Tag: Goldsmith

  • World Cup 2023 – ಚಿನ್ನದಲ್ಲಿ ವಿಶ್ವಕಪ್ ತಯಾರಿಸಿದ ಬೆಂಗಳೂರಿನ ಅಕ್ಕಸಾಲಿಗ

    World Cup 2023 – ಚಿನ್ನದಲ್ಲಿ ವಿಶ್ವಕಪ್ ತಯಾರಿಸಿದ ಬೆಂಗಳೂರಿನ ಅಕ್ಕಸಾಲಿಗ

    ಬೆಂಗಳೂರು: ದೇಶದೆಲ್ಲೆಡೆ ಈಗಾಗಲೇ ವಿಶ್ವಕಪ್ (World Cup) ಜ್ವರ ಜೋರಾಗಿದೆ. ಇಂದಿನ ಪಂದ್ಯಾವಳಿಯಲ್ಲಿ ಇಂಡಿಯಾ (India) ಗೆಲ್ಲಲ್ಲಿ ಅನ್ನೋ ಶುಭ ಹಾರೈಕೆ ನಾಡಿನೆಲ್ಲೆಡೆ ಕೇಳಿಬರುತ್ತಿದೆ. ಇದರ ನಡುವೆ ಬೆಂಗಳೂರಿನ (Bengaluru) ಅಕ್ಕಸಾಲಿಗನೊಬ್ಬ (Goldsmith) ಚಿನ್ನದ ವಿಶ್ವಕಪ್ ತಯಾರಿಸಿ ಡಿಫರೆಂಟ್ ಆಗಿ ವಿಶ್ ಮಾಡಿದ್ದಾರೆ.

    ವಿಶ್ವಕಪ್ ಟೂರ್ನಿನಲ್ಲಿ ಟೀಂ ಇಂಡಿಯಾ ಫೈನಲ್‌ಗೆ ಪ್ರವೇಶಿಸುತ್ತಿದ್ದಂತೆ ಭಾರತ ಗೆಲ್ಲುತ್ತದೆ ಎನ್ನುವ ನಿರೀಕ್ಷೆಗಳು ಗರಿಗೆದರಿವೆ. ಲಕ್ಷಾಂತರ ಜನ ಪೂಜೆ, ಪುನಸ್ಕಾರ ಸೇರಿದಂತೆ ಹಲವು ರೀತಿಯಲ್ಲಿ ವಿಶ್ ಮಾಡುತ್ತಿದ್ದಾರೆ. ಬೆಂಗಳೂರಿನ ಚಿನ್ನದ ವ್ಯಾಪಾರಿಯಿಂದ ವಿಶ್ವಕಪ್ ಮಿನಿ ಟ್ರೋಫಿಗಳು (Trophy) ನಿರ್ಮಾಣವಾಗಿವೆ. ಕ್ರಿಕೆಟ್ (Cricket) ಅಭಿಮಾನಿಯಾಗಿರುವ ನಾಗರಾಜ್ ರೇವಣಕರ್ ಅಕ್ಕಸಾಲಿಗನಾಗಿ ಕೆಲಸ ಮಾಡುತ್ತಿದ್ದು, ಇಂದು ಭಾರತ ಗೆಲ್ಲಲಿ ಅನ್ನೋ ಆಶಯದೊಂದಿಗೆ ಚಿನ್ನದಲ್ಲಿ ಮೂರು ವಿಶ್ವಕಪ್ ಟ್ರೋಫಿ ನಿರ್ಮಿಸಿದ್ದಾರೆ. ನಾಗರಾಜ್, ಟೀಂ ಇಂಡಿಯಾ ಮೇಲಿನ ಅಭಿಮಾನಕ್ಕೆ 22 ಕ್ಯಾರೆಟ್‌ನಲ್ಲಿ ಒಂದು ಗ್ರಾಂ, 680 ಮಿಲಿಗ್ರಾಂನಲ್ಲಿ ಒಂದು ವಿಶ್ವಕಪ್‌ನಂತೆ ಒಟ್ಟು ಮೂರು ವಿಶ್ವಕಪ್ ಅನ್ನು ನಾಲ್ಕು ಗ್ರಾಂ 880 ಮಿಲಿಯಲ್ಲಿ, ಎರಡು ಸೆಂ.ಮೀನಲ್ಲಿ ತಯಾರಿಸಿದ್ದಾರೆ. ಇದನ್ನೂ ಓದಿ: 13 ವಿಶ್ವಕಪ್‍ನಲ್ಲಿ 8ನೇ ಬಾರಿ ಫೈನಲ್- 5 ಬಾರಿ ಚಾಂಪಿಯನ್ ಆಗಿರೋ ಆಸ್ಟ್ರೇಲಿಯಾ

