Tag: Golf

  • ಏಷ್ಯನ್ ಗೇಮ್ಸ್ – ಗಾಲ್ಫ್‌ನಲ್ಲಿ ಐತಿಹಾಸಿಕ ಬೆಳ್ಳಿ ಪದಕ ಗೆದ್ದ ಕರ್ನಾಟಕದ ಅದಿತಿ ಅಶೋಕ್

    ಏಷ್ಯನ್ ಗೇಮ್ಸ್ – ಗಾಲ್ಫ್‌ನಲ್ಲಿ ಐತಿಹಾಸಿಕ ಬೆಳ್ಳಿ ಪದಕ ಗೆದ್ದ ಕರ್ನಾಟಕದ ಅದಿತಿ ಅಶೋಕ್

    ಬೀಜಿಂಗ್: ಕರ್ನಾಟಕದ ಗಾಲ್ಫ್ ಆಟಗಾರ್ತಿ ಅದಿತಿ ಅಶೋಕ್ (Aditi Ashok) ಅವರು ಏಷ್ಯನ್ ಗೇಮ್ಸ್ 2023ರಲ್ಲಿ (Asian Games 2023) ಐತಿಹಾಸಿಕ ಬೆಳ್ಳಿ ಪದಕ (Silver Medal) ಗೆದ್ದು ದೇಶಕ್ಕೆ ಹಿರಿಮೆ ತಂದುಕೊಟ್ಟಿದ್ದಾರೆ.

    ಭಾನುವಾರ ಬೆಳಗ್ಗೆ ನಡೆದ ಗಾಲ್ಫ್ ಫೈನಲ್ ಪಂದ್ಯದಲ್ಲಿ ಅದಿತಿ ಬೆಳ್ಳಿ ಪದಕಕ್ಕೆ ಭಾಜನರಾಗಿದ್ದಾರೆ. ಈ ಮೂಲಕ ಏಷ್ಯನ್ ಗೇಮ್ಸ್ ಗಾಲ್ಫ್‌ (Golf) ಕ್ರೀಡೆಯಲ್ಲಿ ಪದಕ ಗೆದ್ದ ಮೊದಲ ಮಹಿಳಾ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಬೆಂಗಳೂರಿನ ಅದಿತಿ ಅಶೋಕ್ ಪಾತ್ರರಾಗಿದ್ದಾರೆ.

    ಶನಿವಾರ 3ನೇ ಸುತ್ತಿನ ಪಂದ್ಯದ ಬಳಿಕ ಅದಿತಿ ಚಿನ್ನ ಗಳಿಸಲು ಹೆಜ್ಜೆಯಿಟ್ಟಿದ್ದರು. 7 ಸ್ಟ್ರೋಕ್ ಮುನ್ನಡೆಯೊಂದಿಗೆ ಆಟವನ್ನು ಆರಂಭಿಸಿದ ಅವರಿಗೆ ಮೊದಲ ಸ್ಥಾನವನ್ನು ಗಳಿಸಲು ಉತ್ತಮ ಅವಕಾಶವಿತ್ತು. ಆದರೆ ಕೊನೆಯ 3 ಹೊಡೆತದಲ್ಲಿ ಹಿನ್ನಡೆ ಅನುಭವಿಸಿ ಅವರು ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ. ಥೈಲ್ಯಾಂಡ್‌ನ ಅರ್ಪಿಚುಯಾ ಯುಬೋಲ್ ಚಿನ್ನದ ಪದಕವನ್ನು ಬಾಚಿಕೊಂಡಿದ್ದಾರೆ. ಇದನ್ನೂ ಓದಿ: Asian Games 2023: ಎದುರಾಳಿ ಪಾಕ್‌ ವಿರುದ್ಧ ಭಾರತಕ್ಕೆ ಜಯ – ಸ್ಕ್ವಾಷ್‌ನಲ್ಲಿ ಚಿನ್ನದ ಬೇಟೆ

    ಈ ಹಿಂದೆ ಅದಿತಿ ಅಶೋಕ್ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಗಾಲ್ಫ್‌ನಲ್ಲಿ 4ನೇ ಸ್ಥಾನ ಗಳಿಸಿ ದೇಶದ ಗಮನ ಸೆಳೆದಿದ್ದರು. ಇದೀಗ ಏಷ್ಯನ್ ಗೇಮ್ಸ್‌ನಲ್ಲಿ ಅದಿತಿ ಪದಕ ಗೆದ್ದು ಬೀಗಿದ್ದಾರೆ. ಇದನ್ನೂ ಓದಿ: Asian Games: ಟೆನ್ನಿಸ್‌ ಮಿಶ್ರ ಡಬಲ್ಸ್‌ನಲ್ಲಿ ಭಾರತಕ್ಕೆ ಚಿನ್ನ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಡೊನಾಲ್ಡ್ ಟ್ರಂಪ್ ಜೊತೆ ಗಾಲ್ಫ್ ಆಡಿದ ಧೋನಿ!

