Tag: golden star ganesh

  • ‘ಕೃಷ್ಣಂ ಪ್ರಣಯ ಸಖಿ’ ನನ್ನ ಕೆರಿಯರ್‌ನ ಬಿಗ್ ಬಜೆಟ್ ಚಿತ್ರ: ನಟ ಗಣೇಶ್

    ‘ಕೃಷ್ಣಂ ಪ್ರಣಯ ಸಖಿ’ ನನ್ನ ಕೆರಿಯರ್‌ನ ಬಿಗ್ ಬಜೆಟ್ ಚಿತ್ರ: ನಟ ಗಣೇಶ್

    ತ್ರಿಶೂಲ್ ಎಂಟರ್‌ಟೈನ್ಮೆಂಟ್ ಲಾಂಛನದಲ್ಲಿ ಪ್ರಶಾಂತ್ ಜಿ ರುದ್ರಪ್ಪ ನಿರ್ಮಿಸಿರುವ, ಶ್ರೀನಿವಾಸರಾಜು ನಿರ್ದೇಶನದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ (Golden Star Ganesh) ನಾಯಕರಾಗಿ ನಟಿಸಿರುವ ‘ಕೃಷ್ಣಂ ಪ್ರಣಯ ಸಖಿ’ (Krishnam Pranaya Sakhi) ಚಿತ್ರದ ಎರಡು ಹಾಡುಗಳು ಬಿಡುಗಡೆಯಾಗಿದ್ದು, ಎರಡು ಹಾಡುಗಳು ಪ್ರೇಕ್ಷಕರ ಮನಗೆದ್ದಿದೆ. ಇದೀಗ ಈ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ನನ್ನ ಕೆರಿಯರ್‌ನ ಬಿಗ್ ಬಜೆಟ್ ಚಿತ್ರವಿದು ಎಂದು ನಟ ಗಣೇಶ್ ಮಾತನಾಡಿದ್ದಾರೆ. ಇದನ್ನೂ ಓದಿ:ಕೈತುಂಬಾ ಅವಕಾಶವಿರುವಾಗಲೇ ನನಗೆ ಆಕ್ಸಿಡೆಂಟ್‌ ಆಯ್ತು: ನಭಾ ನಟೇಶ್

    ‘ದಂಡುಪಾಳ್ಯ’ ಚಿತ್ರದ ನಿರ್ದೇಶಕ ಶ್ರೀನಿವಾಸರಾಜು ಅವರು ಚಿತ್ರದ ಕಥೆ ಹೇಳಲು ಬರುತ್ತಿದ್ದಾರೆ ಎಂದಾಗ, ಅವರು ನನ್ನ ಜಾನರ್ ಬದಲಾಯಿಸುವ ಕಥೆ ಮಾಡಿರಬಹುದು ಅಂದುಕೊಂಡೆ. ಆದರೆ ಆರಂಭದಲ್ಲೇ ಅವರು ಎಂಟು ನಾಯಕಿಯರು ಎಂದಾಗ, ಓ ಇದು ನನ್ನ ಜಾನರ್‌ನ ಚಿತ್ರ ಅನಿಸಿತು. ‘ಕೃಷ್ಣಂ ಪ್ರಣಯ ಸಖಿ’ ಉತ್ತಮ ಕಥಾಹಂದರ ಹೊಂದಿರುವ ಚಿತ್ರ. ಕನ್ನಡ ಚಿತ್ರರಂಗದ ಹಿರಿಯ ನಟರೊಂದಿಗೆ ಈ ಚಿತ್ರದಲ್ಲಿ ನಟಿಸಿದ್ದು, ನನಗೆ ಸಂತೋಷವಾಯಿತು. ನೋಡುಗರಿಗೂ ಈ ಚಿತ್ರ ಇಷ್ಟವಾಗುತ್ತದೆ. ಅಂತಹ ಉತ್ತಮ ಚಿತ್ರ ಮಾಡಿದ್ದಾರೆ ಶ್ರೀನಿವಾಸರಾಜು. ಪ್ರಶಾಂತ್ ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದಾರೆ. ‘ಕೃಷ್ಣಂ ಪ್ರಣಯ ಸಖಿ’ ನನ್ನ ಈವರೆಗಿನ ವೃತ್ತಿ ಜೀವನದ ಬಿಗ್ ಬಜೆಟ್‌ನ ಚಿತ್ರ ಎಂದು ಗೋಲ್ಡನ್ ಸ್ಟಾರ್ ಗಣೇಶ್ ಮಾತನಾಡಿದ್ದಾರೆ.

    ಇದು ಗಣೇಶ್‌ಗೆ ಸೂಕ್ತವಾದ ಕಥೆ. ಅವರ ಹಾಗೂ ಚಿತ್ರದಲ್ಲಿ ನಟಿಸಿರುವ ಎಲ್ಲಾ ಕಲಾವಿದರ ಅಭಿನಯ ಉತ್ತಮವಾಗಿ ಮೂಡಿಬಂದಿದೆ. ತಂತ್ರಜ್ಞರ ಕಾರ್ಯವೈಖರಿ ಕೂಡ ಚೆನ್ನಾಗಿದೆ. ಅರ್ಜುನ್ ಜನ್ಯ ಸಂಗೀತ ನೀಡಿರುವ ಆರು ಹಾಡುಗಳು ಈ ಚಿತ್ರದಲ್ಲಿದ್ದು, ಎರಡು ಹಾಡುಗಳು ಈಗಾಗಲೇ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ಇತ್ತೀಚಿಗೆ ಬಿಡುಗಡೆಯಾದ ‘ಚಿನ್ನಮ್ಮ’ ಹಾಡಂತೂ ಈಗಾಗಲೇ ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗಿದೆ. ಸಿನಿಮಾ ನೋಡಿ ಹಾರೈಸಿ ಎಂದು ನಿರ್ದೇಶಕ ಶ್ರೀನಿವಾಸರಾಜು ಮಾತನಾಡಿದ್ದಾರೆ.


    ಚಿತ್ರ ಉತ್ತಮವಾಗಿ ಮೂಡಿ ಬಂದಿರುವುದಕ್ಕೆ ನಿರ್ಮಾಪಕರ ಪುತ್ರಿ ಪ್ರೇರಣಾ ಪ್ರಶಾಂತ್ ಧನ್ಯವಾದ ತಿಳಿಸಿದರು. ಮಾಳವಿಕಾ ನಾಯರ್, ಶರಣ್ಯ ಶೆಟ್ಟಿ (Sharanya Shetty) ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಹಿರಿಯ ನಟರಾದ ಶ್ರೀನಿವಾಸಮೂರ್ತಿ, ಸಾಧುಕೋಕಿಲ, ರಂಗಾಯಣ ರಘು, ಶಿವಧ್ವಜ್, ಗಿರಿ ಮುಂತಾದವರು ನಟಿಸಿದ್ದಾರೆ.

