Tag: golden star ganesh

  • ಮುಹೂರ್ತ ನೆರವೇರಿಸಿಕೊಂಡ ಗಣೇಶ್ ನಟನೆಯ `ಬಾನದಾರಿಯಲ್ಲಿ’ ಸಿನಿಮಾ

    ಮುಹೂರ್ತ ನೆರವೇರಿಸಿಕೊಂಡ ಗಣೇಶ್ ನಟನೆಯ `ಬಾನದಾರಿಯಲ್ಲಿ’ ಸಿನಿಮಾ

    ಸ್ಯಾಂಡಲ್‌ವುಡ್‌ನ ನಿರೀಕ್ಷಿತ ಸಿನಿಮಾ ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ `ಬಾನದಾರಿಯಲ್ಲಿ’ ಚಿತ್ರದ ಮುಹೂರ್ತ ನೆರವೇರಿದೆ. ನಟ ಗಣೇಶ್‌ಗೆ ನಾಯಕಿಯಾಗಿ ರೀಷ್ಮಾ ನಾಣಯ್ಯ ಮತ್ತು ರುಕ್ಮಿಣಿ ವಸಂತ್ ಕಾಣಿಸಿಕೊಳ್ತಿದ್ದಾರೆ.

    ಪ್ರೀತಂ ಗುಬ್ಬಿ ಮತ್ತು ಗಣೇಶ್ ಕಾಂಬಿನೇಷನ್ ಡೆಡ್ಲಿ ಸಿನಿಮಾ `ಬಾನದಾರಿಯಲ್ಲಿ’ ಚಿತ್ರ ಮುಹೂರ್ತ ಅದ್ದೂರಿಯಾಗಿ ನೆರವೇರಿದೆ. ಚಿತ್ರದ ಮುಹೂರ್ತವು ಮಹಾಗಣಪತಿ ದೇವಸ್ಥಾನದಲ್ಲಿ ನೆರವೇರಿದ್ದು, ಚಿತ್ರದ ಮೊದಲ ದೃಶ್ಯಕ್ಕೆ ನಿರ್ಮಾಪಕರು ಕ್ಲ್ಯಾಪ್‌ ಮಾಡಿ, ಶುಭಹಾರೈಸಿದ್ದಾರೆ. ʻಬಾನದಾರಿಯಲ್ಲಿʼ ಚಿತ್ರಕ್ಕೆ ಪ್ರೀತಾ ಜಯರಾಮಮನ್ ಚಿತ್ರಕಥೆ ಬರೆದಿದ್ದಾರೆ. ಇದನ್ನೂ ಓದಿ: ಮುಂದುವರೆದ ಮಾಡೆಲ್ ಗಳ ಆತ್ಮಹತ್ಯೆ ಸರಣಿ : ಇಂದು ನೇಣು ಬಿಗಿದುಕೊಂಡ ಮಂಜುಷಾ ನಿಯೋಗಿ

    ಈಗಾಗಲೇ ಮಳೆಯಲಿ ಜೊತೆಯಲಿ, ದಿಲ್ ರಂಗೀಲಾ, `99′ ಚಿತ್ರಗಳು ಗಣೇಶ್ ಮತ್ತು ಪ್ರೀತಂ ಗುಬ್ಬಿ ಕಾಂಬಿನೇಷನ್‌ನಲ್ಲಿ ಮೂಡಿ ಬಂದಿದೆ. ಬಾನದಾರಿಯಲ್ಲಿ ಮೂಲಕ ಮತ್ತೆ ಮೋಡಿ ಮಾಡಲು ರೆಡಿಯಾಗಿದ್ದಾರೆ. ಗೋಲ್ಡನ್ ಹೀರೋಗೆ ಜೋಡಿಯಾಗಿ ಮಿಂಚಲು ರೀಷ್ಮಾ ಮತ್ತು ರುಕ್ಮಿಣಿ ರೆಡಿಯಾಗಿದ್ದಾರೆ.

  • `ಬಾನದಾರಿಯಲ್ಲಿ’ ಗಣಿ ಜೊತೆ ರೀಷ್ಮಾ ರೊಮ್ಯಾನ್ಸ್

    `ಬಾನದಾರಿಯಲ್ಲಿ’ ಗಣಿ ಜೊತೆ ರೀಷ್ಮಾ ರೊಮ್ಯಾನ್ಸ್

    ಚಂದನವನದ ಚೆಂದದ ನಟಿ ರೀಷ್ಮಾ ನಾಣಯ್ಯ `ಏಕ್ ಲವ್ ಯಾ’ ಚಿತ್ರದ ಮೂಲಕ ಗಮನ ಸೆಳೆದ ನಟಿ `ರಾಣಾ’ ಸಿನಿಮಾದ ಚಿತ್ರೀಕರಣ ಮುಗಿಯುತ್ತಿದ್ದಂತೆ ರೀಷ್ಮಾಗೆ ಮತ್ತೊಂದು ಗೋಲ್ಡನ್ ಚಾನ್ಸ್ ಸಿಕ್ಕಿದೆ. ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಪ್ರೀತಂ ಗುಬ್ಬಿ ಕಾಂಬಿನೇಷನ್‌ನ ಬಹುನಿರೀಕ್ಷಿತ ಚಿತ್ರ `ಬಾನದಾರಿಯಲ್ಲಿ’ ಚಿತ್ರದಲ್ಲಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

    ಕೊಡಗಿನ ಕುವರಿ ರೀಷ್ಮಾ ನಾಣಯ್ಯ ಪ್ರೇಮ್ ನಿರ್ದೇಶನದ ʻಏಕ್ ಲವ್ ಯಾʼ ಚಿತ್ರದಲ್ಲಿ ನಟ ರಾಣಾಗೆ ನಾಯಕಿಯಾಗುವ ಮೂಲಕ ಭರವಸೆಯ ನಟಿಯಾಗಿ ಗುರುತಿಸಿಕೊಂಡ್ರು. ಚೊಚ್ಚಲ ಚಿತ್ರ ರಿಲೀಸ್‌ಗೂ ಮುಂಚೆನೇ `ಪಡ್ಡೆಹುಲಿ’ ಖ್ಯಾತಿಯ ಶ್ರೇಯಸ್‌ಗೆ ʻರಾಣಾʼ ಚಿತ್ರದಲ್ಲಿ ಜೋಡಿಯಾಗಿ ನಟಿಸಿದ ಬೆನ್ನಲ್ಲೇ ಕೊಡಗಿನ ಬ್ಯೂಟಿಗೆ ಗೋಲ್ಡನ್ ಸ್ಟಾರ್ ಜತೆ ರೊಮ್ಯಾನ್ಸ್ ಮಾಡಲು ಗೋಲ್ಡನ್‌ ಚಾನ್ಸ್‌ ಸಿಕ್ಕಿದೆ.

    `ಬಾನದಾರಿಯಲ್ಲಿ’ ಅಪ್ಪು ಅವರ ಜನಪ್ರಿಯ ಹಾಡಿನ ಶೀರ್ಷಿಕೆಯಲ್ಲಿ ಮೂಡಿಬರುತ್ತಿರುವ ಈ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ರುಕ್ಮಿಣಿ ವಸಂತ್ ಅವರೊಂದಿಗೆ ರೀಷ್ಮಾ ಜೊತೆಯಾಗುತ್ತಿದ್ದಾರೆ. ಚಿತ್ರದಲ್ಲಿ ಮತ್ತೋರ್ವ ನಾಯಕಿಯಾಗಿ ಪವರ್‌ಫುಲ್ ಪಾತ್ರದಲ್ಲಿ ಮಿಂಚಲಿದ್ದಾರೆ.

