Tag: Golden Temple

  • ಇದು ಭಾರತವಲ್ಲ, ಪಂಜಾಬ್ – ಮುಖದಲ್ಲಿ ಧ್ವಜವಿದ್ದ ಯುವತಿಗೆ ಸ್ವರ್ಣ ಮಂದಿರ ಪ್ರವೇಶಕ್ಕೆ ನಿಷೇಧ

    ಇದು ಭಾರತವಲ್ಲ, ಪಂಜಾಬ್ – ಮುಖದಲ್ಲಿ ಧ್ವಜವಿದ್ದ ಯುವತಿಗೆ ಸ್ವರ್ಣ ಮಂದಿರ ಪ್ರವೇಶಕ್ಕೆ ನಿಷೇಧ

    ಚಂಡೀಗಢ: ಮುಖದಲ್ಲಿ ಭಾರತದ ಧ್ವಜದ ಚಿತ್ರವನ್ನು ಬಿಡಿಸಿಕೊಂಡಿದ್ದಕ್ಕೆ ಪಂಜಾಬ್‍ನ ಅಮೃತಸರದಲ್ಲಿರುವ ಸ್ವರ್ಣ ಮಂದಿರದ (Golden Temple) ಪ್ರವೇಶಕ್ಕೆ ಅನುಮತಿ ನೀಡದ ವಿಚಾರ ಈಗ ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗಿದೆ.

    ಯುವತಿಯೊಬ್ಬಳು (Woman) ಸ್ವರ್ಣ ಮಂದಿರದ ಒಳಗಡೆ ಹೋಗುತ್ತಿದ್ದಂತೆ ಅಲ್ಲಿಯ ಕಾವಲುಗಾರನೊಬ್ಬ ಆಕೆಯನ್ನು ತಡೆದಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ವೀಡಿಯೋದಲ್ಲಿ ಏನಿದೆ?: ಯುವತಿಯು ಕಾವಲುಗಾರನ ಬಳಿ ಇದು ಭಾರತವಲ್ಲವೇ ಎಂದು ಪ್ರಶ್ನಿಸುತ್ತಾಳೆ. ಅದಕ್ಕೆ ಆತ ಇದು ಪಂಜಾಬ್ ಎಂದು ಹೇಳುತ್ತಾನೆ. ಅದಾದ ಬಳಿಕ ಆಕೆಯ ಫೋನ್‍ನಲ್ಲಿ ವೀಡಿಯೋ ಮಾಡುತ್ತಿರುವುದನ್ನು ಗಮನಿಸಿ ಕಸಿದುಕೊಳ್ಳಲು ಪ್ರಯತ್ನಿಸುತ್ತಾನೆ.

    ಘಟನೆಗೆ ಸಂಬಂಧಿಸಿದಂತೆ ಸ್ವರ್ಣ ಮಂದಿರವನ್ನು ನಿರ್ವಹಣೆ ಮಾಡುವ ಶಿರೋಮಣಿ ಗುರುದ್ವಾರ ಪಬರ್ಂಧಕ್ ಸಮಿತಿಯು ಅಧಿಕಾರಿಯ ದುರ್ವರ್ತನೆಗಾಗಿ ಕ್ಷಮೆಯಾಚಿಸಿದೆ. ಆದರೆ ಯುವತಿಯ ಮುಖದ ಮೇಲೆ ಅಶೋಕ ಚಕ್ರವನ್ನು ಹೊಂದಿಲ್ಲದ ಕಾರಣ ಅದು ತ್ರಿವರ್ಣ ಧ್ವಜವಲ್ಲ ಎಂದು ವಾದಿಸಿದೆ. ಇದನ್ನೂ ಓದಿ: ಬಿಜೆಪಿ, ಕಾಂಗ್ರೆಸ್‌ ಮಧ್ಯೆ ನೇರ ಸ್ಪರ್ಧೆ – ಬಸವಕಲ್ಯಾಣ ಕ್ಷೇತ್ರದ ಅಖಾಡ ಹೇಗಿದೆ?