  • ಒಂದೇ ಸಿನಿಮಾದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್, ರಮೇಶ್ ಅರವಿಂದ್

    ಒಂದೇ ಸಿನಿಮಾದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್, ರಮೇಶ್ ಅರವಿಂದ್

    ಸ್ಯಾಂಡಲ್‌ವುಡ್ ನಟ ಗಣೇಶ್ ಇಂದು (ಜು.2) ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಇದೇ ಖುಷಿಯಲ್ಲಿ ಹೊಸ ಸಿನಿಮಾ ಘೋಷಿಸಿದ್ದಾರೆ. ಈ ಮೂಲಕ ಗೋಲ್ಡನ್ ಸ್ಟಾರ್ ಗಣೇಶ್ (Golden Star Ganesh) ಅಭಿಮಾನಿಗಳಿಗೆ ಸಿಹಿಸುದ್ದಿ ಕೊಟ್ಟಿದ್ದಾರೆ. ಇದನ್ನೂ ಓದಿ:ಸಿಹಿಸುದ್ದಿ ಕೊಟ್ಟ ನಟಿ- ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿ ಹರ್ಷಿಕಾ ದಂಪತಿ

    ಯಂಗ್ ಎನರ್ಜಿಟಿಕ್ ನಟ ಕಮ್ ನಿರ್ಮಾಪಕ ರಮೇಶ್ ಅರವಿಂದ್ (Ramesh Aravind) ಜೊತೆ ಹೊಸ ಚಿತ್ರಕ್ಕಾಗಿ ಗಣೇಶ್ ಕೈಜೋಡಿಸಿದ್ದಾರೆ. ಇದೀಗ ನಟ ರಮೇಶ್ ಮತ್ತು ಗಣೇಶ್ ಅವರ ಟಿನೇಜ್ ದಿನಗಳ ಫೋಟೋ ಪೋಸ್ಟರ್‌ನಲ್ಲಿದ್ದು, ರೆಟ್ರೋ ಲುಕ್‌ನಲ್ಲಿ ತೋರಿಸಲಾಗಿದೆ. ಸಿನಿಮಾದ ಮೊದಲ ಲುಕ್ ಆ.16ರಂದು ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.

    ಅಂದಹಾಗೆ, ಇದೇ ಮೊದಲ ಬಾರಿಗೆ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ರಮೇಶ್ ಅರವಿಂದ್ ಒಂದೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇವರಿಗೆ ವಿಖ್ಯಾತ್ ಎ.ಆರ್ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ಚಿತ್ರವನ್ನು ಸತ್ಯ ಎಂಬುವವರು ನಿರ್ಮಾಣ ಮಾಡಿದ್ದಾರೆ.

    ಗಣೇಶ್ ಜೊತೆ ಈ ವರ್ಷ ಬರ್ತ್‌ಡೇ ಆಚರಿಸುವ ಭಾಗ್ಯ ಇಲ್ಲ ಎಂದು ಬೇಸರದಲ್ಲಿದ್ದ ಫ್ಯಾನ್ಸ್‌ಗೆ ಈ ಸಿನಿಮಾದ ಅಪ್‌ಡೇಟ್ ಮೂಲಕ ಗುಡ್ ನ್ಯೂಸ್ ಕೊಟ್ಟಿದ್ದಾರೆ.

  • ಹುಟ್ಟುಹಬ್ಬ ಆಚರಿಸಿಕೊಳ್ಳಬೇಕೆಂಬ ಹಂಬಲ ಈ ಬಾರಿಯೂ ಕೈಗೂಡುತ್ತಿಲ್ಲ: ಗಣೇಶ್

    ಹುಟ್ಟುಹಬ್ಬ ಆಚರಿಸಿಕೊಳ್ಳಬೇಕೆಂಬ ಹಂಬಲ ಈ ಬಾರಿಯೂ ಕೈಗೂಡುತ್ತಿಲ್ಲ: ಗಣೇಶ್

    ಗೋಲ್ಡನ್ ಸ್ಟಾರ್ ಗಣೇಶ್ (Golden Star Ganesh) ಜುಲೈ 2ರಂದು 45ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ನೆಚ್ಚಿನ ನಟನ ಜೊತೆ ಹುಟ್ಟುಹಬ್ಬ (Birthday) ಸೆಲೆಬ್ರೇಟ್ ಮಾಡಿಕೊಳ್ಳೋಕೆ ಫ್ಯಾನ್ಸ್ ಕಾಯುತ್ತಿದ್ದಾರೆ. ಹೀಗಿರುವಾಗ ಹುಟ್ಟುಹಬ್ಬ ಈ ವರ್ಷ ಆಚರಿಸಿಕೊಳ್ತಿಲ್ಲ ಎಂದು ಫ್ಯಾನ್ಸ್‌ಗೆ ಗಣೇಶ್ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ:ಹ್ಯಾಟ್ರಿಕ್ ಹೀರೋ ಶಿವಣ್ಣ ಫ್ಯಾನ್ಸ್‌ಗೆ ಸಿಹಿಸುದ್ದಿ- ಏನದು?

    ನನ್ನ ಆತ್ಮೀಯ ಅಭಿಮಾನಿಗಳೇ, ಜುಲೈ 2ರಂದು ನಾನು ನನ್ನ ಬೆಂಗಳೂರು ನಿವಾಸದಲ್ಲಿ ಲಭ್ಯನಿಲ್ಲ. ಆದೇಕೋ ತಮ್ಮೊಂದಿಗೆ ನನ್ನ ಹುಟ್ಟುಹಬ್ಬ ಆಚರಿಸಿಕೊಳ್ಳಬೇಕೆಂಬ ನನ್ನ ಹಂಬಲ ಈ ಬಾರಿಯೂ ಕೈಗೂಡುತ್ತಿಲ್ಲ. ಹೀಗಾಗಿ ನನ್ನ ಪ್ರೀತಿಯ ಅಭಿಮಾನಿಗಳು ಮನೆಯ ಬಳಿ ಬಾರದೇ ತಾವು ಇದ್ದಲ್ಲಿಂದಲೇ ನನ್ನನ್ನು ಹರಸಿ, ಆಶೀರ್ವದಿಸಿ ಎಂದು ಬರೆದುಕೊಂಡಿದ್ದಾರೆ. ಮುಂದಿನ ವರ್ಷ ಖಂಡಿತ ಒಟ್ಟಿಗೆ ಹುಟ್ಟುಹಬ್ಬ ಆಚರಿಸೋಣ. ಅನಾನುಕೂಲಕ್ಕೆ ಕ್ಷಮೆಯಿರಲಿ ಎಂದಿದ್ದಾರೆ. ಎಂದಿನ ತಮ್ಮ ಅಭಿಮಾನದ ನಿರೀಕ್ಷೆಯೊಂದಿಗೆ ನಿಮ್ಮವ ಎಂದು ನಟ ಗಣೇಶ್ ಸಾಮಾಜಿಕ ಜಾಲತಾಣದಲ್ಲಿ ಫ್ಯಾನ್ಸ್‌ಗೆ ಮನವಿ ಮಾಡಿದ್ದಾರೆ. ಇದು ಫ್ಯಾನ್ಸ್‌ಗೆ ನಿರಾಸೆ ಮೂಡಿಸಿದೆ.