    ಇನ್ನೂ ವಿಶ್ಚಕಪ್ ಅನ್ನು ಚಿನ್ನದಲ್ಲಿ ತಯಾರಿಸಿದರೇ, ಬ್ಯಾಟ್‌ಗಳನ್ನು ಬೆಳ್ಳಿಯಲ್ಲಿ ತಯಾರಿಸಿದ್ದಾರೆ. ಸ್ಟಮ್ಸ್‌ಗಳನ್ನು ಚಿನ್ನದ ಕೋಟೆಡ್‌ನಲ್ಲಿ ಮಾಡಿದ್ದಾರೆ. ಮೊದಲನೆ ವಿಶ್ವಕಪ್ ಬ್ಯಾಟ್‌ನಲ್ಲಿ ಕಪೀಲ್ ದೇವ್ (1983), ಎರಡನೇ ಬ್ಯಾಟ್‌ನಲ್ಲಿ ಎಂ.ಎಸ್ ದೋನಿ(2011) ಅಂತಾ ಬರೆದರೇ, ಮೂರನೇ  ಬ್ಯಾಟ್‌ನಲ್ಲಿ ‘ಆಲ್ ದಿ ಬೆಸ್ಟ್ ಇಂಡಿಯಾ’ ಅಂತಾ ಬರೆಯಲಾಗಿದೆ.  ಇದನ್ನೂ ಓದಿ: World Cup 2023: ರಾಜ್ಯದ ಎಲ್ಲಾ ಜಿಲ್ಲಾ ಕ್ರೀಡಾಂಗಣಗಳಲ್ಲಿ ದೊಡ್ಡ ಪರದೆಯಲ್ಲಿ ನೇರಪ್ರಸಾರದ ವ್ಯವಸ್ಥೆ

  • ಹಣ ದೋಚಿ, ಆ್ಯಸಿಡ್ ಕುಡಿಸಿ ಚಿನ್ನದ ವ್ಯಾಪಾರಿಯ ಬರ್ಬರ ಕೊಲೆ

    ಹಣ ದೋಚಿ, ಆ್ಯಸಿಡ್ ಕುಡಿಸಿ ಚಿನ್ನದ ವ್ಯಾಪಾರಿಯ ಬರ್ಬರ ಕೊಲೆ

    ಕಲಬುರಗಿ: ಹಣ ಚಿನ್ನಾಭರಣ ಕಸಿದುಕೊಂಡು ಆ್ಯಸಿಡ್ ಕುಡಿಸಿ ರಾಡ್‍ನಿಂದ ಹೊಡೆದು ಅಕ್ಕಸಾಲಿಗನ(ಚಿನ್ನದ ವ್ಯಾಪಾರಿ)ಯನ್ನು ಬರ್ಬರ ಹತ್ಯೆ ಮಾಡಲಾಗಿದೆ. ಈ ಭಯಾನಕ ಘಟನೆ ಚಿತ್ತಾಪುರ ತಾಲೂಕಿನ ರಾವೂರ್ ಕ್ರಾಸ್ ಬಳಿ ನಡೆದಿದೆ.

    ವಿಜಯಕುಮಾರ್ ಶಿಲವಂತ (38) ಕೊಲೆಯಾದ ಅಕ್ಕಸಾಲಿಗ. ಈತ ಕಲಬುರಗಿಯ ಶಹಬಜಾರ ಕಬಾಡ್‍ಗಲ್ಲಿ ನಿವಾಸಿಯಾಗಿದ್ದಾನೆ. ಆರು ಲಕ್ಷ ರೂಪಾಯಿ ನಗದು ಹಣದೊಂದಿಗೆ ಚಿನ್ನಾಭರಣ ತರಲು ಹಲಕರ್ಟಿ ಗ್ರಾಮಕ್ಕೆ ಹೋಗುತ್ತಿದ್ದರು. ಈ ವೇಳೆ ಅಡ್ಡಗಟ್ಟಿದ ದುಷ್ಕರ್ಮಿಗಳು ಹಣ ಹಾಗೂ ಆತನ ಬಳಿಯಿದ್ದ ಚಿಕ್ಕಪುಟ್ಟ ಚಿನ್ನಾಭರಣ ದೋಚಿದ್ದಾರೆ. ಇದನ್ನೂ ಓದಿ:  ರಷ್ಯಾ ದಾಳಿಯಿಂದ ರಕ್ಷಿಸಿಕೊಳ್ಳಲು ಭೂಗತ ಹ್ಯಾಕರ್‌ಗೆ ಉಕ್ರೇನ್ ಕರೆ!

