Tag: golden star ganesh

  • ‘ಗೀತಾ’ಗಾಗಿ ಹಾರ್ಡ್‌ಕೋರ್ ಕನ್ನಡಿಗನಾದ ಗೋಲ್ಡನ್ ಸ್ಟಾರ್!

    ‘ಗೀತಾ’ಗಾಗಿ ಹಾರ್ಡ್‌ಕೋರ್ ಕನ್ನಡಿಗನಾದ ಗೋಲ್ಡನ್ ಸ್ಟಾರ್!

    ಬೆಂಗಳೂರು: ಮುಂಗಾರುಮಳೆಯ ಮಹಾ ಗೆಲುವಿನೊಂದಿಗೆ ಗೋಲ್ಡನ್ ಸ್ಟಾರ್ ಆಗಿ ಅವತರಿಸಿರೋ ಗಣೇಶ್ ಇದುವರೆಗೂ ಹಲವಾರು ಚಿತ್ರಗಳಲ್ಲಿ ನಾನಾ ಥರದ ಪಾತ್ರಗಳನ್ನು ಮಾಡಿದ್ದಾರೆ. ಹೆಚ್ಚಾಗಿ ಲವರ್ ಬಾಯ್ ಪಾತ್ರಗಳಲ್ಲಿಯೇ ಮಿಂಚುತ್ತಾ ಬಂದಿರೋ ಗಣೇಶ್ ಗೀತಾ ಚಿತ್ರದಲ್ಲಿ ಮಾತ್ರ ಇದುವರೆಗೂ ಕಾಣಿಸಿಕೊಂಡಿರದ ಪಾತ್ರದಲ್ಲಿ, ಗೆಟಪ್ಪಿನಲ್ಲಿ ಕಾಣಿಕೊಂಡಿದ್ದಾರೆಂಬುದಕ್ಕೆ ಇತ್ತೀಚೆಗೆ ಬಿಡುಗಡೆಯಾಗಿರೋ ಟ್ರೇಲರ್ ಮತ್ತು ಹಾಡುಗಳಲ್ಲಿಯೇ ಸಾಕ್ಷ್ಯಗಳು ಸಿಕ್ಕಿವೆ. ಈ ಸಿನಿಮಾದಲ್ಲಿ ಗಣೇಶ್ ಹಾರ್ಡ್‍ಕೋರ್ ಕನ್ನಡಾಭಿಮಾನಿಯಾಗಿ, ಕನ್ನಡಪರ ಹೋರಾಟಗಾರನಾಗಿ ನಟಿಸಿದ್ದಾರೆ.

    ಗೋಲ್ಡನ್ ಸ್ಟಾರ್ ಗಣೇಶ್ ಪಾಲಿಗೆ ಹಠಾತ್ತನೆ ಇಂಥಾದ್ದೊಂದು ರೂಪಾಂತರವನ್ನು ಕಲ್ಪಿಸಿ ಕೊಟ್ಟಿರುವವರು ನಿರ್ದೇಶಕ ವಿಜಯ್ ನಾಗೇಂದ್ರ. ಇವರ ಪಾಲಿಗಿದು ಚೊಚ್ಚಲ ಚಿತ್ರ. ಆದರೆ ಈ ಮೊದಲ ಪ್ರಯತ್ನದಲ್ಲಿಯೇ ಸವಾಲಿನಂಥಾ ಅದೆಷ್ಟೋ ಅಂಶಗಳನ್ನು ವಿಜಯ್ ಅಳವಡಿಸಿಕೊಂಡಿದ್ದಾರೆ. ಸಾಮಾನ್ಯವಾಗಿ ಒಂದು ಇಮೇಜಿಗೆ ಹೊಂದಿಕೊಂಡ ನಟನಟಿಯರನ್ನು ಏಕಾಏಕಿ ಬೇರೆ ಥರದ ಪಾತ್ರದಲ್ಲಿ ಕಾಣಿಸೋದು ಸವಾಲಿನ ಕೆಲಸ. ಆದರೆ ಗೋಲ್ಡನ್ ಸ್ಟಾರ್ ಎಂಥಾ ಪಾತ್ರಕ್ಕಾದರೂ ನ್ಯಾಯ ಒದಗಿಸೋ ಕಸುವಿರುವ ನಟ. ಅದಕ್ಕೆ ತಕ್ಕುದಾದ ಕಥೆ ಮತ್ತು ಪಾತ್ರವನ್ನು ವಿಜಯ್ ನಾಗೇಂದ್ರ ಸೃಷ್ಟಿಸಿದ್ದಾರೆ. ಗಣೇಶ್ ಹೋಂ ಬ್ಯಾನರಿನಡಿಯಲ್ಲಿ ಈ ಚಿತ್ರವನ್ನು ಖ್ಯಾತ ನಿರ್ಮಾಪಕರಾದ ಸೈಯದ್ ಸಲಾಮ್ ಅವರ ಸಹಕಾರದೊಂದಿಗೆ ಶಿಲ್ಪಾ ಗಣೇಶ್ ನಿರ್ಮಾಣ ಮಾಡಿದ್ದಾರೆ.

