Tag: Golden Temple

  • ಅಮೃತಸರದ ಸ್ವರ್ಣ ಮಂದಿರದ ಆವರಣದೊಳಗೆ ವಾಯು ರಕ್ಷಣಾ ವ್ಯವಸ್ಥೆ ನಿಯೋಜನೆ

    ಅಮೃತಸರದ ಸ್ವರ್ಣ ಮಂದಿರದ ಆವರಣದೊಳಗೆ ವಾಯು ರಕ್ಷಣಾ ವ್ಯವಸ್ಥೆ ನಿಯೋಜನೆ

    ಚಂಡೀಗಢ: ಪಾಕಿಸ್ತಾನದಿಂದ ಬರುವ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ಎದುರಿಸಲು ಅಮೃತಸರದ(Amritsar) ಸ್ವರ್ಣ ದೇವಾಲಯದ(Golden Temple) ಆವರಣದೊಳಗೆ ವಾಯು ರಕ್ಷಣಾ ವ್ಯವಸ್ಥೆಗಳನ್ನು ನಿಯೋಜಿಸಲು ಅಪರೂಪದ ಅನುಮತಿಯನ್ನು ಪಡೆಯಲಾಗಿದೆ ಎಂದು ಭಾರತೀಯ ಸೇನೆಯ ವಾಯು ರಕ್ಷಣಾ ವಿಭಾಗದ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಸುಮೇರ್ ಇವಾನ್ ಡಿ’ಕುನ್ಹಾ(Sumer Ivan D’Cunha) ತಿಳಿಸಿದ್ದಾರೆ.

    ಏ. 22ರಂದು ಪಹಲ್ಗಾಮ್‌ನಲ್ಲಿ(Pahalgam) ನಡೆದ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತ ಆರಂಭಿಸಿದ ಆಪರೇಷನ್ ಸಿಂಧೂರಕ್ಕೆ(Operation Sindoor) ಪ್ರತಿಯಾಗಿ ಅಮೃತಸರವನ್ನು ಗುರಿಯಾಗಿಸಿ ಪಾಕ್ ಸೇನೆ ಡ್ರೋನ್ ಮತ್ತು ಕ್ಷಿಪಣಿ ದಾಳಿ ನಡೆಸಿತ್ತು. ಆದರೆ ಈ ದಾಳಿಯನ್ನು ಸೇನೆ ವಿಫಲಗೊಳಿಸಿತ್ತು. ಮುಂಬರುವ ಅಪಾಯಗಳನ್ನು ಅರಿತು ವಾಯು ರಕ್ಷಣಾ ವ್ಯವಸ್ಥೆಗಳನ್ನು ನಿಯೋಜಿಸಲು ಅನುಮತಿ ಪಡೆದಿದೆ. ಇದನ್ನೂ ಓದಿ: 7 ತಿಂಗಳಲ್ಲಿ 25 ಮದುವೆ; ಅಮಾಯಕರಿಗೆ ಲಕ್ಷಾಂತರ ಹಣ ವಂಚಿಸಿದ್ದ ಖತರ್ನಾಕ್‌ ಲೇಡಿ ಅರೆಸ್ಟ್‌

    ಸೇನಾ ವಾಯು ರಕ್ಷಣಾ ಅಧಿಕಾರಿಗಳು ಗೋಲ್ಡನ್ ಟೆಂಪಲ್ ನಾಯಕರ ಜೊತೆಗೆ ಮಾತುಕತೆ ನಡೆಸಿ ಸಂಭಾವ್ಯ ಬೆದರಿಕೆ ಬಗ್ಗೆ ಮಾಹಿತಿ ನೀಡಿದರು. ಪ್ರತಿದಿನ ಲಕ್ಷಾಂತರ ಜನರು ಭೇಟಿ ನೀಡುವ ಗೋಲ್ಡನ್ ಟೆಂಪಲ್ ಹಾಗೂ ಅಂತರರಾಷ್ಟ್ರೀಯ ಖ್ಯಾತಿಯ ರಾಷ್ಟ್ರೀಯ ಯುದ್ಧ ಸ್ಮಾರಕವನ್ನು ಸುರಕ್ಷಿತವಾಗಿರಿಸಲು ಮತ್ತು ರಕ್ಷಿಸಲು ನಮಗೆ ವಾಯು ರಕ್ಷಣಾ ವ್ಯವಸ್ಥೆಗಳನ್ನು ನಿಯೋಜಿಸಲು ಅನುಮತಿ ಅವಕಾಶ ಮಾಡಿಕೊಟ್ಟರು ಎಂದು ವಿವರಿಸಿದರು. ಇದನ್ನೂ ಓದಿ: War 2 Teaser: ಹೃತಿಕ್ ರೋಷನ್ ಮುಂದೆ ವಿಲನ್ ಆಗಿ ಅಬ್ಬರಿಸಿ ಬೊಬ್ಬಿರಿದ ಜ್ಯೂ.ಎನ್‌ಟಿಆರ್

    ಪಾಕಿಸ್ತಾನವು ಗಡಿಯ ಸಮೀಪವಿರುವ ಧಾರ್ಮಿಕ ಸ್ಥಳಗಳನ್ನು ಗುರಿಯಾಗಿಸಬಹುದು ದಾಳಿ ನಡೆಸುವ ಸಾಧ್ಯತೆ ಇರುವ ಕಾರಣ ಈಗ ಸೇನೆ ಪೂರ್ವ ತಯಾರಿ ಮಾಡಿಕೊಂಡಿದೆ ಎಂದು ಹೇಳಿದರು.

  • ಪಾಕ್‌ನಿಂದ ದಾಳಿ – ಅಮೃತಸರದ ಗೋಲ್ಡನ್ ಟೆಂಪಲ್ ರಕ್ಷಿಸಿದ್ದ ಆಕಾಶ್ ಮಿಸೈಲ್!

    ಪಾಕ್‌ನಿಂದ ದಾಳಿ – ಅಮೃತಸರದ ಗೋಲ್ಡನ್ ಟೆಂಪಲ್ ರಕ್ಷಿಸಿದ್ದ ಆಕಾಶ್ ಮಿಸೈಲ್!

    – ಆಕಾಶ್ ಮಿಸೈಲ್, ಎಲ್-70 ಏರ್ ಡಿಫೆನ್ಸ್ ಗನ್ ಬಳಸಿ ಪಾಕ್ ಯತ್ನ ವಿಫಲ

    ಚಂಡೀಗಢ: ಪಂಜಾಬ್‌ನ (Punjab) ಅಮೃತಸರ (Amritsar) ಗುರಿಯಾಗಿಸಿಕೊಂಡು ಪಾಕ್ (Pakistan) ನಡೆಸಿದ್ದ ಅಪ್ರಚೋದಿತ ದಾಳಿ ವೇಳೆ ಸ್ವದೇಶಿ ನಿರ್ಮಿತ ಆಕಾಶ್ ಕ್ಷಿಪಣಿ (Akash Missile) ಹಾಗೂ ಎಲ್-70 ಏರ್ ಡಿಫೆನ್ಸ್ ಗನ್‌ಗಳು ಗೋಲ್ಡನ್ ಟೆಂಪಲ್‌ನ್ನು ರಕ್ಷಿಸಿದವು ಎಂದು ಮೇಜರ್ ಜನರಲ್ ಕಾರ್ತಿಕ್ ಸಿ ಶೇಷಾದ್ರಿ (Kartik C Seshadri) ಅವರು ಹೇಳಿದ್ದಾರೆ.