     

    View this post on Instagram

     

    A post shared by Preetham Gubbi (@preetham__gubbi)

    ಚಿತ್ರದಲ್ಲಿ ವಿಭಿನ್ನವಾದ ಪ್ರೇಮಕಥೆಯಿದ್ದು, ವೈಲ್ಡ್ ಲೈಫ್ ಫೋಟೋಗ್ರಾಫರ್ ಆಗಿ ಕಾದಂಬರಿ ಪಾತ್ರಕ್ಕೆ ರೀಷ್ಮಾ ಬಣ್ಣ ಹಚ್ಚಲಿದ್ದಾರೆ. ಇನ್ನು ಈ ಚಿತ್ರದ ಬಹುತೇಕ ಚಿತ್ರೀಕರಣ ಆಫ್ರಿಕಾದಲ್ಲಿ ನಡೆಯಲಿದೆ. ʻಬಾನದಾರಿಯಲ್ಲಿʼ ಚಿತ್ರೀಕರಣ ಮೇಯಿಂದ ಶುರುವಾಗಲಿದ್ದು, ಆಫ್ರಿಕಾ, ಬೆಂಗಳೂರು, ಚೆನ್ನೈನಲ್ಲಿ ನಡೆಯಲಿದೆ. ಇದನ್ನೂ ಓದಿ: ಕರ್ನಾಟಕದಲ್ಲೇ ನಡೆಯಿತು ತಮಿಳು ಸಿನಿಮಾಗೆ ಮುಹೂರ್ತ: ಬೆಂಗಳೂರಿಗೆ ಬಂದಿಳಿದ ತಮಿಳು ನಟ

    `ಮುಂಗಾರು ಮಳೆ’, `ಮಳೆಯಲಿ ಜೊತೆಯಲಿ’, `ದಿಲ್ ರಂಗೀಲಾ’, `99′ ಚಿತ್ರಗಳನ್ನ ಕೊಟ್ಟಿರೋ ಯಶಸ್ವಿ ಜೋಡಿ ಗಣಿ ಮತ್ತು ಪ್ರೀತಂ ಗುಬ್ಬಿ ಕಾಂಬಿನೇಷನ್‌ನ ʻಬಾನದಾರಿಯಲ್ಲಿʼ ಚಿತ್ರಕ್ಕೆ ರೀಷ್ಮಾ ಸಾಥ್ ನೀಡ್ತಿರೋದಕ್ಕೆ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

  • ಮಗಳ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಸೆಲೆಬ್ರೇಟ್‌ ಮಾಡಿದ ಗೋಲ್ಡನ್ ಸ್ಟಾರ್

    ಮಗಳ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಸೆಲೆಬ್ರೇಟ್‌ ಮಾಡಿದ ಗೋಲ್ಡನ್ ಸ್ಟಾರ್

    ಸ್ಯಾಂಡಲ್‍ವುಡ್ ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರ ಮಗಳು ಚಾರಿತ್ರ್ಯ ಅವರ ಹುಟ್ಟುಹಬ್ಬವನ್ನು ಭರ್ಜರಿಯಾಗಿ ಸೆಲೆಬ್ರೇಟ್‌ ಮಾಡಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.

    ಗಣೇಶ್ ಮತ್ತು ಶಿಲ್ಪಾ ಗಣೇಶ್ ದಂಪತಿಯ ಪುತ್ರಿ ಚಾರಿತ್ರ್ಯಗೆ ಇಂದು ಜನ್ಮದಿನದ ಸಂಭ್ರಮ. ಮಗಳ ಕೆಲವು ಫೋಟೋಗಳನ್ನು ಶೇರ್ ಮಾಡಿಕೊಳ್ಳುವ ಮೂಲಕ ಗಣೇಶ್ ಮತ್ತು ಶಿಲ್ಪಾ ಅವರು ಶುಭಾಶಯ ಕೋರಿದ್ದಾರೆ.

    ಗಣೇಶ್ ಪುತ್ರಿ ಚಾರಿತ್ರ್ಯ ಹುಟ್ಟುಹಬ್ಬವನ್ನು ಕಲರ್‌ಫುಲ್ ಆಗಿ ಆಚರಿಸಲಾಗಿದೆ. ಹಸಿರು ಬಣ್ಣದ ಮಿರಿಮಿರಿ ಮಿಂಚುವ ಗೌನ್ ಚಾರಿತ್ರ್ಯ ಧರಿಸಿದ್ದಾಳೆ. ಕನ್ನಡ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು, ಚಾರಿತ್ರ್ಯ ಫ್ರೆಂಡ್ಸ್ ಈ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋಗಳು ವೈರಲ್ ಆಗಿವೆ. ಅಭಿಮಾನಿಗಳು ಕಮೆಂಟ್‍ಗಳ ಮೂಲಕ ಚಾರಿತ್ರ್ಯಗೆ ಜನ್ಮದಿನದ ಶುಭಾಶಯ ತಿಳಿಸುತ್ತಿದ್ದಾರೆ. ನೂರು ಕಾಲ ಖುಷಿಯಾಗಿ ಬಾಳಲಿ ಎಂದು ಹಾರೈಸುತ್ತಿದ್ದಾರೆ. ಇದನ್ನೂ ಓದಿ: ಫ್ಯಾನ್ಸ್ ಜೊತೆ ‘ಜೇಮ್ಸ್’ ವೀಕ್ಷಿಸಿದ ಶಿವಣ್ಣ – ನಾನು ಏನ್ ಹೇಳಲಿ ನನ್ನ ತಮ್ಮನ ಆ್ಯಕ್ಟಿಂಗ್ ಬಗ್ಗೆ

     

    View this post on Instagram

     

    A post shared by Ganesh (@goldenstar_ganesh)

     

    ಚಮಕ್ ಸಿನಿಮಾದಲ್ಲಿ ಚಾರಿತ್ರ್ಯ ಕಾಣಿಸಿಕೊಂಡಿದ್ದರು. ಚಿಕ್ಕ ಪಾತ್ರವಾದರೂ ಚಾರಿತ್ರ್ಯ ಪಾತ್ರಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. 2017ರಲ್ಲಿ ತೆರೆಕಂಡ ಚಮಕ್ ಚಿತ್ರದಲ್ಲಿ ಪಾತ್ರದಲ್ಲಿ ಗಣೇಶ್ ಹಾಗೂ ಚಾರಿತ್ರ್ಯ ಮಗಳಾಗಿಯೇ ಕಾಣಿಸಿಕೊಂಡಿದ್ದರು.

  • ಕ್ರಿಸ್‍ಮಸ್ ಸಂಭ್ರಮ – ಗೋಲ್ಡನ್ ಸ್ಟಾರ್ ಪುತ್ರನಿಗೆ ಸರ್ಪ್ರೈಸ್ ಕೊಟ್ಟ ಸಾಂತಾ

    ಕ್ರಿಸ್‍ಮಸ್ ಸಂಭ್ರಮ – ಗೋಲ್ಡನ್ ಸ್ಟಾರ್ ಪುತ್ರನಿಗೆ ಸರ್ಪ್ರೈಸ್ ಕೊಟ್ಟ ಸಾಂತಾ

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಗೋಲ್ಡನ್ ಸ್ಟಾರ್ ಗಣೇಶ್ ಪುತ್ರ ವಿಹಾನ್‍ಗೆ ಸಾಂತಾ ಕ್ಲಾಸ್‌ ಗಿಫ್ಟ್ ನೀಡುವ ಮೂಲಕ ಸರ್ಪ್ರೈಸ್ ಕೊಟ್ಟಿದ್ದಾರೆ.