    ಡೊನಾಲ್ಡ್ ಟ್ರಂಪ್ ಜೊತೆ ಗಾಲ್ಫ್ ಆಡಿದ ಧೋನಿ!

    ವಾಷಿಂಗ್ಟನ್: ಯುಎಸ್ ಓಪನ್ ಟೆನಿಸ್ ಟೂರ್ನಿಯ ಅಲೆಕ್ಸಾಂಡರ್ ಜ್ವೆರೆವ್ ಮತ್ತು ಕಾರ್ಲೋಸ್ ಅಲ್ಕರಾಜ್ ನಡುವಿನ ಕ್ವಾರ್ಟರ್ ಫೈನಲ್ ಪಂದ್ಯವನ್ನು ವೀಕ್ಷಿಸಿ ಸುದ್ದಿಯಾಗಿದ್ದ ಮಹೇಂದ್ರ ಸಿಂಗ್ ಧೋನಿ (MS Dhoni), ಇದೀಗ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಜೊತೆ ಗಾಲ್ಫ್ (Golf) ಆಡಿ ಸುದ್ದಿಯಾಗಿದ್ದಾರೆ.

    ಟ್ರಂಪ್ ಮತ್ತು ಧೋನಿ ಗಾಲ್ಫ್ ಆಡುತ್ತಿರುವ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ದುಬೈ ಮೂಲದ ಉದ್ಯಮಿ ಹಿತೇಶ್ ಸಾಂಘ್ವಿ ಅವರು ಟ್ರಂಪ್ ನ್ಯಾಷನಲ್ ಗಾಲ್ಫ್ ಕ್ಲಬ್ ಬೆಡ್‍ಮಿನ್‍ಸ್ಟರ್‌ನಲ್ಲಿ ಧೋನಿ ಮತ್ತು ಟ್ರಂಪ್ ಗಾಲ್ಫ್ ಆಡುತ್ತಿರುವ ಫೋಟೋವನ್ನು ಟ್ವಿಟರ್ ಮತ್ತು ಇನ್ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಭಾರತ ಪಾಕ್ ಪಂದ್ಯಕ್ಕೆ ವರುಣನ ಅಡ್ಡಗಾಲು: ಮ್ಯಾಚ್ ರದ್ದಾದರೆ ಗತಿ ಏನು?

    ಈ ಬಾರಿಯ 16ನೇ ಆವೃತ್ತಿಯ ಐಪಿಎಲ್‍ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಐದನೇ ಬಾರಿ ಚಾಂಪಿಯನ್ ಪಟ್ಟಕೇರಿಸಿದ ಧೋನಿ ಈಗ ಜಾಲಿ ಮೂಡ್‍ನಲ್ಲಿ ಪ್ರವಾಸದಲ್ಲಿದ್ದಾರೆ.

    ಬುಧವಾರ ನಡೆದ ಯುಎಸ್ ಓಪನ್‍ನ ಕ್ವಾರ್ಟರ್‌ಫೈನಲ್ ವಿಶ್ವದ ನಂ.1 ಆಟಗಾರ ಅಲ್ಕರಾಜ್ ಮತ್ತು ಜ್ವೆರೆವ್ ವಿರುದ್ಧದ ಹೋರಾಟವನ್ನು ವೀಕ್ಷಿಸಲು ಧೋನಿ ತೆರಳಿದ್ದರು. ಈ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕಾರ್ಲೋಸ್ ಅಲ್ಕರಾಜ್ 6-3, 6-2, 6-4 ನೇರ ಸೆಟ್‍ನಿಂದ ಮಣಿಸಿ ಸೆಮಿಫೈನಲ್ ಪ್ರವೇಶಿಸಿದ್ದರು.‌ ಇದನ್ನೂ ಓದಿ: Asia Cup 2023: ಈ ಬಾರಿ ಪಾಕಿಸ್ತಾನಕ್ಕೆ ಏಷ್ಯಾಕಪ್‌ ಕಿರೀಟ – ಮಾಜಿ ಕ್ರಿಕೆಟಿಗರ ಭವಿಷ್ಯ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಾರು ಅಪಘಾತ- ಕಾಲು ಕಳೆದುಕೊಂಡು ಐಸಿಯುನಲ್ಲಿದ್ದಾರೆ  ಟೈಗರ್ ವುಡ್ಸ್