    ಗಣೇಶ್ ಪಾಲಿಗಿದು ಮನ್ವಂತರದಂಥಾ ಚಿತ್ರ. ಯಾಕೆಂದರೆ, ನಿರ್ದೇಶಕರ ವಿಜಯ್ ನಾಗೇಂದ್ರ ಅವರ ಈವರೆಗಿನ ಇಮೇಜ್ ಹೊಸಾ ಥರದಲ್ಲಿ ಕಳೆಗಟ್ಟುವಂತೆ ಈ ಸಿನಿಮಾವನ್ನು ರೂಪಿಸಿದ್ದಾರೆ. ತೀರಾ ಕನ್ನಡದ ಘನತೆ ಎತ್ತಿ ಹಿಡಿಯುವ ನಿಟ್ಟಿನಲ್ಲಿ ನಡೆದ ಗೋಕಾಕ್ ಚಳುವಳಿಯಂಥಾ ಕಥೆಯನ್ನು ಮುಟ್ಟೋದೂ ಕೂಡಾ ಸಿನಿಮಾ ಚೌಕಟ್ಟಿನಲ್ಲಿ ಬಲು ಕಷ್ಟದ ಕೆಲಸ. ಆದರೆ ವಿಜಯ್ ಆಳವಾದ ಅಧ್ಯಯನದ ಮೂಲಕವೇ ಅದನ್ನು ಸಾಧ್ಯವಾಗಿಸಿಕೊಂಡಿದ್ದಾರೆ. ಮೂಲತಃ ಕನ್ನಡದ ಬಗ್ಗೆ ಅಪಾರ ಅಭಿಮಾನ ಹೊಂದಿರೋ ಗೋಲ್ಡನ್ ಸ್ಟಾರ್ ಗಣೇಶ್ ತೆರೆಯ ಮೇಲೆಯೂ ಪ್ರತೀ ಮನಸುಗಳಲ್ಲಿಯೂ ಕನ್ನಡತನದ ಕಿಚ್ಚು ಹಚ್ಚುವಂಥಾ ಪಾತ್ರದ ಮೂಲಕ ಮಿನುಗಲು ರೆಡಿಯಾಗಿದ್ದಾರೆ.

  • ಗೀತಾ ಟ್ರೇಲರ್: ಕನ್ನಡಾಭಿಮಾನಿಯಾಗಿ ಘರ್ಜಿಸಿದ ಗೋಲ್ಡನ್ ಗಣಿ!

    ಗೀತಾ ಟ್ರೇಲರ್: ಕನ್ನಡಾಭಿಮಾನಿಯಾಗಿ ಘರ್ಜಿಸಿದ ಗೋಲ್ಡನ್ ಗಣಿ!

    ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ತಮ್ಮ ಹೋಂ ಬ್ಯಾನರ್‍ನಲ್ಲಿ ನಿರ್ಮಾಣ ಮಾಡಿರೋ ಮೊದಲ ಚಿತ್ರವೆಂಬುದೂ ಸೇರಿದಂತೆ ‘ಗೀತಾ’ ಪ್ರೇಕ್ಷಕರನ್ನು ಸೆಳೆದುಕೊಂಡಿರೋದರ ಹಿಂದೆ ನಾನಾ ಕಾರಣಗಳಿವೆ. ಕೆಲ ದಿನಗಳ ಹಿಂದೆಯಷ್ಟೇ ಇದರ ಲಿರಿಕಲ್ ವೀಡಿಯೋ ಸಾಂಗ್ ಒಂದು ಬಿಡುಗಡೆಯಾಗಿತ್ತು ಅದರೊಂದಿಗೆ ಈ ಸಿನಿಮಾದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಕನ್ನಡ ಪರ ಹೋರಾಟಗಾರನ ಗೆಟಪ್ಪಿನಲ್ಲಿ ಕಾಣಿಸಿಕೊಂಡಿರೋದೂ ಸ್ಪಷ್ಟವಾಗಿತ್ತು. ಇದೀಗ ಗೀತಾದ ಟ್ರೇಲರ್ ರಿಲೀಸ್ ಆಗಿದೆ. ಇದರಲ್ಲಿ ಕನ್ನಡಪರ ಹೋರಾಟದ ಸ್ವರೂಪ ಮತ್ತಷ್ಟು ಸ್ಪಷ್ಟವಾಗಿಯೇ ಕಾಣಿಸಿಕೊಂಡಿದೆ.

    ಈ ಟ್ರೇಲರ್ ಗೀತಾ ಚಿತ್ರದ ಬಗ್ಗೆ ಪ್ರೇಕ್ಷಕರು ಮತ್ತಷ್ಟು ಮೋಹಗೊಳ್ಳುವಂತೆ ಮೂಡಿ ಬಂದಿದೆ. ಗಣೇಶ್ ಚಿತ್ರಗಳೆಂದ ಮೇಲೆ ಅದರಲ್ಲಿ ಪ್ರೀತಿ ಪ್ರೇಮದ ನವಿರು ಭಾವಗಳ ಕಥೆ ಇದ್ದೇ ತರುತ್ತದೆಂಬ ನಂಬಿಕೆ ಪ್ರೇಕ್ಷಕರಲ್ಲಿದೆ. ಅದನ್ನು ಬಯಸೋ ಅಭಿಮಾನಿ ವರ್ಗವೂ ದೊಡ್ಡ ಸಂಖ್ಯೆಯಲ್ಲಿಯೇ ಇದೆ. ಆದರೆ ಗೀತಾ ಚಿತ್ರದಲ್ಲಿ ಪ್ರೇಮ ಕಥಾನಕ ಮತ್ತು ಕನ್ನಡಪರ ಹೋರಾಟದ ಕಥನಗಳು ಬ್ಲೆಂಡ್ ಆಗಿರೋ ಸೂಚನೆಯನ್ನು ಈ ಟ್ರೇಲರ್ ರವಾನಿಸಿದೆ. ಗಣೇಶ್ ಅಂತೂ ಕನ್ನಡಾಭಿಮಾನದ ಡೈಲಾಗುಗಳೊಂದಿಗೆ ಕನ್ನಡ ಪರ ಹೋರಾಟಗಾರನಾಗಿ ಕನ್ನಡಿಗರೆಲ್ಲರೂ ರೋಮಾಂಚನಗೊಳ್ಳುವ ಗೆಟಪ್ಪಿನಲ್ಲಿಯೂ ಗಮನ ಸೆಳೆದಿದ್ದಾರೆ.