    ಎಸ್‍ಜಿಪಿಸಿಯ ಪ್ರಧಾನ ಕಾರ್ಯದರ್ಶಿ ಗುರ್ಚರಣ್ ಸಿಂಗ್ ಗ್ರೆವಾಲ್ ಮಾತನಾಡಿ, ಇದು ಸಿಖ್ ದೇಗುಲವಾಗಿದೆ. ಪ್ರತಿಯೊಂದು ಧಾರ್ಮಿಕ ಸ್ಥಳವು ತನ್ನದೇ ಆದ ಅಲಂಕಾರವನ್ನು ಹೊಂದಿದೆ. ನಾವು ಎಲ್ಲರಿಗೂ ಸ್ವಾಗತಿಸುತ್ತೇವೆ. ಅಧಿಕಾರಿಯೊಬ್ಬರು ಅನುಚಿತವಾಗಿ ವರ್ತಿಸಿದರೆ ನಾವು ಕ್ಷಮೆಯಾಚಿಸುತ್ತೇವೆ. ಅವಳ ಮುಖದಲ್ಲಿರುವ ಧ್ವಜವು ನಮ್ಮ ರಾಷ್ಟ್ರಧ್ವಜವಾಗಿರಲಿಲ್ಲ. ಏಕೆಂದರೆ ಅದು ಅಶೋಕ ಚಕ್ರವನ್ನು ಹೊಂದಿರಲಿಲ್ಲ. ಇದು ರಾಜಕೀಯ ಧ್ವಜವಾಗಿರಬಹುದು ಎಂದು ಹೇಳಿದರು. ಇದನ್ನೂ ಓದಿ: ಬಿಜೆಪಿ, ಆರ್‌ಎಸ್‌ಎಸ್‌ನಿಂದ ಪ್ರಜಾಪ್ರಭುತ್ವದ ಮೇಲೆ ದಾಳಿ : ರಾಹುಲ್ ಗಾಂಧಿ

  • ಗೋಲ್ಡನ್ ಟೆಂಪಲ್‍ನ ಬಳಿ ಖಾಲಿಸ್ತಾನ ಪರ ಘೋಷಣೆ

    ಗೋಲ್ಡನ್ ಟೆಂಪಲ್‍ನ ಬಳಿ ಖಾಲಿಸ್ತಾನ ಪರ ಘೋಷಣೆ

    ಚಂಡೀಗಢ: ಖಾಲಿಸ್ತಾನ ಪ್ರತ್ಯೇಕವಾದಿಗಳ ಕೂಗು ಹೆಚ್ಚುತ್ತಿದ್ದು, ಇಂದು ಪಂಜಾಬ್‍ನ ಅಮೃತಸರದಲ್ಲಿರುವ ಸಿಖ್‍ರ ಪವಿತ್ರ ಸ್ಥಳ ಗೋಲ್ಡನ್ ಟೆಂಪಲ್‍ನ ಪ್ರವೇಶದ್ವಾರದಲ್ಲಿ ಜನರ ಗುಂಪು ಭಿಂದ್ರನ್‍ವಾಲೆ ಪರ ಪೋಸ್ಟರ್‌ಗಳನ್ನು ಹಿಡಿದು ಘೋಷಣೆ ಕೂಗಿದ್ದಾರೆ.

    38ನೇ ಆಪರೇಷನ್ ಬ್ಲೂಸ್ಟಾರ್ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ. ಕಳೆದ ವಾರ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಆಪರೇಷನ್ ಬ್ಲೂಸ್ಟಾರ್ ವಾರ್ಷಿಕೋತ್ಸವದ ಮೊದಲು ಕಾನೂನು ಮತ್ತು ಸುವ್ಯವಸ್ಥೆಯನ್ನು ಪರಿಶೀಲಿಸಿದ್ದರು. ನಂತರ ಶಾಂತಿಯನ್ನು ಕಾಪಾಡಲು ಪೊಲೀಸರಿಗೆ ಸೂಚಿಸಿದ್ದರು.

    ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಗೋಲ್ಡನ್ ಟೆಂಪಲ್ ಸುತ್ತಲೂ ಸೆಕ್ಷನ್ 144 ಅನ್ನು ವಿಧಿಸಲಾಗಿತ್ತು. ದೇವಸ್ಥಾನಕ್ಕೆ ಯಾವುದೇ ರೀತಿಯ ಆಯುಧಗಳನ್ನು ಒಯ್ಯುವುದನ್ನು ನಿಷೇಧಿಸಲಾಗಿತ್ತು. ಆದರೆ ಬೆಳಗಿನ ಪ್ರಾರ್ಥನಾ ಸಭೆಯ ನಂತರ ನೂರಕ್ಕೂ ಹೆಚ್ಚು ಜನರು ಹೊರಗೆ ಜಮಾಯಿಸಿ ಘೋಷಣೆ ಕೂಗಿದ್ದಾರೆ.

    ಏನಿದು ಆಪರೇಷನ್ ಬ್ಲೂಸ್ಟಾರ್: ಪ್ರತ್ಯೇಕ ಖಾಲಿಸ್ತಾನ ರಾಷ್ಟ್ರಕ್ಕಾಗಿ ಬಂಡುಕೋರರ ನಾಯಕ ಜರ್ನೈಲ್ ಸಿಂಗ್ ಭಿಂದ್ರನ್‍ವಾಲೆ, ಗೋಲ್ಡನ್‍ಟೆಂಪಲ್ (ಸ್ವರ್ಣಮಂದಿರ)ನ್ನೆ ಆಶ್ರಯ ತಾಣವಾಗಿಸಿಕೊಂಡಿದ್ದ. ಶಸ್ತ್ರಾಸ್ತ್ರಗಳೊಂದಿಗೆ ಅಡಗಿಕೊಂಡಿದ್ದ ಭಿಂದ್ರನ್‍ವಾಲೆಯನ್ನು ಸ್ವರ್ಣಮಂದಿರದಿಂದ ಹೊರಹಾಕಲು ಭಾರತೀಯ ಸೇನೆಯು 1984ರ ಜೂನ್ 3ರಿಂದ 8ರವರೆಗೆ ಆಪರೇಷನ್ ಬ್ಲೂಸ್ಟಾರ್ ಎಂಬ ಹೆಸರಿನ ಕಾರ್ಯಾಚರಣೆ ನಡೆಸಿತ್ತು. ಆಗಿನ ಪ್ರಧಾನಿ ಇಂದಿರಾಗಾಂಧಿ ಕಾರ್ಯಾಚರಣೆಗೆ ಆದೇಶ ನೀಡಿದ್ದರು. ಇದರಲ್ಲಿ ಭಿಂದ್ರನ್‍ವಾಲೆ ಹತನಾಗಿದ್ದ. ಇದರ ನೆನಪಿಗಾಗಿ ಆಪರೇಷನ್ ಬ್ಲೂಸ್ಟಾರ್ ವಾರ್ಷಿಕೋತ್ಸವ ಆಚರಿಸಲಾಗುತ್ತಿದೆ. ಇದನ್ನೂ ಓದಿ: RSSಗೆ ಕೈ ಹಾಕಿದ ನೆಹರೂ, ಇಂದಿರಾ ಗಾಂಧಿ ಸುಟ್ಟೋಗಿದ್ದಾರೆ, ಸಿದ್ದರಾಮಯ್ಯನೂ ಸುಟ್ಟು ಹೋಗ್ತಾರೆ: ಕಟೀಲ್

