Tag: gommateshwara
-

ಶ್ರವಣಬೆಳಗೊಳದ ಗೊಮ್ಮಟ್ಟೇಶ್ವರನಿಗೆ ಬ್ರಿಟಿಷರು ಚಡ್ಡಿ ಹಾಕಿದ್ರು, 20 ವರ್ಷ ಗುಪ್ತಾಂಗ ಮುಚ್ಚಲಾಗಿತ್ತು- ತಲಕಾಡು ಚಿಕ್ಕರಂಗೇಗೌಡ ಹೇಳಿಕೆ
ಬೆಂಗಳೂರು: ಶ್ರವಣಬೆಳಗೊಳದ ಗೊಮ್ಮಟ್ಟೇಶ್ವರನಿಗೆ ಬ್ರಿಟಿಷರು ಚಡ್ಡಿ ಹಾಕಿದ್ರು. 19ನೇ ಶತಮಾನದಲ್ಲಿ 1800 ರಿಂದ 1820 ರವರೆಗೆ ಸುಮಾರು ಇಪತ್ತು ವರ್ಷಗಳ ಕಾಲ ಬಾಹುಬಲಿಯ ಗುಪ್ತಾಂಗವನ್ನು ಮುಚ್ಚಲಾಗಿತ್ತು ಎಂದು ಇತಿಹಾಸ ತಜ್ಞ ತಲಕಾಡು ಚಿಕ್ಕರಂಗೇಗೌಡ ಹೇಳಿದ್ದಾರೆ.

ಸುಮಾರು ಆರು ಅಡಿ ತಗಡಿನ ವಸ್ತುವಿನಿಂದ ಬಾಹುಬಲಿ ಗುಪ್ತಾಂಗವನ್ನು ಮುಚ್ಚಲಾಗಿತ್ತು. ನಾಲ್ಕನೇ ಮೈಸೂರು ಯುದ್ಧದಲ್ಲಿ ಗೆದ್ದ ನಂತರ ಬ್ರಿಟಿಷ್ ಸೇನಾನಿ ಸರ್ ಅರ್ಥರ್ ವೆಲ್ಲೆಸ್ಲೀ ಬಾಹುಬಲಿಗೆ ಚಡ್ಡಿ ತೊಡಿಸಿದ್ರು. ಈ ಬಗ್ಗೆ ಡಾ. ಫ್ರಾನ್‍ಸಿಸ್ ಬುಕಾನನ್ ಅವರು ಬರೆದಿರೋ ಪುಸ್ತಕದಲ್ಲಿ ಫೋಟೋ ಸಮೇತವಾಗಿ ಮಾಹಿತಿ ನೀಡಲಾಗಿದೆ ಅನ್ನೋದನ್ನ ತಲಕಾಡು ಚಿಕ್ಕ ರಂಗೇಗೌಡ್ರು ಸ್ಪಷ್ಟಪಡಿಸಿದ್ದಾರೆ.

ಬ್ರಿಟಿಷ್ ಮಹಿಳೆಯರು ಬಾಹುಬಲಿಯನ್ನ ನೋಡೋಕೆ ಮುಜುಗರ ಪಟ್ಟುಕೊಳ್ಳುತ್ತಿದ್ರು ಅನ್ನೋ ಬಗ್ಗೆ ಸಹ ಪುಸ್ತಕದಲ್ಲಿ ಉಲ್ಲೇಖವಿದೆ ಎಂದು ಹೇಳಿದ್ದಾರೆ.








-

ಭೂಮಿ ಅಗೆಯುವಾಗ ಪತ್ತೆಯಾಯ್ತು ಗೊಮ್ಮಟೇಶ್ವರ ವಿಗ್ರಹ!
ಮಂಡ್ಯ: ಭೂಮಿ ಅಗೆಯುವ ವೇಳೆ ಐದು ಅಡಿ ಎತ್ತರದ ಗೊಮ್ಮಟೇಶ್ವರ ವಿಗ್ರಹ ಪತ್ತೆಯಾಗಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.
ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಬಸ್ತಿ ಹೊಸಕೋಟೆ ಗ್ರಾಮದ ಗುಡ್ಡದ ಮೇಲೆ 18 ಅಡಿ ಎತ್ತರದ ಗೊಮ್ಮಟೇಶ್ವರ ವಿಗ್ರಹವಿದೆ. ಹೀಗಾಗಿ ಗುಡ್ಡದ ಸುತ್ತಲೂ ಕಾಂಪೌಂಡ್ ನಿರ್ಮಿಸಲು ಗುಂಡಿ ತೋಡುತ್ತಿದ್ದಾಗ 5 ಅಡಿ ಎತ್ತರದ ಗೊಮ್ಮಟನ ಶಿಲಾ ವಿಗ್ರಹ ಪತ್ತೆಯಾಗಿದೆ.

ವಿಗ್ರಹ ನೋಡಿ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ. ಜೊತೆಗೆ ಜೈನ ಕ್ಷೇತ್ರವಾದ ಬಸ್ತಿ ಹೊಸಕೋಟೆ ಗ್ರಾಮವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಬೇಕು. ಹಾಳು ಹಂಪೆಯಂತಿರುವ ಗೊಮ್ಮಟ ಕ್ಷೇತ್ರವನ್ನು ಉತ್ಖನನ ಮಾಡಿ ಭೂಮಿಯೊಳಗಿನ ಆಳದಲ್ಲಿ ಹುದುಗಿರುವ ನಿಗೂಢ ವಸ್ತುಗಳು ಮತ್ತು ಇತಿಹಾಸವನ್ನು ಪತ್ತೆ ಮಾಡಬೇಕು ಎಂದು ಬಸ್ತಿ ಹೊಸಕೋಟೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.