    ಪ್ರತಿ ಬಾರಿ ಕ್ರಿಸ್‍ಮಸ್ ಹಬ್ಬ ಬಂದಾಗ ಮಕ್ಕಳು ಈ ಬಾರಿ ಸಂತಾ ನಮಗೆ ಏನು ಗಿಫ್ಟ್ ಕೊಡುತ್ತಾರೆ ಎಂದು ಕಾತುರದಿಂದ ಕಾಯುತ್ತಿರುತ್ತಾರೆ. ಆದರೆ ಎಕ್ಸ್‌ಪೆಕ್ಟ್ ಕೂಡ ಮಾಡಿರದ ವಿಹಾನ್‍ಗೆ ಸಾಂತಾ ಕ್ಲಾಸ್‌ ಆಗಮಿಸಿ ಗಿಫ್ಟ್ ಮೇಲೆ ಗಿಫ್ಟ್ ನೀಡಿ ಬಿಗ್ ಸರ್ಪ್ರೈಸ್ ಕೊಟ್ಟಿದ್ದಾರೆ. ಇನ್ನು ಈ ವೀಡಿಯೋವನ್ನು ಗಣೇಶ್ ಅವರು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ಅಭಿಮಾನಿಗಳಿಗೆ ಹಬ್ಬದ ಶುಭಾಶಯ ಕೋರಿದ್ದಾರೆ. ಇದನ್ನೂ ಓದಿ: ಪುತ್ರಿಯ ನಿಶ್ಚಿತಾರ್ಥ ಫೋಟೋ ಶೇರ್ ಮಾಡಿದ ಸ್ಮೃತಿ ಇರಾನಿ

    ವೀಡಿಯೋದಲ್ಲಿ ಗಣೇಶ್ ಅವರು ಸೆಲ್ಫಿ ವೀಡಿಯೋ ಮಾಡುತ್ತಿದ್ದ ವೇಳೆ ಬಂದು ಅಪ್ಪನನ್ನು ಬಿಗಿದಪ್ಪಿಕೊಂಡ ವಿಹಾನ್ ಬೆನ್ನ ಹಿಂದಿನಿಂದ ಸಾಂತಾ ಕ್ಲಾಸ್‌ ಆಗಮಿಸುತ್ತಾರೆ. ಇದನ್ನು ಕಂಡು ವಿಹಾನ್ ಫುಲ್ ಶಾಕ್ ಆಗುತ್ತಾನೆ. ನಂತರ ಸಾಂತಾ ಕ್ಲಾಸ್‌ ವಿಹಾನ್‍ಗೆ ಹ್ಯಾಪಿ ಕ್ರಿಸ್‍ಮಸ್ ಎಂದು ವಿಶ್ ಮಾಡಿ, ಪಕ್ಷಿಯ ಪಂಜರವನ್ನು ಗಿಫ್ಟ್ ಆಗಿ ನೀಡಿ, ವಿಹಾನ್ ಕಣ್ಣನ್ನು ಮುಚ್ಚಿಸಿ, ಲಾಲಿಪಾಪ್ ನೀಡಿ ದೇವರು ನಿನಗೆ ಒಳ್ಳೆಯದು ಮಾಡಲಿ ಎಂದು ವಿಶ್ ಮಾಡಿದ್ದಾರೆ. ಇದನ್ನೂ ಓದಿ: ಕ್ರಿಸ್‍ಮಸ್ ಮೂಡ್ ನಲ್ಲಿ ಸ್ಯಾಂಡಲ್‍ವುಡ್ ಸಿಂಡ್ರೆಲಾ ಕಿಡ್ಸ್

     

    View this post on Instagram

     

    A post shared by Ganesh (@goldenstar_ganesh)

    ಗಿಫ್ಟ್ ಸ್ವೀಕರಿಸಿದ ವಿಹಾನ್ ಸಂತಾಗೆ ಧನ್ಯವಾದ ತಿಳಿಸಿ ಗಿಫ್ಟ್ ಇಷ್ಟ ಆಗಿದ್ದು, ಫುಲ್ ಖುಷ್ ಆಗಿರುವುದಾಗಿ ಗಣೇಶ್‍ಗೆ ತಿಳಿಸಿದ್ದಾನೆ. ಈ ಎಲ್ಲಾ ದೃಶ್ಯವನ್ನು ಹಿಂದಿನಿಂದ ಗಮನಿಸುತ್ತಿದ್ದ ಗಣೇಶ್ ಪುತ್ರಿ ಚಾರಿತ್ರ್ಯ ಕೂಡ ಸಂತಸಗೊಂಡಿದ್ದಾರೆ. ಇದನ್ನೂ ಓದಿ: ರಾಯನ್ ರಾಜ್ ಸರ್ಜಾ ಕ್ರಿಸ್‍ಮಸ್ ಸಂಭ್ರಮ ಹೇಗಿತ್ತು ಗೊತ್ತಾ?

    ಒಟ್ಟಾರೆ ಶನಿವಾರ ಕ್ರಿಸ್‍ಮಸ್ ಹಬ್ಬವನ್ನು ರಾಧಿಕಾ ಪಂಡಿತ್, ಮೇಘನಾ ಸರ್ಜಾ ಸೇರಿದಂತೆ ಹಲವಾರು ತಾರೆಗಳು ತಮ್ಮ ಮಕ್ಕಳೊಂದಿಗೆ ಆಚರಿಸಿದ್ದು, ಕ್ರಿಸ್‍ಮಸ್ ಸಡಗರ ಚಂದನವನದ ತಾರೆಯರ ಮನೆಯಲ್ಲೂ ಮನೆಮಾಡಿತ್ತು ಎಂದರೆ ತಪ್ಪಾಗಲಾರದು.

  • ಮತ್ತೆ ಒಂದಾದ ‘ಮುಂಗಾರು ಮಳೆ’ ಚಿತ್ರತಂಡ

    ಮತ್ತೆ ಒಂದಾದ ‘ಮುಂಗಾರು ಮಳೆ’ ಚಿತ್ರತಂಡ

    ಬೆಂಗಳೂರು: ‘ಮುಂಗಾರು ಮಳೆ’ ಚಂದನವನದಲ್ಲಿ ಹೊಸ ಅಲೆಯನ್ನು ಎಬ್ಬಿಸಿದ ಸಿನಿಮಾ. ಈಗ ಈ ಚಿತ್ರತಂಡ ಮತ್ತೆ ಒಂದಾಗಿದೆ.

    ಏನಿದು ಇವರು ಮತ್ತೆ ಒಂದಾಗಿ ಸಿನಿಮಾ ಮಾಡುತ್ತಿದ್ದಾರೆ ಅಂದುಕೊಂಡ್ರಾ! ಗೋಲ್ಡನ್ ಸ್ಟಾರ್ ಗಣೇಶ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ, ಈ ಮುಂಗಾರು ಮಳೆಯಲ್ಲಿ ಇಷ್ಟೊಂದು ಬೆಂಕಿ ಇದೆ ಎಂದು ಗೊತ್ತಿರಲಿಲ್ಲ ಕಣೋ ದೇವದಾಸ. ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ!! ಎಂದು ಬರೆದು ಫೋಟೋವನ್ನು ಹಾಕಿ ಟ್ವೀಟ್ ಮಾಡಿದ್ದಾರೆ. ಇತ್ತೀಚೆಗೆ ಮುಂಗಾರು ಮಳೆ ಚಿತ್ರತಂಡ ಭೇಟಿಯಾಗಿದ್ದು, ಆ ವೇಳೆ ತೆಗೆದ ಫೋಟೋವನ್ನು ಸೋಶಿಯಲ್ ಮೀಡಿಯಾಗೆ ಹಾಕಿದ್ದಾರೆ. ಈ ಫೋಟೋವನ್ನು ಗಣೇಶ್ ಅವರು ಮಾತ್ರವಲ್ಲ ಛಾಯಾಗ್ರಾಹಕ ಮತ್ತು ನಿರ್ದೇಶಕ ಎಸ್.ಕೃಷ್ಣ ಅವರು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ : ನನ್ನ ಹೃದಯ ನಿನ್ನ ಬಳಿ ಇದೆ – ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿದ ಕತ್ರಿನಾ ಪೋಸ್ಟ್

    ಈ ಫೋಟೋದಲ್ಲಿ ನಿರ್ದೇಶಕ ಯೋಗರಾಜ್ ಭಟ್, ಸಾಹಿತಿ ಜಯಂತ್ ಕಾಯ್ಕಿಣಿ, ನಿರ್ದೇಶಕ ಪ್ರೀತಮ್ ಗುಬ್ಬಿ, ಎಸ್.ಕೃಷ್ಣ ಹಾಗೂ ರಾಘವೇಂದ್ರ ಹುಣಸೂರ್ ಇದ್ದಾರೆ. ಈ ತಂಡ ಶನಿವಾರ ಭೇಟಿಯಾಗಿದ್ದು, ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಆದರೆ ಅಭಿಮಾನಿಗಳು ಮಾತ್ರ ಈ ತಂಡದಿಂದ ಹೊಸ ಸುದ್ದಿ ಏನಾದರು ಬರುತ್ತೆ ಅಂದುಕೊಂಡಿದ್ದರು. ಮತ್ತೆ ಇವರು ಒಟ್ಟಿಗೆ ಕೆಲಸ ಮಾಡುತ್ತಿದ್ದಾರಾ ಎಂದು ಕುತೂಹಲದಿಂದ ಕಾಯುತ್ತಿದ್ದಾರೆ. ಇದನ್ನೂ ಓದಿ :ಸಮಾಜ ಸಂಘಟನೆ ಗಣೇಶ ಹಬ್ಬದ ಪ್ರತೀಕ, ಪರಿಸರ ಸ್ನೇಹಿ ಗಣೇಶ ಹಬ್ಬ ಅಚರಿಸಿ: ಮಾಳವಿಕಾ ಅವಿನಾಶ್