    ಖಾಲಿಸ್ತಾನ ಕೂಗು ಹೆಚ್ಚಳ: ವರ್ಷದ ಮಾರ್ಚ್‍ನಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) ಪಂಜಾಬ್ ರಾಜ್ಯದಲ್ಲಿ ಬಹುಮತದಿಂದ ಸರ್ಕಾರವನ್ನು ರಚಿಸಿತ್ತು. ಆದರೆ ಸರ್ಕಾರ ರಚನೆ ಆದಗಿನಿಂದಲೂ ರಾಜ್ಯಕ್ಕೆ ಆಪತ್ತು ತರುವಂತಹ ಒಂದೆಲ್ಲಾ ಒಂದು ಘಟನೆಗಳು ಆಗುತ್ತಲೇ ಇವೆ. ಇದರ ಜೊತೆಗೆ ಖಾಲಿಸ್ತಾನ್ ಪ್ರತ್ಯೇಕವಾದಿಗಳ ಕೂಗು ಹೆಚ್ಚುತ್ತಲೇ ಇದೆ. ಇದಕ್ಕೆ ಪುಷ್ಠಿ ನೀಡುವಂತೆ ಮೊಹಾಲಿಯಲ್ಲಿರುವ ರಾಜ್ಯ ಪೊಲೀಸ್‍ನ ಗುಪ್ತಚರ ವಿಭಾಗದ ಪ್ರಧಾನ ಕಚೇರಿಯಲ್ಲಿ ರಾಕೆಟ್ ಚಾಲಿತ ಗ್ರೆನೇಡ್ ದಾಳಿ ನಡೆದಿತ್ತು. ಇದನ್ನೂ ಓದಿ: ಬೈಕರ್ ಗುಂಪಿನೊಂದಿಗೆ ಮಾತಿನ ಚಕಮಕಿ – ಸವಾರನಿಗೆ ಬೇಕೆಂದು ಸ್ಕಾರ್ಪಿಯೋ ಡಿಕ್ಕಿ

    Bhagwant Mann

    ಇದಾದ ಬಳಿಕ ಆಪ್ ಸರ್ಕಾರ ತೀವ್ರ ಟೀಕೆ ಗುರಿಯಾಗಿತ್ತು. ಇದಾದ ಬಳಿಕ ಸರ್ಕಾರ ಭದ್ರತೆಯನ್ನು ಹಿಂತೆಗೆದುಕೊಂಡ ಮರುದಿನವೇ ಪಂಜಾಬಿ ಗಾಯಕ ಸಿಧು ಮೂಸೆ ವಾಲೆ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಭಗವಂತ್ ಮಾನ್ ಅವರು ಪಂಜಾಬ್‍ನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ, ಖಾಲಿಸ್ತಾನ್ ಬೆಂಬಲಿಗರು ರಾಜ್ಯದಲ್ಲಿ ಪ್ರವೇಶಿಸಲು ಪ್ರಯತ್ನಿಸುತ್ತಿರುವುದು ಹೆಚ್ಚುತ್ತಿದೆ.

  • ಬೀದರ್‌ನ ಗುರುದ್ವಾರಕ್ಕೆ ಪಂಜಾಬ್ ಸಿಎಂ ತಾಯಿ ಭೇಟಿ

    ಬೀದರ್‌ನ ಗುರುದ್ವಾರಕ್ಕೆ ಪಂಜಾಬ್ ಸಿಎಂ ತಾಯಿ ಭೇಟಿ

    ಬೀದರ್: ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ತಾಯಿ ಇಂದು ಬೀದರ್‌ನ ಗುರುದ್ವಾರಕ್ಕೆ ಭೇಟಿ ನೀಡಿ ಗುರುನಾನಕ್‍ರ ದರ್ಶನ ಪಡೆದರು.