    ಏ.22ರಂದು ಪಹಲ್ಗಾಮ್‌ನಲ್ಲಿ ನಡೆದ ಹಿಂದೂಗಳ ನರಮೇಧದ ಬಳಿಕ ಭಾರತ `ಆಪರೇಷನ್ ಸಿಂಧೂರ’ದ (Operation Sindoor) ಮೂಲಕ ಪಾಕ್ ಮೇಲೆ ಪ್ರತೀಕಾರ ತೀರಿಸಿಕೊಂಡಿತು. ಅದಾದ ಬಳಿಕ ಪಾಕಿಸ್ತಾನ ಮೇ 08ರಂದು ಪಂಜಾಬ್‌ನ ಅಮೃತಸರ ಗುರಿಯಾಗಿಸಿಕೊಂಡು ಅಪ್ರಚೋದಿತ ದಾಳಿ ನಡೆಸಿತು. ಆದರೆ ಭಾರತದ ಅತ್ಯಾಧುನಿಕ ವಾಯು ರಕ್ಷಣಾ ವ್ಯವಸ್ಥೆಯು ಈ ದಾಳಿಯನ್ನು ವಿಫಲಗೊಳಿಸಿ, ಸಿಖ್ ಧರ್ಮದ ಪವಿತ್ರ ತಾಣವಾದ ಸ್ವರ್ಣ ದೇವಾಲಯವನ್ನು (Golden Temple) ರಕ್ಷಣೆ ಮಾಡಿತು ಎಂದರು.ಇದನ್ನೂ ಓದಿ: ಮ್ಯಾನೇಜರ್‌ ಕಿರುಕುಳ – ಕೆರೆಗೆ ಹಾರಿ ಬೆಂಗಳೂರಿನ ಟೆಕ್ಕಿ ಆತ್ಮಹತ್ಯೆ

    ಪಾಕಿಸ್ತಾನವು ಗೋಲ್ಡನ್ ಟೆಂಪಲ್ ಸೇರಿದಂತೆ ಅನೇಕ ಧಾರ್ಮಿಕ ಸ್ಥಳಗಳು ಹಾಗೂ ಮಿಲಿಟರಿ ಸ್ಥಳಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಬಹುದು ಎಂದು ಭಾರತ ನಿರೀಕ್ಷೆ ಮಾಡಿತ್ತು. ಅದರಂತೆಯೇ ಪಾಕಿಸ್ತಾನ ಮಾನವರಹಿತ ವೈಮಾನಿಕ ಶಸ್ತ್ರಾಸ್ತ್ರಗಳು, ಮುಖ್ಯವಾಗಿ ಡ್ರೋನ್‌ಗಳು ಮತ್ತು ದೀರ್ಘ-ಶ್ರೇಣಿಯ ಕ್ಷಿಪಣಿಗಳನ್ನು ಬಳಸಿಕೊಂಡು ವಾಯುದಾಳಿ ನಡೆಸಿತು ಎಂದು ಹೇಳಿದರು.

    ಆದರೆ ಭಾರತ ಆಕಾಶ್ ಕ್ಷಿಪಣಿ ವ್ಯವಸ್ಥೆ, ಎಲ್-70 ಏರ್ ಡಿಫೆನ್ಸ್ ಗನ್‌ಗಳನ್ನು ಸೇರಿದಂತೆ ಭಾರತೀಯ ವಾಯು ರಕ್ಷಣಾ ವ್ಯವಸ್ಥೆಗಳನ್ನು ಬಳಸಿ ಅಮೃತಸರದ ಸ್ವರ್ಣ ದೇವಾಲಯ ಮತ್ತು ಪಂಜಾಬ್‌ನ ನಗರಗಳನ್ನು ಪಾಕ್‌ನ ಕ್ಷಿಪಣಿ ಮತ್ತು ಡ್ರೋನ್ ದಾಳಿಯಿಂದ ರಕ್ಷಿಸಿದ್ದೇವೆ ಎಂದು ವಿವರಿಸಿದರು. ನಮ್ಮ ರಕ್ಷಣಾ ವ್ಯವಸ್ಥೆ ಯಾವುದೇ ರೀತಿಯ ದಾಳಿ ಎದುರಿಸಲು ಸಿದ್ಧವಿದೆ. ದೇಶದ ಸಾರ್ವಭೌಮತೆಯನ್ನು ರಕ್ಷಿಸಲು ನಾವು ಬದ್ಧರಾಗಿದ್ದೇವೆ ಎಂದರು.ಇದನ್ನೂ ಓದಿ: ‘ಸೂರ್ಯ 46’ ಅದ್ಧೂರಿ ಚಾಲನೆ- ‘ರೆಟ್ರೋ’ ಹೀರೋಗೆ ‘ಪ್ರೇಮಲು’ ನಟಿ ಜೋಡಿ

  • ವಿಕ್ಕಿ ಕೌಶಲ್ ಜೊತೆ ಗೋಲ್ಡನ್ ಟೆಂಪಲ್‌ಗೆ ರಶ್ಮಿಕಾ ಮಂದಣ್ಣ ಭೇಟಿ

    ವಿಕ್ಕಿ ಕೌಶಲ್ ಜೊತೆ ಗೋಲ್ಡನ್ ಟೆಂಪಲ್‌ಗೆ ರಶ್ಮಿಕಾ ಮಂದಣ್ಣ ಭೇಟಿ

    ‘ಪುಷ್ಪ 2′ (Pushpa 2) ಸಕ್ಸಸ್ ಬಳಿಕ ರಶ್ಮಿಕಾ ಮಂದಣ್ಣ (Rashmika Mandanna) ಅವರು ‘ಛಾವಾ’ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ವಿಕ್ಕಿ ಕೌಶಲ್ ಜೊತೆ ಅಮೃತಸರ (Amritsar) ಗೋಲ್ಡನ್ ಟೆಂಪಲ್‌ಗೆ (Golden Temple) ನಟಿ ಭೇಟಿ ನೀಡಿದ್ದಾರೆ. ಇದನ್ನೂ ಓದಿ:ನಮ್ಮ ಸುತ್ತ ಒಳ್ಳೆಯ ಸ್ನೇಹಿತರಿರೋದು ಮುಖ್ಯ: ಚರ್ಚೆಗೆ ಗ್ರಾಸವಾಯ್ತು ಪವಿತ್ರಾ ಗೌಡ ಪೋಸ್ಟ್

    ನಟಿ ರಶ್ಮಿಕಾ ಅವರು ಕಾಲು ನೋವಿನಿಂದ ಕೊಂಚ ಚೇತರಿಕೆ ಕಂಡಿದ್ದಾರೆ. ‘ಛಾವಾ’ ಸಿನಿಮಾದ ಭರ್ಜರಿ ಪ್ರಚಾರ ಕಾರ್ಯ ಕೂಡ ನಡೆಯುತ್ತಿದೆ. ಸಿನಿಮಾ ರಿಲೀಸ್‌ಗೂ ಮುನ್ನವೇ ತಂಡದ ಜೊತೆ ನಟಿ ಗೋಲ್ಡನ್ ಟೆಂಪಲ್ ಭೇಟಿ ಕೊಟ್ಟಿದ್ದಾರೆ. ಕೆಲ ಕಾಲ ಸಮಯ ಕಳೆದಿದ್ದಾರೆ.