    ಇಷ್ಟಕ್ಕೆ ಬಿಡದ ದುಷ್ಕರ್ಮಿಗಳು, ವಿಜಯಕುಮಾರಗೆ ಆ್ಯಸಿಡ್ ಕುಡಿಸಿ ರಾಡ್‍ನಿಂದ ಹೊಡೆದು ಹತ್ತೆಗೈಯ್ದು ಪರಾರಿಯಾಗಿದ್ದಾರೆ. ಈ ಕುರಿತು ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಅಕ್ಕಸಾಲಿಗನ ಕೈಯಲ್ಲಿ ಅರಳಿತು ಅಕ್ಕಿ ಕಾಳಿಗಿಂತ ಚಿಕ್ಕದಾದ ಗೋಲ್ಡ್ ಮೋದಿ ಕಲಾಕೃತಿ

    ಅಕ್ಕಸಾಲಿಗನ ಕೈಯಲ್ಲಿ ಅರಳಿತು ಅಕ್ಕಿ ಕಾಳಿಗಿಂತ ಚಿಕ್ಕದಾದ ಗೋಲ್ಡ್ ಮೋದಿ ಕಲಾಕೃತಿ

    ಶಿವಮೊಗ್ಗ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ 70ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅಕ್ಕಸಾಲಿಗರೊಬ್ಬರು ಅಕ್ಕಿಕಾಳಿಗಿಂತ ಚಿಕ್ಕದಾದ ಚಿನ್ನದ ಮೋದಿ ಕಲಾಕೃತಿಯನ್ನು ರಚನೆ ಮಾಡಿದ್ದಾರೆ.

    ಲಾಕ್‍ಡೌನ್‍ನಲ್ಲಿ ಸಮಯ ಮಾಡಿಕೊಂಡ ಅಕ್ಕಸಾಲಿಗರೊಬ್ಬರು, ಚಿನ್ನದಲ್ಲಿ ತನ್ನೊಳಗಿನ ಕಲಾಕೌಶಲ್ಯವನ್ನು ಅರಳಿಸಿದ್ದಾರೆ. ಗೋಲ್ಡ್‍ನಲ್ಲಿ ಮೋದಿ ಅರಳಿಸಿ, ಮನೆಮಾತಾಗಿದ್ದಾರೆ. ಅಂದಹಾಗೆ ಈ ಕಲಾಕೃತಿಗಳನ್ನು ರಚಿಸಿದ ಕಲಾವಿದನ ಹೆಸರು ರವಿಚಂದ್ರ. ಶಿವಮೊಗ್ಗ ಜಿಲ್ಲೆ ಭದ್ರಾವತಿ ನಗರದಲ್ಲಿ ಅಕ್ಕಸಾಲಿಗರಾಗಿರುವ ಇವರಿಗೆ ಏನಾದರೊಂದು ವಿಭಿನ್ನವಾಗಿ ಪ್ರಯತ್ನಿಸಬೇಕೆಂಬ ತುಡಿತವಿದ್ದು, ಇದೀಗ ಈ ಕಲಾಕೃತಿಗಳ ಮಾಡಿದ್ದಾರೆ.

    ಅಂದಹಾಗೆ ಇದೀಗ ಸಣ್ಣದರಲ್ಲಿಯೇ ಅತಿ ಸಣ್ಣ ಚಿಕ್ಕ ಮೋದಿಯನ್ನು ರಚಿಸಿ, ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. 20 ಮಿ.ಗ್ರಾಂ ಬಂಗಾರದ 3.75 ಮಿ.ಮೀ. ಎತ್ತರದ, 3 ಮಿ.ಮೀ. ಅಗಲದ, ಅಕ್ಕಿ ಕಾಳಿಗಿಂತ ಚಿಕ್ಕದಾದ ಪ್ರಧಾನಿ ನರೇಂದ್ರ ಮೋದಿಯವರ ಕಲಾಕೃತಿಯನ್ನು ರಚಿಸಿ ಸೈ ಎನಿಸಿಕೊಂಡಿದ್ದಾರೆ. ಇಂದು ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬವಿದ್ದು, ಇದನ್ನು ಅವರಿಗೆ ಸಮರ್ಪಿಸಿದ್ದಾರೆ.

    ಅಲ್ಲದೇ ಈ ಲಾಕ್‍ಡೌನ್ ಬಿಡುವಿನ ಸಮಯವನ್ನೆ ಉಪಯೋಗಿಸಿಕೊಂಡು ಈ ಚಿಕ್ಕ ಕಲಾಕೃತಿ ರಚಿಸಲು ಸಾಕಷ್ಟು ಪ್ರಯತ್ನ ಪಟ್ಟು ಕೊನೆಗೆ ಸಕ್ಸಸ್ ಕಂಡಿದ್ದಾರೆ. ಕಳೆದ 2 ತಿಂಗಳಿನಿಂದ ಪ್ರತಿದಿನ ಒಂದೆರಡು ಗಂಟೆಗಳ ಕಾಲ ಈ ಕಲಾಕೃತಿ ರಚಿಸಲು ಸಮಯ ವ್ಯಯಿಸಿದ್ದು, ಕೊನೆಗೆ ಈ ಸೂಕ್ಷ್ಮ ಕಲಾಕೃತಿ ರಚಿಸುವಲ್ಲಿ ಸಫಲರಾಗಿದ್ದಾರೆ. ಮೋದಿಯವರು ಓಕೆ ಅಂದರೆ ಸಾಕು ದೆಹಲಿಗೆ ಹೋಗಿ ಇದನ್ನು ಕೊಟ್ಟು ಬರುತ್ತೇನೆ ಎಂಬ ಆಶಯ ಹೊಂದಿದ್ದಾರೆ.