    ಕಾರು ಅಪಘಾತ- ಕಾಲು ಕಳೆದುಕೊಂಡು ಐಸಿಯುನಲ್ಲಿದ್ದಾರೆ ಟೈಗರ್ ವುಡ್ಸ್

    ವಾಷಿಂಗ್ಟನ್: ಖ್ಯಾತ ಅಂತರಾಷ್ಟ್ರೀಯ ಗಾಲ್ಫ್ ಆಟಗಾರ  ಟೈಗರ್‌ ವುಡ್ಸ್‌ ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು, 2 ಕಾಲುಗಳು ಮುರಿದಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಅಮೆರಿಕಾದ ಲಾಸ್ ಏಂಜಲಿಸ್ ಹೊರವಲಯದಲ್ಲಿ ನಡೆದ ಗಂಭೀರ ಅಪಘಾತದಲ್ಲಿ ವುಡ್ಸ್ ಕಾಲುಗಳು ಮುರಿದಿವೆ ಹಾಗೂ ಗಂಭೀರವಾಗಿ ಗಾಯಗೊಂಡಿದ್ದಾರೆ. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಚಿಂತಾಜನಕ ಸ್ಥಿತಿಯಲ್ಲಿ ವುಡ್ಸ್ ಇದ್ದಾರೆ ಎಂದು ತಿಳಿದು ಬಂದಿದೆ.

    ಟೈಗರ್‌ ವುಡ್ಸ್‌ ಒಬ್ಬರೇ ಕಾರು ಚಲಾಯಿಸಿಕೊಂಡು ವೇಗವಾಗಿ ಪಾಲೊಸ್ ವರ್ಡಿಸ್ ಪ್ರದೇಶದಲ್ಲಿ ಹೋಗುತ್ತಿದ್ದರು. ಈ ವೇಳೆ ಕಾರು ನಿಯಂತ್ರಣಕ್ಕೆ ಸಿಗದೆ ಬೆಟ್ಟದ ಪ್ರದೇಶದಲ್ಲಿ ಕಾರು ಉರುಳಿ ಕಂದಕಕ್ಕೆ ಬಿದ್ದಿದೆ. ಈ ವೇಳೆ ಕಾರಿನಲ್ಲಿ ಟೈಗರ್‌ ವುಡ್ಸ್‌ ತೀವ್ರವಾಗಿ ಗಾಯಗೊಂಡಿದ್ದಾರೆ. ಕಾರು ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ.

    ಕಾರು ಅಪಘಾತವನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರು ವುಡ್ಸ್ ಅವರನ್ನು ರಕ್ಷಿಸಿ ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.ವುಡ್ಸ್‌ಗೆ ಚಿಕಿತ್ಸೆಯನ್ನು ನೀಡಲಾಗುತ್ತಿದೆ.

  • ಮೊಸಳೆ ಎದುರೇ ಗಾಲ್ಫ್ ಆಡಿದ ಭೂಪ – ವಿಡಿಯೋ ವೈರಲ್

    ಮೊಸಳೆ ಎದುರೇ ಗಾಲ್ಫ್ ಆಡಿದ ಭೂಪ – ವಿಡಿಯೋ ವೈರಲ್

    ವಾಷಿಂಗ್ಟನ್: ಮೊಸಳೆ ಎದುರಲ್ಲೇ ಹೋಗುತ್ತಿದ್ದರೂ ಸ್ಪಲ್ಪವೂ ಭಯಪಡದೆ, ವ್ಯಕ್ತಿಯೋಬ್ಬರು ತಮ್ಮ ಪಾಡಿಗೆ ತಾವು ಗಾಲ್ಫ್ ಆಡಿದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

    ಅಮೆರಿಕದ ಒರ್ಲ್ಯಾಂಡೊದ ನಿವಾಸಿ ಸ್ಟೀಲ್ ಲ್ಯಾಫರ್ಟಿ ಕ್ಲಬ್ ಒಂದರಲ್ಲಿ ಗಾಲ್ಫ್ ಆಡುತ್ತಿದ್ದರು. ಈ ವೇಳೆ ಅವರ ಮುಂದೆ ಸುಮಾರು 7 ಅಡಿ ಉದ್ದದ ಮೊಸಳೆ ಬಂದಿದೆ. ಅದು ಅವರ ಸುತ್ತಮುತ್ತಲೇ ಸುಳಿದಾಡುತ್ತಿದ್ದರೂ ಸ್ಟೀಲ್ ಮಾತ್ರ ತಮ್ಮ ಪಾಡಿಗೆ ಗಾಲ್ಫ್ ಆಡುತ್ತಿದ್ದರು. ಈ ದೃಶ್ಯವನ್ನು ಸ್ಥಳದಲ್ಲಿದ್ದವರು ವಿಡಿಯೋ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರು ವಿಡಿಯೋ ನೋಡಿ ಅಚ್ಚರಿ ಪಟ್ಟಿದ್ದಾರೆ.

    https://www.instagram.com/p/B1bn2ZWHznm/?utm_source=ig_embed&utm_campaign=embed_video_watch_again

