Tag: good bye film

  • ನಾಚುತ್ತಾ ಅಭಿಮಾನಿಯ ಎದೆ ಮೇಲೆ ಆಟೋಗ್ರಾಫ್ ಹಾಕಿದ ರಶ್ಮಿಕಾ ಮಂದಣ್ಣ

    ನಾಚುತ್ತಾ ಅಭಿಮಾನಿಯ ಎದೆ ಮೇಲೆ ಆಟೋಗ್ರಾಫ್ ಹಾಕಿದ ರಶ್ಮಿಕಾ ಮಂದಣ್ಣ

    ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ (Rashmika Mandanna)  ಇದೀಗ ದಕ್ಷಿಣದ ಸಿನಿಮಾ ಮತ್ತು ಬಾಲಿವುಡ್ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಅಪಾರ ಅಭಿಮಾನಿಗಳನ್ನ ಕೂಡ ರಶ್ಮಿಕಾ ಸಂಪಾದಿಸಿದ್ದಾರೆ. ಇದೀಗ ಅಭಿಮಾನಿಯೊಬ್ಬರು ಎದೆಯ ಮೇಲೆ ಆಟೋಗ್ರಾಫ್ ಕೊಡುವಂತೆ ಕೇಳಿದಾಗ ರಶ್ಮಿಕಾ ನಾಚಿ ನೀರಾಗಿದ್ದಾರೆ. ಈ ವೀಡಿಯೋ ಸಖತ್ ವೈರಲ್ ಆಗುತ್ತಿದೆ.

    `ಪುಷ್ಪ’ ಚಿತ್ರದ ಸಕ್ಸಸ್ ನಂತರ ಶ್ರೀವಲ್ಲಿಗೆ ಫ್ಯಾನ್ಸ್ ಬೇಸ್ ಜಾಸ್ತಿ ಆಗಿದೆ. `ಪುಷ್ಪ’ (Pushpa) ಬ್ಯೂಟಿಯನ್ನು ಮೀಟ್ ಆಗಲು ಅದೆಷ್ಟೋ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಹೀಗಿರುವಾಗ ಲಕ್ಕಿ ಅಭಿಮಾನಿಯೊಬ್ಬರಿಗೆ ರಶ್ಮಿಕಾರನ್ನ ಭೇಟಿ ಮಾಡುವ ಅವಕಾಶ ಸಿಕ್ಕಿದೆ. ಎದೆಯ ಮೇಲೆ ಆಟೋಗ್ರಾಫ್ ಬರೆಯುವಂತೆ ಕೇಳಿದ್ದಾರೆ. ಅದಕ್ಕೆ ನಟಿ ಕೂಡ ನಾಚುತ್ತಾ ಆಟೋಗ್ರಾಫ್ ನೀಡಿದ್ದಾರೆ. ನೆಚ್ಚಿನ ನಟಿಯನ್ನ ಭೇಟಿಯಾಗಿರುವುದು ಅಭಿಮಾನಿಗೆ ಖುಷಿ ಕೊಟ್ಟಿದೆ. ಇದನ್ನೂ ಓದಿ:ರಿಲೇಶನ್ ಶಿಪ್ ಇಟ್ಕೊಳ್ಳೋಕೆ ಬಿಗ್ ಬಾಸ್ ಮನೆಗೆ ಬಂದಿಲ್ಲ ಎಂದು ಕಣ್ಣೀರಿಟ್ಟ ನಟಿ ಮಯೂರಿ

     

    View this post on Instagram

     

    A post shared by Viral Bhayani (@viralbhayani)

    ಸದ್ಯ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ನಟನೆಯ `ಪುಷ್ಪ 2′ (Pushpa 2) ಚಿತ್ರೀಕರಣ ಭರದಿಂದ ಸಾಗುತ್ತಿದೆ. ಬಾಲಿವುಡ್‌ನ ಮೊದಲ ಚಿತ್ರ ಬಿಗ್ ಬಿ ಜತೆಗಿ `ಗುಡ್ ಬೈ’ (Good Bye)  ತೆರೆಗೆ ಅಪ್ಪಳಿಸಲು ಸಜ್ಜಾಗಿದೆ.

    ಬಿಟೌನ್‌ನಲ್ಲಿ ತಮ್ಮ ಮೊದಲ ಸಿನಿಮಾ ರಿಲೀಸ್‌ಗೂ ಮುಂಚೆ ರಶ್ಮಿಕಾ ಮಂದಣ್ಣಗೆ ಸಾಲು ಸಾಲು ಸಿನಿಮಾ ಅವಕಾಶಗಳು ಅರಸಿ ಬರುತ್ತಿದೆ. ಬಾಲಿವುಡ್‌ನಲ್ಲಿ ನೆಲೆ ನಿಲ್ಲುವ ಸೂಚನೆ ಕೂಡ ಕೊಟ್ಟಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸೆಕ್ಸಿ ಲುಕ್‌ನಲ್ಲಿ ಕ್ಯಾಮೆರಾ ಕಣ್ಣಿಗೆ ಬೋಲ್ಡ್ ಆಗಿ ಪೋಸ್ ಕೊಟ್ಟ ರಶ್ಮಿಕಾ ಮಂದಣ್ಣ