    ಇದೀಗ ಬಿಡುಗಡೆಯಾಗಿರೋ ಟ್ರೇಲರ್ ತನ್ನ ಸೀಮಿತ ಗಡುವಿನಲ್ಲಿಯೇ ಗೀತಾ ಚಿತ್ರದ ಬಗೆಗಿನ ಹಲವಾರು ಅಂಶಗಳನ್ನು ಅನಾವರಣಗೊಳಿಸಿದೆ. ಪ್ರೇಮ ಕಥೆಯ ವಿಚಾರದಲ್ಲಿಯೂ ಈ ಚಿತ್ರ ಭಿನ್ನವಾದ ಕಥೆಯನ್ನೇ ಹೊಂದಿದೆ ಅನ್ನೋದೂ ಕೂಡಾ ಈ ಟ್ರೇಲರ್ ಮೂಲಕವೇ ಸಾಬೀತಾಗಿದೆ. ಹೇಳಿ ಕೇಳಿ ಈ ಸಿನಿಮಾದಲ್ಲಿ ಮೂವರು ನಾಯಕಿಯರಿದ್ದಾರೆ. ಅವರೆಲ್ಲರನ್ನು ಬಳಸಿಕೊಂಡು ಗಣೇಸ್ ಪಾತ್ರದ ಸುತ್ತ ಸಾಗೋ ತ್ರಿಕೋನ ಪ್ರೇಮ ಕಥೆಯ ಸುಳಿವೂ ಕೂಡಾ ಸಿಕ್ಕಿದೆ. ಒಟ್ಟಾರೆಯಾಗಿ ಇದೇ ತಿಂಗಳ 27ರಂದು ಬಿಡುಗಡೆಗೊಳ್ಳಲಿರೋ ಈ ಸಿನಿಮಾ ಬಗ್ಗೆ ಮತ್ತಷ್ಟು ಪ್ರೇಕ್ಷಕರ ಚಿತ್ತ ಸೆಳೆಯುವಲ್ಲಿ ಈ ಟ್ರೇಲರ್ ಯಶ ಕಂಡಿದೆ.

  • ಗೀತಾ: ಕನ್ನಡ ಘಮಲಿನ ಲಿರಿಕಲ್ ವೀಡಿಯೋ ಬಿಡುಗಡೆ!

    ಗೀತಾ: ಕನ್ನಡ ಘಮಲಿನ ಲಿರಿಕಲ್ ವೀಡಿಯೋ ಬಿಡುಗಡೆ!

    ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಅವರ ಹೋಂ ಬ್ಯಾನರಿನಲ್ಲಿ ನಿರ್ಮಾಣಗೊಂಡ ಚಿತ್ರವೆಂಬುದೂ ಸೇರಿದಂತೆ `ಗೀತಾ’ ಚಿತ್ರ ಸದಾ ಒಂದಲ್ಲ ಒಂದು ಕಾರಣದಿಂದ ಸುದ್ದಿಯಾಗುತ್ತಿದೆ. ಇತ್ತೀಚೆಗಷ್ಟೇ ಈ ಚಿತ್ರಕ್ಕಾಗಿ ಪುನೀತ್ ರಾಜ್ ಕುಮಾರ್ ಹಾಡಿರೋ ಹಾಡೊಂದು ಬಿಡುಗಡೆಯಾಗಿದೆ ಎಂಬ ಸುದ್ದಿ ಹೊರಬಿದ್ದಿತ್ತು. ಇದೀಗ ಪ್ರತೀ ಕನ್ನಡಿಗರೂ ಥ್ರಿಲ್ ಆಗುವಂಥಾ ಕನ್ನಡದ ಘಮಲಿನ ಆ ಲಿರಿಕಲ್ ವೀಡಿಯೋ ಸಾಂಗ್ ಬಿಡುಗಡೆಯಾಗಿದೆ.

    ಕನ್ನಡವೇ ಸತ್ಯ ಎಂಬ ಸಾಲಿನಿಂದ ಶುರುವಾಗೋ ಈ ಹಾಡನ್ನು ಖ್ಯಾತ ನಿರ್ದೇಶಕ ಸಂತೋಷ್ ಆನಂದರಾಮ್ ಅವರು ಬರೆದಿದ್ದಾರೆ. ಇದಕ್ಕೆ ಆ ಸಾಲುಗಳ ಆವೇಗಕ್ಕೆ ತಕ್ಕುದಾದಂತೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಧ್ವನಿಯಾಗಿದ್ದಾರೆ. ನೊಬಿನ್ ಪೌಲ್ ಇದಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಲಿರಿಕಲ್ ವೀಡಿಯೋ ಬಿಡುಗಡೆಯಾಗಿ ಕೆಲವೇ ಕ್ಷಣಗಳಲ್ಲಿ ಹೆಚ್ಚು ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಳ್ಳುತ್ತಿದೆ. ಅದೇ ರೀತಿ ಕನ್ನಡತನದ ಘನತೆ ಮತ್ತು ಕೆಚ್ಚು ತುಂಬಿಕೊಂಡಂತಿರೋ ಈ ಹಾಡಿಗೆ ಒಳ್ಳೆಯ ಕಮೆಂಟುಗಳೂ ಬರುತ್ತಿವೆ. ಇದು ಗಣೇಶ್ ಸೇರಿದಂತೆ ಚಿತ್ರರಂಡ ಖುಷಿಗೊಳ್ಳುವಂತೆ ಮಾಡಿದೆ.