    ಅಂದಹಾಗೆ, ಗಣೇಶ್ ನಟನೆಯ ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾ ಹಾಡುಗಳು ಸೂಪರ್ ಹಿಟ್ ಆಗಿವೆ. ಚಿತ್ರದ ಬಗ್ಗೆ ಫ್ಯಾನ್ಸ್‌ಗೆ ಭಾರೀ ನಿರೀಕ್ಷೆ ಮೂಡಿಸಿದೆ. ಸದ್ಯದಲ್ಲೇ ಸಿನಿಮಾ ತೆರೆಗೆ ಬರಲಿದೆ.

  • ಶ್ರೀರಾಮನ ನಾಮ ಪಠಿಸಿದ ಗೋಲ್ಡನ್ ಸ್ಟಾರ್- ಇನ್ನಿಬ್ಬರು ಸ್ಟಾರ್ಸ್‌ಗೆ ಗಣೇಶ್‌ ಆಹ್ವಾನ

    ಶ್ರೀರಾಮನ ನಾಮ ಪಠಿಸಿದ ಗೋಲ್ಡನ್ ಸ್ಟಾರ್- ಇನ್ನಿಬ್ಬರು ಸ್ಟಾರ್ಸ್‌ಗೆ ಗಣೇಶ್‌ ಆಹ್ವಾನ

    ಸ್ಯಾಂಡಲ್‌ವುಡ್ ನಟ ಗೋಲ್ಡನ್ ಸ್ಟಾರ್ ಗಣೇಶ್ (Golden Star Ganesh) ಅವರು ರಾಮನಾಮ ಪಠಿಸಿದ್ದಾರೆ. ಈ ಮೂಲಕ ಇನ್ನೂ ಇಬ್ಬರು ಸೆಲೆಬ್ರಿಟಿಗಳಿಗೂ ರಾಮನಾಮ (Ram Naam) ಪಠಿಸಲು ಆಹ್ವಾನ ನೀಡಿದ್ದಾರೆ. ಭಗವಾನ್ ಶ್ರೀರಾಮನ ನಾಮ ಪಠಿಸಿದ ವಿಡಿಯೋವೊಂದನ್ನು ಗಣೇಶ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

    ಅಯೋಧ್ಯೆಯ ರಾಮಮಂದಿರ ಉದ್ಘಾಟನೆಗೆ ಕೌಂಟ್‌ಡೌನ್ ಶುರುವಾಗಿದೆ. ಕನ್ನಡದ ಸಿನಿತಾರೆಯರು ಮತ್ತು ಬಾಲಿವುಡ್ ಕಲಾವಿದರು ಸೇರಿದಂತೆ ಅನೇಕರಿಗೆ ರಾಮಮಂದಿರ ಉದ್ಘಾಟನೆಗೆ ಆಹ್ವಾನ ನೀಡಲಾಗಿದೆ. ಶ್ರೀರಾಮ ಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಅಭಿಯಾನವೊಂದು ಶುರುವಾಗಿದೆ. ಬಿ.ವೈ ವಿಜಯೇಂದ್ರ ಅವರ ಆಹ್ವಾನ ಮೇರೆಗೆ ಗಣೇಶ್ ರಾಮನಾಮ ಪಠಿಸಿದ್ದಾರೆ. ಈ ಶ್ರೀರಾಮನ ನಾಮ ಜಪಿಸಲು ಇನ್ನೂ ಇಬ್ಬರು ಸ್ಟಾರ್‌ಗಳಿಗೆ ಆಹ್ವಾನ ನೀಡಿದ್ದಾರೆ.

     

    View this post on Instagram

     

    A post shared by Ganesh (@goldenstar_ganesh)

    ಶ್ರೀರಾಮನ ನಾಮ ಪಠಿಸಿ ರಿಯಲ್ ಸ್ಟಾರ್ ಉಪೇಂದ್ರ (Upendra) ಮತ್ತು ಅನಿಲ್ ಕುಂಬ್ಳೆ (Anil Kumble) ಅವರಿಗೆ ಗಣೇಶ್ ಆಹ್ವಾನ ನೀಡಿದ್ದಾರೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ನಟ ಗಣೇಶ್ ತಿಳಿಸಿದ್ದಾರೆ. ಈ ವಿಡಿಯೋ ನೋಡ್ತಿದ್ದಂತೆ ಅಭಿಮಾನಿಗಳು ಜೈ ಶ್ರೀರಾಮ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:ಅಯೋಧ್ಯೆಯಲ್ಲಿ ಹನುಮನ ಮಂದಿರ ಶುಚಿಗೊಳಿಸಿದ ಕಂಗನಾ

    ಇನ್ನೂ ‘ಬಾನದಾರಿಯಲಿ’ ಚಿತ್ರದ ಬಳಿಕ ‘ಕೃಷ್ಣಂ ಪ್ರಣಯ ಸಖಿ’ ಎಂಬ ಸಿನಿಮಾದಲ್ಲಿ ಗಣೇಶ್ ಬ್ಯುಸಿಯಾಗಿದ್ದಾರೆ. ಗಣೇಶ್‌ಗೆ ಮಾಳವಿಕಾ, ಶರಣ್ಯ ಶೆಟ್ಟಿ ನಾಯಕಿಯರಾಗಿ ನಟಿಸಿದ್ದಾರೆ.

  • ಗೋಲ್ಡನ್ ಹೀರೋಗೆ ಜೋಡಿಯಾದ ‘ಗಟ್ಟಿಮೇಳ’ ನಟಿ ಶರಣ್ಯ ಶೆಟ್ಟಿ

    ಗೋಲ್ಡನ್ ಹೀರೋಗೆ ಜೋಡಿಯಾದ ‘ಗಟ್ಟಿಮೇಳ’ ನಟಿ ಶರಣ್ಯ ಶೆಟ್ಟಿ

    ಗೋಲ್ಡನ್ ಸ್ಟಾರ್ ಗಣೇಶ್ (Golden Star Ganesh) ಅವರು ‘ಕೃಷ್ಣಂ ಪ್ರಣಯ ಸಖಿ’ಯಾಗಿ ಎಂಟ್ರಿ ಕೊಡುತ್ತಾ ಇರೋದು ಗೊತ್ತೆ ಇದೆ. ಲವರ್ ಬಾಯ್ ಗಣೇಶ್‌ಗೆ ಜೋಡಿಯಾಗಿ ಮಾಳವಿಕಾ ಮಾತ್ರವಲ್ಲ ಇದೀಗ ಮತ್ತೋರ್ವ ಯುವ ನಟಿಯ ಎಂಟ್ರಿಯಾಗಿದೆ. ಗೋಲ್ಡನ್ ಹೀರೋ ಗಣಿಗೆ ನಾಯಕಿಯಾಗಿ ಕಿರುತೆರೆಯ ಬ್ಯೂಟಿ ಶರಣ್ಯ ಶೆಟ್ಟಿ (Sharanya Shetty) ಕಾಣಿಸಿಕೊಳ್ತಿದ್ದಾರೆ.