    ಸೆಕ್ಸಿ ಲುಕ್‌ನಲ್ಲಿ ಕ್ಯಾಮೆರಾ ಕಣ್ಣಿಗೆ ಬೋಲ್ಡ್ ಆಗಿ ಪೋಸ್ ಕೊಟ್ಟ ರಶ್ಮಿಕಾ ಮಂದಣ್ಣ

    ನ್ನಡತಿ ರಶ್ಮಿಕಾ ಮಂದಣ್ಣ ಈಗ ಸೌತ್ ಮತ್ತು ಬಾಲಿವುಡ್ ಸಿನಿಮಾಗಳಲ್ಲಿ ಮಿರ ಮಿರ ಅಂತಾ ಮಿಂಚುತ್ತಿದ್ದಾರೆ. ಸದ್ಯ ಬಾಲಿವುಡ್‌ನ ತಮ್ಮ ಡೆಬ್ಯೂ ಚಿತ್ರ `ಗುಡ್ ಬೈ’ ಚಿತ್ರದ ಟ್ರೈಲರ್ ಲಾಂಚ್‌ನಲ್ಲಿ ಸಖತ್ ಹಾಟ್ ಆ್ಯಂಡ್ ಬ್ಯೂಟಿಫುಲ್ ಆಗಿ ಕಾಣಿಸಿಕೊಂಡು ಪಡ್ಡೆಹುಡುಗರ ನಿದ್ದೆಗೆಡಿಸಿದ್ದಾರೆ.

    ಕನ್ನಡ ಚಿತ್ರರಂಗ ಮತ್ತು ದಕ್ಷಿಣದ ಸಿನಿಮಾಗಳಲ್ಲಿ ಮಿಂಚಿದ ನಂತರ ಬಿಟೌನ್‌ನಲ್ಲಿ ಮಿಂಚಲು ಶ್ರೀವಲ್ಲಿ ಸಜ್ಜಾಗಿದ್ದಾರೆ. ಸದ್ಯ ಅಮಿತಾಭ್ ಬಚ್ಚನ್ ಮತ್ತು ರಶ್ಮಿಕಾ ನಟನೆಯ `ಗುಡ್ ಬೈ’ ಚಿತ್ರದ ಮೂಲಕ ಬಿಟೌನ್‌ನಲ್ಲಿ ಸಖತ್ ಹೈಪ್ ಕ್ರಿಯೇಟ್ ಮಾಡ್ತಿದ್ದಾರೆ. ಇನ್ನೂ ಈ ಚಿತ್ರದ ಟ್ರೈಲರ್ ಲಾಂಚ್‌ನಲ್ಲಿ ಸಖತ್ ಬೋಲ್ಡ್ ಬ್ಯೂಟಿಫುಲ್ ಆಗಿ, ರಶ್ಮಿಕಾ ಕ್ಯಾಮೆರಾ ಕಣ್ಣಿಗೆ ಪೋಸ್ ಕೊಟ್ಟಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.‌ ಇದನ್ನೂ ಓದಿ:ನಟ ಧನಂಜಯ್ ಮತ್ತು ಅದಿತಿ ಪ್ರಭುದೇವ್ ರಿಯಲ್ ಆಗಿ ಮದುವೆ ಆಗ್ಬೇಕಿತ್ತು: ಆದರೆ ತಪ್ಪಿಸಿದವರು ಯಾರು?

    ಇನ್ನೂ `ಗುಡ್ ಬೈ’ ಚಿತ್ರದ ಮೂಲಕ ಹಿಂದಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವ ರಶ್ಮಿಕಾ, ಬಿಗ್ ಬಿ ಮಗಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಎಂದೂ ಮಾಡಿರದ ಭಿನ್ನ ಪಾತ್ರಕ್ಕೆ ಜೀವ ತುಂಬಿದ್ದಾರೆ.

     

    View this post on Instagram

     

    A post shared by Viral Bhayani (@viralbhayani)

    ಬೋಲ್ಡ್ ಪಾತ್ರಗಳಲ್ಲಿ ಮಿಂಚುತ್ತಿದ್ದ ರಶ್ಮಿಕಾ, ಈ ಚಿತ್ರದಲ್ಲಿ ಮಧ್ಯಮ ವರ್ಗದ ಹುಡುಗಿಯಾಗಿ ಸಿಂಪಲ್ ಲುಕ್‌ನಲ್ಲಿ ಮಿಂಚಿದ್ದಾರೆ. ನಟನೆಗೆ ಹೆಚ್ಚು ಸ್ಕೋಪ್ ಇರುವ ರೋಲ್‌ನಲ್ಲಿ ರಶ್ಮಿಕಾ ನಟಿಸಿದ್ದಾರೆ. `ಗುಡ್ ಬೈ’ ಚಿತ್ರ ಅಕ್ಟೋಬರ್ 7ಕ್ಕೆ ತೆರೆಗೆ ಬರಲು ಸಜ್ಜಾಗಿದೆ.