    ಈ ಚಿತ್ರವನ್ನು ಸೈಯದ್ ಸಲಾಮ್ ನಿರ್ಮಾಣ ಮಾಡಿದರೆ, ಗಣೇಶ್ ಮಡದಿ ಶಿಲ್ಪಾ ಗಣೇಶ್ ಸಹ ನಿರ್ಮಾಪಕಿಯಾಗಿ ಸಾಥ್ ನೀಡಿದ್ದಾರೆ. ಗಣೇಶ್ ಅವರನ್ನು ಇದುವರೆಗಿನ ಅಷ್ಟೂ ಚಿತ್ರಗಳಿಗಿಂತಲೂ ಬೇರೆಯದ್ದೇ ರೀತಿಯಲ್ಲಿ ಗೀತಾ ಚಿತ್ರ ಕಾಣಿಸಲಿದೆ ಎಂಬ ಮಾತುಗಳು ಆರಂಭದಿಂದಲೂ ಕೇಳಿ ಬರುತ್ತಿದ್ದವು. ಅದರ ಸ್ಪಷ್ಟ ಸೂಚನೆಗಳು ಈ ಲಿರಿಕಲ್ ವೀಡಿಯೋದಲ್ಲಿ ಕಂಡಿವೆ. ಇಲ್ಲಿ ಗಣೇಶ್ ಕನ್ನಡ ಪರ ಹೋರಾಟಗಾರನಾಗಿಯೂ ಕಾಣಿಸಿಕೊಂಡಿದ್ದಾರೆ. ಈ ಕಥೆಯಲ್ಲಿ ಗೋಕಾಕ್ ಚಳುವಳಿಯ ಬಗೆಗಿನ ಚಿತ್ರಣವೂ ಇದೆಯಂತೆ. ಇಂಥಾ ಎಲ್ಲ ಕಾರಣಗಳಿಂದ ಈಗ ಬಿಡುಗಡೆಯಾಗಿರೋ ಲಿರಿಕಲ್ ವೀಡಿಯೋ ಸಾಂಗ್ ಪ್ರೇಕ್ಷಕರನ್ನು ಸೆಳೆದುಕೊಂಡಿದೆ.

  • ಗೀತಾ ಮಾತಿನ ಚಿತ್ರೀಕರಣ ಮುಗೀತು!

    ಗೀತಾ ಮಾತಿನ ಚಿತ್ರೀಕರಣ ಮುಗೀತು!

    ಬೆಂಗಳೂರು: ನಿರ್ಮಾಪಕರಾದ ಸೈಯದ್ ಸಲಾಂ ಮತ್ತು ಶಿಲ್ಪಾ ಗಣೇಶ್ ಅವರ ಬ್ಯಾನರ್ ಗಳಾದ ಎಸ್ ಎಸ್ ಫಿಲ್ಮ್ ಮತ್ತು ಗೋಲ್ಡನ್ ಮೂವೀಸ್ ಅಡಿಯಲ್ಲಿ ಜಂಟಿಯಾಗಿ ನಿರ್ಮಿಸುತ್ತಿರುವ ಗೀತಾ ಚಿತ್ರದ ಮಾತಿನ ಚಿತ್ರೀಕರಣ ಮುಗಿದಿದೆ. ಇನ್ನು ಎರಡು ಹಾಡುಗಳ ಚಿತ್ರೀಕರಣ ಬಾಕಿ ಉಳಿದಿದೆ.

    ಮನಾಲಿ, ಕೊಲ್ಕತ್ತಾ, ಮೈಸೂರು, ಹೈದರಾಬಾದ್, ಬೆಂಗಳೂರು ಮತ್ತು ಇನ್ನಿತರ ಸ್ಥಳಗಳಲ್ಲಿ ಶೂಟಿಂಗ್ ನಡೆಸಿದೆ. ಗೋಲ್ಡನ್ ಸ್ಟಾರ್ ಗಣೇಶ್ ಅವರೊಡನೆ ಸಾನ್ವಿ, ಪಾರ್ವತಿ, ಪ್ರಯಾಗ ಮಾರ್ಟಿನ್, ಸುಧಾರಾಣಿ, ದೇವರಾಜ್, ಅಚ್ಯುತ್, ರಂಗಾಯಣ ರಘು ಮತ್ತು ಇನ್ನಿತರರು ಅಭಿನಯಿಸಿದ್ದಾರೆ.

    ಮಿಸ್ಟರ್ & ಮಿಸೆಸ್ ರಾಮಾಚಾರಿ ಮತ್ತು ರಾಜಕುಮಾರ ಚಿತ್ರದ ಸಹ ನಿರ್ದೇಶಕರು ಮತ್ತು ಸಂಭಾಷಣೆಕಾರರಾಗಿ ಕೆಲಸ ಮಾಡಿದ್ದ ವಿಜಯ್  ನಾಗೇಂದ್ರ ಅವರು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಅನುಪ್ ರೂಬೆನ್ಸ್ ಈ ಚಿತ್ರಕ್ಕೆ ಸಂಗೀತವನ್ನು ನೀಡುತ್ತಿದ್ದಾರೆ. ಚಿತ್ರಕ್ಕೆ ಶ್ರೀಶ ಕುಂದ್ರಳ್ಳಿ ಅವರ ಛಾಯಾಗ್ರಹಣವಿದೆ.

  • ನನ್ನ ಹಕ್ಕು ಚಲಾಯಿಸಿದ್ದೇನೆ, ನೀವೂ ಮತದಾನ ಮಾಡಿ- ಗಣೇಶ್

    ನನ್ನ ಹಕ್ಕು ಚಲಾಯಿಸಿದ್ದೇನೆ, ನೀವೂ ಮತದಾನ ಮಾಡಿ- ಗಣೇಶ್

    ಬೆಂಗಳೂರು: ನನ್ನ ಹಕ್ಕನ್ನು ನಾನು ಚಲಾಯಿಸಿದ್ದೇನೆ. ದಯವಿಟ್ಟು ನೀವೂ ಕೂಡ ನಿಮ್ಮ ಹಕ್ಕು ಚಲಾಯಿಸಿ ಎಂದು ಗೋಲ್ಡನ್ ಸ್ಟಾರ್ ಗಣೇಶ್ ಮನವಿ ಮಾಡಿಕೊಂಡಿದ್ದಾರೆ.