    ‘ಮುಂಗಾರು ಮಳೆ’ ಸಿನಿಮಾ 2006ರಲ್ಲಿ ತೆರೆಕಂಡಿದ್ದು, ಈ ಚಿತ್ರ ಗಣೇಶ್ ಮತ್ತು ಪೂಜಾ ಗಾಂಧಿಗೆ ಮಾತ್ರವಲ್ಲ ಇಡೀ ಚಿತ್ರತಂಡಕ್ಕೆ ಹೆಸರು ತಂದುಕೊಟ್ಟಿತ್ತು. ಕನ್ನಡ ಚಿತ್ರರಂಗದಲ್ಲೇ ಹೊಸದೊಂದು ಅಲೆ ಎಬ್ಬಿಸಿತ್ತು. ನಂತರ ಈ ಸಿನಿಮಾ ಹಲವು ಭಾಷೆಗಳಿಗೂ ರಿಮೇಕ್ ಆಗಿತ್ತು. 2016ರಲ್ಲಿ ‘ಮುಂಗಾರು ಮಳೆ-2’ ಸಿನಿಮಾ ರಿಲೀಸ್ ಆಗಿದ್ದು, ಆದರೆ ಹಳೆಯ ಸಿನಿಮಾದಂತೆ ಇದು ಹೆಸರು ಮಾಡಲಿಲ್ಲ.

  • ದೇವರು ಕೊಟ್ಟ ವರದಿಂದ 6 ತಿಂಗಳು ದೂರವಾಗಿದ್ದೆ: ಗಣೇಶ್

    ದೇವರು ಕೊಟ್ಟ ವರದಿಂದ 6 ತಿಂಗಳು ದೂರವಾಗಿದ್ದೆ: ಗಣೇಶ್

    – ನಮ್ಮ ಸಲುಗೆಗೆ ಅದ್ಯಾವ ಕಣ್ಣು ತಗುಲಿತ್ತೋ?

    ಬೆಂಗಳೂರು: ಲಾಕ್‍ಡೌನ್ ಬಳಿಕ ಕೊರೊನಾ ವೈರಸ್ ಆತಂಕದ ನಡುವೆ ಚಿತ್ರರಂಗದ ಚಟುವಟಿಕೆಗಳು ಚುರುಕು ಪಡೆದುಕೊಂಡಿವೆ. ಸ್ಥಗಿತಗೊಂಡಿದ್ದ ಚಿತ್ರೀಕರಣ ಸಹ ಆರಂಭಗೊಂಡಿದ್ದು, ಕಲಾವಿದರು ಕಾಯಕಕ್ಕೆ ಹಿಂದಿರುಗಿದ್ದಾರೆ. ಆರು ತಿಂಗಳ ಬಳಿಕ ಶೂಟಿಂಗ್ ಗೆ ಹಾಜರಾಗಿರುವ ಮುಂಗಾರು ಮಳೆ ಹುಡುಗ ಗಣೇಶ್ ಸೋಶಿಯಲ್ ಮೀಡಿಯಾದಲ್ಲಿ ಭಾವನಾತ್ಮಕ ಸಾಲುಗಳನ್ನು ಬರೆದುಕೊಂಡಿದ್ದಾರೆ.

    ಕೊರೊನಾ ವೈರಸ್ ಮತ್ತು ಲಾಕ್‍ಡೌನ್ ನಿಂದಾಗಿ ಇಡೀ ಬಣ್ಣದ ಲೋಕ ತೆರೆಯ ಹಿಂದೆ ಸರಿದಿತ್ತು. ಅನ್‍ಲಾಕ್ ಬಳಿಕ ಸರ್ಕಾರ ಮಾರ್ಗಸೂಚಿಗಳನ್ನ ಪಾಲಿಸುವ ಮೂಲಕ ಬಣ್ಣದ ಲೋಕ ಹಿಂದಿರುಗಿದೆ. ಚಿತ್ರಮಂದಿರಗಳು ತೆರೆದಿದ್ದು, ಪ್ರೇಕ್ಷಕರು ಸಹ ಥಿಯೇಟರ್ ನತ್ತ ಹೆಜ್ಜೆ ಹಾಕುತ್ತಿದ್ದಾರೆ. ತ್ರಿಬಲ್ ರೈಡಿಂಗ್ ಸಿನಿಮಾದ ಚಿತ್ರೀಕರಣಕ್ಕೆ ಹಾಜರಾಗಿರುವ ಗೋಲ್ಡನ್ ಸ್ಟಾರ್ ತಮ್ಮ ಮತ್ತು ಕ್ಯಾಮೆರಾ ಜೊತೆಗಿನ ಅವಿನಾಭಾವ ಸಂಬಂಧ ಎಂತಹದ್ದು ಎಂಬುದನ್ನ ಕೆಲ ಸಾಲುಗಳಲ್ಲಿ ವ್ಯಕ್ತಪಡಿಸಿದ್ದಾರೆ.

    ಗಣೇಶ್ ಪೋಸ್ಟ್: ನನ್ನ ಆತನ ಜೊತೆಗಿನ ಸಂಬಂಧ ಈ ಜನ್ಮಕ್ಕೆ ದೇವರು ಕೊಟ್ಟ ವರವೇ ಇರಬೇಕು. ನಾ ನಕ್ಕಾಗ ನಕ್ಕು, ಅತ್ತಾಗ ಅತ್ತು ನನ್ನನ್ನು ನಿಮಗೆ ಅದ್ಭುತವಾಗಿ ತೋರಿಸಿದ. ಆ ಸಲುಗೆಗೆ ಅದಾವ ಕಣ್ಣು ತಗುಲಿತ್ತೊ? 6 ತಿಂಗಳ ಕಾಲ ದೂರಾಗಿ ಈಗ ಎದುರಾಗಿದ್ದೇವೆ. ಆತ ಬೇರಾರಲ್ಲ ಬದುಕಿನ ಭಾಗ ‘ಕ್ಯಾಮೆರಾ’. ತ್ರಿಬಲ್ ರೈಡಿಂಗ್ ಸಿನಿಮಾ ಚಿತ್ರೀಕರಣ ಆರಂಭವಾಗಿದೆ ನಿಮ್ಮ ಹಾರೈಕೆ ಇರಲಿ ಎಂದು ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದಾರೆ.

  • ಮಳೆಹುಡುಗನ ಬರ್ತ್‍ಡೇಗೆ ‘ಸಖತ್’ ಉಡುಗೊರೆ!

    ಮಳೆಹುಡುಗನ ಬರ್ತ್‍ಡೇಗೆ ‘ಸಖತ್’ ಉಡುಗೊರೆ!

    ಮುಂಗಾರು ಮಳೆಯೆಂಬ ಸೂಪರ್ ಹಿಟ್ ಸಿನಿಮಾ ಮೂಲಕ ಸ್ಟಾರ್ ಆಗಿ ಅವತರಿಸಿದ್ದವರು ಗಣೇಶ್. ಆ ಮಹಾ ಗೆಲುವಿನಿಂದ ಗೋಲ್ಡನ್ ಸ್ಟಾರ್ ಎಂದೇ ಖ್ಯಾತರಾದ ಅವರಿಗಿಂದು ಹುಟ್ಟುಹಬ್ಬದ ಸಂಭ್ರಮ. ಕೊರೊನಾ ದೆಸೆಯಿಂದ ಮಾಮೂಲಿನಂತೆ ಅದನ್ನು ಸೆಲೆಬ್ರೇಟ್ ಮಾಡಲಾಗದಿದ್ದರೂ ಅಭಿಮಾನಿಗಳು ಇದ್ದಲ್ಲಿಂದಲೇ ಶುಭ ಕೋರುತ್ತಿದ್ದಾರೆ. ಇದೇ ಹೊತ್ತಿನಲ್ಲಿ ನಿರ್ದೇಶಕ ಸಿಂಪಲ್ ಸುನಿ ‘ಸಖತ್’ ಆಗಿರೋ ಉಡುಗೊರೆಯನ್ನೇ ನೀಡಿದ್ದಾರೆ.