    ನಟ ಗಣೇಶ್ ಅವರ ಹುಟ್ಟುಹಬ್ಬದಂದು ‘ಕೃಷ್ಣಂ ಪ್ರಣಯ ಸಖಿʼ (Krishnam Pranaya Sakhi) ಸಿನಿಮಾದ ಫಸ್ಟ್ ಲುಕ್ ರಿವೀಲ್ ಆಗಿತ್ತು. ಮೊದಲ ಪೋಸ್ಟರ್ ಲುಕ್‌ನಿಂದಲೇ ಗಣೇಶ್ ಅಭಿಮಾನಿಗಳ ಗಮನ ಸೆಳೆದಿದ್ದರು. ಗಣೇಶ್ ಅಭಿನಯದ 41ನೇ ಸಿನಿಮಾಗೆ ‘ಕೃಷ್ಣಂ ಪ್ರಣಯ ಸಖಿ’ ಎಂದು ಟೈಟಲ್ ಇಡಲಾಗಿದೆ. ಈ ಪೋಸ್ಟರ್‌ನಲ್ಲಿ ಗಣೇಶ್ ಮನೆ ಕೆಲಸ ಮಾಡುವ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸೂಟ್ ಧರಿಸಿ ಹೈ ಫೈ ಆಗಿರುವ ಗಣೇಶ್ ಕೈಯಲ್ಲಿ ಬಕೆಟ್, ಪೊರಕೆ, ನೆಲ ಒರೆಸುವ ಸ್ಟಿಕ್ ಹಿಡಿದು ಹೊರಟಿದ್ದಾರೆ. ಟೈಟಲ್ ಕೇಳಿದ್ರೆ ಗಣೇಶ್ ಲವರ್ ಬಾಯ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ಗೊತ್ತಾಗುತ್ತಿದೆ. ಇದನ್ನೂ ಓದಿ:‘ಕೆಡಿ’ ಸಿನಿಮಾದಲ್ಲಿ ಧ್ರುವ ಸರ್ಜಾ: ರೆಟ್ರೋ ಲುಕ್ ಫೋಟೋ ಲೀಕ್

    ಈಗಾಗಲೇ ಈ ಸಿನಿಮಾದ ಚಿತ್ರೀಕರಣ ಆರಂಭವಾಗಿದ್ದು, ಗಣೇಶ್‌ಗೆ ಜೋಡಿಯಾಗಿ ಮಾಳವಿಕಾ ಸಾಥ್ ನೀಡಿದ್ದಾರೆ. ಗಣೇಶ್- ಮಾಳವಿಕಾ (Malavika) ಭಾಗದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಹೀಗಿರುವಾಗ ಮತ್ತೊರ್ವ ನಾಯಕಿಯ ಎಂಟ್ರಿಯಾಗಿದೆ. ಕಿರುತೆರೆಯ ‘ಗಟ್ಟಿಮೇಳ’ ಸೀರಿಯಲ್‌ನಲ್ಲಿ ಖಳನಾಯಕಿಯಾಗಿ ಮೋಡಿ ಮಾಡಿದ್ದ ಶರಣ್ಯ ಶೆಟ್ಟಿ ಈಗ ಗಣೇಶ್ ಜೊತೆ ನಟಿಸುವ ಸುವರ್ಣಾವಕಾಶ ಗಿಟ್ಟಿಸಿಕೊಂಡಿದ್ದಾರೆ.

    ಈಗಾಗಲೇ ಶರಣ್ಯ, 1980, ಪೆಂಟಗನ್, ಹುಟ್ಟುಹಬ್ಬದ ಶುಭಾಶಯಗಳು, ರವಿ ಬೋಪಣ್ಣ, ಸ್ಪೂಕಿ ಕಾಲೇಜ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗ ‘ಕೃಷ್ಣಂ ಪ್ರಣಯ ಸಖಿ’ ಚಿತ್ರದಲ್ಲಿ ಪ್ರಮುಖ ಪಾತ್ರಕ್ಕೆ ನಟಿ ಶರಣ್ಯ ಜೀವ ತುಂಬಲಿದ್ದಾರೆ. ರೊಮ್ಯಾಂಟಿಕ್-ಕಾಮಿಡಿಯಾಗಿರೋ ಈ ಸಿನಿಮಾ ಜುಲೈ ಅಂತ್ಯದಲ್ಲಿ ಮತ್ತೆ ಶೂಟಿಂಗ್ ಶುರುವಾಗಲಿದೆ. ಶ್ರೀನಿವಾಸ್ ರಾಜು ನಿರ್ದೇಶನದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್, ಮಾಳವಿಕಾ ನಾಯರ್, ಶರಣ್ಯ ಶೆಟ್ಟಿ ಈ ಜೋಡಿಯನ್ನ ನೋಡಲು ಫ್ಯಾನ್ಸ್ ಕಾತರದಿಂದ ಕಾಯುತ್ತಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಕೃಷ್ಣಂ ಪ್ರಣಯ ಸಖಿ’ಯಾಗಿ ಲವರ್‌ ಬಾಯ್‌ ಲುಕ್‌ನಲ್ಲಿ ಗೋಲ್ಡನ್‌ ಸ್ಟಾರ್‌ ಎಂಟ್ರಿ

    ‘ಕೃಷ್ಣಂ ಪ್ರಣಯ ಸಖಿ’ಯಾಗಿ ಲವರ್‌ ಬಾಯ್‌ ಲುಕ್‌ನಲ್ಲಿ ಗೋಲ್ಡನ್‌ ಸ್ಟಾರ್‌ ಎಂಟ್ರಿ

    ಸ್ಯಾಂಡಲ್ವುಡ್‌ನ (Sandalwood) ಗೋಲ್ಡನ್ ಹೀರೋ ಗೋಲ್ಡನ್ ಸ್ಟಾರ್ ಗಣೇಶ್ (Golden Star Ganesh) ಅವರು ತಮ್ಮ ಹುಟ್ಟುಹಬ್ಬದ (ಜುಲೈ 2) ದಿನ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಚೆಲ್ಲಾಟ, ಮುಂಗಾಳೆ ಮಳೆ, ಕೃಷ್ಣ ಸಿನಿಮಾಗಳ ಮೂಲಕ ಲವರ್ ಬಾಯ್ ಆಗಿ ಕಾಣಿಸಿಕೊಂಡಿದ್ದ ನಟ ಗಣೇಶ್ ಈಗ ‘ಕೃಷ್ಣಂ ಪ್ರಣಯ ಸಖಿ’ ಚಿತ್ರದ ಮೂಲಕ ಮತ್ತೆ ಕೃಷ್ಣನಾಗಿ ಎಂಟ್ರಿ ಕೊಡ್ತಿದ್ದಾರೆ.

