿದ್ಯುತ್ ಚಾರ್ಜಿಂಗ್ ವಾಹನ ಬಳಕೆ ಮಾಡಿದರೆ ಹಣವನ್ನು ಉಳಿಸಬಹುದು ಜೊತೆಗೆ ಮಾಲಿನ್ಯವನ್ನ ತಡೆಯಬಹುದು.