     

    View this post on Instagram

     

    A post shared by Vicky Kaushal (@vickykaushal09)

    ಇನ್ನೂ ರಶ್ಮಿಕಾ ಬಣ್ಣದ ಬದುಕಿನಲ್ಲಿ ಮೊದಲ ಬಾರಿಗೆ ಐತಿಹಾಸಿಕ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಅದುವೇ ‘ಛಾವಾ’ ಸಿನಿಮಾ. ಮೊದಲ ಬಾರಿಗೆ ಮಹಾರಾಣಿಯ ಪಾತ್ರಕ್ಕೆ ಶ್ರೀವಲ್ಲಿ ಜೀವ ತುಂಬಿದ್ದಾರೆ. ಅವರ ಮೊದಲ ಹಿಸ್ಟೋರಿಕಲ್ ಬಿಗ್ ಬಜೆಟ್ ಸಿನಿಮಾ ಆಗಿರೋ ಕಾರಣ ಈ ಚಿತ್ರದ ಮೇಲೆ ಫ್ಯಾನ್ಸ್ಗೆ ಭಾರೀ ನಿರೀಕ್ಷೆಯಿದೆ.

    ‘ಛಾವಾ’ ಸಿನಿಮಾದಲ್ಲಿ ಮರಾಠ ರಾಜ ಛತ್ರಪತಿ ಶಿವಾಜಿ ಮಹಾರಾಜರ ಹಿರಿಯ ಮಗ ಛತ್ರಪತಿ ಸಂಭಾಜಿ ಮಹಾರಾಜನ ಪಾತ್ರವನ್ನು ವಿಕ್ಕಿ ಕೌಶಲ್ ನಿಭಾಯಿಸಿದ್ದಾರೆ. ಸಂಭಾಜಿ ಮಹಾರಾಜರ ಶೌರ್ಯ ಅವರ ತ್ಯಾಗ ಮತ್ತು ಯುದ್ಧಗಳನ್ನು ಗೆಲ್ಲುವ ತಂತ್ರಗಳ ಬಗ್ಗೆ ಇದೆ. ಗಂಡ ಮತ್ತು ಹೆಂಡತಿಯ ನಡುವಿನ ಭಾವನಾತ್ಮಕ ಪ್ರೇಮಕಥೆಯನ್ನು ಸಹ ಒಳಗೊಂಡಿದೆ. ಮರಾಠ ಸಾಮ್ರಾಜ್ಯದಿಂದ ಸಂಭಾಜಿ ದೂರ ಇದ್ದಾಗ ಅವರ ಹೆಂಡತಿ ಎಲ್ಲವನ್ನೂ ಯಾವ ರೀತಿ ನಿರ್ವಹಿಸುತ್ತಿದ್ದರು ಎಂಬುದು ಕಥೆಯ ಹೈಲೈಟ್ ಆಗಿದೆ. ಇಲ್ಲಿ ವಿಕ್ಕಿ ಕೌಶಲ್ ರಶ್ಮಿಕಾ ನಾಯಕಿಯಾಗಿದ್ದಾರೆ. ಇದೇ ಫೆ.14ರಂದು ಸಿನಿಮಾ ರಿಲೀಸ್ ಆಗಲಿದೆ.

    ರಶ್ಮಿಕಾ ಮಂದಣ್ಣ ಅವರು ಹೀರೋಗಳ ಪಾಲಿಗೆ ಲಕ್ಕಿ ನಟಿ. ಅವರು ನಟಿಸಿದ ಸಿನಿಮಾ ಫ್ಲಾಪ್ ಆಗಿದ್ದಕ್ಕಿಂತ ಸೂಪರ್ ಸಕ್ಸಸ್ ಕಂಡಿರೋದೆ ಜಾಸ್ತಿ. ಹಾಗಾಗಿ ರಶ್ಮಿಕಾ ಸಿನಿಮಾದಲ್ಲಿ ನಟಿಸಿದ್ದಾರೆ ಎಂದರೆ ಆ ಸಿನಿಮಾ ಬಿಗ್ ಸಕ್ಸಸ್ ಕಾಣಲಿದ ಎಂಬುದು ಸಿನಿಪಂಡಿತರ ಲೆಕ್ಕಚಾರ. ಈಗಾಗಲೇ ಪುಷ್ಪ, ಅನಿಮಲ್, ಪುಷ್ಪ 2 ಈ ಸಿನಿಮಾ ಭರ್ಜರಿ ಸಕ್ಸಸ್ ಕಂಡಿದೆ. ಸಿನಿಮಾದ ಲುಕ್, ಟ್ರೈಲರ್, ಸಾಂಗ್ಸ್ ಪ್ರೇಕ್ಷಕರ ಗಮನ ಸೆಳೆದಿದೆ.

    ಇನ್ನೂ ತಮ್ಮ ಕಾಲಿಗೆ ನೋವಿನ ನಡುವೆಯೂ ಕೂಡ ಸಿನಿಮಾ ಪ್ರಚಾರಕ್ಕೆ ನಟಿ ಸಾಥ್ ನೀಡುತ್ತಿದ್ದಾರೆ. ಕುಂಟುತ್ತಲೇ ಸಮಾರಂಭಕ್ಕೆ ಆಗಮಿಸಿ ಈ ಸಿನಿಮಾ ತಮಗೆಷ್ಟು ಸ್ಪೆಷಲ್ ಅನ್ನೋದನ್ನು ಅವರು ತಿಳಿಸಿದ್ದಾರೆ. ಮೊದಲ ಐತಿಹಾಸಿಕ ಸಿನಿಮಾ ಆಗಿರೋದ್ರಿಂದ ನಟಿ ಹೆಚ್ಚು ಗಮನ ಕೊಡುತ್ತಿದ್ದಾರೆ. ಹಾಗಾಗಿ ರಶ್ಮಿಕಾ ನಟಿಸಿರುವ ‘ಛಾವಾ’ ಭವಿಷ್ಯ ಏನಾಗಲಿದೆ ಎಂದು ಕಾದುನೋಡಬೇಕಿದೆ.