    ಜುಲೈ 2ಕ್ಕೆ ಗೋಲ್ಡನ್ ಸ್ಟಾರ್ ಅಭಿಮಾನಿಗಳಿಗೆ ಡಬಲ್ ಧಮಾಕ. ಒಂದ್ ಕಡೆ ನೆಚ್ಚಿನ ನಟನ ಹುಟ್ಟುಹಬ್ಬದ (Birthday) ಸಂಭ್ರಮ, ಮತ್ತೊಂದು ಕಡೆ ಹೊಸ ಸಿನಿಮಾಗಳ ಅನೌನ್ಸ್ಮೆಂಟ್. ಒಟ್ನಲ್ಲಿ ಗೋಲ್ಡನ್ ಹೀರೋ ಗಣಿ ಸಿನಿಮಾ ಅಪ್‌ಡೇಟ್ ಜೊತೆಗೆ ನಯಾ ಲುಕ್ ನೋಡಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಇದನ್ನೂ ಓದಿ:ಆಂಧ್ರದಲ್ಲಿ ಮದ್ಯಪ್ರಿಯರಿಗೆ ನಟ ಪವನ್ ಕಲ್ಯಾಣ್ ಬಂಪರ್ ಆಫರ್

    ಗಣೇಶ್ ಅಭಿನಯದ 41ನೇ ಸಿನಿಮಾಗೆ ‘ಕೃಷ್ಣಂ ಪ್ರಣಯ ಸಖಿ’ ಎಂದು ಟೈಟಲ್ ಇಡಲಾಗಿದೆ. ಸದ್ಯ ರಿಲೀಸ್ ಆಗಿರುವ ಪೋಸ್ಟರ್ ನಲ್ಲಿ ಗಣೇಶ್ ಮನೆ ಕೆಲಸ ಮಾಡುವ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಸೂಟ್ ಧರಿಸಿ ಹೈ ಫೈ ಆಗಿರುವ ಗಣೇಶ್ ಕೈಯಲ್ಲಿ ಬಕೆಟ್, ಪೊರಕೆ, ನೆಲ ಒರೆಸುವ ಸ್ಟಿಕ್ ಹಿಡಿದು ಹೊರಟಿದ್ದಾರೆ. ಟೈಟಲ್ ಕೇಳಿದ್ರೆ ಗಣೇಶ್ ಲವರ್ ಬಾಯ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ಗೊತ್ತಾಗುತ್ತಿದೆ. ಗೋಲ್ಡನ್ ಸ್ಟಾರ್ ರಗಡ್ ಲುಕ್‌ನಿಂದ ಲವರ್ ಬಾಯ್ ಪಾತ್ರಗಳ ಮೂಲಕೇ ಹೆಚ್ಚು ಗಮನ ಸೆಳೆದಿದ್ದಾರೆ.

    ತ್ರಿಶೂಲ್ ಎಂಟರ್‌ಟೇನ್ಮೆಂಟ್ ಬ್ಯಾನರ್ ಮೂಲಕ ಪ್ರಶಾಂತ್ ಜಿ.ರುದ್ರಪ್ಪ ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ‘ದಂಡುಪಾಳ್ಯ’ ಖ್ಯಾತಿಯ ನಿರ್ದೇಶಕ ಶ್ರೀನಿವಾಸ್ ರಾಜು ಈ ಚಿತ್ರಕ್ಕೆ ನಿರ್ದೇಶನ ಮಾಡ್ತಿದ್ದಾರೆ. ಗಣೇಶ್ ಅಭಿನಯದ ಈ ಚಿತ್ರಕ್ಕೆ ಅರ್ಜುನ್ ಜನ್ಯ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಗಣೇಶ್ ಅವರಿಗೆ ಜೋಡಿಯಾಗಿ ಮಾಲಿವುಡ್ ನಟಿ ಮಾಳವಿಕಾ ನಾಯರ್ (Malavika Nair) ಅಭಿನಯಿಸುತ್ತಿದ್ದಾರೆ. ಸಾಧುಕೋಕಿಲ, ಶಶಿಕುಮಾರ್, ರಂಗಾಯಣ ರಘು, ಸುಧಾರಾಣಿ, ಶ್ರುತಿ, ಶಿವಧ್ವಜ್ ಶೆಟ್ಟಿ, ಬೆನಕ ಗಿರಿ, ಶ್ರೀನಿವಾಸಮೂರ್ತಿ ಸೇರಿದಂತೆ ಹಲವು ಕಲಾವಿದರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.

    ‘ಕೃಷ್ಣಂ ಪ್ರಣಯ ಸಖಿ’ ಚಿತ್ರದ ಶೂಟಿಂಗ್ ಬೆಂಗಳೂರಿನಲ್ಲಿ ನಡೆಯುತ್ತಿದೆ. ಮೈಸೂರು, ರಾಜಸ್ಥಾನ ಮತ್ತು ಯುರೋಪ್‌ನಲ್ಲಿ ಕೂಡ ಶೂಟಿಂಗ್ ಮಾಡಲಾಗುವುದು. ಗಣೇಶ್ ಮತ್ತು ಶ್ರೀನಿವಾಸ್ ರಾಜು ಕಾಂಬಿನೇಷನ್ ಇರುವುದರಿಂದ ಈ ಸಿನಿಮಾ ಮೇಲೆ ಅಭಿಮಾನಿಗಳಿಗೆ ನಿರೀಕ್ಷೆ ಮತ್ತಷ್ಟು ಹೆಚ್ಚಿಸಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವಿಖ್ಯಾತ್ ಚಿತ್ರ ಪ್ರೊಡಕ್ಷನ್ ಸಾರಥ್ಯದಲ್ಲಿ ಪ್ಯಾನ್‌ ಇಂಡಿಯಾದತ್ತ ಗಣೇಶ್ ಗೋಲ್ಡನ್ ಹೆಜ್ಜೆ

    ವಿಖ್ಯಾತ್ ಚಿತ್ರ ಪ್ರೊಡಕ್ಷನ್ ಸಾರಥ್ಯದಲ್ಲಿ ಪ್ಯಾನ್‌ ಇಂಡಿಯಾದತ್ತ ಗಣೇಶ್ ಗೋಲ್ಡನ್ ಹೆಜ್ಜೆ

    ಸ್ಯಾಂಡಲ್‌ವುಡ್‌ನ (Sandalwood) ಗೋಲ್ಡನ್ ಹೀರೋ ಗೋಲ್ಡನ್ ಸ್ಟಾರ್ ಗಣೇಶ್ (Golden Star Ganesh) ಅವರು ತಮ್ಮ ಹುಟ್ಟುಹಬ್ಬದ ದಿನ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ನಟ, ನಿರ್ಮಾಪಕನಾಗಿ ಗೆದ್ದಿರುವ ನಟ ಗಣೇಶ್ ಅವರು ಈಗ ವಿಖ್ಯಾತ ಚಿತ್ರ ಪ್ರೊಡಕ್ಷನ್ ಸಂಸ್ಥೆ ಜೊತೆ ಕೈಜೋಡಿಸಿದ್ದಾರೆ. ಈ ಮೂಲಕ ನಟ ಗಣೇಶ್, ಪ್ಯಾನ್ ಇಂಡಿಯಾದತ್ತ ಮೊದಲ ಹೆಜ್ಜೆ ಇಟ್ಟಿದ್ದಾರೆ.‌ ಇದನ್ನೂ ಓದಿ:ಅಣ್ಣಾಮಲೈಯಾರ್ ದೇವಸ್ಥಾನದಲ್ಲಿ ರಜನಿಕಾಂತ್

    ಇಂದು ಭಾನುವಾರ (ಜುಲೈ 2) ಗೋಲ್ಡನ್ ಸ್ಟಾರ್ ಗಣೇಶ್ ಅವರ ಪಾಲಿಗೆ ಹುಟ್ಟುಹಬ್ಬದ ಸಂಭ್ರಮ. 43ನೇ ವಸಂತಕ್ಕೆ ಕಾಲಿಟ್ಟಿರುವ ಗಣೇಶ್ ಅವರ ಬರ್ತ್ ಡೇ ಗಿಫ್ಟ್ ಎಂಬಂತೆ ವಿಖ್ಯಾತ್ ಚಿತ್ರ ಪ್ರೊಡಕ್ಷನ್ ಕಡೆಯಿಂದೊಂದು ಬಿಗ್ ಅನೌನ್ಸ್‌ಮೆಂಟ್ ಹೊರಬಿದ್ದಿದೆ. ಇದುವರೆಗೂ ವಿಶಿಷ್ಟ ಕಥೆಯನ್ನು ನಿರ್ಮಾಣ ಮಾಡುತ್ತಾ ಗಮನ ಸೆಳೆದಿರುವ ಯುವ ನಿರ್ಮಾಪಕ ವಿಖ್ಯಾತ್, ಗಣೇಶ್ ಅವರಿಗಾಗಿ ಒಂದು ಚಿತ್ರವನ್ನು ನಿರ್ಮಾಣ ಮಾಡಲು ಮುಂದಾಗಿದ್ದಾರೆ.

