Tag: Golf Stadium

  • ಚಿರತೆ ಸೆರೆಗೆ ಲೈಂಗಿಕ ಆಕರ್ಷಣೆಯ ತಂತ್ರ – ಬೋನಿಗೆ ಹೆಣ್ಣು ಚಿರತೆಯ ಮೂತ್ರ ಸಿಂಪಡಣೆ

    ಚಿರತೆ ಸೆರೆಗೆ ಲೈಂಗಿಕ ಆಕರ್ಷಣೆಯ ತಂತ್ರ – ಬೋನಿಗೆ ಹೆಣ್ಣು ಚಿರತೆಯ ಮೂತ್ರ ಸಿಂಪಡಣೆ

    ಬೆಳಗಾವಿ: ಇಲ್ಲಿನ ಗಾಲ್ಫ್ ಮೈದಾನದಲ್ಲಿ ಅವಿತುಕೊಂಡಿರುವ ಚಿರತೆ ಸೆರೆಗೆ ಅರಣ್ಯ ಇಲಾಖೆ ಅಧಿಕಾರಿಗಳು `ಲೈಂಗಿಕ ಆಕರ್ಷಣೆ’ ತಂತ್ರ ಅನುಸರಿಸುತ್ತಿದ್ದಾರೆ. ಆನೆ ಬಳಕೆಯ ಜೊತೆಗೆ ಲೈಂಗಿಕ ಆಕರ್ಷಣೆ ತಂತ್ರದ ಮೂಲಕ ಚಿರತೆ ಸೆರೆಹಿಡಿಯುವ ನೂತನ ಪ್ರಯತ್ನ ಮಾಡಲಾಗಿದೆ.

    ಕಳೆದ ಮೂರು ದಿನಗಳಿಂದ ಅರ್ಜುನ ಹಾಗೂ ಆಲೆ ಆನೆಗಳನ್ನು ಬಳಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಅಂತೆಯೇ ನಿನ್ನೆ ಸಂಜೆ ಕಣ್ಣ ಮುಂದೆ, ಕೂಗಳತೆ ಅಂತರದಲ್ಲೇ ಓಡಾಡಿದ ಚಿರತೆ ಯಾಮಾರಿಸಿ ಕಣ್ಮರೆಯಾಗಿದೆ. ಇದನ್ನೂ ಓದಿ: ನಾಳೆ ಸುಮಲತಾ ಅಂಬರೀಶ್ ಹುಟ್ಟುಹಬ್ಬ: ತಾಯಿಯ ಬರ್ತ್‌ಡೇಗೆ ಅಭಿಷೇಕ್ ಕೊಡ್ತಿರೋ ಗಿಫ್ಟ್ ಏನು?

    ಈಗಾಗಲೇ 8 ಕಡೆ ಬೋನುಗಳನ್ನು ಇಡಲಾಗಿದ್ದು ಅಲ್ಲಿ ಹೆಣ್ಣು ಚಿರತೆಯ ಮೂತ್ರ ಸಿಂಪಡಣೆ ಮಾಡಲಾಗಿದೆ. ನಗರ ಸಮೀಪದ ಭೂತರಾಮನಹಟ್ಟಿ ಕಿರು ಮೃಗಾಲಯದಲ್ಲಿನ ಎರಡು ಹೆಣ್ಣು ಚಿರತೆಗಳ ಮೂತ್ರ ತಂದು ಸಿಂಪಡಿಸಲಾಗಿದೆ. ಅದರ ವಾಸನೆಗೆ ಆಕರ್ಷಿತವಾಗಿ ಚಿರತೆ ಇತ್ತ ಬರುವ ಸಾಧ್ಯತೆ ಇದೆ.

    8 ಟ್ರಾ÷್ಯಂಕುಲೈಸರ್ ಗನ್‌ಗಳನ್ನು ಬಳಕೆ ಮಾಡಿಕೊಳ್ಳಲಿದ್ದು, ಇನ್ನೂ 4 ಟ್ರಾಂಕುಲೈಸರ್ ಗನ್ ತರಿಸಲಾಗುತ್ತಿದೆ. 2 ಕಿಮಿ ವ್ಯಾಪ್ತಿಯ ಹಂದಿ ಹಿಡಿಯುವ ಬಲೆ ಬಳಕೆ ಮಾಡಲಾಗುತ್ತಿದೆ. ಚಿರತೆ ಸೆರೆಗೆ ಇಂದೂ ಸಹ ಯಥಾಸ್ಥಿತಿ ಶೋಧಕಾರ್ಯ ಮುಂದುವರಿಯಲಿದೆ ಎಂದು ಎಸಿಎಫ್ ಮಲ್ಲಿನಾಥ ಕುಸನಾಳ ಹೇಳಿದ್ದಾರೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಪತ್ತೆ ಮಾಡಲು ಚಿರತೆಗೂ ಬಂತು ಆಧಾರ್ ಕಾರ್ಡ್