    ರಾಜರಾಜೇಶ್ವರಿ ನಗರದ ಮೌಂಟ್ ಕಾರ್ಮೆಲ್ ಶಾಲೆಯ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೋಟು ಮಾಡೋದು ನಿಮ್ಮ ಹಕ್ಕಾಗಿದೆ. ಹೀಗಾಗಿ ಎಲ್ಲರೂ ತಪ್ಪದೇ ಮತದಾನ ಮಾಡಬೇಕಾಗಿ ಕೇಳಿಕೊಂಡರು.

    ನೀವೆಲ್ಲರೂ ನಿಮ್ಮ ಹಕ್ಕನ್ನು ಚಲಾಯಿಸಿ. ಯಾಕೆಂದರೆ ವೋಟ್ ಮಾಡದೇ ಇದ್ದರೆ ಮುಂದೆ ಸೌಲಭ್ಯ ಕೇಳೋದಕ್ಕೆ ನಿಮಗೆ ಅಧಿಕಾರ ಇರುವುದಿಲ್ಲ. ಮೋಟ್ ಮಾಡಿದ್ರೆ ಸರ್ಕಾರದಿಂದ ಏನು ಸೌಲಭ್ಯ ಸಿಗುತ್ತದೋ ಅದನ್ನ ನಾವು ಕೇಳಿ ಪಡೆದುಕೊಳ್ಳುವ ಸ್ವಾತಂತ್ರ್ಯ ನಿಮ್ಮದಾಗುತ್ತದೆ ಎಂದು ಸಲಹೆ ನೀಡಿದರು.

    ಈ ಬಾರಿ ಮತಗಟ್ಟೆಯಲ್ಲಿ ನೆರೆದ ಜನಸಂಖ್ಯೆ ನೋಡಿ ನಿಜಕ್ಕೂ ತುಂಬಾ ಖುಷಿಯಾಯ್ತು. ಜನ ತಮ್ಮ ಮತ ಹಾಕಲು ಸರತಿ ಸಾಲಿನಲ್ಲಿ ನಿಂತಿದ್ದಾರೆ. ಯಾರೂ ತಮ್ಮ ಹಕ್ಕನ್ನು ಮಿಸ್ ಮಾಡಿಕೊಳ್ಳಬೇಡಿ. ಪ್ರತಿಯೊಬ್ಬರೂ ವೋಟ್ ಮಾಡಿ ಎಂದು ಮನವಿ ಮಾಡಿಕೊಂಡರು.

  • ‘ಮಿಸ್ಸಿಂಗ್ ಬಾಯ್’ ಆನಿಮೇಟೆಡ್ ವೀಡಿಯೋಗೆ ಧ್ವನಿಯಾದರು ಗಣೇಶ್!

    ‘ಮಿಸ್ಸಿಂಗ್ ಬಾಯ್’ ಆನಿಮೇಟೆಡ್ ವೀಡಿಯೋಗೆ ಧ್ವನಿಯಾದರು ಗಣೇಶ್!

    ಬೆಂಗಳೂರು: ರಘುರಾಮ್ ತಮ್ಮ ನಿರ್ದೇಶನದ ಮಿಸ್ಸಿಂಗ್ ಬಾಯ್ ಚಿತ್ರದ ಬಗ್ಗೆ ಪ್ರತೀ ಹಂತದಲ್ಲಿಯೂ ಕುತೂಹಲ ಕಾವೇರುವಂತೆ ನೋಡಿಕೊಳ್ಳುತ್ತಿದ್ದಾರೆ. ಇದೀಗ ಚಿತ್ರದ ಪ್ರಚಾರಕ್ಕೂ ಮಿಗಿಲಾದ ಸಾಮಾಜಿಕ ಕಳಕಳಿಯ ವಿಭಿನ್ನ ಪ್ರಯತ್ನವೊಂದನ್ನು ಅವರು ಮಾಡಿದ್ದಾರೆ.

    ವಿಧಿಯಾಟಕ್ಕೆ ಸಿಕ್ಕು ತಾಯಿಯಿಂದ ತಪ್ಪಿಸಿಕೊಂಡು ಬೇರೆ ದೇಶದ ಪಾಲಾದ ಹುಡುಗನೊಬ್ಬನ ಮನ ಮಿಡಿಯುವ ಸತ್ಯ ಕಥೆಯಾಧಾರಿತ ಮಿಸ್ಸಿಂಗ್ ಬಾಯ್ ಚಿತ್ರ ಇಂಥಾ ವಿಭಿನ್ನ ಆಲೋಚನೆಯ ಮೂಲಕ ಈಗಾಗಲೇ ಜನ ಮನ ಸೆಳೆದುಕೊಂಡಿದೆ. ಹೀಗಿರುವಾಗಲೇ ರಘುರಾಮ್ ಆನಿಮೇಟೆಡ್ ವೀಡಿಯೋವೊಂದನ್ನು ರೆಡಿ ಮಾಡಿದ್ದಾರೆ.