    ಸ್ಟೀಲ್ ಅವರು ಜಲಕ್ರೀಡೆ ವೇಕ್‍ಬೋರ್ಡಿಂಗ್ ಆಟಗಾರರಾಗಿದ್ದು, ಜಲಚರಗಳ ಜೊತೆ ಒಳ್ಳೆಯ ಒಡನಾಟ ಹೊಂದಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ಮೊಸಳೆ ಪಾಪ ತನ್ನ ಪಾಡಿಗೆ ಹೋಗುತ್ತಿತ್ತು. ಅದಕ್ಕೆ ನಾನು ಏನೂ ತೊಂದರೆ ಮಾಡದೆ ನನ್ನ ಪಾಡಿಗೆ ಆಟವಾಡಿದೆ. ಸ್ವಲ್ಪ ಆತಂಕವಾಯ್ತು, ಆದರೆ ಮೊಸಳೆ ತನ್ನ ಕೆಲಸದಲ್ಲಿ ಬ್ಯುಸಿಯಿತ್ತು ಆದ್ದರಿಂದ ಹೆಚ್ಚು ಭಯವಾಗಿಲ್ಲ ಎಂದು ತಿಳಿಸಿದ್ದಾರೆ.

    ಸ್ವತಃ ಸ್ಟೀಲ್ ಅವರೇ ಈ ವಿಡಿಯೋವನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದು, ಸದ್ಯ ಈ ವಿಡಿಯೋವನ್ನು 95 ಸಾವಿರಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಜೊತೆಗೆ ಸಾವಿರಾರು ಮಂದಿ ಇದಕ್ಕೆ ಕಮೆಂಟ್ ಮಾಡಿದ್ದಾರೆ. ಅಲ್ಲದೆ ಫೇಸ್‍ಬುಕ್, ಟ್ವಿಟ್ಟರ್‌ಗಳಲ್ಲಿ ಕೂಡ ಈ ವಿಡಿಯೋ ಹರಿದಾಡುತ್ತಿದ್ದು, ಭಾರೀ ಸದ್ದು ಮಾಡುತ್ತಿದೆ.

  • ಸಿಎಂ ನಿವಾಸದೊಳಗೆ ಬಿತ್ತು ಗಾಲ್ಫ್ ಚೆಂಡು: ಪೊಲೀಸ್ ವಾಹನದ ಗಾಜು ಜಖಂ

    ಸಿಎಂ ನಿವಾಸದೊಳಗೆ ಬಿತ್ತು ಗಾಲ್ಫ್ ಚೆಂಡು: ಪೊಲೀಸ್ ವಾಹನದ ಗಾಜು ಜಖಂ

    ಬೆಂಗಳೂರು: ಗಾಲ್ಫ್ ಚೆಂಡು ಗೃಹಕಚೇರಿ ಕೃಷ್ಣಾ ನಿವಾಸದ ಒಳಗೆ ಬಿದ್ದಿದ್ದು, ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರ ವಾಹನದ ಗಾಜು ಜಖಂ ಗೊಂಡಿದೆ.

    ಕೃಷ್ಣಾ ನಿವಾಸದ ಪಕ್ಕದಲ್ಲಿಯೇ ಇರುವ ಗಾಲ್ಫ್ ಮೈದಾನದಿಂದ ಚೆಂಡು ಹಾರಿ ಬಂದಿದ್ದು, ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದೆ. ಕಾಕತಾಳೀಯ ಅಂದರೆ ಈ ಹಿಂದೆ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾಗಲೂ ಗಾಲ್ಫ್ ಚೆಂಡುಗಳು ಕೃಷ್ಣಾ ನಿವಾಸದೊಳಗೆ ಬಂದು ಬೀಳುತ್ತಿದ್ದವು. ಹೀಗಾಗಿ ಕುಮಾರಸ್ವಾಮಿ ಮೈದಾನದ ಸುತ್ತಲೂ 100 ಅಡಿ ಎತ್ತರದ ಬಲೆ ಹಾಕಿಸಿದ್ದರು. ಆದರೆ ಈಗ ಗಾಲ್ಫ್ ಚೆಂಡು ಅಷ್ಟು ಎತ್ತರದ ಬಲೆ ದಾಟಿ ಮತ್ತೆ ಕೃಷ್ಣಾ ನಿವಾಸದ ಒಳಗೆ ಬಂದು ಬಿದ್ದಿದೆ.

    ಗಾಲ್ಫ್ ಚೆಂಡು ವಶಕ್ಕೆ ಪಡೆದಿರುವ ಪೊಲೀಸರು, ಯಾರು ಹೊಡೆದಿದ್ದು ಎಂದು ಪರಿಶೀಲನೆ ನಡೆಸುತ್ತಿದ್ದಾರೆ.