    ಬೆಳಗಾವಿಯಲ್ಲಿ ಚಿರತೆ ಸೆರೆಗೆ `ಆಪರೇಷನ್ ಹನಿಟ್ರ್ಯಾಪ್‌’ ಶುರು ಮಾಡಿದ್ದು, ಬೋನುಗಳಿಗೆ ಹೆಣ್ಣು ಚಿರತೆಯ ಮೂತ್ರ ಸಿಂಪಡಣೆ ಮಾಡಲಾಗಿದೆ. ಭೂತರಾಮನಹಟ್ಟಿ ಕಿರು ಮೃಗಾಲಯದಲ್ಲಿನ ಎರಡು ಹೆಣ್ಣು ಚಿರತೆಗಳ ಯೂರಿನ್ ತಂದು ಸ್ಪ್ರೇ ಮಾಡಲಾಗಿದೆ ಎಂದು ಮಲ್ಲಿನಾಥ ಕುಸನಾಳ ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬೆಳಗಾವಿಯಲ್ಲಿ ಪತ್ತೆ ಮಾಡಲು ಚಿರತೆಗೂ ಬಂತು ಆಧಾರ್ ಕಾರ್ಡ್

    ಬೆಳಗಾವಿಯಲ್ಲಿ ಪತ್ತೆ ಮಾಡಲು ಚಿರತೆಗೂ ಬಂತು ಆಧಾರ್ ಕಾರ್ಡ್

    ಬೆಳಗಾವಿ: ಆಪರೇಷನ್ ಚಿತಾ ಕಾರ್ಯಾಚರಣೆ ಇನ್ನೂ ಮುಂದುವರಿದಿದೆ. ಶಿವಮೊಗ್ಗದ ಸಕ್ರೆಬೈಲಿನಿಂದ ಗಜಪಡೆ ಬೆಳಗಾವಿಯತ್ತ ಮುಖಮಾಡಿದೆ. ಸತತ 22 ದಿನಗಳಿಂದ 400ಕ್ಕೂ ಹೆಚ್ಚು ಅಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿದ್ದರೂ ಈವರೆಗೆ ಚಿರತೆ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳ ಹೊರೆ ತಗ್ಗಿಸಿ, ಚಿರತೆಯನ್ನು ಪತ್ತೆ ಮಾಡಲು ಟ್ರೋಲಿಗರು ಆಧಾರ್ ಕಾರ್ಡ್ ಒಂದನ್ನು ಸಿದ್ಧಪಡಿಸಿದ್ದಾರೆ.

    ಈವರೆಗೆ ಚಿರತೆ ಸೆರೆಯಾಗದ ಹಿನ್ನೆಲೆಯಲ್ಲಿ ವಿಭಿನ್ನ ರೀತಿಯ ಪೋಸ್ಟ್ಗಳ ಮೂಲಕ ಟ್ರೋಲಿಗರು ವ್ಯಂಗ್ಯ ಮಾಡಿದ್ದಾರೆ. ಚಿರತೆ ಹೆಸರಿನಲ್ಲಿ ಆಧಾರ್ ಕಾರ್ಡ್ ಸಹ ಸಿದ್ಧಪಡಿಸಿದ್ದಾರೆ. ಬಿಬತ್ಯಾ ಬೇಲ್ಗಾಂವ್‌ಕರ್ ಎಂದು ಚಿರತೆಗೆ ಹೆಸರು ಇಟ್ಟಿದ್ದು, ಈ ಹೆಸರಿನಲ್ಲೇ ಆಧಾರ್ ಕಾರ್ಡ್ ಸಿದ್ಧಪಡಿಸಿದ್ದಾರೆ. ಇದನ್ನೂ ಓದಿ: ನಿಶ್ಚಿತಾರ್ಥ ವರನಿಗೆ ಯುವತಿಯ ಅಶ್ಲೀಲ ಫೋಟೋ ಕಳುಹಿಸಿದ ನೆರೆಮನೆಯವ – ವಧು ಆತ್ಮಹತ್ಯೆ

