Tag: Gonikoppa

  • PUBLiC TV Impact | ಮಂಜಿನ ನಗರಿ ಮಡಿಕೇರಿ ದಸರಾಕ್ಕೆ ಬಂತು 1.50 ಕೋಟಿ ರೂ. ಅನುದಾನ

    PUBLiC TV Impact | ಮಂಜಿನ ನಗರಿ ಮಡಿಕೇರಿ ದಸರಾಕ್ಕೆ ಬಂತು 1.50 ಕೋಟಿ ರೂ. ಅನುದಾನ

    ಮಡಿಕೇರಿ: ಐತಿಹಾಸಿಕ ಮಂಜಿನ ನಗರಿ ಮಡಿಕೇರಿ (Madikeri) ದಸರಾ (Dasara) ಚಾಲನೆಗೆ ಒಂದೇ ದಿನ ಬಾಕಿಯಿರುವಾಗ ರಾಜ್ಯ ಸರ್ಕಾರ 1.50 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಿದೆ.

    ಕಳೆದ ಎರಡು ದಿನಗಳ ಹಿಂದೆ `ಪಬ್ಲಿಕ್ ಟಿವಿ’ಯಲ್ಲಿ (PUBLiC TV) ಅನುದಾನ ಬಿಡುಗಡೆಯಾಗದೇ ಇರುವುದರಿಂದ ಮಡಿಕೇರಿ ದಸರಾ ಸಮಿತಿ ಅತಂತ್ರ ಸ್ಥಿತಿಯಲ್ಲಿ ಇದೆ ಎಂದು ವರದಿ ಮಾಡಿತ್ತು. ಜೊತೆಗೆ ಜಿಲ್ಲಾ ಉಸ್ತುವಾರಿ ಬೋಸರಾಜು (Bosaraju) ಅವರ ಗಮನಕ್ಕೆ ತರಲಾಗಿತ್ತು.ಇದನ್ನೂ ಓದಿ: ಜ್ಯೋತಿ ಬೆಳಗುವ ವೇಳೆ ಸಿಎಂ ಬಟ್ಟೆಗೆ ತಾಕಿದ ಬೆಂಕಿಯ ಬಿಸಿ

    ವರದಿ ಬೆನ್ನಲ್ಲೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ (Kannada And Culture Department) ಹಣ ಮಡಿಕೇರಿ ದಸರಾಕ್ಕೆ 1.50 ಕೋಟಿ ರೂ. ಹಾಗೂ ಗೋಣಿಕೊಪ್ಪ ದಸರಾಕ್ಕೆ 75 ಲಕ್ಷ ರೂ. ಅನುದಾನವನ್ನು ಬಿಡುಗಡೆ ಮಾಡಿದೆ.

    ವಿಶ್ವವಿಖ್ಯಾತ ಮೈಸೂರು ದಸರಾ ಬಗ್ಗೆ ರಾಜ್ಯ ಸರ್ಕಾರ (State Government) ಕಾಳಜಿ ತೋರಿಸುತ್ತದೆ. ಆದರೆ ಐತಿಹಾಸಿಕ ದಶಮಂಟಪಗಳ ಶೋಭಾ ಯಾತ್ರೆ ಮೂಲಕ ನಾಡಿನ ಗಮನ ಸೆಳೆದಿರುವ ಮಡಿಕೇರಿ ದಸರಾ ಬಗ್ಗೆ ನಿರ್ಲಕ್ಷ್ಯ ಪ್ರದರ್ಶಿಸುತ್ತಿದೆ ಎಂದು ಜಿಲ್ಲೆಯ ಜನರು ಅಸಮಾಧಾನ ವ್ಯಕ್ತಪಡಿಸಿದ್ದರು. ಇಂದು (ಅ.2) ದಸರಾ ಚಾಲನೆಗೆ ಅನುದಾನ ಬಿಡುಗಡೆಯಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಜನರು ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.

    ಗುರುವಾರದಿಂದ ಮಡಿಕೇರಿ ನಗರದ ನಾಲ್ಕು ಶಕ್ತಿ ದೇವತೆಗಳ ಕರಗ ಮಹೋತ್ಸವಕ್ಕೆ ಚಾಲನೆ ನೀಡಲಾಗುತ್ತದೆ ಹಾಗೂ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳ ವೇದಿಕೆಯು ಸಿದ್ಧಗೊಳ್ಳುತ್ತಿದ್ದು, ಹತ್ತು ದಿನಗಳ ಕಾಲ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.ಇದನ್ನೂ ಓದಿ: ಸೈಟ್ ವಾಪಸ್ ನೀಡಿದ ಸಿಎಂ ಪತ್ನಿ ನಿರ್ಧಾರವನ್ನು ನಾವು ಅಭಿನಂದಿಸುತ್ತೇವೆ: ಬೋಸರಾಜು

  • ಟ್ರಾನ್ಸ್‌ಫಾರ್ಮರ್‌ಗೆ ಕಾರು ಡಿಕ್ಕಿ – ತಪ್ಪಿದ ಅನಾಹುತ

    ಟ್ರಾನ್ಸ್‌ಫಾರ್ಮರ್‌ಗೆ ಕಾರು ಡಿಕ್ಕಿ – ತಪ್ಪಿದ ಅನಾಹುತ

    ಮಡಿಕೇರಿ: ಚಾಲಕನ ನಿಯಂತ್ರಣ ಕಳೆದುಕೊಂಡ ಕಾರು (Car) ಟ್ರಾನ್ಸ್ ಫಾರ್ಮರ್ ಅಳವಡಿಸಿದ್ದ ವಿದ್ಯುತ್ ಕಂಬಕ್ಕೆ (Electricity Pole) ಡಿಕ್ಕಿ ಹೊಡೆದು ಪಲ್ಟಿಯಾದ ಘಟನೆ ಪೊನ್ನಂಪೇಟೆ – ಕಾನೂರು ನಡುವಿನ ಮುಗುಟಗೇರಿ ಮುಖ್ಯ ರಸ್ತೆಯಲ್ಲಿ ನಡೆದಿದೆ.

    ಮುಂದಕ್ಕೆ ಚಲಿಸುತ್ತಿದ್ದ ಕಾರು ಏಕಾಏಕಿ ಎಡಕ್ಕೆ ತಿರುಗಿ ಟ್ರಾನ್ಸ್ ಫರ್ಮರ್ ಅಳವಡಿಸಿದ್ದ ಕಂಬದೊಳಗೆ ಸಿಲುಕಿ ಮಗುಚಿಕೊಂಡಿದೆ. ಇದನ್ನೂ ಓದಿ: ಶಂಕಿತ ಉಗ್ರನ ಜಾಡು ಪತ್ತೆ ಹಚ್ಚಲು BMRCL ಮೊರೆ ಹೋದ ಪೊಲೀಸರು

    ಕಾರು ಚಾಲಕ ಪ್ರಾಣಪಾಯದಿಂದ ಪಾರಾಗಿದ್ದಾರೆ. ತಕ್ಷಣ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದ್ದರಿಂದ ಅನಾಹುತ ತಪ್ಪಿದೆ. ಘಟನೆ ಸಂಬಂಧಿಸಿದಂತೆ ಗೋಣಿಕೋಪ್ಪ (Gonikoppa) ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಶಿವರಾತ್ರಿ ದಿನ ಮತ್ತೆ ರಾಮೇಶ್ವರಂ ಕೆಫೆ ತೆರೆಯುತ್ತೇವೆ: ಮಾಲೀಕ ರಾಘವೇಂದ್ರ ರಾವ್‌