  • ಪಂಜಾಬ್ ಮಾಜಿ ಡಿಸಿಎಂ ಮೇಲೆ ಗುಂಡಿನ ದಾಳಿ; ಆರೋಪಿ ಹಿಡಿದು ಪೊಲೀಸರಿಗೆ ಒಪ್ಪಿಸಿದ ಜನ

    ಪಂಜಾಬ್ ಮಾಜಿ ಡಿಸಿಎಂ ಮೇಲೆ ಗುಂಡಿನ ದಾಳಿ; ಆರೋಪಿ ಹಿಡಿದು ಪೊಲೀಸರಿಗೆ ಒಪ್ಪಿಸಿದ ಜನ

    – ಪಾತ್ರೆ, ಬೂಟು ಸ್ವಚ್ಛಗೊಳಿಸುವ, ಟಾಯ್ಲೆಟ್ ತೊಳೆಯುವ ಶಿಕ್ಷೆಗೆ ಗುರಿಯಾಗಿದ್ದ ಮಾಜಿ ಡಿಸಿಎಂ

    ಚಂಡೀಗಢ: ಅಮೃತಸರದಲ್ಲಿರುವ (Amritsar) ಗೋಲ್ಡನ್ ಟೆಂಪಲ್‌ನ (Golden Temple) ಕಾವಲುಗಾರನಾಗಿ ಸೇವೆ ಸಲ್ಲಿಸುತ್ತಿದ್ದ ಪಂಜಾಬ್ ಮಾಜಿ ಉಪಮುಖ್ಯಮಂತ್ರಿ ಸುಖಬೀರ್ ಸಿಂಗ್ ಬಾದಲ್ (Sukhbir Singh Badal) ಮೇಲೆ ಗುಂಡಿನ ದಾಳಿ ನಡೆದಿದೆ.

    ಬಾದಲ್ ಅವರು ಶಿರೋಮಣಿ ಅಕಾಲಿ ದಳದ (Shiromani Akali Dal) ನಾಯಕ. ಪಂಜಾಬ್ ಮಾಜಿ ಉಪಮುಖ್ಯಮಂತ್ರಿಯಾಗಿ (Punjab Former DCM) ಕಾರ್ಯನಿರ್ವಹಿಸಿದ್ದರು. ಇದೀಗ ಧಾರ್ಮಿಕ ಶಿಕ್ಷೆಯ ಭಾಗವಾಗಿ ಗೋಲ್ಡನ್ ಟೆಂಪಲ್‌ನ ಪ್ರವೇಶದ್ವಾರದ ಕಾವಲುಗಾರನಾಗಿ ಸೇವೆ ಸಲ್ಲಿಸುತ್ತಿದ್ದರು. ಇಂದು (ಡಿ.04) ಬೆಳಿಗ್ಗೆ ತಪಸ್ಸಿಗೆ ಕುಳಿತಾಗ ಗುಂಡಿನ ದಾಳಿ ಮೂಲಕ ಕೊಲೆಗೆ ಯತ್ನಿಸಲಾಗಿದೆ.ಇದನ್ನೂ ಓದಿ: ತೆಲಂಗಾಣ ಗೋದಾವರಿ ನದಿ ಪಾತ್ರದ ಬಳಿ ಭೂಕಂಪನ

    ಆರೋಪಿಯನ್ನು ಅಮೃತಸರದಿಂದ ಸುಮಾರು 75 ಕಿ.ಮೀ ದೂರದಲ್ಲಿರುವ ಗುರುದಾಸ್‌ಪುರ ಜಿಲ್ಲೆಯ ದಾಲ್ ಖಾಲ್ಸಾದ ನರೇನ್ ಸಿಂಗ್ ಚೋರ್ಹಾ ಎಂದು ಗುರುತಿಸಲಾಗಿದ್ದು, ಗುಂಡು ಹಾರಿಸಿದಾಗ ಅಲ್ಲಿನ ಜನರು ಆತನ ಮೇಲೆ ಹಲ್ಲೆ ನಡೆಸಿ ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ.

    ಬಾದಲ್ ಅವರು 2007 ರಿಂದ 2017 ರವರೆಗೆ ಪಂಜಾಬ್‌ನ ಉಪಮುಖ್ಯಮಂತ್ರಿಯಾಗಿದ್ದಾಗ ಪಕ್ಷದ ಪ್ರತಿಷ್ಠೆಗೆ ಧಕ್ಕೆ ತರುವಂತಹ ಕೆಲವು ನಿರ್ಧಾರಗಳನ್ನು ತೆಗೆದುಕೊಂಡಿದ್ದರು. ಆದ್ದರಿಂದ ಬಾದಲ್ ಅವರಿಗೆ ಹಾಗೂ ಅಕಾಲಿದಳದ ಇನ್ನಿತರ ನಾಯಕರಿಗೆ `ತಂಖಾ’ (ಧಾರ್ಮಿಕ ಶಿಕ್ಷೆ) ಘೋಷಿಸಲಾಗಿತ್ತು. `ಸೇವಾದರ್’ ಅಡಿಯಲ್ಲಿ ಪಾತ್ರೆ ತೊಳೆಯಲು, ಬೂಟು ಸ್ವಚ್ಛಗೊಳಿಸಲು ತಿಳಿಸಲಾಗಿತ್ತು. ನಿನ್ನೆ (ಡಿ.03) ಗೋಲ್ಡನ್ ಟೆಂಪಲ್‌ನಲ್ಲಿ ತಪಸ್ಸನ್ನು ಆರಂಭಿಸಿದ್ದರು.

    ಕಳೆದ ಎರಡು ದಿನಗಳಿಂದ ಬಾದಲ್ ಒಂದು ಕೈಯಲ್ಲಿ ಈಟಿ ಹಿಡಿದು, ನೀಲಿ `ಸೇವಾದರ್’ ಸಮವಸ್ತ್ರವನ್ನು ಧರಿಸಿ ಗೋಲ್ಡನ್ ಟೆಂಪಲ್‌ನ ಗೇಟ್ ಬಳಿ ವ್ಹೀಲ್ ಚೇರ್‌ನಲ್ಲಿ ಕುಳಿತಿದ್ದರು.

    ಸಿಸಿಟಿವಿ ದೃಶ್ಯಗಳಲ್ಲಿ ದಾಳಿಕೋರ ನಿಧಾನವಾಗಿ ಗೇಟ್ ಬಳಿ ಬಂದು ಬಂದೂಕನ್ನು ಹೊರತೆಗೆಯುತ್ತಾನೆ. ಬಳಿಕ ಗುಂಡಿನ ದಾಳಿ ನಡೆಸಿರುವುದು ಸೆರೆಯಾಗಿದೆ. ಸದ್ಯ ಆತನನ್ನು ಬಂಧಿಸಲಾಗಿದ್ದು, ದಾಳಿಯ ಹಿಂದಿನ ಉದ್ದೇಶವನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    ನರೇನ್ ಸಿಂಗ್ (Naren Singh) ಖಲಿಸ್ತಾನಿ ಭಯೋತ್ಪಾದಕರ ಗುಂಪು ಬಬ್ಬರ್ ಖಾಲ್ಸಾ ಜೊತೆ ಸಂಪರ್ಕ ಹೊಂದಿದ್ದಾನೆ. 2004ರಲ್ಲಿ 94 ಅಡಿ ಸುರಂಗವನ್ನು ಅಗೆದು ಜೈಲಿನಿಂದ ತಪ್ಪಿಸಿಕೊಂಡಿದ್ದ ಬುರೈಲ್ ಜೈಲ್ ಬ್ರೇಕ್ ಪ್ರಕರಣದ ಮಾಸ್ಟರ್ ಮೈಂಡ್ ಆಗಿದ್ದ ಬಬ್ಬರ್ ಖಾಲ್ಸಾ ಜೊತೆ ಸಂಬಂಧವಿದೆ ಎಂದು ಮೂಲಗಳು ತಿಳಿಸಿವೆ.ಇದನ್ನೂ ಓದಿ: ಒಂದೇ ದಿನದಲ್ಲಿ ಮಹಿಳೆಗೆ ಸಿಕ್ತು ನಿವೇಶನ; ಸಿಎಂ ಮುಂದೆ ಗೋಳಾಡಿದ್ದ ರಾಬಿಯಾ