    ಸಿಂಪಲ್ ಸುನಿ ಕೊಟ್ಟಿರೋ ಈ ಉಡುಗೊರೆಯಿಂದ ಗಣೇಶ್ ಮಾತ್ರವಲ್ಲದೇ ಅವರ ಸಮಸ್ತ ಅಭಿಮಾನಿ ಬಳಗವೂ ಥ್ರಿಲ್ ಆಗಿದೆ. ಅಂದಹಾಗೆ ಸಿಂಪಲ್ ಸುನಿ ಗಣೇಶ್ ಹುಟ್ಟುಹಬ್ಬಕ್ಕೆ ಮೋಷನ್ ಪೋಸ್ಟರ್ ಅನ್ನು ಲಾಂಚ್ ಮಾಡಿದ್ದಾರೆ. ಲಾಕ್‍ಡೌನ್ ಚಾಲ್ತಿಯಲ್ಲಿದ್ದಾಗಲೇ ಇದಕ್ಕೆ ತಯಾರಿ ನಡೆಸಿದ್ದ ಸುನಿ ಎಲ್ಲರೂ ಖುಷಿಗೊಳ್ಳುವಂತೆ ರ‍್ಯಾಪ್ ಮೋಷನ್ ಪೋಸ್ಟರ್ ಅನ್ನು ರೂಪಿಸಿದ್ದಾರೆ. ಆ ಮೂಲಕವೇ ಈ ಸಿನಿಮಾದಲ್ಲಿ ಗಣಿ ಅವತಾರ ಡಿಫರೆಂಟಾಗಿರಲಿದೆ ಎಂಬ ಸ್ಪಷ್ಟ ಸಂದೇಶವನ್ನೂ ರವಾನಿಸಿದ್ದಾರೆ.

    ಸಿಂಪಲ್ ಸುನಿ ಬಹು ಹಿಂದಿನಿಂದಲೇ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ಸಿನಿಮಾ ಮಾಡಬೇಕನ್ನೋ ಕನಸು ಕಂಡಿದ್ದವರು. ಈ ಹಿಂದೆ ‘ಚಮಕ್’ ಚಿತ್ರದ ಮೂಲಕ ಅದು ಸಾಕಾರಗೊಂಡಿತ್ತು. ಅದು ಯಶಸ್ಸನ್ನೂ ಕಂಡಿತ್ತು. ಆ ಘಳಿಗೆಯಲ್ಲಿಯೇ ಈ ಜೋಡಿ ಮತ್ತೆ ಒಂದಾಗಿ ಮತ್ತೊಂದು ಮ್ಯಾಜಿಕ್ಕು ಮಾಡೋ ಸೂಚನೆಯೂ ಸಿಕ್ಕಿತ್ತು. ಅದು ಸಿಂಪಲ್ ಸುನಿ ಕಡೆಯಿಂದಲೇ ಜಾಹೀರಾಗಿತ್ತು. ಅದು ಸಖತ್ ಅನ್ನೋ ಸಿನಿಮಾ ಮೂಲಕ ಸಾಕಾರಗೊಂಡಿದೆ.

    ಈ ಚಿತ್ರವನ್ನು ಯಶಸ್ವಿ ಯುವ ನಿರ್ದೇಶಕ ಸುಪ್ರೀತ್, ನಿಶಾ ವೆಂಕಟ್ ಕೋನಂಕಿ ಸೇರಿ ನಿರ್ಮಾಣ ಮಾಡುತ್ತಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರಿನಡಿಯಲ್ಲಿ ನಿರ್ಮಾಣಗೊಳ್ಳಲಿರೋ ಸಖತ್ ಚಿತ್ರಕ್ಕೆ ಟೈಟಲ್ಲಿಗೆ ತಕ್ಕುದಾದ ಕಥೆಯನ್ನೇ ಸುನಿ ರೆಡಿ ಮಾಡಿಕೊಂಡಿದ್ದಾರಂತೆ. ತಾರಾಗಣವೂ ಸೇರಿದಂತೆ ಪ್ರತಿಯೊಂದನ್ನೂ ಸುನಿ ಪಕ್ಕಾ ಮಾಡಿಕೊಂಡಿದ್ದಾರೆ. ಎಲ್ಲವೂ ಅಂದುಕೊಂಡಂತೆಯೇ ಆಗಿದ್ದರೆ ಈ ಹೊತ್ತಿಗೆಲ್ಲ ಸಖತ್ ಸೊಗಸಾಗಿಯೇ ಸದ್ದು ಮಾಡಿರುತ್ತಿತ್ತು. ಕೊರೊನಾ ಅದಕ್ಕೆ ಬ್ರೇಕು ಹಾಕಿದರೂ ಈ ರ‍್ಯಾಪ್ ಮೋಷನ್ ಪೋಸ್ಟರ್ ಸಖತ್ತಾಗಿಯೇ ಸೌಂಡು ಮಾಡುತ್ತಿದೆ.

    ಗೋಲ್ಡನ್ ಸ್ಟಾರ್ ಗಣೇಶ್ ಪಾಲಿಗೆ ಈ ರ‍್ಯಾಪ್ ಮೋಷನ್ ಪೋಸ್ಟರ್ ಹುಟ್ಟುಹಬ್ಬವನ್ನು ಸ್ಪೆಷಲ್ ಆಗಿಸಿದೆ. ಈ ಬಾರಿ ಕೊರೊನಾ ಕಾರಣದಿಂದ ಎಲ್ಲರೂ ಇದ್ದಲ್ಲಿಂದಲೇ ಹಾರೈಸಿ ಅಂತ ಗಣೇಶ್ ಅಭಿಮಾನಿಗಳನ್ನು ಕೇಳಿಕೊಂಡಿದ್ದರು. ಇದೀಗ ಸುನಿ ಬಿಡುಗಡೆ ಮಾಡಿರುವ ಮೋಷನ್ ಪೋಸ್ಟರ್ ಅನ್ನು ಅಭಿಮಾನಿಗಳೆಲ್ಲ ಎಂಜಾಯ್ ಮಾಡ್ತಿದ್ದಾರೆ. ಈ ಮೂಲಕವೇ ತಮ್ಮಿಷ್ಟದ ನಟನನ್ನು ಭಿನ್ನ ಗೆಟಪ್ಪಿನಲ್ಲಿ ಕಣ್ತುಂಬಿಕೊಳ್ಳುವ ಬಯಕೆ ಅಭಿಮಾನಿಗಳೆಲ್ಲರಲ್ಲಿ ತೀವ್ರವಾಗಿದೆ.

  • ಅಭಿಮಾನಿಗಳಿಗೆ ವಿಶೇಷ ಮನವಿಯೊಂದನ್ನು ಮಾಡಿದ ಗೋಲ್ಡನ್ ಸ್ಟಾರ್ ಗಣಿ

    ಅಭಿಮಾನಿಗಳಿಗೆ ವಿಶೇಷ ಮನವಿಯೊಂದನ್ನು ಮಾಡಿದ ಗೋಲ್ಡನ್ ಸ್ಟಾರ್ ಗಣಿ

    ಬೆಂಗಳೂರು: ಚಂದನವದ ಚಿನ್ನದ ಹುಡುಗ ಗಣೇಶ್ ಅವರು ತನ್ನ ಅಭಿಮಾನಿಗಳಿಗೆ ವಿಶೇಷ ಮನವಿಯೊಂದನ್ನು ಮಾಡಿದ್ದಾರೆ.

