Tag: Golden Visa

  • ಅನಿವಾಸಿ ಭಾರತೀಯರಿಗೆ ಗುಡ್‌ ನ್ಯೂಸ್‌ – 23 ಲಕ್ಷಕ್ಕೆ ಜೀವಿತಾವಧಿ ‘ಗೋಲ್ಡನ್‌ ವೀಸಾ’ ಪರಿಚಯಿಸಿದ ಯುಎಇ

    ಅನಿವಾಸಿ ಭಾರತೀಯರಿಗೆ ಗುಡ್‌ ನ್ಯೂಸ್‌ – 23 ಲಕ್ಷಕ್ಕೆ ಜೀವಿತಾವಧಿ ‘ಗೋಲ್ಡನ್‌ ವೀಸಾ’ ಪರಿಚಯಿಸಿದ ಯುಎಇ

    ದುಬೈ: ಯುನೈಟೆಡ್‌ ಅರಬ್‌ ಎಮಿರೇಟ್ಸ್‌ (UAE) ಅತಿದೊಡ್ಡ ವಲಸಿಗ ಸಮುದಾಯಗಳಲ್ಲಿ ಒಂದಾಗಿರುವ ಭಾರತೀಯ ಪ್ರಜೆಗಳಿಗೆ ಗುಡ್‌ ನ್ಯೂಸ್‌ ನೀಡಿದೆ.

    ನಾಮನಿರ್ದೇಶನದ ಆಧಾರದ ಮೇಲೆ ಕೆಲವು ಷರತ್ತುಗಳೊಂದಿಗೆ ಹೊಸ ರೀತಿಯ ಗೋಲ್ಡನ್‌ ವೀಸಾ ಪರಿಚಯಿಸಿದೆ. ‘ಹೊಸ ನಾಮನಿರ್ದೇಶನ ಆಧಾರಿತ ವೀಸಾ ನೀತಿ’ ಅಡಿಯಲ್ಲಿ, ಭಾರತೀಯರು AED 1,00,000 (ಸುಮಾರು 23.30 ಲಕ್ಷ ರೂ.) ಶುಲ್ಕ ಪಾವತಿಸಿ ಯುಎಇ ಗೋಲ್ಡನ್‌ ವೀಸಾ ಪಡೆಯಬಹುದು.

    ಇದು ಜೀವಿತಾವಧಿ ವರೆಗಿನ ವೀಸಾ ಆಗಿದೆ. ಸುಮಾರು 5,000 ಕ್ಕೂ ಹೆಚ್ಚು ಭಾರತೀಯರು ನಾಮನಿರ್ದೇಶನ ಆಧಾರಿತ ವೀಸಾಗೆ ಅರ್ಜಿ ಸಲ್ಲಿಸುವ ನಿರೀಕ್ಷೆಯಿದೆ ಎಂದು ಯುಎಇ ಆಡಳಿತ ತಿಳಿಸಿದೆ.

    ಗೋಲ್ಡನ್‌ ವೀಸಾದ ಪ್ರಯೋಜನ ಏನು?
    ಈ ವೀಸಾ ಪಡೆದ ನಂತರ ಒಬ್ಬರು ತಮ್ಮ ಕುಟುಂಬ ಸದಸ್ಯರನ್ನು ದುಬೈಗೆ ಕರೆತರುವ ಸ್ವಾತಂತ್ರ್ಯವನ್ನು ಪಡೆಯುತ್ತಾರೆ. ವೀಸಾ ಆಧರಿಸಿ ಸೇವಕರು ಮತ್ತು ಚಾಲಕರನ್ನು ನೇಮಿಸಿಕೊಳ್ಳಬಹುದು. ಯುಎಇಯಲ್ಲಿ ಯಾವುದೇ ವ್ಯವಹಾರ ಅಥವಾ ವೃತ್ತಿಪರ ಕೆಲಸವನ್ನು ಮಾಡಬಹುದು. ಆದರೆ, ಆಸ್ತಿ ಮಾರಾಟ ಅಥವಾ ವಿಭಜನೆಯ ಸಂದರ್ಭದಲ್ಲಿ ನಾಮನಿರ್ದೇಶಿತ ಆಧಾರಿತ ವೀಸಾ ಶಾಶ್ವತವಾಗಿ ಉಳಿಯುತ್ತದೆ.