  • ಗೋಲ್ಡನ್ ಟೆಂಪಲ್‍ನಲ್ಲಿ ಕೇಜ್ರಿವಾಲ್ ಬಿಡುಗಡೆಗೆ ಮನೀಶ್ ಸಿಸೋಡಿಯಾ ಪ್ರಾರ್ಥನೆ

    ಗೋಲ್ಡನ್ ಟೆಂಪಲ್‍ನಲ್ಲಿ ಕೇಜ್ರಿವಾಲ್ ಬಿಡುಗಡೆಗೆ ಮನೀಶ್ ಸಿಸೋಡಿಯಾ ಪ್ರಾರ್ಥನೆ

    ಚಂಡೀಗಢ: ಎಎಪಿಯ ಹಿರಿಯ ನಾಯಕ ಮನೀಶ್ ಸಿಸೋಡಿಯಾ (Manish Sisodia) ಅವರು ಪಂಜಾಬ್‍ನ (Punjab) ಅಮೃತ್‍ಸರದ ಗೋಲ್ಡನ್ ಟೆಂಪಲ್‍ಗೆ (Golden Temple) ಭೇಟಿ ನೀಡಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರ ಬಿಡುಗಡೆಗೆ ಪ್ರಾರ್ಥಿಸಿದ್ದಾರೆ.

    ಪ್ರಾರ್ಥನೆಯ ಬಳಿಕ ಗೋಲ್ಡನ್ ಟೆಂಪಲ್ ಸಂಕೀರ್ಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಮತ್ತು ಕುಟುಂಬದ ಸದಸ್ಯರು ದೇವರಿಗೆ ಪ್ರಾರ್ಥನೆ ಸಲ್ಲಿಸಿದ್ದೇವೆ. ಕೇಜ್ರಿವಾಲ್ ಅವರ ಬಿಡುಗಡೆಗಾಗಿ ನಾನು ಪ್ರಾರ್ಥಿಸಿದ್ದೇನೆ ಎಂದು ಹೇಳಿದ್ದಾರೆ.

    ಇದೇ ವೇಳೆ ಜೈಲಿನಲ್ಲಿದ್ದ 17 ತಿಂಗಳ ಅವಧಿಯನ್ನು ಅವರು ನೆನಪಿಸಿಕೊಂಡರು. ಪಿತೂರಿ ನಡೆಸಿ ನನ್ನನ್ನು ಜೈಲಿಗೆ ಹಾಕಲಾಗಿತ್ತು. ನಾನು ಸದಾ ಸತ್ಯದ ಗೆಲುವಿಗಾಗಿ ಪ್ರಾರ್ಥಿಸುತ್ತೇನೆ. ದೇವರ ಆಶೀರ್ವಾದ, ಸುಪ್ರೀಂ ಕೋರ್ಟ್ ಮತ್ತು ದೇಶದ ಸಂವಿಧಾನದಿಂದಾಗಿ ನನಗೆ ನ್ಯಾಯ ಸಿಕ್ಕಿದೆ ಎಂದು ಅವರು ಹೇಳಿದ್ದಾರೆ.

    ಈ ವೇಳೆ ಪಂಜಾಬ್ ಸಿಎಂ ಭಗವಂತ್ ಮಾನ್ (Bhagwant Mann) ಮಾತನಾಡಿ, ಕೇಜ್ರಿವಾಲ್ ಕೂಡ ಶೀಘ್ರದಲ್ಲೇ ಬಿಡುಗಡೆಯಾಗುತ್ತಾರೆ ಎಂಬ ಭರವಸೆ ಇದೆ. ಪಕ್ಷದ ನಾಯಕರನ್ನು ಜೈಲಿಗೆ ಕಳುಹಿಸುವ ಮೂಲಕ ಎಎಪಿಯನ್ನು ಒಡೆಯಲು ಬಿಜೆಪಿ ಪ್ರಯತ್ನಿಸಿದೆ ಎಂದು ಆರೋಪಿಸಿದ್ದಾರೆ.

    ಸಿಸೋಡಿಯಾ ಕುಟುಂಬದೊಂದಿಗೆ ಗೋಲ್ಡನ್ ಟೆಂಪಲ್‍ಗೆ ಪ್ರಾರ್ಥನೆ ಸಲ್ಲಿಸಲು ಬಂದಿದ್ದಾರೆ. ಇದರಲ್ಲಿ ಯಾವುದೇ ರಾಜಕೀಯವಿಲ್ಲ ಎಂದು ಅವರು ಸ್ಪಷ್ಟ ಪಡಿಸಿದ್ದಾರೆ.

    ಅಬಕಾರಿ ನೀತಿ ಪ್ರಕರಣದಲ್ಲಿ ದೆಹಲಿಯ ಮಾಜಿ ಡಿಸಿಎಂ ಸಿಸೋಡಿಯಾ ಅವರಿಗೆ ಸುಪ್ರೀಂ ಕೋರ್ಟ್ ಇತ್ತೀಚೆಗೆ ಜಾಮೀನು ನೀಡಿತ್ತು.

  • ‘ಕೆಡಿ’ ಚಿತ್ರತಂಡದ ಜೊತೆ ಗೋಲ್ಡನ್ ಟೆಂಪಲ್‌ಗೆ ಡೈರೆಕ್ಟರ್ ಪ್ರೇಮ್ ಭೇಟಿ

    ‘ಕೆಡಿ’ ಚಿತ್ರತಂಡದ ಜೊತೆ ಗೋಲ್ಡನ್ ಟೆಂಪಲ್‌ಗೆ ಡೈರೆಕ್ಟರ್ ಪ್ರೇಮ್ ಭೇಟಿ

    ಸ್ಯಾಂಡಲ್‌ವುಡ್‌ನ ಹೆಸರಾಂತ ನಿರ್ದೇಶಕ ಪ್ರೇಮ್ (Director Prem) ಇದೀಗ ಅಮೃತಸರ ಗೋಲ್ಡನ್ ಟೆಂಪಲ್‌ಗೆ ಭೇಟಿ ನೀಡಿದ್ದಾರೆ. ‘ಕೆಡಿ’ (Kd Film) ಚಿತ್ರತಂಡದ ಜೊತೆ ಭೇಟಿ ನೀಡಿರುವ ಫೋಟೋಗಳನ್ನು ಪ್ರೇಮ್ ಹಂಚಿಕೊಂಡಿದ್ದಾರೆ.