    ಅಲ್ಲದೇ `ಎಷ್ಟು ಬೇಕಾದ್ರೂ ಪ್ರಯತ್ನ ಮಾಡಿ ನಾನು ಗಣಪತಿ ಹಬ್ಬ ಮುಗಿಸಿಕೊಂಡು ಹೋಗ್ತೇನೆ. ಯಾರಪ್ಪಂದೇನ್ ಐತಿ, ಬೆಳಗಾವಿ ನಂದೈತಿ ಬೆಳಗಾವಿ ಬಿಟ್ಟು ಹೋಗಲ್ಲ, ನಾನೇನ್ ಆತಂಕವಾದಿನಾ ನನ್ನ ಹಿಡಿಯಲು ಆನೆ, ನಾಯಿ, ಪೊಲೀಸರು ಬಂದಿದ್ದೀರಿ’ ಎಂದು ಚಿರತೆಯೇ ಹೇಳಿಕೊಂಡಂತೆ ಫೋಟೋಗಳನ್ನ ಹಂಚಿಕೊಂಡಿದ್ದಾರೆ. ಜೊತೆಗೆ ಚಿರತೆಯನ್ನೂ ಸಂದರ್ಶನ ಮಾಡುತ್ತಿರುವ ಫೋಟೋಗಳನ್ನ ಟ್ರೋಲ್ ಮಾಡಲಾಗಿದೆ. ಇದನ್ನೂ ಓದಿ: ಸೋನಾಲಿ ಪೋಗಟ್‌ಗೆ ಪಾರ್ಟಿಯಲ್ಲಿ ಬಲವಂತವಾಗಿ ಡ್ರಗ್ಸ್‌ ನೀಡಿದ್ವಿ: ತಪ್ಪೊಪ್ಪಿಕೊಂಡ ಆರೋಪಿಗಳು

    ನಗರದ ಗಾಲ್ಫ್ ಕ್ಲಬ್‌ನಲ್ಲಿ ಅಡಗಿರುವ ಚಿರತೆ ಪತ್ತೆ ಕಾರ್ಯಾಚರಣೆ 22ನೇ ದಿನಕ್ಕೆ ಕಾಲಿಟ್ಟಿದ್ದು, ಚಿರತೆ ಸೆರೆಗೆ ಶಿವಮೊಗ್ಗದ ಸಕ್ರೆಬೈಲು ಬಿಡಾರದಿಂದ ಎರಡು ಆನೆಗಳನ್ನು ಕರೆ ತರಲಾಗಿದೆ. ಗಾಲ್ಫ್ ಮೈದಾನದ ಒಂದು ಕಿಮೀ ವ್ಯಾಪ್ತಿಯಲ್ಲಿ ಬರುವ 22 ಸರ್ಕಾರಿ, ಖಾಸಗಿ ಪ್ರಾಥಮಿಕ, ಪ್ರೌಢಶಾಲೆಗಳಿಗೆ ರಜೆ ಇಂದು ಕೂಡ ಮುಂದುವರಿಸಲಾಗಿದೆ.

    250 ಎಕರೆ ಪ್ರದೇಶದಲ್ಲಿ ಇರುವ ಬೆಳಗಾವಿಯ ಗಾಲ್ಫ್ ಮೈದಾನದಲ್ಲಿ ಅಡಗಿರುವ ಚಿರತೆ ಸೆರೆಗೆ ಇಂದಿನಿಂದ ಎರಡು ಆನೆಗಳನ್ನು ಬಳಸಿಕೊಂಡು ಅರಣ್ಯ ಇಲಾಖೆ ಕಾರ್ಯಾಚರಣೆಗೆ ಮುಂದಾಗಲಿದೆ. ಶಿವಮೊಗ್ಗದ ಸಕ್ರೆಬೈಲ್ ಬಿಡಾರದಿಂದ ಇಂದು ಮಧ್ಯರಾತ್ರಿ ಎರಡು ಆನೆಗಳನ್ನು ಕರೆತರಲಾಗಿದೆ. ಅರ್ಜುನ್ ಮತ್ತು ಆಲೆ ಎನ್ನುವ ಎರಡು ಆನೆಗಳನ್ನು ಬಳಸಿ ಇಂದು ಕೊಂಬಿಂಗ್ ಮಾಡಲಾಗುತ್ತದೆ.

    Live Tv
    [brid partner=56869869 player=32851 video=960834 autoplay=true]