    ಬೀದರ್ ನಗರದ ಗುರುನಾನಕ್ ಕಾಲೋನಿಯಲ್ಲಿರುವ ಗುರುದ್ವಾರಕ್ಕೆ ಭಗವಂತ್ ಮಾನ್ ತಾಯಿ ಹರ್ಪಾಲ್ ಕೌರ್ ಭೇಟಿ ನೀಡಿ ಗುರುನಾನಕ್ ಸಾಹೇಬ್‍ರ ಗದ್ದುಗೆಗೆ ನಮಸ್ಕರಿಸಿ ದರ್ಶನ ಪಡೆದರು. ದಕ್ಷಿಣ ಭಾರತದ ಗೋಲ್ಡನ್ ಟೆಂಪಲ್ ಖ್ಯಾತಿ ಗುರುದ್ವಾರಕ್ಕೆ ಭೇಟಿ ನೀಡಿದ ಭಗವಂತ್ ಮಾನ್ ತಾಯಿಗೆ ಆಮ್ ಆದ್ಮಿ ಪಕ್ಷದ ಮುಖಂಡರು ಹಾಗೂ ಕುಟುಂಬಸ್ಥರು ಸಾಥ್ ನೀಡಿದರು. ಇದನ್ನೂ ಓದಿ: ಕಾಂಗ್ರೆಸ್ ಗೊಂದಲದ, ಪಿತೂರಿಯ, ನಾಯಕನಿಲ್ಲದ ಪಕ್ಷ: ಅರುಣ್ ಸಿಂಗ್

    ಮಗ ಪಂಜಾಬ್ ಮುಖ್ಯಮಂತ್ರಿಯಾದ ನಂತರ ಮೊದಲ ಬಾರಿಗೆ ತಾಯಿ ಗುರುದ್ವಾರಕ್ಕೆ ಭೇಟಿ ನೀಡಿದ್ದು, ಜೊತೆಗೆ ಗುರುನಾನಕ್ ದೇವ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದಿದ್ದ ಹಳೇ ವಿದ್ಯಾರ್ಥಿ ಕೂಡಾ ಪಂಜಾಬ್ ಸ್ಪೀಕರ್ ಆಗಿದ್ದಾರೆ. ಇದನ್ನೂ ಓದಿ: ಭಿನ್ನಾಭಿಪ್ರಾಯ ಹತ್ತಿಕ್ಕಿ ಸತ್ಯವನ್ನು ಬಂಧಿಸಲು ಸಾಧ್ಯವಿಲ್ಲ: ಮೋದಿಗೆ ರಾಹುಲ್‌ ತಿರುಗೇಟು

  • ಅಮೃತಸರದ ಸ್ವರ್ಣ ಮಂದಿರ ಅಪವಿತ್ರಗೊಳಿಸಲು ಯತ್ನ – ಕೋಪ್ರೋದ್ರಿಕ್ತ ಗುಂಪಿನಿಂದ ಹತ್ಯೆ

    ಅಮೃತಸರದ ಸ್ವರ್ಣ ಮಂದಿರ ಅಪವಿತ್ರಗೊಳಿಸಲು ಯತ್ನ – ಕೋಪ್ರೋದ್ರಿಕ್ತ ಗುಂಪಿನಿಂದ ಹತ್ಯೆ

    ಚಂಡೀಗಢ: ಅಮೃತಸರದ ಸ್ವರ್ಣ ಮಂದಿರವನ್ನು ಅಪವಿತ್ರಗೊಳಿಸಲು ಯತ್ನಿಸಿದ ಆರೋಪ ಕೇಳಿಬಂದ ಹಿನ್ನೆಲೆ ಯುವಕನೋರ್ವನನ್ನು ಕೋಪ್ರೋದ್ರಿಕ್ತರು ತೀವ್ರವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾರೆ.

    ಪ್ರತಿನಿತ್ಯ ಸಂಜೆ ನಡೆಯುವ ಪ್ರಾರ್ಥನೆ ವೇಳೆ ರೇಲಿಂಗ್( ಕಬ್ಬಿಣದ ಸರಪಳಿಯನ್ನು) ದಾಟಿ, ಆ ಸ್ಥಳಕ್ಕೆ ಜಿಗಿದು ಬಂದ ವ್ಯಕ್ತಿಯೋರ್ವ ಗುರು ಗ್ರಂಥ ಸಾಹೀಬ್ (ಸಿಖ್ ಧರ್ಮದ ಪವಿತ್ರವಾದ ಗ್ರಂಥ) ಬಳಿ ಇರಿಸಲಾದ ಖಡ್ಗವನ್ನು ಎತ್ತಿಕೊಳ್ಳಲು ಪ್ರಯತ್ನಿಸಿದ್ದಾನೆ.