    ಎಲ್ಲೋ ಮಾಧ್ಯಮಗಳಲ್ಲಿ ಮಕ್ಕಳು ಕಾಣೆಯಾಗೋದು, ಮಕ್ಕಳ ಕಳ್ಳತನದಂಥಾ ಸುದ್ದಿಗಳನ್ನು ಕೇಳುತ್ತೇವೆ. ಮರೆತೂ ಬಿಡುತ್ತೇವೆ. ಆದರೆ ಹೀಗೆ ಹೆತ್ತ ಮಕ್ಕಳನ್ನು ಕಳೆದುಕೊಂಡವರ ಸಂಕಟ ಮಾತ್ರ ನಿರಂತರ. ಒಂದು ಕ್ಷಣದ ಮೈ ಮರೆವೂ ಕೂಡಾ ಮಕ್ಕಳ ವಿಚಾರದಲ್ಲಿ ಇಂಥಾ ಸಂಕಷ್ಟ ಸೃಷ್ಟಿಸಬಹುದು. ಇದರ ಬಗ್ಗೆ ಎಲ್ಲ ಹೆತ್ತವರಲ್ಲಿ ಜಾಗೃತಿ ಮೂಡಿಸಲೆಂದೇ ಮಿಸ್ಸಿಂಗ್ ಬಾಯ್ ಕಡೆಯಿಂದ ಸಂದೇಶ ಹೊತ್ತ ಆನಿಮೇಟೆಡ್ ವೀಡಿಯೋ ಅಣಿಗೊಂಡಿದೆ.

    ರಘುರಾಮ್ ಅವರ ಈ ಸಾಮಾಜಿಕ ಕಾಳಜಿಯ ಪ್ರಯತ್ನಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ಸಾಥ್ ನೀಡಿದ್ದಾರೆ. ಈ ವೀಡಿಯೋಗೆ ವಾಯ್ಸ್ ನೀಡೋ ಮೂಲಕ ಅವರು ರಘುರಾಮ್ ಪ್ರಯತ್ನವನ್ನು ಬೆಂಬಲಿಸಿದ್ದಾರೆ. ಈ ಆನಿಮೇಟೆಡ್ ವೀಡಿಯೋವನ್ನು ವಾರದೊಪ್ಪತ್ತಿನಲ್ಲಿಯೇ, ವಿಶೇಷವಾಗಿ ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆಯಂತೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

     

  • ಆರೆಂಜ್: ಗಣೇಶ್ ಬಗ್ಗೆ ಪ್ರಿಯಾ ಆನಂದ್ ಹೇಳಿದ್ದೇನು?

    ಆರೆಂಜ್: ಗಣೇಶ್ ಬಗ್ಗೆ ಪ್ರಿಯಾ ಆನಂದ್ ಹೇಳಿದ್ದೇನು?

    ಪ್ರಶಾಂತ್ ರಾಜ್ ನಿರ್ದೇಶನದ ಆರೆಂಜ್ ಚಿತ್ರ ದೊಡ್ಡ ಮಟ್ಟದಲ್ಲಿ ಗೆಲ್ಲುವ ಸೂಚನೆ ದಟ್ಟವಾಗಿಯೇ ಕಾಣಿಸುತ್ತಿದೆ. ಇದಕ್ಕೆ ಇದರ ನಾಯಕಿ ಪ್ರಿಯಾ ಆನಂದ್ ಆಡಿರೋ ಮಾತುಗಳೇ ಮತ್ತಷ್ಟು ಪುಷ್ಟಿ ನೀಡುವಂತಿವೆ!

    ಪ್ರಿಯಾ ಆನಂದ್ ಕನ್ನಡ ಪ್ರೇಕ್ಷಕರಿಗೆ ಅಪರಿಚಿತರೇನಲ್ಲ. ಕನ್ನಡ ಚಿತ್ರರಂಗದಲ್ಲಿ ಸಾರ್ವಕಾಲಿಕ ದಾಖಲೆ ಬರೆದಿರೋ ರಾಜಕುಮಾರ ಚಿತ್ರಕ್ಕೆ ನಾಯಕಿಯಾಗಿದ್ದವರು ಪ್ರಿಯಾ. ಈ ಚಿತ್ರದ ಮೂಲಕವೇ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ಪ್ರಿಯಾ ಪಾಲಿಗೆ ಆರೆಂಜ್ ಎರಡನೇ ಕನ್ನಡ ಚಿತ್ರ.

    ಒಂದು ದೊಡ್ಡ ಫ್ಯಾಮಿಲಿ ಸುತ್ತಾ ಸುತ್ತೋ ಈ ಕಥೆಯನ್ನು ಖುಷಿಯಿಂದಲೇ ಪ್ರಿಯಾ ಒಪ್ಪಿಕೊಂಡಿದ್ದರಂತೆ. ಆ ಬಳಿಕ ಪ್ರಶಾಂತ್ ರಾಜ್ ಮತ್ತು ಗಣೇಶ್ ಅವರ ಸಾಂಗತ್ಯದಲ್ಲಿ ಚಿತ್ರೀಕರಣ ಮುಗಿದಿದ್ದೇ ಗೊತ್ತಾಗಿಲ್ಲ. ಈ ಹಿಂದೆ ಪುನೀತ್ ರಾಜ್ ಕುಮಾರ್ ಅವರ ಜೊತೆ ನಟಿಸಿದ್ದ ತನ್ನ ಪಾಲಿಗೆ ಗಣೇಶ್ ಜೊತೆ ನಟಿಸಿದ್ದೇನೆ ಎಂಬುದೂ ಹೆಮ್ಮೆಯ ವಿಚಾರವೇ ಅಂದಿದ್ದಾರೆ ಪ್ರಿಯಾ.