    ಚೆಲ್ಲಾಟ, ಮುಂಗಾರುಮಳೆ, ಸಿನಿಮಾಗಳ ಮೂಲಕ ಸಿನಿ ಕೆರಿಯರ್ ಶುರು ಮಾಡಿದ ಪ್ರತಿಭಾನ್ವಿತ ನಟ ಗಣೇಶ್ ಇಂದು ಕನ್ನಡಿಗರ ನೆಚ್ಚಿನ ಗೋಲ್ಡನ್ ಸ್ಟಾರ್ ನಟನಾಗಿ ಮಿಂಚ್ತಿದ್ದಾರೆ. ಸದಾ ಭಿನ್ನ ಕಥೆಯಲ್ಲಿ ಕಾಣಿಸಿಕೊಳ್ಳುವ ಗಣೇಶ್ ಅವರು ಈಗ ಪ್ಯಾನ್ ಇಂಡಿಯಾ ಚಿತ್ರಕ್ಕೆ ಓಕೆ ಎಂದಿದ್ದಾರೆ. ಇನ್ನೂ ವಿಶೇಷತೆಗಳ ಬಗ್ಗೆ ಹೇಳೋದಾದರೆ, ಗಣೇಶ್ ಅವರ ವೃತ್ತಿ ಬದುಕಿನಲ್ಲಿ ಮಹತ್ತರವಾಗಿ ದಾಖಲಾಗಬಹುದಾದ 42ನೇ ಚಿತ್ರವಾಗಿದೆ. ವಿಖ್ಯಾತ್ ಚಿತ್ರ ಪ್ರೊಡಕ್ಷನ್ಸ್ ಅಡಿಯಲ್ಲಿ ಮೂಡಿ ಬರುತ್ತಿರುವ 6ನೇ ಚಿತ್ರ ಇದಾಗಿದೆ. ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಈ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಸಿನಿಮಾ ಮಾಡಲು ತಯಾರಿ ಮಾಡ್ತಿದ್ದಾರೆ. ಇದೀಗ ಸಿನಿಮಾ ಬಗೆಗಿನ ತಯಾರಿಗಳು ಚಾಲ್ತಿಯಲ್ಲಿವೆ. ನಿರ್ದೇಶಕರು, ತಾರಾಗಣ, ತಾಂತ್ರಿಕ ವರ್ಗ, ನಾಯಕಿ ಯಾರು ಎಂಬ ವಿಚಾರಗಳು ಇಷ್ಟರಲ್ಲಿಯೇ ರಿವೀಲ್ ಆಗಲಿದೆ.

    ಸದ್ಯ ಗಣೇಶ್ ನಟನೆಯ 42ನೇ ಸಿನಿಮಾದ ಲುಕ್ ವಿಭಿನ್ನವಾಗಿದ್ದು, ಕೇಸರಿ ಬಣ್ಣದ ಧಿರಿಸಿನಲ್ಲಿ ನಟ ಗಣೇಶ್ ಬ್ಲ್ಯಾಕ್ ಸೈಡ್ ಪೋಸ್ ಖಡಕ್ ಆಗಿದೆ. ‌ಗಣೇಶ್‌ ಅವರ ನಯಾ ಲುಕ್‌ ನೋಡ್ತಿದ್ದಂತೆ ಅಭಿಮಾನಿಗಳಿಗೆ ಸಿನಿಮಾ ಬಗ್ಗೆ ಹೆಚ್ಚಿನ ನಿರೀಕ್ಷೆ ಮೂಡಿಸಿದೆ. ತಮ್ಮ ಹುಟ್ಟುಹಬ್ಬದ ದಿನ ಬಿಗ್‌ ನ್ಯೂಸ್‌ ಕೊಟ್ಟಿರುವ ನಟ ಗಣೇಶ್‌ಗೆ ಅಭಿಮಾನಿಗಳು ಶುಭಕೋರುತ್ತಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‌Exclusive:ಮತ್ತೊಂದು ಮಲ್ಟಿಸ್ಟಾರ್‌ ಸಿನಿಮಾದಲ್ಲಿ ಹ್ಯಾಟ್ರಿಕ್‌ ಹೀರೋ

    ‌Exclusive:ಮತ್ತೊಂದು ಮಲ್ಟಿಸ್ಟಾರ್‌ ಸಿನಿಮಾದಲ್ಲಿ ಹ್ಯಾಟ್ರಿಕ್‌ ಹೀರೋ

    ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್‌ಗೆ (Shivarajkumar) ದಿನದಿಂದ ದಿನಕ್ಕೆ ಅವರ ಡಿಮ್ಯಾಂಡ್ ಹೆಚ್ಚಾಗುತ್ತಲೇ ಇದೆ. `ಕಬ್ಜ’ (Kabzaa) ಮಲ್ಟಿಸ್ಟಾರ್ ಸಿನಿಮಾ (Multistar Film) ರಿಲೀಸ್‌ಗೆ ಇರುವ ಬೆನ್ನಲ್ಲೇ ಮತ್ತೊಂದು ಹೊಸ ಮಲ್ಟಿಸ್ಟಾರ್ ಮೂವಿಗೆ ಶಿವಣ್ಣ ಗ್ರೀನ್ ಸಿಗ್ನಲ್ ನೀಡಿದ್ದಾರೆ. ʻಕಬ್ಜʼಗಾಗಿ ಕಾಯುತ್ತಿದ್ದ ಫ್ಯಾನ್ಸ್‌ಗೆ ಮತ್ತೊಂದು ಸಿಹಿಸುದ್ದಿ ಸಿಕ್ಕಿದೆ. ಇದನ್ನೂ ಓದಿ: ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ಕಂಗೊಳಿಸಿದ ದೀಪಿಕಾ ಪಡುಕೋಣೆ

    ವಯಸ್ಸು 60 ಆದರೂ ಶಿವಣ್ಣ ಅವರ ಎನರ್ಜಿಯನ್ನ ಮೀರಿಸುವವರು ಯಾರಿಲ್ಲ. ಸದಾ ಸಿನಿಮಾಗಳ ಮೂಲಕ ಸೌಂಡ್ ಮಾಡುವ ಶಿವಣ್ಣ, ಇತ್ತೀಚಿಗೆ ಉಪ್ಪಿ- ಕಿಚ್ಚ ಸುದೀಪ್ (Kiccha Sudeep) ಜೊತೆ `ಕಬ್ಜ’ (Kabzaa) ಎಂಬ ಪ್ಯಾನ್ ಇಂಡಿಯಾ ಚಿತ್ರದಲ್ಲಿ ನಟಿಸಿದ್ದರು. ಈ ಸಿನಿಮಾ ತೆರೆಗೆ ಬರುವ ಮುನ್ನವೇ ಹೊಸ ಸಿನಿಮಾ ಮೂಲಕ ಶಿವಣ್ಣ ಸೌಂಡ್ ಮಾಡ್ತಿದ್ದಾರೆ.