    Live Tv
    [brid partner=56869869 player=32851 video=960834 autoplay=true]

  • ರಶ್ಮಿಕಾ- ಅಮಿತಾಭ್ ಬಚ್ಚನ್ ನಟನೆಯ ʻಗುಡ್ ಬೈ’ ಫಸ್ಟ್ ಲುಕ್ ರಿವೀಲ್

    ರಶ್ಮಿಕಾ- ಅಮಿತಾಭ್ ಬಚ್ಚನ್ ನಟನೆಯ ʻಗುಡ್ ಬೈ’ ಫಸ್ಟ್ ಲುಕ್ ರಿವೀಲ್

    `ಕಿರಿಕ್ ಪಾರ್ಟಿ’ ಬ್ಯೂಟಿ ರಶ್ಮಿಕಾ ಮಂದಣ್ಣ ಸದ್ಯ ದಕ್ಷಿಣದ ಸಿನಿಮಾಗಳ ಜತೆ ಬಾಲಿವುಡ್‌ನಲ್ಲೂ ಮಿಂಚ್ತಿದ್ದಾರೆ. ಇದೀಗ ರಶ್ಮಿಕಾ ಮತ್ತು ಬಿಗ್‌ಬಿ ನಟನೆಯ ʻಗುಡ್ ಬೈʼ ಚಿತ್ರದ ಫಸ್ಟ್ ಲುಕ್ ಮೂಲಕ  ರಶ್ಮಿಕಾ ಸೌಂಡ್ ಮಾಡ್ತಿದ್ದಾರೆ.

    ಲಕ್ಕಿ ನಟಿ ರಶ್ಮಿಕಾ ಮಂದಣ್ಣ ಸದ್ಯ ಬಾಲಿವುಡ್‌ನಲ್ಲಿ ಮಿಂಚಲು ಸಜ್ಜಾಗಿದ್ದಾರೆ. ಬಿಗ್ ಬಿ ಜೊತೆಗಿನ ʻಗುಡ್ ಬೈʼ ಚಿತ್ರದ ಮೂಲಕ ಗಮನ ಸೆಲೆಯುತ್ತಿದ್ದಾರೆ. ಸದ್ಯ ಈ ಚಿತ್ರದ ಫಸ್ಟ್ ಲುಕ್ ಜೊತೆ ರಿಲೀಸ್ ಡೇಟ್ ಕೂಡ ಚಿತ್ರದ ಅನೌನ್ಸ್ ಮಾಡಿದ್ದಾರೆ. ಇದನ್ನೂ ಓದಿ:ಹಳೆ ಗರ್ಲ್ ಫ್ರೆಂಡ್‍ಗಾಗಿ ಹಂಬಲಿಸುತ್ತಿರುವ ಜಶ್ವಂತ್..!

    ವಿಕಾಸ್ ನಿರ್ದೇಶನದ ಗುಡ್ ಬೈ ಚಿತ್ರದ ಫಸ್ಟ್ ಲುಕ್ ಇದೀಗ ಪ್ರೇಕ್ಷಕರ ಗಮನ ಸೆಲೆಯುತ್ತಿದೆ. ಇನ್ನು ಚಿತ್ರ ಅಕ್ಟೋಬರ್ 7ಕ್ಕೆ ತೆರೆಗೆ ಬರಲಿದೆ. ಈ ಚಿತ್ರದಲ್ಲಿ ಅಮಿತಾಭ್ ಬಚ್ಚನ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಅಮಿತಾಭ್ ಮಗಳ ಪಾತ್ರದಲ್ಲಿ ಕನ್ನಡತಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಇವರಿಬ್ಬರ ಈ ಕಾಂಬಿನೇಷನ್ ಚಿತ್ರ ನೋಡಲು ಫ್ಯಾನ್ಸ್ ಕಾಯ್ತಿದ್ದಾರೆ.

    ಸೌತ್ ಸಿನಿಮಾಗಳಲ್ಲಿ ಮೋಡಿ ಮಾಡಿರುವ ರಶ್ಮಿಕಾ, ಇದೀಗ ಬಾಲಿವುಡ್ ಅಂಗಳದಲ್ಲೂ ಗೆಲ್ಲುತ್ತಾರಾ ಹಿಂದಿ ಸಿನಿಪ್ರೇಕ್ಷಕ ಮನಗೆಲ್ಲುವಲ್ಲಿ ಯಶಸ್ವಿಯಾಗುತ್ತಾರಾ ಎಂಬುದನ್ನ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]