    ರಾಜಕುಮಾರ್ ಚಿತ್ರದಂತೆಯೇ ಫ್ಯಾಮಿಲಿ ಡ್ರಾಮ ಹೊಂದಿರೋ ಆರೆಂಜ್ ಬಗ್ಗೆ ಭಾರೀ ನಿರೀಕ್ಷೆ ಇಟ್ಟುಕೊಂಡಿರೋ ಪ್ರಿಯಾ ಪಾಲಿಗೆ ಈ ಚಿತ್ರೀಕರಣಂದ ಅನುಭವ ಕನ್ನಡದಲ್ಲಿಯೇ ನೆಲೆಗೊಳ್ಳಲು ಆಸಕ್ತಿ ಮೂಡುವಂತೆ ಮಾಡಿದೆಯಂತೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಗೋಲ್ಡನ್ ಸ್ಟಾರ್ ಆರೆಂಜ್‍ನಲ್ಲಿ ಇದ್ದಾನೊಬ್ಬ ಗೋಲ್ಡ್‌ಮ್ಯಾನ್‌!

    ಗೋಲ್ಡನ್ ಸ್ಟಾರ್ ಆರೆಂಜ್‍ನಲ್ಲಿ ಇದ್ದಾನೊಬ್ಬ ಗೋಲ್ಡ್‌ಮ್ಯಾನ್‌!

    ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಆರೆಂಜ್ ಚಿತ್ರ ಬಿಡುಗಡೆಯಾಗಲು ಇನ್ನೊಂದು ವಾರವಷ್ಟೇ ಬಾಕಿ ಉಳಿದಿದೆ. ಅದಾಗಲೇ ಪ್ರಶಾಂತ್ ರಾಜ್ ನಿರ್ದೇಶನದ ಈ ಚಿತ್ರ ನಾನಾ ಥರದಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಅಷ್ಟೇ ತರದಲ್ಲಿ ಆಕರ್ಷಣೆಗಳನ್ನೂ ಹೊಂದಿರೋ ಆರೆಂಜ್‍ನಲ್ಲಿ ರವಿಶಂಕರ್ ಗೌಡ ಡಿಫರೆಂಟಾದೊಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ!

    ರವಿಶಂಕರ್ ಗೌಡ ಮತ್ತು ಗಣೇಶ್ ನಿಜ ಜೀವನದಲ್ಲಿಯೂ ಸ್ನೇಹಿತರು. ಈ ಹಿಂದೆಯೂ ಒಂದಷ್ಟು ಚಿತ್ರಗಳಲ್ಲಿ ಇವರು ಒಟ್ಟಾಗಿ ನಟಿಸಿದ್ದಾರೆ. ಆರೆಂಜ್ ಚಿತ್ರದಲ್ಲಿಯೂ ಅದು ಮುಂದುವರೆದಿದೆ.

    ಈ ಚಿತ್ರದಲ್ಲಿಯೂ ಗಣೇಶ್ ಸ್ನೇಹಿತನಾಗಿ ನಟಿಸಿರೋ ರವಿಶಂಕರ್ ನಿಜವಾದ ಗೋಲ್ಡನ್ ಸ್ಟಾರ್ ಗೆಟಪ್ಪಿನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಬಿರುದಿನ ಗಣೇಶ್ ಪಕ್ಕದಲ್ಲಿಯೇ ಇರುವಾಗ ರವಿಶಂಕರ್ ಹೇಗೆ ಗೋಲ್ಡನ್ ಸ್ಟಾರ್ ಆಗಲು ಸಾಧ್ಯ ಎಂಬ ಪ್ರಶ್ನೆ ಇದ್ದರೆ ಅದಕ್ಕೆ ಆರೆಂಜ್‍ನಲ್ಲಿ ಮಜವಾದ ಉತ್ತರ ಸಿಗಲಿದೆಯಂತೆ.

    ಒಂದರ್ಥದಲ್ಲಿ ಆರೆಂಜ್ ಚಿತ್ರದಲ್ಲಿ ರವಿಶಂಕರ್ ಅವರದ್ದು ಗೋಲ್ಡನ್ ಮ್ಯಾನ್ ಗೆಟಪ್ಪು. ಅದರ ಅಸಲಿ ಅಂದವನ್ನು ಆಸ್ವಾದಿಸಲು ಇನ್ನೊಂದು ವಾರ ಕಾಯಬೇಕಿದೆ!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಗೋಲ್ಡನ್ ಸ್ಟಾರ್ ಗಣೇಶ್ ಚಿತ್ರಕ್ಕೆ ಶಾನ್ವಿ ನಾಯಕಿ!

    ಗೋಲ್ಡನ್ ಸ್ಟಾರ್ ಗಣೇಶ್ ಚಿತ್ರಕ್ಕೆ ಶಾನ್ವಿ ನಾಯಕಿ!

    ಗೋಲ್ಡನ್ ಸ್ಟಾರ್ ಗಣೇಶ್ ಗೀತಾ ಎಂಬ ಚಿತ್ರದಲ್ಲಿ ನಟಿಸುತ್ತಿರೋ ವಿಚಾರ ಗೊತ್ತೇ ಇದೆ. ಈ ಚಿತ್ರಕ್ಕೆ ಈಗಾಗಲೇ ಚಾಲನೆ ಸಿಕ್ಕಿದೆ. ಇದೇ ಸಮಯದಲ್ಲಿ ಬಾಕಿ ಉಳಿದಿದ್ದ ಮೂರನೇ ನಾಯಕಿಯ ಆಯ್ಕೆಯೂ ನಡೆದಿದೆ. ಶಾನ್ವಿ ಶ್ರೀವಾಸ್ತವ ಈ ಚಿತ್ರಕ್ಕೆ ಹೊಸತಾಗಿ ಎಂಟ್ರಿ ಕೊಟ್ಟಿದ್ದಾರೆ.