    ಈ ವೇಳೆ ಕರ್ತವ್ಯನಿರತ ಶಿರೋಮಣಿ ಗುರುದ್ವಾರ ಪ್ರಬಂಧಕ್ ಸಮಿತಿ ಸಿಬ್ಬಂದಿ ಆತನನ್ನು ವಶಕ್ಕೆ ಪಡೆದು ಕೊಠಡಿಗೆ ಎಳೆದೊಯ್ದು ವಿಚಾರಣೆ ನಡೆಸಿ ತೀವ್ರವಾಗಿ ಥಳಿಸಿದ್ದಾರೆ. ಇದರಿಂದ ಗಂಭೀರವಾಗಿ ಹಲ್ಲೆಗೆ ಒಳಗಾದ ವ್ಯಕ್ತಿ ಮೃತಪಟ್ಟಿದ್ದಾನೆ. ಇದನ್ನೂ ಓದಿ: ಬಿಜೆಪಿ ಆಡಳಿತದಲ್ಲಿ ಮುಸ್ಲಿಮರು ಎಂದಿಗೂ ಸುರಕ್ಷಿತರಾಗಿರುವುದಿಲ್ಲ:  ಓವೈಸಿ

    ಈ ಕೃತ್ಯ ಕುರಿತಂತೆ ಶಿರೋಮಣಿ ಗುರುದ್ವಾರ ಪ್ರಬಂಧಕ್ ಸಮಿತಿಯ (ಎಸ್‍ಜಿಪಿಸಿ) ಕಾರ್ಯನಿರ್ವಾಹಕ ಸದಸ್ಯ ಭಾಯಿ ಗುರುಪ್ರೀತ್ ಸಿಂಗ್ ರಾಂಧವಾ ಅವರು, ಅಮೃತಸಾರದ ಸ್ವರ್ಣ ಮಂದಿರದಲ್ಲಿ ನಡೆದ ಈ ಅಹಿತಕರವಾದ ಘಟನೆಯನ್ನು ನಾನು ಖಂಡಿಸುತ್ತೇನೆ. ಪಂಜಾಬ್ ಸರ್ಕಾರ ಈ ವಿಚಾರವಾಗಿ ತಕ್ಷಣವೇ ಸೂಕ್ತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

    ದಿನ ನಿತ್ಯ ಪ್ರಾರ್ಥನೆಯು ವಾಹಿನಿಯೊಂದರಲ್ಲಿ ನೇರ ಪ್ರಸಾರವಾಗುವುದರಿಂದ ಈ ದೃಶ್ಯಾವಳಿಗಳು ಪ್ರಸಾರವಾಗಿದ್ದು, ಇದೀಗ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ಪೊಲೀಸರ ಸರ್ಪಗಾವಲಿನಲ್ಲಿ ಶಾಂತಿಯುತವಾಗಿ ತೆರೆಕಂಡ ಕಾಫಿನಾಡ ಶೋಭಾಯಾತ್ರೆ

    ಈ ಕುರಿತಂತೆ ಪ್ರತಿಕ್ರಿಯಿಸಿರುವ ಅಮೃತಸರ ಪೊಲೀಸ್ ಆಯುಕ್ತರು ಆ ವ್ಯಕ್ತಿ ದೈವ ನಿಂದನೆಗೆ ಯತ್ನಿಸಿದ್ದರಿಂದ ಸಾರ್ವಜನಿಕರು ಆತನನ್ನು ತೀವ್ರವಾಗಿ ಥಳಿಸಿದ್ದಾರೆ, ಇದೀಗ ವ್ಯಕ್ತಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಆತ ಯಾರು? ಎಲ್ಲಿಂದ ಬಂದಿದ್ದಾನೆ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.