    ಜುಲೈ 2ರಂದು ಗೋಲ್ಡನ್ ಸ್ಟಾರ್ ಗಣೇಶ್ ಅವರು ಹುಟ್ಟುಹಬ್ಬವಿದೆ. ನೆಚ್ಚಿನ ನಾಯಕ ಹುಟ್ಟುಹಬ್ಬವೆಂದರೆ ಅವರ ಅಭಿಮಾನಿಗಳು ಹಾರ-ತುರಾಯಿ ಹೊತ್ತುಕೊಂಡು ದೂರದ ಊರಿನಿಂದ ಬಂದ ವಿಶ್ ಮಾಡುತ್ತಾರೆ. ಆದರೆ ಈ ವರ್ಷ ಕೊರೊನಾ ಇರುವುದರಿಂದ ಯಾರೂ ಕೂಡ ಮನೆ ಬಳಿ ಬರಬೇಡಿ ನೀವು ಇದ್ದಲ್ಲೆ ನನಗೆ ಶುಭ ಕೋರಿ ಆಶೀರ್ವಾದಿಸಿ ಎಂದು ಗಣಿ ಮನವಿ ಮಾಡಿಕೊಂಡಿದ್ದಾರೆ.

    ತಮ್ಮ ಹುಟ್ಟುಹಬ್ಬದ ವಿಚಾರವಾಗಿ ಟ್ವೀಟ್ ಮಾಡಿರುವ ಗಣೇಶ್ ಅವರು, ಪ್ರೀತಿಯ ಸ್ನೇಹಿತರೇ ಕೊರೊನಾ ಸೋಂಕಿನಿಂದಾಗಿ ಈ ವರ್ಷದ ನನ್ನ ಹುಟ್ಟುಹಬ್ಬವನ್ನು ನೇರವಾಗಿ ನಿಮ್ಮನ್ನು ಭೇಟಿಮಾಡಿ ಆಚರಿಸಿಕೊಳ್ಳಲು ಆಗುತ್ತಿಲ್ಲ. ಅದಕ್ಕಾಗಿ ಕ್ಷಮೆಯಿರಲಿ. ನಿಮ್ಮ ಪ್ರೀತಿ ಮತ್ತು ಹಾರೈಕೆ ಹಾಗೂ ಶುಭಾಶಯ ಸದಾ ನನ್ನ ಜೊತೆಯಿರಲಿ. ಎಲ್ಲರಿಗೂ ಒಳ್ಳೆಯದಾಗಲಿ ಎಂದು ಬರೆದುಕೊಂಡಿದ್ದಾರೆ.

    ಜೊತೆಗೆ ನನ್ನೆಲ್ಲಾ ಅಭಿಮಾನಿಗಳೇ, ಬಂದುಗಳೇ, ಸ್ನೇಹಿತರೆ ಹಾಗೂ ಹಿತೈಷಿಗಳೇ ಈ ಕೊರೊನಾದ ಸಂಕಷ್ಟದ ಕಾಲದಲ್ಲಿ ರಾಜ್ಯದ ಎಲ್ಲ ಜಿಲ್ಲೆ ಮತ್ತು ತಾಲೂಕುಗಳಲ್ಲೂ ನೀವು ನೊಂದವರ, ಅಸಹಾಯಕರ, ಹಸಿದವರ ಬೆಂಬಲಕ್ಕೆ ನಿಂತಿರಿ. ಇದಕ್ಕೆ ಯಾವ ಪ್ರಚಾರವನ್ನೂ ಬಯಸದೆ ಸದ್ದುಗದ್ದಲವಿಲ್ಲದೆ ನಿಮ್ಮ ಮಾನವೀಯತೆಯನ್ನು ತೋರಿಸಿದೀರಾ. ಇದಕ್ಕಾಗಿ ನಾನು ನಿಮಗೆ ಆಭಾರಿಯಾಗಿದ್ದೇನೆ. ನಿಮ್ಮ ಕಾರ್ಯಗಳಿಗಾಗಿ ನಾನು ಹೆಮ್ಮೆ ಪಡುತ್ತೇನೆ ಎಂದು ಹೇಳಿದ್ದಾರೆ.

    ನಿಮಗೆಲ್ಲ ಗೊತ್ತಿರುವ ಹಾಗೇ ಜುಲೈ 2ರಂದು ಪ್ರತಿವರ್ಷ ಸಾವಿರಾರು ಮಂದಿ ಬೆಂಗಳೂರಿಗೆ ಬಂದು ನನ್ನ ಜನ್ಮ ದಿನವನ್ನು ಅತ್ಯಂತ ಅದ್ಧೂರಿಯಾಗಿ ಆಚರಿಸಿದ್ದೀರಿ. ಇದಕ್ಕೆ ನಾನು ಸದಾ ಚಿರಋಣಿ. ಆದರೆ ಈ ವರ್ಷ ನನಗೆ ಶುಭಕೋರಲು ನನ್ನ ನಿವಾಸಕ್ಕೆ ಬರುವುದು ಬೇಡ. ನೀವೆಲ್ಲಿದ್ದೀರೋ ಅಲ್ಲಿಂದಲೆ ನನಗೆ ಶುಭಕೋರಿ ಆಶೀರ್ವಾದಿಸಿ ಎಂದು ಗಣಿ ಟ್ವೀಟ್‍ನಲ್ಲಿ ತಿಳಿಸಿದ್ದಾರೆ.

    ಆದರೆ ಈ ವರ್ಷ ಎಂದಿನಂತಿಲ್ಲ. ಕೊರೊನಾದಿಂದಾಗಿ ನಮ್ಮ ಬದುಕಿನ ಶೈಲಿಯೇ ಬದಲಾಗಿದೆ. ಲಕ್ಷಾಂತರ ಮಂದಿ ನಿರುದ್ಯೋಗಿಗಳಾಗಿದ್ದಾರೆ. ಬಡಜನರು ದೈನಂದಿನ ಬದುಕನ್ನು ಸಾಗಿಸುವುದಕ್ಕೆ ಕಷ್ಟ ಸಾಧ್ಯವಾಗಿದೆ. ನನ್ನ ನಾಡಿನ ಜನರು ಹೀಗೆ ಸಂಕಷ್ಟದಲ್ಲಿ ಇರುವಾಗ ವೈಭವದ ಹಟ್ಟುಹಬ್ಬ ಆಚರಣೆ ಯಾವುದೇ ಕಾರಣಕ್ಕೂ ಬೇಡವೆಂದು ನಿರ್ಧರಿಸಿದ್ದೇನೆ ಎಂದು ಗಣೇಶ್ ಅಭಿಪ್ರಾಯ ವ್ಯಕ್ತಿ ಪಡಿಸಿದ್ದಾರೆ.

    ಹೊರ ಜಿಲ್ಲೆಗಳಿಂದ ನನ್ನ ಅಭಿಮಾನಿಗಳು ಈ ಸಮಯದಲ್ಲಿ ಬೆಂಗಳೂರಿಗೆ ಬರುವುದು ಬೇಡ. ನೀವು ನನಗಾಗಿ ಖರ್ಚು ಮಾಡುವ ಹಣವನ್ನು ಅದೇ ದಿನ ಬಡಕುಟುಂಬಗಳಿಗೆ ಸಹಾಯಹಸ್ತ ನೀಡಿ ಅದೇ ಅರ್ಥಪೂರ್ಣ ಆಚರಣೆಯಾಗುತ್ತದೆ ಎಂದು ತನ್ನ ಅಭಿಮಾನಿಗಳಿಗೆ ಗಣೇಶ್ ಮನವಿ ಮಾಡಿದ್ದಾರೆ.

  • ಪುಸ್ತಕ ತೆರೆದು ನೋಡ್ತಿದ್ದಂತೆ ತಲೆ ತಿರುಗಿ ಬಿದ್ದ ಗಣೇಶ್ ಪುತ್ರಿ

    ಪುಸ್ತಕ ತೆರೆದು ನೋಡ್ತಿದ್ದಂತೆ ತಲೆ ತಿರುಗಿ ಬಿದ್ದ ಗಣೇಶ್ ಪುತ್ರಿ

    ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ತಮ್ಮ ನಟನೆ, ಕಾಮಿಡಿ ಮೂಲಕ ಅಭಿಮಾನಿಗಳ ಮನಸ್ಸು ಕದ್ದವರು. ಅವರ ಹಾಗೆಯೇ ಅವರ ಪುತ್ರಿ ಚಾರಿತ್ರ್ಯಾ ಕೂಡ ಕ್ಯೂಟ್ ವಿಡಿಯೋವೊಂದರ ಮೂಲಕ ಎಲ್ಲರ ಮನ ಗೆದ್ದಿದ್ದಾಳೆ.