    ‘ಕೆಡಿ’ ಟೀಮ್ ಜೊತೆ ಪಂಜಾಬ್‌ನ ಅಮೃತಸರ ಗೋಲ್ಡನ್ ಟೆಂಪಲ್‌ಗೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದಿದ್ದಾರೆ ಜೋಗಿ ಪ್ರೇಮ್. ಸಿನಿಮಾ ಶೂಟಿಂಗ್‌ಗೆ ಬ್ರೇಕ್ ಸಿಕ್ಕ ಬೆನ್ನಲ್ಲೇ ದೇವರ ಸನ್ನಿಧಿಗೆ ಹೋಗಿದ್ದಾರೆ. ಇದನ್ನೂ ಓದಿ:ದಿ ಸಾಬರಮತಿ ರಿಪೋರ್ಟ್ ಟ್ರೈಲರ್ ರಿಲೀಸ್: ಚರ್ಚೆಗೆ ಕಾರಣವಾಯಿತು ಮತ್ತೊಂದು ಚಿತ್ರ

    ಧ್ರುವ ಸರ್ಜಾ (Dhruva Sarja) ನಟನೆಯ ‘ಕೆಡಿ’ ಸಿನಿಮಾಗೆ ಪ್ರೇಮ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಚಿತ್ರದಲ್ಲಿ ಬಾಲಿವುಡ್ ನಟ ಸಂಜಯ್ ದತ್, ಶಿಲ್ಪಾ ಶೆಟ್ಟಿ, ರಮೇಶ್ ಅರವಿಂದ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಸದ್ಯದಲ್ಲೇ ಕೆಡಿ ಸಿನಿಮಾದ ರಿಲೀಸ್ ಕುರಿತು ಹೆಚ್ಚಿನ ಮಾಹಿತಿ ಸಿಗಲಿದೆ.

    ಕೆವಿಎನ್ ನಿರ್ಮಾಣ ಸಂಸ್ಥೆ ಜೊತೆ ಪ್ರೇಮ್ ಕೈಜೋಡಿಸಿದ್ದಾರೆ. ದರ್ಶನ್‌ಗೆ (Darshan) ಹಲವು ವರ್ಷಗಳ ನಂತರ ಪ್ರೇಮ್ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ಜೈ ಶ್ರೀರಾಮ್ ಎಂದು ಗದೆ ಎತ್ತಿ ದರ್ಶನ್ ಹೊಸ ಸಿನಿಮಾದ ಟೀಸರ್ ಕೂಡ ರಿವೀಲ್ ಮಾಡಲಾಗಿತ್ತು. ಸದ್ಯದಲ್ಲೇ ಚಿತ್ರದ ಶೂಟಿಂಗ್ ಅಪ್‌ಡೇಟ್ ಕೂಡ ಸಿಗಲಿದೆ. ಒಟ್ನಲ್ಲಿ ಪ್ರೇಮ್‌ ಬತ್ತಳಿಕೆಯಿಂದ ಬರುವ ಸಿನಿಮಾಗಳ ಬಗ್ಗೆ ಫ್ಯಾನ್ಸ್‌ಗೆ ಸಿಕ್ಕಾಪಟ್ಟೆ ನಿರೀಕ್ಷೆಯಿದೆ.

  • ಸಲ್ವಾರ್ ಕಮೀಜ್ ಧರಿಸಿ ಗೋಲ್ಡನ್ ಟೆಂಪಲ್ ಗೆ ಬಂದ ಉರ್ಫಿ

    ಸಲ್ವಾರ್ ಕಮೀಜ್ ಧರಿಸಿ ಗೋಲ್ಡನ್ ಟೆಂಪಲ್ ಗೆ ಬಂದ ಉರ್ಫಿ

    ವಿಚಿತ್ರ ಕಾಸ್ಟ್ಯೂಮ್ ಧರಿಸುವ ಮೂಲಕವೇ ಫೇಮಸ್ ಆಗಿರುವ ಉರ್ಫಿ ಜಾವೇದ್ ಇತ್ತೀಚೆಗಷ್ಟೇ ಅಮೃತ್ ಸರ್ (Amritsar) ನಲ್ಲಿರುವ ಗೋಲ್ಟನ್ ಟೆಂಪಲ್ ಗೆ ಭೇಟಿ ನೀಡಿದ್ದಾರೆ. ಟೆಂಪಲ್ ಗೆ ಹೋದಾಗ ತಾವು ಸಲ್ವಾರ್ ಕಮೀಜ್ ಧರಿಸಿರುವ ಕುರಿತು ಹೇಳಿಕೊಂಡಿದ್ದಾರೆ. ಸಂಪ್ರದಾಯಿಕ ಉಡುಗೆಯಲ್ಲಿ ಉರ್ಫಿ ಗೋಲ್ಡನ್ ಟೆಂಪಲ್ ಗೆ ಬಂದಿದ್ದ ಫೋಟೋ ಕೂಡ ವೈರಲ್ ಆಗಿದೆ.

    ಸಾಮಾನ್ಯವಾಗಿ ಉರ್ಫಿ ಅರೆಬರೆ ಬಟ್ಟೆಗಳನ್ನೇ ಧರಿಸುತ್ತಾರೆ. ಸಿಕ್ಕ ವಸ್ತುಗಳಿಂದಲೇ ಮೈ ಮುಚ್ಚಿಕೊಳ್ಳುತ್ತಾರೆ. ತುಂಡುಡುಗೆಯಲ್ಲಿ ಕಾಣುವುದೇ ಹೆಚ್ಚು. ಮೊಬೈಲ್, ಕೀ ಬೋರ್ಡ್, ಬೆಂಕಿಪೊಟ್ಣ ಹೀಗೆ ನಾನಾ ವಸ್ತುಗಳಲ್ಲೇ ಡ್ರೆಸ್ ಮಾಡಿಕೊಂಡು ಅನೇಕರ ಕಂಗೆಣ್ಣಿಗೂ ಗುರಿಯಾಗಿದ್ದಾರೆ. ಇದೇ ಮೊದಲ ಬಾರಿಗ ಉರ್ಫಿಯನ್ನು ಸಾಂಪ್ರದಾಯಕ ಉಡುಗೆಯಲ್ಲಿ ಕಂಡ ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ.

    ಉರ್ಫಿ ವಿರೋಧಿ

    ಉರ್ಫಿ ಜಾವೇದ್ ಸಾರ್ವಜನಿಕವಾಗಿ ಅಶ್ಲೀಲತೆ ಪ್ರದರ್ಶಿಸುತ್ತಿದ್ದಾರೆ ಎಂದು ಆರೋಪಿಸಿ ಮಹಾರಾಷ್ಟ್ರ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಚಿತ್ರಾ ಕಿಶೋರ್ ವಾಘ್, ಹಿಂದೆಯಷ್ಟೇ ಮುಂಬೈ ಪೊಲೀಸರಿಗೆ ದೂರು ನೀಡಿದ್ದರು. ದೂರಿನನ್ವಯ ಮುಂಬೈ ಪೊಲೀಸರು ಉರ್ಫಿ ಜಾವೇದ್ ಗೆ ಸಮನ್ಸ್ ನೀಡಿದ್ದರು. ದೂರಿಗೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ತಿಳಿಸಿದ್ದರು.