    ಅಮೆರಿಕದ ಗೋಲ್ಡನ್ ವೀಸಾ ದುಬಾರಿಯಾಗಿದ್ದು,‌ ಇದಕ್ಕೆ ಹೋಲಿಸಿದರೆ ಯುಎಇ ಗೋಲ್ಡನ್‌ ವೀಸಾ ಕೈಗೆಟುಕುವ ದರದಲ್ಲಿದೆ.

  • UAEನಿಂದ ಗೋಲ್ಡನ್ ವೀಸಾ ಪಡೆದ ಪ್ರಣಿತಾ!

    UAEನಿಂದ ಗೋಲ್ಡನ್ ವೀಸಾ ಪಡೆದ ಪ್ರಣಿತಾ!

    ಬೆಂಗಳೂರು: ದಕ್ಷಿಣ ಭಾರತದ ಕ್ಯೂಟ್ ನಟಿ ಪ್ರಣಿತಾ ಸುಭಾಷ್ UAEನಿಂದ ಗೋಲ್ಡನ್ ವೀಸಾ ಸ್ವೀಕರಿಸಿದ್ದಾರೆ.

    ಬಹುಭಾಷಾ ನಟಿಯಾಗಿರುವ ಪ್ರಣಿತಾ ಟ್ಟಿಟ್ಟರ್ ನಲ್ಲಿ, ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ) ನಿಂದ ಗೋಲ್ಡನ್ ವೀಸಾ ಸ್ವೀಕರಿಸುತ್ತಿರುವುದು ಗೌರವದ ವಿಷಯವಾಗಿದೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ನೋಡಿದ ನೆಟ್ಟಿಗರು ಅಭಿನಂದನೆಗಳನ್ನು ತಿಳಿಸಿದ್ದಾರೆ.

    ಯುಎಇ ಗೋಲ್ಡನ್ ವೀಸಾದಿಂದ ಅರಬ್ ನಲ್ಲಿ ಬೇರೆ ರಾಷ್ಟ್ರದ ಪ್ರಜೆಗಳು ಜೀವನ ನಡೆಸುವ, ಕೆಲಸ ಮಾಡುವ ಮತ್ತು ಓದುವ ಅವಕಾಶಗಳು ಇರುತ್ತೆ. ಆ ಗೌರವವನ್ನು ಕನ್ನಡದ ನಟಿ ಪ್ರಣಿತಾ ಪಡೆದಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ. ಇದನ್ನೂ ಓದಿ: ವೈರಲ್ ಆಯ್ತು ಶಾರೂಖ್ ನ್ಯೂಲುಕ್ – ರಿಯಲ್ ಫೋಟೋ ರಿಲೀಸ್!

    ದಕ್ಷಿಣ ಭಾರತದ ಖ್ಯಾತ ನಟಿಯಾಗಿರುವ ಪ್ರಣಿತಾ 2010 ರಂದು ‘ಪೊರ್ಕಿ’ ಕನ್ನಡ ಸಿನಿಮಾದ ಮೂಲಕ ಬಣ್ಣದ ಜಗತ್ತಿಗೆ ಪಾದರ್ಪಣೆ ಮಾಡಿದರು. ನಂತರ ಹಲವು ಕನ್ನಡ ಸ್ಟಾರ್ ನಟರ ಜೊತೆ ನಟಿಸಿದ ಈ ತಾರೆ ಟಾಲಿವುಡ್, ಕಾಲಿವುಡ್ ನಲ್ಲಿಯೂ ತಮ್ಮ ಛಾಪನ್ನು ಮೂಡಿಸಿದ್ದಾರೆ. ಅಲ್ಲದೆ ದಕ್ಷಿಣ ಭಾರತದ ಬಹುತೇಕ ಸ್ಟಾರ್ ನಟರ ಜೊತೆ ಇವರು ನಟಿಸಿದ್ದಾರೆ. ಪ್ರಸ್ತುತ ಸಮಾಜಸೇವೆ ಎಂದು ಈ ನಟಿ ಬ್ಯುಸಿಯಾಗಿದ್ದಾರೆ. ಕೊರೊನಾ ಸಮಯದಲ್ಲಿಯೂ ಪ್ರಣಿತಾ ಜನರಿಗೆ ಸಹಾಯ ಮಾಡಿದ್ದಾರೆ.