    ಹೌದು. ಚಾರಿತ್ರ್ಯಾ ಪರೀಕ್ಷೆಗೆ ಹೇಗೆ ತಯಾರಿ ನಡೆಸುತ್ತಾಳೆ ಎಂಬ ವಿಡಿಯೋವನ್ನು ಗೋಲ್ಡನ್ ಸ್ಟಾರ್ ದಂಪತಿ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಚಾರಿತ್ರ್ಯಾಳ ಕ್ಯೂಟ್ ಎಕ್ಸ್‌ಪ್ರೆಶನ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಮೊದಲು ಕೂಲ್ ಆಗಿ ಕೂಲಿಂಗ್ ಗ್ಲಾಸ್ ಹಾಕಿ ಓದಲು ಕೂರುವ ಚಾರಿತ್ರ್ಯಾ, ಪುಸ್ತಕ ತೆರೆದು ನೋಡುತ್ತಿದ್ದ ಹಾಗೆಯೇ ಸುಸ್ತಾಗಿ ತಲೆ ಸುತ್ತಿ ಬಿದ್ದ ಡಬ್‍ಸ್ಮ್ಯಾಶ್ ವಿಡಿಯೋವನ್ನು ಗಣೇಶ್ ಹಾಗೂ ಶಿಲ್ಪಾ ಅವರು ಹಂಚಿಕೊಂಡಿದ್ದಾರೆ.

    https://www.instagram.com/p/B84BPdeh35y/

    ಅಲ್ಲದೇ ಅಪ್ಪನಂತೆ ಮಗಳು ಎಂದು ವಿಡಿಯೋಗೆ ಕ್ಯಾಪ್ಷನ್ ಕೂಡ ಹಾಕಿದ್ದಾರೆ. ಈ ಕ್ಯೂಟ್ ವಿಡಿಯೋ ಅಭಿಮಾನಿಗಳಿಗೆ ಸಖತ್ ಇಷ್ಟವಾಗಿದೆ. ಈ ಹಿಂದೆ ಕೂಡ ಚಾರಿತ್ರ್ಯಾ ಡಬ್‍ಸ್ಮ್ಯಾಶ್ ಮಾಡಿದ ವಿಡಿಯೋ ಸಖತ್ ವೈರಲ್ ಆಗಿತ್ತು. ಶಿಲ್ಪಾ ಗಣೇಶ್ ಅವರು ನನ್ನ ಮಗಳ ಮೊದಲ ಡಬ್‍ಸ್ಮ್ಯಾಶ್ ಎಂದು ಚಾರಿತ್ರ್ಯಾಳ ವಿಡಿಯೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದರು.

    https://www.instagram.com/p/BjuBWjTH3IJ/

    ಇತ್ತೀಚೆಗಷ್ಟೇ ಗೋಲ್ಡನ್ ಸ್ಟಾರ್ ದಂಪತಿ ತಮ್ಮ 12ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದರು. ಈ ಬಗ್ಗೆ ಟೀಟ್ ಮಾಡಿದ್ದ ಗಣೇಶ್, ಅಂದು ನಾನು ಹಾಯ್ ಎಂದಾಗ ನೀನು ನನಗೆ ಹಾಯ್ ಎಂದು ಹೇಳಿದ್ದೆ. ಆ ದಿನ ನಿನ್ನ ಮುಖದಲ್ಲಿದ್ದ ನಗುವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಇಂದಿಗೆ ನಮ್ಮ ಮದುವೆಯಾಗಿ 12 ವರ್ಷಗಳೇ ಕಳೆದಿವೆ. ನೀನು ನನ್ನ ಪ್ರೀತಿ, ನನ್ನ ಆತ್ಮೀಯ ಸ್ನೇಹಿತೆ, ನನ್ನ ಮಹಾರಾಣಿ. ನನ್ನ ಪತ್ನಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು ಎಂದು ಬರೆದುಕೊಂಡು ಮುದ್ದಿನ ಪತ್ನಿಗೆ ಪ್ರೀತಿಯಿಂದ ವಿಶ್ ಮಾಡಿದ್ದರು. ಈ ಟ್ವೀಟ್ ಕೂಡ ಅಭಿಮಾನಿಗಳ ಮನ ಗೆದ್ದಿತ್ತು.

  • ಕನ್ನಡತನದ ಗೋಲ್ಡನ್ ಕ್ಷಣಗಳನ್ನು ಪ್ರೇಕ್ಷಕರ ಮುಂದಿಟ್ಟ ‘ಗೀತಾ’!

    ಕನ್ನಡತನದ ಗೋಲ್ಡನ್ ಕ್ಷಣಗಳನ್ನು ಪ್ರೇಕ್ಷಕರ ಮುಂದಿಟ್ಟ ‘ಗೀತಾ’!

    ಬೆಂಗಳೂರು: ಗೋಕಾಕ್ ಚಳುವಳಿ ಮತ್ತು ಕನ್ನಡಪ್ರೇಮದ ಕಥಾನಕವೆಂಬ ಸುಳಿವಿನ ಮೂಲಕವೇ ಕನ್ನಡಿಗರ ನಡುವೆ ಕುತೂಹಲದ ಸೆಳೆಮಿಂಚು ಹರಿಸಿದ್ದ ಚಿತ್ರ ಗೀತಾ. ಗೋಲ್ಡನ್ ಸ್ಟಾರ್ ಗಣೇಶ್ ಟ್ರೇಲರ್ ಮೂಲಕ ಕನ್ನಡ ಪರ ಹೋರಾಟಗಾರನಾಗಿ ಅಬ್ಬರಿಸಿದ್ದ ರೀತಿ ಮತ್ತಷ್ಟು ಜನರನ್ನು ಆಕರ್ಷಿಸಿತ್ತು. ಅಷ್ಟಕ್ಕೂ ಗೋಕಾಕ್‍ನಂಥಾ ಐತಿಹಾಸಿಕ ಚಳುವಳಿಯನ್ನು ಕಮರ್ಶಿಯಲ್ ಚೌಕಟ್ಟಿನಲ್ಲಿ, ಪ್ರೇಮಕಥಾನಕದೊಂದಿಗೆ ಹೇಳೋದೇ ಮಹಾ ಸವಾಲು. ನಿರ್ದೇಶಕ ವಿಜಯ್ ಕಿರಣ್ ಮೊದಲ ಹೆಜ್ಜೆಯಲ್ಲಿಯೇ ಅದನ್ನು ಸ್ವೀಕರಿಸಿದ್ದಾರೆಂದರೆ, ಗೋಲ್ಡನ್ ಸ್ಟಾರ್ ಗಣೇಶ್ ಕನ್ನಡಪರ ಹೋರಾಟಗಾರನಾಗಿ ಕಾಣಿಸಿಕೊಂಡಿದ್ದಾರೆಂದರೆ ಗೀತಾ ಬಗ್ಗೆ ಬೆರಗು ಮೂಡದಿರಲು ಸಾಧ್ಯವೇ? ಈ ಕಾರಣದಿಂದಲೇ ದಶ ದಿಕ್ಕುಗಳಿಂದಲೂ ಕುತೂಹಲಕ್ಕೆ ಕಾರಣವಾಗಿದ್ದ ಗೀತಾ ಇದೀಗ ಪ್ರೇಕ್ಷಕರ ಮುಂದೆ ಅನಾವರಣಗೊಂಡಿದೆ.