    ನಟ ಶಿವಣ್ಣ ಇದೀಗ ಕನ್ನಡದಲ್ಲಿ ಮಾತ್ರವಲ್ಲ ಪರಭಾಷೆ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸೌತ್ ಸಿನಿಮಾಗಳಲ್ಲಿಯೂ ಕೂಡ ಬ್ಯುಸಿಯಿರುವ ಶಿವಣ್ಣ, ಈಗ ಗೋಲ್ಡನ್ ಸ್ಟಾರ್ ಜೊತೆ ಕೈಜೋಡಿಸಿದ್ದಾರೆ. ಹೌದು.. ನಟ ಗಣೇಶ್ – ಶಿವಣ್ಣ ಕಾಂಬಿನೇಷನ್‌ನಲ್ಲಿ ಮತ್ತೊಂದು ಮಲ್ಟಿಸ್ಟಾರ್ ಸಿನಿಮಾ ತಯಾರಾಗುತ್ತಿದೆ.

    ತಮಿಳಿನ (Tamil) ನಿರ್ದೇಶಕ ಕೆ.ಎಸ್ ರವಿಕುಮಾರ್ (K.s Ravikumar) ಅವರು ಗಣಿ- ಶಿವಣ್ಣ ಅವರಿಗೆ ನಿರ್ದೇಶನ ಮಾಡ್ತಿದ್ದಾರೆ. ವಿಭಿನ್ನ ಕಥೆಯಲ್ಲಿ ಈ ಇಬ್ಬರು ಸ್ಟಾರ್ಸ್ ತೆರೆಹಂಚಿಕೊಳ್ತಿದ್ದಾರೆ. ಸೂರಪ್ಪ ಬಾಬು ಈ ಚಿತ್ರವನ್ನ ನಿರ್ಮಾಣ ಮಾಡ್ತಿದ್ದಾರೆ. ಇದು ದೊಡ್ಡ ಬಜೆಟ್‌ನಲ್ಲಿ ಚಿತ್ರ ನಿರ್ಮಾಣವಾಗ್ತಿದೆ. ಜುಲೈನಲ್ಲಿ ಸಿನಿಮಾ ಸೆಟ್ಟೇರಲಿದೆ ಎಂದು ಹೇಳಲಾಗುತ್ತಿದೆ.

    ಶೃತಿ ರಿಪ್ಪನ್‌ಪೇಟೆ, ಪಬ್ಲಿಕ್‌ ಟಿವಿ ಡಿಜಿಟಲ್‌

  • ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡ `ಮುಂಗಾರು ಮಳೆ 2′ ನಟಿ

    ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡ `ಮುಂಗಾರು ಮಳೆ 2′ ನಟಿ

    ಗೋಲ್ಡನ್ ಸ್ಟಾರ್ ಗಣೇಶ್‌ಗೆ(Golden Star Ganesh) ನಾಯಕಿಯಾಗುವ ಮೂಲಕ ಸ್ಯಾಂಡಲ್‌ವುಡ್‌ಗೆ (Sandalwood) ಎಂಟ್ರಿ ಕೊಟ್ಟ ಕರಾವಳಿ ನಟಿ ನೇಹಾ ಶೆಟ್ಟಿ(Neha Shetty) ಇದೀಗ ಸೌತ್ ಸಿನಿಮಾದತ್ತ ಮುಖ ಮಾಡಿದ್ದಾರೆ. ಟಾಲಿವುಡ್‌ನ (Tollywood) ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತ ನೇಹಾ ಬ್ಯುಸಿಯಾಗಿದ್ದಾರೆ. ಇದೀಗ ಬೋಲ್ಡ್ ಮತ್ತು ಹಾಟ್ ಲುಕ್ ಫೋಟೋಶೂಟ್ ಮಾಡಿಸಿ ಪಡ್ಡೆಹುಡುಗರ ನಿದ್ದೆಗೆಡಿಸಿದ್ದಾರೆ.

     

    View this post on Instagram

     

    A post shared by Neha Sshetty (@iamnehashetty)

    ಕನ್ನಡದ `ಮುಂಗಾರು ಮಳೆ 2′ ಚಿತ್ರದ ಮೂಲಕ ನಟನಾ ಕ್ಷೇತ್ರಕ್ಕೆ ಕಾಲಿಟ್ಟ ಬ್ಯೂಟಿ ನೇಹಾ ಶೆಟ್ಟಿ ಈಗ ತೆಲುಗಿನತ್ತ ಮುಖ ಮಾಡಿದ್ದಾರೆ. ಮೆಹಾಬೂಬ, ಗಲ್ಲಿ ರೌಡಿ, ಹೀಗೆ ಸಾಕಷ್ಟು ಚಿತ್ರಗಳಲ್ಲಿ ನೇಹಾ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇತ್ತೀಚಿನ `ಡಿಜೆ ಟಿಲ್ಲು’ ಸಿನಿಮಾದಲ್ಲಿ ನಾಯಕಿಯಾಗಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು. ಈಗ ಹಾಟ್ ಆಗಿ ಫೋಟೋಶೂಟ್ ಮಾಡಿಸಿ, ಪಡ್ಡೆಹುಡುಗರನ್ನ ಬೋಲ್ಡ್ ಮಾಡಿದ್ದಾರೆ. ಇದನ್ನೂ ಓದಿ:ನಿರ್ಮಾಪಕ ಸೌಂದರ್ಯ ಜಗದೀಶ್ ಪುತ್ರನ ಬೆನ್ನಿಗೆ ನಿಂತ ಉಪೇಂದ್ರ : ಸ್ನೇಹಿತ್ ಒಳ್ಳೆಯ ಹುಡುಗ

     

    View this post on Instagram

     

    A post shared by Neha Sshetty (@iamnehashetty)

    ಕನ್ನಡದ ನಟಿ ನೇಹಾ, ಬ್ಲ್ಯಾಕ್ ಕಲರ್ ಡ್ರೆಸ್‌ನಲ್ಲಿ ಹಾಟ್ ಆಗಿ ಕ್ಯಾಮೆರಾ ಕಣ್ಣಿಗೆ ಪೋಸ್ ಕೊಟ್ಟಿದ್ದಾರೆ. ನಟಿಯ ಮಾದಕ ಲುಕ್‌ ಇದೀಗ ನೆಟ್ಟಿಗರ ಗಮನ ಸೆಳೆಯುತ್ತಿದೆ.