    ಉರ್ಫಿ ಜಾವೇದ್ ಅವರು ಕೂರ ಚಿತ್ರಾ ಕಿಶೋರ್ ವಾಘ್ ಮೇಲೆ ಆರೋಪ ಮಾಡಿದ್ದರು. ಇವರು ತಮಗೆ ಜೀವ ಬೆದರಿಕೆ ಹಾಕಿದ್ದಾರೆ ಹಾಗೂ ಮಾನಹಾನಿ ಮಾಡುವಂತಹ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿ ತಮ್ಮ ವಕೀಲರ ಮೂಲಕ ಮಹಾರಾಷ್ಟ್ರ ಮಹಿಳಾ ಆಯೋಗಕ್ಕೆ ಉರ್ಫಿ ದೂರು ನೀಡಿದ್ದಾರೆ. ಅಲ್ಲದೇ, ತಮಗೆ ಜೀವ ಬೆದರಿಕೆ ಇರುವ ಕಾರಣದಿಂದಾಗಿ ರಕ್ಷಣೆ ನೀಡುವಂತೆ ಉರ್ಫಿ ಮನವಿ ಮಾಡಿದ್ದರು.

     

    ಉರ್ಫಿ ಜಾವೇದ್ ಮಹಿಳೆಯರ ಮಾನ ಹರಾಜು ಹಾಕುವಂತಹ ಬಟ್ಟೆಗಳನ್ನು ಹಾಕುತ್ತಾರೆ. ಅಶ್ಲೀಲ ಹಾಗೂ ಅಸಭ್ಯವಾಗಿ ನಡೆದುಕೊಡುತ್ತಾರೆ. ಇಂತಹ ನಟಿಯ ಮೇಲೆ ಕ್ರಮ ತಗೆದುಕೊಳ್ಳಬೇಕು ಎಂದು ಚಿತ್ರಾ ಅವರು ಕೆಲ ದಿನಗಳ ಹಿಂದೆಯಷ್ಟೇ ದೂರು ದಾಖಲಿಸಿದ್ದರು. ಅಲ್ಲದೇ, ಅಸಹ್ಯ ಎನ್ನುವಂತಹ ಬಟ್ಟೆಗಳನ್ನು ಹಾಕಿಕೊಂಡು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದಕ್ಕೆ ಚಿತ್ರ ಆಕ್ಷೇಪ ವ್ಯಕ್ತ ಪಡಿಸಿದ್ದರು. ಹಿನ್ನೆಲೆಯಲ್ಲಿ ರಕ್ಷಣೆ ಕೋರಿ ಉರ್ಫಿ ಮಹಿಳಾ ಆಯೋಗಕ್ಕೆ ಮೊರೆ ಹೋಗಿದ್ದರು.

  • ಗೋಲ್ಡನ್ ಟೆಂಪಲ್‍ಗೆ ಭೇಟಿ ಕೊಟ್ಟು ಪಾತ್ರೆ ತೊಳೆದ ರಾಗಾ

    ಗೋಲ್ಡನ್ ಟೆಂಪಲ್‍ಗೆ ಭೇಟಿ ಕೊಟ್ಟು ಪಾತ್ರೆ ತೊಳೆದ ರಾಗಾ

    ಅಮೃತಸರ: ಪಂಜಾಬ್‍ನ ಅಮೃತಸರದಲ್ಲಿರುವ ಗೋಲ್ಡನ್ ಟೆಂಪಲ್‍ಗೆ (Golden Temple) ಇಂದು (ಸೋಮವಾರ) ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಭೇಟಿ ಕೊಟ್ಟಿದ್ದಾರೆ.

    ಗೋಲ್ಡನ್ ಟೆಂಪಲ್‍ನಲ್ಲಿ ದೇವರ ದರ್ಶನ ಪಡೆದ ಬಳಿಕ ರಾಹುಲ್ ಗಾಂಧಿಯವರು (Rahul Gandhi) ಕರಸೇವೆಯಲ್ಲಿ ತೊಡಗಿಕೊಂಡರು. ಬಳಿಕ ಕಾಂಗ್ರೆಸ್ ಸದಸ್ಯರು ಹಾಗೂ ಗುರುದ್ವಾರದ ಸ್ವಯಂಸೇವಕರ ಜೊತೆ ತಾವೂ ಪಾತ್ರೆ ತೊಳೆದರು. ಈ ವೇಳೆ ರಾಗಾ ಅವರು ತಲೆಗೆ ನೀಲಿ ಬಣ್ಣದ ಕರವಸ್ತ್ರ ಸುತ್ತಿರುವುದನ್ನು ಗಮನಿಸಬಹುದಾಗಿದೆ.

    ರಾಹುಲ್ ಗಾಂಧಿಯವರು ಇಂದು ರಾತ್ರಿ ನಗರದಲ್ಲಿಯೇ ಉಳಿದುಕೊಳ್ಳಲಿದ್ದಾರೆ ಎಂದು ಕಾಂಗ್ರೆಸ್ ತಿಳಿಸಿದೆ. ರಾಗಾ ಅವರು ಮಂಗಳವಾರ ಸ್ವರ್ಣ ಮಂದಿರಕ್ಕೆ ಭೇಟಿ ನೀಡುವ ನಿರೀಕೆಷಯಿದ್ದು, ಪಾಲ್ಕಿ ಸೇವೆ ಸಲ್ಲಿಸಲಿದ್ದಾರೆ. ಇದು ಅವರ ಖಾಸಗಿ ಭೇಟಿಯಾಗಿದೆ. ಹೀಗಾಗಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಭೇಟಿಗೆ ಅವಕಾಶ ನೀಡಿರಲಿಲ್ಲ.