    ಗೋಲ್ಡನ್ ಸ್ಟಾರ್ ಗಣೇಶ್ ಇಲ್ಲಿ ಎರಡು ಪಾತ್ರಗಳನ್ನು ಸಂಭಾಳಿಸಿದ್ದಾರೆ. ಅವೆರಡರಲ್ಲಿಯೂ ಕನ್ನಡಿಗರೆಲ್ಲರ ಮನ ಮುಟ್ಟುವಂತೆ ನಟಿಸಿದ್ದಾರೆ. ಆಕಾಶ್ ಮತ್ತು ಶಂಕರನಾಗಿ ಅವರು ನಟಿಸಿದ್ದಾರೆ. ಈ ಆಕಾಶ್ ತಂದೆ ತಾಯಿಯರಿದ್ದರೂ ತೊಳಲಾಟವನ್ನೇ ಹೊದ್ದು ಬದುಕುವ ಹುಡುಗ. ಯಾಕೆಂದರೆ ತಂದೆ ತಾಯಿ ಬೇರೆಯಾಗಿ ಎರಡು ಧ್ರುವಗಳಂತಾಗಿರುತ್ತಾರೆ. ಇಬ್ಬರನ್ನೂ ಬೇರೆ ಬೇರೆಯಾಗಿಯೇ ಕಾಣುತ್ತಾ, ಅಪೂರ್ಣ ಪ್ರೀತಿಯ ಕೊರತೆಯನ್ನು ಮನಸೊಳಗೆ ಸಾಕಿಕೊಂಡೆ ಇರೋ ಆತನ ಪಾಲಿಗೆ ಅಪ್ಪ ಅಮ್ಮ ಹೀಗಾಗಲು ಕಾರಣವೇನೆಂಬುದು ಸದಾ ಕಾಡುವ ಪ್ರಶ್ನೆ. ಕಡೆಗೂ ಅದಕ್ಕೆ ಉತ್ತರ ಹುಡುಕಿದಾಗ ಕನ್ನಡಪ್ರೇಮಿ ಶಂಕರನ ಕಥೆ ತೆರೆದುಕೊಳ್ಳುತ್ತೆ. ಇಡೀ ಕಥೆಗೊಂದು ಹೊಸಾ ಆವೇಗ ಬರುವುದು ಆ ಕ್ಷಣದಿಂದಲೇ.

    ಅಲ್ಲಿಂದಾಚೆಗೆ ಗೋಕಾಕ್ ಚಳುವಳಿಯ ಹಿನ್ನೆಲೆಯ ಅಪ್ಪಟ ಕನ್ನಡ ಪ್ರೇಮ ಹೊದ್ದುಕೊಂಡ ಕಥೆ ಬಿಚ್ಚಿಕೊಳ್ಳುತ್ತದೆ. ಅದರ ಜೊತೆ ಜೊತೆಗೇ ಎಂಥವರ ಎದೆಗಾದರೂ ನೇರವಾಗಿ ಸೋಕುವಂಥಾ ಪ್ರೇಮ ಕಥೆಯೂ ಬಿಚ್ಚಿಕೊಳ್ಳುತ್ತದೆ. ಅಷ್ಟಕ್ಕೂ ಈ ಆಕಾಶ್ ಯಾರು? ಆತನಿಗೂ ಶಂಕರನ ಕಥೆಗೂ ಇರೋ ಕನೆಕ್ಷನ್ನುಗಳೇನೆಂಬುದನ್ನು ಕುತೂಹಲ ಕಾಯ್ದಿಟ್ಟುಕೊಂಡೇ ಅನಾವರಣಗೊಳಿಸುವಲ್ಲಿ ನಿರ್ದೇಶಕ ವಿಜಯ್ ನಾಗೇಂದ್ರರ ಜಾಣ್ಮೆಯ ಅನಾವರಣವಾಗುತ್ತದೆ. ಗೋಕಾಕ್‍ನಂಥಾ ಗಂಭೀರ ಚಳುವಳಿ ಮತ್ತು ಪ್ರೀತಿಯನ್ನು ಹದಮುದವಾಗಿ ಬೆರೆಸುತ್ತಲೇ ಮನೋರಂಜನೆಗೂ ಕೂಡಾ ಕೊರತೆಯಾಗದಂತೆ ಮೂಡಿ ಬಂದಿರೋದು ಈ ಚಿತ್ರದ ನಿಜವಾದ ಹೆಚ್ಚುಗಾರಿಕೆ.

    ಇಲ್ಲಿ ಗೋಕಾಕ್ ಚಳುವಳಿಯನ್ನು ಮರು ರೂಪಿಸಿದ ರೀತಿಯೇ ಕನ್ನಡದ ಮನಸುಗಳನ್ನೆಲ್ಲ ಥ್ರಿಲ್ ಆಗಿಸುವಂತಿದೆ. ಕಥೆ ಬೇರೆ ಬೇರೆ ದಿಕ್ಕುಗಳಲ್ಲಿ ಹರಡಿಕೊಂಡಿದ್ದರೂ ಯಾವುದೂ ಕೃತಕ ಅನ್ನಿಸದಂತೆ, ಬೇರೆ ಬೇರೆಯೆಂಬ ಭಾವ ಮೂಡಿಸದಂತೆ ಕೂಡಿಸುವಲ್ಲಿಯೂ ಕೂಡಾ ನಿರ್ದೇಶನದ ಕಸುಬುದಾರಿಕೆ ಜಾಹೀರಾಗುತ್ತದೆ. ಇನ್ನುಳಿದಂತೆ ಗಣೇಶ್ ಇಲ್ಲಿ ಬೇರೆಯದ್ದೇ ಲುಕ್ಕಿನಲ್ಲಿ, ಹದಗೊಂಡ ನಟನೆಯ ಮೂಲಕ ಪ್ರೇಕ್ಷಕರನ್ನು ಅಚ್ಚರಿಗೀಡು ಮಾಡುತ್ತಾರೆ. ಮೂವರು ನಾಯಕಿಯರು ಮತ್ತು ಇತರೇ ಪಾತ್ರವರ್ಗವೂ ಕೂಡಾ ಅದಕ್ಕೆ ತಕ್ಕುದಾಗಿಯೇ ಸಾಥ್ ಕೊಟ್ಟಿದ್ದಾರೆ. ಹಿನ್ನೆಲೆ ಸಂಗೀತ, ಛಾಯಾಗ್ರಹಣ ಮತ್ತು ಹಾಡುಗಳೆಲ್ಲವೂ ಒಂದಕ್ಕೊಂದು ಪೂರಕವಾಗಿವೆ.

    ಈ ಚಿತ್ರದಲ್ಲಿ ಪ್ರಧಾನ ಕುತೂಹಲವಿದ್ದದ್ದೇ ಗೋಕಾಕ್ ಚಳುವಳಿಯ ಮರುಸೃಷ್ಟಿಯ ಬಗ್ಗೆ. ಅದನ್ನು ನಿರ್ಮಾಪಕರಾದ ಸೈಯದ್ ಸಲಾಮ್ ಮತ್ತು ಶಿಲ್ಪಾ ಗಣೇಶ್ ಪರಿಣಾಮಕಾರಿಯಾಗಿ, ರಿಚ್ ಆಗಿ ಮೂಡಿ ಬರುವಂತೆ ಮಾಡಿದ್ದಾರೆ. ನಿರ್ದೇಶಕ ವಿಜಯ್ ನಾಗೇಂದ್ರ ಮೊದಲ ಹೆಜ್ಜೆಯಲ್ಲಿಯೇ ಸಂಕೀರ್ಣವಾದ ಕಥೆಯನ್ನು ಆರಿಸಿಕೊಂಡಿದ್ದರೂ ಕೂಡಾ ಎಲ್ಲಿಯೂ ಸಿಕ್ಕಾಗದಂತೆ ಕಲಾತ್ಮಕ ಕೈಚಳಕ ತೋರಿಸಿದ್ದಾರೆ. ಈ ಕಾರಣದಿಂದಲೇ ವಿರಳ ಕಥೆಯ ಮೂಲಕ ಗೀತಾ ಕನ್ನಡತನದ ಗೋಲ್ಡನ್ ಕ್ಷಣಗಳನ್ನು ಸಮರ್ಥವಾಗಿಯೇ ಪ್ರೇಕ್ಷಕರ ಮುಂದಿಟ್ಟಿದ್ದಾಳೆ!

    ರೇಟಿಂಗ್: 3.5/4