     

    View this post on Instagram

     

    A post shared by Neha Sshetty (@iamnehashetty)

    ಇನ್ನೂ ಸದ್ಯ ತೆಲುಗಿನ ನಟ ಕಾರ್ತಿಕೇಯ ಜೊತೆ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. `ಮುಂಗಾರು ಮಳೆ 2′, ಚಾಕ್‌ಲೇಟ್ ಗರ್ಲ್ ಆಲ್ಬಂ ಸಾಂಗ್ ನಂತರ ಕನ್ನಡದ ಸಿನಿಮಾದಲ್ಲಿ ಮರೆಯಾಗಿರುವ ನಟಿ ನೇಹಾ ಸಿನಿಮಾಗಾಗಿ ಕನ್ನಡ ಪ್ರೇಕ್ಷಕರು ಕಾಯುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕೊಟ್ಟ ಮಾತಿನಂತೆ ಕಿರುತೆರೆ ನಟಿ ಸ್ವಪ್ನಾ ಪತಿಗೆ ಕೆಲಸ ಕೊಡಿಸಿದ ಗೋಲ್ಡನ್ ಸ್ಟಾರ್ ಗಣೇಶ್

    ಕೊಟ್ಟ ಮಾತಿನಂತೆ ಕಿರುತೆರೆ ನಟಿ ಸ್ವಪ್ನಾ ಪತಿಗೆ ಕೆಲಸ ಕೊಡಿಸಿದ ಗೋಲ್ಡನ್ ಸ್ಟಾರ್ ಗಣೇಶ್

    ಕಿರುತೆರೆ ಮತ್ತು ಹಿರಿತೆರೆಯಲ್ಲಿ ಛಾಪೂ ಮೂಡಿಸಿರುವ ನಟಿ ಸ್ವಪ್ನಾ ದೀಕ್ಷಿತ್ (Swapna Dheekshith) ಅವರ ಪತಿ ಅಶ್ವಿನ್‌ಗೆ ಕೊಟ್ಟ ಮಾತಿನಂತೆ ಗೋಲ್ಡನ್ ಸ್ಟಾರ್ ಗಣೇಶ್(Golden Star Ganesh) ನಡೆದುಕೊಂಡಿದ್ದಾರೆ. ಸ್ವಪ್ನಾ ಪತಿಗೆ ಕೆಲಸ ಕೊಡಿಸುವುದಾಗಿ ಗಣೇಶ್ ಭರವಸೆ ನೀಡಿದ್ದರು. ನುಡಿದ ಮಾತಿನಂತೆ ಗಣೇಶ್ ಇದೀಗ ನಡೆದುಕೊಂಡಿದ್ದಾರೆ.

     

    View this post on Instagram

     

    A post shared by ashu (raj) (@ashwinndeekshith)

    ಸಾಕಷ್ಟು ಧಾರಾವಾಹಿ ಮೂಲಕ ಮೋಡಿ ಮಾಡಿದ್ದ ನಟಿ ಸ್ವಪ್ನಾ ದೀಕ್ಷಿತ್ `ಇಸ್ಮಾರ್ಟ್ ಜೋಡಿ’ (Ismart Jodi) ವೇದಿಕೆಯಲ್ಲಿ ಈ ಬದುಕಿನ ಕಣ್ಣೀರಿನ ಕಥೆಯನ್ನ ನಟಿ ಹೇಳಿಕೊಂಡಿದ್ದರು. ನನ್ನ ಗಂಡ ಕೆಲಸ ಮಾಡುತ್ತಿಲ್ಲ. ಇಡೀ ಮನೆಯ ನಿರ್ವಣೆಯನ್ನ ಕಳೆದ 16 ವರ್ಷದಿಂದ ನಾನೇ ನೋಡಿಕೊಳ್ಳುತ್ತಿದ್ದೇನೆ ಎಂದು ರಿಯಾಲಿಟಿ ಶೋನಲ್ಲಿ ಕಣ್ಣೀರು ಹಾಕಿದ್ದರು. ಈ ವೇಳೆ ಸ್ವಪ್ನಾ ಪತಿಗೆ ಕೆಲಸ ಕೊಡಿಸುವುದಾಗಿ ಗಣೇಶ್ ಭರವಸೆ ನೀಡಿದ್ದರು. ಈಗ ಅಶ್ವೀನ್‌ಗೆ ಕೆಲಸ ಸಿಕ್ಕಿದೆ. ಇದನ್ನೂ ಓದಿ:ಬಂಧನದ ಭೀತಿಯಿಂದ ಕೇರಳಕ್ಕೆ ಎಸ್ಕೇಪ್ ಆದ್ರಾ ನಟಿ ಶ್ರೀಲೀಲಾ ತಾಯಿ?: ಮನೆಗೆ ಬೀಗ, ಮೊಬೈಲ್ ಆಫ್

     

    View this post on Instagram

     

    A post shared by ashu (raj) (@ashwinndeekshith)

    ಇನ್ನೂ ಗೋಲ್ಡನ್ ಸ್ಟಾರ್ ಗಣೇಶ್ ನಿರೂಪಣೆಯ `ಇಸ್ಮಾರ್ಟ್ ಜೋಡಿ’ ಗ್ರ್ಯಾಂಡ್ ಫಿನಾಲೆಯಲ್ಲಿ ಅಶ್ವೀನ್‌ಗೆ ಕೆಲಸದ ಅಪಾಯಿಂಟ್‌ಮೆಂಟ್ ಲೆಟರ್ ಕೊಟ್ಟಿದ್ದಾರೆ. ಈ ಬಗ್ಗೆ ಸ್ವಪ್ನ ದೀಕ್ಷಿತ್ ಸೇರಿದಂತೆ ಎಲ್ಲರೂ ಖುಷಿಪಟ್ಟಿದ್ದಾರೆ.

    ನನ್ನ ಗಂಡ ಅಶ್ವೀನ್ ಕೆಲಸ ಮಾಡುತ್ತಿಲ್ಲ ಎಂದು ತಮ್ಮ ಸಂಕಷ್ಟದ ವಿಚಾರವನ್ನು ಸ್ವಪ್ನ ರಿಯಾಲಿಟಿ ಶೋನಲ್ಲಿ ನಟಿ ಹೇಳಿಕೊಂಡಿದ್ದರು. ಈ ವೇಳೆ ಗಣೇಶ್, ನಿಮಗೆ ಕೆಲಸ ಕೊಡಿಸಿದರೆ ಮಾಡುತ್ತೀರಾ ಅಂತಾ ಅಶ್ವೀನ್‌ಗೆ ಕೇಳಿದಾಗ ಖಂಡಿತಾ ಮಾಡುತ್ತೇನೆ ಎಂದಿದ್ದರು. ಹೇಳಿದ ಮಾತಿನಂತೆ ಗಣೇಶ್‌ ನಡೆದುಕೊಂಡಿದ್ದಾರೆ. ಈಗ ಅಶ್ವೀನ್‌ಗೆ ಕೆಲಸ ಸಿಕ್ಕಿರೋದಕ್ಕೆ ನಟಿ ಖುಷಿಯಾಗಿದ್ದಾರೆ. ಹೊಸ ಬದುಕಿಗೆ ಸಾಥ್ ಕೊಟ್ಟಿರುವ ನಟ ಗಣೇಶ್ ಅವರಿಗೆ ನಟಿ ಧನ್ಯವಾದ ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]