    ಕಾಂಗ್ರೆಸ್ ಶಾಸಕ ಸುಖಪಾಲ್ ಸಿಂಗ್ ಖೈರಾ ಅವರನ್ನು ಕಳೆದ ವಾರ ಪಂಜಾಬ್ ಪೊಲೀಸರು ಮಾದಕವಸ್ತು ಕಳ್ಳಸಾಗಣೆ ಮತ್ತು ಅಕ್ರಮ ಹಣ ವರ್ಗಾವಣೆಯಲ್ಲಿ ತೊಡಗಿಸಿಕೊಂಡಿದ್ದ ಆರೋಪದ ಮೇಲೆ ಬಂಧಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮತ್ತು ಆಡಳಿತಾರೂಢ ಆಮ್ ಆದ್ಮಿ ಪಕ್ಷ (ಎಎಪಿ) ನಡುವಿನ ಉದ್ವಿಗ್ನತೆಯ ನಡುವೆ ರಾಹುಲ್ ಗಾಂಧಿ ಅವರ ಅಮೃತಸರ ಭೇಟಿ ಕುತೂಹಲ ಹುಟ್ಟಿಸಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪಂಜಾಬ್ ಸ್ಫೋಟ ಪ್ರಕರಣ – ಐವರು ಆರೋಪಿಗಳ ಬಂಧನ

    ಪಂಜಾಬ್ ಸ್ಫೋಟ ಪ್ರಕರಣ – ಐವರು ಆರೋಪಿಗಳ ಬಂಧನ

    ಚಂಡೀಗಢ: ಗೋಲ್ಡನ್ ಟೆಂಪಲ್ (Golden Temple) ಬಳಿ ಬುಧವಾರ ತಡರಾತ್ರಿ ಸಂಭವಿಸಿದ್ದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್ (Punjab) ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

    ಕಳೆದ ರಾತ್ರಿ 1 ಗಂಟೆ ಸುಮಾರಿಗೆ ಅಮೃತಸರದ (Amritsar) ಹೆರಿಟೇಜ್ ಸ್ಟ್ರೀಟ್ ಬಳಿ ಈ ಸ್ಫೋಟ ಸಂಭವಿಸಿತ್ತು. ಗೋಲ್ಡನ್ ಟೆಂಪಲ್ ಬಳಿ ಕಳೆದ ಐದು ದಿನಗಳಲ್ಲಿ ಸಂಭವಿಸಿದ ಮೂರನೇ ಸ್ಫೋಟ ಇದಾಗಿತ್ತು. ಆರೋಪಿಗಳು ಈ ಮೂರು ಪ್ರಕರಣದಲ್ಲೂ ಭಾಗಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಮ್ಯಾಟ್ರಿಮೋನಿಯಲ್ಲಿ ಪರಿಚಯ – ಮಹಿಳೆಯ ಚಿನ್ನಾಭರಣದೊಂದಿಗೆ ಯುವಕ ಪರಾರಿ

    ರಾಷ್ಟ್ರೀಯ ತನಿಖಾ ಸಂಸ್ಥೆ (National Investigation Agency) ಮತ್ತು ಪಂಜಾಬ್ ಪೊಲೀಸರು ಘಟನೆ ನಡೆದ ಸ್ಥಳದಿಂದ ಸ್ಫೋಟಕ್ಕೆ ಬಳಸಲಾದ ವಸ್ತುಗಳನ್ನು ಸಂಗ್ರಹಿಸಿದ್ದಾರೆ. ಮೇಲ್ನೋಟಕ್ಕೆ ತೀವ್ರ ಸ್ಫೋಟಕ ಬಳಸಿದಂತೆ ಕಾಣುತ್ತಿಲ್ಲ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಮೊದಲ ಸ್ಫೋಟ ಮೇ 6 ರಂದು ಮತ್ತು ಎರಡನೆಯ ಸ್ಫೋಟ ಮೇ 8 ರಂದು ಸಂಭವಿಸಿತ್ತು. ಮೇ 6 ರಂದು ನಡೆದ ಸ್ಫೋಟದಲ್ಲಿ ಒಬ್ಬರು ಗಾಯಗೊಂಡಿದ್ದರು. ಘಟನೆಯಲ್ಲಿ ಅಕ್ಕಪಕ್ಕದ ಕೆಲವು ಕಟ್ಟಡಗಳ ಕಿಟಕಿ ಗಾಜುಗಳು ಒಡೆದಿದ್ದವು. ಇದನ್ನೂ ಓದಿ: ಮಂಗಳೂರಿನಲ್ಲಿ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ – ಮಿಥುನ್ ರೈ ಕಾರ್ ಮೇಲೆ ಕಲ್ಲು ತೂರಾಟ

  • 3 ದಿನದಲ್ಲೇ ಗೋಲ್ಡನ್ ಟೆಂಪಲ್ ಬಳಿ 2ನೇ ಬಾರಿ ಸ್ಫೋಟ

    3 ದಿನದಲ್ಲೇ ಗೋಲ್ಡನ್ ಟೆಂಪಲ್ ಬಳಿ 2ನೇ ಬಾರಿ ಸ್ಫೋಟ

    ಛತ್ತೀಸ್‍ಗಢ: ಪಂಜಾಬ್‍ನ (Punjab) ಸ್ವರ್ಣಮಂದಿರದ (Golden Temple) ಬಳಿಯ ಹೆರಿಟೇಜ್ ಸ್ಟ್ರೀಟ್‍ನಲ್ಲಿ (Heritage Street) ಸೋಮವಾರ ಬೆಳಗ್ಗೆ ಸ್ಫೋಟ ಸಂಭವಿಸಿದ ಘಟನೆ ನಡೆದಿದೆ. ಕಳೆದ 3 ದಿನಗಳಲ್ಲಿ ಸ್ವರ್ಣ ಮಂದಿರದ ಬಳಿಯಲ್ಲಿ ನಡೆದ 2ನೇ ಸ್ಫೋಟ ಇದಾಗಿದೆ.

    ಮೇ 6ರಂದು ಸ್ಫೋಟ ಸಂಭವಿಸಿದ ಸ್ಥಳದ ಸಮೀಪವಿರುವ ಹೆರಿಟೇಜ್ ಸ್ಟ್ರೀಟ್‍ನಲ್ಲಿ ಈ ಘಟನೆ ನಡೆದಿದೆ. ಘಟನೆಯಲ್ಲಿ ಯಾರಿಗೂ ಯಾವುದೇ ರೀತಿಯ ತೊಂದರೆಯಾಗಿಲ್ಲ. ಜೊತೆಗೆ ಯಾವುದಕ್ಕೂ ಹಾನಿ ಸಂಭವಿಸಿಲ್ಲ. ಸ್ಫೋಟಕ್ಕೆ ಇನ್ನೂ ಕಾರಣ ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

    ಘಟನೆ ನಡೆದ ತಕ್ಷಣವೇ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಇನ್ನೂ ಘಟನೆಯ ಕುರಿತು ಎರಡು ಸ್ಫೋಟಗಳ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಸೋನಿಯಾ ಗಾಂಧಿ ವಿರುದ್ಧ ಚುನಾವಣಾ ಆಯೋಗಕ್ಕೆ ಶೋಭಾ ಕರಂದ್ಲಾಜೆ ದೂರು

    ಶನಿವಾರ ನಡೆದಿದ್ದ ಸ್ಫೋಟದಲ್ಲಿ ಒಬ್ಬರು ಗಾಯಗೊಂಡಿದ್ದಾರೆ ಮತ್ತು ಕೆಲವು ಕಟ್ಟಡಗಳ ಗಾಜಿನ ಮುಂಭಾಗಗಳು ಹಾನಿಗೊಳಗಾಗಿವೆ. ಇದನ್ನೂ ಓದಿ: ಬೆಳಗಾವಿಯಲ್ಲಿ 25 ಲಕ್ಷ ರೂ. ಮೌಲ್ಯದ 1800 ಕುಕ್ಕರ್ ಜಪ್ತಿ