    ಗೀತಾ ಚಿತ್ರದಲ್ಲಿ ಮೂವರು ನಾಯಕಿಯರು ನಟಿಸಲಿದ್ದಾರೆ. ಈಗಾಗಲೇ ಮಲೆಯಾಳಿ ಚೆಲುವೆಯರಾದ ಪ್ರಯಾಗಾ ಮಾರ್ಟಿನ್ ಮತ್ತು ಪಾರ್ವತಿ ಅರುಣ್ ನಾಯಕಿಯರಾಗಿ ನಿಕ್ಕಿಯಾಗಿದ್ದರು. ಮೂರನೇ ನಾಯಕಿಗಾಗಿ ವ್ಯಾಪಕವಾಗಿ ಹುಡುಕಾಟ ಆರಂಭವಾಗಿತ್ತು. ಇದೀಗ ಆ ಪಾತ್ರಕ್ಕೆ ಶಾನ್ವಿ ಆಗಮನವಾಗಿದೆ.

    ಈ ಚಿತ್ರಕ್ಕೆ ಈ ಹಿಂದೆ ಮುಗುಳು ನಗೆ ಚಿತ್ರ ನಿರ್ಮಾಣ ಮಾಡಿದ್ದ ಸೈಯದ್ ಸಲಾಮ್ ಅವರೇ ಹಣ ಹೂಡಿದ್ದಾರೆ. ವಿಜಯ್ ನಾಗೇಂದ್ರ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಶಾನ್ವಿ ಶ್ರೀವಾಸ್ತವ ಮುಂದಿನ ಶೆಡ್ಯೂಲ್ ಹೊತ್ತಿಗೆಲ್ಲ ಚಿತ್ರತಂಡ ಸೇರಿಕೊಳ್ಳಲಿದ್ದಾರಂತೆ. ಮುಂದಿನ ಹಂತದ ಚಿತ್ರೀಕರಣ ಕೋಲ್ಕತ್ತಾದಲ್ಲಿ ನಡೆಯಲಿದೆ. ಅಲ್ಲಿಂದ ಕಾಶ್ಮೀರದಲ್ಲಿಯೂ ಚಿತ್ರೀಕರಣ ನಡೆಸಲು ಚಿತ್ರತಂಡ ತೀರ್ಮಾನಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ದೇವ್ ಗಿಲ್ ಜೊತೆ ಗಣೇಶ್ ಫೈಟ್

    ದೇವ್ ಗಿಲ್ ಜೊತೆ ಗಣೇಶ್ ಫೈಟ್

    ತೆಲುಗಿನ ಮಗಧೀರ ಚಿತ್ರದಲ್ಲಿ ವಿಲನ್ ಆಗಿ ಕಾಣಿಸಿಕೊಂಡಿದ್ದ ದೇವ್ ಗಿಲ್ ಈಗ ಕನ್ನಡದ ಗೋಲ್ಡನ್ ಸ್ಟಾರ್ ಜೊತೆ ಭರ್ಜರಿಯಾಗಿ ಫೈಟ್ ಮಾಡಿದ್ದಾರೆ. ಸದಾ ನಗುತ್ತಿರೋ ಗಣೇಶ್ ಅದ್ಯಾಕೆ ಫೈಟ್ ಮಾಡಿದ್ದಾರೆ ಎಂದು ಕೇಳಬೇಡಿ. ಯಾಕೆಂದರೆ ಇದು ರಿಯಲ್ ಲೈಫ್ ಫೈಟ್ ಅಲ್ಲ, ರೀಲ್ ಲೈಫ್.

    ಹೌದು, ಸಾಗರ್ ಸೇರಿದಂತೆ ಹಲವು ಕನ್ನಡ ಚಿತ್ರದಲ್ಲಿ ವಿಲನ್ ಪಾತ್ರ ಮಾಡಿರುವ ದೇವಗಿಲ್ ಅವರು ಗಣೇಶ್ ನಾಯಕ ನಟರಾಗಿರುವ ಆರೆಂಜ್ ಚಿತ್ರದಲ್ಲಿ ವಿಲನ್ ಆಗಿ ನಟಿಸುತ್ತಿದ್ದಾರೆ. ಈ ಚಿತ್ರದ ಸನ್ನಿವೇಶಕ್ಕೆ ಬೇಕಾಗಿ ಗಣೇಶ್ ಹಾಗೂ ದೇವಗಿಲ್ ಅವರು ಅಬ್ಬರದ ಫೈಟಿಂಗ್ ಗೆ ಸಾಕ್ಷಿಯಾಗಿದ್ದಾರೆ.

    ಕುಂಕುಮ ಅರಿಶಿಣ ಬಣ್ಣಗಳ ಧೂಳಿನ ನಡುವೆಯೇ ಈ ಕಲರ್ ಫುಲ್ ಫೈಟ್ ಸಿದ್ಧವಾಗಿದ್ದು, ಬಣ್ಣದಲ್ಲಿ ಮುಳುಗೇಳುವ ಮಟ್ಟಕ್ಕೆ ಈ ಬಿಗ್ ಫೈಟಿಂಗ್ ಸೀನ್ ಚಿತ್ರದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಲಿದೆ. ಗಣೇಶ್ ಹಾಗೂ ಪ್ರಶಾಂತ್ ರಾಜ್ ಕಾಂಬಿನೇಶನ್ ನಲ್ಲಿ ಮೂಡಿಬರಲಿರುವ ಎರಡನೇ ಚಿತ್ರ ಇದಾಗಿದ್ದು, ಬಣ್ಣಗಳ ನಡುವೆ ನಡೆದ ಫೈಟಿಂಗ್ ‘ಆರೆಂಜ್’ ಎಂಬ ಶೀರ್ಷಿಕೆಯ ಸಿನಿಮಾದಲ್ಲಿ ಶೋಭಿಸಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv